Author: AIN Author

ವಿಜಯಪುರ:- ಮುಖ್ಯಮಂತ್ರಿ ಬದಲಾವಣೆ ಎಂಬ ವಿಷಯದಲ್ಲಿ ಹುರುಗಳಿಲ್ಲ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಜನರ ಸಮಯ ಹಾಗೂ ಮಾಧ್ಯಮದ ಸಮಯ ಹಾಳುವ ಇಂಥ ಹೇಳಿಕೆಗಳನ್ನು ನೀಡುವುದು ರಾಜಕೀಯವಾಗಿ ಸರಿಯಾದ ನಿಲುವಲ್ಲ ಎಂದು ಸಿಡುಕಿದರು. ಯಾರಿಗೆ ಉದ್ಯೋಗ ಇಲ್ಲವೋ ಅಂಥವರು ಪ್ರಚಾರಕ್ಕೆ ಅನಗತ್ಯವಾಗಿ ಮುಖ್ಯಮಂತ್ರಿ ಬದಲಾವಣೆ ಅಂತೆಲ್ಲ ಮಾತನಾಡುತ್ತಿದ್ದಾರೆ ಎಂದು ವಿಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮುಖ್ಯಮಂತ್ರಿ ಬದಲಾವಣೆ, ಸರ್ಕಾರದ ಪತನದ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರಿಗೆ ಪ್ರಚಾರ ಬೇಕಾಗಿದೆ ಅವರು ಸಿಎಂ ಪದದ ಬಗ್ಗೆ ಚರ್ಚೆ ಮಾಡುತ್ತಾರೆ. ಸರ್ಕಾರ ನಿದ್ದೆ ಮಾಡುತ್ತಿದೆ, ಮುಖ್ಯಮಂತ್ರಿ ಬದಲಾವಣೆಗೆ ತಂತ್ರ ನಡೆಯುತ್ತಿದೆ, ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ ಎಂದೆಲ್ಲ ವಿಪಕ್ಷಗಳ ನಾಯಕರು ನೀಡುತ್ತಿರುವ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದರು.

Read More

ಮಂಡ್ಯ :- ರೈತರು ತೋಟಗಾರಿಕೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗಬೇಕು. ತೋಟಗಾರಿಕೆ ವಿಜ್ಞಾನಿಗಳು ಹಾಗೂ ಅಧಿಕಾರಿಗಳ ಸಲಹೆ ಪಡೆದು ತೆಂಗಿನ ಬೆಳೆಯನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವ ಮೂಲಕ ಫಸಲನ್ನು ಹೆಚ್ಚಿಸಿಕೊಳ್ಳಿ ಎಂದು ಶಾಸಕ ಕೆ.ಎಂ.ಉದಯ್ ಸಲಹೆ ನೀಡಿದರು. ಮದ್ದೂರು ಪಟ್ಟಣದ ತೋಟಗಾರಿಕೆ ಇಲಾಖೆ ಕಛೇರಿ ಆವರಣದಲ್ಲಿ ರೈತರಿಗೆ ತೆಂಗಿನ ಸಸಿ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯ ರೈತರು ಕಬ್ಬು, ಭತ್ತ, ರಾಗಿ ಹಾಗೂ ರೇಷ್ಮೆ ಬೆಳೆಗಳ ಜತೆಗೆ ತೆಂಗು, ಮಾವು, ಸೀಬೆ, ಬಾಳೆ ಹಾಗೂ ಇನ್ನಿತರ ಬೆಳೆಗಳಿಗೆ ಹನಿ ನೀರಾವರಿ ಯೋಜನೆಯನ್ನು ಅಳವಡಿಸಿಕೊಂಡು ಲಾಭದಾಯಕ ಬೆಳೆಗಳನ್ನು ಬೆಳೆದರೆ ಆರ್ಥಿಕವಾಗಿ ಸಬಲರಾಗಬಹುದೆಂದು ರೈತರಿಗೆ ಕಿವಿಮಾತು ಹೇಳಿದರು. ಮುಂದಿನ ದಿನಗಳಲ್ಲಿ 25 ಸಾವಿರಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ನೀಡಲಾಗುತ್ತಿದ್ದು, ರೈತರು ತೋಟಗಾರಿಕೆ ಕಛೇರಿಗೆ ದಾಖಲೆಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಇದೇ ವೇಳೆ ರಾಜ್ಯ ವಲಯದ ಉಪ ನಿರ್ದೇಶಕ ರಾಜು, ಹಿರಿಯ ಸಹಾಯಕ ನಿರ್ದೇಶಕಿ ರೇಖಾ, ತೋಟಗಾರಿಕೆ…

Read More

ಹಲಗೂರು’:- ಬರ ಪರಿಹಾರ ನೀಡಲು ಸಿದ್ಧ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೇಂದ್ರ ಸರ್ಕಾರದ ಬಳಿ ₹18 ಸಾವಿರ ಕೋಟಿ ಬರ ಪರಿಹಾರ ಕೇಳಿದ್ದು, ತಕ್ಷಣವೇ ಮಂತ್ರಿ ಮಂಡಲದ ಸಭೆ ಕರೆದು ರಾಜ್ಯ ಸರ್ಕಾರವು ಸಮಸ್ತ ರೈತರ ಪರವಾಗಿ ನಿಲ್ಲಲಿದೆ’ ಎಂದರು ರಾಜ್ಯದ ಜನತೆ 26 ಸಂಸದರನ್ನು ಗೆಲ್ಲಿಸಿರುವುದನ್ನು ಬಿಜೆಪಿ ಮರೆತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವುದನ್ನು ಬಿಜೆಪಿ ಸಹಿಸದೇ ಬರ ಪರಿಹಾರ ಅನುದಾನ ಬಿಡುಗಡೆ ಮಾಡುವುದಕ್ಕೆ ಹಿಂದೇಟು ಹಾಕುತ್ತಿದೆ’ ಎಂದು ಆರೋಪಿಸಿದರು. ‘ಸಂಪುಟ ಸಭೆಯಲ್ಲಿ ಮಂಜೂರಾತಿ ಪಡೆದು ಕೇಂದ್ರ ಸರ್ಕಾರಕ್ಕೆ ಬರ ಅಧ್ಯಯನ ವರದಿ ಸಲ್ಲಿಸಿದ್ದು, 226 ತಾಲ್ಲೂಕುಗಳಲ್ಲಿ ‘ಬರ ಘೋಷಣೆ’ ಮಾಡಲಾಗಿದೆ. ಹಲವು ಹಂತದ ಕೆಲಸಗಳು ಮುಗಿದಿದ್ದು, ಪರಿಹಾರ ನೀಡುವ ಹಂತದಲ್ಲಿದ್ದೇವೆ. ಕೇಂದ್ರ ಸರ್ಕಾರದ ಪರಿಹಾರ ಘೋಷಣೆಗಾಗಿ ಕಾಯುತ್ತಿದ್ದು, ರಾಜ್ಯದ ಜನರಿಗೆ ₹75 ಸಾವಿರ ಕೋಟಿಯನ್ನು ವಿವಿಧ ರೀತಿಯಲ್ಲಿ ಪರಿಹಾರ ನೀಡಲು ಯೋಜನೆ ರೂಪಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲಾ ಉಸ್ತುವಾರಿ…

Read More

ಬೆಂಗಳೂರು:- ಬ್ಲೂ ಫಿಲಂ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಕೊಡುವುದಾಗಿ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ನನ್ನ ಒಡೆತನದಲ್ಲಿನ ಚಿತ್ರಮಂದಿರದಲ್ಲಿ ‘ನೀಲಿ ಚಿತ್ರ’ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಎಚ್‌ಡಿ ಕುಮಾರಸ್ವಾಮಿ ಅವರ ಈ ಆರೋಪ ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಬೇಕಿದ್ದರೆ ಕನಕಪುರಕ್ಕೆ ಭೇಟಿ ನೀಡಿ ಕುಮಾರಸ್ವಾಮಿಯವರೇ ಸ್ವತಃ ವಿಚಾರಿಸುವಂತೆಯೂ ಶಿವಕುಮಾರ್ ಅವರು ಸವಾಲೆಸೆದಿದ್ದಾರೆ. ನನಗೆ ಕುಮಾರಸ್ವಾಮಿಯವರ ಬಗ್ಗೆ ಕರುಣೆ ಮತ್ತು ವಿಷಾಧವಿದೆ. ಅಂತಹ ಹಿರಿಯ ನಾಯಕರು, ಇಂತಹ ವ್ಯಕ್ತಿಯನ್ನು ತನ್ನ ಸಚಿವ ಸಂಪುಟದಲ್ಲಿ ಇಟ್ಟುಕೊಂಡಿದ್ದೇಕೆ? ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಕನಕಪುರದ ಜನರನ್ನು ಕೇಳಲಿ. ನಾನು ಎಲ್ಲಿಂದ ಆಯ್ಕೆಯಾಗಿದ್ದೇನೆ. ನಾನು 1.23 ಲಕ್ಷ ಮತದಾರರಿಂದ ಆಯ್ಕೆಯಾಗಿದ್ದೇನೆ. ಯಾರಾದರೂ ಹೇಳಿದರೆ ನಾನು ರಾಜಕೀಯ ತ್ಯಜಿಸುತ್ತೇನೆ. ಇದು ತುಂಬಾ ನಾಚಿಕೆಗೇಡಿನ ಸಂಗತಿ. ಅವರ ಅಂತಸ್ತಿನ ಯಾರಾದರೂ ಹಾಗೆ ಮಾತನಾಡಬಾರದು ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.

Read More

ಬೆಂಗಳೂರು:- ಆಟೋ ಮೇಲೆ ಕ್ಯಾಂಟರ್ ಉರುಳಿ ಬಿದ್ದ ಘಟನೆ ಜರುಗಿದೆ. ಕ್ಯಾಂಟರ್ ಬಿದ್ದ ರಭಸಕ್ಕೆ ಆಟೋ ಸಂಪೂರ್ಣ ಜಖಂಗೊಂಡಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರ ಪಾಳ್ಯದಲ್ಲಿ ಘಟನೆ ಜರುಗಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

Read More

‘ಡಂಕಿ’ ಸಿನಿಮಾ ಮೂಲಕ ಶಾರುಖ್ ಖಾನ್ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ‘ಡಂಕಿ’ ಡ್ರಾಪ್ 1 ಝಲಕ್ ಕಿಕ್ ಕೊಟ್ಟಿದೆ. ಮೊದಲ ಹಾಡನ್ನು ಡ್ರಾಪ್ 2 ಎಂದು ಚಿತ್ರತಂಡ ರಿಲೀಸ್ ಮಾಡಲು ಹೊರಟಿದೆ.. ‘ಡಂಕಿ’ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೊಂದು ರೊಮ್ಯಾಂಟಿಕ್ ಸಾಂಗ್ ಆಗಿದ್ದು, ಶಾರುಖ್ ಖಾನ್ ಅಭಿಮಾನಿಗಳ ಕಣ್ಣು ಅರಳಿದೆ. ಕಳೆದ ಎರಡು ಸಿನಿಮಾಗಳಲ್ಲಿ ಶಾರುಖ್ ಖಾನ್ ಅನ್ನು ಹೆಚ್ಚಾಗಿ ಆಕ್ಷನ್ ಅವತಾರದಲ್ಲಿಯೇ ನೋಡಿದ್ದರು. ಹೀಗಾಗಿ ರೊಮ್ಯಾಂಟಿಕ್ ಲುಕ್‌ನಲ್ಲಿ ನೋಡುವುದಕ್ಕೆ ಕಾತುರರಾಗಿದ್ದಾರೆ. ‘ಡಂಕಿ’ ಸಿನಿಮಾದ ಈ ರೊಮ್ಯಾಂಟಿಕ್ ಸಾಂಗ್ ನಾಳೆ ರಿಲೀಸ್ ಆಗಲಿದೆ. “ಲುಪ್ ಪುಟ್ ಗಯಾ..” ಅನ್ನೋ ಈ ಮೇಲೋಡಿ ಹಾಡನ್ನು ಕೇಳುವುದಕ್ಕೆ ಸಂಗೀತ ಆಸಕ್ತರು ಕಾದು ಕೂತಿದ್ದಾರೆ. ಬಾಲಿವುಡ್‌ನ ಜನಪ್ರಿಯರ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ ಈ ಸಿನಿಮಾಗೆ ಟ್ಯೂನ್ ಹಾಕಿದ್ದಾರೆ. ಶಾರುಖ್ ಖಾನ್ ಹಾಗೂ ತಾಪ್ಸಿ ಪನ್ನು ರೊಮ್ಯಾಂಟಿಕ್ ಸಾಂಗ್ ಗೆ ಫ್ಯಾನ್ಸ್ ಎದುರು…

Read More

ಬೆಂಗಳೂರು:- ಬೆಂಗಳೂರು ಕಂಬಳಕ್ಕೆ ಕೊಟ್ಟಿರೋ 1 ಕೋಟಿ ವಾಪಸ್​ಗೆ ಕಾಂಗ್ರೆಸ್​ ಹೈಕಮಾಂಡ್ ಸೂಚನೆ ನೀಡಿದೆ. ಕಂಬಳ ನಡೆಯೋದೇ ಅನುಮಾನವಾಗಿದ್ದು, ಹೀಗಾಗಿ ಹಣ ವಾಪಸ್ ಕೊಡುವಂತೆ ಸೂಚಿಸಿದೆ. MLA ಅಶೋಕ್​ ರೈ ಸಸ್ಪೆಂಡ್ ಮಾಡಿ, ಸಿಎಂ, ಡಿಸಿಎಂ ಯಾರೂ ಕಂಬಳದ ವೇದಿಕೆ ಹತ್ತಬಾರದು ಎಂದು ಸುರ್ಜೇವಾಲ ಖಡಕ್ ಸೂಚನೆ ನೀಡಿದ್ದಾರೆ. ಪಕ್ಷದ ವಿರುದ್ಧ ಬೀದಿ-ಬೀದಿಯಲ್ಲಿ ಜನ ಆಕ್ರೋಶ ಹೊರ ಹಾಕ್ತಿದ್ದಾರೆ, ಲೈಂಗಿಕ ಕಿರುಕುಳ ಆರೋಪ ಹೊತ್ತವರನ್ನು ಆಹ್ವಾನಿಸೋದು ಅಂದ್ರೆ ಏನು. ಕಾಂಗ್ರೆಸ್​ ಶಾಸಕರೇ ಇಂಥವರನ್ನು ಆಹ್ವಾನಿಸಿದ್ದು ಎಷ್ಟು ಸರಿ, ಬ್ರಿಜ್​ ಭೂಷಣ್​ ಆಹ್ವಾನಿಸಿದ್ದಕ್ಕೆ ಜನ ಹಾದಿ-ಬೀದಿಯಲ್ಲಿ ನಗ್ತಿದ್ದಾರೆ, ಕಾಂಗ್ರೆಸ್​ ಮಾನ-ಮರ್ಯಾದೆ ಹರಾಜು ಆಗ್ತಿದೆ. ಕಾಂಗ್ರೆಸ್​ ಶಾಸಕರೇ ಇಂಥಾ ಕೆಲಸಕ್ಕೆ ಕೈ ಹಾಕಬಹುದಾ..? ಎಂದು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಸುರ್ಜೆವಾಲಾ ಫುಲ್​​ ಗರಂ ಆಗಿದ್ದಾರೆ.

Read More

ಬೆಂಗಳೂರು:- ನಗರ ಜಿಲ್ಲೆಯ ಆನೇಕಲ್‌ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಮಗು ಸಾವನ್ನಪ್ಪಿರುವ ಘಟನೆ ಜರುಗಿದೆ. ಆನೇಕಲ್‌ನ ಪಂಪ್‌ಹೌಸ್ ನಿವಾಸಿಯಾಗಿದ್ದ ಸುಮಲತಾ ಎಂಬುವವರು ಇಂದು ಬೆಳಗ್ಗೆ 10.30ಕ್ಕೆ ಹೆರಿಗೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬಂದಿದ್ದರು. ಬೆಳಗ್ಗೆ 11 ಗಂಟೆಯಿಂದ ನಾರ್ಮಲ್ ಡೆಲಿವರಿಗೆ ಟ್ರೈ ಮಾಡಿದ್ದರು. ಆದರೆ, ಈ ವೇಳೆ ಮಗುವಿಗೆ ಉಸಿರಾಟದ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದ್ದರಂತೆ. ಇನ್ನು ನಾರ್ಮಲ್​ ಹೆರಿಗೆ ಮಾಡಿಸಲು ವೈದ್ಯರು ಪ್ರಯತ್ನಪಟ್ಟಿದ್ದಾರೆ. ಆದರೆ, ಮಗು 4.5 ಕೆ.ಜಿ ತೂಕ ಇದ್ದಿದ್ದರಿಂದ ನಾರ್ಮಲ್ ಡೆಲಿವರಿ ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಮಗುವನ್ನು ಹೊರತೆಗೆಯಲು ವೈದ್ಯರು ಪ್ರಯತ್ನಿಸಿದ್ದರು. ಮಗುವನ್ನು ಹೊರತೆಗೆಯಲು ಆಗದಿದ್ದಾಗ ಸಿಸೇರಿಯನ್ ಮಾಡಿದ್ದರು. ಹಸುಗೂಸನ್ನು ಹೊರ ತೆಗೆದಾಗ ದೇಹದ ತುಂಬೆಲ್ಲಾ ಗಾಯವಾಗಿದೆ. ಬಳಿಕ ಹಸುಗೂಸು ಮೃತಪಟ್ಟಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರಂತೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Read More

ಬೆಂಗಳೂರು:- ನಗರದ ಹಲಸೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೂವರೆ ವರ್ಷದಿಂದ ಪ್ರೀತಿಸಿ ಮನೆ ಮಗಳನ್ನು ಕರೆದುಕೊಂಡು ಓಡಿ ಹೋಗಿದ್ದೂ ಅಲ್ಲದೆ ಅತ್ತೆ ಮನೆಯಲ್ಲಿದ್ದ ವಸ್ತುಗಳನ್ನೂ ಕದ್ದೊಯ್ದ ಅಳಿಯನನ್ನು ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಪ್ರದೀಪ್ ಕುಮಾರ್ ಬಂಧಿತ ಆರೋಪಿ ಎಂದು ಹೇಳಲಾಗಿದೆ. ಅತ್ತೆ ರೆಜಿನಾ ಕನ್ಯಾಕುಮಾರಿಗೆ ಹೋದ ಸಂದರ್ಭದಲ್ಲಿ ಕಳ್ಳತನ ನಡೆದಿದೆ. ಕಳ್ಳತನ ಮಾಡಿ ಚಿನ್ನಾಭರಣ ತೆಗೆದುಕೊಂಡು ಹೋಗುವಾಗ ಅಕ್ಕಪಕ್ಕದ ನಿವಾಸಿಗಳು ನೋಡಿದ್ದರು. ಪ್ರಶ್ನೆ ಮಾಡಿದಾಗ ನಾನು ಅವರ ಸಂಬಂಧಿಕ ಎಂದು ಹೇಳಿದ್ದ. ಆದ್ರೆ ಸ್ಥಳೀಯರು ಚಾಣಾಕ್ಷತನ ತೋರಿ, ಚಿನ್ನಾಭರಣ ತೆಗೆದುಕೊಂಡು ಹೋಗುತ್ತಿದ್ದ ಪ್ರದೀಪ್ ಕುಮಾರನ ಫೊಟೋವನ್ನು ಮೊಬೈಲ್ ನಲ್ಲಿ ಕರೆ ಹಿಡಿದಿದ್ದಾರೆ. ಜೊತೆಗೆ ರೆಜಿನಾ ಅವರಿಗೆ ಕರೆ ಮಾಡಿ, ಹೀಗೆಲ್ಲಾ ಆಗಿದೆ ಎಂದು ಫೋಟೋ ಸಮೇತ ಮಾಹಿತಿ ನೀಡಲು ಯತ್ನಿಸಿದ್ದರು. ಆದರೆ ರೆಜಿನಾ ಅವರ ನಂಬರ್ ನಾಟ್ ರೀಚಬಲ್ ಆದ ಹಿನ್ನೆಲೆ ಸಂಪರ್ಕ ಸಾಧ್ಯವಾಗಿರಲಿಲ್ಲ. ನಂತರ ರೆಜಿನಾ ಕನ್ಯಾಕುಮಾರಿಯಿಂದ ವಾಪಾಸ್ ಬಂದಾಗ ಬಾಗಿಲು ಒಡೆದಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡು ಒಳಗೆಲ್ಲಾ…

Read More

ಟೀಮ್ ಇಂಡಿಯಾದಲ್ಲಿ ಒಬ್ಬ ಆಟಗಾರನಿಗೆ ರಿಪ್ಲೇಸ್ ಮಾಡೋಕೆ ಆತನಷ್ಟೇ ಸಾಮರ್ಥ್ಯವಿರುವ ಆಟಗಾರನಿಲ್ಲ. ವಿಶ್ವಕಪ್ ಫೈನಲ್ ಸೋಲಿಗೆ ಆ ಆಟಗಾರರನ ಅನುಪಸ್ಥಿಯೇ ಕಾರಣ. ಭಾರತೀಯರ ಕೈಯಿಂದ ಏಕದಿನ ವಿಶ್ವಕಪ್ ಕೈ ಜಾರಿದೆ. ಸತತ 10 ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿದ್ದ ಟೀಂ ಇಂಡಿಯಾ, ಫೈನಲ್ನಲ್ಲಿ ಮುಗ್ಗರಿಸಿತು. ಫೈನಲ್ ಸೋಲಿಗೆ ನಾನಾ ಕಾರಣಗಳಿರಬಹುದು. ಆದ್ರೆ ತಂಡದಲ್ಲಿ ಲೋ ಆರ್ಡರ್ ಬ್ಯಾಟಿಂಗ್ ವೀಕ್ ಆಗಿದ್ದು, 6ನೇ ಬೌಲರ್ ಇಲ್ಲದೆ ಇದ್ದದ್ದು ಸೋಲಿಗೆ ಮೇನ್ ರೀಸನ್. ಆ ಎರಡು ಸ್ಥಾನ ತುಂಬಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂಜುರಿಯಾಗಿ ವಿಶ್ವಕಪ್ನಿಂದ ಕಿಕೌಟ್ ಆಗಿದ್ದು, ಭಾರತಕ್ಕೆ ಹಿನ್ನಡೆಯಾಯ್ತು. ಮೊದಲ ನಾಲ್ಕು ಪಂದ್ಯ ಆಡಿದ್ಮೇಲೆ ಪಾಂಡ್ಯ ಇಂಜುರಿಯಾಗಿ ವಿಶ್ವಕಪ್ನಿಂದಲೇ ಕಿಕೌಟ್ ಆದ್ರು. ಆದ್ರೂ 6 ಪಂದ್ಯಗಳಲ್ಲಿ ಅವರ ಅನುಪಸ್ಥಿತಿ ಕಾಡಲಿಲ್ಲ. ಯಾಕಂದ್ರೆ, ಟಾಪ್ ಆರ್ಡರ್ ಬ್ಯಾಟರ್ಸ್ ಉತ್ತಮ ಪ್ರದರ್ಶನ ನೀಡಿದ್ರು. ಐವರು ಬೌಲರ್ಸ್ ಅದ್ಭುತವಾಗಿ ದಾಳಿ ಮಾಡಿದ್ರು. ಆದ್ರೆ ಫೈನಲ್ನಲ್ಲಿ ಯಾವಾಗ ಇಂಡಿಯಾ ಬ್ಯಾಟಿಂಗ್ ಲೈನ್ ಅಪ್ ಕೋಲ್ಯಾಪ್ಸ್ ಆಯ್ತೋ, ಮಿಡಲ್…

Read More