ಬೆಂಗಳೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಸಂಸದ ಪ್ರತಾಪ್ ಸಿಂಹಾ ಬೆಂಗಳೂರಿನ ಎಚ್.ಡಿ.ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಜೆಡಿಎಸ್ ಮೈತ್ರಿ ಹಿನ್ನೆಲೆ ಭೇಟಿ ಮಾತುಕತೆ
Author: AIN Author
ಹುಬ್ಬಳ್ಳಿ:- ಕಿತ್ತೂರು ಕರ್ನಾಟಕದ ಜೀವನದಿ ಮಲಪ್ರಭಾ ನದಿ ದಂಡೆಯಲ್ಲಿರುವ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ Mk ಹುಬ್ಬಳ್ಳಿ ಪಟ್ಟಣದ ಹೊರ ವಲಯದ ಮಲಪ್ರಭಾ ನದಿ ದಂಡೆಯ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳ ಶಿವ ಶರಣೆ ಗಂಗಾಂಬಿಕೆಯವರ ಐಕ್ಯ ಸ್ಥಳ. ಜಗಜ್ಯೋತಿ ಬಸವಣ್ಣನವರ ಧರ್ಮ ಪತ್ನಿಯಾಗಿ, ಶರಣ ಪರಂಪರೆ ಹಾಗೂ ವಚನ ಸಾಹಿತ್ಯದ ಸ್ಮಾರಕಗಳ ವಿಷಯದಲ್ಲಿ ಪ್ರಮುಖ ಘಟ್ಟ ಇದೇ Mk ಹುಬ್ಬಳ್ಳಿಯ ಈ ಪ್ರವಾಸಿ ಸ್ಥಳ, ಆದ್ರೆ ಅದ್ಯಾಕೋ ಏನೋ ಗೊತ್ತಿಲ್ಲಾ ಮಲಪ್ರಭಾ ನದಿಯ ತೀವ್ರ ಪ್ರವಾಹಕ್ಕೆ ಸಿಲುಕಿ ಸಾಕಷ್ಟು ಶಿಥಿಲಗೊಂಡ ರಸ್ತೆ ಹಾಗೂ ವಿವಿಧ ತಡೆಗೋಡೆಗಳು ತುಂಬಾನೇ ಹದಗೆಟ್ಟಿವೆ, ಇನ್ನೂ ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸಹ ಎದ್ದು ಕಾಡುತ್ತಿದೆ. ವಿಶೇಷ ಎಂದರೇ ಈ ಐಕ್ಯ ಸ್ಥಳವೂ ಸಹ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿದೆ, ಆದ್ರೆ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಬರೀ ಕೂಡಲ ಸಂಗಮದ ಅಭಿವೃದ್ಧಿಗೆ ಕೊಟ್ಟ ಪ್ರಾಶಸ್ತ್ಯ ಎಂಕೆ ಹುಬ್ಬಳ್ಳಿಗೆ ಮಾತ್ರ ಇಲ್ಲಿಯವರೆಗೂ…
ಬೆಂಗಳೂರು : ನಮ್ಮ ಮೆಟ್ರೋ ನೂತನ ಆಡಳಿತ ನಿರ್ದೇಶಕರಾಗಿ ಮಹೇಶ್ವರ ರಾವ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಇವರು BMRCLಗೆ ಪೂರ್ಣಾವಧಿ ಎಂ.ಡಿ. ಆಗಿದ್ದಾರೆ. ನಮ್ಮ ಮೆಟ್ರೋ ಫೇಸ್ 2 ಕಾಮಗಾರಿಗಳು ವಿಳಂಬವಾಗುತ್ತಿವೆ. ಇದಕ್ಕೆ ಪೂರ್ಣಾವಧಿ ಎಂ.ಡಿ. ಇಲ್ಲದೇ ಇರುವುದೇ ಕಾರಣ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಆರೋಪಿಸಿದ್ದರು. ಅವರ ಮನವಿ ಮೇರೆಗೆ ಇದೀಗ ಪೂರ್ಣಾವಧಿ ಎಂ.ಡಿ. ನೇಮಕ ಮಾಡಲಾಗಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನಮ್ಮ ಮೆಟ್ರೋ ನೂತನ ಆಡಳಿತ ನಿರ್ದೇಶಕರಾಗಿ ಮಹೇಶ್ವರ್ ರಾವ್ ಅವರನ್ನು ನೇಮಕ ಮಾಡಿದೆ.ಅಲ್ಲದೆ, ಕೇಂದ್ರದ ಒಪ್ಪಿಗೆಯಿಲ್ಲದೆ BMRCL ಎಂಡಿಗೆ ಹೆಚ್ಚುವರಿ ಹುದ್ದೆ ನೀಡುವಂತಿಲ್ಲ ಅಂತ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ. ಸಂಸದ ತೇಜಸ್ವಿ ಸೂರ್ಯ ಸಂತಸ ನಮ್ಮ ಮೆಟ್ರೋಗೆ ಪೂರ್ಣ ಪ್ರಮಾಣದ ಎಂ.ಡಿಯನ್ನು ಪಡೆಯಲಾಗಿದೆ. ನಗರದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತ್ವರಿತವಾಗಿ ನೇಮಕ ಮಾಡಿದಕ್ಕಾಗಿ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಅವರಿಗೆ ಧನ್ಯವಾದ ಎಂದು ಸಂಸದ ತೇಜಸ್ವಿ ಸೂರ್ಯ…
ಹೊಸಪೇಟೆ: ಲಾಡ್ಜ್ ಒಂದರ ನೆಲಮಹಡಿಯಲ್ಲಿ ಅಡಗಿದ್ದ ಸತ್ಯವನ್ನ ಕಂಡು ಜನರು ಶಾಕ್ ಆಗಿದ್ದಾರೆ. ಹೌದು,ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ರಾಣಿಪೇಟ್ನ ಲಾಡ್ಜ್ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರೋ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಹೊಸಪೇಟೆ ಪೊಲೀಸರು ಜಂಟಿಯಾಗಿ ಲಾಡ್ಜ್ ಮೇಲೆ ದಾಳಿ ನಡೆಸಿದ್ದರು. ವೇಳೆ ಲಾಡ್ಜ್ನ ನೆಲಮಹಡಿಯಲ್ಲಿ ಅಡಗಿದ್ದ ಅಸಲಿ ಸತ್ಯ ಪೊಲೀಸರನ್ನೇ ಬೆಪ್ಪಾಗಿಸಿತ್ತು. 6 ಜನರನ್ನ ವಶಕ್ಕೆ ಪಡೆದುಕೊಂಡ ಪೊಲೀಸರು ನೆಲಮಹಡಿಯಲ್ಲಿದ್ದ ಕಿಂಡಿಯೊಂದನ್ನು ಓಪನ್ ಮಾಡಿದ್ದ ಪೊಲೀಸರಿಗೆ ವೇಶ್ಯಾವಾಟಿಕೆ ದಂಧೆಯ ಸತ್ಯದ ಅನಾವರಣವಾಗಿತ್ತು. ಕಿಂಡಿಯೊಳಗಿದ್ದ ನಾಲ್ಕು ಮಹಿಳೆಯರು ಪೊಲೀಸರನ್ನು ನೋಡ್ತಿದ್ದಂತೆ ಕಕ್ಕಾಬಿಕ್ಕಿಯಾಗಿದ್ರು. ನಾಲ್ವರು ಸಂತ್ರಸ್ತ ಮಹಿಳೆಯರನ್ನ ರಕ್ಷಣೆ ಮಾಡಿದ ಪೊಲೀಸರು, ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ 6 ಜನರನ್ನ ವಶಕ್ಕೆ ಪಡೆದರು. ಅಂದಾಗೆ ಹೊರರಾಜ್ಯಗಳಿಂದ ಹೊಸಪೇಟೆಗೆ ಮಹಿಳೆಯರನ್ನು ಕರೆತಂದು ಖದೀಮರು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಅಲ್ಲದೇ ಲಾಡ್ಜ್ನಲ್ಲಿ ಯಾರಿಗೂ ಅನುಮಾನ ಬಾರದಂತೆ ನೆಲಮಹಡಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಇನ್ನೂ ದಂಧೆಯಲ್ಲಿ ತೊಡಗುತ್ತಿದ್ದ ಮಹಿಳೆಯರಿಗಾಗೇ ನೆಲಮಹಡಿಯಲ್ಲಿ ಕಿಂಡಿಯೊಂದನ್ನ ನಿರ್ಮಿಸಿ ಅದರಲ್ಲಿ ಅವರನ್ನ…
ಬೆಂಗಳೂರು: ಕಾಂಗ್ರೆಸ್ನ ಪಂಚಗ್ಯಾರಂಟಿಯಲ್ಲಿ ಒಂದಾದ ಯುವ ನಿಧಿ ಯೋಜನೆ ಇಂದು ಶಿವಮೊಗ್ಗ ನಗರದಲ್ಲಿ ಅಧಿಕೃತ ಚಾಲನೆ ನೀಡಲಾಗುತ್ತದೆ. ನಗರದ ಹಳೆ ಜೈಲು ಆವರಣದ ಪ್ರೀಡಂ ಪಾರ್ಕ್ನಲ್ಲಿ ಬೃಹತ್ ವೇದಿಕೆ ಸಿದ್ದಗೊಂಡಿದ್ದು, ಕಾರ್ಯಕ್ರಮದ ವೀಕ್ಷಣೆಗೆ ಬೃಹತ್ ಎಲ್ಇಡಿ ವಾಲ್ ಆಳವಡಿಸಲಾಗಿದೆ. ಈಗಾಗಲೇ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಕಾಂಗ್ರೆಸ್ ನಾಯಕರ ಮತ್ತು ಸ್ಥಳೀಯ ಮುಖಂಡರ ಬ್ಯಾನರ್ಗಳು, ಪ್ಲೆಕ್ಸ್ಗಳು ರಾರಾಜಿಸುತ್ತಿವೆ. ನಗರದ ಹೃದಯ ಭಾಗದ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಒಂದೂವರೆ ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದ್ದು ವಾಹನ ದಟ್ಟಣೆ ತಡೆಯಲು ಸುಗಮ ಸಂಚಾರ ಮಾರ್ಗ ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ಪೊಲೀಸ್ ಇಲಾಖೆ ಸರ್ವ ಸನ್ನದ್ಧವಾಗಿದೆ. ಲೋಕಸಭೆ ಚುನಾವಣೆ ಹತ್ತಿರವಾಗ್ತಿರುವ ಸಂದರ್ಭದಲ್ಲಿ 5 ನೇ ಗ್ಯಾರಂಟಿ ಯೋಜನೆಯಾದ ಯುವ ನಿಧಿಯನ್ನು ಜಾರಿಗೆ ತರುತ್ತಿದೆ. ಈಗಾಗಲೇ ಯುವನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಚಾಲನೆ ಸಿಕ್ಕಿದೆ.
‘ಬಿಗ್ ಬಾಸ್’ ಸೀಸನ್ 7ರ (Bigg Boss Kannada 7) ಸ್ಪರ್ಧಿ ರಕ್ಷಾ ಸೋಮಶೇಖರ್ (Raksha Somashekar) ಅವರು ಗೆಳೆಯ ನತನ್ ಜಾನಿ ಜೊತೆ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಕಳೆದ ವರ್ಷ ಮೇನಲ್ಲಿ ನತನ್ ಜಾನಿ ಜೊತೆ ರಕ್ಷಾ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಇದೀಗ ಅದ್ದೂರಿಯಾಗಿ ನಟಿ ಮದುವೆಯಾಗಿದ್ದಾರೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ನಟಿ ಶಾಸ್ತ್ರೋಕ್ತವಾಗಿ ಹಸೆಮಣೆ ಏರಿದ್ದಾರೆ. ರಕ್ಷಾ- ನತನ್ ಜೋಡಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ. ರಕ್ಷಾ ಮದುವೆಗೆ ‘ಅಶ್ವಿನಿ ನಕ್ಷತ್ರ’ ಖ್ಯಾತಿಯ ಯಮುನಾ ಶ್ರೀನಿಧಿ ಭಾಗಿಯಾಗಿದ್ದು, ಮದುವೆಯ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮದ್ಯಪಾನದಿಂದ ಕ್ಯಾನ್ಸರ್, ಹೃದ್ರೋಗ ಸೇರಿದಂತೆ ಹಲವು ಗಂಭೀರ ಕಾಯಿಲೆಗಳು ಬರುತ್ತವೆ. ಅಲ್ಲದೆ, ಇದು ಚರ್ಮದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ತುರಿಕೆ : ನೀವು ದೀರ್ಘಕಾಲದವರೆಗೆ ಆಲ್ಕೊಹಾಲ್ ಸೇವಿಸಿದರೆ, ಇದು ಹೆಪಟೈಟಿಸ್ ಮತ್ತು ಸಿರೋಸಿಸ್ನಂತಹ ಅಪಾಯವನ್ನು ಹೆಚ್ಚಿಸುತ್ತದೆ. ಈ ದೈಹಿಕ ಸ್ಥಿತಿಯು ಕಾಮಾಲೆ, ಕಣ್ಣುಗಳ ಸುತ್ತಲಿನ ಚರ್ಮವು ಕಪ್ಪಾಗುವುದು ಮತ್ತು ಚರ್ಮದ ತುರಿಕೆಗೆ ಕಾರಣವಾಗಬಹುದು. ಚರ್ಮದ ಸೋಂಕು ಮತ್ತು ಕ್ಯಾನ್ಸರ್ ಅಪಾಯ : ನೀವು ಹೆಚ್ಚು ಕುಡಿಯುವವರಾಗಿದ್ದರೆ, ದೀರ್ಘಾವಧಿಯ ಸೇವನೆಯು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಇತರ ಕಾಯಿಲೆಗಳಿಗೆ ನೀವು ಹೆಚ್ಚು ಒಳಗಾಗುವಂತೆ ಮಾಡುತ್ತದೆ. ಜೊತೆಗೆ ಚರ್ಮದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ನಿದ್ರೆಯ ಸಮಸ್ಯೆ : ಮದ್ಯಪಾನವು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಕಣ್ಣುಗಳ ಸುತ್ತ ಕಪ್ಪು ವರ್ತುಲಗಳು, ಚರ್ಮದ ಹಳದಿ ಬಣ್ಣ ಮತ್ತು ಸುಕ್ಕುಗಳಂತಹ ಸಮಸ್ಯೆಗಳು ಹೆಚ್ಚಾಗಬಹುದು. ನಿರ್ಜಲೀಕರಣ : ಆಲ್ಕೋಹಾಲ್ ಕುಡಿಯುವುದರಿಂದ ನೀವು ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ, ಇದು ನಿಮ್ಮ ದೇಹವನ್ನು ನಿರ್ಜಲೀಕರಣ…
ಮೊಹಾಲಿ: ಅಫ್ಘಾನಿಸ್ತಾನ (Afghanistan) ವಿರುದ್ಧದ ಟಿ20 (T20) ಸರಣಿಯ ಮೊದಲ ಪಂದ್ಯದಲ್ಲಿ ಭಾರತ (India) 6 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ಅಫ್ಘಾನಿಸ್ತಾನ ವಿರುದ್ಧದ ಅಜೇಯ ಗೆಲುವಿನ ಸಾಧನೆ ಮುಂದುವರಿದಿದೆ. ಅಫ್ಘಾನಿಸ್ತಾನ ವಿರುದ್ಧ ಇದು ಭಾರತದ ಐದನೇ ಗೆಲುವು. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಜನವರಿ 14ರಂದು ಇಂದೋರ್ನಲ್ಲಿ ನಡೆಯಲಿದೆ. ಮೊಹಾಲಿಯಲ್ಲಿ ಕೊರೆಯುವ ಚಳಿ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಇದು ಭಾರತದ ವಿರುದ್ಧ ಅಫ್ಘಾನಿಸ್ತಾನ ಅತ್ಯಧಿಕ ಮೊತ್ತವಾಗಿದೆ. 159 ರನ್ ಟಾರ್ಗೆಟ್ ಬೆನ್ನತ್ತಿದ ಭಾರತ 17.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಆಫ್ಘನ್ ತಂಡಕ್ಕೆ ಮೊಹಮ್ಮದ್ ನಬಿ 27 ಬಾಲ್ನಲ್ಲಿ 42…
ಇಂದಿನ ಜನರು ತಮ್ಮ ಒತ್ತಡದ ಜೀವನಶೈಲಿಯಿಂದಾಗಿ ತಡರಾತ್ರಿಯ ವೇಳೆ ಊಟವನ್ನು ಸೇವಿಸುತ್ತಾರೆ. ಆದರೆ ಇದರಿಂದ ಈ ಗಂಭೀರ ಅಪಾಯಕ್ಕೆ ಒಳಗಾಗುತ್ತಾರಂತೆ. ನೀವು ತಡರಾತ್ರಿಯಲ್ಲಿ ಆಹಾರ ಸೇವಿಸುವುದರಿಂದ ನಿಮ್ಮ ಹೃದಯ ಮತ್ತು ಮನಸ್ಸು ಸ್ತಬ್ಧವಾಗುತ್ತದೆ. ಈ ಸಮಯದಲ್ಲಿ ಊಟ ಮಾಡುವುದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಂತೆ. ಇದರಿಂದ ಹೃದಯರಕ್ತನಾಳಗಳ ಕಾಯಿಲೆಗೆ ಒಳಗಾಗುತ್ತೀರಂತೆ. ಅಲ್ಲದೇ ತಡರಾತ್ರಿ ಆಹಾರ ಸೇವಿಸುವುದರಿಂದ ಪಾರ್ಶ್ವವಾಯು ಬರುವ ಅಪಾಯ ಹೆಚ್ಚಾಗಿದೆಯಂತೆ. ಅಲ್ಲದೇ ತಡರಾತ್ರಿ ಊಟ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಮತ್ತು ರಕ್ತದೊತ್ತಡ ಸಮಸ್ಯೆ ಕಾಡುತ್ತದೆ. ಹಾಗೇ ಇದರಿಂದ ಅಜೀರ್ಣ ಸಮಸ್ಯೆ ಕೂಡ ಕಾಡುತ್ತದೆಯಂತೆ.
ಏಲಕ್ಕಿಯಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿವೆ. ಏಲಕ್ಕಿಯಲ್ಲಿರುವ ಗುಣಲಕ್ಷಣಗಳು ಸೇವಿಸಿದ ಆಹಾರವನ್ನು ಉತ್ತಮವಾಗಿ ಜೀರ್ಣಿಸಿಕೊಳ್ಳಲು ಅಗತ್ಯವಾದ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಸೇವಿಸಿದ ಆಹಾರವು ಚೆನ್ನಾಗಿ ಜೀರ್ಣವಾಗುತ್ತದೆ. ಇದಲ್ಲದೆ, ಹೊಟ್ಟೆ ಉಬ್ಬರ, ಗ್ಯಾಸ್, ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ತೆಗೆದುಹಾಕಲಾಗುತ್ತದೆ. ಏಲಕ್ಕಿಯಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಎಲೆಕ್ಟ್ರೋಲೈಟ್ಗಳು ಸಮೃದ್ಧವಾಗಿವೆ. ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಇದು ರಕ್ತವನ್ನು ಕೊಲೆಸ್ಟ್ರಾಲ್ ಮುಕ್ತವಾಗಿಸುತ್ತದೆ. ನೀವು ಖಿನ್ನತೆಗೆ ಒಳಗಾದಾಗ ನಿಮ್ಮ ಬಾಯಿಯಲ್ಲಿ ಏಲಕ್ಕಿಯನ್ನು ಜಗಿಯುತ್ತಿದ್ದರೆ, ನೀವು ಖಿನ್ನತೆಯಿಂದ ಪರಿಹಾರ ಪಡೆಯುವುದು ಮಾತ್ರವಲ್ಲದೆ ಒತ್ತಡವನ್ನು ಕಡಿಮೆ ಮಾಡುತ್ತದೆ.