Author: AIN Author

ಬೆಂಗಳೂರು: ಸಿದ್ದರಾಮಯ್ಯ ಅವರು ಹುಟ್ಟು ಮುಸ್ಲಿಂ ಆಗದಿದ್ರೂ, ಟೋಪಿ ಹಾಕಿದಾಗ ಒರಿಜಿನಲ್ ಮುಸ್ಲಿಂ ಥರ ಕಾಣಿಸ್ತಾರೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ  ಟೀಕಾಪ್ರಹಾರ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಹುಡುಕುವ ಗಾದೆ ಸೂಕ್ತ ಆಗುತ್ತೆ ಎನ್ನುವ ಮೂಲಕ, ಅಪೂರ್ಣ ರಾಮಮಂದಿರ ಮೂಲಕ ಬಿಜೆಪಿ ರಾಜಕಾರಣ ಮಾಡ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಠಕ್ಕರ್‌ ಕೊಟ್ಟಿದ್ದಾರೆ. ರಾಮಂದಿರ ದೇವಾಲಯಗಳ ಸಮುಚ್ಛಯ. ಮೊದಲ ಹಂತ ಈಗ ಪೂರ್ಣ ಆಗಿ ರಾಮಲಲ್ಲಾ ಪ್ರತಿಷ್ಠಾಪನೆ ಆಗ್ತಿದೆ ಈಗ. ಹಲವು ಹಂತಗಳಲ್ಲಿ ನಿರ್ಮಾಣ ಆಗಲಿದೆ. ಈ‌ ನಿರ್ಣಯ ಕೈಗೊಂಡಿರೋದು ಟ್ರಸ್ಟ್, ಅದು ಯಾವ ಪಕ್ಷಕ್ಕೂ ಸೇರಿದ ಟ್ರಸ್ಟ್ ಅಲ್ಲ. ಕಾಂಗ್ರೆಸ್‌ನವರಿಗೆ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಹುಡುಕುವ ಗಾದೆ ಸೂಕ್ತ ಆಗುತ್ತೆ. ಮೊದಲು ಆಹ್ವಾನ ಬಂದಿಲ್ಲ ಅಂತಿದ್ರು. ಆಹ್ವಾನ ಬಂದ್ಮೇಲೆ ಬರಲ್ಲ ಅಂತಿದ್ದಾರೆ. ಅವರು ಬರೋದು ರಾಮನ ಇಚ್ಛೆಯೂ ಅಲ್ಲ ಎಂದು ತಿವಿದಿದ್ದಾರೆ. ಬಿಜೆಪಿಯವರದ್ದು ಢೋಂಗಿ ಹಿಂದುತ್ವ ಎಂಬ ಸಿದ್ದರಾಮಯ್ಯ…

Read More

ಕಲಬುರಗಿ: ಕರ್ನಾಟಕ ಸಂಭ್ರಮ-50 ಜ್ಯೋತಿ ರಥಯಾತ್ರೆ ಇವತ್ತು ಕಲಬುರಗಿಗೆ ಆಗಮಿಸಿದ ಹಿನ್ನಲೆ ಜನತೆಯಿಂದ ಭರ್ಜರಿ ಸ್ವಾಗತ ದೊರೆಯಿತು. ಮೈಸೂರು ರಾಜ್ಯ ಕರ್ನಾಟಕ ಅಂತ ನಾಮಕರಣಗೊಂಡು 50 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಅರಿವು ಮೂಡಿಸುವುದು ರಥಯಾತ್ರೆಯ ಮೂಲ ಉದ್ದೇಶ. ಈ ಜ್ಯೋತಿ ರಥಯಾತ್ರೆ ನಗರಕ್ಕೆ ಆಗಮಿಸುತ್ತಿದ್ದಂತೆ ಸರ್ದಾರ್ ಪಟೇಲ್ ವೃತ್ತದಲ್ಲಿ ಕಲಾತಂಡಗಳು ತಾಯಿ ಭುವನೇಶ್ವರಿ ದೇವಿಗೆ ಸ್ವಾಗತ ಕೋರಿದವು. ಇದೇವೇಳೆ ಜಿಲ್ಲಾ ಕಸಾಪ ಘಟಕದ ಮಹಿಳಾ ಸದಸ್ಯರು ಮೆರವಣಿಗೆ ವೇಳೆ ಸಕತ್ ಸ್ಪೆಪ್ಸ್ ಹಾಕಿದ್ದು ವಿಶೇಷವಾಗಿತ್ತು.

Read More

ಬೆಂಗಳೂರು ಕಾಟೇರ’ ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಅವಧಿ ಮೀರಿ ಬೆಳಗಿನ ಜಾವದವರೆಗೆ ಚಿತ್ರತಂಡ ಪಾರ್ಟಿ ಮಾಡಿದ್ದರು ಎಂಬ ಆರೋಪ ಕೇಳಿಬಂದಿದ್ದು ನಟ ದರ್ಶನ್‌ & ಟೀಂ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ನಟ ದರ್ಶನ್‌ ಪರ  ಕಾಂಗ್ರೆಸ್‌ ಶಾಸಕ ರವಿಕುಮಾರ್‌ ಗೌಡ ಬ್ಯಾಟ್‌ ಬೀಸಿದ್ದಾರೆ. ಸ್ಟಾರ್ಸ್ ಗಳು ಅವಧಿ ಮೀರಿ ಪಾರ್ಟಿ ಮಾಡಿದ ವಿಚಾರವಾಗಿ ನಟರನ್ನ ಸ್ಟೇಷನ್ ಗೆ ಕರೆಸಿದ ಪೊಲೀಸರೇ ತಪ್ಪಿತಸ್ಥರು ಎಂದು ಮಂಡ್ಯ ಕಾಂಗ್ರೆಸ್ ಶಾಸಕ ರವಿ ಗಣಿಗ ಹೇಳಿಕೆ ನೀಡಿದ್ದಾರೆ.ಇಡೀ ಏಷ್ಯಾದಲ್ಲಿ ಅತಿ ಹೆಚ್ಚು ಸೆಕ್ಯೂರಿಟಿ ಬೆಂಗಳೂರಲ್ಲಿ ಇದೆ 20 ಸಾವಿರ ಪೊಲೀಸ್ ಅಧಿಕಾರಿಗಳು ಇದ್ದಾರೆ. ರಾತ್ರಿಯೆಲ್ಲಾ ಪೊಲೀಸರು ರೋಡಲ್ಲಿ ಬೀಟ್ ಹಾಕ್ತಾರೆ , ಜೆಟ್ ಲಾಗ್ ಇರೋದು ಜನ ಸಂದಣಿ ಇರೋ ಪ್ರದೇಶದಲ್ಲಿದೆ. ಮುಂಬೈ ಹೋಗುವ ರೋಡಲ್ಲಿ ಇದೆ ಈ ಪಬ್, ಮೂರು ಗಂಟೆಗೆ ಪೊಲೀಸರು ಹೋಗಿದ್ದಾರೆ ಅಂತಾರೆ   ಇಲ್ಲಿ ಒಂದು ಗಂಟೆ ವರೆಗೆ ಮಾತ್ರ ಪರ್ಮಿಶನ್ ಇದೆ  ಬೆಳಿಗ್ಗಿನ ಜಾವ ೩-೩೦ವರೆಗೂ ಓಪನ್…

Read More

ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ ರವಿ ಕುಮಾರ್ ನಿರ್ಮಾಣದಲ್ಲಿ ಖ್ಯಾತ ನಟ, ನಿರ್ದೇಶಕ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ “ಪುರುಷೋತ್ತಮನ‌ ಪ್ರಸಂಗ” ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಫೆಬ್ರವರಿಯಲ್ಲಿ ತೆರೆಗೆ ಬರಲಿದೆ. ಈ ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ನೀಡಿದರು. ತುಳುವಿನಲ್ಲಿ ಒಂಭತ್ತು ಸಿನಿಮಾಗಳನ್ನು ನಿರ್ದೇಶಿಸಿರುವ ನನಗೆ ಕನ್ನಡದಲ್ಲಿ ಇದು ಮೊದಲ ಚಿತ್ರ ಎಂದು ಮಾತನಾಡಿದ ನಿರ್ದೇಶಕ ದೇವದಾಸ್ ಕಾಪಿಕಾಡ್, ಕನ್ನಡದಲ್ಲಿ ನನಗೆ ಮೊದಲ ಚಿತ್ರವನ್ನು ನಿರ್ದೇಶಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. “ಪುರುಷೋತ್ತಮನ ಪ್ರಸಂಗ” ಕೌಟುಂಬಿಕ ಕಥಾಹಂದರ ಹೊಂದಿರುವ ನೈಜಘಟನೆ ಆಧಾರಿತ ಚಿತ್ರ. “ಪುರುಷೋತ್ತಮ” ನ ಪಾತ್ರದಲ್ಲಿ ನಿರ್ಮಾಪಕ ರವಿಕುಮಾರ್ ಅವರ ಪುತ್ರ ಅಜಯ್ ಅಭಿನಯಿಸಿದ್ದಾರೆ. ಈ ಪಾತ್ರಕ್ಕೆ ಹೇಳಿಮಾಡಿಸಿದ ನಟ ಅಜಯ್. ಹೊರದೇಶದಲ್ಲಿ ಸಿನಿಮಾ ಕುರಿತು ಅಧ್ಯಯನ ಮಾಡಿ ಬಂದಿದ್ದಾರೆ. ರಿಷಿಕಾ ನಾಯ್ಕ್ ಈ ಚಿತ್ರದ ನಾಯಕಿ. ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಮುಂತಾದ ಕಲಾವಿದರು…

Read More

ಕಲ್ಲು ಉಪ್ಪನ್ನು ಬಳಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಕಲ್ಲು ಉಪ್ಪಿನಲ್ಲಿರುವ ಆಯುರ್ವೇದ ಗುಣಗಳು ಎಲ್ಲಾ ರೀತಿಯ ಕಾಯಿಲೆಗಳಿಗೆ ಪರಿಹಾರ ನೀಡುತ್ತದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹಕ್ಕೆ ಆಗುವ ಪ್ರಯೋಜನಗಳನ್ನು ಇಂದು ನಾವು ಕಂಡುಕೊಳ್ಳಬಹುದು. ಕಲ್ಲು ಉಪ್ಪಿನ ರಾಸಾಯನಿಕ ಹೆಸರು ಸೋಡಿಯಂ ಕ್ಲೋರೈಡ್. ಈ ಉಪ್ಪನ್ನು ದಕ್ಷಿಣ ಭಾರತೀಯರು ಹೆಚ್ಚಾಗಿ ಸೇವಿಸುತ್ತಾರೆ. ಹೊಟ್ಟೆನೋವು, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರತಿದಿನ ಈ ಉಪ್ಪನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಸುಲಭವಾಗಿ ಪರಿಹಾರವನ್ನು ಪಡೆಯಬಹುದು. ಇದರ ಜತೆಗೆ ಜೀರ್ಣಾಂಗ ವ್ಯವಸ್ಥೆಯೂ ಸದೃಢವಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆಗಾಗ ಹೊಟ್ಟೆನೋವು, ಎದೆಯುರಿ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರತಿದಿನ ಈ ನೀರನ್ನು ಕುಡಿಯಬೇಕು. https://ainlivenews.com/a-kannada-song-is-playing-in-ayodhya/ ಕಲ್ಲು ಉಪ್ಪನ್ನು ಹಲ್ಲಿನ ಪುಡಿಯಾಗಿಯೂ ಬಳಸಬಹುದು. ಇದನ್ನು ಬಳಸುವುದರಿಂದ ವಸಡುಗಳು ಬಲಗೊಳ್ಳುವುದಲ್ಲದೆ, ಹಲ್ಲಿನ ಮೇಲೆ ಸಂಗ್ರಹವಾಗಿರುವ ಎಲ್ಲ ತ್ಯಾಜ್ಯ ವಸ್ತುಗಳನ್ನು ಸುಲಭವಾಗಿ ತೆಗೆದುಹಾಕಲಾಗುತ್ತದೆ. ಇದಲ್ಲದೇ ವಸಡು ನೋವು, ಊತ ಸಮಸ್ಯೆಗಳೂ ದೂರವಾಗುತ್ತವೆ…

Read More

ಕಲಬುರಗಿ : ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಬಳವಡಗಿ ಗ್ರಾಮದಲ್ಲಿ ಜನರಿಗೆ ತೊಂದರೆ ಕೊಡ್ತಿದ್ದ ಮಂಗಗಳನ್ನ ಬಲೆಗೆ ಕೆಡವಲಾಗಿದ್ದು 40 ಅಧಿಕ ಮಂಗಗಳನ್ನ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.. ಕಳೆದ ಕೆಲ ತಿಂಗಳಿಂದ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು ಊರಲ್ಲಿ ಕೆಲವರ ಮೇಲೆ ವಾನರ ಸೇನೆ ಅಟ್ಯಾಕ್ ಮಾಡಿದೆ. ಹೀಗಾಗಿ ಜನ ಅರಣ್ಯ ಇಲಾಖೆಗೆ ಮನವಿ ಮಾಡಿದ್ರು.ಇದೀಗ ಕೊಲ್ಲಾಪುರದಿಂದ ವಿಶೇಷ ತಂಡ ಆಗಮಿಸಿ ಆಪರೇಷನ್ ಮಂಕಿ ಕಾರ್ಯ ಶುರುಮಾಡಿದೆ.. ಸದ್ಯ 42 ಮಂಗಗಳು ಬಲೆಗೆ ಬಿದ್ದಿದ್ದು ಸೆರೆ ಹಿಡಿಯುವ ಕಾರ್ಯಾಚರಣೆ ಇನ್ನೂ ನಡೆದಿದೆ.

Read More

ವಿಜಯಪುರ: ವಿಜಯಪುರದ ಸಿಂದಗಿ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ಸಿಗರೇಟ್ ಮಳಿಗೆ ಕಳ್ಳತನ ಪ್ರಕರಣವನ್ನ ಬೇಧಿಸುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ. ಈ ಕುರಿತು ಸಿಂದಗಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಎಸ್ ಪಿ ಋಷಿಕೇಶ್ ಸೋನವಾಣೆ ಈ ಕಳ್ಳತನ ಅಂತರರಾಜ್ಯ ಕೃತ್ಯವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಂತರರಾಜ್ಯ ಕಳ್ಳನನ್ನ ಬಂಧಿಸಲಾಗಿದೆ. ಇನ್ನಿಬ್ಬರು ಹೊರ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂದರು. ಇನ್ನೂ ಸಿಂದಗಿ ಪಟ್ಟಣದ ಸಿಗರೇಟ್ ದಾಸ್ತಾನು ಮಳಿಗೆಯೊಂದರಿಂದ ಒಟ್ಟು 40 ಲಕ್ಷ 87 ಸಾವಿರ ಮೌಲ್ಯದ ಸಿಗರೇಟ್ ಕಳ್ಳತನ ಮಾಡಲಾಗಿತ್ತು. ಪ್ರಕರಣದ ತನಿಖೆಗೆ ಎರಡು ತಂಡ ರಚನೆ ಮಾಡಿದ್ದರು. ಈ ತಂಡಗಳು ತನಿಖೆ ನಡೆಸಿ ರಾಜಸ್ಥಾನ ಮೂಲದ ಜಿತೇಂದ್ರಕುಮಾರ ಎನ್ನುವ ವ್ಯಕ್ತಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಇನ್ನಿಬ್ಬರ ತನಿಖೆಗೆ ಶೋಧ ಮುಂದುವರೆದಿದೆ ಎಂದರು. ಅಲ್ಲದೇ ಕೃತ್ಯಕ್ಕೆ ಬಳಸಿದ ಕಾರು ಮತ್ತು ಸಿಗರೇಟ್ ಮಾರಾಟ ಮಾಡಿದ ನಂತರದ ನಗದು ಹಣ 37 ಲಕ್ಷ ರೂಪಾಯಿಗಳನ್ನ ವಶಕ್ಕೆ ಪಡೆಯಲಾಗಿದೆ ಎಂದರು. ಇನ್ನೂ ಪ್ರಕರಣ ಬೇಧಿಸಿದ ತಂಡವನ್ನ ಶ್ಲಾಘಿಸಿದರು.…

Read More

ಬೆಂಗಳೂರು:  ಕಾಂಗ್ರೆಸ್​ನ ಪಂಚಗ್ಯಾರಂಟಿಯಲ್ಲಿಒಂದಾದ ಗೃಹಜ್ಯೋತಿ ಸ್ಕೀಂ ಬಗ್ಗೆ ಈಗ ಎಲ್ಲೆಡೆ ಅಪಸ್ವರ ಕೇಳಿಬರುತ್ತಿದ್ದು ದಿಢೀರ್‌ ಅಂತಾ ಮೀಟರ್‌ ರೀಡರ್‌ʼಗಳ  ವೇತನಕ್ಕೆ ಕತ್ತರಿ ಹಾಕಲಾಗಿದೆ. ಗೃಹಜ್ಯೋತಿ ಜಾರಿ ಆರಂಭದಲ್ಲೇ ಎಸ್ಕಾಂ ಸಿಬ್ಬಂದಿಗೆ ತಟ್ಟಿದ ಬಿಸಿ ಸಾವಿರಾರು ಬೆಸ್ಕಾಂ ಮೀಟರ್ ರೀಟರ್ ವೇತನಕ್ಕೆ ಬಿತ್ತು ಕತ್ತರಿ ಆನಂತರ ಮೀಟರ್ ರೀಟರ್ಗಳಿಗೆ ತಗ್ಗಿದ ಕೆಲಸದ ಒತ್ತಡ ಇದನ್ನೇ ನೆಪಮಾಡಿಕೊಂಡು ಮೀಟರ್ ರೀಡರ್ ಗಳ ವೇತನಕ್ಕೆ ಕತ್ತರಿ ಹಾಕಲಾಗುತ್ತಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ದಿಢೀರ್ ಅಂತ ಮೀಟರ್ ಗಳ 5 ಸಾವಿರ ಸಂಬಳ ಕಡಿತಗೊಳಿಸಿದ್ದು  ಗೃಹಜ್ಯೋತಿ ಜಾರಿ ಮುನ್ನ ಮೀಟರ್ ರೀಡರ್ ಗಳಿಗೆ 21,291 ರೂ ವೇತನ ನೀಡುತಿದ್ದ ಬೆಸ್ಕಾಂ ಆದ್ರೆ ಇದೀಗ ದಿಢೀರ್ ಅಂತ 17,385 ರೊ ಮಾತ್ರ ವೇತನ ಬಿಡುಗಡೆ ಮಾಡಿದೆ. ಬೆಸ್ಕಾಂ ನಿರ್ಧಾರಕ್ಕೆ ಬೇಸತ್ತು ಸರ್ಕಾರದ ಕದ ತಟ್ಟಿದ ಮೀಟರ್ ರೀಡರ್ ಸೌಕರರ ಸಂಘ ರಾಜ್ಯದಲ್ಲಿ ಎಸ್ಕಾಂಗಳ ವ್ಯಾಪ್ತಿಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು  ಕಳೆದ ಎರಡು ತಿಂಗಳಿಂದ ಮೀಟರ್ ರೀಡರ್…

Read More

ಗದಗ: ರಾಕಿಂಗ್‌ ಸ್ಟಾರ್‌ ಯಶ್‌ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳಾಗಿದ್ದ ಮೂವರು ಯುವಕರು ತಮ್ಮೂರಲ್ಲಿ ತಡರಾತ್ರಿ ಎತ್ತರದ ಕಟೌಟ್ ನಿಲ್ಲಿಸುವ ಪ್ರಯತ್ನದಲ್ಲಿದ್ದಾಗ ವಿದ್ಯುತ್ ಪ್ರವಹಿಸಿ ದಾರುಣ ಸಾವನ್ನಪ್ಪಿದ ಯುವಕರ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ್ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ತಲಾ 2 ಲಕ್ಷ ರೂ. ಚೆಕ್ ವಿತರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. https://ainlivenews.com/a-kannada-song-is-playing-in-ayodhya/ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಮಕ್ಕಳನ್ನು ಕಳೆದದುಕೊಂಡಿರುವ ಮೂರೂ ಕುಟುಂಬದ ಸದಸ್ಯರು ಇನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ, ಅವರು ಸರ್ಕಾರದ ಮುಂದೆ ಯಾವುದೇ ಬೇಡಿಕೆಯನ್ನಿಡಲಿಲ್ಲ, ಚೆಕ್ ಸ್ವೀಕರಿಸಲು ಸಹ ಅವರು ನಿರಾಕರಿಸಿದರು ಎಂದು ಪಾಟೀಲ್ ಹೇಳಿದರು.

Read More

ಬೆಂಗಳೂರು:  ಸಿಲಿಕಾನ್ ಸಿಟಿಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ ಮಾಡಿದ ಘಟನೆ ನಗರದ HSR ಲೇಔಟ್‌ʼನಲ್ಲಿ ನಡೆದಿದ್ದು  ಪತಿ ವೆಂಕಟರಾಮಣ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಲಾಗಿದೆ.ಸದ್ಯ ಹೆಚ್ ಎಸ್ ಆರ್ ಲೈಔಟ್ ಪೊಲೀಸರಿಂದ ಪತ್ನಿ ಹಾಗೂ ಪ್ರಿಯಕರನ ಬಂಧನವಾಗಿದೆ. ಜನವರಿ‌ 6 ರಂದು ಆರೋಪಿ ನಿತೇಶ್ ನನ್ನ  ಗಂಡ ಮನೆಯಲ್ಲಿಲ್ಲ ಎಂದು ಮನೆಗೆ ಕರೆಸಿಕೊಂಡಿದ್ಲು ಈ ವೇಳೆ ದಿಢೀರ್ ಗಂಡ ವೆಂಕಟರಾಮಣ ಮನೆಗೆ ಬಂದಿದ್ದ ಆಗ ಇಬ್ಬರು ರೂಮ್ ನಲ್ಲಿದ್ದನ್ನ ಕಂಡು ಗಂಡ ಶಾಕ್ ಆಗಿದ್ದ ಈ ವೇಳೆ ಇಬ್ಬರು ಸೇರಿ ವೆಂಕಟರಾಮಣ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಲಾಗಿದೆ. ಮೃತದೇಹವನ್ನು ಮನೆಯ ಹೊರಗೆ ಶೌಚಾಲಯದ ಬಳಿ ಇಟ್ಟು ಅಸಹಜ ಸಾವು ಎಂದು ಸೀನ್ ಕ್ರಿಯೇಟ್ ಮಾಡುವ ಪ್ಲಾನ್‌ ಮಾಡಿ  ಚೂಪಾದ ಕಲ್ಲು ಇಟ್ಟು ಕಲ್ಲಿನ ಮೇಲೆ ಬಿದ್ದಿದ್ದಾನೆ ಎಂದು ಸೀನ್ ಕ್ರೀಯೆಟ್ ಮಾಡಿ  ಬಳಿಕ ಬೆಳಗ್ಗೆ ಗಂಡ ಸಾವನ್ನಪ್ಪಿದ್ದಾನೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ನಂದಿನಿ…

Read More