Author: AIN Author

ತುಮಕೂರು: ಆಹಾರ ಅರಸಿಕೊಂಡು ಬಂದ ಚಿರತೆಯೊಂದು ಬಾವಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ತಿಪಟೂರು ತಾಲ್ಲೂಕು ಮಾರನಗೆರೆಯಲ್ಲಿ ಘಟನೆ ಸಂಭವಿಸಿದ್ದು, ಆಹಾರ ಹುಡುಕಿಕೊಂಡು ಬಂದ ಚಿರತೆಯು‌ ಆಯ ತಪ್ಪಿ ಪಾಳು ಬಾವಿಗೆ ಬಿದ್ದಿದೆ. ಚಿರತೆ ಬಾವಿಗೆ ಬಿದ್ದ ವಿಷಯ ತಿಳಿದು ಜನರು ಚಿರತೆ ನೋಡಲು ಮುಗಿ ಬಿದ್ದಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಬಾವಿಯಿಂದ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ.  ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಮೂರು ಚಿರತೆಗಳು ಓಡಾಡಿಕೊಂಡಿರುವುದನ್ನು ಗ್ರಾಮಸ್ಥರು ಗಮನಿಸಿದ್ದರು. ಒಂದು ದಿನದ ಹಿಂದಷ್ಟೇ ಮೇಕೆಯೊಂದನ್ನು ಚಿರತೆ ಬಲಿ ಪಡೆದಿತ್ತು.

Read More

ದೊಡ್ಡಬಳ್ಳಾಪುರ: ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ ನಗರದ ಮೂರನೇ ವಾರ್ಡ್ ಮುತ್ಸಂದ್ರದ ಡಾ.ಬಿ.ಆರ್ ಅಂಬೇಡ್ಕರ್ ಕಾಲೋನಿಯಲ್ಲಿ ನರಸಮ್ಮ ಎಂಬುವರ ಮನೆಯ ಮೇಲ್ಛಾವಣಿ ಕುಸಿದುಬಿದ್ದಿತ್ತು. ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಬಾರದ ಹಿನ್ನೆಲೆ ಅಜ್ಜಿ ನರಸಮ್ಮ ನೊಂದು ಪೌರಾಯುಕ್ತರ ಕಚೇರಿ ಬಳಿ ಕುಳಿತು ತಮ್ಮ ಅಳಲು ತೋಡಿಕೊಂಡರು ಯಾವುದೆ ಪ್ರಯೋಜನವಾಗಲಿಲ್ಲ. ಇದನ್ನು ತಿಳಿದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಅಜ್ಜಿ ನರಸಮ್ಮನ ಮನೆಗೆ ಭೇಟಿ ನೀಡಿ ಆರ್ಥಿಕ ಸಹಾಯ ಮಾಡಿ ಮನೆ ಸರಿಪಡಿಸುವ ಭರವಸೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು ತಾಲ್ಲೂಕು ಆಡಳಿತ ಮಳೆ ಅನಾಹುತಗಳಾದಗ ಮಾತ್ರ ಸಭೆಗಳ ಮೇಲೆ ಸಭೆ ಮಾಡುತ್ತಾರೆ. ಪರಿಹಾರ ವ್ಯವಸ್ಥೆ ಮಾತ್ರ ಶೂನ್ಯವಾಗಿರುತ್ತದೆ. ಅಜ್ಜಿಯ ಮನೆ ಮಳೆಗೆ ಸಂಪೂರ್ಣ ಕುಸಿದಿದೆ. ಜೀವ ಭಯದಲ್ಲಿ ಜೀವನ ಮಾಡುವಂತ ಪರಿಸ್ಥಿತಿ ಇದೆ. ಅಧಿಕಾರಿಗಳು ತಕ್ಷಣಕ್ಕೆ ಎಸ್.ಡಿ.ಆರ್.ಎಫ್ ಅಥವಾ ಎನ್.ಡಿ.ಆರ್.ಎಫ್ ನಲ್ಲಿ ಪರಿಹಾರಕ್ಕೆ ಕ್ರಮ ಜರುಗಿಸಲು ಅವಕಾಶ ಇರುತ್ತದೆ. ಮಾಡಲು ಇಚ್ಛಾಶಕ್ತಿ ಕೊರತೆಯಿಂದ ಸೌಲಭ್ಯಗಳು ಬಡವರಿಗೆ ತಲುಪುತ್ತಿಲ್ಲ ಎಂದರು.…

Read More

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಪೋಸ್ಟರ್ ಪಾಲಿಟಿಕ್ಸ್ ಮಾಡುತ್ತಿದ್ದು, ಗೃಹ ಸಚಿವರು ಹಾಗೂ ಪೊಲೀಸ್ ಇಲಾಖೆ ತಕ್ಷಣ ಅದನ್ನು ತದೆಯದಿದ್ದರೆ ನಾವೂ ಅದೇ ದಾರಿ ತುಳಿಯಬೇಕಾಗುತ್ತದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಅವರು ಈ ಎಚ್ಚರಿಕೆ ನೀಡಿದರು. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಜಿ ಶಾಸಕ ಅಶ್ವಿನ್ ಕುಮಾರ್, ನಗರ ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಅವರ ಜತೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು ಅವರು. https://ainlivenews.com/another-victim-of-bescoms-negligence-cm-dcm-energy-minister-directly-responsible-for-death-of-mother-daughte/ ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ಪೋಸ್ಟರ್ ಪಾಲಿಟಿಕ್ಸ್ ಮೂಲಕ ಅಪಪ್ರಚಾರ ಮಾಡಿ ತೇಜೊವಧೆ ಮಾಡುವ ಕೆಲಸ ಮಾಡುತ್ತಿದೆ. ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿರುವುದಕ್ಕೆ ಜೆಡಿಎಸ್ ಪಕ್ಷದ ವತಿಯಿಂದ ಎಚ್ಚರಿಕೆ ಕೊಡುತ್ತಿದ್ದೇವೆ ಎಂದು ಎ‌.ಮಂಜುನಾಥ್ ತಿಳಿಸಿದರು‌. ಕಾಂಗ್ರೆಸ್ ಪಕ್ಷದವರು ಬಿಜೆಪಿ ಸರಕಾರದ ಸಮಯದಲ್ಲಿ ಪೇ ಸಿಎಂ ಪೋಸ್ಟರ್‌ಗಳನ್ನು ರಾತ್ರೋರಾತ್ರಿ ಅಂಟಿಸಿದರು‌. ಈಗ ಜನಪರ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುತ್ತಿರುವ ಕುಮಾರಸ್ವಾಮಿ ಅವರ ಬಗ್ಗೆ ಅಶ್ಲೀಲ, ಕೀಳು ಅಭಿರುಚಿಯ…

Read More

ಬೆಂಗಳೂರು: ನಗರದ ಅಶೋಕನಗರ ವ್ಯಾಪ್ತಿಯ ಸುಬ್ಬಣ್ಣ ಗಾರ್ಡನ್​ ಬಳಿ ಮಗಳ ಪ್ರಿಯಕರನನ್ನು ತಂದೆಯೇ ಕೊಂದು ಹಾಕಿರುವ ಘಟನೆ ನಡೆದಿದೆ. https://ainlivenews.com/another-victim-of-bescoms-negligence-cm-dcm-energy-minister-directly-responsible-for-death-of-mother-daughte/ ಡೇವಿಡ್​ ಕೊಲೆಯಾದ ಯುವಕ. ಯವತಿ ತಂದೆ ಮಂಜುನಾಥ್ ಎಂಬಾತನಿಂದ ಕೃತ್ಯ. ಆಟೋ ಡ್ರೈವರ್ ಆಗಿದ್ದ ಡೇವಿಡ್, ಮಂಜುನಾಥ್​ ಎಂಬಾತನ ಮಗಳನ್ನ ಪ್ರೀತಿಸ್ತಿದ್ದ. ಮದುವೆ ಮಾಡಿಕೊಡುವಂತೆ ಪದೇಪದೆ ಪೀಡಿಸುತ್ತಿದ್ದ. ಮದುವೆಗೆ ನಿರಾಕರಿಸಿದರೆ ನಿಮ್ಮ ಮಗಳೊಂದಿಗಿನ ಫೋಟೋಗಳನ್ನ ವೈರಲ್​​ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಫೋಟೋ ಮತ್ತು ವಿಡಿಯೋ ಇದೆ ಅಂತ ಹೆದರಿಸ್ತಿದ್ದ. ಇದರಿಂದ ಮಗಳ ಮರ್ಯಾದೆ ಹಾಳಾಗುತ್ತೆ ಎಂಬ ನಿರ್ಧಾರಕ್ಕೆ ಬಂದ ತಂದೆ ಮಾತನಾಡುವ ನೆಪದಲ್ಲಿ ಡೇವಿಡ್​​ನನ್ನು ಕರೆದು ರಾಡ್​ನಿಂದ ಹೊಡೆದು, ಚಾಕುವಿನಿಂದ ಇರಿದಿದ್ದಾನೆ. ನಂತರ ಹಾಲೋಬ್ರಿಕ್ಸ್ ಕಲ್ಲುಎತ್ತಿಹಾಕಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಮಂಜುನಾಥ್​​ನನ್ನು ಅಶೋಕ ನಗರ ಪೊಲೀಸರು ವಶಕ್ಕೆ ಪಡೆಡಿದ್ದಾರೆ.

Read More

ಬಳ್ಳಾರಿ: ಸತೀಶ್ ಜಾರಕಿಹೊಳಿ ಸಿಎಂ ಆಗ್ತಾರೆಂದು ಶಾಸಕ ವಿಶ್ವಾಸ್ ವೈದ್ಯ ಹೇಳಿಕೆ ವಿಚಾರಕ್ಕೆ ಸಂಭಂಧಿಸಿದಂತೆ ‘ ಯಾವ ಸಮಯ ಕ್ಕೆ ಯಾರು ಸಿಎಂ ಎಂದು ಪಕ್ಷ ನಿರ್ಧರಿಸುತ್ತದೆ ಎಂದು ಬಳ್ಳಾರಿಯಲ್ಲಿ ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ್ಳೆಯ ಆಡಳಿತ ನಡೆಸಲು ಜನರು ನಮಗೆ ಅಧಿಕಾರ ಕೊಟ್ಟಿದ್ದು, ಆ ಕಡೆ ನಾವು ಹೆಚ್ಚಿನ ಗಮನ ಕೊಡಬೇಕು. ಮುಂದೆ ಯಾರು ಸಿಎಂ ಎಂದು ಪಕ್ಷ ನಿರ್ಧಾರ ಮಾಡುತ್ತದೆ. ಅಭಿವೃದ್ಧಿ ಕಡೆಗೆ ನಮ್ಮ ಗಮನ ಇದ್ದರೆ ಎಲ್ಲರಿಗೂ ಒಳ್ಳೆಯದು. ಅಧಿಕಾರದ ಬಗ್ಗೆ ಚರ್ಚೆ ಮಾಡಿದ್ರೆ ಜನರಿಗೆ ಯಾವ ಲಾಭ ಇಲ್ಲ ಎಂದರು.

Read More

ಬೆಂಗಳೂರು: ಭಾರತ ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಕ್ರಿಕೆಟ್ ಬೆಟ್ಟಿಂಗ್ ನಡೆಸಿದ್ದ ಫ್ಲ್ಯಾಟ್ ಒಂದರ ಮೇಲೆ CCB ಪೊಲೀಸರು ದಾಳಿ ನಡೆಸಿದ್ದು, ಬೆಟ್ಟಿಂಗ್ ನಡೆಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. https://ainlivenews.com/another-victim-of-bescoms-negligence-cm-dcm-energy-minister-directly-responsible-for-death-of-mother-daughte/ ಸಾಕೇತ್ ಮತ್ತು ರಿಷಬ್ ಬಂಧಿತ ಆರೋಪಿಗಳು. ರಾಜರಾಜೇಶ್ವರಿ ನಗರದ ಫ್ಲಾಟ್ ಒಂದರಲ್ಲಿ ಬೆಟ್ಟಿಂಗ್ ನಡೆಸುತ್ತಿರುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಪೊಲೀಸರು. ದಾಳಿ ವೇಳೆ ಲ್ಯಾಪ್ ಟಾಪ್ ಹಾಗೂ ಮೊಬೈಲ್‌ಗಳು ಪತ್ತೆಯಾಗಿದೆ. ಆನ್‌ಲೈನ್ ವೆಬ್ ಸೈಟ್ ಮೂಲಕ ಬೆಟ್ಟಿಂಗ್ ಆರೋಪಿಗಳು ನಡೆಸ್ತಿದ್ದರು ಎಂದು ತಿಳಿದು ಬಂದಿದೆ. ಬಳಿಕ ಆರೋಪಿಗಳ ಫ್ಲಾಟ್ ಪರಿಶೀಲನೆ ನಡೆಸಿದಾಗ 1 ಕೆಜಿ ಚಿನ್ನ ಪತ್ತೆಯಾಗಿದೆ. ನೂರು ಗ್ರಾಂ ತೂಕದ ಹತ್ತು ಚಿನ್ನದ ಬಿಸ್ಕೆಟ್ಸ್ ಪತ್ತೆಯಾಗಿವೆ. ಪತ್ತೆಯಾದ ಚಿನ್ನಕ್ಕೆ ಯಾವುದೇ ದಾಖಲೆಗಳು ಸಿಗದ ಹಿನ್ನಲೆ ಸಿಸಿಬಿ ಪೊಲೀಸರು ಚಿನ್ನದ ಬಿಸ್ಕೆಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಬೆಂಗಳೂರಿನಲ್ಲಿ ಬೆಟ್ಟಿಂಗ್ ಮಾಫಿಯಾ ಮತ್ತೆ ತಲೆ ಎತ್ತಿರುವ ಬಗ್ಗೆ ಮಾಹಿತಿ…

Read More

ಬೆಂಗಳೂರು: ಮೀನುಗಾರ ಸಮಯದಾಯ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು. ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ ಮೀನುಗಾರರಿಗೆ ಮತ್ಸ್ಯವಾಹಿನಿ ಪರಿಸರ ಸ್ನೇಹಿ ತ್ರಿಚಕ್ರ ವಾಹನಗಳನ್ನು ವಿತರಿಸಿದ ಬಳಿಕ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮೀನುಗಾರಿಕೆ ವಿಶ್ವ ವಿದ್ಯಾಲಯ ಮಾಡುವ ಬಗ್ಗೆ ಮುಂದಿನ ವರ್ಷ ವಿಚಾರ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದರು. ಮೀನು ನಮ್ಮ ಆಹಾರ ಸಂಸ್ಕೃತಿಯ ಪ್ರಮುಖ ಭಾಗ. ಅತ್ಯಂತ ಆರೋಗ್ಯಕಾರಿ ಆಹಾರ. ಮೀನಿನ‌ ಸಂತತಿ ಮತ್ತು ಪ್ರಮಾಣವನ್ನು ಹೆಚ್ಚಿಸಲು ನಮ್ಮ ಸರ್ಕಾರ ಅಗತ್ಯ ಎಲ್ಲಾ ನೆರವನ್ನೂ ನೀಡುತ್ತದೆ ಎಂದು ಭರವಸೆ ನೀಡಿದರು. ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗಿನಿಂದಲೂ ಅಧಿವೇಶನದಲ್ಲಿ ಹೋರಾಟ ನಡೆಸಿದ್ದೆ. ಆದರೂ ಹಿಂದಿನ ಸರ್ಕಾರ ಮತ್ತು ಸರ್ಕಾರದಲ್ಲಿದ್ದ ಸಚಿವರು ಪರಿಹಾರ ಒದಗಿಸಲೇ ಇಲ್ಲ. ರಿಯಾಯ್ತಿ ಡೀಸೆಲ್ ಕೊಡುವಂತೆ ನಾವು ಅಧಿವೇಶನದಲ್ಲಿ ಹೋರಾಟ ಮಾಡಿದರೂ ಸರ್ಕಾರ ಕೊಡಲಿಲ್ಲ. ಹೀಗಾಗಿ…

Read More

ಬೆಂಗಳೂರು: ರಾಜ್ಯದ ವಿದ್ಯುತ್ ಪರಿಸ್ಥಿತಿಯ ಕುರಿತು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ವಿದ್ಯುತ್​ಗೆ ಈ ಬಾರಿ ಬೇಡಿಕೆ ಇದೆ. ಈ ವರ್ಷ ಮಳೆಯ ಕೊರತೆ ಉಂಟಾಗಿದೆ. ಈ ವರ್ಷ ಒನ್​ ಟು ಡಬಲ್ ಇಂಧನಕ್ಕೆ ಬೇಡಿಕೆ ಜಾಸ್ತಿಯಾಗಿದೆ. ನಮಗೆ ಮುಖ್ಯಮಂತ್ರಿಗಳು ಸಾಕಷ್ಟು ಬೆಂಬಲ ನೀಡಿದ್ದಾರೆ ಎಂದು ಸಚಿವ ಕೆಜೆ ಜಾರ್ಜ್​ ಹೇಳಿದರು. https://ainlivenews.com/another-victim-of-bescoms-negligence-cm-dcm-energy-minister-directly-responsible-for-death-of-mother-daughte/ ನಗರದಲ್ಲಿ ಮಾತನಾಡಿದ ಅವರು,  ವಿದ್ಯುತ್ ಖರೀದಿ‌ ಮಾಡಲು ಹಣಬಿಡುಗಡೆ ಮಾಡಿದ್ದಾರೆ. ಪಂಚಾಬ್ ಮತ್ತು ಯುಪಿಯಿಂದ ವಿದ್ಯುತ್ ಖರೀದಿಗೆ ಮುಂದಾಗುತ್ತಿದ್ದೇವೆ. ಜನವರಿ ತನಕ ವಿದ್ಯುತ್​ಗೆ ಕೊರತೆ ಇಲ್ಲ. ಮುಂದಿನ ದಿನಗಳಲ್ಲಿ ಯಾರಿಗೂ ಸಮಸ್ಯೆಯಾಗದಂತೆ ಕ್ರಮ ತೆಗದುಕೊಳ್ಳುತ್ತೇವೆ ಎಂದು ಸಚಿವ ಕೆಜೆ ಜಾರ್ಜ್​ ತಿಳಿಸಿದರು.

Read More

ತುಮಕೂರು: ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ದಣಿದಿದ್ದ ರಾಹುಲ್ ಗಾಂಧಿಗೆ (Rahul Gandhi) ಸೌತೆಕಾಯಿ (Cucumber) ನೀಡಿ ದಣಿವಾರಿಸಿದ್ದ ಅಜ್ಜಿಯೊಬ್ಬರು (Old Woman) ನಿಧನವಾಗಿರುವ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ. ಚಿಕ್ಕನಾಯಕನಹಳ್ಳಿಯ (Chikkanayakanahalli) ಶಾರದಮ್ಮ (78) ನಿಧನರಾದ ಅಜ್ಜಿ. https://ainlivenews.com/satish-jarakiholi-becoming-cm-is-as-true-as-surya-being-born-congress-mla/ 2022ರ ಅಕ್ಟೋಬರ್‌ನಲ್ಲಿ ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಭಾರತ್ ಜೋಡೋ ಯಾತ್ರೆ ಹೊರಟಿದ್ದ ಸಂದರ್ಭ ರಾಹುಲ್ ಗಾಂಧಿಗೆ ಫುಟ್‌ಪಾತ್ ವ್ಯಾಪಾರಿಯಾಗಿದ್ದ ಈ ಅಜ್ಜಿ ಸೌತೆಕಾಯಿಯನ್ನು ನೀಡಿ ದಣಿವಾರಿಸಿದ್ದರು. ಇಷ್ಟು ಮಾತ್ರವಲ್ಲದೇ ರಾಹುಲ್ ಗಾಂಧಿ ಬಳಿ ಇಂದಿರಾಗಾಂಧಿಯನ್ನು ಶಾರದಮ್ಮ ಹೊಗಳಿದ್ದರು. ಅನಾರೋಗ್ಯದ ಹಿನ್ನೆಲೆ ಶಾರದಮ್ಮ ನಿಧನರಾಗಿದ್ದಾರೆ.

Read More

ಬೆಂಗಳೂರು: ದೊಡ್ಡ ದೊಡ್ಡ ಬಂಗಲೆಗಳನ್ನೇ ಟಾರ್ಗೆಟ್ ಮಾಡಿ ಕೆಜಿ ಕೆಜಿ ಚಿನ್ನ (Gold) ದೋಚುತ್ತಿದ್ದ (Theft) ಖತರ್ನಾಕ್ ಕಳ್ಳನನ್ನು ಗೋವಿಂದರಾಜನಗರ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಬೆಂಗಳೂರಿನ (Bengaluru) ಸೆಲೆಬ್ರಿಟಿ ಮನೆಗಳ್ಳ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ (Escape Karthik) ಅರೆಸ್ಟ್ ಆಗಿದ್ದಾನೆ. ಆರೋಪಿ ಬಳಿಯಿಂದ ಬರೋಬ್ಬರಿ 1 ಕೆಜಿ 200 ಗ್ರಾಂ ಕದ್ದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತನ ವಿರುದ್ಧ ಬೆಂಗಳೂರಿನಲ್ಲಿ 83 ಕ್ಕೂ ಹೆಚ್ಚು ಮನೆಗಳ್ಳತನ ಕೇಸ್‌ಗಳಿವೆ. ನಗರ ಮಾತ್ರವಲ್ಲದೆ ಕರ್ನಾಟಕದ ಬೇರೆ ಭಾಗಗಳಲ್ಲಿಯೂ ಕಳ್ಳತನದ ಆರೋಪವಿದೆ. ಕೊಳಚೆ ಪ್ರದೇಶದಲ್ಲಿ ಬಚ್ಚಿಟ್ಟಿದ್ದ ಚಿನ್ನ: ಎಸ್ಕೇಪ್ ಕಾರ್ತಿಕ್ ಮನೆಯೊಂದರಲ್ಲಿ ಮುಕ್ಕಾಲು ಕೆಜಿ ಚಿನ್ನವನ್ನು ಕದ್ದು ತನ್ನ ಗರ್ಲ್‌ಫ್ರೆಂಡ್ ಜೊತೆ ಗೋವಾದ ಕ್ಯಸಿನೋಗೆ ಹೊರಟಿದ್ದ. ಆದರೆ ರೈಲು ತಡವಾಗಿದ್ದರಿಂದ ಕದ್ದಿದ್ದ ಚಿನ್ನವನ್ನು ಅಡವಿಡಲಾಗದೇ ಖತರ್ನಾಕ್ ಪ್ಲ್ಯಾನ್ ಮಾಡಿ ಕೊಳಚೆ ಪ್ರದೇಶದಲ್ಲಿ ಹೂತಿಟ್ಟು ಎಸ್ಕೇಪ್ ಆಗಿದ್ದ. ಓಕಳಿಪುರಂನಲ್ಲಿ ರೈಲ್ವೆ ಕಾಲೋನಿಯಲ್ಲಿ ಮೂತ್ರ ವಿಸರ್ಜನೆಗೆಂದು ಹೋಗಿದ್ದ ಕಾರ್ತಿಕ್ ಯಾರೂ ಓಡಾಡದ ಕೊಳಚೆ ಜಾಗದಲ್ಲಿ 2 ಅಡಿ ಗುಂಡಿ ತೆಗೆದು…

Read More