Author: AIN Author

ಭಾನುವಾರ- ರಾಶಿ ಭವಿಷ್ಯ ಜನವರಿ-14,2024 ಸೂರ್ಯೋದಯ: 06:53, ಸೂರ್ಯಾಸ್ತ : 05:56 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯ ಮಾಸ , ಶುಕ್ಲ ಪಕ್ಷ, ದಕ್ಷಿಣಾಯಣ , ಹೇಮಂತ ಋತು, ರಾಹು ಕಾಲ: 04:30 ನಿಂದ 06:00 ತನಕ ಯಮಗಂಡ: 12:00 ನಿಂದ 01:3 0ತನಕ ಗುಳಿಕ ಕಾಲ: 03:00 ನಿಂದ 04:30 ತನಕ ಅಭಿಜಿತ್ ಮುಹುರ್ತ: ಮ.12:02 ನಿಂದ ಮ.12:47 ತನಕ ಮೇಷ ರಾಶಿ: ಭೂಮಿ ಖರೀದಿ ಮತ್ತು ವಾಹನ ಖರೀದಿಗಾಗಿ ಹಣ ಹೂಡಿಕೆ ಮಾಡುತ್ತೀರಿ, ಮಕ್ಕಳಿಂದ ಸಂಜೆಯೊಳಗೆ ಸಿಹಿ ಸುದ್ದಿ, ಸಂಗಾತಿ ಜೊತೆಗೆ ಸಂತಸದ ಕ್ಷಣಗಳು ಕಾಣುವ ಹಂಬಲ, ವ್ಯಾಪಾರ ವ್ಯವಹಾರ ನಿಧಾನಗತಿಯಲ್ಲಿ ಚೇತರಿಕೆ, ಗೃಹ ನಿರ್ಮಾಣಕ್ಕಾಗಿ ಮತ್ತು ಹಣಕಾಸಿಗಾಗಿ ಅಲೆದಾಟ, ರಸಗೊಬ್ಬರ ಕೃಷಿ ಉಪಕರಣಗಳ ವ್ಯಾಪಾರಸ್ಥರಿಗೆ ಧನಲಾಭ, ವೈದ್ಯಕೀಯ ಕ್ಷೇತ್ರದ ನೌಕರರಿಗೆ ಬಿಡುವಿಲ್ಲದ ಕೆಲಸದ ಒತ್ತಡ, ಸ್ವಯಂ ಉದ್ಯೋಗ ವ್ಯವಹಾರಗಳಲ್ಲಿ ಚೇತರಿಕೆ ಕಾಣುವಿರಿ, ನಿಮ್ಮ ಪ್ರಯತ್ನದಲ್ಲಿ ಧನಲಾಭವಾಗುವ ಸಾಧ್ಯತೆ, ತಪ್ಪು ತೀರ್ಮಾನಗಳಿಂದ ಪ್ರೇಮಿಗಳಲ್ಲಿ ವೈಮನಸ್ಸು…

Read More

ಬೆಂಗಳೂರು: ಹೈಕಮಾಂಡ್ ಹೇಳಿದರೆ ಮಾತ್ರ ರಾಮ ಮಂದಿರಕ್ಕೆ ಹೋಗುತ್ತೇವೆ ಎಂಬ ಗೃಹ ಸಚಿವ ಪರಮೇಶ್ವರ್‌ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಪ್ರತಿಕ್ರಿಯಿಸಿ, ರಾಮಮಂದಿರದ ಬಗ್ಗೆ ಒಳ್ಳೆಯ ಮಾತನಾಡದಿದ್ದರೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗುವ ಭಯ ಎಂದು ವ್ಯಂಗ್ಯವಾಡಿದ್ದಾರೆ. ರಾಮಮಂದಿರದ ಬಗ್ಗೆ ಒಳ್ಳೆಯ ಮಾತಾಡಿದರೆ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಕುರ್ಚಿಗೆ ಕುತ್ತು ಬರುವ ಭಯ. ಒಟ್ಟಿನಲ್ಲಿ ಎಡಬಿಡಂಗಿ ಕಾಂಗ್ರೆಸ್‌ ನಾಯಕರ ಪಾಡು ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ ಎಂದು ಕಾಲೆಳೆದಿದ್ದಾರೆ. ಪರಮೇಶ್ವರ್‌ ಹೇಳಿದ್ದೇನು? ಹೈಕಮಾಂಡ್ ಈಗಾಗಲೇ ರಾಮಮಂದಿರ ಕಾರ್ಯಕ್ರಮಕ್ಕೆ ಹೋಗಬಾರದು ಎಂಬ ನಿಲುವು ತೆಗೆದುಕೊಂಡಿದೆ. ಒಂದು ವೇಳೆ ಜನವರಿ 22 ನಂತರ ಹೋಗುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಿದರೆ ನಾವು ಹೋಗುತ್ತೇವೆ. ಎಲ್ಲವನ್ನೂ ನಮ್ಮ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇವೆ. ನಮ್ಮದು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತಾರೋ ಅದರಂತೆ ನಡೆಯಬೇಕು. ಅವರು ಹೋಗುವುದು ಬೇಡ ಎಂದು ಹೇಳಿದಾಗ ನಾವು ಅದರ ವಿರುದ್ದ ನಿಲುವು ‌ತೆಗೆದುಕೊಳ್ಳಲು ಆಗುವುದಿಲ್ಲ. ಹೈಕಮಾಂಡ್ ಹೇಳಿದರೆ ಮಾತ್ರ…

Read More

ಮಂಡ್ಯ :- ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯಲ್ಲಿ ಶನಿವಾರ ಬೆಳ್ಳಂಬೆಳಗ್ಗೆಯೇ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಮದ್ದೂರು ಪಟ್ಟಣ ಸಮೀಪದ ಶಿಂಷಾ ನದಿ ಎಲಿವೇಟೆಡ್ ರಸ್ತೆ ( ಮೇಲು ಸೇತುವೆ ಮೇಲೆ )ಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರ ಗಾಯಗೊಂಡು ಮಂಡ್ಯ ಮಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನ ಐಸಿಐಸಿಐ ಬ್ಯಾಂಕ್ ( ಹೋಂ ಫೈನಾನ್ಸ್ ವಿಭಾಗ ) ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಂಕರ್, ಮಹದೇವು ಹಾಗೂ ಕಿಶೋರ್ ಮೂವರು ಕೆಲಸದ ನಿಮಿತ್ತ ಮೈಸೂರಿಗೆ ತೆರಳಿದ್ದ ಅವರು ಶನಿವಾರ ಬೆಳಗಿನ ಜಾವ 4.30 ರ ಸಮಯದಲ್ಲಿ ಬೊಲೆರೋ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಅವರು ಮದ್ದೂರು ಪಟ್ಟಣದ ಎಲಿವೇಟೆಡ್ ರಸ್ತೆಯಲ್ಲಿ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಶಿಂಷಾ ನದಿ ಸೇತುವೆ ಮೇಲೆಯೇ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಳಿಕ ಕ್ಯಾಮೆರಾ ಕಂಬಕ್ಕೆ ಡಿಕ್ಕಿ ಹೊಡೆದು ಮೈಸೂರು ಕಡೆಗೆ ಹೋಗುವ ರಸ್ತೆಗೆ ಹೋಗಿ ಮಗುಚಿ ಬಿದ್ದಿದೆ. ಡಿಕ್ಕಿಯ…

Read More

ಬೆಂಗಳೂರು:- ರಾಜ್ಯದಲ್ಲಿ ಇಂದು 119 ಮಂದಿಗೆ ಕೊರೊನಾ ದೃಢವಾಗಿದ್ದು, ಇಂದು ಕೊರೊನಾಗೆ ಇಬ್ಬರು ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಇಂದು ಕಡಿಮೆಯಾಗಿದ್ದು 119 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 959ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 33 ಪಾಸಿಟಿವ್ ಪ್ರಕರಣ ಸೇರಿದಂತೆ ರಾಜ್ಯದಲ್ಲಿ 119 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಸೋಂಕಿನಿಂದ ಇಂದು ಇಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇಂದು ಕೋವಿಡ್ ನಿಂದ 152 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 4,942 ಮಂದಿಗೆ ಕೊರೋನಾ ಟೆಸ್ಟ್ ಮಾಡಲಾಗಿದೆ. ಪಾಸಿಟಿವಿಟಿ ದರ ಶೇ. 2.54 ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Read More

ಬೆಂಗಳೂರು:- HDK ಕೇಂದ್ರ ಸಚಿವನಾಗುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಎಚ್. ಡಿ. ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿ ಆಗುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಮುಂದೆ ಆ ಬಗ್ಗೆ ಚರ್ಚೆ ಆಗಿಲ್ಲ. ಆದರೆ, ಮೋದಿ ಅವರ ಮನಸ್ಸಿನಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ ಎಂದು ಹೇಳಿದರು. ಒಂದು ಬಾರಿ ಸಂಸತ್ ಸದಸ್ಯರಾದವರನ್ನು ಮಂತ್ರಿ ಮಾಡಿದ್ದಾರೆ. ಮೋದಿ‌ ಅವರ‌ ಆಯಕ್ಷನ್ ಪ್ಲ್ಯಾನ್ ಅವರ ಸಹೋದ್ಯೋಗಿಗಳಿಗೂ ಗೊತ್ತಾಗುವುದಿಲ್ಲ. ಹೀಗಾಗಿ ಅವರ ಮನಸ್ಸಿ‌ಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ ಎಂದರು. ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡುತ್ತಾರಾ? ಇಲ್ಲವಾ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನರೇಂದ್ರ ಮೋದಿ ಅವರು ಏನು ಹೇಳ್ತಾರೋ ನೊಡೋಣ. ಅವರ ಮನಸ್ಸಿನಲ್ಲಿ ಏನು ಇದೆಯೋ ಗೊತ್ತಿಲ್ಲ. ಮೋದಿ ಅವರು ಹೇಳಿದಂತೆ ಕುಮಾರಸ್ವಾಮಿ ಅವರು ಕೇಳುತ್ತಾರೆ. ಕುಮಾರಸ್ವಾಮಿ ಸ್ಪರ್ಧೆ ಮಾಡುವ ಪರಿಸ್ಥಿತಿ ಬಂದರೆ, ನಾವೆಲ್ಲ ಕುಳಿತು ಚರ್ಚೆ…

Read More

ಬೆಂಗಳೂರು:- ಹಿಂದೂ-ಮುಸ್ಲೀಂ ಯಾರೇ ಆಗಲಿ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಇಲ್ಲ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹಿಂದುಗಳಾಗಲಿ, ಮುಸ್ಲಿಮರಾಗಲಿ ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದರು. ನೈತಿಕ ಪೊಲೀಸ್‌ ಗಿರಿ ವಿಚಾರದಲ್ಲಿ ನಾವು ತುಂಬ ಕಟ್ಟು ನಿಟ್ಟಾಗಿದ್ದೇವೆ. ಹಿಂದುಗಳಾಗಲೀ ಮುಸ್ಲಿಮರಾಗಲೀ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು. ನಾವು ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ ಅವರಿಬ್ಬರು, ಯಾ ಕಾರಣಕ್ಕೂ ಇಂಥ ಘಟನೆಗಳನ್ನು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

Read More

ಹಾವೇರಿ : ಜ 13 – ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಜನವರಿ 15 ರಂದು ಹಾವೇರಿ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾಯ೯ಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಸೋಮವಾರ ಬೆಳಿಗ್ಗೆ 11.30 ಗಂಟೆಗೆ ಸುಕ್ಷೇತ್ರ ನರಸೀಪುರ (ಕಂಚಾರಗಟ್ಟಿ )ದಲ್ಲಿ ಜರುಗಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ೬ ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ೯೦೪ನೇ ಜಯಂತೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1.30 ಗಂಟೆಗೆ ಬ್ಯಾಡಗಿ ತಾಲೂಕಾ ಚಿಕ್ಕಬಾಸೂರು ಗ್ರಾಮದಲ್ಲಿ ಅಯೋಜಿಸಲಾದ ಶ್ರೀ ಗುರುವಶಿವಯೋಗಿಸಿದ್ದಾರಾಮೇಶ್ವರರ 851 ನೇ ಜಯಂತಿ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅಂದು ಬೆಳಿಗ್ಗೆ 9.30 ಗಂಟೆಗೆ ಬೆಂಗಳೂರಿನಿಂದ ವಿಮಾನದಲ್ಲಿ ಹೊರಟು ಹುಬ್ಬಳ್ಳಿಗೆ ಆಗಮಿಸಿ ಹೆಲಿಕ್ಯಾಪ್ಟರ್ ಮೂಲಕ ಹಾವೇರಿ ಜಿಲ್ಲೆ ನರಸೀಪುರಕ್ಕೆ 11.20 ಗಂಟೆಗೆ ಆಗಮಿಸಲಿದ್ದಾರೆ . ನಿಗದಿತ ಕಾಯ೯ಕ್ರಮದಲ್ಲಿ ಭಾಗವಹಿಸಿ 1.20 ಗಂಟೆಗೆ ನರಸೀಪುರದಿಂದ ಬ್ಯಾಡಗಿ ತಾಲೂಕು ಚಿಕ್ಕ ಬಾಸೂರು ಗ್ರಾಮಕ್ಕೆ ಆಗಮಿಸಲಿದ್ದಾರೆ ನಿಗದಿತ ಕಾಯ೯ಕ್ರಮದಲ್ಲಿ ಭಾಗವಹಿಸಿ ಸಂಜೆ 4.45 ಕ್ಕೆ ಚಿಕ್ಕ…

Read More

ಹುಬ್ಬಳ್ಳಿ: ಶ್ರೀರಾಮನೊಬ್ಬನೇ ದೇವರು ಎಂದು ನಾವು ಎಲ್ಲಿಯೂ ಹೇಳಿಲ್ಲ. ರಾಮ ರಾಜ್ಯದ ಆಶಯದೊಂದಿಗೆ ಅಯೋಧ್ಯಯಲ್ಲಿ ಮಂದಿರ ನಿರ್ಮಾವಾಗುತ್ತಿದೆ. ಕಾಂಗ್ರೆಸ್ ನಾಯಕರಿಗೆ ಆ ಶ್ರೀರಾಮನೆ ಬುದ್ದಿ ಕರುಣಿಸಲಿ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು. ಶ್ರೀರಾಮನನ್ನು ತಾವೇ ಹುಟ್ಟಿಸಿದಂತೆ ಬಿಜೆಪಿಗರು ವರ್ತಿಸುತ್ತಿದ್ದಾರೆ ಎಂಬ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಹೇಳಿಕೆ ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ರೀತಿ ಪ್ರತಿಕ್ರಿಯಿಸಿದರು. ಸತಾತನ ಧರ್ಮದ ಪುನರುತ್ಥಾನ, ದೇವನೊಬ್ಬ ನಾಮ ಹಲವು ಎನ್ನುವಂತೆ ನಮ್ಮಲ್ಲಿ ಮುಕ್ಕೋಟಿ ದೇವತೆಗಳಿದ್ದಾರೆ. ಆದರೆ, ಶ್ರೀರಾಮ ಹಿಂದುತ್ವದ ಪ್ರತೀಕ ಎಂದರು. ಬಿಜೆಪಿ ಎಲ್.ಕೆ. ಅಡ್ವಾನಿ ಅವರು ಹೋರಾಟ ಆರಂಭಿಸುವ ಮುನ್ನ ಕಾಂಗ್ರೆಸ್ ನಾಯಕರು ಯಾರಾದರೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕು ಎಂಬ ಹೇಳಿಕ್ಕೆ ನೀಡಿದ್ದರೆ ತೋರಿಸಲಿ. ಬಾಬರ್ ಬಿಡದ, ರಾಮನ ಹಿಡಿಯದ ಗೊಂದಲದಲ್ಲಿ ಕಾಂಗ್ರೆಸ್ ನಾಯಕರಿದ್ದರು ಎಂದು ತಿಳಿಸಿದರು. ರಾಮ ಕಾಲ್ಪನಿಕ ವ್ಯಕ್ತಿ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದು, ನಾಲ್ಕು ರಾಜ್ಯಗಳ ವಜಾ, ಕರಸೇವಕರ ಬಂಧನ, ದಾವಣಗೆರೆ, ಚನ್ನಪಟ್ಟಣದಲ್ಲಿ, ಬೆಂಗಳೂರಿನಲ್ಲಿ ಗೋಲಿಬಾರ್…

Read More

ಬೆಳಗಾವಿ:- ಗೋಮಾಂಸ ‌ನಾವು ತಿನ್ನುತ್ತೇವೆ ಎನ್ನುವವರ ವಿರುದ್ಧ ನಮಗೆ ಸಿಟ್ಟಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮೈಕ್ ಮೂಲಕ ಅಜಾನ್ ಕೂಗುವುದು ಸುಪ್ರೀಂ ಕೋರ್ಟ್ ಪ್ರಕಾರ ನಿಷೇಧ ಇದೆ. ಮೈಕ್ ಮೂಲಕ ಅಜಾನ್ ಕೂಗುತ್ತಿದ್ದರೂ ಪೊಲೀಸರೇನು ಕಿವಿಯಲ್ಲಿ ಹತ್ತಿ, ಶಗಣಿ ಹಾಕೊಂಡಿದ್ದಾರಾ? ಅಜಾನ್ ನೀವು ನಿಲ್ಲಿಸ್ತಿರೋ,‌ ನಾವು ನಿಲ್ಲಿಸೋಣವೋ ಎಂದು ಪೊಲೀಸರಿಗೆ ‌ಮುತಾಲಿಕ್ ಪ್ರಶ್ನೆ ಮಾಡಿದರು. ನಾವು ಗೋಹಂತಕರನ್ನು ವಿರೋಧಿಸುವುದನ್ನು ಬಿಟ್ಟು ‌ಪೂಜೆ ಮಾಡಬೇಕೆ? ರಾಜ್ಯದಲ್ಲಿರುವುದು ನೀಚ ಕಾಂಗ್ರೆಸ್ ‌ಸರ್ಕಾರ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ‌ರು. ಹಿಂದೂಗಳು ಮಾಂಸ ತಿನ್ನುತ್ತಾರೆ, ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಗೋಹತ್ಯೆ ಮಾಡಿ ಗೋಮಾಂಸ ತಿನ್ನುವುದನ್ನು ನಾವು ವಿರೋಧಿಸುತ್ತೇವೆ. ಹಲವು ರಾಜಕೀಯ ನಾಯಕರು, ಬುದ್ಧಿಜೀವಿಗಳು ‌ಸೊಕ್ಕಿನಿಂದ ನಾನು ಗೋಮಾಂಸ ತಿನ್ನುತ್ತೇನೆ ಎನ್ನುತ್ತಿದ್ದಾರೆ. ಗೋಮಾಂಸ ‌ನಾವು ತಿನ್ನುತ್ತೇವೆ ಎನ್ನುವವರ ವಿರುದ್ಧ ನಮಗೆ ಸಿಟ್ಟಿದೆ. ಗೋಮಾಂಸ ತಿನ್ನುತ್ತೇವೆ ಎನ್ನುವ ನೀವು ಹಂದಿ‌ ಏಕೆ ತಿನ್ನಲ್ಲ? ಆಕಳನ್ನು ತಿಂದ್ರೆ ನಮಗೆ ಸಿಟ್ಟು ಬರುತ್ತದೆ. ಈ…

Read More

ಹುಬ್ಬಳ್ಳಿ:- UPA,NDA ಅವಧಿಯ ಅನುದಾನದ ಕುರಿತು ಶ್ವೇತ ಪತ್ರ ಹೊರಡಿಸಿ ಎಂದು ಮಾಜಿ ಶಾಸಕ ಸಿ.ಟಿ.ರವಿ ಆಗ್ರಹಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯಕ್ಕೆ ಹಿಂದಿನ ಯುಪಿಎ ಸರ್ಕಾರದಲ್ಲಿ ಎಷ್ಟು ಅನುದಾನ ಬಂದಿದೆ, ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎನ್‌ಎ ಸರ್ಕಾರದಲ್ಲಿ ಎಷ್ಟು ಬಂದಿದೆ ಎಂಬುದರ ಬಗ್ಗೆ ಸಿಎಂ ಶ್ವೇತಪತ್ರ ಹೊರಡಿಸಲಿ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಂಕಿ-ಅಂಶ ಮುಚ್ಚಿಟ್ಟು ಕೇಂದ್ರದ ವಿರುದ್ದ ಸುಳ್ಳು ಆರೋಪ‌ ಮಾಡುತ್ತಿದೆ.2004ರಿಂದ 2014ರ ವರೆಗೆ ಕಾಂಗ್ರೆಸ್ ಸರ್ಕಾರದ ಡಾ.ಮನಮೋಹನ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ರಾಜ್ಯಕ್ಕೆ ತೆರಿಗೆ ಪಾಲು ಮತ್ತು ಅನುದಾನ ಎಷ್ಟು ಕೊಟ್ಟಿದ್ದಾರೆ ತಿಳಿಸಬೇಕು. ನರೇಂದ್ರ ಮೋದಿ ಅವರು ಕೊಟ್ಟ ಅನುದಾನ ಎಷ್ಟು ಎಂಬುದರ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು. ಪ್ರಧಾನಿ ಮೋದಿ ಅನುದಾನ ಕಡಿಮೆ ಕೊಟ್ಟಿದ್ದರೆ ನಾವು ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಒಪ್ಪಿಕೊಂಡು ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕುವುದಿಲ್ಲ.ನೀವು ಇದೇ ಸವಾಲನ್ನು ಸ್ವೀಕರಿಸಿ, ಸುಳ್ಳೆ…

Read More