Author: AIN Author

ಟೀಮ್ ಇಂಡಿಯಾದಲ್ಲಿ ಒಬ್ಬ ಆಟಗಾರನಿಗೆ ರಿಪ್ಲೇಸ್ ಮಾಡೋಕೆ ಆತನಷ್ಟೇ ಸಾಮರ್ಥ್ಯವಿರುವ ಆಟಗಾರನಿಲ್ಲ. ವಿಶ್ವಕಪ್ ಫೈನಲ್ ಸೋಲಿಗೆ ಆ ಆಟಗಾರರನ ಅನುಪಸ್ಥಿಯೇ ಕಾರಣ. ಭಾರತೀಯರ ಕೈಯಿಂದ ಏಕದಿನ ವಿಶ್ವಕಪ್ ಕೈ ಜಾರಿದೆ. ಸತತ 10 ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿದ್ದ ಟೀಂ ಇಂಡಿಯಾ, ಫೈನಲ್ನಲ್ಲಿ ಮುಗ್ಗರಿಸಿತು. ಫೈನಲ್ ಸೋಲಿಗೆ ನಾನಾ ಕಾರಣಗಳಿರಬಹುದು. ಆದ್ರೆ ತಂಡದಲ್ಲಿ ಲೋ ಆರ್ಡರ್ ಬ್ಯಾಟಿಂಗ್ ವೀಕ್ ಆಗಿದ್ದು, 6ನೇ ಬೌಲರ್ ಇಲ್ಲದೆ ಇದ್ದದ್ದು ಸೋಲಿಗೆ ಮೇನ್ ರೀಸನ್. ಆ ಎರಡು ಸ್ಥಾನ ತುಂಬಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂಜುರಿಯಾಗಿ ವಿಶ್ವಕಪ್ನಿಂದ ಕಿಕೌಟ್ ಆಗಿದ್ದು, ಭಾರತಕ್ಕೆ ಹಿನ್ನಡೆಯಾಯ್ತು. ಮೊದಲ ನಾಲ್ಕು ಪಂದ್ಯ ಆಡಿದ್ಮೇಲೆ ಪಾಂಡ್ಯ ಇಂಜುರಿಯಾಗಿ ವಿಶ್ವಕಪ್ನಿಂದಲೇ ಕಿಕೌಟ್ ಆದ್ರು. ಆದ್ರೂ 6 ಪಂದ್ಯಗಳಲ್ಲಿ ಅವರ ಅನುಪಸ್ಥಿತಿ ಕಾಡಲಿಲ್ಲ. ಯಾಕಂದ್ರೆ, ಟಾಪ್ ಆರ್ಡರ್ ಬ್ಯಾಟರ್ಸ್ ಉತ್ತಮ ಪ್ರದರ್ಶನ ನೀಡಿದ್ರು. ಐವರು ಬೌಲರ್ಸ್ ಅದ್ಭುತವಾಗಿ ದಾಳಿ ಮಾಡಿದ್ರು. ಆದ್ರೆ ಫೈನಲ್ನಲ್ಲಿ ಯಾವಾಗ ಇಂಡಿಯಾ ಬ್ಯಾಟಿಂಗ್ ಲೈನ್ ಅಪ್ ಕೋಲ್ಯಾಪ್ಸ್ ಆಯ್ತೋ, ಮಿಡಲ್…

Read More

ಚಿಕ್ಕಮಗಳೂರು:- ಕುಮಾರಸ್ವಾಮಿ ಜತೆ ಸಿದ್ದರಾಮಯ್ಯ ಅವರೂ ಮಾಲೆ ಹಾಕಿ ಬರಲಿ ಶಾಸಕ ಸಿ.ಟಿ.ರವಿ ಮನವಿ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ದತ್ತಪೀಠಕ್ಕೆ ಮಾಲೆ ಧರಿಸಿ ಬರಲಿ. ಹಿಂದೂ ಎಂದು ಹೇಳಿಕೊಳ್ಳಲು ಗರ್ವಪಡಬೇಕು. ಸಮಾಜ ಕೂಡ ಅದನ್ನೇ ನಿರೀಕ್ಷೆ ಮಾಡುತ್ತದೆ. ಕುಮಾರಸ್ವಾಮಿ ಅವರ ಹೇಳಿಕೆ ಸಿದ್ದರಾಮಯ್ಯ ಅವರಿಗೆ ಮಾದರಿ’ ಎಂದು ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದರು. ‘ನಾನು ಹಿಂದೂ ಅಲ್ವಾ, ನನ್ನ ಹೆಸರಲ್ಲೆ ಸಿದ್ದರಾಮ ಇದ್ದಾನೆ ಎಂದಿದ್ದೀರಿ. ಮಾಲೆ ಹಾಕಿ ಬನ್ನಿ, ನೀವು ಬಂದರೆ ಸಚಿವ ಜಮೀರ್ ಕೂಡ ಮಾಲೆ ಹಾಕೇ ಹಾಕುತ್ತಾರೆ. ಐದು ದಶಕಗಳ ಸತ್ಯದ ಹೋರಾಟಕ್ಕೆ ಬಲ ಬರಲಿದೆ’ ಎಂದರು. ‘ಹಿಂದುತ್ವದ ವಿಚಾರ ಬಂದಾಗ ಹಿಂದೆ ನೋಡಲೇಬಾರದು, ಮುಂದಕ್ಕೆ ನೋಡಬೇಕು. ನಮ್ಮ ಧರ್ಮದ ಪ್ರಕಾರ ನಡೆದುಕೊಳ್ಳಲು ಯಾರಿಗೂ ಹೆದರಬೇಕಿಲ್ಲ. ಚುನಾವಣೆ ಸಮಯಕ್ಕೆ ಹಿಂದೂಗಳಾಗಬಾರದು, ಜೀವನ ಪರ್ಯಂತ ಹಿಂದೂ ಆಗಿ ಇರಬೇಕು’ ಎಂದು ಹೇಳಿದರು.

Read More

ಹುಬ್ಬಳ್ಳಿ: ತಾಲ್ಲೂಕಿನ ನೋಲ್ವಿ ಗ್ರಾಮದ ಶ್ರೇಯಸ್ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ವಿಜ್ಞಾನಿಗಳ ವೇಷ ಭೂಷಣದ ಮೂಲಕ ಹಾಗೂ ಗಣಿತಜ್ಞರ ಸಂಶೋಧನೆಗಳ ಜೊತೆಗೆ ಗಣಿತ ಮತ್ತು ವಿಜ್ಞಾನ ವಸ್ತು ಪ್ರದರ್ಶನವನ್ನು ಯಶಸ್ವಿಯಾಗಿ ನೆರವೇರಿಸಿದರು. ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಮುಖ್ಯ ಅತಿಥಿಗಳಾಗಿ ಆಗಮಿಸಿದಂತ ಸಿ ಎನ್ ಬಡ್ಡಿ ಹಾಗೂ ಡಿ. ಟಿ.ಅರಿಶಾನು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೇಯಸ್ ಎಜುಕೇಶನ್ ಸಂಸ್ಥೆಯ ಅಧ್ಯಕ್ಷ ಎಂ ಬಿ ಖಾನಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬಿ ಜಿ ಹಿರೇಮಠ್, ಎಸ್ ಎನ್ ಹನ್ನಿ, ಜಿ. ಬಿ ಪಾಟೀಲ್, ಐ ಎಸ್ ಪೂಜಾರ್ , ಮುಖ್ಯೋಪಾಧ್ಯಾಯರು ಶ್ರೀಮತಿ ರೀಟಾ ರೋಣದ ವಿಜ್ಞಾನದ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು ಕಾರ್ಯಕ್ರಮಕ್ಕೆ ಶಾಲೆಯ ಶಿಕ್ಷಕರುಂದದವರೆಲ್ಲರೂ ಉಪಸ್ಥಿತರಿದ್ದರು.

Read More

ಪೀಣ್ಯ ದಾಸರಹಳ್ಳಿ: ಸಮೀಪದ ಚಿಕ್ಕಬಾಣಾವರದ ಸಂತೆ ಸರ್ಕಲ್ ಬಳಿ ಲೋಕೋಪಯೋಗಿ ವಿಶೇಷ ಅನುದಾನದಲ್ಲಿ ರಸ್ತೆ ಡಾಂಬರೀಕರಣಕ್ಕೆ ಶಾಸಕ ಎಸ್. ಮುನಿರಾಜು ಚಾಲನೆ ನೀಡಿದರು. ಬಳಿಕ ಎಸ್. ಮುನಿರಾಜು ಮಾತನಾಡಿ’ ಈ ಭಾಗದಲ್ಲಿ ಇನ್ನು ಅನೇಕ ರಸ್ತೆಗಳಿಗೆ ಡಾಂಬರೀಕರಣ ಆಗಿಲ್ಲ, ಈಗ ಅನುದಾನದ ಕೊರತೆ ಇದೆ. ಹಂತ ಹಂತವಾಗಿ ಡಾಂಬರೀಕರಣ ಮಾಡಲಾಗುತ್ತದೆ. ಈ ಭಾಗದಲ್ಲಿ ಅನೇಕ ಸಮಸ್ಯೆಗಳಿವೆ ಎಲ್ಲವನ್ನು ಗಮನಿಸಿದ್ದೇವೆ ಆದಷ್ಟು ಮಟ್ಟಿಗೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ’ ಎಂದರು. ಈ ಸಂದರ್ಭದಲ್ಲಿ ಸರ್ಕಾರಿ ಉರ್ದು ಶಾಲೆಗೆ ಭೇಟಿ ನೀಡಿ ಅಲ್ಲಿನ ಶಾಲೆಯ ದೋಸ್ತಿಯ ಬಗ್ಗೆ ಪರಿಶೀಲಿಸಿ ಬೃಹತ್ ಮರದ ಒಣಗಿದ ರಂಬೆ ಕೊಂಬೆಗಳನ್ನು ಮಕ್ಕಳಿಗೆ ತೊಂದರೆ ಆಗದ ರೀತಿಯಲ್ಲಿ ಅರಣ್ಯ ಅಧಿಕಾರಿಗಳಿಗೆ ಕತ್ತರಿಸಲು ಸೂಚಿಸಿದರು. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಮರಿಸ್ವಾಮಿ, ಚಿಕ್ಕಬಾಣಾವರ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಭಾಗ್ಯಮ್ಮ, ಬಿಜೆಪಿ ಮುಖಂಡ ಕಬೀರ್, ಪುರಸಭೆ ಮುಖ್ಯ ಅಧಿಕಾರಿ ಕುಮಾರ್, ನವೀನ್, ಗಿರೀಶ್ ಮತ್ತು ಸ್ಥಳೀಯರಿದ್ದರು.

Read More

ತಿಪಟೂರ್:- ನಗರದಲ್ಲಿ ಚಿರತೆ ಪ್ರತ್ಯಕ್ಷ ಸ್ಥಳೀಯರು ಆತಂಕಗೊಂಡಿದ್ದಾರೆ. ತಿಪಟೂರು ನಗರದ ಮಾರನ್ಗೆರೆ ಬಡಾವಣೆಯ ಸಂಗಮೇಶ್ವರ ತೋಟದ ಬಾವಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಈ ಸಂಬಂಧ ತೋಟದ ಮಾಲಿಕ ಸಂಗಮೇಶ್ ಹೇಳಿಕೆ ನೀಡಿದ್ದಾರೆ. ಮೂರು ಚಿರತೆಗಳಿದ್ದು, ಒಂದು ಚಿರತೆ ಬಾವಿಗೆ ಬಿದ್ದಿದೆ, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಒಂದು ಚಿರತೆಯನ್ನು ಮೇಲತ್ತಲು ಹರಾಸಾಹಸ ಪಡುತ್ತಿದ್ದಾರೆ.

Read More

ಪೀಣ್ಯ ದಾಸರಹಳ್ಳಿ:’ ನೀರಿನ ಅಭಾವ ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಲು ಕೊಳವೆಬಾವಿ ಕೊರೆಸಿ ನೀರು ನೀಡಲಾಗುತ್ತಿದೆ’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು. ಮಲ್ಲಸಂದ್ರದ ಬಿ.ಎಚ್.ಇ.ಎಲ್ ಮಿನಿ ಕಾಲೋನಿಯಲ್ಲಿ ಕೊಳವೆಬಾವಿ ನೀರಿನ ಪೂರೈಕೆಗೆ ಚಾಲನೆ ನೀಡಿ ಮಾತನಾಡಿದರು. ಮಲ್ಲಸಂದ್ರದ ಮುನೇಶ್ವರ ಬಡಾವಣೆ ಬಿಎಚ್ಇಎಲ್ ಮಿನಿ ಕಾಲೋನಿ ಪೈಪ್ಲೈನ್ ರಸ್ತೆ ಸುತ್ತಮುತ್ತಲ ಪ್ರದೇಶದ ಜನರಿಗೆ ನೀರಿನ ಸಮರ್ಪಕ ಪೂರೈಕೆ ಆಗದ ಕಾರಣ ನೀರಿನ ಹಾಹಾಕಾರವಾಗಿತ್ತು. ದಿನನಿತ್ಯ ನೂರಾರು ದೂರುಗಳು ಬರುತ್ತಿದ್ದವು. ಹೀಗಿರುವ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಕಾವೇರಿ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಅದರಿಂದ ನೀರಿನ ಸಮಸ್ಯೆ ಜಾಸ್ತಿಯಾಗಿತ್ತು. ಈಗ ಕೊಳವೆ ಬಾವಿಯಲ್ಲಿ ನೀರು ಸಿಕ್ಕಿದೆ, ಈ ಭಾಗದ ಜನರಿಗೆ ಸ್ವಲ್ಪಮಟ್ಟಿಗೆ ಆದರೂ ಸಮಸ್ಯೆ ಬಗೆಹರಿಯಲಿದೆ’ ಎಂದರು. ಈ ವೇಳೆ ಬಿಜೆಪಿ ಮುಖಂಡರಾದ ಟಿ. ಶಿವಕುಮಾರ್, ಹುಚ್ಚ ರಂಗಯ್ಯ, ಎಂ. ಆನಂದ್, ಗಂಧದಗುಡಿ ನಾಗಣ್ಣ, ಗಂಗರಾಜು, ಪಾಂಡುರಂಗರಾವ್, ಕೆಂಪೇಗೌಡ ಸುರೇಶ್, ಗಂಗಾಧರ್, ಉದ್ಯಮಿ ತಿಮ್ಮೇಗೌಡ, ಮಹಿಳಾ ಮುಖಂಡರಾದ ಪಾರ್ವತಿ, ನಯನ…

Read More

ಮಂಡ್ಯ: ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರದಲ್ಲಿ ಯಾರ ತಕರಾರೂ ಇಲ್ಲ ಎಂದು ಮಂಡ್ಯದಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ಹೇಳಿದರು. JDS ಎನ್‌ಡಿಎ ತೆಕ್ಕೆಗೆ ಬರಬೇಕು ಎಂಬುದು ವರಿಷ್ಠರ ತೀರ್ಮಾನ. ಈ ತೀರ್ಮಾನದ ಬಗ್ಗೆ ರಾಜ್ಯದಲ್ಲಿ ಉತ್ಸಾಹ ಇದೆ. ಮೈತ್ರಿಯಿಂದ ತಳಮಟ್ಟದ ಕಾರ್ಯಕರ್ತರಿಗೂ ಉತ್ಸಾಹ ಬಂದಿದೆ. https://ainlivenews.com/satish-jarakiholi-becoming-cm-is-as-true-as-surya-being-born-congress-mla/ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, JDS ಹೆಚ್ಚು ಸ್ಥಾನ ಗೆಲ್ಲುತ್ತದೆ. ನಮ್ಮ ಗುರಿ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡುವುದು. ಬಿಜೆಪಿ ಮತ್ತು ಜೆಡಿಎಸ್ ಒಟ್ಟಿಗೆ ಕೆಲಸ ಮಾಡುತ್ತೇವೆ. ಮಂಡ್ಯ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷ ಕೈಬಿಡುವ ಪ್ರಶ್ನೆ ಇಲ್ಲ. ಮಂಡ್ಯದಲ್ಲಿ ಪಕ್ಷ ಸಂಘಟನೆಗೆ ನಾಯಕರಿಗೆ ಹೆಚ್ಚು ಶಕ್ತಿ‌ ಕೊಡುತ್ತೇವೆ ಎಂದರು.

Read More

ವಿಜಯಪುರ:- ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ‌ ನೀಡಿರುವ ಹೇಳಿಕೆಗೆ ಜಿ ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಕೆಲವರು ಹಗಲುಗನಸು ಕಾಣುತ್ತಿದ್ದಾರೆ. ನನಸಾಗದ ಹಗಲು ಕಾಣುವವರಿಗೆ ಬೇಡವೆನ್ನಲಾದೀತೆ. ಕೆಲವರು ಹಗಲು ಕನಸು ಕಾಣುತ್ತಿರುತ್ತಾರೆ. ಡೇ ಡ್ರೀಮ್ ಕಾಣುವವರಿಗೆ ಬೇಡ ಎನ್ನಲಾಗದು. ಕನಸಾಗಿಯೇ ಉಳಿಯುವ ಹಗಲುಗನಸು ಕಾಣುವವರನ್ನು ಅಂಥ ಕನಸು ಕಾಣಲಿ ಎಂದು ಬಿಟ್ಟುಬಿಡಬೇಕು ಎಂದ ಅವರು, ನಾವು ಜೋಡೆತ್ತುಗಳು ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷದ ನಾಯಕ ಆರ್. ಆಶೋಕ ಹೇಳಿಕೆಗೆ ಬಹಳ ಸಂತೋಷ ಎಂದಷ್ಟೇ ಪರಮೇಶ್ವರ ನಗೆ ಬೀರಿದರು.

Read More

ಪಾಟ್ನಾ: ಬಿಹಾರದಲ್ಲಿ (Bihar) ಛಾತ್ ಹಬ್ಬದ (Chhath Festivities) ಆಚರಣೆ ವೇಳೆ ವಿವಿಧ ಜಲ ಮೂಲಗಳಲ್ಲಿ ಮುಳುಗಿ ಒಟ್ಟು 13 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಟ್ನಾ (Patna), ಖಗಾರಿಯಾ, ಸಮಸ್ತಿಪುರ್, ಸಹರ್ಸಾ, ದಬರ್ಂಗಾ, ಮುಂಗೇರ್ ಮತ್ತು ಬೆಸುಸರೈಗಳಲ್ಲಿ ಈ ಸಾವುಗಳು ವರದಿಯಾಗಿವೆ. ಪಾಟ್ನಾ ಜಿಲ್ಲೆಯಲ್ಲಿ ಬ್ರಹ್ಮಪುರ ಪ್ರದೇಶದಲ್ಲಿ ಮೂವರು ವ್ಯಕ್ತಿಗಳು ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. https://ainlivenews.com/satish-jarakiholi-becoming-cm-is-as-true-as-surya-being-born-congress-mla/ ಖಗಾರಿಯಾದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಚೌತಮ್ ಮತ್ತು ಪರ್ಬಟಾ ಪ್ರದೇಶಗಳಲ್ಲಿ ಮೂವರು ಮುಳುಗಿದ್ದಾರೆ. ಅಲ್ಲದೆ, ದಬರ್ಂಗಾ ಮತ್ತು ಸಮಸ್ತಿಪುರ್ ಜಿಲ್ಲೆಗಳಲ್ಲಿ ತಲಾ ಇಬ್ಬರು ಮತ್ತು ಬೇಗುಸರೈ, ಮುಂಗರ್ ಮತ್ತು ಸಹರ್ಸಾ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಅವರ ಗುರುತು ಪತ್ತೆಗೆ ಅಧಿಕಾರಿಗಳು ಹಾಗೂ ಪೊಲೀಸರು (Police) ಕ್ರಮ ಕೈಗೊಂಡಿದ್ದಾರೆ. ಕಳೆದ ಬಾರಿ ಛಾತ್ ಹಬ್ಬದ ವೇಳೆ ಬಿಹಾರದಾದ್ಯಂತ ಸುಮಾರು 53 ಜನ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದರು.

Read More

ದಾವಣಗೆರೆ: ದಾವಣಗೆರೆಯ ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಆಪ್ತ ಅಯುಬ್ ಪೈಲ್ವಾನ್ ಸೇರಿದಂತೆ ಆತನ ಕುಟುಂಬಸ್ಥರು ಪೊಲೀಸರ ಮೇಲೆಯೇ ದರ್ಪ ತೋರಿದ್ದಾರೆ. ನವೆಂಬರ್ 16 ರಾತ್ರಿ ನಗರದ ಅರಳಿಮರ ವೃತ್ತದಲ್ಲಿ ಈ ಘಟನೆ ನಡೆದಿದೆ. ರಾತ್ರಿ 11 ಗಂಟೆ ಬಳಿಕ ನಗರದಲ್ಲಿನ ಅಂಗಡಿ ಮುಂಗಟ್ಟುಗಳನ್ನ ಮುಚ್ಚುವಂತೆ ನಿಯಮವಿದೆ. ಆದರೆ, ರಾತ್ರಿ 11.30ರ ಸುಮಾರಿನಲ್ಲಿ ಅರಳಿ ವೃತ್ತದಲ್ಲಿ ಅಂಗಡಿಯ ಮುಂದೆ ಬೈಕ್ ನಿಲ್ಲಿಸಿಕೊಂಡು ಕೆಲವರು ಯುವಕರು ಕುಳಿತುಕೊಂಡಿದ್ದರು. ಈ ವೇಳೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಬೀಟ್ ಸಿಬ್ಬಂದಿ ಸ್ಥಳಕ್ಕೆ ಬಂದು ಅಂಗಡಿ ಬಂದ್ ಮಾಡಿ ಮನೆಗೆ ತೆರಳುವಂತೆ ಸೂಚನೆಯನ್ನ ನೀಡಿದ್ದಾರೆ. ಅಲ್ಲದೇ, ಬೈಕ್ ನ ಪೋಟೋ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆಗ ಯುವಕನೊಬ್ಬ ಮನೆಗೆ ತೆರಳದೆ ಬಗ್ಗಿ ತನ್ನ ಹಿಂಭಾಗ ತೋರಿಸಿ ಈ ಪೋಟೋ ತೆಗೆದುಕೊಳ್ಳಿ ಎಂದು ಆವಾಜ್ ಹಾಕಿದ್ದಾನೆ. ಅಲ್ಲದೇ, ಸುಮ್ಮನೆ ಹೋಗದಿದ್ದರೆ ತನ್ನ ಸಂಬಂಧಿ ಕರೆಸಿ ಏನು ಮಾಡುತ್ತೇನೆ ಎಂದು ಹೆದರಿಸಿದ್ದಾನೆ. ಇದೇ ಅವಾಂತರಕ್ಕೆ ಕಾರಣವಾಗಿದೆ. ಬಳಿಕ,…

Read More