Author: AIN Author

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ರವಿನಗರದ ಕರ್ನಾಟಕ ವೈನ್ಸ್‌ ಅಂಗಡಿಯ ವ್ಯವಸ್ಥಾಪಕ, ₹44.18 ಲಕ್ಷ ಮೌಲ್ಯದ ಮದ್ಯ ಮಾರಾಟದಲ್ಲಿ ಅವ್ಯವಹಾರ ನಡೆಸಿದ್ದಾನೆ ಎಂದು ಆರೋಪಿಸಿ ಗೋಕುಲ ರಸ್ತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವೈನ್ಸ್‌ ಅಂಗಡಿ ಮಾಲೀಕ ನೀಲಕಂಠ ಆಕಳವಾಡಿ ಅವರು ಪ್ರಿಯದರ್ಶಿನಿ ಕಾಲೊನಿಯ ಮಂಜುನಾಥ ಪೂಜಾರಿ ವಿರುದ್ಧ ದೂರು ನೀಡಿದ್ದಾರೆ. ಮಂಜುನಾಥ ಅವರು ವೈನ್ಸ್‌ ಅಂಗಡಿಯಲ್ಲಿ ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದರು. 2017ರ ಸೆ. 5ರಿಂದ 2023ರ ಎ. 25ರವರೆಗೆ ನಡೆದ ಅಂಗಡಿಯ ಲೆಕ್ಕಪತ್ರಗಳ ವರದಿ ನೀಡದೆ ಓಡಿಹೋಗಿದ್ದರು. ಲೆಕ್ಕ ಪರಿಶೋಧನೆ ನಡೆಸಿದಾಗ ಮದ್ಯ ಮಾರಾಟದಲ್ಲಿ ಅವ್ಯವಹಾರ ನಡೆದಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Read More

ಚಿಕ್ಕಮಗಳೂರು : -ಕಾಡಾನೆ ದಾಳಿಗೆ ಆನೆ ನಿಗ್ರಹ ಪಡೆಯ ಸದಸ್ಯನೇ ಬಲಿಯಾದ ಘಟನೆ ಮೂಡಿಗೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಜರುಗಿದೆ. 26 ವರ್ಷದ ಕಾರ್ತಿಕ್ ಗೌಡ ಮೃತ ದುರ್ದೈವಿಯಾಗಿದ್ದು, ಇಬ್ಬರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಘಟನೆಯಿಂದ ಎರಡು ತಿಂಗಳಲ್ಲಿ ಮೂರು ಜನ ಕಾಡಾನೆ ದಾಳಿಗೆ ಬಲಿಯಾದಂತಾಗಿದೆ. 20 ದಿನಗಳೊಳಗೆ ಕಾಡಾನೆ ದಾಳಿಗೆ ಇಬ್ಬರು ಸಾವನ್ನಪ್ಪಿದ್ದಾರೆ ಮೃತ ಕಾರ್ತಿಕ್ ಮೂಡಿಗೆರೆ ತಾಲೂಕಿನ ಗೌಡಹಳ್ಳಿ ನಿವಾಸಿಯಾಗಿದ್ದು, ಸರಕಾರ ರಚಿಸಿದ್ದ ಆನೆ ನಿಗ್ರಹ ಪಡೆಯಲ್ಲಿ ಕೆಲಸ ಮಾಡುತ್ತಿದ್ದರು.ಆನೆ ಓಡಿಸುವಾಗ ಕಾಡಾನೆ ಏಕಾಏಕಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಅರಣ್ಯ ಇಲಾಖೆ ವಿರುದ್ಧ ಸ್ಥಳಿಯರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.20 ದಿನದ ಹಿಂದೆ ಆಲ್ದೂರಿನಲ್ಲಿ ವೀಣಾ ಎನ್ನುವವರು,ಒಂದೂವರೆ ತಿಂಗಳ ಹಿಂದೆ ಆಲ್ದೂರು ಸಮೀಪ ಚಿನ್ನಿ ಎನ್ನುವವರು ಆನೆ ದಾಳಿಗೆ ಬಲಿಯಾಗಿದ್ದರು.

Read More

ಕಾಯಿಸಿ ಕಾಯಿಸಿ ಕೊಡುವ ಊಟಕ್ಕೆ ರುಚಿ ಹೆಚ್ಚು ಅನ್ನುವಂತೆ ಸಲಾರ್ ಔತಣವನ್ನ ಕೊನೆಗೂ ಪ್ರೇಕ್ಷಕರಿಗೆ ಬಡಿಸಲು ಟೀಮ್ ಸಜ್ಜಾಗಿದೆ. ಆ ದಿನಕ್ಕೆ ಕೌಂಟ್‌ಡೌನ್ ಶುರುವಾಗಿದೆ. ವಿಶೇಷ ಅಂದ್ರೆ ಆಲ್‌ರೆಡಿ ಅಮೆರಿಕಾದಲ್ಲಿ ಲಕ್ಷಡಾಲರ್ ಕಲೆಕ್ಷನ್ ಮಾಡಿಬಿಟ್ಟಿದೆ ಸಲಾರ್. ಏನ್ ಆಶ್ಚರ್ಯವಿದು? ಬಿಡುಗಡೆಗೂ ಮುನ್ನ ಕಲೆಕ್ಷನ್ ಆಗಿದ್ಹೇಗೆ? ಆ ಬಗ್ಗೆ ಇಲ್ಲಿದೆ ಮಾಹಿತಿ. ಸಲಾರ್ ಪ್ರಭಾಸ್ (Prabhas) ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ ಇದು ಕೆಜಿಎಫ್ (KGF) ನಿರ್ದೇಶಕನ ಸಿನಿಮಾ ಎನ್ನುವ ನಿರೀಕ್ಷೆ. ಕೆಜಿಎಫ್ ಅನ್ನೋ ದೃಶ್ಯಕಾವ್ಯ ಕೊಟ್ಟು ಸಿನಿಮಾ ಮೇಕಿಂಗ್ ಸ್ಟೈಲ್‌ಗೆ ಹೊಸ ಭಾಷ್ಯ ಬರೆದ ನಿರ್ದೇಶಕನ ಇನ್ನೊಂದು ಸಿನಿಮಾ ಕೊನೆಗೂ ಬರ್ತಿದೆ. ಕೆಜಿಎಫ್ ಹೇಗೆ ವಿಶ್ವದಗಲ ಬಾಹು ಹಸ್ತ ಚಾಚಿತ್ತೋ ಅದಕ್ಕಿಂತ ಹೆಚ್ಚಾಗಿ ಸಲಾರ್ ಅಜಾನುಬಾಹುವಾಗಿ ಹೊರಹೊಮ್ಮಲಿದೆ. ಹೊಂಬಾಳೆ ಸಂಸ್ಥೆ ಈಗಿನಿಂದಲೇ ಸಕಲ ಸಿದ್ಧತೆ ಮಾಡಿಕೊಂಡ ಪರಿಣಾಮ ಅಮೆರಿಕಾದಲ್ಲೂ ಮುಂಗಡ ಟಿಕೆಟ್ ಬುಕಿಂಗ್ ನಡೆಯುತ್ತಿದೆ. ಸಲಾರ್ (Salaar) ಮೇಲಿನ ನಿರೀಕ್ಷೆ ಎಷ್ಟಿದೆ ಅಂದ್ರೆ ಈಗಾಗಲೇ ಅಮೆರಿಕಾದಲ್ಲಿ ಈಗಾಗಲೇ ಲಕ್ಷ ಡಾಲರ್ ಕಲೆಕ್ಷನ್ ಟಿಕೆಟ್‌ನಿಂದ…

Read More

ಉಡುಪಿ :  ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ನಲ್ಲಿ ವಿಂಚ್ ಬೋಟ್ ಪ್ಯಾರಾ ಸೈಲಿಂಗ್ ಮಾಡುತ್ತಿದ್ದ ಪ್ರವಾಸಿಗ ಬಾಲಕನೋರ್ವ ಮೇಲಿನಿಂದ ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಗೊಂಡ ಬಾಲಕನನ್ನು ಬೆಂಗಳೂರು ಮೂಲದ ಇಕ್ಷ್ಯಾನ್ ಚೌಧರಿ (12) ಎಂದು ಗುರುತಿಸಲಾಗಿದೆ. ಬಾಲಕ ಪ್ಯಾರಾ ಸೈಲಿಂಗ್ ಮಾಡುತ್ತಿದ್ದಾಗ 10 ಮೀಟರ್ ಎತ್ತರದಿಂದ ಬೋಟಿಗೆ ಬಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಹಿನ್ನಲೆಯಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು ಬಾಲಕನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಲ್ಪೆ ಬೀಚ್ ನಲ್ಲಿ ಕಳೆದ ತಿಂಗಳು ಪ್ರವಾಸಿಗರಿಗೆ ಅವಕಾಶ ನೀಡಲಾಗಿತ್ತು ಅಡ್ವೆಂಚರ್ ಚಟುವಟಿಕೆ, ದೋಣಿ ವಿಹಾರ ಆರಂಭವಾಗಿತ್ತು. https://ainlivenews.com/young-woman-sexually-molested-in-our-metro-fellow-passengers-who-did-not-come-to-the-rescue/ ಆದರೆ ಈ ಕುರಿತು ಟೆಂಡರ್ ಪಡೆದಿರುವವರು ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿಲ್ಲ ಬೋಟಿಂಗ್ ವೇಳೆಯಲ್ಲಿ ದೋಣಿಯ ಸಾಮರ್ಥ್ಯಕ್ಕಿಂತ ಅಧಿಕ ಜನರನ್ನು ಹತ್ತಿಸಿಕೊಳ್ಳಲಾಗುತ್ತಿದೆ. ನಿಯಮ ಮೀರಿ ಇಂತಹ ಚಟುವಟಿಕೆಗಳು ನಡೆಯುತ್ತಿದ್ದು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ ಎಂದು ತಿಳಿದು…

Read More

ಶ್ರೀಲೀಲಾ (Sreeleela) ಮತ್ತೆ ಮತ್ತೆ ಸುದ್ದಿಗೆ ಬರುತ್ತಿದ್ದಾರೆ. ವೈಷ್ಣವ್ ತೇಜ್ (Vaishnav Tej) ಜೊತೆ ಇವರು ಅಭಿನುಯಿಸಿದ ಆದಿಕೇಶವ ಸಿನಿಮಾ ಇನ್ನೇನು ತೆರೆಗೆ ಬರಲು ಸಿದ್ಧವಾಗಿದೆ. ಆದರೆ ಶ್ರೀಲೀಲಾ ಮಾತ್ರ ನಾ ಬರಲ್ಲ ಎಂದು ಹಠ ಹಿಡಿದಿದ್ದಾರೆ. ಇಷ್ಟಾದರೂ ಸಿನಿಮಾ ಗೆಲ್ಲುತ್ತೆ ಎನ್ನುತ್ತಿದ್ದಾರೆ ವೈಷ್ಣವ್. ಇದೇನಿದು ಹೀರೋ- ಹೀರೋಯಿನ್ ಜಗಳ ? ಇಲ್ಲಿದೆ ಅಪ್‌ಡೇಟ್. ಶ್ರೀಲೀಲಾ ಯಾರ ಕೈಗೂ ಸಿಗುತ್ತಿಲ್ಲ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಟಾಪ್ ಹೀರೋಗಳು ಈಕೆ ಕಾಲ್‌ಶೀಟ್‌ಗೆ ಕಾಯುವಂತಾಗಿದೆ. ಪ್ರಿನ್ಸ್ ಮಹೇಶ್ ಬಾಬುವಿನಿಂದ ಹಿಡಿದು ಪವನ್ ಕಲ್ಯಾನ್ ಕೂಡ ಶ್ರೀಲೀಲಾ ಎಲ್ಲಿ ನಿನ್ನಯ ಪಾದ ಕಮಲ ಎನ್ನುತ್ತಿದ್ದಾರೆ. ಈ ಹೊತ್ತಲ್ಲೇ ಶ್ರೀ ನಟಿಸಿದ ಇನ್ನೊಂದು ಸಿನಿಮಾ ಧಮಾಕಾ, ಭಗವಂತ ಕೇಸರಿ ಹಿಟ್ ಆಗಿವೆ. ಇದರ ಬೆನ್ನಿಗೇ ಆದಿಕೇಶವ ಬರುತ್ತಿದೆ. ಆದರೆ ಶ್ರೀಲೀಲಾಗೆ ಮಾತ್ರ ಪ್ರಚಾರಕ್ಕೆ ಬರಲು ಆಗುತ್ತಿಲ್ಲ. ಹೀಗಿದ್ದರೂ ಸಿನಿಮಾ ಹಿಟ್ ಆಗುತ್ತದೆ. ಶ್ರೀಲೀಲಾ ಇದ್ದರೆ ಸಾಕು, ಸಿನಿಮಾ ಗೆಲ್ಲುತ್ತದೆ ಎನ್ನುತ್ತಿದ್ದಾರೆ ಹೀರೋ ವೈಷ್ಣವ್ ತೇಜ್. ಮೆಗಾ…

Read More

ಹುಬ್ಬಳ್ಳಿ: ಶಾಂತಿನಿಕೇತನ ಕಾಲೊನಿಯ ಪ್ರವೀಣ ಗಾಯಕವಾಡ, ಮಂಜುನಾಥ ಲೂತಿಮಠ ಮತ್ತು ಇತರರಿಗೆ ಅವಾಚ್ಯ ಪದಗಳಿಂದ ಬೈದು, ಜಾತಿ ನಿಂದನೆ ಮಾಡಿರುವ ಆರೋಪದ ಮೇಲೆ ಏಳು ಮಂದಿ ವಿರುದ್ಧ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯ ಅಳಗುಂಡಗಿ, ಶಿವಾನಂದ ಮುತ್ತಣ್ಣವರ, ವಿಜಯಕುಮಾರ ಅಪ್ಪಾಜಿ, ಭರತ್‌ ಜೈನ್‌, ಭವೇಶ ಜೈನ್‌, ಲಲಿತ ಜೈನ್‌ ಹಾಗೂ ಮತ್ತೊಬ್ಬ ವ್ಯಕ್ತಿ ವಿರುದ್ಧ ಪ್ರವೀಣ ದೂರು ದಾಖಲಿಸಿದ್ದಾರೆ. ಅಕ್ಕಿಹೊಂಡದ ವಿಠಲ ದೇವಸ್ಥಾನದ ಬಳಿ ಆರೋಪಿಗಳು ಬಂದು ಕರವೇ ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿದ್ದಾರೆ. ಕುತ್ತಿಗೆ ಹಿಡಿದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Read More

ಹುಬ್ಬಳ್ಳಿ: ಧಾರವಾಡ ಉಪನಗರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ದಯಾನಂದ ಶೇಗುಣಸಿ ಅವರ ಬ್ಯಾಂಕ್‌ ಖಾತೆಯಲ್ಲಿದ್ದ ₹8.25 ಲಕ್ಷ, ಅವರ ಗಮನಕ್ಕೆ ಬರದೆ ಆನ್‌ಲೈನ್‌ಲ್ಲಿ ವರ್ಗಾವಣೆ ಆಗಿರುವ ಕುರಿತು ಹುಬ್ಬಳ್ಳಿ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾರೊಂದಿಗೂ ವೈಯಕ್ತಿಕ ಮಾಹಿತಿ ಹಂಚಿಕೊಳ್ಳದಿದ್ದರೂ ಹಣ ವರ್ಗಾವಣೆಯಾಗಿದೆ. ಬ್ಯಾಂಕ್‌ನವರು ಸೆಕ್ಯೂರ್‌ ಇರುವ ನೆಟ್‌ ಸೆಕ್ಯೂರಿಟಿ ಬಳಸದೆ ನಿಷ್ಕಾಳಜಿಯಿಂದಲೋ ಅಥವಾ ಯಾವುದೋ ಅಧಿಕಾರಿಯ ಹಸ್ತಕ್ಷೇಪದಿಂದ ಅಪರಿಚಿತ ವ್ಯಕ್ತಿ ಹಣ ವರ್ಗಾಯಿಸಿಕೊಂಡಿದ್ದಾನೆ. ಬ್ಯಾಂಕ್‌ ಖಾತೆಗೆ ಲಿಂಕ್‌ ಇರುವ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿದ್ದ ಸಂದರ್ಭ, ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೂಲಕ ₹50 ಸಾವಿರ 12 ಬಾರಿ, ₹45 ಸಾವಿರ ಮೂರು ಬಾರಿ, ₹25ಸಾವಿರ ಎರಡು ಬಾರಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ‘ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಬ್ಯಾಂಕ್‌ ನಿಷ್ಕಾಳಜಿಯಿಂದಲೂ ಆಗಿರಬಹುದು. ಅಥವಾ ಹೊಸ ಬಗೆಯ ಸೈಬರ್‌ ಕ್ರೈಂ ಆರಂಭವಾಗಿರಬಹುದು’ ಎಂದು ಇನ್‌ಸ್ಪೆಕ್ಟರ್‌ ದಯಾನಂದ ಹೇಳಿದರು.

Read More

ಇಂದಿನಿಂದ ಅಂದರೆ ನ.23ರಿಂದ ಮೂರು ದಿನ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಒಣಹವೆ ವಾತಾವರಣ ಕಂಡು ಬಂದಿದೆ. ಹಿಂಗಾರು ಮಳೆ ಸಹ ಕ್ಷೀಣವಾಗಿತ್ತು. ಇದೀಗ ನ.23 ರಿಂದ ನ.26ರ ವರೆಗೆ ದಕ್ಷಿಣ ಒಳನಾಡು, https://ainlivenews.com/young-woman-sexually-molested-in-our-metro-fellow-passengers-who-did-not-come-to-the-rescue/ ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಕೆಲವಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಕೊಡಗು ಹಾಗೂ ಚಿಕ್ಕಮಗಳೂರಿನಲ್ಲಿ ನ.23 ಹಾಗೂ 24ರಂದು ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಎರಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.

Read More

ಲಕ್ನೋ: ಪುತ್ರನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ (Kanpur Uttarpradesh) ನಡೆದಿದೆ. ಮೃತ ದುರ್ದೈವಿ ಪುತ್ರನನ್ನು ದೀಪಕ್ ನಿಶಾದ್ ಹಾಗೂ ಆರೋಪಿ ತಂದೆಯನ್ನು ಗಣೇಶ್ ಪ್ರಸಾದ್ ಎಂದು ಗುರುತಿಸಲಾಗಿದೆ. ಭಾನುವಾರ ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ (Australia- Team India) ನಡುವೆ ಫೈನಲ್ ಕ್ರಿಕೆಟ್ ಮ್ಯಾಚ್ ಇತ್ತು.  ಈ ಪಂದ್ಯವನ್ನು ಗಣೇಶ್ ಪ್ರಸಾದ್ ನೋಡುತ್ತಿದ್ದರು. ಈ ವೇಳೆ ಮಗ ಟಿವಿ ಆಫ್ ಮಾಡಿದ್ದಾನೆ. ಇದರಿಂದ ತಂದೆ ಸಿಟ್ಟಿಗೆದ್ದು ಗಣೇಶ್ ಈ ಕೃತ್ಯ ಎಸಗಿದ್ದಾನೆ.  https://ainlivenews.com/young-woman-sexually-molested-in-our-metro-fellow-passengers-who-did-not-come-to-the-rescue/ ಟಿವಿ ಆಫ್ ಮಾಡಿದ್ದು ಏಕೆ..?: ಟಿವಿ ನೋಡುತ್ತಿದ್ದ ತಂದೆಯ ಬಳಿ ಮಗ ಅಡುಗೆ ಮಾಡುವಂತೆ ಹೇಳಿದ್ದಾನೆ. ಬೇಗ ಊಟ ಮಾಡಿ ಆಮೇಲೆ ಟಿವಿ ನೋಡು ಎಂದು ಮಗ ತಂದೆಗೆ ಒತ್ತಾಯಿಸಿದ್ದಾನೆ. ಆದರೆ ಗಣೇಶ್ ಮಗನ ಮಾತಿಗೆ ಕ್ಯಾರೇ ಎಂದಿಲ್ಲ. ಹೀಗಾಗಿ ತಂದೆಯ ಗಮನವನ್ನು ಬೇರೆ ಕಡೆ ಸೆಳೆಯುವ ಸಲುವಾಗಿ…

Read More

ಹುಬ್ಬಳ್ಳಿ; ಕಲಘಟಗಿ ತಾಲ್ಲೂಕಿನ ಭೋಗೇನಾಗರಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ನಿಂಗಪ್ಪ ಬಸಪ್ಪ ದಾಸಪ್ಪನವರ (35) ಅವರನ್ನು ಬುಧವಾರ ತಡರಾತ್ರಿ ಕೊಲೆ ಮಾಡಲಾಗಿದೆ. ಆಸ್ತಿ ವಿಚಾರದ ದ್ವೇಷದಲ್ಲಿ ಸಂಬಂಧಿಕರೇ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ನಿಂಗಪ್ಪ ಅವರ ಊರು ಬಗಡಗೇರಿಯ ಪ್ರಯಾಣಿಕರ ತಂಗುದಾಣ ಪ್ರದೇಶದಲ್ಲಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ತಲೆ, ಕುತ್ತಿಗೆ ಭಾಗದಲ್ಲಿ ರಕ್ತ ಸೋರಿದೆ. ನಿಂಗಪ್ಪ ಅವರ ಅತ್ತೆಯ ಆಸ್ತಿ ಮಾರಾಟ ವಿಚಾರದ ದ್ವೇಷದಲ್ಲಿ ಕೃತ್ಯ ಸಂಬಂಧಿಕರಿಬ್ಬರು ಕೃತ್ಯ ಎಸಗಿದ್ದಾರೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ಧಾರೆ. ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀಶೈಲ ಕೌಜಲಗಿ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಬಂಧಿಸಿದಂತೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರಕರಣಕ್ಕೆ ಸಬಂಧಿಸಿದಂತೆ ತನಿಖೆ ಮುಂದುವರಿದಿದೆ. ಆರೋಪಿಗಳಿಗಾಗಿ ಶೋಧ: ಆಸ್ತಿ ವಿಚಾರಕ್ಕೆ ನಿಂಗಪ್ಪ ಅವರ ಸಂಬಂಧಿಕರೇ ಕೊಲೆ ಮಾಡಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ತಿಳಿಸಿದರು.

Read More