Author: AIN Author

ನಟಿ ಮೇಘಾ ಶೆಟ್ಟಿ (Megha Shetty) ಮತ್ತೆ ಗ್ಲ್ಯಾಮರಸ್ ಆಗಿ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ನೀಲಿ ಬಣ್ಣದ ಉಡುಗೆಯಲ್ಲಿ ನಟಿ ಕಂಗೊಳಿಸಿದ್ದಾರೆ. ನಟಿಯ ಬೋಲ್ಡ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೈವಾ’ ನಟಿ ಮೇಘಾ, ನೀಲಿ ಬಣ್ಣದ ಡ್ರೆಸ್‌ನಲ್ಲಿ ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ.  ಮೇಘಾ ಸೌಂದರ್ಯವನ್ನು ಹಾಲಿವುಡ್ ನಟಿಯರಿಗೆ ಹೋಲಿಸಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.  ಕಿರುತೆರೆಯ ಜನಪ್ರಿಯ ‘ಜೊತೆ ಜೊತೆಯಲಿ’ ಸೀರಿಯಲ್‌ನಲ್ಲಿ ನಾಯಕಿಯಾಗಿ ಅನು ಸಿರಿಮನೆ ಪಾತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದರು.  ಅನಿರುದ್ಧಗೆ ಹೀರೋಯಿನ್‌ ಆಗಿ ಮೇಘಾ ಶೆಟ್ಟಿ ಮಿಂಚಿದ್ದರು. ಈ ಸೀರಿಯಲ್ ಪ್ರಸಾರವಾದ ಕೆಲವೇ ದಿನಗಳಲ್ಲಿ ಅನು ಪಾತ್ರಧಾರಿ ಮೇಘಾ ಕೂಡ ಹಿಟ್ ಆದರು.

Read More

ಚಿತ್ರದುರ್ಗ: ಕೆಪಿಸಿಸಿ ಕಾರ್ಯಧ್ಯಕ್ಷ ಬಿ.ಎನ್ ಚಂದ್ರಪ್ಪರನ್ನು ರೈತರು ತರಾಟಗೆ ತೆಗೆದುಕೊಂಡಿದ್ದಾರೆ. ಚಿತ್ರದುರ್ಗದಲ್ಲಿಂದು ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಕಾರ್ಯಾನುಷ್ಟಾನಕ್ಕೆ ಆಗ್ರಹಿಸಿ ಬಂದ್ ಗೆ ಕರೆ ನೀಡಿದ್ದು ರೈತರು ಹಾಗೂ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿದರು ಪ್ರತಿಭಟನ ಸ್ಥಳಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಚಿತ್ರದುರ್ಗ ಮಾಜಿ ಸಂಸದ ಬಿ.ಎನ್ ಚಂದ್ರಪ್ಪ ಅವರು ಆಗಮಿಸಿ ಬಾಷಣ ಮಾಡಿತ್ತಿದ್ದು ಈ ವೇಳೆ ರೈತರು ಬಿ.ಎನ್ ಚಂದ್ರಪ್ಪ ಅವರನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡಿದ್ದಾರೆ. ನೀವು ಸಂಸದರಾಗಿದ್ದಾಗ ಯಾಕೆ? ಭದ್ರಾ ಮೇಲ್ದಂಡೆ ಯೋಜನೆಗೆ ಕಾಮಗಾರಿ ವೇಗ ಮಾಡಿಲ್ಲ. ಹಾಗೂ ಯೋಜನೆ ಬಗ್ಗೆ ಗಮನ ಹರಿಸದ ನೀವು ಈಗ ಚುನಾವಣೆ ಹತ್ತಿರ ಬಂದಿದ್ದರಿಂದ ಗಿಮಿಕ್ ಗಾಗಿ ಇಲ್ಲಿ ಬಂದಿದ್ದೀರಿ ಎಂದು ರೈತರು ಬಿ.ಎನ್ ಚಂದ್ರಪ್ಪ ಅವರಿಗೆ ಕೇಳಿದರು. ನಿಮ್ಮ ರಾಜಕೀಯವನ್ನು ವಿಧಾನ ಸೌಧ, ಪಾರ್ಲಿಮೆಂಟ್ ನಲ್ಲಿ ಮಾತನಾಡಿ, ಇಲ್ಲಿ ಯಾಕೆ? ಬಂದಿದ್ದೀರಿ, https://ainlivenews.com/suffering-from-hair-loss-problem/ ಹಿಂದೆ ಸಂಸದರಾಗಿದ್ದಾಗಲೂ ಇದೇ ರೀತಿ ಹೇಳಿ ರೈತರನ್ನು ಗಡೆಗಣಿಸಿದ್ದು, ರೈತರ ಪೈಪುಗಳನ್ನು ಹಗರಣ…

Read More

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಎರಡೂ ಪಂದ್ಯಗಳಿಂದ ವಿರಾಟ್‌ ಕೊಹ್ಲಿ ಹಿಂದೆ ಸರಿದಿದ್ದಾರೆ. ಸರಣಿಯಲ್ಲಿ 5-0 ಅಂತರದ ವೈಟ್‌ವಾಶ್‌ ಗೆಲುವನ್ನು ಎದುರು ನೋಡುತ್ತಿರುವ ಭಾರತ ತಂಡಕ್ಕೆ ಇದು ಬಹುದೊಡ್ಡ ಹಿನ್ನಡೆಯಾಗಿದೆ ಕೊಹ್ಲಿ ಅನುಪಸ್ಥಿತಿ ಉಳಿದ ಆಟಗಾರರಿಗೆ ಮಿಂಚಲು ಸಿಕ್ಕಿರುವ ದೊಡ್ಡ ಅವಕಾಶ ಎಂದು ಧನಾತ್ಮಕ ಮಾತುಗಳನ್ನು ಆಡಿದ್ದಾರೆ. ವೈಯಕ್ತಿಕ ಕಾರಣ ಕೊಟ್ಟು ಸರಣಿ ಆರಂಭಕ್ಕೆ ಕೆಲವೇ ದಿನಗಳಿರುವಾಗ ಮೊದಲ ಎರಡು ಪಂದ್ಯಗಳಿಂದ ವಿರಾಟ್‌ ಕೊಹ್ಲಿ ಹಿಂದೆ ಸರಿದಿದ್ದಾರೆ. ಅವರ ಈ ಕಾರಣಕ್ಕೆ ನೈಜ ಕಾರಣ ಏನೆಂಬುದು ಇನ್ನು ತಿಳಿದು ಬಂದಿಲ್ಲ. ಆದರೆ, ಕೊಹ್ಲಿ ತೆಗೆದುಕೊಂಡಿರುವ ಈ ನಿರ್ಧಾರವನ್ನು ಗೌರವಿಸಿ ಎಂದು ಅಭಿಮಾನಿಗಳಲ್ಲಿ ಮನತ್ತು ಮಾಧ್ಯಮದವರಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮನವಿ ಮಾಡಿದೆ. “ವಿರಾಟ್‌ ಕೊಹ್ಲಿ ಅವರಂತಹ ಗುಣಮಟ್ಟದ ಆಟಗಾರನ ಸೇವೆ ಇಲ್ಲದೇ ಹೋದಾಗ ಅದು ಯಾವುದೇ ತಂಡಕ್ಕೆ ದೊಡ್ಡ ಹಿನ್ನಡೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಆತ ಅದ್ಭುತ ಆಟಗಾರ. ಅವರ ಅಮೋಘ ದಾಖಲೆಗಳು ಎಲ್ಲವನ್ನೂ…

Read More

ಅಯೋಧ್ಯೆ : ಅಯೋಧ್ಯೆಯ ನೂತನ ಮಂದಿರದಲ್ಲಿ ಶ್ರೀರಾಮನ‌ ವಿಧ್ಯುಕ್ತ ಪ್ರತಿಷ್ಠಾಪನೆಯ ನಂತರ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳ ನೇತೃತ್ವದಲ್ಲಿ ಇಂದಿನಿಂದ 48 ದಿನಗಳ ಮಂಡಲೋತ್ಸವ ಆರಂಭಗೊಂಡಿದೆ. ಪೇಜಾವರ ಶ್ರೀಗಳು ಮಂಗಳವಾರವೂ ವಿವಿಧ ಮಂತ್ರಗಳಿಂದ ಪ್ರತಿಮೆಗೆ ತತ್ವನ್ಯಾಸಾದಿಗಳನ್ನು ನೆರವೇರಿಸಿ ಕಲಶಪೂಜೆ, ಚಾಮರಸೇವೆ, ಮಹಾಮಂಗಳಾರತಿಗಳನ್ನು ನೆರವೇರಿಸಿ ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ಪಿಲೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣಾಚಾರ್ಯ, ವಿಷ್ಣುಮೂರ್ತಿ ಆಚಾರ್ಯ , ಶಶಾಂಖ ಭಟ್ ಲಕ್ಷ್ಮೀನಾರಾಯಣ ಭಟ್ ಮೊದಲಸದವರ ನೇತೃತ್ವದಲ್ಲಿ ವಿವಿಧ ಹೋಮಹವನಾದಿಗಳು ಕಲಶಾರಾಧನೆ ಇತ್ಯಾದಿಗಳು ನೆರವೇರಿದವು. ಬಾಲರಾಮನಿಗೆ 16 ನಮೂನೆಗಳ ಪೂಜೆ ಬಾಲರಾಮನಿಗೆ ಒಟ್ಟು 16 ನಮೂನೆಗಳ ಪೂಜೆ ನಡೆಯಬೇಕು. ಇದರಲ್ಲಿ ಗೌರವಾರ್ಥವಾಗಿ ಪೇಜಾವರ ಮಠದ ಶ್ರೀಗಳು, ಅಯೋಧ್ಯೆಯ ಬಾಲರಾಮನಿಗೆ ಚಾಮರಸೇವೆ ಸಲ್ಲಿಸಿದರು. 48 ದಿನಗಳ ಕಾಲ ಪೇಜಾವರ ಶ್ರೀಗಳೇ ಅಯೋಧ್ಯೆಯ ಬಾಲರಾಮನಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲಿದ್ದಾರೆ. 2ನೇ ದಿನ ಪೇಜಾವರ ಶ್ರೀಗಳು ಬಾಲ ರಾಮನಿಗೆ ಪೂಜೆ ಸಲ್ಲಿಸಿದ ವಿಡಿಯೋ ಲಭ್ಯವಾಗಿವೆ.

Read More

ಕಾಬೂಲ್: ರಷ್ಯಾದ ಮಾಸ್ಕೋಗೆ ತೆರಳುತ್ತಿದ್ದ ಭಾರತೀಯ ಪ್ರಯಾಣಿಕ ವಿಮಾನವೊಂದು ಅಫ್ಘಾನಿಸ್ತಾನದ ಉತ್ತರ ಭಾಗದ ಬಡಾಖ್ಷಾನ್ ಪ್ರದೇಶದಲ್ಲಿ ಅಪಘಾತಕ್ಕೆ ಒಳಗಾಗಿದೆ ಎಂದು ಆಫ್ಘನ್ ಮಾಧ್ಯಮಗಳು ವರದಿ ಮಾಡಿವೆ. ಆದರೆ ಕೂಡಲೇ ಹೇಳಿಕೆ ಬಿಡುಗಡೆ ಮಾಡಿರುವ ನಾಗರಿಕ ವಿಮಾನಯಾನ ಸಚಿವಾಲಯ, ಇದು ಭಾರತಕ್ಕೆ ಸೇರಿದ ವಿಮಾನ ಅಲ್ಲ ಎಂದು ಸ್ಪಷ್ಟೀಕರಣ ನೀಡಿದೆ. “ಅಫ್ಘಾನಿಸ್ತಾನದಲ್ಲಿ ಈಗಷ್ಟೇ ಸಂಭವಿಸಿದ ದುರದೃಷ್ಟಕರ ವಿಮಾನ ಅಪಘಾತವು, ಭಾರತದ ಪ್ರಯಾಣಿಕ ವಿಮಾನವಲ್ಲ, ಹಾಗೆಯೇ ನಿಗದಿತವಲ್ಲದ (ಎನ್‌ಎಸ್‌ಒಪಿ)/ ಚಾರ್ಟರ್ಡ್ ವಿಮಾನ ಕೂಡ ಅಲ್ಲ. ಅದು ಮೊರೊಕ್ಕಾ ನೋಂದಾಯಿತ ಸಣ್ಣ ವಿಮಾನ. ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ” ಎಂದು ನಾಗರಿಕ ವಿಮಾನಯಾನ ಸಚಿವಾಲಯ ವಿವರಣೆ ಕೊಟ್ಟಿದೆ. ಬಡಾಖ್ಷಾನ್‌ನ ಕುರನ್- ಮುಂಜಾನ್ ಮತ್ತು ಜಿಬಾಕ್ ಜಿಲ್ಲೆಗಳ ನಡುವಿನ ತೋಪ್‌ಖಾನಾ ಎಂಬ ಪ್ರದೇಶದಲ್ಲಿನ ಪರ್ವತ ಭಾಗದಲ್ಲಿ ವಿಮಾನ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಇದು ಭಾರತದ ಪ್ರಯಾಣಿಕ ವಿಮಾನ ಎಂದು ಬಡಾಖ್ಷಾನ್‌ನ ಮಾಹಿತಿ ಹಾಗೂ ಸಂಸ್ಕೃತಿ ಇಲಾಖೆಯ ಮುಖ್ಯಸ್ಥ ಜಬೀಯುಲ್ಲಾ ಅಮಿರಿ ಹೇಳಿದ್ದಾಗಿ ಅಫ್ಘಾನಿಸ್ತಾನದ ಟೋಲೋ ನ್ಯೂಸ್ ವರದಿ…

Read More

ಬೆಂಗಳೂರು: 40 ಅಡಿಯ ರಾಮನ ಕಟೌಟ್ (Rama Cutout) ಧರೆಗುರುಳಿದ ಘಟನೆ ಬೆಂಗಳೂರಿನ ನಂದಿನಿ ಲೇ ಔಟ್ (Nandini Lay Out) ಕೃಷ್ಣಾನಂದ ನಗರ ಸರ್ಕಲ್ ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ (Ayodhya Pran Prathistha ceremony) ಹಿನ್ನೆಲೆಯಲ್ಲಿ ರಾಮನ ಈ ಬೃಹತ್ ಕಟೌಟ್ ನಿಲ್ಲಿಸಲಾಗಿತ್ತು. ಆ ಬಳಿಕ ಬಿಬಿಎಂಪಿ ತೆರವು ಮಾಡಿರಲಿಲ್ಲ. ಅದೃಷ್ಟವಶಾತ್ ಕಟೌಟ್ ಬೀಳೋ ವೇಳೆ ಯಾವುದೇ ವಾಹನಗಳು ಸಂಚರಿಸಿಲ್ಲ. ಹೀಗಾಗಿ ಭಾರೀ ದುರಂತವೊಂದು ತಪ್ಪಿದೆ. ಮಾಹಿತಿ ಪಡೆದ ತಕ್ಷಣವೇ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಗಾಳಿಗೆ ಬಿದ್ದಿರೋ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ ಮೂರು ದಿನದಿಂದ ನಿಲ್ಲಿಸಿದ್ದ ಕಟೌಟ್ ಏಕಾಏಕಿ ಗಾಳಿಗೆ ಬಿದ್ದಿರುವುದರಿಂದ ಸ್ಥಳೀಯರಲ್ಲಿ ಅನುಮಾನ ಉಂಟಾಗಿದೆ. ಬೇಕುಂತಲೇ ಕಟೌಟ್ ಕಡೆವಿದ್ದಾರಾ ಅನ್ನೋ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲಿದ್ದ ಸಿಸಿ ಕ್ಯಾಮರಾಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಜೊತೆಗೆ ಕಟೌಟ್ ಹಾಕಿದ್ದವರು ಯಾರು?, ಕಟೌಟ್ ಹಾಕಲು ಅನುಮತಿ ಪಡೆದಿದ್ದರಾ…

Read More

ಬೆಂಗಳೂರು:- ಅಪಾರ್ಟ್‍ಮೆಂಟ್‍ನ 29ನೇ ಮಹಡಿಯಿಂದ ಹಾರಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಬೇಗೂರು ಬಳಿಯ ಅಪಾರ್ಟ್‍ಮೆಂಟ್ ಒಂದರಲ್ಲಿ ಜರುಗಿದೆ. ಅಪಾರ್ಟ್‍ಮೆಂಟ್‍ನಲ್ಲಿ ತಂದೆ – ತಾಯಿ ಜೊತೆ ವಾಸವಾಗಿದ್ದಳು. ಖಾಸಗಿ ಶಾಲೆಯೊಂದರಲ್ಲಿ 6ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದಳು ಎನ್ನಲಾಗಿದೆ. ಬಾಲಕಿಯ ತಂದೆ ಸಾಫ್ಟ್‌ವೇರ್‌ ಎಂಜಿನಿಯರ್, ತಾಯಿ ಗೃಹಿಣಿಯಾಗಿದ್ದಾರೆ. ಬಾಲಕಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಾಲಕಿ ಮಂಗಳವಾರ ರಾತ್ರಿ ಮಲಗಿದ್ದ ವೇಳೆ, ಇದ್ದಕ್ಕಿದ್ದಂತೆ ಮುಂಜಾನೆ 4:30ಕ್ಕೆ ಎದ್ದು ಹಾಲ್‍ಗೆ ಬಂದಿದ್ದಳು. ಈ ವೇಳೆ ಬಾಲಕಿಯನ್ನು ಆಕೆಯ ತಾಯಿ ವಿಚಾರಿಸಿದಾಗ, ಸರಿಯಾಗಿ ಉತ್ತರಿಸದೆ ಮತ್ತೆ ಮಲಗುವುದಾಗಿ ರೂಮಿಗೆ ತೆರಳಿದ್ದಳು. ಸುಮಾರು 5 ಗಂಟೆ ವೇಳೆಗೆ ಬಾಲಕಿ ಅಪಾರ್ಟ್‍ಮೆಂಟ್ ಮೇಲಿನಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

Read More

ಬೆಳಗಾವಿ: ನನಗೆ ಸ್ಪರ್ಧೆ ಮಾಡುವಂತೆ ಹೈಕಮಾಂಡ್‌ನ ಯಾವ ನಾಯಕರೂ ಸೂಚಿಸಿಲ್ಲ. ಲೋಕಸಭಾ ಚುನಾವಣೆಗೆ ಸಚಿವರು ಸ್ಪರ್ಧಿಸುವುದು ಕಡ್ಡಾಯವಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಮ್ಮ ಸ್ಪರ್ಧೆಗೆ ಹೈಕಮಾಂಡ್‌ನಿಂದ ಒತ್ತಡ ಬರುತ್ತಿರುವ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆಯಲ್ಲ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು. ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಕಾಂಗ್ರೆಸ್‌ ಹೈಕಮಾಂಡ್‌ ನನಗೇನೂ ಸೂಚನೆ ನೀಡಿಲ್ಲ ಎಂದು ಹೇಳಿದರು. https://ainlivenews.com/do-you-sleep-less-than-6-hours-beware-of-this-deadly-disease/ ರಾಜ್ಯದಲ್ಲಿ 18 ಕ್ಷೇತ್ರಗಳ ಪೈಕಿ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧ್ಯವಿಲ್ಲ. ಕೆಲ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ವೀಕ್‌ ಇದೆ. 28ರ ಪೈಕಿ 20 ಕ್ಷೇತ್ರಗಳಲ್ಲಿ ನಾವು ಪ್ರಬಲರಾಗಿದ್ದೇವೆ. 8 ಕ್ಷೇತ್ರಗಳಲ್ಲಿ ವೀಕ್‌ ಇದ್ದೇವೆ. ತಮ್ಮ ಅಭ್ಯರ್ಥಿ ಗೆಲುವಿಗೆ ಎಲ್ಲ ಸಚಿವರೂ ಪ್ರಯತ್ನ ಮಾಡುತ್ತಾರೆ. ನಮ್ಮ ಸಚಿವರ ಪ್ರಯತ್ನದ ನಂತರವೂ ಕೆಲವೊಮ್ಮೆ ಫಲ ಸಿಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸಚಿವರ ತಲೆದಂಡವಾಗುತ್ತದೆ ಎಂಬುದು ಶುದ್ಧ ಸುಳ್ಳು. ಈ ರೀತಿ ಹೈಕಮಾಂಡ್‌…

Read More

ಬೆಂಗಳೂರು:- ಅಮಾಯಕ ವ್ಯಕ್ತಿಯನ್ನು ಕಾಟನ್‍ಪೇಟೆ ಪೊಲೀಸರು ಠಾಣೆಗೆ ಕರೆದೊಯ್ಯದೇ ಲಾಡ್ಜ್ ಗೆ ಕರೆದೊಯ್ದು 3 ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಸಬ್‍ಇನ್ಸ್ ಪೆಕ್ಟರ್ ಸಂತೋಷ್ ಗೌಡ, ಸಿಬ್ಬಂದಿ ಧ್ಯಾನ್ ಪ್ರಕಾಶ್ ಹಾಗೂ ಸಚಿನ್ ವಿರುದ್ಧ ವೆಂಕಟ್ ಎಂಬವರು ದೂರು ನೀಡಿದ್ದಾರೆ. ಜೊತೆಗೆ ಪೊಲೀಸ್ ಕಮಿಷನರ್ ಹಾಗೂ ಮಾನವಹಕ್ಕುಗಳ ಆಯೋಗಕ್ಕೂ ಕೋಣನಕುಂಟೆ ನಿವಾಸಿ ವೆಂಕಟ್ ದೂರು ನೀಡಿದ್ದಾರೆ. ಜನವರಿ 12 ರಂದು ಬೆಂಗಳೂರಿನಿಂದ ಮುಳಬಾಗಿಲಿಗೆ ವೆಂಕಟೇಶ್ ತೆರಳಿದ್ದರು. ಮುಳಬಾಗಿಲಿನ ಪಕ್ಕದ ತನ್ನ ಹುಟ್ಟೂರಾದ ಬೇವಳ್ಳಿಗೆ ತೆರಳಲು ಮಣಿ ಎಂಬಾತನಿಂದ ಡ್ರಾಪ್ ಪಡೆಯುತ್ತಿದ್ದರು. ಈ ಮಣಿ ಎಂಬಾತನ ವಿರುದ್ಧ ಕಾಟನ್ ಪೇಟೆ ಠಾಣೆಯಲ್ಲಿ 420 ಅಡಿ ಕೇಸ್ ದಾಖಲಾಗಿತ್ತು. ಮಣಿಯನ್ನ ಹುಡುಕಾಡ್ತಿದ್ದ ಕಾಟನ್ ಪೇಟೆ ಪೊಲೀಸರಿಗೆ ಮಣಿ ಲೊಕೇಷನ್ ಮುಳಬಾಗಿಲು ತೋರಿಸಿತ್ತು. ಪೊಲೀಸರು ಮುಳಬಾಗಿಲಿನ ಕೂತಂಡಹಳ್ಳಿ ಕೆರೆ ಬಳಿ ದಾಳಿ ಮಾಡಿ ಮಣಿ ಜೊತೆ ವೆಂಕಟ್ ರನ್ನು ಕರೆದೊಯ್ದಿದ್ರು. ಆದರೆ ಮಣಿ ಮೇಲಿದ್ದ ಕೇಸ್ ಗೂ…

Read More

ಮೈಸೂರು: ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಮುನ್ನ ಅರಣ್ಯ ಭೂಮಿಯಲ್ಲಿ ಮೂರು ಎಕರಿಗಿಂತ ಕಡಿಮೆ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಭರವಸೆ ನೀಡಿದ್ದರು. ಮೈಸೂರಿನ ಜಲ ದರ್ಶಿನಿ ಅತಿಥಿಗೃಹದಲ್ಲಿ ತಮ್ಮನ್ನು ಭೇಟಿ ಮಾಡಿದ್ದ ಅಖಂಡ ಕರ್ನಾಟಕ ರೈತ ಒಕ್ಕೂಟದ ಸದಸ್ಯರಿಂದ ಮನವಿ ಸ್ವೀಕರಿಸಿ ಮಾತಾಡಿದ ಅವರು, ಕೆಲವರು ಸ್ವಾರ್ಥಕ್ಕಾಗಿ ಹತ್ತಾರು ಎಕರೆ ಅರಣ್ಯ ಒತ್ತುವರಿ ಮಾಡಿದ್ದು ಅಂತಹವರ ವಿರುದ್ಧ ಕ್ರಮ ವಹಿಸಲಾಗುವುದು ಎಂದರು. https://ainlivenews.com/do-you-sleep-less-than-6-hours-beware-of-this-deadly-disease/ ಪ್ರಕೃತಿ ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ.ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ರಕ್ಷಣೆ ಸರ್ಕಾರದ ಹೊಣೆಯಾಗಿದೆ‌. ಅರಣ್ಯ ಭೂಮಿ ಕ್ಷೀಣಿಸಿದರೆ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತದೆ ಹೀಗಾಗಿ ಅರಣ್ಯ ಸಂರಕ್ಷಣೆ ನಿಮ್ಮ ಕರ್ತವ್ಯವೂ ಆಗಿದೆ ಎಂದರು. ಶಾಸಕರಾದ ದರ್ಶನ್ ಧ್ರುವನಾರಾಯಣ್ ಉಪಸ್ಥಿತರಿದ್ದರು.

Read More