ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, 28 ಕ್ಷೇತ್ರಗಳಲ್ಲಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲಲು ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣೆಗೆ ಸಂಬಂಧಿಸಿದ ಕಾರ್ಯತಂತ್ರ ರೂಪಿಸುತ್ತಿದೆ. ಇದರ ಮುಂದುವರೆದ ಭಾಗವಾಗಿ ಜನವರಿ 21ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಆಯೋಜಿಸಿದೆ. ಇದರೊಂದಿಗೆ ಲೋಕಸಭಾ ಚುನಾವಣೆಗೆ ಅಧಿಕೃತವಾಗಿ ರಣಕಹಳೆ ಮೊಳಗಿಸಲು ಕಾಂಗ್ರೆಸ್ ಸಜ್ಜಾಗಿದೆ. ಜನವರಿ 21ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಭಾಗಿಯಾಗಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಈ ರಾಜ್ಯ ಮಟ್ಟದ ಸಮಾವೇಶದಲ್ಲಿ ಸಚಿವರು, ಕಾಂಗ್ರೆಸ್ ಶಾಸಕರು, ಸಂಸದರು, ಡಿಸಿಸಿ ಅಧ್ಯಕ್ಷರು, KPCC ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಸದಸ್ಯರು ಭಾಗಿಯಾಗಲಿದ್ದಾರೆ.
Author: AIN Author
ಶಿವಮೊಗ್ಗ:- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಮಹತ್ವಾಕಾಂಕ್ಷೆ 5ನೇ ಗ್ಯಾರೆಂಟಿ ಯೋಜನೆಯಾಗಿರುವ “ಯುವನಿಧಿ”ಗೆ ಇಂದು ಚಾಲನೆ ನೀಡಿದರು ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಗಳ ಖಾತೆಗೆ ಹಣ ಬಿಡುಗಡೆ ಮಾಡಿದರು. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಐದು ಗ್ಯಾರೆಂಟಿಗಳ ಪೈಕಿ ಇದು ಕೊನೆಯ ಗ್ಯಾರೆಂಟಿ ಯೋಜನೆ. ಯುವನಿಧಿ ಜಾರಿಯೊಂದಿಗೆ ಕಾಂಗ್ರೆಸ್ ಪಕ್ಷ ನೀಡಿದ ಎಲ್ಲ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದಂತೆ ಆಗಿದೆ. ಯುವನಿಧಿ ಯೋಜನೆಗೆ 5.29 ಲಕ್ಷ ನೋಂದಣಿ ಗುರಿ ಇರಿಸಿಕೊಂಡಿದ್ದು, ಈಗಾಗಲೇ 61 ಸಾವಿರಕ್ಕೂ ಹೆಚ್ಚು ನೋಂದಣಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಗೂ ಮೊದಲು, ನಾಡಿನ ಹೆಸರಾಂತ ಸಂಗೀತಗಾರರು ನಡೆಸಿಕೊಟ್ಟ ತತ್ವಪದ,ಜನಪ್ರಿಯ ಚಿತ್ರಗೀತೆಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಯುವಕ-ಯುವತಿಯರು ಲಯಬದ್ಧವಾಗಿ ಹೆಜ್ಜೆ ಹಾಕಿದ್ದು ಕಾರ್ಯಕ್ರಮದ ಸಂತಸ,ಸಂಭ್ರಮಗಳನ್ನು ನೂರ್ಮಡಿಗೊಳಿಸಿತು. ಸಂತ ಶಿಶುನಾಳ ಶರೀಫರ ‘ಕೋಡಗನ್ನ ಕೋಳಿ ನುಂಗಿತ್ತ’ ,”ತರವಲ್ಲ ತಗೀ ನಿನ್ನ ತಂಬೂರಿ ಸ್ವರ” ತತ್ವಪದಗಳು ಅಜಯ್ ವಾರಿಯರ್ ಮತ್ತು…
ಗದಗ:- ಕಾಂಗ್ರೆಸ್ ಸ್ಲೀಪಿಂಗ್ ಸರ್ಕಾರ ಎಂಬ ಬಿಜೆಪಿ ಎಕ್ಸ್ ಪೋಸ್ಟ್ ವಿಚಾರವಾಗಿ ಕಾನೂನು ಸಚಿವ ಎಚ್ ಕೆ ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಗದಗನಲ್ಲಿ ಮಾತನಾಡಿದ ಅವರು, ಮಲಗಿ ನಿದ್ದೆ ಹತ್ತಿದಾಗ ಟ್ವೀಟ್ ಮಾಡಿದ್ದಾರಾ.. ಮೊಟ್ಟ ಮೊದಲ ಬಾರಿಗೆ ಒಂದು ಕೋಟಿ ಕುಟುಂಬವನ್ನ ಬಡತನ ರೇಖೆಯಿಂದ ಮೇಲೆತ್ತುತ್ತಿದ್ದೇವೆ.. ನಾಲ್ಕುವರೆ ಕೋಟಿ ಜನರನ್ನ ಬಡತನ ಮುಕ್ತರನ್ನಾಗಿಸುತ್ತಿದ್ದೇವೆ.. ಇದು ಕ್ರಾಂತಿಕಾರಕ ಅಂತಾ ಅನ್ಸಲ್ವಾ..? ಇದು ಏನೂ ಅಲ್ವಾ.. ಕೇಳುವವರು ಯಾರು..? ಸ್ವಾತಂತ್ರ್ಯ ನಂತರ ಅರ್ಹಫಲಾನುಭವಿಗಳಿಗೆ 95 ರಿಂದ 99 ಪ್ರತಿಶತ ಸಿಗಬೇಕಾದ ಸವಲತ್ತು ಸಿಕಿತ್ತಾ..? ಕ್ರಾಂತಿಕಾರಕ ಬೆಳವಣಿಗೆ ತಂದ ಆಡಳಿತಕ್ಕೆ ಮಲಗಿದ್ದಾರೆ ಅಂತಾರೆ ಅಂದ್ರೆ ಇವರಿಗೆ ಏನ್ ಹೇಳ್ಬೇಕು. ಅವರು ಏಳಲಿ.. ಕನಸಿನಿಂದ ನಿದ್ದೆಯಿಂದ ಏಳಲಿ, ಸರ್ಕಾರದ ಕೆಲಸ ಅರ್ಥ ಮಾಡಿಕೊಳ್ಳಲಿ.. ಸಿದ್ದರಾಮಯ್ಯ ಹೋದಲ್ಲೆಲ್ಲ ಮಹಿಳೆಯರು ಯಾಕೆ ಆದರದಿಂದ ಗೌರವಿಸುತ್ತಾರೆ. ನೀವು ಸರ್ಕಾರದ ಕಾರ್ಯವೈಖರಿ ನೋಡಿದ್ದೀರಿ.. ಎಲ್ಲ ಜಿಲ್ಲೆಯಲ್ಲಿ ಜನ ಸ್ಪಂದನ ಕಾರ್ಯಕ್ರಮ ನಡೀತಿದೆ. ವೀಡಿಯೋ, ಫೋಟೋಕ್ಕಾಗಿ ಜನತಾ ದರ್ಶನ ಮಾಡಿಲ್ಲ. ಅರ್ಜಿಗಳನ್ನ…
ಹುಬ್ಬಳ್ಳಿ: ಸರ್ಕಾರದ ಶಕ್ತಿ ಯೋಜನೆ ಮಹಿಳೆಯರಿಗೆ ಅನುಕೂಲ ಅಗಿದೆಯೋ ಇಲ್ಲವೋ ಗೊತ್ತಿಲ್ಲ. ವಿದ್ಯಾರ್ಥಿಗಳಿಗೆ ಹಾಗೂ ದೈನಂದಿನ ಕೆಲಸ ಕಾರ್ಯಗಳಿಗೆ ಬಸ್ಸನ್ನು ನಂಬಿಕೊಂಡವರಿಗೆ ದೊಡ್ಡ ಸಮಸ್ಯೆಯಂತೂ ಆಗಿದೆ. ಶಕ್ತಿ ಯೋಜನೆ ಜಾರಿಯಾದ ಮೇಲೆ ಬಸ್ ಸಂಖ್ಯೆ ಹಾಗೂ ಮ್ಯಾನ್ ಪವರ್ ಜಾಸ್ತಿ ಮಾಡಬೇಕಿದ್ದ ಸರ್ಕಾರ ಹಾಗೂ ಸಾರಿಗೆ ಸಂಸ್ಥೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಹೌದು.. ಧಾರವಾಡ ಜಿಲ್ಲೆಯಲ್ಲಿ ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ಬಸ್ಸಿಗಾಗಿ ಜನರು ಸಾಕಷ್ಟು ಸರ್ಕಸ್ ಮಾಡುವಂತಾಗಿದೆ. ಅಲ್ಲದೇ ಸಂಜೆ ಅವಧಿ ಹಾಗೂ ಬೆಳಗಿನ ಕಚೇರಿಗಳ ಸಮಯದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳಂತೂ ಅನುಭವಿಸುತ್ತಲೇ ಸಾಗಿದ್ದಾರೆ. ಬಸ್ಸಿನಲ್ಲಿ ಸೀಟ್ ಹಿಡಿಯುವುದು ಇರಲಿ ಬಸ್ಸಿನ ಫುಟ್ ರೆಸ್ಟ್ ಮೇಲೆ ಜಾಗೆ ಸಿಕ್ಕರೂ ಸೌಭಾಗ್ಯ ಎನ್ನುವಂತಾಗಿದೆ. ಈಗಾಗಲೇ ಬಸ್ಸಿನ ಪ್ರಮಾಣ ಹೆಚ್ಚಿಗೆ ಮಾಡಬೇಕಿದ್ದ ಸಾರುವೆ ಸಾರಿಗೆ ಸಂಸ್ಥೆ ಇರುವ ಮ್ಯಾನ್ ಪವರ್ ನಲ್ಲಿಯೇ ಹೆಚ್ಚಿನ ಸೆಡ್ಯೂಲ್ ಮಾಡುತ್ತೇವೆ ಅಂತಾರೇ.. ಇನ್ನೂ ಪ್ರಯಾಣಿಕರ ಸಂಖ್ಯೆ ತಿಂಗಳಿಗೆ 20 ಲಕ್ಷ ದಾಟಿದೆ. ದಿನದಿಂದ ದಿನಕ್ಕೆ…
ಬೆಂಗಳೂರು : ನಗರ ಪೊಲೀಸ್ ಇಲಾಖೆಯ ಈಶಾನ್ಯ ವಿಭಾಗದ ಪೊಲೀಸರು ಇಂದು ಯಲಹಂಕದಲ್ಲಿ ಡ್ರಗ್ಸ್ ಜಾಗೃತಿ ವಾಕಥಾನ್ ನಡೆಸಿದರು.. ನಗರ ಪೊಲೀಸ್ ಅಯುಕ್ತ ಬಿ.ದಯಾನಂದ, ಹೆಚ್ಚುವರಿ ಪೊಲೀಸ್ ಆಯುಕ್ತ ರಮಣಗುಪ್ತ, ಚಿತ್ರನಟಿ ಅನುಪ್ರಭಾಕರ್- ರಘುಮುಖರ್ಜಿ ಡ್ರಗ್ಸ್ ಜಾಗೃತಿ ವಾಕಥಾನ್ ಗೆ ಹಸಿರುದ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.. ಇಂದಿನ ಯುವಜನಾಂಗ ಕಾಲೇಜು ವಿದ್ಯಾರ್ಥಿಗಳು ಮೋಜು ಮಸ್ತಿ ಹೆಸರಲ್ಲಿ ದೂಮಪಾನ ಮದ್ಯಪಾನ ಚಟಗಳಿಗೆ ದಾಸರಾಗ್ತಿದ್ದಾರೆ.. ಜೊತೆಗೆ ಸಿಗರೇಟ್, ಗಾಂಜಾ, ಡ್ರಗ್ಸ್ ಸ್ನೇಹಿತರು, ಪಾರ್ಟಿಗಳ ಹೆಸರಲ್ಲಿ ದಿಕ್ಕು ತಪ್ಪುತ್ತಿದ್ದಾರೆ.. ಸಹವಾಸದೋಷ ಹೆಸರಲ್ಲಿ ಯುವ ಸಮುದಾಯ ನಾಶವಾಗ್ತಿದೆ. ಆದ್ದರಿಂದ ಯುವ ಸಮುದಾಯ ಡ್ರಗ್ಸ್ ಚಟಗಳಿಗೆ ದಾಸರಾಗಿ ತಮ್ಮ ಅಮೂಲ್ಯ ಜೀವನ ನಾಶಮಾಡಿಕೊಳ್ಳಬೇಡಿ ಎಂದು ಪೊಲೀಸರು ಜಾಗೃತಿಮೂಡಿಸಿದರು.. ವೀರಸನ್ಯಾಸಿ ವಿವೇಕಾನಂದರ ಹುಟ್ಟು ಹಬ್ಬವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಆಚರಿಸುತ್ತಿದೆ.. ಇದರ ಅಂಗವಾಗಿ ಈಶಾನ್ಯ ವಿಭಾಗದ ಯಲಹಂಕ ಉಪನಗರ ಪೊಲೀಸ್ ಠಾಣೆ ಸಮೀಪದ ಅಕ್ಷಯ್ ಗಿರೀಶ್ ಸರ್ಕಲ್ ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ಇದೇ ವೇಳೆ…
ಬೆಂಗಳೂರು: ವ್ಯಾಟ್ಸ್ ಆಪ್ ಮೂಲಕ ಲೈಂಗಿಕ ವಂಚನೆ ಕೃತ್ಯವೆಸಗುತ್ತಿದ್ದ ಆರೋಪಿ ಬಂಧನ ಮಾಡಲಾಗಿದೆ. ನರಹರಿ ಬಂಧಿತ ಆರೋಪಿಯಾಗಿದ್ದು ಒಂದು ತಿಂಗಳಿಂದ ಅನಿತಾ ಎಂಬ ಪೇಕ್ ಐಡಿ ಕ್ರಿಯೇಟ್ ಮಾಡಿ ಮೆಸೆಜ್ ಮಾಡುತ್ತಿದ್ದ ಆರೋಪಿ ನರಹರಿ ಅಶ್ಲೀಲ ಸಂದೇಶ ಕಳುಹಿಸಿ ಸಂಪರ್ಕ ಆ ಬಳಿಕ ಅನೈತಿಕ ಸಂಬಂಧ ಸಂದೇಶ ವೈರಲ್ ಮಾಡುವುದ್ದಾಗಿ ಬೆದರಿಕೆ ಹಂತ ಹಂತವಾಗಿ 1 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದ ಆರೋಪಿ ಅನಿತಾ ಎಂಬ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ನಂತರ ಖಾತೆಗೆ ಹುಡುಗಿಯರ ಭಾವಚಿತ್ರ ಬಳಕೆ ಮಾಡಿಕೊಂಡು ಕೃತ್ಯ ದೂರುದಾರನಿಗೆ ಹುಡುಗಿಯರ ಚಾಟ್ ಮಾಡುವ ರೀತಿಯಲ್ಲಿ ಸಂದೇಶ ದೂರುದಾರನ ಪೊಟೊಗಳನ್ನು ಸಂಗ್ರಹಣೆ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದನು. ಎಟಿಎಂದ ಮೂಲಕ ಹಣ ಡ್ರಾ ಮಾಡಿಕೊಂಡಿದ್ದ ಬ್ಯಾಂಕ್ ನ ಮಾಹಿತಿ ಆಧಾರ ಮೇಲೆ ಆರೋಪಿ ಬಂಧನ ಮಾಡಲಾಗಿದ್ದು ಉತ್ತರ ವಿಭಾಗ ಸೈಬರ್ ಠಾಣೆ ಪೊಲೀಸರಿಂದ ತನಿಖೆ ಮುಂದುವರೆದಿದ.
ನಯನತಾರಾ (Nayanthara) ನಟನೆಯ ಅನ್ನಪೂರ್ಣಿ ಸಿನಿಮಾದಲ್ಲಿ ಶ್ರೀರಾಮನಿಗೆ ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ಆಗುವಂತಹ ಸನ್ನಿವೇಶಗಳ ಇವೆ ಎನ್ನುವ ಕಾರಣಕ್ಕಾಗಿ ಹಲವಾರು ಜನರು ಆಕ್ರೋಶ ವ್ಯಕ್ತ ಪಡಿಸಿದ್ದರು. ಇದೀಗ ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ನಟಿ ನಯನತಾರಾ ಅವರ ಮೇಲೂ ಪ್ರಕರಣ ದಾಖಲಾಗಿದೆ. ಮಧ್ಯ ಪ್ರದೇಶದ ಜಬಲ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿವಾದ (Controversy) ಭುಗಿಲೇಳುತ್ತಿದ್ದಂತೆಯೇ ‘ಅನ್ನಪೂರ್ಣಿ’ (Annapurni) ಸಿನಿಮಾವನ್ನು ಕೊನೆಗೂ ನೆಟ್ ಫಿಕ್ಸ್ ತೆಗೆದು ಹಾಕಿದೆ. ಈ ಸಿನಿಮಾ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಅಲ್ಲದೇ, ಸಿನಿಮಾ ಬಗ್ಗೆ ದೂರು ಕೂಡ ದಾಖಲಾಗಿತ್ತು. ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ಚಿತ್ರದ ವಿರುದ್ಧ ಪ್ರತಿಭಟನೆ ಕೂಡ ಮಾಡಲಾಗಿತ್ತು. ನಾನಾ ಕಡೆಗಳಲ್ಲಿ ಅನ್ನಪೂರ್ಣಿ ಸಿನಿಮಾ ಬಗ್ಗೆ ದೂರುಗಳು ದಾಖಲಾಗುತ್ತಿದ್ದಂತೆಯೇ ಒಟಿಟಿಯಿಂದಲೇ ಚಿತ್ರವನ್ನು ತೆಗೆದು ಹಾಕಲಾಗಿದೆ. ಈ ಚಿತ್ರದಲ್ಲಿ ಶ್ರೀರಾಮನನ್ನು ಮಾಂಸಾಹಾರಿಯಾಗಿ ತೋರಿಸಲಾಗಿತ್ತು. ಇಂತಹ ವಿವಾದಿತ ದೃಶ್ಯಗಳನ್ನು ತೆಗೆದು ಹಾಕುವವರೆಗೂ ಅನ್ನಪೂರ್ಣಿ ಒಟಿಟಿಯಲ್ಲಿ ಸಿಗಲಾರದು.
ಬಳ್ಳಾರಿ:- ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ರಾಮಮಂದಿರ ಉದ್ಘಾಟನೆ ಮಾಡುತ್ತಿದೆ ಎಂದು ಹೇಳುವ ಮೂಲಕ ಉಗ್ರಪ್ಪ ಕಿಡಿಕಾರಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ರಾಮನಂತೆ ಮಾತಿಗಾಗಿ ನಡೆಯುವವರು ಯಾರದರು ಇದ್ದರೆ ಅವರು ಕಾಂಗ್ರೇಸ್ ನವರು,ರಾಮನ ಮಾದರಿಯಲ್ಲಿ ಸಮಸಮಾಜವನ್ನು ನಿರ್ಮಾಣ ಮಾಡುವ ಕಾರ್ಯ ಕಾಂಗ್ರೇಸ್ ಮಾಡುತ್ತಿದೆ. ಕಾಂಗ್ರೇಸ್ ಅವರು ಸಹ ಹಿಂದುಗಳು, ಹಿಂದು ವಿರೋಧಿಗಳ್ಳ. ಆದರೆ ಬಿಜೆಪಿ ಅವರು ವಿರೋಧ ಪಕ್ಷ ಕಾಂಗ್ರೇಸ್ ನ್ನು ಹಿಂದು ವಿರೋಧಿ ಎಂದು ಬಿಂಬಿಸಲಾಗಿದೆ. ರಾಮನಿಗೆ ಮೊದಲು ಪೂಜೆ ಮಾಡಿದ್ದು ನಮ್ಮ ಕಾಂಗ್ರೇಸ್. ಕಟ್ಟಡ ಪೂರ್ಣವಾಗದೇ, ಏಕಾಏಕಿಯಾಗಿ ಉದ್ಘಾಟನೆ ಮಾಡುವುದು ಸರಿಯಲ್ಲ. ಹಿಂದು ಸಂಪ್ರದಾಯದಂತೆ ಉದ್ಘಾಟನೆ ನಡೆಯುತ್ತಿಲ್ಲ ಎಂದು ಶಂಕರಾಚಾರ್ಯ ಮಠಾಧೀಶರೇ ಹೇಳಿದ್ದಾರೆ. ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲಿಕೆ ಬಿಜೆಪಿಯವರು ರಾಮಮಂದಿರ ಉದ್ಘಾಟನೆ ಮಾಡುತ್ತಿದ್ದಾರೆ. ರಾಮಮಂದಿರ ಕಾರ್ಯ ಇನ್ನು ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಇಂದು ದೇಶದ ಜನರ ದಿಕ್ಕು ತಪ್ಪಿಸುವ ಕಾರ್ಯ ನಡೆಯುತ್ತಿದೆ. ಅಷ್ಟೇ ಅಲ್ಲದೇ ವಿರೋಧ ಪಕ್ಷದ ಮೇಲೆ ಕೇಸರು ಎರಚುವ ಕಾರ್ಯವನ್ನು ಮಾಡಿದೆ. ದೇಶದ ಅಭಿವೃದ್ದಿಗಿಂತ…
ಬೆಂಗಳೂರು : ಸ್ಪರ್ಧಾತ್ಮಕ ಪರಿಕ್ಷೆಗೆ ತಯಾರಾದವನು ಮಾಡಿದ್ದು ಮಾತ್ರ ಕಿಡ್ನಾಪ್ ಮಾಡುವ ಉದ್ಯೋಗ ಮಗನ ಐಎಎಸ್, ಐಪಿಎಸ್ ಕನಸು ಕಂಡ ಪೊಷಕರೇ ಈಗ ಶಾಕ್ ಆಗಿ ಕುಳಿತಿದ್ದಾರೆ ಈ ಯುವಕನ ತಂದೆ ತಾಯಿ ಐಎಎಸ್, ಐಪಿಎಸ್ ಆಗುವ ಕನಸು ಕಾಣುತ್ತಿದ್ದನು. ಅದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಕೂಡ ನಡೆಸುತ್ತಿದ್ದನು. ದೊಡ್ಡ ಹುದ್ದೆಯ ಕನಸು ಕಂಡಿದ್ದ ಈತ ಮಾಡಿದ್ದು ಉದ್ಯಮಿಯ ಕಿಡ್ನಾಪ್. ಸದ್ಯ ಪ್ರಕರಣ ಸಂಬಂಧ ಪೊಲೀಸರು ಯುವಕ ಸೇರಿದಂತೆ ಇಬ್ಬರನ್ನು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಸಚಿನ್, ಗೌರಿಶಂಕರ್ ಬಂಧಿತ ಆರೋಪಿಗಳಾಗಿದ್ದು,ರಾಜಾಜಿನಗರದಲ್ಲಿ ಇದೇ ತಿಂಗಳ 5ರಂದು ಕಿಡ್ನಾಪ್ ಮಾಡುವ ಪ್ಲಾನ್ ಹಾಕಿ ಕೆಲಸ ಮುಗಿಸಿದ್ದಾರೆ. ಸೆಂಟ್ ಜೋಸೆಫ್ ಕಾಲೇಜಿನ ಬಿಬಿಎ ಸೀಟ್ ಗೆ ಓಡಾಡುತಿದ್ದ ಉದ್ಯಮಿ ಈ ವೇಳೆ ಸಚಿನ್ ನನ್ನು ಸಂಪರ್ಕಿಸಿದ್ದ ಉದ್ಯಮಿ.. ಆದರೆ ಕಾಲೇಜಿನ ನಿಯಮದ ಪ್ರಕಾರವೇ ಉದ್ಯಮಿ ಮಗಳಿಗೆ ಸೀಟ್ ಸಿಕ್ಕಿತ್ತು ಆದರೇ ಆ ಸೀಟ್ ನನ್ನಿಂದಲೇ ಸಿಕ್ಕಿದೆ ಎಂದು ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಸಚಿನ್ ಆದರೆ ಹಣಕೊಡಲು…
ಗದಗ: ಜಿಲ್ಲೆಯ ಮುಂಡರಗಿಯ ಹಿಂದೂ ರಾಷ್ಟ್ರ ಸಂಕಲ್ಪ ಸಮಿತಿಯಿಂದ ಮುಖಂಡ ದೇವಪ್ಪ ಇಟಗಿ ಅವರ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಹಿನ್ನೆಲೆ ಮಹತ್ತರ ಉದ್ದೇಶದ ಸಂಕಲ್ಪಕ್ಕಾಗಿ ರಾಮರಾಜ್ಯಕ್ಕಾಗಿ ಮತ್ತೊಮ್ಮೆ ಮೋದಿ ಎಂಬ ಘೋಷ ವಾಕ್ಶದೊಂದಿಗೆ ಆಂಜನೇಯ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆಯನ್ನ ಆರಂಭಿಸಲಾಗಿದೆ. ಮುಂಡರಗಿ ನಗರದ ಕೋಟೆ ಭಾಗದ ಆಂಜನೇಯನ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಿದ್ದು ಸಂಘದ ಪ್ರಮುಖರಾದ ಎಸ್.ಆರ್.ರಿತ್ತಿ ಮತ್ತು ಮಂಜುನಾಥ ಇಟಗಿ ಅವರು ಪಾದಯಾತ್ರೆಗೆ ಚಾಲನೆಯನ್ನ ನೀಡಿದ್ರು. ನಾಳೆ ರಾತ್ರಿ 8 ಘಂಟೆಗೆ ಪಾದಯಾತ್ರಿಗಳ ತಂಡ ಅಂಜನಾದ್ರಿ ತಲುಪಲಿದ್ದು ಪ್ರಧಾನಿ ನರೇಂದ್ರ ಮೋದಿಗಾಗಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.