ಗದಗ: ಸರ್ಕಾರಿ ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ, ಇಬ್ಬರು ಸಾವನ್ನಪ್ಪಿ, 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜಿಲ್ಲೆ ಮುಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ನಡೆದಿದೆ. ಬಸ್‌ನಲ್ಲಿದ್ದ ಮಹಿಳಾ ಪ್ರಯಾಣಕಿ, ಲಾರಿ ಚಾಲಕ ಮೃತಪಟ್ಟಿದ್ದು, ಗಾಯಾಳುಗಳನ್ನು ಜಿಮ್ಸ್ ಆಸ್ಪತ್ರೆ ಹಾಗೂ ಕೊಪ್ಪಳ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
Author: AIN Author
ರಾಯಚೂರು: ಮಹಿಳೆ ವಿಚಾರದಲ್ಲಿ ಚಾಡಿ ಹೇಳಿದ ಆರೋಪಕ್ಕೆ ವ್ಯಕ್ತಿಯನ್ನ ಕಂಬಕ್ಕೆ ಕಟ್ಟಿ ಚಪ್ಪಲಿಯಿಂದ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಚಿಕ್ಕಬೆರಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅದೇ ಗ್ರಾಮದ ಮಹಿಳೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ ಎಂದು ಆರೋಪಿಸಿ ಗುಂಪು ವ್ಯಕ್ತಿ ಮೇಲೆ ಹಲ್ಲೆ ನಡೆಸಿದೆ.ಸಂತ್ರಸ್ತೆ ತನ್ನನ್ನು ಬಿಡುವಂತೆ ದಾಳಿಕೋರರಲ್ಲಿ ಮನವಿ ಮಾಡಿದರೂ, ಆರೋಪಿಗಳು ಆತನನ್ನು ಹಗ್ಗದಿಂದ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ. ಈ ಘಟನೆ ಜನವರಿ 20ರಂದು ನಡೆದಿದೆ. ಆತನ ಪತ್ನಿ ನಾಗಮ್ಮ ರಕ್ಷಿಸಲು ಯತ್ನಿಸಿದಾಗ ಆಕೆಯ ಮೇಲೂ ಚಪ್ಪಲಿ, ದೊಣ್ಣೆಗಳಿಂದ ಥಳಿಸಿ, ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ನಿಂಗಪ್ಪ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಚಿಕಿತ್ಸೆಗಾಗಿ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಈ ಘಟನೆ ಸಂಬಂಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ: ಸೆಂಟ್ರಲ್ ಇಕ್ಯುಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿದ್ದ 35 ಲಕ್ಷ ರೂಪಾಯಿ ಮೌಲ್ಯದ 210 ಮೊಬೈಲ್ ಸೇರಿದಂತೆ ಗದಗ ಜಿಲ್ಲೆಯ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ವಿವಿಧ ವಸ್ತುಗಳನ್ನ ಮೂಲ ವಾರಸುದಾರರಿಗೆ ಹಿಂತಿರುಗಿಸಲಾಯ್ತು. ಗದಗ ಎಸ್ ಪಿ ಕಚೇರಿ ಆವರಣದಲ್ಲಿ ಆಯೋಜನೆಗೊಂಡಿದ್ದ ಸ್ವತ್ತು ಮರಳಿಸುವ ಕಾರ್ಯಕ್ರಮದಲ್ಲಿ ಎಡಿಜಿಪಿ ಎಸ್ ಮುರುಗನ್ ಅವರ ಸಮ್ಮುಖದಲ್ಲಿ ಮೂಲ ಮಾಲೀಕರಿಗೆ ವಸ್ತುಗಳನ್ನ ಹಸ್ತಾಂತರಿಸಲಾಯ್ತು. ಜಿಲ್ಲಾ ಪ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಮೊಬೈಲ್, ಮುಂಡರಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಮೂರು ಟ್ರ್ಯಾಕ್ಟರ್ ಟ್ರೇಲರ್, ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ 10 ಬೈಕ್ ಗಳು, ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಚಿನ್ನದ ಮಾಂಗಲ್ಯ, ಬೆಳ್ಳಿ ಮೂರ್ತಿಯನ್ನ ಮಾಲಿಕರಿಗೆ ಹಿಂತಿರುಗಿಸಲಾಯ್ತು. ಒಟ್ಟು 45 ಲಕ್ಷ ರೂಪಾಯಿ ಮೌಲ್ಯದ ವಿವಿಧ ವಸ್ತುಗಳನ್ನ ಮರಳಿಸಲಾಯ್ತು. ಸ್ವತ್ತು ಹಿಂತಿರುಗಿಸುವ ಕಾರ್ಯಕ್ರಮದಲ್ಲಿ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್, ಎಸ್ಪಿ ಬಿ ಎಸ್ ನೇಮಗೌಡ, ಎಎಸ್ ಪಿ ಎಂಬಿ ಸಂಕದ್ ಉಪಸ್ಥಿತರಿದ್ದರು. ಈ…
ಚಾಮರಾಜನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಗ್ರಾಮಪಂಚಾಯ್ತಿ ನೌಕರರು ಪ್ರತಿಭಟನೆ ನಡೆಸಿದರು. ಚಾಮರಾಜನಗರ ಜಿಲ್ಲಾಡಳಿತ ಭವನದ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರು, ಗ್ರಾಮಪಂಚಾಯ್ತಿ ನೌಕರರಿಗೆ ಕನಿಷ್ಟ ವೇತನ ನೀಡಬೇಕು, ಕನಿಷ್ಟ ಪಿಂಷಣಿ ನಿಗದಿಗೊಳಿಸಬೇಕು, ತೀವ್ರವಾದ ಅನಾರೋಗ್ಯಕ್ಕೆ ತುತ್ತಾಷ ನೌಕರರಿಗೆ ಆಸ್ಪತ್ರೆ ವೆಚ್ಚ ಸೇರಿದಂತೆ ವಿವಿಧ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿದರು.
ಕೋಲಾರ: ನರೇಂದ್ರ ಮೋದಿ ಉಪವಾಸ ಇದ್ದರ ಇಲ್ಲವಾ ಅಂತ ನಾನು ನೋಡಿದ್ದಿನಾ ಇಲ್ಲ ನೀವು ನೋಡಿದ್ದಿರ ಯಾರು ನೋಡಿಲ್ಲ ಜನರು ಮಾತಾಡುವುದನ್ನು ನಾವು ಕೇಳಿದ್ದೆವೆ ಎಂದು ಶಾಸಕ ಡಾ. ಕೊತ್ತೂರು ಮಂಜುನಾಥ್ ಅವ್ರು ಹೇಳಿದ್ರು. ಕೋಲಾರ ತಾಲೂಕಿನ ವೇಮಗಲ್ ಪಟ್ಟಣ ಪಂಚಾಯಿತಿಯಲ್ಲಿ ಇಂದಿರಾ ಕ್ಯಾಂಟೀನ್ ಗೆ ಗುದ್ದಲಿ ಪೂಜೆ ನೇರವೆರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ರು, ಮೋದಿಯವರು ಉಪವಾಸ ಇದ್ದರ ಇಲ್ಲವಾ ಅಂತ ಜನ ಸುಮ್ಮನೆ ಇರಬೇಕು ನಮ್ಮ ಕೆಲಸ ಏನು ನಮ್ಮ ಅಭಿವೃದ್ಧಿ ಏನು ಅಂತಂದನ್ನು ಮೊದಲು ತಿಳಿದುಕೊಳ್ಳ ಬೇಕು ಅದು ಬಿಟ್ಟು ಬೇರೆಯವರು ಏನು ಮಾಡುತ್ತಿದ್ದಾರೆ ಎಂದು ಮಾತನಾಡಬಾರದು ಬಾಯಿ ಮುಚ್ಷಿಕೊಂಡು ಸುಮ್ಮನೆ ಇರಬೇಕು ಯಾರ ಬಗ್ಗೆಯು ಸಹ ಕಮೆಂಟ್ ಗಳನ್ನು ಮಾಡಬಾರದು ಎಂದು ಹೇಳಿದ್ರು. ನನ್ನನ್ನು ಓವರ್ ಟೇಕ್ ಮಾಡುವುದಕ್ಕೆ ಯಾರಿಂದಲು ಸಹ ಸಾಧ್ಯವಿಲ್ಲ ನಾನು ಜನರಿಗೆ ಬೆಳಕಾಗುತ್ತೆನೆ ಬೆಂಕಿಯಾಗುವುದಿಲ್ಲ ನಾನು ಹೊಸದಾಗಿ ಎಂಎಲ್ ಎ ಹಾಗಿಲ್ಲ ನಾನು ಚಿಕ್ಕ ಮಗು ಸಹ ಅಲ್ಲ 20 ವರ್ಷಗಳಿಂದ 4…
ಕಲಬುರಗಿ: ನೌಕರರ ಕಾರ್ಯವೈಖರಿ ತಿಳಿಯಲು ಮುಂದಾಗಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ ಇವತ್ತು ಕಲಬುರಗಿಯ ತಹಸೀಲ್ ಕಚೇರಿಗೆ ದಿಢೀರ್ ಭೇಟಿ ಕೊಟ್ಟರು.. ಏಕಾಏಕಿ ಆಫೀಸಿಗೆ ಎಂಟ್ರಿಕೊಟ್ಟ ಸಚಿವರನ್ನ ನೋಡಿ ಕಚೇರಿ ಸಿಬ್ಬಂದಿ ಒಮ್ಮೆಲೇ ಶಾಕ್ ಆದ್ರು.. ಅಷ್ಟೇಅಲ್ಲ ಕಡತಗಳನ್ನ ಪರಿಶೀಲಿಸಿ ಕಾರ್ಯವೈಖರಿ ವಿರುದ್ಧ ಸಚಿವರು ಗರಂ ಆದ್ರು..ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿದ ವೇಳೆ ಸಿಬ್ಬಂದಿಗಳು ತಬ್ಬಿಬ್ಬಾದ್ರು.ನಂತ್ರ ಹೊರಬಂದ ಸಚಿವರು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದ್ರು..
ಬೆಂಗಳೂರು : ಟಿಪ್ಪು ಗೋವಿಂದ.. ಇವಾಗ ಗಟ್ಟಿ ಉಳಿಯುವುದು ರಾಮನೇ ಅಂತ ಸಿಎಂ ಸಿದ್ದರಾಮಯ್ಯರಿಗೆ ಅರ್ಥವಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕುಟುಕಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಷ್ಟು ದಿನ ಜೈ ಟಿಪ್ಪು ಸುಲ್ತಾನ್ ಎಂದವರ ಬಾಯಲ್ಲಿ ಜೈ ಶ್ರೀರಾಮ್ ಅಂತ ಘೋಷಣೆ ಬಂದಿದೆ. ಇದು ಆಶ್ಚರ್ಯ ಹಾಗೂ ಅದ್ಭುತ ಎಂದು ಚಾಟಿ ಬೀಸಿದರು. ಲೋಕಸಭೆಯಲ್ಲಿ ಒಂದು ಸೀಟು ಉಳಿಸಲು ರಾಮನಿಗೆ ಜೈ ಅನ್ತಿದ್ದಾರೆ. ಟಿಪ್ಪುವನ್ನು ಎಲ್ಲಿ ಬಿಟ್ಟಿರಿ, ಟಿಪ್ಪು ಕಥೆ ಏನಾಗಬೇಕು. ಟಿಪ್ಪು ಗೋವಿಂದ ಇವಾಗ ಗಟ್ಟಿ ಉಳಿಯುವುದು ರಾಮನೇಎಂದು ಸಿದ್ದರಾಮಯ್ಯಗೆ ಅರ್ಥವಾಗಿದೆ. ಇವಾಗ ಅಯೋಧ್ಯೆ ರಾಮಮಂದಿರಕ್ಕೆ ಹೋಗ್ತೀನಿ ಅಂತಿದ್ದಾರೆ ಎಂದು ಛೇಡಿಸಿದರು. ಹಿಂದೆ ಇದೊಂದು ವಿವಾದಿತ ಸ್ಥಳ, ಅಲ್ಲಿಗೆ ಹೋಗಲ್ಲ ಎಂದಿದ್ದರು. ನ್ಯಾಯಾಲಯದ ಆದೇಶ ಆಗಿದ್ದರೂ ಅದು ವಿವಾದಿತ ಸ್ಥಳ ಎಂದಿದ್ದರು. ಇವಾಗ ದೇಶದಲ್ಲಿ ರಾಮ ರಾಮ ಎಂದು ಜನ ಪರಿವರ್ತನೆ ಆದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಕೂಡಾ ಪರಿವರ್ತನೆ ಆಗಿದ್ದಾರೆ. ಪಾರ್ಲಿಮೆಂಟ್ ಚುನಾವಣೆಯ ಒತ್ತಡದಿಂದ ಅವರು…
ರಷ್ಯಾ: 65 ಮಂದಿ ಯುದ್ಧ ಕೈದಿಗಳನ್ನು ಸಾಗಿಸುತ್ತಿದ್ದ ರಷ್ಯಾದ ಎಲ್-76 ಮಿಲಿಟರಿ ವಿಮಾನವು ರಷ್ಯಾದ ಬೆಲ್ಗೊರೊಡ್ ಪ್ರಾಂತ್ಯದಲ್ಲಿ ಉಕ್ರೇನ್ ಗಡಿ ಸಮೀಪ ಪತನಗೊಂಡಿದೆ. ಹೌದು ರಷ್ಯಾದ ಮಿಲಿಟರಿ ವಿಮಾನ ಉಕ್ರೇನ್ನಲ್ಲಿ ಪತನಗೊಂಡಿದೆ. ರಷ್ಯಾದ ಇಲ್ಯುಶಿನ್ -76 ಮಿಲಿಟರಿ ವಿಮಾನವು ಉಕ್ರೇನ್ನ ಗಡಿಯ ದಕ್ಷಿಣ ಬೆಲ್ಗೊರೊಡ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಹೇಳಲಾಗಿದೆ. ಇನ್ನು ಈ ಘಟನೆಯಲ್ಲಿ 65 ಜನ ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ರಿಯಾ ನೊವೊಸ್ಟಿ ಸುದ್ದಿ ಸಂಸ್ಥೆ ವರದಿ ಮಾಡಿರುವ ಪ್ರಕಾರ ವಿಮಾನ ದೊಳಗಿದ್ದ ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ಉಕ್ರೇನ್ ವಶಪಡಿಸಿಕೊಂಡಿದೆ ಎಂದು ಹೇಳಲಾಗಿದೆ. ಇನ್ನು ಈ ಅಪಘಾತದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರಷ್ಯಾ ಅಧಿಕಾರಿಗಳು ಹೇಳಿದ್ದಾರೆ. https://ainlivenews.com/peanut-is-good-for-health-but-if-people-with-this-problem-eat-it-there-is-no-danger/ ಇದನ್ನು ತನಿಖೆ ಮಾಡಲಾಗುವುದು ವಿಶೇಷ ಮಿಲಿಟರಿ ಆಯೋಗವನ್ನು ರಚನೆ ಮಾಡಲಾಗಿದೆ. ಬೆಲ್ಗೊರೊಡ್ ಪ್ರಾದೇಶಿಕ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೋವ್ ಅವರು ಈ ಬಗ್ಗೆ ವರದಿಯನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ. ವಿಮಾನ ಪತನಗೊಂಡಿರುವ ಬಗ್ಗೆ…
ಬೆಂಗಳೂರು : ಸಿದ್ದರಾಮಯ್ಯ ಹೆಸರಲ್ಲಿ ರಾಮ, ತಮ್ಮ ಹೆಸರಲ್ಲಿ ಶಿವ ಇದ್ದಾನೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಟಕ್ಕರ್ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನೀವು ರಾಮಭಕ್ತರಾಗಿದ್ರೆ ಆಂಜನೇಯ ರೀತಿ ಎದೆಯನ್ನು ಸೀಳಿ ತೋರಿಸಿ. ಎದೆ ಬಗೆದು ತೋರಿಸಲಿ ನೋಡೋಣ ಎಂದು ಕುಟುಕಿದ್ದಾರೆ. ಹಾಗಿದ್ರೆ ಯಾಕೆ ಭಯ, ಆತಂಕ ಯಾಕೆ ಪಡ್ತಿದ್ದಾರೆ. ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ನೋಡಿಕೊಳ್ಳೋದ್ಯಾಕೆ? ದುರಹಂಕಾರದ ಮಾತಿನಿಂದ ಎಲ್ಲರ ಭಾವನಗೆಗಳಿಗೆ ಧಕ್ಕೆ ತರುತ್ತಿದ್ದೀರಿ. ಸಚಿವರ ಬಾಯಿ ಮುಚ್ಚಿಸಲು ನಿಮ್ಮ ಕೈಲಿ ಆಗುತ್ತಿಲ್ಲ. ನಿಮ್ಮ ಬಾಯಿಗಳೇ ಹೊಲಸಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ದೊಣ್ಣೆ ಹಿಡಿಯೋ ಸಂಸ್ಕೃತಿ ಕಾಂಗ್ರೆಸ್ಸಿಗರದ್ದು ರಾಮಭಕ್ತ ಅಂತ ಹೇಳಿಕೊಳ್ಳೋಕೆ ಹೇಗೆ ಬಾಯಿ ಬರುತ್ತೆ? ನೀವು ರಾಮ ಭಕ್ತರಾದ್ರೆ ನಮಗೆ ಬಹಳ ಸಂತೋಷ. ಸಚಿವ ಕೆ.ಎನ್. ರಾಜಣ್ಣ ದಿನಕ್ಕೊಂದು ಹೇಳಿಕೆ ಕೊಡ್ತಾರೆ, ಅವರ ಬಗ್ಗೆ ಏನ್ ಹೇಳೋಣ. ದೊಣ್ಣೆ ಹಿಡಿಯೋ ಸಂಸ್ಕೃತಿ ಕಾಂಗ್ರೆಸ್ ನವರದ್ದು ಎಂದು ಅಶ್ವತ್ಥ ನಾರಾಯಣ ಕಿಡಿಕಾರಿದ್ದಾರೆ.
ಬೆಂಗಳೂರು: ಟ್ರಾಫಿಕ್ ಜಾಮ್, ವಾಯುಮಾಲಿನ್ಯ, ಮಿತಿಮೀರಿದ ಜನಸಂಖ್ಯೆಯ ನಡುವೆ ಸಿಲಿಕಾನ್ ಸಿಟಿ ಬೆಂಗಳೂರು ಹೊಸ ದಾಖಲೆಯೊಂದನ್ನ ಮಾಡಿದೆ. ಆದರೆ ದೆಹಲಿಯನ್ನೇ ಹಿಂದಿಕ್ಕೆ ಮಾಡಿರುವ ಈ ಸಾಧನೆ ಖುಷಿಯ ಬದಲು ಆತಂಕಕ್ಕೆ ಕಾಣವಾಗಿದೆ. ರಾಜ್ಯ ಸರ್ಕಾರದ ವಿಫಲತೆಯು ಎದ್ದು ಕಾಣ್ತಿದೆ. ಹಾಗಾದ್ರೆ ಆ ರೆಕಾರ್ಡ ಏನೂ ಅಂತೀರಾ ಈ ಸ್ಟೋರಿ ನೋಡಿ. ಐಟಿ-ಸಿಟಿ, ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಇಡೀ ವಾರ್ಡ್ ಗೆ ಫೇವಸ್..ಕಿಲೋ ಮೀಟರ್ ಗಟ್ಟಲೇ ಜಾಮ್..ಗಟ್ಟೆಗಟ್ಟಲೇ ಟ್ರಾಫಿಕ್ ಗೆ ರಾಜಧಾನಿಯ ಜನ ಹೈರಾಣಗಿದ್ದಾರೆ. ಕಾರು-ಬೈಕ್ ಬಸ್ ಗಳು ಮಾತ್ರವಲ್ಲದೇ ಆ್ಯಂಬುಲೆನ್ಸ್ ಗಳು ಜಾಮ್ ನಲ್ಲಿ ಸಿಲುಕಿ ರೋಗಿಗಳು ಪರದಾಡ್ತಿದ್ದಾರೆ. ಈ ಗೋಳಾಟದ ನಡುವೆ ರಾಜ್ಯ ರಾಜಧಾನಿ ಅನಗತ್ಯವಾಗಿ ಹೊಸದಾಖಲೆ ಸೇರಿಸಿಕೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿರುವ ವಾಹನಗಳ ಸಂಖ್ಯೆ ಆತಂಕ ಮೂಡಿಸಿದೆ. ಕಾರುಗಳ ಸಂಖ್ಯೆಯಲ್ಲಿ ದೆಹಲಿಯನ್ನೂ ಸರಿಗಟ್ಟಿ ಮುನ್ನುಗ್ತಿದೆ. ಹೌದು.. ಬೆಂಗಳೂರು ಟ್ರಾಫಿನಲ್ಲಿಯೂ ವಿಶ್ವದ ಎರಡನೇ ನಗರ ಎಂಬ ಪಟ್ಟ ಅಲಂಕರಿಸಿಕೊಂಡಿದೆ. ಜೊತೆಗೆ ಕಾರುಗಳ ಸಂಖ್ಯೆಯಲ್ಲಿ ರಾಷ್ಟ್ರ ರಾಜಧಾನಿಯನ್ನ…