ಬೆಂಗಳೂರು:- ಆಂಬುಲೆನ್ಸ್ ಗಳ ಸುಗಮ ಸಂಚಾರಕ್ಕೆ ಟ್ರಾಫಿಕ್ ಸಿಗ್ನಲ್ ಗಳ ಜೊತೆ ವೈರ್ ಲೆಸ್ ಸಂಪರ್ಕ, ಋತುಸ್ರಾವ ಮಹಿಳೆಯರ ಅನುಕೂಲಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಪಿಂಕ್ ಬೂತ್ ಸ್ಥಾಪನೆ, ಸಮಾರಂಭಗಳಲ್ಲಿ ಬಳಸಿದ ಹೂವು ಮತ್ತು ಆಹಾರ ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಸೇರಿ ಐಡಿಯಾಥಾನ್ ಸ್ಪರ್ಧೆಯ ಅತ್ಯುತ್ತಮ ಸಲಹೆಗಳನ್ನು ಜಾರಿ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಕಳೆದೊಂದು ತಿಂಗಳಿಂದ ನಡೆದ ಯುವ ನಾಯಕತ್ವ ಸಮ್ಮೇಳನ ಹಾಗೂ ಐಡಿಯಾಥಾನ್ ಸ್ಪರ್ಧೆಯ ಅಂತಿಮ ಸುತ್ತು ನಗರದಲ್ಲಿ ಶನಿವಾರ ನಡೆಯಿತು. ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು: ಬ್ರಾಂಡ್ ಬೆಂಗಳೂರು ಯೋಜನೆ ಮೂಲಕ ಬೆಂಗಳೂರಿನ ಸಮಸ್ಯೆಗಳಿಗೆ ಶಾಲಾ ಮಕ್ಕಳು ಈ ಐಡಿಯಾಥಾನ್ ಸ್ಪರ್ಧೆ ಮೂಲಕ ಉತ್ತಮ ಸಲಹೆಗಳನ್ನು ನೀಡಿದ್ದಾರೆ. ದೇಶದ ಬೆಳವಣಿಗೆಗೆ ನಿಮ್ಮ ಆಲೋಚನೆ, ನಾಯಕತ್ವ ಗುಣ ಅತ್ಯಗತ್ಯ. ಕೇವಲ ರಾಜಕಾರಣಿಗಳು ಮಾತ್ರ ನಾಯಕರಲ್ಲ. ನಿಮ್ಮಲ್ಲೂ ನಾಯಕತ್ವ ಗುಣ ಇವೆ. ನೀವು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ನಾಯಕತ್ವದ ಗುಣ…
Author: AIN Author
ಮುಂಬೈ:- ಹೃದಯಾಘಾತದಿಂದ ಸಂಗೀತದ ಮೇರು ಗಾಯಕಿ 92 ವರ್ಷದ ಡಾ.ಪ್ರಭಾ ಅತ್ರೆ ಅವರು ಇಂದು ನಿಧನರಾದರು. ಪ್ರಭಾ ಅವರು ಶನಿವಾರ ನಸುಕಿನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ದೀನನಾಥ ಮಂಗೇಶ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ, ಅವರು ನಿಧನರಾಗಿದ್ದಾರೆ ಎಂದು ಘೋಷಿಸಲಾಯಿತು. ಬಹುಮುಖಿ ವ್ಯಕ್ತಿತ್ವದ ಪ್ರಭಾ ಅವರು ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ದಶಕಗಳಿಂದ ಕಿರಾಣಾ ಘರಾಣಾ ಗಾಯನ ಶೈಲಿಯನ್ನು ಪ್ರತಿನಿಧಿಸಿದ್ದರು. 1932ರ ಸೆಪ್ಟೆಂಬರ್ 13ರಂದು ಜನಿಸಿದ್ದ ಪ್ರಭಾ ಅವರು ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲದೆ ಶಿಕ್ಷಣತಜ್ಞೆಯಾಗಿಯೂ ಹೆಸರಾಗಿದ್ದರು. ಕರ್ನಾಟಕದೊಂದಿಗೆ, ವಿಶೇಷವಾಗಿ ಹುಬ್ಬಳ್ಳಿ–ಧಾರವಾಡದೊಂದಿಗೆ ಅವರು ವಿಶೇಷ ನಂಟನ್ನು ಹೊಂದಿದ್ದರು.
ಬಳ್ಳಾರಿ: ನಗರದ ಕಪ್ಪಗಲ್ಲು ರಸ್ತೆಯಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಇಂದು ಬೆಳಗಿನಜಾವ ಕಳ್ಳರು ಸರಣಿಗಳ್ಳತ ನಡೆಸಿ ಸಾವಿರಾರು ರೂ ನಗದನ್ನು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ. ಈ ರಸ್ತೆಯಲ್ಲಿ ಮೆಡ್ ಪ್ಲಸ್ ನಲ್ಲಿ 24880 ರೂ, ಸಾಯಿ ಇಂದಿರಾ ಮೆಡಿಕಲ್ ಸ್ಟೋರ್ ನಲ್ಲಿ 8000 ರೂ, ಕನಕ ದುರ್ಗಮ್ಮ ಪ್ರಾವಿಷನ್ ಸ್ಟೋರ್ ನಲ್ಲಿ ಒಂದು ಸಾವಿರ ರೂ ಮತ್ತು ವಿಜಯ ರಾಮ ಸೂಪರ್ ಮಾರ್ಕೇಟ್ ನಲ್ಲಿ 17 ಸಾವಿರ ರೂ ನಗದು ದೋಚಿದ್ದಾರೆ. ಈ ಬಗ್ಗೆ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರು ಮುಖಕ್ಕೆ ವಾಸ್ಕ್ ಧರಿಸಿಕೊಂಡು, ಬ್ಯಾಟರಿ ಹಿಡಿದುಕೊಂಡು, ಮಳಿಗೆಯ ಷಟರ್ ನಿಂದ ಒಳಗೆ ನುಗ್ಗಿ, ಕ್ಯಾಸ್ ಕೌಂಟರ್ ತೆಗೆದು ಹಣ ಲಪಟಾಯಿಸಿದ್ದಾರೆ. ಮಳಿಗೆಗಳ ಷಟರ್ ಗಳನ್ನು ಹಾರೆಗಳಿಂದ ಮೀಟಿ ತೆಗೆಯಲಾಗಿದೆ ಇದೆಲ್ಲ ಸಿಸಿ ಕೆಮೆರಾಗಳಲ್ಲಿ ರೆಕಾರ್ಡ್ ಆಗಿದೆ. ಸ್ಥಳಕ್ಕೆ ಪೊಲೀಸರು ಬಂದು ಹೋಗಿದ್ದಾರೆ. ಕಳ್ಳರನ್ನು ಪತ್ತೆ ಹಚ್ಚಬೇಕಿದೆ.
ಬೆಂಗಳೂರು :- ನಗರ ಹೊರವಲಯ ನೆಲಮಂಗಲ ನಗರದ ಪುರಾಣ ಪ್ರಸಿದ್ಧ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳಿಂದ ಸಂಕ್ರಾಂತಿ ವಿಶೇಷವಾಗಿ ಸುಗ್ಗಿ ಸಂಭ್ರಮ ಅರ್ಥ ಪೂರ್ಣ ಕಾರ್ಯಕ್ರಮ ಆಚರಣೆ ಮಾಡಲಾಗಿದ್ದು. ಪವಾಡ ಶ್ರೀ ಬಸವಣ್ಣ ದೇವರ ಮಠದ ಶಿಕ್ಷಕರು ಹಾಗೂ ಸಾವಿರಾರು ವಿದ್ಯಾರ್ಥಿಗಳು ಸುಗ್ಗಿ ಸಂಭ್ರಮದಲ್ಲಿ ಪಾಲ್ಗೊಂಡು ಸುಗ್ಗಿ ಸಂಭ್ರಮದ ಕಲರವದಲ್ಲಿ ಸಂಭ್ರಮಿಸಿದ್ದಾರೆ. ಇನ್ನೂ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು. ಎತ್ತುಗಳಿಗೆ ಅಲಂಕಾರ, ಚಕ್ಕಡಿ ಗಳಿಗೆ ಅಲಂಕಾರ ,ಗೋವು ಪೂಜೆ, ಭೂಮಿ ಹಾಗೂ ಗಂಗಾ ಮಾತೆಗೆ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಲಾಗಿದೆ . ಇನ್ನೂ ಸಂಕ್ರಾಂತಿ ವಿಶೇಷ ಎಳ್ಳು ಬೆಲ್ಲ, ಬೇಯಿಸಿದ ಕಡಲೇಕಾಯಿ, ಅವರೇ ಕಾಯಿ ಹಾಗೂ ಕಬ್ಬುಗಳನ್ನು ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ವಿದ್ಯಾರ್ಥಿಗಳಿಗೆ ಹಂಚುತ್ತಾ ಸುಗ್ಗಿ ಸಂಭ್ರಮದಲ್ಲಿ ತಾವು ಮಕ್ಕಳಂತೆ ಸಂಭ್ರಮಿಸಿದ್ದು ವಿಶೇಷವಾಗಿತ್ತು. ಇನ್ನೂ ಸುಗ್ಗಿ ಸಂಭ್ರಮದ ವಿಶೇಷವಾಗಿ ತಯಾರಿಸಿದ ವಿಶೇಷ ಅಲಂಕಾರಗೊಂಡ ಚಕ್ಕಡಿಯಲ್ಲಿ ವಿದ್ಯಾರ್ಥಿಗಳು ಕುಳಿತು ಸುಗ್ಗಿ ಸಂಭ್ರಮವನ್ನು…
ಬೆಂಗಳೂರು:- ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿ ಮತ್ತು ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಹಿನ್ನೆಲೆ ಕಿಡಿಗೇಡಿಗಳ ವಿರುದ್ಧ FIR ದಾಖಲಾಗಿದೆ. ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದೆ. ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದು, ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ಕಾರ್ಯದರ್ಶಿ, ಕಾಂಗ್ರೆಸ್ ಮುಖಂಡ ಸಂಜಯ್ ಯಾದವ್ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ‘ಕೃತಿಕಾ ಕೃತಿ’ ಎಂಬ ಹೆಸರಿನ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿಯ ವಿರುದ್ಧ ಅಶ್ಲೀಲವಾಗಿ ನಿಂದಿಸಿ ಅವಹೇಳನ ಮಾಡಿದ್ದು, ಜೊತೆಗೆ ಗೌರವಕ್ಕೆ ಧಕ್ಕೆ ತರಲಾಗಿದೆ. ಹಾಗಾಗಿ ಈ ಪೋಸ್ಟ್‌ಗಳನ್ನು ಹಾಕಿದವರನ್ನು ಪತ್ತೆ ಹಚ್ಚಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹೈಗ್ರೌಂಡ್ಸ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು:- ಬ್ರ್ಯಾಂಡ್ ಬೆಂಗಳೂರು ನನ್ನ ಐಡಿಯ ಅಲ್ಲ ಎಂದು ಇನ್ಪೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಯುವ ನಾಯಕತ್ವ ಸಮ್ಮೇಳನದಲ್ಲಿ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಇದು ನನ್ನ ಐಡಿಯ ಅಂತಾ ಅಲ್ಲ. ಇಲ್ಲಿ ಮಕ್ಕಳ ಐಡಿಯಾ ಮುಖ್ಯವಾಗಿದೆ. ಊರಿಗೆ ಒಂದು ಹೆಸರು ಬರಬೇಕು. ಹೀಗಾಗಿ ಬೇರೆ ಬೇರೆ ಆಯಾಮಗಳಲ್ಲಿ ಹೆಸರು ಬರಬೇಕು ಎಂದರು. ಬ್ರ್ಯಾಂಡ್ ಬೆಂಗಳೂರು ಯೋಜನೆ ಕುರಿತ ಐಡಿಯಾಥಾನ್ ಕಾರ್ಯಕ್ರಮ ವಿಚಾರವಾಗಿ ಮಾತನಾಡಿದ ಅವರು, ಹೊಸದೇನಾದರೂ ಅಪೇಕ್ಷೆ ಮಾಡಬೇಕು. ಸ್ಪಷ್ವವಾದ ವಿಚಾರ ಬೇಕು. ನನಗೆ ಬಹಳ ಸಂತೋಷ ಆಗುತ್ತದೆ. ಈ ಕಾರ್ಯಕ್ರಮದಲ್ಲಿ ಹಲವು ಶಾಲೆಗಳ ಮಕ್ಕಳು ಭಾಗವಹಿಸಿದ್ದಾರೆ. ಈ ಕಾರ್ಯಕ್ರಮವನ್ನು ಮಾಡಲು ಎಲ್ಲಾ ಮಕ್ಕಳು ಕಷ್ಟಪಟ್ಟಿದ್ದಾರೆ. ಒಂದು ದಿನದಲ್ಲಿ ಮಾಡಲು ಸಾಧ್ಯವಿಲ್ಲ. ಬಹಳ ಸಂತೋಷ ಆಗಿದೆ. ಇಂತಹ ಕಾರ್ಯಕ್ರಮಗಳು ಬೇರೆಬೇರೆ ಊರುಗಳಲ್ಲೂ ಆಗಬೇಕು ಎಂದರು. ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ್ದ ಸುಧಾಮೂರ್ತಿ, ಬ್ರ್ಯಾಂಡ್ ಬೆಂಗಳೂರು ಅಂದರೆ ಕನ್ನಡ. ಇಂಗ್ಲೀಷ್ ಮಾತನಾಡಲು ಕನ್ನಡ ಬಿಡಬೇಡಿ. ಮಕ್ಕಳ ಮನಸ್ಸು…
ರಾಜಧಾನಿ ಬೆಂಗಳೂರಿನಲ್ಲಿ ಖಾಲಿ ಇರುವ ಹಲವು ಉದ್ಯೋಗಗಳ ಭರ್ತಿಗೆ ನಿಮ್ಹಾನ್ಸ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಜೂನಿಯರ್ ರಿಸರ್ಚ್ ಫೆಲೋ ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 13, 2024 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಇವತ್ತೇ ರೆಸ್ಯೂಮ್ ಕಳುಹಿಸಿ. ಶೈಕ್ಷಣಿಕ ಅರ್ಹತೆ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸ್ಪೀಚ್-ಲ್ಯಾಂಗ್ವೇಜ್ ಪ್ಯಾಥೋಲಜಿ ಮತ್ತು ಆಡಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ವಯೋಮಿತಿ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ವೇತನ: ಮಾಸಿಕ ₹ 31,000 ಉದ್ಯೋಗದ ಸ್ಥಳ: ಬೆಂಗಳೂರು ಆಯ್ಕೆ…
ಬೆಂಗಳೂರು:- ಯುವನಿಧಿ ನೋಂದಣಿ ಮತ್ತು ಭತ್ಯೆ ಪಡೆಯಲು ನೀವು ಫಲಾನುಭವಿಗಳಾಗಿದ್ದರೆ ಹೀಗೆ ಮಾಡಿ.. ನಿರುದ್ಯೋಗಿ ಪದವೀಧರರಿಗೆ ಮಾಸಿಕ ₹ 3,000 ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ ₹1,500 ಭತ್ಯೆ ನೀಡುವ ‘ಯುವನಿಧಿ’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ. * ಅಭ್ಯರ್ಥಿಗಳು https://sevasindhugs.karnataka.gov.in ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. * ಇದಲ್ಲದೇ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲೂ ನೋಂದಣಿ ಮಾಡಬಹುದು. * ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಡಿಪ್ಲೊಮಾ ಪ್ರಮಾಣ ಪತ್ರ. ಆಧಾರ್ ಕಾರ್ಡ್, ಪಡಿತರ ಚೀಟಿ, ಅಭ್ಯರ್ಥಿಯ ಬ್ಯಾಂಕ್ ಪಾಸ್ ಪುಸ್ತಕದ ದಾಖಲೆಗಳು ಅಗತ್ಯ. * ಬ್ಯಾಂಕ್ ಖಾತೆ ಸಕ್ರಿಯವಾಗಿರಬೇಕು. * ಆಧಾರ್ ಸಂಖ್ಯೆ ಜೋಡಣೆ ಮೊಬೈಲ್ ಸಂಖ್ಯೆ ಜೋಡಣೆ ಎನ್‌ಸಿಪಿಐ ಮ್ಯಾಪಿಂಗ್ ಆಗಬೇಕು. ಇಲ್ಲದಿದ್ದರೆ ತಾಂತ್ರಿಕ ತೊಂದರೆಯಿಂದ ಭತ್ಯೆ ಜಮೆಯಾಗದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಠಾತ್ ಸಂಭವಿಸುವ ಹೃದಯಾಘಾತವನ್ನು ತಪ್ಪಿಸಲು ಮತ್ತು ತಡೆಯಲು ಸಹಾಯ ಮಾಡುವ ಕೆಲವು ಆಹಾರಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಅವುಗಳೆಂದರೆ, * ಮೀನು ಆರೋಗ್ಯಕರ ಕೊಬ್ಬಿನಾಮ್ಲಗಳು ಹೃದಯದ ಆರೋಗ್ಯಕ್ಕೆ ಅತ್ಯಗತ್ಯ. ನಮ್ಮ ದೈನಂದಿನ ಆಹಾರದಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಆಹಾರವನ್ನು ಸೇರಿಸುವುದು ಮುಖ್ಯವಾಗಿದೆ. ಈ ರೀತಿಯ ಆಹಾರಗಳಲ್ಲಿ ಮೀನುಗಳು ಕೂಡಾ ಒಂದಾಗಿವೆ. ಮೀನುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ನಿಮ್ಮ ಹೃದಯವನ್ನ ಕಾಪಾಡಿಕೊಳ್ಳಬಹುದು. * ಸಿಟ್ರಸ್ ಹಣ್ಣುಗಳು ಸಿಟ್ರಸ್ ಹಣ್ಣುಗಳಲ್ಲಿರುವ ವಿಟಮಿನ್ ಸಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆಯಂಟಿಆಕ್ಸಿಡೆಂಟ್‌ಗಳು ಮತ್ತು ಫ್ಲೇವನಾಯ್ಡ್‌ಗಳು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. * ಮಸಾಲೆಗಳು ನಮ್ಮ ಅಡುಗೆಮನೆಯಲ್ಲಿನ ಮಸಾಲೆಗಳು ಅಡುಗೆ ರುಚಿಯನ್ನಷ್ಟೆ ಅಲ್ಲ ಹೃದಯದ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ. ಶುಂಠಿ, ಮೆಣಸು, ದಾಲ್ಚಿನ್ನಿ ಮತ್ತು ಲವಂಗದಂತಹ ಮಸಾಲೆಗಳಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಹೃದಯಾಘಾತವನ್ನು ತಡೆಯಲು ಸಹಾಯ ಮಾಡುವ ಮೂಲಕ ಹೃದಯದ…
ಮನುಷ್ಯ ದಿನಕ್ಕೆ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದರೆ, ಅನೇಕ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ನೆನಪಿನ ಶಕ್ತಿ ಕಡಿಮೆಯಾಗುತ್ತದೆ ದೇಹಕ್ಕೆ ಸಾಕಷ್ಟು ನಿದ್ರೆ ಇಲ್ಲದಿದ್ದರೆ ಮೆದುಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಕೆಲವೊಮ್ಮೆ ನೀವು ಏನು ಮಾಡುತ್ತಿದ್ದೀರಿ ಎಂದು ನಿಮಗೆ ಅರ್ಥವಾಗುವುದಿಲ್ಲ. ನೆನಪಿನ ಶಕ್ತಿ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು. ಅದಲ್ಲದೆ ಕೆಲಸದ ಕಡೆ ಗಮನ, ಏಕಾಗ್ರತೆಯ ಕೊರತೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಹಾಗಾಗಿ ಕನಿಷ್ಠ 7 ಗಂಟೆ ನಿದ್ದೆ ಮಾಡಬೇಕು ಎನ್ನುತ್ತಾರೆ ತಜ್ಞರು. ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ ರಾತ್ರಿ ಸರಿಯಾಗಿ ನಿದ್ದೆ ಮಾಡದೇ ಇದ್ದರೆ ರೋಗನಿರೋಧಕ ಶಕ್ತಿಗೂ ತೊಂದರೆಯಾಗುತ್ತದೆ. ಕಡಿಮೆ ಗಂಟೆಗಳ ನಿದ್ರೆ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಪರಿಣಾಮವಾಗಿ ರೋಗಗಳು ಮತ್ತು ಸಾಂಕ್ರಾಮಿಕ ರೋಗಗಳ ಅಪಾಯವನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದಾಗಿ ಆಗಾಗ್ಗೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಾನಸಿಕ ಸಮಸ್ಯೆಗಳು ಸರಿಯಾಗಿ ನಿದ್ದೆ ಮಾಡದಿದ್ದರೆ ತಲೆನೋವು ಬರುತ್ತದೆ. ಇದು ಕಿರಿಕಿರಿಯನ್ನು ಸಹ ಉಂಟುಮಾಡುತ್ತದೆ. ಜೊತೆಗೆ ಒತ್ತಡವೂ ಹೆಚ್ಚುತ್ತದೆ. ಈ ಕಾರಣದಿಂದಾಗಿ, ಆತಂಕ ಮತ್ತು…