ಮೈಸೂರು: ಖಂಡಿತ ನಾನು ನ್ಯಾಷನಲ್ ಲೀಡರ್ ಅಲ್ಲ, ಬಡ ಕುಟುಂಬದಿಂದ ಬಂದವನು ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಖಂಡಿತ ನಾನು ನ್ಯಾಷನಲ್ ಲೀಡರ್ ಅಲ್ಲ, ಬಡ ಕುಟುಂಬದಿಂದ ಬಂದವನು. ಸಾಮಾನ್ಯ ಕುಟುಂಬದಿಂದ ಬಂದು ಬರವಣಿಗೆ ಮೂಲಕ ಮುಂದೆ ಬಂದೆ. https://ainlivenews.com/accused-of-late-night-partying-actors-present-at-police-station-video/ ಅಪ್ಪ ಸಿಎಂ ಆಗಿದ್ರೆ ತನ್ನ ಲ್ಯಾಬ್ ಗೆ ಗುತ್ತಿಗೆ ಪಡೆಯೋರು ನ್ಯಾಷನಲ್ ಲೀಡರ್, ಅಪ್ಪನ ವರುಣ ಬಿಡಿಸಿ ಬಾದಾಮಿ ಕ್ಷೇತ್ರಕ್ಕೆ ಓಡಿಸುವವರು ನ್ಯಾಷನಲ್ ಲೀಡರ್, ತಾನು ಹೇಳಿದ ವರ್ಗಾವಣೆ ಲಿಸ್ಟ್ ಗೆ ಸಹಿ ಮಾಡಿ ಅನ್ನೋದು ನ್ಯಾಷನಲ್ ಲೀಡರ್, ಮೈಸೂರು ಭಾಗದ ನಿಜವಾದ ನ್ಯಾಷನಲ್ ಲೀಡರ್ ಯತೀಂದ್ರ ಸಿದ್ದರಾಮಯ್ಯ ಎಂದು ಯತೀಂದ್ರ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
Author: AIN Author
ಬೆಂಗಳೂರು: ಕೋವಿಡ್ ಪಾಸಿಟಿವ್ ಇರುವವರ ಸಂಪರ್ಕದಲ್ಲಿದ್ದ ಹೈ ರಿಸ್ಕ್ ರೋಗಲಕ್ಷಣ ಹೊಂದಿರುವವರಿಗೆ, ಕಡ್ಡಾಯವಾಗಿ ಕೋವಿಡ್ ಟೆಸ್ಟ್ ನಡೆಸಲು ಕ್ಯಾಬಿನೆಟ್ ಉಪ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ದೇಶದಲ್ಲಿಯೇ ಕರ್ನಾಟಕದಲ್ಲಿ ಹೆಚ್ಚು ಕೋವಿಡ್ ಟೆಸ್ಟ್ ಗಳನ್ನ ನಡೆಸಲಾಗ್ತಿದೆ ಎಂದರು. https://ainlivenews.com/accused-of-late-night-partying-actors-present-at-police-station-video/ ಕೋವಿಡ್ ಇಳಿಮುಖ ಕಾಣುವ ವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಟೆಸ್ಟಿಂಗ್ ಮುಂದುವರಿಸುವುದಾಗಿ ಹೇಳಿದರು. ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚು ಬರುತ್ತೆ ಎನ್ನುವ ಕಾರಣಕ್ಕೆ ಟೆಸ್ಟಿಂಗ್ ಕಡಿಮೆ ಮಾಡಿ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನ ಮುಚ್ವಿಡುವ ಕೆಲಸವನ್ನ ಸರ್ಕಾರ ಮಾಡುವುದಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿಯೇ ಟೆಸ್ಟಿಂಗ್ ನಡೆಸಿ, ಅಗತ್ಯ ಚಿಕಿತ್ಸೆ ಕೊಡುವುದು ಮುಖ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪೊಲೀಸರ ವಿಚಾರಣೆ ಎದುರಿಸಿದ ಮಾತನಾಡಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕಾಟೇರ ಸಿನಿಮಾ ಯಶಸ್ಸು ಹಿನ್ನೆಲೆಯಲ್ಲಿ ಜನವರಿ 3ರಂದು ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಊಟ ಮಾಡಿಕೊಂಡು ಸ್ಥಳದಿಂದ ನಿರ್ಗಮಿಸಿದ್ದೇವೆ. ಊಟ ಮಾಡುವುದು ಪೂರ್ವ ನಿರ್ಧರಿತವಾಗಿರಲಿಲ್ಲ. ಊಟ ಮಾಡೋದು ತಡವಾಯಿತು. ಈ ವೇಳೆ ಯಾರಿಗೂ ತೊಂದರೆ ಕೊಟ್ಟಿಲ್ಲ ಎಂದ್ರು. ಇನ್ನು ಕಾಟೇರ ಸಿನಿಮಾ ಯಶಸ್ಸು ತಡೆಯಲಾರದೆ ದರ್ಶನ್ ನನ್ನ ಟಾರ್ಗೆಟ್ ಮಾಡಿಕೊಳ್ಳಲಾಗುತ್ತಿದೆ. ವಿನಾಕಾರಣ ಅವರ ಹೆಸರು ತಳುಕು ಹಾಕುತ್ತಿದ್ದಾರೆ.ಇದನ್ನೆಲ್ಲಾ ಯಾರು ಮಾಡುತ್ತರಂದು ಗೊತ್ತಿಲ್ಲ ಆದ್ರೆ ದಯವಿಟ್ಟು ಇಲ್ಲಿಗೆ ನಿಲ್ಲಿಸಿ ಎಂದು ಅಸಮಧಾನ ವ್ಯಕ್ತಪಡಿಸಿದ್ರು. ಇನ್ನು ದರ್ಶನ್ ಹಾಗು ನಟರು ಪೊಲೀಸ್ ಠಾಣೆಗೆ ಬರ್ತಾರೆ ಎಂದು ಗೊತ್ತಾಗಿದ್ರಿಂದ . ಠಾಣೆ ಬಳಿ ಸಾವಿರಾರು ಜನ ಅಭಿಮಾನಿಗಳು ಜಮಾಯಿಸಿ ದರ್ಶನ್ ಗೆ ಜೈಕಾರ ಹಾಕಿದ್ರು. ಇನ್ನು ಪ್ರಕರಣದ ಬಗ್ಗೆ ಏನೂ ಮಾತನಾಡದ ದರ್ಶನ್ ಚಿಕ್ಕಣ ಅವರ ಚಿತ್ರ ಬರ್ತಿದೆ ಸಪೋರ್ಟ್ ಮಾಡಿ ಎಂದಷ್ಟೇ ಹೇಳಿದ್ರು. ಒಟ್ಟಿನಲ್ಲಿ ದರ್ಶನ್ ಗೆ ಸಕ್ಸಸ್ ನ ಹಿಂದೆ…
ಬೆಂಗಳೂರು: ಕಾಟೇರ ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ನಟ ದರ್ಶನ್ ಪೋಲೀಸ್ ಸ್ಟೇಷನ್ ಮೆಟ್ಟಿಲೇರೋ ಸ್ಥಿತಿ ಬಂದಿದೆ. ಜೆಟ್ ಲಾಗ್ ಪಬ್ ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ್ದ ಕಾಟೇರ ಟೀಂ ಕಾನೂನು ಉಲಂಘನೆ ಮಾಡಿದ್ರು.ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇವತ್ತು ಏನೆಲ್ಲಾ ಬೆಳವಣಿಗೆ ಆಯ್ತು ಪೊಲೀಸ್ ಠಾಣೆಗೆ ಯಾರೆಲ್ಲ ಬಂದಿದ್ರು ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ತೋರಿಸ್ತೀವಿ ನೋಡಿ. ಅದ್ಯಾಕೋ ಏನೋ ದರ್ಶನ್ಗೆ ಒಂದು ಯಶಸ್ಸು ಸಿಗುತ್ತಿದ್ದಂತೆ ಮತ್ತೊಂದು ಕಾಂಟ್ರವರ್ಸಿಯಲ್ಲಿ ತಗಲಾಕಿಕೊಳ್ತಾನೆ ಇರ್ತಾರೆ. ಎಲ್ಲಾ ಸಮಸ್ಯೆಗಳು ಬಗೆಹರಿದು ಕಾಟೇರ ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ಯಡವಟ್ಟು ಮಾಡಿಕೊಂಡ ದರ್ಶನ್ ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರುವ ಸ್ಥಿತಿ ಬಂದ್ಬಿಡ್ತು. ಜನವರಿ 3 ರಂದು ಕಾಟೇರ ಸಕ್ಸಸ್ ಮೀಟ್ ಆದ ಮೇಲೆ ಜೆಟ್ ಲಾಗ್ ಪಬ್ ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ್ದಕ್ಕೆ ಸುಬ್ರಮಣ್ಯನಗರ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ರು. ಪಬ್ ಮಾಲೀಕರ ಮೇಲೆ ಎಫ್ ಐ ಆರ್ ಹಾಕಿದ್ದ ಪೊಲೀಸರು ಅಂದು ಅವಧಿ ಮೀರಿದ ಪಾರ್ಟಿಯಲ್ಲಿ ಭಾಗವಹಿಸಿದ್ದ ದರ್ಶನ್…
ಬಿಗ್ ಬಾಸ್ ಶೋನ ಪ್ರತಿ ಸೀಸನ್‌ನಲ್ಲಿಯೂ ಒಬ್ಬರಲ್ಲ ಒಬ್ಬರು ಜೋಡಿಗಳಾಗಿ ಹೈಲೆಟ್ ಆಗುತ್ತಾರೆ. ಸ್ನೇಹಿತ್ ಜೊತೆ ನಮ್ರತಾ ಲವ್ವಿ ಡವ್ವಿ ಇತ್ತು. ಆದರೆ ಅವರ ಎಲಿಮಿನೇಷನ್ ನಂತರ ಕಾರ್ತಿಕ್ (Karthik) ಜೊತೆ ನಮ್ರತಾಗೆ (Namratha) ಸಲುಗೆ ಜಾಸ್ತಿ ಆಗಿದೆ. ಇದೀಗ ಕಾರ್ತಿಕ್ ಬಗೆಗಿನ ಮನದಾಳದ ಮಾತನ್ನು ವಿನಯ್ ಬಳಿ ಹೇಳಿಕೊಂಡಿದ್ದಾರೆ. ಆಗ ಕಾರ್ತಿಕ್‌ಗೆ ಬೀಳಬೇಡ ಅಂತ ನಮ್ರತಾಗೆ, ವಿನಯ್ (Vinay Gowda) ಕಿವಿಹಿಂಡಿದ್ದಾರೆ. ದೊಡ್ಮನೆಗೆ ಬರುವ ಮುನ್ನವೇ ನಮ್ರತಾ, ವಿನಯ್ ಅವರು ಒಳ್ಳೆಯ ಸ್ನೇಹಿತರು. ವಿನಯ್ ಟೀಂನಲ್ಲಿದ್ದುಕೊಂಡು ನಮ್ರತಾ ಆಟ ಆಡುತ್ತಿದ್ದಾರೆ. ಸ್ವಂತ ಅಸ್ತಿತ್ವ ಇಲ್ಲ, ವಿನಯ್ ನೆರಳಿನಲ್ಲಿ ಬದುಕುತ್ತಿದ್ದಾರೆ ಎಂದು ಮನೆಯ ಸ್ಪರ್ಧಿಗಳೇ ನಮ್ರತಾ ವಿರುದ್ಧ ಅಪಸ್ವರ ಎತ್ತಿದ್ದರು. ಯಾರು ಏನೇ ಹೇಳಿದ್ರೂ ಕೂಡ ನಾನು ನನ್ನ ಆಟವನ್ನೇ ಆಡ್ತಿದ್ದೀನಿ ಎಂದು ಹೇಳಿದ್ದರು ನಮ್ರತಾ. ಆಟ ಬೇರೆ ಫ್ರೆಂಡ್‌ಶಿಪ್ ಬೇರೆ ಎಂದು ನಮ್ರತಾ ಸಮರ್ಥನೆ ನೀಡಿದ್ದರು. ಇನ್ನೂ ಮೊನ್ನೆಯಷ್ಟೇ ಸದಾ ಫ್ಲಟ್ ಮಾಡೋ ಕಾರ್ತಿಕ್ ನಡೆಗೆ ನಮ್ರತಾ ಗುಡುಗಿದ್ದರು. ನನ್ನ…
ಬೆಂಗಳೂರು: ಕ್ಯಾಬ್ ಡ್ರೈವರ್ ಗಳ ಸೋಗಿನಲ್ಲಿ ಗಾಂಜಾ ಮಾರುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಜಯ್ ಕುಮಾರ್, ವಿಜಯ್ ಕುಮಾರ್ ಬಂಧಿತ ಆರೋಪಿಗಳಾಗಿದ್ದು, ಯಾದಗಿರಿ, ವಿಜಯಪುರದಿಂದ ಬಂದು ಸಿಲಿಕಾನ್ ಸಿಟಿಯಲ್ಲಿ ಕ್ಯಾಬ್ ಓಡಿಸುತ್ತಿದ್ದರು. ಪರಿಚಯವಿರುವ ಗಿರಾಕಿಗಳು, ಕಾಲೇಜು ವಿದ್ಯಾರ್ಥಿಗಳು ಐಟಿ/ಬಿಟಿ ಉದ್ಯೋಗಿಗಳಿಗೆ ಗಾಂಜಾ ಮಾರುತ್ತಿದ್ದರು. https://ainlivenews.com/accused-of-late-night-partying-actors-present-at-police-station-video/ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ಹೊಸಕೆರೆ ಹಳ್ಳಿ ಬಳಿ ಗಾಂಜಾ ಮಾರುತ್ತಿದ್ದಾಗ ದಾಳಿ ನಡೆಸಿದ್ದಾರೆ. ಆರೋಪಿಗಳಿಂದ 25 ಲಕ್ಷ ಮೌಲ್ಯದ 15 ಕೆಜಿ ಗಾಂಜಾ, ಒಂದು ತೂಕದ ಮೆಶಿನ್, ಎರಡು ಮೊಬೈಲ್, ಒಂದು ಕಾರು ಸೀಜ್ ಮಾಡಲಾಗಿದ್ದು, ಇನ್ನೂಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.
ಮಂಡ್ಯ : ಚಲಿಸುತ್ತಿದ್ದ ಬೈಕ್ ಮೇಲೆಯೇ ಹೈ ಟೆನ್ಷನ್ ವಿದ್ಯುತ್ ಕಂಬ ಉರುಳಿಬಿದ್ದ ಘಟನೆ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಬಳಿಯ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ನಡೆದಿದೆ. https://ainlivenews.com/accused-of-late-night-partying-actors-present-at-police-station-video/ ಮಂಡ್ಯದಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಬೈಕ್ ಸವಾರ ಗಂಜಂ ನಿವಾಸಿ ಸುರೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರ್ವಿಸ್ ರಸ್ತೆಗೆ ವಿದ್ಯುತ್ ಕಂಬ ಬಿದ್ದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿದ್ಯುತ್ ಕಂಬದಲ್ಲಿ ಕ್ಲಾಂಪ್ ಕಳ್ಳತನ ಹಿನ್ನೆಲೆ ರಸ್ತೆಗೆ ವಿದ್ಯುತ್ ಕಂಬ ಉರುಳಿ ಬಿದ್ದಿದೆ.
ಧಾರವಾಡ : ಯುವನಿಧಿ ಯೋಜನೆಗೆ ಧಾರವಾಡ ಜಿಲ್ಲೆಯಾದ್ಯಂತ ಇಲ್ಲಿಯವರೆಗೆ 2091 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಅರ್ಹ ಫಲಾನುಭವಿಗಳು ಯುವನಿಧಿ ಯೋಜನೆಯ ಸದ್ದುಪಯೋಗ ಪಡೆದುಕೊಳ್ಳಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು. ಧಾರವಾಡ ನಗರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಧಾರವಾಡ ಜಿಲ್ಲೆಯಾದ್ಯಂತ ರಾಜ್ಯ ಸರ್ಕಾರದ ಮಹತ್ಷಕಾಂಕ್ಷೆಯ 5ನೇ ಗ್ಯಾರಂಟಿ ಯೋಜನೆ ʼಯುವನಿಧಿʼ ಅಡಿ ಫಲಾನುಭವಿಗಳಿಗೆ ನಗದು ವರ್ಗಾವಣೆ ಕಾರ್ಯಕ್ರಮದ ನೊಂದಣಿ ಆರಂಭವಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಯುವನಿಧಿ ನೋಂದಣಿ ಮಾಡಿಸಿಕೊಳ್ಳಲು ಸಾಕಷ್ಟು ಪ್ರಚಾರ ಮಾಡಲಾಗುವುದು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ವಹಿಸಲಿದೆ ಎಂದರು. https://ainlivenews.com/accused-of-late-night-partying-actors-present-at-police-station-video/ ಯುವನಿಧಿ ಯೋಜನೆಯಡಿ ಪದವೀಧರರಿಗೆ ಪ್ರತಿ ತಿಂಗಳು ₹ 3,000, ಡಿಪ್ಲೋಮಾ ಪದವೀಧರರಿಗೆ ₹ 1,500 ನೀಡಲಾಗುತ್ತದೆ. ಅರ್ಹ ಫಲಾನುಭವಿಗಳು ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. 2022- 2023ರಲ್ಲಿ ತೇರ್ಗಡೆಯಾಗಿರುವ ಪದವೀಧರರಿಗೆ ಉದ್ಯೋಗ ಸಿಗುವರೆಗೆ ಅಥವಾ ಗರಿಷ್ಠ 2 ವರ್ಷದವರೆಗೆ ನಿರುದ್ಯೋಗ ಭತ್ಯೆ ನೀಡುತ್ತಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲ ಸಹಾಯವಾಣಿ ಸಂಖ್ಯೆ…
ಚಿಕ್ಕೋಡಿ: ಕಾಂಗ್ರೆಸ್ ಪಕ್ಷ ರಾಮಮಂದಿರ ಉದ್ಘಾಟನೆಯ ಆಮಂತ್ರಣವನ್ನು ತಿರಸ್ಕಾರ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ಶ್ರೀರಾಮ ಸೇನೆ (Sri Ram Sena) ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದ್ದಾರೆ. ಶ್ರೀರಾಮ ಮಂದಿರ ಉದ್ಘಾಟನೆ ಆಮಂತ್ರಣ ಕಾಂಗ್ರೆಸ್ ಪಕ್ಷದಿಂದ ತಿರಸ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. https://ainlivenews.com/accused-of-late-night-partying-actors-present-at-police-station-video/ ಉದ್ಘಾಟನೆಗೆ ಹೋಗುವುದು ಬಿಜೆಪಿಗೆ ಆರ್‌ಎಸ್‌ಎಸ್‌ಗೆ ನಮಸ್ಕಾರ ಮಾಡಲು ಅಲ್ಲ. ರಾಮನಿಗೆ ನಮಸ್ಕಾರ ಮಾಡಲು ಹೋಗುವುದು. 500 ವರ್ಷಗಳ ನಂತರ ರಾಮನ ಮೂರ್ತಿ ಪ್ರತಿಷ್ಠಾಪನೆಗೆ ಹೋಗದೇ ಇರುವುದು ನಿಮ್ಮ ದೌರ್ಭಾಗ್ಯ. ನಿಜವಾಗಿಯೂ ಹಿಂದೂಗಳ ರಾಮನ ಶಾಪ ನಿಮಗೆ ತಟ್ಟುತ್ತದೆ. ಭಾಗವಹಿಸಿದ್ದರೆ ನೀವು ಹಿಂದೂ ಸಮಾಜದ ಜೊತೆ ಒಂದಾಗುತಿದ್ದರೆ ನಿಮಗೂ ರಾಮನ ಕೃಪೆ ಸಿಗುತ್ತಿತ್ತು. ಪಾಪಿಷ್ಟರ ಜೊತೆ ರಾವಣನ ಮನಸ್ಥಿತಿಯವರು ನೀವು ತಿರಸ್ಕಾರ ಮಾಡಿದ್ದು ಅತ್ಯಂತ ಹೇಯ ಕೃತ್ಯ. ಅಕ್ಷಮ್ಯ ಅಪರಾಧ ಮಾಡಿ ಕಾಂಗ್ರೆಸ್‌ನವರು ತಪ್ಪು ಮಾಡಿದ್ದೀರಿ ಎಂದು…
ಚಿಕ್ಕಮಗಳೂರು: ಕಳೆದ ಬಾರಿಯ ಲೋಕಸಭೆ ಚುನಾವಣೆ ಬೇರೆ. ಈ ಚುನಾವಣೆ ಬೇರೆ ಇರುತ್ತದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ಬಾರಿಯ ಲೋಕಸಭೆ ಚುನಾವಣೆ ಬೇರೆ. ಈ ಚುನಾವಣೆ ಬೇರೆ ಇರುತ್ತದೆ. ಇವತ್ತು ಮಂಡ್ಯದಲ್ಲಿ ಓರ್ವ ಸಾಮಾನ್ಯ ಕಾರ್ಯಕರ್ತ ಗೆಲ್ಲುವ ವಾತಾವರಣ ಇದೆ. ಕಳೆದ ಬಾರಿ ರೈತ ಸಂಘ, ಬಿಜೆಪಿ, ಕಾಂಗ್ರೆಸ್ ಎಲ್ಲರೂ ಪಕ್ಷೇತರ ಅಭ್ಯರ್ಥಿ ಪರ ಮತ ಹಾಕಿದ್ದರು. ಈಗ ಮಂಡ್ಯದಲ್ಲಿ ಆ ವಾತಾವರಣ ಇಲ್ಲಎಂದು ಹೇಳಿದರು. https://ainlivenews.com/accused-of-late-night-partying-actors-present-at-police-station-video/ ಇನ್ನೂ ರಾಮ ಮಂದಿರ ನಿರ್ಮಾಣವಾಗಬೇಕು ಎನ್ನುವುದು ದೇಶದ ಜನರ ನಿರೀಕ್ಷೆ. ಹಲವು ವರ್ಷಗಳ ಗೊಂದಲಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ ಎಂದರು. ಕಾಂಗ್ರೆಸ್ಸಿಗರು ರಾಮ ಮಂದಿರ ಉದ್ಘಾಟನೆಗೆ ಹೋಗದ ವಿಚಾರಕ್ಕೆ ಕೇಳಿದ ಪ್ರಶ್ನೆಗೆ, ಯಾಕೆ ಹೋಗುವುದಿಲ್ಲ ಎಂದು ಅವರೇ ಹೇಳಬೇಕು. ಅವರ ತೀರ್ಮಾನ ನನಗೆ ಸಂಬಂಧವಿಲ್ಲ. ರಾಮ ಮಂದಿರ ನಿಜವಾದ ರಾಮ ರಾಜ್ಯದ ಕನಸು ಎಂದು ಹೇಳಿದರು.