ಬೆಂಗಳೂರು: ಪ್ರದೀಪ್ ಈಶ್ವರ್‌ಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ಕೊಟ್ಟಿದ್ದಾರೆ ಕೊಚ್ಚೆಗೆ ನಾನು ಯಾವತ್ತೂ ಕಲ್ಲು ಹಾಕಲ್ಲ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಿಡಿಗೇಗೇಡಿಗಳು ಮಾತ್ರ ಕೊಚ್ಚೆಗೆ ಕಲ್ಲು ಹಾಕ್ತಾರೆ ನಾನು ಅವರ ಬಗ್ಗೆ ಮಾತನಾಡಲು ಇಷ್ಟ ಪಡಲ್ಲ ಎಂದು ಪ್ರದೀಪ್ ಈಶ್ವರ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು. ಹಾಗೆ ಅಯೋಧ್ಯೆಗೆ ಹೋಗ್ತೆನೆಂದ ಸಿಎಂಗೆ ಪ್ರತಾಪ ಸಿಂಹ ತಿರುಗೇಟು ನೀಡಿದ್ದಾರೆ. ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದ ಕಾಂಗ್ರೆಸ್ ಪಾಪ ತೊಳೆದುಕೊಳ್ಳಲು ಸಿದ್ದರಾಮಯ್ಯ ಹೋಗಿ ಬರಲಿ ತಮ್ಮ ಶಿಷ್ಯರ ಜೊತೆಗೆ ಸಿಎಂ ಅಯೋಧ್ಯೆಗೆ ಹೋಗಿ ಬರಲಿ ಎಂದು ಸಿಎಂ ವಿರುದ್ಧ ಸಂಸದ ಪ್ರತಾಪ ಸಿಂಹ ವಾಗ್ದಾಳಿ ನಡೆಸಿದರು.
Author: AIN Author
ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಯೋಗ್ಯ ಅಭ್ಯರ್ಥಿಗಳನ್ನು ಅಳೆದು, ತೂಗಿ ಆಯ್ಕೆ ಮಾಡಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ‘ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಗೆ ಭೇಟಿ ನೀಡಿದ್ದು, ವರಿಷ್ಠರೊಂದಿಗೆ ಚರ್ಚಿಸಲಾಗಿದೆ. ರಾಜ್ಯದಲ್ಲಿನ ಎಲ್ಲ ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕೆನ್ನುವುದು ನಮ್ಮ ಧ್ಯೇಯ. ಆ ನಿಟ್ಟಿನಲ್ಲಿ ಯೋಗ್ಯ ಅಭ್ಯರ್ಥಿಗಳನ್ನು ಅಳೆದು, ತೂಗಿ ಆಯ್ಕೆ ಮಾಡಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಟಿಕೆಟ್ ಆಕಾಂಕ್ಷಿಳ ಬೇಡಿಕೆ ಸಹ ಹೆಚ್ಚಾಗಿದೆ’ ಎಂದು ಹೇಳಿದರು. ಹಾನಗಲ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಮಾತನಾಡಿದ ಅವರುಪದೇಪದೇ ಇಂತಹ ಘಟನೆಗಳು ಪ್ರದರ್ಶನವಾಗುತ್ತಿರುವುದು ಖೇದಕರ. ಪ್ರಕರಣಕ್ಕೆ ಸಂಬಂಧಿಸಿ ಹಾವೇರಿ ಎಸ್ಪಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಮಹಿಳೆಯರು ಆತಂಕ ಪಡಬೇಕಿಲ್ಲ’ ಎಂದರು. ಕೆಲವು ಕಿಡಿಗೇಡಿಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದು, ಅವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಿದರೆ…
ಹುಬ್ಬಳ್ಳಿ: ನಗರದ ಅಂತಾರಾಷ್ಟ್ರೀಯ ರೋಟರಿ ರೋಟರಿ ಸರಸ್ವತಿ ಶಾಲೆಯಲ್ಲಿ ರೋಟರಿ ಇಂಟರಾಕ್ಟ್ ಸಹಯೋಗದೊಂದಿಗೆ ಕಿಮ್ಸ್ ಆಸ್ಪತ್ರೆ ವೈದ್ಯಕೀಯ ತಂಡದಿಂದ ಇಂದು ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು. ಈ ಸಂದರ್ಭದಲ್ಲಿ ಶಿಬಿರ ಉದ್ಘಾಟನೆ ಮಾಡಿ ಮಾತನಾಡಿದ ರೋಟರಿ ಯನ್ ಲಿಂಗರಾಜ ಪಾಟೀಲ್ ಪಾಠದ ಜೊತೆ ಜೊತೆಗೆ ಶಾಲಾ ಮಕ್ಕಳು ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಬೇಕು. ಆರೋಗ್ಯವೇ ಭಾಗ್ಯ ಆದ್ದರಿಂದ ಆರೋಗ್ಯದಿಂದ ಇದ್ದ ಮಕ್ಕಳು ಗುರುತರ ಸಾಧನೆ ಮಾಡಲು ಸಾಧ್ಯ ಎಂದರು. ರೋಟರಿಯನ್ ಶಿವಪ್ರಸಾದ್ ಲಕಮನಹಳ್ಳಿ, ಖಜಾಂಚಿ ಆರ್ಟಿಎನ್. ಪ್ರವೀಣ್ ಬನ್ಸಾಲಿ, ಐಪಿಪಿ ಎನ್. ಡಾ. ಪ್ರಕಾಶ್ ವಾರಿ, ಎನ್. ಡಾ. ಶಿವಾನಂದ್, ಡಾ.ಮುದುಕನಗೌಡ, ಡಾ.ವಸಂತ ಪಾಟೀಲ್, ಡಾ. ಪ್ರಕಾಶ ವಾರಿ,ಪ್ರಾಂಶುಪಾಲರಾದ ಶ್ರೀಮತಿ. ಕೀರ್ತಿ ದೇಶಪಾಂಡೆ , ಇಂಟರ್ ಯಾಕ್ಟ್ ಕ್ಲಬ್ ಅಧ್ಯಕ್ಷೆ ಸಮಿತಾ ರೇವಣಕರ ಮತ್ತು ಅನುಕ್ಸಾ ರಾವ್ ಮುಂತಾದವರು ಉಪಸ್ಥಿತರಿದ್ದರು
ಬೆಂಗಳೂರು: ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಬಿಎಂಟಿಸಿ ಏಳು ಜನ ಅಧಿಕಾರಿಗಳನ್ನ ಅಮಾನತುಗೊಳಿಸಿ ಆದೇಶ ನೀಡಲಾಗಿದೆ. ಚಾಲಕ, ನಿರ್ವಾಹಕರ ಬಳಿ ಲಂಚಾವತಾರ ನಡೆಸುತ್ತಿದ್ದ ಡಿಪೋ ಮ್ಯಾನೇಜರ್ ಗಳು ನೌಕರರು ರಜೆ ಬೇಕು ಅಂದ್ರೆ ಬಿಎಂಟಿಸಿ ಅಧಿಕಾರಿಗಳಿಗೆ ಲಂಚ ಕೊಡಲೇಬೇಕು ಬೇಕಾದ ರೂಟ್, ರಜೆ, ಶಿಫ್ಟ್ ಬೇಕಾದ್ರೆ ಡಿಪೋ ಅಧಿಕಾರಿಗಳ ಜೇಬು ತುಂಬಿಸಬೇಕಿತ್ತುಈ ಹಿನ್ನೆಲೆಯಲ್ಲಿ ಬಿಎಂಟಿಸಿಯ 7 ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿ ಬಿಎಂಟಿಸಿ ಎಂಡಿ ಆದೇಶ ಸಾಕಷ್ಟು ದಿನಗಳಿಂದ ಕೇಳಿಬರ್ತಿದ್ದ ಲಂಚದ ಆರೋಪ ಇದೀಗ ನೌಕರರ ಬಳಿ ಲಂಚ ತೆಗೆದುಕೊಂಡಿದ್ದ ಅಧಿಕಾರಿಗಳ ತಲೆದಂಡ ಏಳು ಜನ ಅಧಿಕಾರಿಗಳನ್ನ ಅಮಾನತುಗೊಳಿಸಿ ಆದೇಶ ವಿಚಾರಣಾ ಇತ್ಯರ್ಥಪೂರ್ವ ಅಮಾನತುಗೊಳಿಸಿ ಆದೇಶ ನೀಡಲಾಗಿದ್ದು ಸಿಬ್ಬಂದಿ ಮೇಲ್ವಿಚಾರಕಿ, ಕಿರಿಯ ಸಹಾಯಕರು ಸೇರಿದಂತೆ 7 ಜನ ಅಧಿಕಾರಿಗಳ ಅಮಾನತು ಮಾಡಲಾಗಿದೆ. ಡಿಪ್ಪೋ ನಂ. 27ರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿಗಳು ಯಾವ ಅಧಿಕಾರಿಗಳು ಅಮಾನತ್ತು? ಡಿಪೋ ನಂ 27 ರ 7 ವಿವಿಧ ಹುದ್ದೆಯ ಅಧಿಕಾರಿಗಳು ಅಮಾನತ್ತು 1. ಮಂಜುಳಾ.ಆರ್-…
ನವದೆಹಲಿ: ಸಂಸತ್ತಿನ ಒಳಗೆ ಹೊಗೆ ಬಾಂಬ್ ಸಿಡಿಸಿ ದಾಳಿ ನಡೆಸಿದ ಪ್ರಕರಣದಲ್ಲಿ(Parliament Security Breach Probe) ಬಂಧಿತರಾಗಿರುವ 6 ಆರೋಪಿಗಳ ಪೈಕಿ ಐವರಿಗೆ ಶುಕ್ರವಾರ ಸುಳ್ಳುಪತ್ತೆ ಪರೀಕ್ಷೆ ಮತ್ತು ಮಂಪರು ಪರೀಕ್ಷೆ (Polygraph, Narco Tests) ನಡೆಸಲಾಗಿದೆ. ಮೈಸೂರಿನ ಡಿ. ಮನೋರಂಜನ್(Manoranjan), ನಾಲ್ವರು ಆರೋಪಿಗಳಾದ ಸಾಗರ್ ಶರ್ಮಾ, ಅಮೋಲ್ ಶಿಂಧೆ, ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಅವರಿಗೆ ಗುಜರಾತ್ ಗಾಂಧಿನಗರದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಮನೋರಂಜನ್ ಹಾಗೂ ಸಾಗರ್ ಅವರಿಗೆ ಹೆಚ್ಚುವರಿಯಾಗಿ ಟ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲಾಗಿದೆ. https://ainlivenews.com/a-kannada-song-is-playing-in-ayodhya/ ಈ ಪ್ರಕರಣದ ಏಕೈಕ ಮಹಿಳಾ ಆರೋಪಿಯಾಗಿರುವ ನೀಲಂ ಮಂಪರು ಪರೀಕ್ಷೆಗೆ ತನ್ನ ಒಪ್ಪಿಗೆ ನೀಡದ್ದರಿಂದ ಐವರಿಗೆ ಮಾತ್ರ ಪರೀಕ್ಷೆ ನಡೆಸಲು ದೆಹಲಿ ನ್ಯಾಯಾಲಯ ಆದೇಶಿಸಿತ್ತು. ಸಂಸತ್ ಮೇಲೆ ದಾಳಿ ನಡೆಸಲು ವರ್ಷದ ಹಿಂದೆಯೇ ಮಾಸ್ಟರ್ ಪ್ಲಾನ್ ನಡೆದಿತ್ತು. ಸರ್ಕಾರದ ವಿರುದ್ಧ ಏನಾದರೂ ದೊಡ್ಡದು ಮಾಡಿ ಎಲ್ಲರ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ಮೈಸೂರಿನಲ್ಲಿಯೇ ಮನೋರಂಜನ್ ಯೋಜನೆ…
ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಯೋಜನೆಯ ಮೂಲಕ ಬೆಂಗಳೂರು ನಗರವನ್ನು ಸ್ವಚ್ಛ, ಹಸಿರು ಹಾಗೂ ಸುಸ್ಥಿರ ನಗರವಾಗಿ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಇಂದು ಬೆಂಗಳೂರಿನಲ್ಲಿ ಯುವ ನಾಯಕತ್ವ ಸಮ್ಮೇಳನ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ ಇನ್ಪೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರು ಇಂಗ್ಲೀಷ್ ಮಾತನಾಡಬೇಕು ಅಂತಾ ಕನ್ನಡ ಬಿಡಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಅಂದ್ರೆ ಕನ್ನಡ. ಇಂಗ್ಲೀಷ್ ಮಾತನಾಡಬೇಕು ಅಂತಾ ಕನ್ನಡ ಬಿಡಬೇಡಿ. ಮಕ್ಕಳ ಮನಸ್ಸು ಯಾವುದೇ ಪೂರ್ವಪೀಡಿತವಾಗಿರಲ್ಲ. ನಾನು ಮಕ್ಕಳ ಪುಸ್ತಕ ಬರೆದಾಗ ಮಕ್ಕಳನ್ನ ಕೇಳ್ತೀನಿ. ಏನಾದ್ರೂ ತಪ್ಪಿದ್ರೆ ಹೇಳಿ ಅಂತಾ. ಬ್ರೈಟ್ ಐಡಿಯಾ ಬರೋದೇ ಮಕ್ಕಳಿಂದ. ಎಲ್ಲಾ ನಗರಗಳಲ್ಲೂ ಸಮಸ್ಯೆ ಇರುತ್ತೆ. ಆದರೆ ಸಮಸ್ಯೆಗಳನ್ನ ಬಗೆಹರಿಸುವ ಪ್ರಯತ್ನ ಇರಬೇಕು ಎಂದು ಸುಧಾಮೂರ್ತಿ ಅವರು ತಿಳಿಸಿದರು.
ಸಂಕ್ರಾಂತಿ ಪ್ರಯುಕ್ತ ಈ ವಾರ ತೆರೆಗೆ ಬಂದಿರೋ ಮತ್ತೊಂದು ಬಿಗ್ ಸಿನಿಮಾ ಕ್ಯಾಪ್ಟನ್ ಮಿಲ್ಲರ್. ಧನುಷ್ ನಟನೆಯ ಈ ಪ್ಯಾನ್ ಇಂಡಿಯಾ ವಿಶ್ವದಾದ್ಯಂತ ತೆರೆಗೆ ಬಂದಿದ್ದು ಬಿಗ್ ಓಪನಿಂಗ್ ಪಡೆದುಕೊಂಡಿದೆ. ಜೈಲರ್ ಬಳಿಕ ಶಿವರಾಜ್ಕುಮಾರ್ ಈ ಕಾಲಿವುಡ್ ಸಿನಿಮಾದಲ್ಲಿ ನಟಿಸಿದ್ದು ಕನ್ನಡದಲ್ಲೂ ಚಿತ್ರ ತೆರೆಗೆ ಬಂದಿದೆ. ಹಾಗಾದ್ರೆ ಕ್ಯಾಪ್ಟನ್ ಮಿಲ್ಲರ್ನಲ್ಲಿ ಶಿವತಾಂಡವ ಹೇಗಿದೆ ಅನ್ನೋ ವರದಿ ಇಲ್ಲಿದೆ. ಯೆಸ್, ಸಂಕ್ರಾತಿ ಪ್ರಯುಕ್ತ ಬೇರೆ ಬೇರೆ ಭಾಷೆಗಳಲ್ಲಿ ಸಾಕಷ್ಟು ಬಿಗ್ ಸಿನಿಮಾಗಳು ತೆರೆಗೆ ಬಂದಿವೆ. ಆದ್ರೆ ಸ್ಯಾಂಡಲ್ವುಡ್ ನಲ್ಲಿ ಈ ಬಾರಿ ಸಂಕ್ರಾಂತಿ ಸಪ್ಪೆ ಸಪ್ಪೆ. ಯಾಕಂದ್ರೆ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬಂದಿಲ್ಲ. ಆದ್ರೆ ಇದ್ದುದ್ದರಲ್ಲಿ ಕನ್ನಡ ಸಿನಿಪ್ರಿಯರು ಸಮಾಧಾನ ಪಟ್ಟು ಕೊಳ್ಳೋ ಸಂಗತಿ ಅಂದ್ರೆ ಶಿವರಾಜ್ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿರೋ ಕಾಲಿವುಡ್ ಸಿನಿಮಾ ಕ್ಯಾಪ್ಟನ್ ಮಿಲ್ಲರ್ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರೋ ಕ್ಯಾಪ್ಟನ್ ಮಿಲ್ಲರ್ ಕನ್ನಡದಲ್ಲೂ ತೆರೆಗೆ ಬಂದಿದೆ. ಜೈಲರ್ ಬಳಿಕ ಮತ್ತೊಮ್ಮೆ ಶಿವಣ್ಣ ಪ್ಯಾನ್ ಇಂಡಿಯಾ ಚಿತ್ರದಲ್ಲಿ…
ಧಾರವಾಡ: ನೂತನ ಗ್ರ್ಯಾಚ್ಯುಟಿ ಕಾನೂನಿನ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ. ಗ್ರ್ಯಾಚ್ಯುಟಿ ಇನ್ಶುರೆನ್ಸ್ ಎನ್ನುವುದು ಯಾವ ಕಂಪೆನಿಯಲ್ಲಿ ಹತ್ತು ಜನಕ್ಕಿಂತ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೋ ಅವರು ಇದಕ್ಕೆ ಒಳಪಡುತ್ತಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಬಿಟ್ಟು ಎಲ್ಲಾ ಖಾಸಗಿ ಕಂಪೆನಿ ಕೆಲಸಗಾರರು ಇದಕ್ಕೆ ಒಳಪಡುತ್ತಾರೆ. ಕಡ್ಡಾಯವಾಗಿ ಅವರು ಇನ್ಶುರೆನ್ಸ್ ಮಾಡಿಸಿಕೊಳ್ಳಬೇಕು ಎಂಬ ಕಾನೂನಿದೆ. ಕಂಪೆನಿ ಲಾಸ್ ಆದಾಗ ಗ್ರ್ಯಾಚ್ಯುಟಿ ಸಿಗುತ್ತಿರಲಿಲ್ಲ. ಕೆಲವರೊಂದು ಕಂಪೆನಿಗಳು ಕೆಲಸಗಾರರನ್ನು ಕೆಲಸದಿಂದ ತೆಗೆದಾಗ ಗ್ರ್ಯಾಚ್ಯುಟಿ ಸಿಗುತ್ತಿರಲಿಲ್ಲ. ಈಗ ಕಡ್ಡಾಯವಾಗಿ ಇನ್ಶುರೆನ್ಸ್ ತೆಗೆದುಕೊಳ್ಳುವುದರಿಂದ ಅವರಿಗೆ ನೇರವಾಗಿ ಇನ್ಶುರೆನ್ಸ್ ಕಂಪೆನಿಯಿಂದ ದುಡ್ಡು ಹೋಗುತ್ತದೆ ಎಂದರು. https://ainlivenews.com/a-kannada-song-is-playing-in-ayodhya/ ಇದಕ್ಕಾಗಿ ಹೊಸ ಕಾನೂನು ತಂದಿದ್ದೇವೆ. ಎಲ್ಲ ರೀತಿಯ ಇನ್ಶುರೆನ್ಸ್ ಕಂಪೆನಿಗಳು ಕಂಪೆನಿಯವರ ಜೊತೆಗೆ ಒಪ್ಪಂದ ಮಾಡಿಕೊಳ್ಳಬಹುದು. 60 ಲಕ್ಷ ಜನ ಈ ಕೆಲಸ ಮಾಡುತ್ತಿದ್ದಾರೆ. ಅವರನ್ನು ರಾತ್ರೋರಾತ್ರಿ ತೆಗೆದರೆ ಅವರಿಗೆ ಗ್ರ್ಯಾಚ್ಯುಟಿ ಸಿಗೋದಿಲ್ಲ. 5 ವರ್ಷದ ಮೇಲೆ ಗ್ರ್ಯಾಚ್ಯುಟಿ ಸಿಗಬೇಕು ಎಂದು ಕಾನೂನು ಇದೆ.…
ಬೆಂಗಳೂರು : ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಆಸ್ತಿ ಮತ್ತೊಮ್ಮೆ 100 ಬಿಲಿಯನ್ ಡಾಲರ್ ಗಡಿ ದಾಟಿದೆ. ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಸಂಪತ್ತು 2.8 ಬಿಲಿಯನ್ ಡಾಲರ್‌ಗಳಷ್ಟು ಏರಿಕೆ ಕಂಡಿದ್ದು, 101.8 ಬಿಲಿಯನ್ ಡಾಲರ್ ಮುಟ್ಟಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅವರು ಜಾಗತಿಕ ಸಿರಿವಂತರ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದಾರೆ. ಅಂಬಾನಿ ಒಡೆತನ ರಿಲಯನ್ಸ್ ಇಂಡಸ್ಟ್ರೀಸ್ ಲಿ. ಷೇರುಗಳು ಶೇ. 2.6ರಷ್ಟು ಏರಿಕೆ ಕಂಡು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ಈ ಬೆನ್ನಲ್ಲೇ ಅವರ ಆಸ್ತಿಯೂ ಏರಿಕೆ ಕಂಡಿದೆ. ಅಂಬಾನಿ ಆಸ್ತಿಯಲ್ಲೂ ಏರಿಕೆ ಈ ಮೂಲಕ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅವರು 2022ರ ಜೂನ್ ನಂತರ ಮೊದಲ ಬಾರಿಗೆ 100 ಬಿಲಿಯನ್ ಡಾಲರ್ ಕ್ಲಬ್‌ಗೆ ಮರಳಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಕಂಪನಿ ಅಧ್ಯಕ್ಷ ಮುಕೇಶ್ ಅಂಬಾನಿ ಶೇ. 42ರಷ್ಟು ಷೇರು ಹೊಂದಿದ್ದಾರೆ. ಸಂಸ್ಥೆಯು ತ್ರೈಮಾಸಿಕ ಲಾಭದಲ್ಲಿ ಏರಿಕೆಯನ್ನು ವರದಿ ಮಾಡಿದ ನಂತರ ಅದರ…
ರಾಯಚೂರು: ಶ್ರೀರಾಮನು ಕೇವಲ ಬಿಜೆಪಿಗೆ ಮಾತ್ರ ಸೀಮಿತವಲ್ಲ ದೇಶದ ಪ್ರತಿಯೊಬ್ಬರ ಜೊತೆಯೂ ಶ್ರೀರಾಮ ಇದ್ದಾನೆ. ರಾಮಮಂದಿರ ಪರಿಪೂರ್ಣಗೊಳ್ಳದೆ ಉದ್ಘಾಟನೆ ಮಾಡುತ್ತಿರುವುದರಿಂದ ಶಂಕರ ಮಠದ ಗುರುಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವಿಧಾನ ಪರಿಷತ್ತು ಸದಸ್ಯ ಎಚ್.ವಿಶ್ವನಾಥ ಹೇಳಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಶ್ರೀರಾಮ ಇಡೀ ಭಾರತೀಯರ ರಾಮನಾಗಿದ್ದು, ಬಿಜೆಪಿಗೆ ಮಾತ್ರ ಸೀಮಿತವಲ್ಲ. ಬಿಜೆಪಿ, ಕಾಂಗ್ರೆಸ್,ಜೆಡಿಎಸ್ ಜನರ ಧಾರ್ಮಿಕ ಭಾವನೆಗಳ ನಂಬಿಕೆಗೆ ಅರ್ಹವಾಗಿದೆ ಎಂದರು. https://ainlivenews.com/a-kannada-song-is-playing-in-ayodhya/ ರಾಜ್ಯದಲ್ಲಿ ಕಾಂತರಾಜ ವರದಿ ಜಾರಿಯಾಗಬೇಕು. ಆದರೆ ಇದಕ್ಕೆ ಮುಂದುವರೆದ ಜಾತಿಗಳು ಹಿಂದೇಟು ಹಾಕುತ್ತಿರುವುದರಿಂದ ನಾಡಿನ ಅಭಿವೃದ್ಧಿಗೆ ದಕ್ಕೆಯಾಗುತ್ತದೆ. ಕಾಂತರಾಜ್ ವರದಿಯ ಬಗ್ಗೆ ಬಿಜೆಪಿ ವಿರೋಧ ಪಕ್ಷ ನಾಯಕರಾದ ಆರ್.ಅಶೋಕ್ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜೇಯೇಂದ್ರ ಈ ಇಬ್ಬರಿಗೆ ಯಾವುದೇ ಮಾಹಿತಿ ಇಲ್ಲ. ಸುಮ್ಮನೆ ಏನೇನೋ ಮಾತನಾಡುತ್ತಿದ್ದಾರೆ. ಈ ಜಾತಿಗಣತಿಯನ್ನು ಯಾರು ನೋಡಿದ್ದೀರಾ? ಈ ಹಿಂದೆ ಹಾವನೂರು ವರದಿ ಬಂದಾಗಲೂ ಇದೇ ರೀತಿ ವಿರೋಧವಾಗಿತ್ತು. ಆದರೆ ಅದು ಜಾರಿಯಾಯಿತು. ಅದರಿಂದ ಸಿಎಂ ಸಿದ್ದರಾಮಯ್ಯ ಅವರು…