Author: AIN Author

ನವದೆಹಲಿ:- ರಾಮಮಂದಿರ ಬಗ್ಗೆ ಭಾವನಾತ್ಮಕವಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇದೇ ಜನವರಿ 22ರಂದು ನಡೆಯಲಿರುವ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ಬಗ್ಗೆ ನಾನು ಭಾವನಾತ್ಮಕವಾಗಿದ್ದೇನೆ. ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ನಾನು ಇಂತಹ ಭಾವನೆಗಳನ್ನು ಅನುಭವಿಸುತ್ತಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ. ರಾಮಮಂದಿರ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು 11 ದಿನಗಳ ಆಚರಣೆಗಳನ್ನು ಆರಂಭಿಸಿದ್ದು, ಅದರಲ್ಲಿ ಕಟ್ಟುನಿಟ್ಟಿನ ಪ್ರತಿಜ್ಞೆ ಮತ್ತು ಬಲಿದಾನವನ್ನು ಆರಂಭಿಸಿದ್ದಾರೆ. ಹೀಗಾಗಿ ಅವರು ಎಕ್ಸ್‍ನಲ್ಲಿ ರಾಷ್ಟ್ರಕ್ಕೆ ನೀಡಿರುವ 10 ನಿಮಿಷಗಳ ವಿಶೇಷ ಸಂದೇಶದಲ್ಲಿ ಅವರು ಭಾವುಕರಾಗಿ ಈ ವಿಷಯ ಹಂಚಿಕೊಂಡಿದ್ದಾರೆ. ಅಯೋಧ್ಯೆಯ ಹೊಸ ರಾಮಮಂದಿರದಲ್ಲಿ ರಾಮ ಲಲ್ಲಾ ಅಥವಾ ಶಿಶು ರಾಮನ ವಿಗ್ರಹವನ್ನು ಇರಿಸುವ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ವೀಕ್ಷಿಸಲು ಸಾಧ್ಯವಾಗುವುದು ನನ್ನ ಅದೃಷ್ಟ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಮ್ಮ ಶಾಸ್ತ್ರಗಳು ಹೇಳುವಂತೆ ದೇವರ ಯಜ್ಞಕ್ಕೆ, ಪೂಜೆಗೆ, ನಮ್ಮೊಳಗಿರುವ ಪರಮಾತ್ಮನ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು. ಇದಕ್ಕಾಗಿ ಶಾಸ್ತ್ರಗಳು ಪ್ರತಿಷ್ಠಾಪನೆಯ…

Read More

ದೆಹಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram mandir) ಜನವರಿ 22 ರ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಮೊದಲು 11 ದಿನಗಳ ವ್ರತ ಕೈಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠೆಗೆ ಕೇವಲ 11 ದಿನಗಳು ಉಳಿದಿವೆ. ಶುಭ ಸಮಾರಂಭಕ್ಕೆ ಸಾಕ್ಷಿಯಾಗುವ ಸೌಭಾಗ್ಯ ನನ್ನದು. ಸಮಾರಂಭದಲ್ಲಿ ಭಾರತದ ಜನರನ್ನು ಪ್ರತಿನಿಧಿಸಲು ಭಗವಂತ ನನ್ನನ್ನು ಕೇಳಿದ್ದಾನೆ. ಅದನ್ನು ಗಮನದಲ್ಲಿಟ್ಟುಕೊಂಡು ನಾನು ಇಂದಿನಿಂದ 11 ದಿನಗಳ ವಿಶೇಷ ಆಚರಣೆಯನ್ನು ಪ್ರಾರಂಭಿಸುತ್ತಿದ್ದೇನೆ. ಇದಕ್ಕಾಗಿ ನಾನು ನಿಮ್ಮೆಲ್ಲರ ಆಶೀರ್ವಾದವನ್ನು ಕೋರುತ್ತೇನೆ. ಈ ಕ್ಷಣದಲ್ಲಿ ನನ್ನ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ತುಂಬಾ ಕಷ್ಟ, ಆದರೆ ನಾನು ನನ್ನ ಕಡೆಯಿಂದ ಪ್ರಯತ್ನಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಆಡಿಯೋ ಸಂದೇಶದಲ್ಲಿ ಪ್ರಧಾನಿ ಹೇಳಿದ್ದಾರೆ.  ವ್ರತದ ಮಹತ್ವ ಏನು..?: ಹಿಂದೂ ಶಾಸ್ತ್ರಗಳ ಪ್ರಕಾರ, ದೇವರ ವಿಗ್ರಹದ ‘ಪ್ರಾಣ ಪ್ರತಿಷ್ಠೆ’ ಒಂದು ವಿವರವಾದ ಆಚರಣೆಯಾಗಿದೆ. ಇದಕ್ಕೂ ಮುನ್ನ ಸಾಕಷ್ಟು ನಿಯಮಗಳನ್ನು ಅನುರಿಸಬೇಕಾಗುತ್ತದೆ. ಹೀಗಾಗಿ ಪ್ರಧಾನಿ…

Read More

ಬೆಂಗಳೂರು:- ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಮುಖ್ಯ ಶಿಕ್ಷಕರ ʻಬಡ್ತಿʼ ಪ್ರಕ್ರಿಯೆ ಆರಂಭಕ್ಕೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಶಾಲಾ ಶಿಕ್ಷಣ ಇಲಾಖೆ 2023-24ನೇ ಸಾಲಿನ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಮತ್ತು ಮುಖ್ಯ ಶಿಕ್ಷಕರಿಗೆ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಕುರಿತು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುವುದರ ಜತೆಗೆ ಬಡ್ತಿ ಪ್ರಕ್ರಿಯೆ ಚಾಲನೆ ನೀಡುವಂತೆ ಶಾಲಾ ಶಿಕ್ಷಣ ಸೂಚನೆ ನೀಡಿದೆ ಬಡ್ತಿ ಪ್ರಕ್ರಿಯೆ ಕೌನ್ಸೆಲಿಂಗ್ ಕೈಗೊಳ್ಳುವಾಗ ಕೆಲವು ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸೂಚಿಸಿದೆ. ಇದರ ಜತೆಗೆ ಮುಖ್ಯ ಶಿಕ್ಷಕರು ಮತ್ತು ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗಳಿಗೆ ಬಡ್ತಿ ಪೂರಕವಾದ ವೇಳಾಪಟ್ಟಿಯನ್ನು ರೂಪಿಸಿದೆ. ಜ.12ರಂದು ಬಡ್ತಿಗೆ ಅರ್ಹರಿರುವ ಶಿಕ್ಷಕರ ತಾತ್ಕಾಲಿಕ ಅಂತಿಮ ಅದ್ಯತಾ ಪಟ್ಟಿ ಪ್ರಕಟಣೆ ಮಾಡಲಿದೆ. ಜ.30ರಂದು ‘ಬಿ’ ವಲಯದಿಂದ ‘ಎ’ ವಲಯಕ್ಕೆ ಮುಖ್ಯ ಶಿಕ್ಷಕರು ಮತ್ತು ಹಿರಿಯ ಮುಖ್ಯ ಶಿಕ್ಷಕರಿಗೆ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ.…

Read More

ಬೆಂಗಳೂರು: ಕಾಟೇರ’ (Katera) ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ (Party) ಅವಧಿ ಮೀರಿ ಬೆಳಗಿನ ಜಾವದವರೆಗೆ ಚಿತ್ರತಂಡ ಪಾರ್ಟಿ ಮಾಡಿತ್ತು ಎಂಬ ಆರೋಪದ ಮೇಲೆ ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಕೆಲವು ಚಿತ್ರತಂಡದ ಸದಸ್ಯರು ಹಾಗೂ ಕೆಲವು ಸೆಲೆಬ್ರಿಟಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದರು. ಹಾಗಾಗಿ 12.1.24(ಇಂದು) ಶುಕ್ರವಾರ ಮಧ್ಯಾಹ್ನ 2.30ಕ್ಕೆ ರಾಕ್ ಲೈನ್ ವೆಂಕಟೇಶ್, ದರ್ಶನ್,  ತರುಣ್ ಸುಧೀರ್ ಅವರು ಸೇರಿದಂತೆ ನೋಟಿಸ್ ಜಾರಿಯಾಗಿರುವ ಎಲ್ಲರೂ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹೋಗುತ್ತಿದ್ದಾರೆ‌. ಕೆಲ ದಿನಗಳ ಹಿಂದೆಯಷ್ಟೇ ಪೊಲೀಸರು ನೋಟಿಸ್ ಕಳುಹಿಸಿದ್ದರು. ದರ್ಶನ್ (Darshan) ಮತ್ತು ತಂಡ ದುಬೈನಲ್ಲಿದ್ದ ಕಾರಣದಿಂದಾಗಿ ಹಾಜರಾಗಲು ಆಗಿರಲಿಲ್ಲ. ನೆನ್ನೆಯಷ್ಟೇ ದುಬೈನಿಂದ ಚಿತ್ರತಂಡ ಬೆಂಗಳೂರಿಗೆ ವಾಪಸ್ಸಾಗಿದ್ದು, ಇಂದು ಎಲ್ಲರೂ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ. ದರ್ಶನ್ ನಟನೆಯ ಕಾಟೇರ ಸಿನಿಮಾದ ಸೆಲೆಬ್ರಿಟಿ ಶೋ ಆಯೋಜನೆಯಾಗಿತ್ತು. ಸೆಲೆಬ್ರಿಟಿ ಶೋ ಮುಗಿಸಿಕೊಂಡು ಪಕ್ಕದಲ್ಲೇ ಇದ್ದ ಪಬ್ ನಲ್ಲಿ ತಡರಾತ್ರಿವರೆಗೂ ದರ್ಶನ್ ಮತ್ತು ಹಲವು ನಟರು…

Read More

ದೇಶದಾದ್ಯಂತ ಅಯೋಧ್ಯೆಯಲ್ಲಿ ನಡೆಯುವ ರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾ ಪೂಜೆ ಎಲ್ಲರ ಗಮನ ಸೆಳೆದಿದೆ. ಆದರೆ ಕಾಂಗ್ರೆಸ್‌ ನಾಯಕರು ಮಾತ್ರ ನಾವು ಅಯೋಧ್ಯೆ ಬರಲ್ಲ ಅಂತ ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ಮಧ್ಯೆಯೇ ಕೈ ಸಚಿವನೊಬ್ಬ ನಾನು ಹೋಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಹೌದು, ಹಿಮಾಚಲ ಪ್ರದೇಶದ ಲೋಕೋಪಯೋಗಿ ಇಲಾಖೆ ಸಚಿವ ವಿಕ್ರಮಾದಿತ್ಯ ಸಿಂಗ್, “ನಾನು ನನ್ನ ಹಿಂದಿನ ಹೇಳಿಕೆಗೆ ಬದ್ಧನಾಗಿರುತ್ತೇನೆ. ನಾನು ಅಯೋಧ್ಯೆಗೆ ಭೇಟಿ ನೀಡಲು ಉದ್ದೇಶಿಸಿರುವುದು ರಾಜಕಾರಣಿಯಾಗಿ ಅಲ್ಲ, ಆದರೆ ಭಗವಾನ್ ರಾಮನ ನಿಷ್ಠಾವಂತ ಅನುಯಾಯಿಯಾಗಿದ್ದ ದಿವಂಗತ ವೀರಭದ್ರ ಸಿಂಗ್ ಅವರ ಮಗನಾಗಿ ಅಯೋಧ್ಯೆಗೆ ಹೋಗ್ತೀನಿ ಎಂದಿದ್ದಾರೆ. ವಿಕ್ರಮಾದಿತ್ಯ ಸಿಂಗ್ ಅವರನ್ನು ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆ ಸಮಾರಂಭಕ್ಕೆ ಆರ್‌ಎಸ್‌ಎಸ್-ವಿಎಚ್‌ಪಿ ಆಹ್ವಾನಿಸಿತ್ತು. ಆಹ್ವಾನವನ್ನು ಸ್ವೀಕರಿಸಿದ ಅವರು, “ಇದು ರಾಜಕೀಯ ವಿಷಯವಲ್ಲ. ಹಿಮಾಚಲ ಪ್ರದೇಶದಿಂದ ಆಯ್ದ ಆಹ್ವಾನಿತರಲ್ಲಿ ಒಬ್ಬನಾಗಿರುವುದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ ಎಂದು ಹೇಳಿದರು.

Read More

ಬೆಂಗಳೂರು: ಲೋಕಸಭಾ ಅಭ್ಯರ್ಥಿಗಳನ್ನು ಗೆಲ್ಲಿಸದಿದ್ದರೆ ಸಚಿವರ ತಲೆದಂಡ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲು ಸಚಿವರಿಗೆ ಸೂಚನೆ ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ‌ ನೀಡಿದರು. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,   ಹೈಕಮಾಂಡ್ ಟಾಸ್ಕ್ ಪೂರೈಸದಿದ್ದರೆ ಸಚಿವರ ತಲೆದಂಡ ಆಗಲಿದೆ ಎಂಪಿ ಚುನಾವಣೆಯಲ್ಲಿ ಪಕ್ಷ ಗೆಲ್ಲದಿದ್ದರೆ ಸಚಿವರ ತಲೆದಂಡವಾಗುತ್ತೆ  ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಅಸಮಧಾನ ವ್ಯಕ್ತಪಡಿಸಿದರು. ಎಂಪಿ ಚುನಾವಣೆಯನ್ನು ಜವಾಬ್ದಾರಿಯಿದ ನಿರ್ವಹಿಸಲು ಸೂಚನೆ ಇಲ್ಲದಿದ್ದರೆ ಸಚಿವರ ತಲೆದಂಡವೂ ಆಗಲಿದೆ ಎಂದು ಎಚ್ಚರಿಸಿದ್ದಾರೆ ನಾವು ಕೂಡ ಎಂಪಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ 2-3 ದಿನಗಳಲ್ಲಿ ಮತ್ತೆ ರಾಜ್ಯಕ್ಕೆ ಸುರ್ಜೇವಾಲ ಭೇಟಿ ನೀಡಲಿದ್ದಾರೆ ಅಭ್ಯರ್ಥಿ ಆಯ್ಕೆ ಮತ್ತು ಸಚಿವರ ಸ್ಪರ್ಧೆ ಬಗ್ಗೆ ಏನೂ ಚರ್ಚೆಯಾಗಿಲ್ಲ ಎಂದು ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

Read More

ಕಲಬುರಗಿ:- ಲಂಕೆಯಲ್ಲಿರುವ ಸೀತೆಯನ್ನ ಬಿಡಿಸಿಕೊಂಡು ಬರಲು ಪ್ರಭು ಶ್ರೀರಾಮ ತಪಸ್ಸು ಮಾಡಿದ ಜಾಗವೊಂದು ಕಲಬುರಗಿ ಜಿಲ್ಲೆಯಲ್ಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.. ಹೌದು ಕಮಲಾಪುರ ತಾಲೂಕಿನ ಸೊಂತ ಎಂಬ ಊರಲ್ಲಿ ತಪಸ್ಸು ಮಾಡಿದ್ದನಂತೆ ರಾಮ. ಗ್ರಾಮಸ್ಥರ ಪ್ರಕಾರ ಊರಿನ ರಾಮತೀರ್ಥ ಎಂಬ ಗುಡಿಯಲ್ಲಿನ ಈಶ್ವರ ಲಿಂಗಕ್ಕೆ ಶ್ರೀರಾಮ ಪೂಜೆ ಮಾಡಿದ್ದ ಅದಕ್ಕಾಗಿ ಗುಡಿ ಮುಂದಿನ ಕಲ್ಯಾಣಿಯಲ್ಲಿನ ನೀರನ್ನ ತಂದು ಲಿಂಗಕ್ಕೆ ಪೂಜಿಸಿದ್ದ ಅನ್ನೋ ಮಾತು ಪ್ರಚಲಿತದಲ್ಲಿದೆ. ಹೀಗಾಗಿ 22 ರಂದು ನಡೆಯುವ ರಾಮಮಂದಿರ ಉದ್ಘಾಟನೆ ವೇಳೆ ಗ್ರಾಮದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.ಅದಕ್ಕಾಗಿ ಗುಡಿ ಮುಂದಿನ ಕಲ್ಯಾಣಿಯನ್ನ ಸ್ವಚ್ಛಗೊಳಿಸಿ ಕಂಗೊಳಿಸುವಂತೆ ಮಾಡಲಾಗ್ತಿದೆ…

Read More

ಆಂಧ್ರ ಪ್ರದೇಶ- ಇಲ್ಲಿನ ಚಿತ್ತೂರು ಜಿಲ್ಲೆಯಲ್ಲಿ ತನ್ನ ಪತಿ ಖರ್ಚಿಗೆ 50 ರೂಪಾಯಿ ಕೊಡಲಿಲ್ಲ ಎಂದಿದ್ದಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ರಾಧಾ ಆತನ ಪತಿ ಅನಂತಕುಮಾರ್​ ಜೊತೆ ಚಿತ್ತೂರು ಜಿಲ್ಲೆ ಪೊನ್ನೆಪಲ್ಲಿ ಗ್ರಾಮದಲ್ಲಿ ವಾಸವಾಗಿದ್ದರು. ಪತಿ ಅನಂತ್​ ಕುಮಾರ್​ ಬಳಿ ತನ್ನ ಖರ್ಚಿಗೆ 50 ರೂಪಾಯಿ ಕೇಳಿದ್ದಾಳೆ. ಹಣ ನೀಡಲು ಪತಿ ನಿರಾಕರಿಸಿದ್ದಾನೆ. ಇದಕ್ಕೆ ಬೇಸರಗೊಂಡಿದ್ದ ರಾಧಾ ಮೊಬೈಲ್​ ಕ್ಲೀನಿಂಗ್​ ಆಯಿಲ್​ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಸ್ಥಳೀಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ. ಸೆಲ್‌ಫೋನ್ ಕ್ಲೀನಿಂಗ್ ಆಯಿಲ್ ಕುಡಿದು ರಾಧಾ ತೀವ್ರ ಅಸ್ವಸ್ಥಗೊಂಡಿದ್ದನ್ನು ಕಂಡ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಈ ಕುರಿತು ರಾಧಾ ಅವರ ತಂದೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More

ಫಿನಾಲೆ ಸಮೀಪಿಸುತ್ತಿದ್ದಂತೆಯೇ ಬಿಗ್‌ಬಾಸ್ ಮನೆಯೊಳಗಿನ ಸಂಬಂಧಗಳ ಬಣ್ಣಗಳೆಲ್ಲ ಮಾಸುತ್ತಿವೆ. ಗೆಲುವಿನ ಗುರಿಯೊಂದೇ ಎಲ್ಲರ ಕಣ್ಣಮುಂದೆ ಹೊಳೆಯುತ್ತಿದೆ. ಹಿಂದಿನ ಎಪಿಸೋಡ್‌ನಲ್ಲಿ ನಮ್ರತಾ ಅವರು ವಿನಯ್ ಅವರನ್ನು ಆಟದಿಂದ ಕೈಬಿಟ್ಟಾಗಲೇ ಇಂಥದೊಂದು ಸೂಚನೆ ಕಾಣಿಸಿಕೊಂಡಿತ್ತು. ಈಗ ಅಂಥದ್ದೇ ಇನ್ನೊಂದು ಘಟನೆ ಬಿಗ್‌ಬಾಸ್ ಮನೆಯೊಳಗೆ ನಡೆದಿದೆ. ಅದರ ಸೂಚನೆ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ. ಅತಿ ಹೆಚ್ಚು ಅಂಕ ಗಳಿಸಿಕೊಂಡವರಲ್ಲಿ ಸಂಗೀತಾ ಮತ್ತು ಪ್ರತಾಪ್ ಮಧ್ಯೆ ಪೈಪೋಟಿ ಇತ್ತು. ನಿನ್ನೆ ಒಂದು ಟಾಸ್ಕ್‌ನಲ್ಲಿ ಗೆಲುವು ಕಂಡು ನಮ್ರತಾ ಕೂಡ ರೇಸ್‌ಗೆ ಬಂದಿದ್ದರು. ಮೊದಲ ಕೆಲವು ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಡಿದ ವರ್ತೂರು ಸಂತೋಷ್ ಕೂಡ ಇನ್ನೂರರ ಗಡಿ ದಾಟಿದ್ದಾರೆ. ಈ ಹಂತದಲ್ಲಿ ಪ್ರತಾಪ್ ಅವರಿಗೆ ತಮ್ಮ ಎದುರಾಳಿಗಳನ್ನು ಆಯ್ದುಕೊಳ್ಳುವ ಅಧಿಕಾರವನ್ನು ಬಿಗ್‌ಬಾಸ್ ನೀಡಿದ್ದಾರೆ. ಪ್ರತಾಪ್ ಸಂಗೀತಾ ಅವರನ್ನೂ ಆರಿಸಿಕೊಂಡಿದ್ದಾರೆ. ಆದರೆ ಮೊದಲ ಹಂತದಲ್ಲಿ ಯಾರನ್ನಾದರೂ ಹೊರಗಿಡುವ ಸಂದರ್ಭದಲ್ಲಿ ಸಂಗೀತಾ ಅವರನ್ನೇ ಆಟದಿಂದ ಹೊರಗಿಟ್ಟಿದ್ದಾರೆ. ಸಂಗೀತಾ ದೀ ಎಂದು ಯಾವಾಗಲೂ ಜೊತೆಗಿರುತ್ತಿದ್ದ ಪ್ರತಾಪ್ ಅವರೇ ಅವರನ್ನು ಹೊರಗಿಟ್ಟಿದ್ದು…

Read More

ವಿಜಯಪುರ:- ನಗರದಲ್ಲಿ ಚಡ್ಡಿ ಗ್ಯಾಂಗ್ ಹಾವಳಿ ಹೆಚ್ಚಾಗಿದೆ. ಹೀಗಾಗಿ ಅಂತರರಾಜ್ಯ ಕಳ್ಳರ ಚಡ್ಡಿ ಗ್ಯಾಂಗ್ ಬಂದಿದೆ ಅಂತ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ. ಇನ್ನು ಈ ಚಡ್ಡಿ ಗ್ಯಾಂಗ್ ಚಡ್ಡಿ, ಬನಿಯಾನ್, ಮಾಸ್ಕ್ ಮಾತ್ರ ಧರಿಸಿ ಮನೆಗೆ ನುಗ್ಗುತ್ತಾರೆ. ಚಡ್ಡಿ ಗ್ಯಾಂಗ್‌ನಲ್ಲಿ ೫ ರಿಂದ ೮ ಜನರು ಇದ್ದಾರೆ. ಮನೆಯಲ್ಲಿ ಯಾರು ಇಲ್ಲದನ್ನ ಗಮನಿಸಿ ಮನೆಗೆ ನುಗ್ಗಿ ದರೋಡೆ ಮಾಡುತ್ತಾರೆ ಎನ್ನಲಾಗಿದೆ. ಇದೇ ವೇಳೆ ಬೇರೆ ಊರುಗಳಿಗೆ ತೆರಳುವಾಗ ಚಿನ್ನ, ಬೆಳ್ಳಿ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕೊಂಡೊಯ್ಯಲು ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಚಡ್ಡಿ ಗ್ಯಾಂಗ್ ವೇಷಭೂಷಣದಂತೆ ಯಾರಾದರೂ ಅನುಮಾನಾಸ್ಪದವಾಗಿ ಕಂಡು ಬಂದಲ್ಲಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಷಯ ತಿಳಿಸಲು ಸೂಚನೆ ನೀಡಲಾಗಿದೆ.

Read More