ಮಂಗಳೂರು:- ನಗರದ ರಾವ್ ಆಂಡ್ ರಾವ್ ಸರ್ಕಲ್ ಬಳಿ ಪಾರ್ಕಿಂಗ್ ವಿಚಾರಕ್ಕೆ ಸಹೋದರರಿಬ್ಬರ ಮೇಲೆ ಹಲ್ಲೆ ಮಾಡಿದ್ದು, ತೀವೃ ಗಾಯಗಳಾಗಿರುವಂತಹ ಘಟನೆ ಜರುಗಿದೆ ಫಾರೂಕ್ ಮತ್ತು ಇತರೆ ಎಂಟು ಮಂದಿಯಿಂದ ಉಲ್ಲಾಸ್ ರಾವ್, ಹರ್ಷಿತ್ ರಾವ್ ಸಹೋದರರ ಮೇಲೆ ಹಲ್ಲೆ ನಡೆಸಿದ ಆರೋಪ ಮಾಡಲಾಗಿದೆ. ಎಂಪಾಯರ್ ಹೊಟೇಲ್ಗೆ ಊಟಕ್ಕೆಂದು ಸಹೋದರರು ಹೋಗಿದ್ದಾರೆ. ಹೋಟೆಲ್ ಮಾಲೀಕನ ತಮ್ಮ ಹಾಗೂ ಇತರರಿಂದ ಕಲ್ಲು, ಕೈಯಿಂದ ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಸಹೋದರಿಬ್ಬರ ತಲೆಗೆ, ತುಟಿಗೆ ಗಾಯಗಳಾಗಿದ್ದು, ಘಟನೆ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Author: AIN Author
ಗದಗ:- ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಹೊರವಲಯದಲ್ಲಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಚಕ್ರ ಏಕಾಏಕಿ ಕಳಚಿ ಬಿದ್ದ ಘಟನೆ ಜರುಗಿದೆ.. ಲಕ್ಷ್ಮೇಶ್ವರದಿಂದ ಮಾಗಡಿ ಮಾರ್ಗವಾಗಿ ಶಿರಹಟ್ಟಿಗೆ ಹೊರಟ್ಟಿದ್ದ ವೇಳೆ ಬಸ್ನ ಎಕ್ಸೆಲ್ ಕಟ್ಟಾಗಿ ಚಕ್ರ ಕಳಚಿ ಬಿದ್ದಿದೆ. ಈ ವೇಳೆ ಬಸ್ನ ಪ್ರಯಾಣಿಕರು ಕಂಗಾಲಾಗಿದ್ದು, ಕೂಡಲೇ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಬಚಾವ್ ಆಗಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಪಕ್ಷದ ವರ್ತನೆಯಿಂದ ಬೇಸತ್ತು ಇಂಡಿ ಒಕ್ಕೂಟದ ಪಕ್ಷಗಳು ದೂರವಾಗುತ್ತಿದ್ದು, ಮಮತಾ ಬ್ಯಾನರ್ಜಿ ಹೊರಗೆ ಹೋಗಿದ್ದು, ಶರತ್ ಪವ್ವಾರ್, ನಿತೀಶ್ ಕುಮಾರ್ ಕೂಡ ಒಂದು ಹೆಜ್ಜೆ ಹೊರಗಿಟ್ಟಿದ್ದು, ಇಂಡಿಯಾ ಒಕ್ಕೂಟ ಛಿದ್ರವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೈತ್ರಿಯಿಂದ ಹೊರಗೆ ಬಂದಿದ್ದಾರೆ. ಶರತ್ ಪವಾರ್ ಕೂಡ ಹೊರ ಬರಲಿದ್ದಾರೆ. ಬಿಹಾರ ಸಿಎಂ ನಿತಿಶ್ ಕುಮಾರ್ ಕೂಡ ಒಂದು ಹೆಜ್ಜೆ ಹೊರಗೆ ಇಟ್ಟಿದ್ದಾರೆ. ಇಂಡಿ ಒಕ್ಕೂಟ ಮುಂದಿನ ದಿನಗಳಲ್ಲಿ ಉಳಿಯುವುದಿಲ್ಲ. ಕಾಂಗ್ರೆಸ್ ನವರ ಕಟಾದಿಂದ ಅವರು ಹೊರಗೆ ಬರುತ್ತಿದ್ದಾರೆ. ಮೊದಿಯವರು 3ನೇ ಬಾರಿಗೆ ಪ್ರಧಾನಿಯಾದ ಮೇಲೆ ಒಕ್ಕೂಟ ಇರುವುದಿಲ್ಲ. ಮಮತಾ ಬ್ಯಾನರ್ಜಿಯವರಿಗೆ ಭ್ರಮನಿರಸನ ಆಗಿದೆ ಎಂದು ಹೇಳಿದರು. ಹೈಕಮಾಂಡ್ ನಿರ್ಧಾರಕ್ಕೆ ಬದ್ದ:- ಇದೇ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಗೆ ಕರೆ ತರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಗದೀಶ್…
ಗದಗ:- ಲಾರಿ ಹಾಗೂ ಬಸ್ ನಡುವೆ ಡಿಕ್ಕಿಯಾಗಿ ಭೀಕರ ಅಪಘಾತವಾಗಿದ್ದು, ಇಬ್ಬರು ಸಾವಿಗೀಡಾದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಕೇರಿ ಬಳಿ ಜರುಗಿದೆ. ಘಟನೆಯಲ್ಲಿ ಸುಮಾರು 10 ಜನರಿಗೆ ಗಾಯವಾಗಿದೆ. ಕೊಪ್ಪಳದಿಂದ ಗದಗ ಬರುತ್ತಿದ್ದ ಬಸ್ ಹಾಗೂ ಹುಬ್ಬಳ್ಳಿಯಿಂದ ಹೊಸಪೇಟೆಗೆ ಹೊರಟಿದ್ದ ಲಾರಿ ನಡುವೆ ಡಿಕ್ಕಿಯಾಗಿದೆ. ಲಾರಿ ಚಾಲಕ ಹಾಗೂ ಬಸ್‌ನಲ್ಲಿ ಮಹಿಳೆ ಸಾವು ಸ್ಥಳದಲ್ಲೇ ಸಾವಾಗಿದೆ. ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಂಪ್ಲಿ :- ನಗರದಲ್ಲಿ ದಿನದಿಂದ ದಿನಕ್ಕೆ ಬಿಡಾಡಿ ದನಕರುಗಳ ಸಂಖ್ಯೆಗಳು ಏರಿಕೆಯಾಗಿ ಬಹುದೊಡ್ಡ ಸಮಸ್ಯೆಯಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲೆ ಬಿಡಾಡಿ ದನಕರುಗಳು ಅಡ್ಡಾದಿಡ್ಡಿಯಾಗಿ ಓಡಾಡುತ್ತಿರುವುದು ಮಾತ್ರವಲ್ಲದೇ ನಡುರಸ್ತೆಯಲ್ಲೆ ಮಲಗುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗತೊಡಗಿದೆ. ನಗರದಲ್ಲಿ ಏರುತ್ತಿರುವ ಬಿಡಾಡಿ ದನಕರುಗಳನ್ನ ಹಿಡಿದು ಕಂಪ್ಲಿ ತಾಲೂಕಿನ ದುಸಗಿಯಲ್ಲಿರುವ ಗೋಶಾಲೆಗೆ ಕಳುಹಿಸುವ ಬಗ್ಗೆ ಪುರಸಭೆ ಚಿಂತನೆಯನ್ನು ನಡೆಸಿತ್ತು. ನಗರ ನಗರದ ಪುರಸಭೆ ಚಿಂತನೆಯನ್ನು ಮತ್ತೆ ಮುನ್ನಲೆಗೆ ತರುವ ನಿಟ್ಟಿನಲ್ಲಿ ಬಿಡಾಡಿ ದನಕರುಗಳು ನಡು ರಸ್ತೆಯಲ್ಲಿ ಮಲಗಿರಬಹುದೇ ಎಂಬ ಚರ್ಚೆಗೆ ಕಾರಣವಾದಂತಿದೆ ಬಿಡಾಡಿ ದನಕರುಗಳು ಮಲಗಿರುವ ದೃಶ್ಯ. ಬಿಡಾಡಿ ದನ ಕರುಗಳ ನಿಯಂತ್ರಣಕ್ಕೆ ಇನ್ನಾದರೂ ನಗರಸಭೆ ಸೇರಿದಂತೆ ಸಂಬಂಧಪಟ್ಟ ಇಲಾಖೆಯವರು ತ್ವರಿತ ಕ್ರಮವನ್ನು ಕೈಗೊಳ್ಳಬೇಕಾಗಿದೆ.
ಬಿಗ್ ಬಾಸ್ ಸೀಸನ್ 10ರ ಫೈನಲ್ ಗೆ ಆಯ್ಕೆಯಾಗಿರುವ ವರ್ತೂರುಸಂತೋಷ್ ಗೆದ್ದು ಬರಲಿ ಎಂದು ಹಾರೈಸಿ ವರ್ತೂರು ಸಂತೋಷ್ ಅವರ ನೂರಾರು ಅಭಿಮಾನಿಗಳು ಮಹದೇವಪುರ ಕ್ಷೇತ್ರದ ಬಳಗೆರೆಯಿಂದ ವಿವಿಧೆಡೆ ಬೈಕ್ ರ್ಯಾಲಿ ಮಾಡಿದರು. ವರ್ತೂರಿನಲ್ಲಿ ಸಂತೋಷ್ ಅಭಿಮಾನಿಗಳು ಪಟಾಕಿ ಸಿಡಿಸಿ, ಬೈಕಗಳ ಮೂಲಕ ವರ್ತೂರು ಸಂತೋಷ್ ಅವರ ಪರವಾಗಿ ಪ್ರಚಾರ ನಡೆಸಿ ಮನೆಮಗನ ಗೆಲುವಿಗೆ ಮತಚಲಾಯಿಸುವಂತೆ,ಸಂತೋಷ್ ಭಾವಚಿತ್ರ ಹಾಗೂ ಹಳ್ಳಿಕಾರ್ ಎತ್ತುಗಳ ಮೆರವಣಿಗೆ ಮಾಡುವ ಮೂಲಕ ಗೆದ್ದು ಬಾ ವರ್ತೂರ್ ಎಂದು ಆಶಯ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಕುಪ್ಪಿ ಮಂಜುನಾಥ ಅವರು ಹಳ್ಳಿಕಾರ್ ತಳಿಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹಳ್ಳಿಕಾರ್ ಒಡೆಯ ಅವರ ಬಿಗ್ ಬಾಸ್ ಗೆಲುವಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ರೈತರ ಪ್ರತಿನಿಧಿಯಾಗಿ ಬಿಗ್ ಬಾಸ್ ಗೆ ಆಯ್ಕೆಯಾಗಿರುವ ವರ್ತೂರು ಸಂತೋಷ್ ಅವರ ಕಾರ್ಯ ಮಹತ್ವದಾಗಿದ್ದು,ಶೋ ಕೊನೆಯ ವರೆಗೆ ಹಳ್ಳಿಕಾರ್ ತಳಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು. ವರ್ತೂರು ಸಂತೋಷ್ ಸಹೋದರರಾದ ರಘು ಅವರು…
ಕಲಬುರ್ಗಿ:- ಭರ್ತಿ ತುಂಬಿದ್ದ ಮೊಬೈಲ್ ಅಂಗಡಿಗೆ ನಡುರಾತ್ರಿ ಎಂಟ್ರಿ ಕೊಟ್ಟ ಖದೀಮ ಸ್ಮಾರ್ಟ್ ಫೋನ್ ಜೊತೆಗೆ ಹಣವನ್ನೂ ಇಗರಿಸಿದ ಘಟನೆ ಕಲಬುರಗಿಯ ಚಿತ್ತಾಪುರದಲ್ಲಿ ನಡೆದಿದೆ. ಯೋಗೀಶ್ ಎಂಬುವವರಿಗೆ ಸೇರಿದ ಅಂಗಡಿಗೆ ಶೆಟರ್ ಮುರಿದು ಕಳ್ಳತನ ಮಾಡಿದ್ದಾನೆ. ಖದೀಮ ವಿಪರ್ಯಾಸ ಅಂದ್ರೆ ಕಳ್ಳನ ಕೈ ಚಳಕ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಸ್ಥಳಕ್ಕೆ ಶ್ವಾಸ ದಳ ಸಮೇತ ಭೇಟಿ ಕೊಟ್ಟ ಪೋಲೀಸರು ತನಿಖೆ ಚುರುಕುಗೊಳಿಸಿದ್ದಾರೆ..
ನಿಮ್ಮ ಆರೋಗ್ಯವನ್ನು ಹೆಚ್ಚಿಸಲು ನೀವು ಆರೋಗ್ಯಕರ, ನೈಸರ್ಗಿಕ ಮಾರ್ಗವನ್ನು ಹುಡುಕುತ್ತಿದ್ದರೆ ನಿಮಗೆ ಬೆಳ್ಳುಳ್ಳಿಗಿಂತ ಹೆಚ್ಚಿನದು ಬೇಕಿಲ್ಲ. ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವುದರಿಂದ ಹಿಡಿದು ಮಧುಮೇಹವನ್ನು ನಿಯಂತ್ರಿಸುವವರೆಗೆ ಬೆಳ್ಳುಳ್ಳಿ, ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ಮಧುಮೇಹವನ್ನು ನಿಯಂತ್ರಿಸಿ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ವಿರೋಧಿಯಾಗಿ ಬೆಳ್ಳುಳ್ಳಿ ಕೆಲಸ ಮಾಡುತ್ತದೆ. ಹಾಗಂತ ಬೆಳ್ಳುಳ್ಳಿಯನ್ನು ತಿನ್ನಲು ಕೆಲವೊಂದು ಮಾರ್ಗಗಳಿವೆ. ಇದನ್ನು ನೀವು ಸೂಕ್ತ ರೀತಿಯಲ್ಲಿ ಅನುಸರಿಸಿದರೆ ಖಂಡಿತ ತೂಕ ಇಳಿಸಿಕೊಳ್ಳುವುದು ಕಷ್ಟದ ಮಾತೇನಲ್ಲ. ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ ಸೇವನೆ ಹಸಿ ಬೆಳ್ಳುಳ್ಳಿಯನ್ನು ಯಾವಾಗ ಮತ್ತು ಹೇಗೆ ತಿನ್ನಬೇಕು ಎಂದು ಬಹಳ ಜನ ಗೊಂದಲಕ್ಕೆ ಒಳಗಾಗುತ್ತಾರೆ. ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಆಗಿ ಹೃದಯದ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಅಲಿಸಿನ್ ಎಂಬ ಸಂಯುಕ್ತವು ಅದರ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುವ ಮತ್ತು ರಕ್ತವನ್ನು ತೆಳುಗೊಳಿಸುವ ಗುಣಲಕ್ಷಣಗಳಿಗೆ…
ಸೋಮಾರಿತನ ಹೋಗಲಾಡಿಸಲು..ತಲೆನೋವಿನಿಂದ ಮುಕ್ತಿ ಪಡೆಯಲು..ಮರು ಕ್ರಿಯಾಶೀಲರಾಗಲು ಕಾಫಿ ಬೇಕೇ ಬೇಕು. ಕಾಫಿಯನ್ನು ಮಿತವಾಗಿ ಸೇವಿಸಿದರೆ, ಅದು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಖಿನ್ನತೆ ಮತ್ತು ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಎಲ್ಲರೂ ಕಾಫಿ ಕುಡಿಯಬಾರದು ಎನ್ನುತ್ತಾರೆ ತಜ್ಞರು. ಕಾಫಿಯನ್ನು ಯಾರು ಕುಡಿಯಬಾರದು ಎಂಬುದನ್ನು ಈ ತಿಳಿಯೋಣ. ನಿದ್ರಾಹೀನತೆಯಿಂದ ಬಳಲುತ್ತಿರುವವರು ಕಾಫಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ತಜ್ಞರು ಹೇಳುತ್ತಾರೆ. ಕಾಶಿಯಲ್ಲಿರುವ ಕೆಫೀನ್ ಅಂಶವು ನಿಮ್ಮ ನಿದ್ರೆಯ ಚಕ್ರವನ್ನು ಅಡ್ಡಿಪಡಿಸುತ್ತದೆ. ಅಲ್ಲದೇ ಕೆಫೀನಿಂದ ಲವಲವಿಕೆಯಿಂದಿರಲು ಮತ್ತು ಸ್ವಲ್ಪ ನಿದ್ರೆಯ ನಂತರವೂ ನೀವು ಆರಾಮಾಗಿರುವಂತೆ ಮಾಡುತ್ತದೆ. ನಿಧಾನಗತಿಯ ನಿದ್ರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ಇದು ಮರುದಿನ ಉಲ್ಲಾಸಕರ ಭಾವನೆಯ ಪ್ರಮುಖ ಹಂತವಾಗಿದೆ. ನಮ್ಮ ಎಚ್ಚರದ ಸಮಯದಲ್ಲಿ ಮೆದುಳಿನಲ್ಲಿ ಉತ್ಪತ್ತಿಯಾಗುವ ನಿದ್ರೆಯನ್ನು ಉತ್ತೇಜಿಸುವ ರಾಸಾಯನಿಕವಾದ ಅಡೆನೊಸಿನ್ ಗ್ರಾಹಕಗಳನ್ನು ನಿರ್ಬಂಧಿಸುವ ಮೂಲಕ ಕೆಫೀನ್ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ನಿದ್ರಾಹೀನತೆ ಸಮಸ್ಯೆಯಿಂದ…
ವಿಜಯಪುರ: ಗುಮ್ಮಟನಗರಿಯಲ್ಲಿ ಮನೆಗಳ್ಳತನ ಪ್ರಕರಣದಲ್ಲಿ ನಾಲ್ವರು ಆರೋಪಗಳನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಋಷಿಕೇಶ ಸೋನವಾಣೆ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 12 ಲಕ್ಷ 17 ಸಾವಿರ ಮೌಲ್ಯದ 210 ಗ್ರಾಮ ತೂಕದ ಚಿನ್ನಾಭರಣ, 20 ಗ್ರಾಮ ಬೆಳ್ಳಿ, ಎಲ್ ಇ ಡಿ ಟಿವಿ, ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಇನ್ನೂ ಪ್ರಕರಣದಲ್ಲಿ ಆರೋಪಿಗಳಾದ ಜಮೀರ ಖಾನ್, ಅನ್ವರ ಶೇಖ್, ಆಸೀಫ್ ಹವಾಲ್ದಾರ್, ಸನ್ಮಾನ ಖಾನ ಬಂಧಿತ ಆರೋಪಿಗಳಾಗಿದ್ದು ಬಂಧಿತರು ನಗರದ ಮದೀನಾ ನಗರದಲ್ಲಿ 4 ಮನೆಗಳ್ಳತನ ಕೃತ್ಯಗಳನ್ನು ಮಾಡಿರುವ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೇ, ಮೂರು ಗಾಂಧಿಚೌಕ್ ಹಾಗೂ ಒಂದು ಜಲನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.