ದಿಯಾ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನಾಯಕಿಯಾಗಿ ಗುರುತಿಸಿಕೊಂಡವರು ಖುಷಿ ರವಿ (Khushi Ravi). ದಿಯಾ ಬಳಿಕ ಕನ್ನಡದ ಜೊತೆಗೆ ಪರಭಾಷಾ ಚಿತ್ರಗಳಲ್ಲಿಯೂ ನಟಿಸುತ್ತಿರುವ ಅವರೀಗ ಮತ್ತೊಂದು ಕನ್ನಡದ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದೇ ‘S/O ಮುತ್ತಣ್ಣ’. ಯಂಗ್ ಡೈನಾಮಿಕ್ ಎಂದೇ ಕರೆಸಿಕೊಳ್ಳುತ್ತಿರುವ ಪ್ರಣಂ ದೇವರಾಜ್ ನಾಯಕನಾಗಿ ನಟಿಸಿತ್ತಿರುವ ಈ ಸಿನಿಮಾದಲ್ಲಿ ಖುಷಿ ರವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ಹುಟ್ಟುಹಬ್ಬದ (Birthday)ಅಂಗವಾಗಿ ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದ್ದು, ಸ್ಪೆಷಲ್ ಮೇಕಿಂಗ್ ವಿಡಿಯೋ ಕೂಡ ಬಿಡುಗಡೆ ಮಾಡಿ ಶುಭ ಕೋರಿದೆ. ಪುರಾತನ ಫಿಲ್ಮಂಸ್ ಬ್ಯಾನರ್ ಅಡಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ ‘S/O ಮುತ್ತಣ್ಣ’ (S/O Muttanna) ಸಿನಿಮಾಗೆ ಶ್ರೀಕಾಂತ್ ಹುಣಸೂರು ಆಕ್ಷನ್ ಕಟ್ ಹೇಳುತ್ತಿದ್ದರೆ. ದೇವರಾಜ್ ಪುತ್ರ ಮತ್ತೊಮ್ಮೆ ಈ ಸಿನಿಮಾದ ಮೂಲಕ ಗೆಲುವಿನ ಪರೀಕ್ಷೆಗೆ ಮುಂದಾಗಿದ್ದಾರೆ.
Author: AIN Author
ಭಾರತ ತಂಡದ ಸ್ಫೋಟಕ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಅವರನ್ನು ಐಸಿಸಿ ವರ್ಷದ ಟಿ20 ತಂಡದ ನಾಯಕರಾಗಿ ಹೆಸರಿಸಲಾಗಿದೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಸ್ಪಿನ್ನರ್ ರವಿ ಬಿಷ್ಟೋಯಿ ಮತ್ತು ಎಡಗೈ ವೇಗಿ ಅರ್ಷ್ದೀಪ್ ಸಿಂಗ್ ಅವರೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಸತತ ಎರಡನೇ ಬಾರಿಗೆ ಸೂರ್ಯಕುಮಾರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಟಿ20 ವರ್ಷದ ಕ್ರಿಕೆಟಿಗ ರೇಸ್ನಲ್ಲೂ ಅವರು ಇದ್ದಾರೆ. 2023ರಲ್ಲಿ ಅವರು ಉತ್ತಮ ರನ್ ಗಳಿಕೆ ಮೂಲಕ ಹೆಸರು ಮಾಡಿದ್ದಾರೆ. ಶ್ರೀಲಂಕಾ ವಿರುದ್ಧದ ವರ್ಷದ ಮೊದಲ ಪಂದ್ಯದಲ್ಲಿ ಕೇವಲ 7 ರನ್ ಸಿಡಿಸಿದ್ದ ಸೂರ್ಯ, ನಂತರದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 5 ಮತ್ತು 112 ರನ್ ಸಿಡಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 20 ಮತ್ತು 40 ಆಸುಪಾಸಿನಲ್ಲಿ ಔಟಾಗಿದ್ದ ಅವರು 44 ಎಸೆತಗಳಲ್ಲಿ 83 ರನ್ ಸಿಡಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು. ಕಳೆದ ವರ್ಷದಲ್ಲಿ ರೋಹಿತ್ ಶರ್ಮಾ ಗಾಯಗೊಂಡಾಗ ಸೂರ್ಯ, ಟಿ20 ತಂಡವನ್ನು ಮುನ್ನಡೆಸಿದ್ದಾರೆ.
ಎಷ್ಟು ಬೇಕು ಸಾಲ ಹೇಳಿ. ಹೀಗೆಲ್ಲ ಆಫರ್ ನೀಡಿ ಆನ್ಲೈನ್ ಮೂಲಕವೇ ಕೇವಲ ಸೆಕೆಂಡ್ಗಳ ಒಳಗಾಗಿ ಸಾಲ ನೀಡುವ ಅಪ್ಲಿಕೇಶನ್ಗಳನ್ನು ಗೂಗಲ್ ಪ್ಲೇ ಸ್ಟೋರ್ನಲ್ಲಿ ಸಾವಿರಾರು ಸಿಗುತ್ತವೆ. ಹಾಗಂತ ಇವು ಬಡ್ಡಿ ರಹಿತವಾಗೇನೂ ಸಾಲ ಕೊಡುತ್ತಿಲ್ಲ. ಹಾಗೆಯೇ ಹಲವು ಆಯಾಮಗಳಲ್ಲಿ ವಂಚನೆ ಮಾಡುವ ಸಾಕಷ್ಟು ಅಪ್ಲಿಕೇಶನ್ಗಳು ಇಲ್ಲಿವೆ. ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಲೋನ್ ಕೊಟ್ಟ ಕ್ಷಣದಲ್ಲೇ ಶೇಕಡ.50 ರಷ್ಟು ಬಡ್ಡಿ ಹಾಕುವ, ಸಾಲ ಮರುಪಾವತಿ ನಂತರವೂ ಹಿಂದೆಬಿದ್ದು ಟಾರ್ಚರ್ ಕೊಡುವ, ಎಷ್ಟೇ ಜಾಗ್ರತೆ ವಹಿಸಿದರೂ ಬಳಕೆದಾರರಿಗೆ ಯಾವುದಾದರೊಂದು ರೀತಿಯ ಮೋಸದ ಜಾಲವನ್ನು ಹೆಣೆಯುವ ಸಾಲದ Apps ಗಳು ಹೆಚ್ಚಾಗಿಬಿಟ್ಟಿವೆ. ವರದಿಗಳ ಪ್ರಕಾರ ಸುಮಾರು 4000 ಕ್ಕೂ ಅಧಿಕ ಸಾಲದ ಅಪ್ಲಿಕೇಶನ್ಗಳು ಗೂಗಲ್ ಪ್ಲೇ ಸ್ಟೋರ್ನಲ್ಲಿದ್ದು, ಅವುಗಳ ಪೈಕಿ ಹಲವು ವಂಚನೆ, ನಕಲು, ಇತರೆ ಸಮಸ್ಯೆಗಳನ್ನು ಆಪ್ ಬಳಕೆದಾರರಿಗೆ ತಂದೊಡ್ಡುವ ಹಿನ್ನೆಲೆಯಲ್ಲಿ ಗೂಗಲ್ ಇತ್ತೀಚೆಗೆ 2500 ಅಪ್ಲಿಕೇಶನ್ಗಳನ್ನು ಪ್ಲೇಸ್ಟೋರ್ನಿಂದ ಶಾಶ್ವತವಾಗಿ ತೆಗೆದುಹಾಕಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಸಾಲ ಕೊಡುವ ನಕಲಿ ಅಪ್ಲಿಕೇಶನ್ಗಳನ್ನು ಪತ್ತೆ…
ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ತಡರಾತ್ರಿವರೆಗೂ ಪಾರ್ಟಿಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಯಲ್ ಅಡಿಲೇಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ವಿಚಾರಣೆ ಆರಂಭಿಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಗ್ಲೆನ್ ಮ್ಯಾಕ್ಸ್ವೆಲ್ ಆಸ್ಟ್ರೇಲಿಯಾ ತಂಡ ಸೇರಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗದ ಅವರು ಸೀಮಿತ ಓವರ್ಗಳ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಯು ಫೆಬ್ರವರಿ 9ರಂದು ಶುರುವಾಗಲಿದೆ. ಇದೇ ವರ್ಷ ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಹಿನ್ನೆಲೆಯಲ್ಲಿ ಆಸೀಸ್ಗೆ ಈ ಟಿ20 ಸರಣಿ ಅತ್ಯಂತ ಮಹತ್ವದ್ದಾಗಿದೆ. ವರದಿಗಳ ಪ್ರಕಾರ ಅಡಿಲೇಡ್ನಲ್ಲಿ ನಡೆದ ಕಾನ್ಸರ್ಟ್ ಒಂದರಲ್ಲಿ ಪಾಲ್ಗೊಂಡಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಚೆನ್ನಾಗಿ ಕುಡಿದಿದ್ದಾರೆ. ಬಳಿಕ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡದ ಕೆಲ ಆಟಗಾರರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು…
ಸೋಮವಾರವಷ್ಟೇ (ಜ.22) ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಟಾಪನೆಯಾದ ಪರ್ವದಿನ. ಅದೇ ಶುಭ ಮುಹೂರ್ತದಲ್ಲಿ ಆಂಜನೇಯನ ಜನ್ಮಭೂಮಿಯಾದ ಅಂಜನಾದ್ರಿಯಲ್ಲಿ ‘ಅಯೋಧ್ಯೆ ರಾಮ’ (Ayodhya Ram) ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಶಾಸಕ ಗಾಲಿ ಜನಾರ್ದನ ರೆಡ್ಡಿ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವುದರ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಈ ಹಿಂದೆ ಶ್ರೀಜಗನ್ನಾಥ ದಾಸರು, ಶ್ರೀ ಪ್ರಸನ್ನವೆಂಕಟದಾಸರು ಸೇರಿದಂತೆ ಅನೇಕ ದಾಸವರೇಣ್ಯರ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸುವ ಮೂಲಕ ಜನಪ್ರಿಯರಾಗಿರುವ ಮಧುಸೂದನ್ ಹವಾಲ್ದಾರ್ (Madhusudan Havaldar) ತಮ್ಮ ಮಾತಾಂಬುಜ ಮೂವೀಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವುದಲ್ಲದೆ ನಿರ್ದೇಶನವನ್ನು ಮಾಡುತ್ತಿದ್ದಾರೆ. ಇಂದಿನಿಂದ ಈ ಪೌರಾಣಿಕ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಕನ್ನಡ ಸೇರಿದಂತೆ ಹನ್ನೆರಡು ಭಾಷೆಗಳಲ್ಲಿ ಈ ಚಿತ್ರ ಬರಲಿದೆ. ವಿಕ್ರಮ್ ಜೋಶಿ ಈ ಚಿತ್ರದ ನಾಯಕನಾಗಿ ಹಾಗೂ ಶ್ರೀಲತ ನಾಯಕಿಯಾಗಿ ನಟಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಚಿತ್ರರಂಗದ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
ರಾಯಚೂರು:- ಜಿಲ್ಲೆಯ ಸಿಂಧನೂರು ತಾಲೂಕಿನ ಚಿಕ್ಕಬೇರ್ಗಿ ಗ್ರಾಮದಲ್ಲಿ ಮನೆ ಮುಂದೆ ಕುಳಿತಿದ್ದ ವೃದ್ಧನನ್ನು ಕಂಬಕ್ಕೆ ಕಟ್ಟಿಹಾಕಿ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ಜರುಗಿದೆ. ಆರೋಪಿಗಳು ಕನಿಷ್ಠ ಮನುಷ್ಯತ್ವವೂ ಇಲ್ಲದ ರೀತಿ ವರ್ತಿಸಿರುವುದನ್ನು ಕಾಣಬಹುದು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಂಜೆ ವೇಳೆ ಮನೆ ಬಳಿ ಕಟ್ಟೆ, ಊರಿನ ಮಧ್ಯಭಾಗದಲ್ಲಿ ಜನರು ಕೂತುಕೊಳ್ಳುತ್ತಾರೆ. ಅದೇ ರೀತಿ ಚಿಕ್ಕಬೇರ್ಗಿ ಗ್ರಾಮದ ಲಿಂಗಪ್ಪ ಎಂಬ 53 ವರ್ಷದ ವೃದ್ಧ ಕೂಡ ಹೊಲದಿಂದ ಬಂದು ಎತ್ತುಗಳನ್ನ ಕಟ್ಟಿ ನಂತರ ಮನೆ ಬಳಿ ಕೂತುಕೊಂಡಿದ್ದ. ಈ ವೇಳೆ ಇದೇ ಗ್ರಾಮದ ಕೆಲವರು ಲಿಂಗಪ್ಪನ ಮೇಲೆ ಮುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ, ನೋಡನೋಡುತ್ತಲೇ ಲಿಂಗಪ್ಪನನ್ನ ಎಳೆದಾಡಿ ಹೊಡೆಯಲಾರಂಭಿಸಿದ್ದಾರೆ. ಆರೋಪಿಗಳು ಕಲ್ಲು, ದೊಣ್ಣೆಗಳಲ್ಲಿಂದ ಹಲ್ಲೆ ನಡೆಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಚಪ್ಪಲಿಯಿಂದ ಸಿಕ್ಕಸಿಕ್ಕಲ್ಲಿ ಹೊಡೆದಿದ್ದಾರೆ. ಆಗ ಲಿಂಗಪ್ಪ ನಾನೇನು ಅಂದಿಲ್ಲ ಬಿಟ್ ಬಿಡಿ ಅಂತ ಪರಿಪರಿಯಾಗಿ ಬೇಡಿಕೊಂಡರೂ ಆತನ ಮಾತು ಕೇಳಿಸಿಕೊಳ್ಳದ ಆರೋಪಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆಗೊಳಗಾಗಿ ಗಾಯಗೊಂಡಿದ್ದ ಲಿಂಗಪ್ಪ ನಿತ್ರಾಣಗೊಂಡಿದ್ದ. ಕೂಡಲೇ ಆತನನ್ನ…
ಇಸ್ರೇಲ್: ಪ್ಯಾಲೆಸ್ಟೈನ್ ತುಂಬಾ ಅಪಾಯಕಾರಿ, ಅದರ ಜತೆಗೆ ಒಪ್ಪಂದ ಮಾಡಿಕೊಂಡರೆ ನಮ್ಮ ನಾಶ ವನ್ನು ನಾವೇ ಮಾಡಿಕೊಂಡಂತೆ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಕದನ ವಿರಾಮದ ನಡುವೆಯು ಇಸ್ರೇಲ್ ಮತ್ತು ಹಮಾಸ್ ನಡುವೆ ದಿನದಿಂದ ದಿನಕ್ಕೆ ಒಂದೊಂದು ಬೆಳವಣಿಗೆ ನಡೆಯುತ್ತಿದೆ. ಇನ್ನು ಹಮಾಸ್ಗೆ ಬೆಂಬಲ ನೀಡುವ ಪ್ಯಾಲೆಸ್ಟೈನ್ ಜತೆಗೆ ನಾವು ಯಾವುದೇ ರೀತಿ ಮಾತುಕತೆಗಳನ್ನು ನಡೆಸುವುದಿಲ್ಲ, ಹಾಗೂ ಪ್ಯಾಲೆಸ್ಟೈನ್ ಜತೆಗೆ ಪರಿಹಾರತ್ಮಕ ಒಪ್ಪಂದಗಳನ್ನು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಹೌದು ಪ್ಯಾಲೆಸ್ಟೈನ್ ತುಂಬಾ ಅಪಾಯಕಾರಿ, ಅದರ ಜತೆಗೆ ಒಪ್ಪಂದ ಮಾಡಿಕೊಂಡರೆ ನಮ್ಮ ನಾಶವನ್ನು ನಾವೇ ಮಾಡಿಕೊಂಡಂತೆ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಈ ಸಂಘರ್ಷದಲ್ಲಿ ನಾವು ವಿಜಯ ಸಾಧಿಸುವರೆಗೆ ಯಾವುದೇ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ ಇಸ್ರೇಲ್ ಜೋರ್ಡಾನ್ ನದಿಯನ್ನು ರಕ್ಷಣೆ ಮಾಡಬೇಕಿದೆ. ಜೋರ್ಡಾನ್ ನದಿಯ ಪಶ್ಚಿಮ ಭಾಗದ ಸಂಪೂರ್ಣ ಪ್ರದೇಶದ ಮೇಲೆ ಇಸ್ರೇಲ್ ಭದ್ರತಾ ನಿಯಂತ್ರಣವನ್ನು ಹೊಂದಿರಬೇಕು ಎಂದು ಹೇಳಿದ್ದಾರೆ.
ಆಹಾರ ತಯಾರಿಸಿ, ಉಳಿದ ಆಹಾರವನ್ನು ಫ್ರಿಡ್ಜ್ ನಲ್ಲಿಟ್ಟು, ಅದೇ ಆಹಾರವನ್ನು ಮತ್ತೆ ಬಿಸಿ ಮಾಡಿ ನಂತರ ಸೇವಿಸುವುದು ಇಂದಿನ ದಿನಗಳಲ್ಲಿ ಸಾಮಾನ್ಯ. ಆದರೆ ಫ್ರಿಜ್ ನಲ್ಲಿ ಇಟ್ಟಿರುವ ಪ್ರತಿಯೊಂದು ಆಹಾರ ಪದಾರ್ಥವನ್ನು ಮತ್ತೆ ಬಿಸಿ ಮಾಡಿದ ನಂತರ ತಿನ್ನಲು ಯೋಗ್ಯವಾಗಿರುವುದಿಲ್ಲ ಎನ್ನುತ್ತಾರೆ ಆಹಾರ ತಜ್ಞರು. ಯಾಕೆಂದರೆ, ಈ ವಸ್ತುಗಳನ್ನು ಫ್ರಿಡ್ಜ್ ನಲ್ಲಿಟ್ಟು ಮತ್ತೆ ಬಿಸಿ ಮಾಡಿದರೆ, ಅದು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ ಎನ್ನಲಾಗಿದೆ. ಅಕ್ಕಿ: ಅಕ್ಕಿ ಎಲ್ಲರಿಗೂ ಒಂದು ಪ್ರಮುಖ ಆಹಾರವಾಗಿದ್ದು, ಇದನ್ನು ಪ್ರಪಂಚದಾದ್ಯಂತ ಎಲ್ಲಾ ಮನೆಗಳಲ್ಲಿ ಸುಲಭವಾಗಿ ಕಾಣಬಹುದು. ಆದರೆ ಹಸಿ ಅಕ್ಕಿಯಲ್ಲಿ ಬೀಜಕಗಳು ಇದ್ದು, ಅದು ಬೇಯಿಸಿದ ಬಳಿಕವೂ ಜೀವಂತವಾಗಿ ಉಳಿಯುವ ಬ್ಯಾಕ್ಟೀರಿಯಾಗಳಾಗಿ ಪರಿವರ್ತನೆ ಹೊಂದುತ್ತವೆ ಎಂದು ತಿಳಿದಿದೆಯೇ? ಹೌದು, ಈ ಬ್ಯಾಕ್ಟೀರಿಯಾಗಳು ಪ್ರಮುಖ ರೋಗಗಳನ್ನು ಉಂಟುಮಾಡಬಹುದು ಮತ್ತು ಅದಕ್ಕಾಗಿಯೇ ಯಾವಾಗಲೂ ಅನ್ನವನ್ನು ಮರುಬಿಸಿ ಮಾಡಬೇಡಿ ಎಂದು ಶಿಫಾರಸು ಮಾಡಲಾಗಿದೆ. ಮರುಬಿಸಿ ಮಾಡಿದ ಆನ್ನ ಸೇವನೆಯು ಅತಿಸಾರ ಮತ್ತು ವಾಂತಿಗೆ ಕಾರಣವಾಗಬಹುದು ಎಂದು ತಿಳಿದು ಬಂದಿದೆ. ಮೊಟ್ಟೆ : ಮೊಟ್ಟೆಯಿಂದ ಆಗುವ ಪ್ರಯೋಜನಗಳು ಎಲ್ಲರಿಗೂ ತಿಳಿದಿದೆ.…
ಪೀಣ್ಯ ದಾಸರಹಳ್ಳಿ: ಬಾಗಲಗುಂಟೆಯ ಎಂ.ಇ.ಐ ಆಟದ ಮೈದಾನದ ರಸ್ತೆ ಹತ್ತಿರ ಎಂಇ.ಐ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಎಂ.ಇ.ಐ ಬಡಾವಣೆ ಯುವಕರ ಸಂಘದ ವತಿಯಿಂದ ಬಿಜೆಪಿ ಮುಖಂಡ ಲಕ್ಷ್ಮಣ ಗೌಡ ನೇತೃತ್ವದಲ್ಲಿ ಶ್ರೀ ರಾಮೋತ್ಸವ ಸಮಾರಂಭ ಆಚರಿಸಲಾಯಿತು. ಶಾಸಕ ಎಸ್. ಮುನಿರಾಜು ಶ್ರೀ ರಾಮನ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿ ”ಭಾರತದ ಶತಕೋಟಿ ರಾಮನ ಭಕ್ತರು ಕಂಡಿದ್ದ ಕನಸು ಇಂದು ನನಸಾಗಿದೆ ಬರೋಬ್ಬರಿ 500 ವರ್ಷಗಳ ಹೋರಾಟದ ಫಲವಾಗಿ ಆಯೋಧ್ಯೆಯಲ್ಲಿ ತಲೆ ಎತ್ತಿ ನಿಂತಿರುವ ರಾಮ ಮಂದಿರದ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಗೊಂಡಿದೆ’ ಎಂದರು. ಬಿಜೆಪಿ ಮುಖಂಡ ಲಕ್ಷ್ಮಣ ಗೌಡ್ರು ಮಾತನಾಡಿ ಇದು ಐತಿಹಾಸಿಕ ಕಾರ್ಯಕ್ರಮವಾಗಿ ದೇಶದಾದ್ಯಂತ ಸಂಭ್ರಮದ ವಾತಾವರಣ ಸೃಷ್ಟಿಯಾಗಿದ್ದು ದೇಶದ ಸಾವಿರಾರು ಗಣ್ಯರ ಸಮ್ಮುಖದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಮತ್ತೊಮ್ಮೆ ಭಾರತ ದೇಶ ವಿಶ್ವಗುರುವಾಗಿದೆ’ ಎಂದರು. ಸಮಾರಂಭದಲ್ಲಿ ಬಡಾವಣೆಯ 70 ವರ್ಷ ಮೇಲ್ಪಟ್ಟ ನೂರಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಅಭಿನಂದಿಸಲಾಯಿತು.…
ಬಾಲಿವುಡ್ ನಟಿ ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ (Emergency) ಸಿನಿಮಾ ನವೆಂಬರ್ 24ರಂದು ರಿಲೀಸ್ (Release) ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿದ್ದರು ಕಂಗನಾ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು ‘ನಾವು ಘೋಷಿಸಿದ ತಿಂಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಸಿನಿಮಾಗಳು ರಿಲೀಸ್ ಆಗುತ್ತಿದ್ದು, 2024ರಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದ್ದೇವೆ ಎಂದು ಬರೆದುಕೊಂಡಿದ್ದರು. ಈಗ ಜೂನ್ ನಲ್ಲಿ ಸಿನಿಮಾವನ್ನು ತೆರೆಗೆ ತರುವುದಾಗಿ ಅಪ್ ಡೇಟ್ ನೀಡಿದ್ದಾರೆ. ಕಂಗನಾ ರಣಾವತ್ (Kangana Ranaut) ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಸಿನಿಮಾವನ್ನು ಅವರೇ ನಿರ್ಮಾಣ ಮಾಡಿ, ನಿರ್ದೇಶನ ಮತ್ತು ನಟನೆ ಮಾಡುತ್ತಿದ್ದರೆ ಮತ್ತೊಂದು ಚಿತ್ರದಲ್ಲಿ ಕೇವಲ ನಟಿಯಾಗಿದ್ದಾರೆ. ಈ ಎರಡೂ ಸಿನಿಮಾಗಳ ನಡುವೆ ಅವರು ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದು, ಆ ಸಿನಿಮಾ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ. ಎಮರ್ಜೆನ್ಸಿ ಸಿನಿಮಾ ತೆರೆಗೆ ಬರುತ್ತಿದ್ದಂತೆಯೇ ಲೆಜೆಂಡ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ತಯಾರಾಗಲಿರುವ, ಸಂದೀಪ್ ಸಿಂಗ್ (Sandeep Singh) ನಿರ್ಮಾಣದ ಹೊಸ ಸಿನಿಮಾದಲ್ಲಿ…