ಬೆಂಗಳೂರು: ರಾಮಮಂದಿರ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಯೂ ಟರ್ನ್ ಗೆ ಬಿಜೆಪಿ ನಾಯಕರು ವ್ಯಂಗ್ಯ ಮಾಡಿದ್ದಾರೆ.ಲೋಕಸಭೆ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ನಾಯಕರಿಗೆ ಜ್ಞಾನೋದಯವಾಗಿದೆ. ಶ್ರೀರಾಮನ ವಿಚಾದಲ್ಲಿ ನಾವ್ಯಾರು ರಾಜಕೀಯ ಮಾಡ್ತೀಲ್ಲ. https://ainlivenews.com/all-the-problems-in-your-family-are-solved-with-salt/ ಕಾಂಗ್ರೆಸ್ ನವರು ಎಲ್ಲ ವಿಚಾರದಲ್ಲೂ ರಾಜಕೀಯವನ್ನ ನೋಡ್ತಾರೆ.ಸಿದ್ದರಾಮಯ್ಯನವರು ಅಯೋದ್ಯಗೆ ಹೋಗ್ತೀನಿ ಎಂದು ನಾವು ಸ್ವಾಗತ ಮಾಡ್ತೀವಿ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
Author: AIN Author
ಬೆಂಗಳೂರು: ಹಾವೇರಿ (Haveri) ಗ್ಯಾಂಗ್ ರೇಪ್ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ವರದಿ ಬಂದ ಮೇಲೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ (G.Parameshwar) ತಿಳಿಸಿದ್ದಾರೆ. ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ತನಿಖೆ ಮುಗಿಯುವವರೆಗೂ ನಾವು ಏನನ್ನೂ ಊಹೆ ಮಾಡಲು ಆಗುವುದಿಲ್ಲ. ನಾವು ಸುಮ್ಮನೆ ಹೇಳಿಕೆ ಕೊಡುವುದರಿಂದ ಉಪಯೋಗವಿಲ್ಲ. ತನಿಖಾ ವರದಿ ಬರಲಿ, ವರದಿ ಬಂದ ಬಳಿಕ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಕರಣದಲ್ಲಿ ಯಾರೇ ಇದ್ದರೂ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ. ಯಾರ ರಕ್ಷಣೆ ಕೂಡಾ ಮಾಡುವುದಿಲ್ಲ. ಅದರ ಅವಶ್ಯಕತೆಯೂ ಇಲ್ಲ ಎಂದಿದ್ದಾರೆ. https://ainlivenews.com/all-the-problems-in-your-family-are-solved-with-salt/ ಮಹಿಳೆಯರಿಗೆ ಕರ್ನಾಟಕ ಸೇಫ್ ಅಲ್ಲ ಎಂಬ ಬಿಜೆಪಿ ಹಾಗೂ ವಿಜಯೇಂದ್ರ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಸರ್ಕಾರ ನಡೆಸಿದ್ದಾರೆ. ಅವರು ಸರ್ಕಾರ ಮಾಡುವಾಗ ಇಂತಹ ಘಟನೆ ಆಗಿಲ್ಲವೇ? ಅದಕ್ಕೆ ನಾವು ಏನ್ ಹೇಳಬೇಕು? ಆಗ ಸೇಫ್ ಇರಲಿಲ್ಲ ಎಂದು ಹೇಳಬೇಕಾ? ಕಾನೂನಿನ…
ಬೆಂಗಳೂರು: ರಾಮಮಂದಿರ ಉದ್ಘಾಟನೆ ಹೋಗುವ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವಿನ ವಾಕ್ಸಮರ ಮುಂದುವರೆದಿದೆ.ಅಯೋಧ್ಯೆಗೆ ಹೋಗಿ ಏಕೆ ಪೂಜೆ ಮಾಡಬೇಕೆಂದು ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ, ಜನವರಿ 22ರ ನಂತರ ನಾನು ಹೋಗ್ತೀನಿ ಎಂದು ಇದೀಗ ಯೂ ಟರ್ನ್ ಹೊಡೆದಿದ್ದಾರೆ.ಸಿಎಂ ಸಿದ್ದರಾಮಯ್ಯಗೆ ಈಗಲಾದರೂ ಬುದ್ಧಿ ಬಂತಲ್ವಾ ಎಂದು ಬಿಜೆಪಿ ನಾಯಕರು ವ್ಯಂಗ್ಯಮಾಡಿದ್ದಾರೆ. https://ainlivenews.com/mukesh-ambani-property-once-again-joins-the-100-billion-club/ ಯೆಸ್,ಅಯೋಧ್ಯೆಗೆ ಏಕೆ ಹೋಗಿ ರಾಮನಿಗೆ ಪೂಜೆ ಮಾಡಬೇಕು.ನಾನು ಇಲ್ಲಿರುವ ರಾಮನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡ್ತೀನಿ ಎಂದು ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ ಇದೀಗ ಯೂ ಟರ್ನ್ ಹೊಡೆದಿದ್ದಾರೆ.ಜನವರಿ 22 ಉದ್ಘಾಟನೆ ದಿನ ನಾನು ಹೋಗಲ್ಲ.ಬಿಜೆಪಿಯವರು ಇದನ್ನ ರಾಜಕೀಯ ಕಾರ್ಯಕ್ರಮ ಮಾಡಿಕೊಂಡಿದ್ದಾರೆ.ನಾನು 22ರ ನಂತರ ಅಯೋಧ್ಯೆಗೆ ಭೇಟಿ ನೀಡ್ತೀನಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ನಮ್ಮ ಎದೆ ಬಗೆದರೆ ಶ್ರೀರಾಮನೂ ಕಾಣ್ತಾನೆ, ಸಿದ್ದರಾಮಯ್ಯನೂ ಕಾಣ್ತಾರೆ, ಅಂಬೇಡ್ಕರ್ ಕೂಡ ಕಾಣ್ತಾರೆ, ಸಿದ್ದಗಂಗಾ ಶ್ರೀಗಳೂ ಕಾಣ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರು ಸಂಸದ ಅನಂತ್ ಕುಮಾರ್ ಹೆಗ್ಡೆ (Anantkumar Hegde) ವಿರುದ್ಧ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗ್ಡೆ ನಾಲಿಗೆ ಹಿಡಿತದಲ್ಲಿ ಇರಲಿ. ಹಿಂದೂ ಧರ್ಮ ನಿಮ್ಮ ಅಪ್ಪನ ಮನೆ ಆಸ್ತಿ ಅಲ್ಲ. ನಮ್ಮ ಎದೆ ಬಗೆದರೆ ರಾಮನೂ ಇದ್ದಾನೆ, ಸಿದ್ದರಾಮಯ್ಯ, ದೇವರಾಜ್ ಅರಸ್ ಕೂಡ ಇದ್ದಾರೆ. ನಮ್ಮ ಎದೆಯಲ್ಲಿ ಅಂಬೇಡ್ಕರ್, ಸಿದ್ದಗಂಗಾ ಶ್ರೀಗಳು ಕೂಡ ಇದ್ದಾರೆ. ನಿನ್ನ ರಕ್ತದಲ್ಲಿ ಮಾತ್ರ ಹಿಂದೂ ಇರೋದಾ, ನಿಮ್ಮ ಅಪ್ಪನ ಮನೆ ಆಸ್ತಿ ಥರಾ ಆಡೋದನ್ನ ನಿಲ್ಲಿಸಿ ಎಂದು ವಾಗ್ದಾಳಿ ನಡೆಸಿದರು. ಅನಂತ್ ಕುಮಾರ್ ಹೆಗ್ಡೆ ಹೇಳಿಕೆಯಿಂದ ಲಾ ಆಂಡ್ ಆರ್ಡರ್ ಸಮಸ್ಯೆಯಾದ್ರೆ ಯಾರು ಹೊಣೆ..!?. ಪ್ರಚೋದನೆಯಿಂದ ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಹೆಗ್ಡೆ ಬರ್ತಾರಾ?. ಹೀಗಾಗಿ ಸಂಸದರ ಮೇಲೆ ಎಫ್‍ಐಆರ್ ಹಾಕಿ, ಒಳಗೆ ಹಾಕಬೇಕು.…
ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್(Hombale Films) ರೂವಾರಿ ವಿಜಯ್ ಕಿರಗಂದೂರು, ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದನ್ನು (Tamil Films) ನಿರ್ಮಿಸುತ್ತಿದ್ದಾರೆ. ಅದೇ ರಘುತಾತ (Raghutatha). ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಹಿಂದಿ ಹೇರಿಕೆಯ ವಿರುದ್ಧ ಕಥಾ ನಾಯಕಿ ಪ್ರತಿಭಟಿಸುವಂತಹ ಟೀಸರ್ ಇದಾಗಿದೆ. ಹಿಂದಿ ಹೇರಿಕೆಯ ಕುರಿತಂತೆ ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಅದೇ ವಿಷಯವನ್ನೇ ಇಟ್ಟುಕೊಂಡು ಟೀಸರ್ ರೆಡಿ ಮಾಡಿದ್ದಾರೆ ನಿರ್ದೇಶಕರು. ಹಿಂದಿ ಹೇರಿಕೆಯ ವಿರುದ್ಧ ಕೀರ್ತಿ ಸುರೇಶ್ (Keerthy Suresh) ಹೊಡೆದ ‘ಹಿಂದಿ ತೆರಿಯಾದ ಪೋಯ’ ಡೈಲಾಗ್ ಪಂಚಿಂಗ್ ಆಗಿದೆ. ಕೀರ್ತಿ ಸುರೇಶ್ ಅದ್ಭುತವಾಗಿಯೇ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಮೊದಲ ತಮಿಳು ಚಿತ್ರವಿದು. ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಕೀರ್ತಿ ಸುರೇಶ್ ಈ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಮೊದಲ ಟೀಸರ್ ಇಂದು ಬಿಡುಗಡೆಯಾಗಿದೆ. ಈ ಹಿಂದೆ, `ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ…
ಬಿಗ್ ಬಾಸ್ ಮನೆಯಲ್ಲಿ ನವಗ್ರಹಗಳ ಬಗ್ಗೆ ಚರ್ಚೆ ಹಾಗೂ ಈ ಮನೆಯ ಶನಿ ಯಾರು? ಎಂಬ ಪ್ರಶ್ನೆಯನ್ನ ಕಾರ್ತಿಕ್ ಕೇಳಿದ್ರೋ ಆಗ್ಲಿಂದ ಅವರ ಮೇಲೆ ಶನಿಯ ವಕ್ರದೃಷ್ಟಿ ಬಿದ್ದುಬಿಟ್ಟಿದೆ. ಕಳೆದ ವಾರಾಂತ್ಯದಲ್ಲಿ ಶನಿ ಟಾಪಿಕ್ ಯೆಸ್/ ನೋ ರೌಂಡ್‌ನಲ್ಲಿ ಬಂದಿತ್ತು. ಈ ವೀಕೆಂಡ್‌ನಲ್ಲಿ ಅದೇ ಟಾಪಿಕ್ ಮತ್ತೆ ಚರ್ಚೆಯಾಗಿದೆ. ತನ್ನ ತಪ್ಪನ್ನು ವರ್ತೂರು ಸಂತೋಷ್ ತಲೆಗೆ ಕಟ್ಟಲು ಹೋದ ಕಾರ್ತಿಕ್‌ಗೆ ಕಿಚ್ಚ ಕಿವಿಹಿಂಡಿದ್ದಾರೆ. ಈ ಮನೆಯ ಶನಿ ಸಂಗೀತಾ (Sangeetha Sringeri) ಅಂತ ಹೇಳಿದ್ದು ವರ್ತೂರು ಸಂತೋಷ್. ನಾನಲ್ಲ ಎಂದು ಕಾರ್ತಿಕ್ (Karthik Mahesh) ವಾದಿಸಿದ್ದರು. ಸರಿಯಾಗಿ ನೆನಪಿಲ್ಲ ಅಂತಲೂ ಹೇಳಿದ್ದರು. ಹೀಗಿರುವಾಗಲೇ, ನೀವು ಹೇಳಿದ್ರಿ ಕಾರ್ತಿಕ್ ಅಂತ ಸುದೀಪ್ ನೇರವಾಗಿ ಮಾತಿನ ಬಾಣ ಬೀಸಿದರು. https://ainlivenews.com/all-the-problems-in-your-family-are-solved-with-salt/ ಕಿಚ್ಚನ ಪಂಚಾಯಿತಿಯಲ್ಲಿ ಶನಿ ಟಾಪಿಕ್ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಸುದೀಪ್, ವರ್ತೂರು ಅವರೇ.. ಕಾರ್ತಿಕ್ ಅವರನ್ನ ನಾಮಿನೇಟ್ ಮಾಡ್ತೀರಿ. ಅದಕ್ಕೆ ನೀವು ಕೊಟ್ಟ ಕಾರಣ ಯಾರಿಗೂ ಅರ್ಥ ಆಗುತ್ತಿಲ್ಲ. ವಿವರಿಸಿ ಎಂದು ಸುದೀಪ್…
ನವದೆಹಲಿ: ಇಷ್ಟು ದಿನ ಕುರ್ತಾ, ಪೈಜಾಮಾದಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಇದೀಗ ದಕ್ಷಿಣ ಭಾರತದ ಉಡುಗೆ ಪಂಚೆಯಲ್ಲಿ (Lungi) ಮಿಂಚಿದ್ದಾರೆ. ಹೌದು. ಮೋದಿಯವರು ಸದ್ಯ ಪಂಚೆ ಧರಿಸುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ದೆಹಲಿಯ ರಾಜ್ಯ ಸಚಿವ ಎಲ್ ಮುರುಗನ್ (L Murugan) ಅವರ ನಿವಾಸದಲ್ಲಿನಡೆದ ಪೊಂಗಲ್ ಆಚರಣೆಯಲ್ಲಿ ಭಾಗವಹಿಸಲು ಪ್ರಧಾನಿಯವರು ದಕ್ಷಿಣ ಭಾರತದ ಪಂಚೆಯನ್ನು ಧರಿಸಿದ್ದರು. ಸದ್ಯ ನರೇಂದ್ರ ಮೋದಿಯವರು ಪೊಂಗಲ್ (Pongal) ಆಚರಣೆಯ ವಿಧಿ-ವಿಧಾನಗಳನ್ನು ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ಏನಿದೆ..?: ಪ್ರಧಾನಿ ಎಡ ಭುಜದ ಮೇಲೆ ಶಾಲು ಹೊದ್ದು, ಕಪ್ಪು ಕೋಟ್ ಜೊತೆಗೆ ಬಿಳಿ ಪಂಚೆ ಧರಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಅಲ್ಲದೆ ಒಲೆಯ ಮೇಲಿದ್ದ ಪಾತ್ರೆಗೆ ಏನೋ ಹಾಕುತ್ತಿರುವುದನ್ನು ಕೂಡ ಗಮನಿಸಬಹುದು. ಇದಾದ ಬಳಿಕ ಮಂಟಪದೊಳಗೆ ನಿಂತಿರುವ ಹಸುವಿನ ಕಡೆಗೆ ಹೋಗುತ್ತಾರೆ. ಹಸುವಿನ ಮೇಲೆ ಹೂವು ಹಾಕಿ ಅದಕ್ಕೆ ತಿನ್ನಿಸುವುದನ್ನು ಕೂಡ ವೀಡಿಯೋದಲ್ಲಿ ಕಾಣಬಹುದಾಗಿದೆ. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿಯವರು…
ಬೆಂಗಳೂರು: ಕಾಂಗ್ರೆಸ್ (Congress) ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ (Anantkumar Hegde) ವಿರುದ್ಧ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK ShivaKumar) ಕಿಡಿಕಾರಿದ್ದಾರೆ. ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಅನಂತ್ ಕುಮಾರ್ ಹೆಗ್ಡೆಗೆ ಪಾಪ ಹೆಚ್ಚು ಕಮ್ಮಿ ಆಗಿದೆ. ಪಾಪ ಅವರು ಇಷ್ಟು ದಿನ ಸ್ವಲ್ಪ ರೆಸ್ಟ್‍ನಲ್ಲಿ ಇದ್ದರು. ಅವರಿಗೆ ಜನರೇ ಇದಕ್ಕೆ ಉತ್ತರ ಕೊಡ್ತಾರೆ ಅಂತ ತಿರುಗೇಟು ನೀಡಿದರು. https://ainlivenews.com/all-the-problems-in-your-family-are-solved-with-salt/ ಶಿರಸಿಯ ಸಿಪಿ ಬಜಾರ್ ನಲ್ಲಿರುವ ಮಸೀದಿ, ಅದು ವಿಜಯ ವಿಠ್ಠಲ ದೇವಸ್ಥಾನ, ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಕೂಡು ಮಾರುತಿ ದೇವಸ್ಥಾನ. ಇದೇ ರೀತಿ ದೇಶದ ಹಳ್ಳಿಯ ಮೂಲೆ-ಮೂಲೆಗಳಲ್ಲಿ ಅಪಮಾನಗೊಂಡಿರುವ ಅನೇಕ ಸಂಕೇತಗಳಿವೆ, ಅದನ್ನು ಕಿತ್ತುಹಾಕುವ ತನಕ ಹಿಂದೂ ಸಮಾಜ ಸುಮ್ಮನೆ ಕೂರಲ್ಲ. ಈಗ ರಣಭೈರವ ಎದ್ದಾಗಿದೆ. ಮತ್ತೆ ಕೂರುವ ಪ್ರಶ್ನೆಯೇ ಇಲ್ಲ. ಹಿಂದೂ ಧರ್ಮ ಯಾರ ಋಣವನ್ನು ಇಟ್ಟುಕೊಳ್ಳುವ ಧರ್ಮವಲ್ಲ, ಸಾವಿರ ವರ್ಷಗಳ ಸೇಡನ್ನು ತೀರಿಸಿಕೊಳ್ಳದಿದ್ದರೇ ಇದು ಹಿಂದೂ…
ಬೆಂಗಳೂರು: ಟ್ರಾಫಿಕ್ ರೂಲ್ಸ್ ಪಾಲಿಸದ ವಾಹನ ಚಾಲಕರು ಹಾಗೂ ಸವಾರರಿಗಾಗಿ ಯಮ ಹಾಗೂ ಚಿತ್ರಗುಪ್ತ ಭೂಲೋಕಕ್ಕೆ ಬಂದು ಪಾಠ ಹೇಳಿರುವುದು ನಗರದ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ನಡೆದಿದೆ. ಹೌದು! ಯಮಲೋಕದಿಂದ ಭೂಲೋಕಕ್ಕೆ ಇಳಿದ ಯಮ ಧರ್ಮರಾಯ ನಿಯಮ ಪಾಲಿಸದ ಸವಾರರ ಮೇಲೆ ಹರಿಹಾಯ್ದಿದ್ದಾನೆ. ಹೆಲ್ಮೆಟ್ ಹಾಕದ ಈ ಸವಾರ ಎಷ್ಟು ಬಾರಿ ನಿಯಮ ಉಲ್ಲಂಘಿಸಿದ್ದಾನೆ ಎಂಬ ಯಮನ ಪ್ರಶ್ನೆಗೆ ಪುಸ್ತಕ ನೋಡಿ ಚಿತ್ರಗುಪ್ತ ಇಪ್ಪತ್ತು ಬಾರಿ ಎಂದು ಉತ್ತರಿಸಿದ್ದಾನೆ. ಈ ವೇಳೆ ಯಮ ಅಂತಹ ಸವಾರರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ನಿಮ್ಮ ಕುಟುಂಬ ನಿಮಗಾಗಿ ಕಾಯುತ್ತಿಲ್ಲವೇ? ಎಂದು ಎಚ್ಚರಿಸಿದ್ದಾನೆ. ಇದೇ ವೇಳೆ ಫೋನ್‍ನಲ್ಲಿ ಮಾತಾಡುತ್ತಿದ್ದ ಸವಾರನಿಗೆ ಕ್ಲಾಸ್ ತೆಗೆದುಕೊಂಡ ಯಮ, https://ainlivenews.com/mukesh-ambani-property-once-again-joins-the-100-billion-club/ ವಾಹನ ಚಲಾಯಿಸುವಾಗ ನೀನು ಕರೆ ಮಾಡಿದ್ರೆ ಯಮಲೋಕಕ್ಕೆ ಕನೆಕ್ಟ್ ಆಗುತ್ತೆ ಎಂದು ಎಚ್ಚರಿಕೆ ನೀಡಿ ಕಳಿಸಿದ್ದಾನೆ! ಉಪ್ಪಾರಪೇಟೆ ಸಂಚಾರ ಠಾಣೆ ಪೊಲೀಸರು (Upparpet Traffic Police) ಈ ವಿನೂತನ ಪ್ರಯತ್ನ ಮಾಡಿ ವಾಹನ ಸವಾರರಿಗೆ ಜಾಗೃತಿ ಮೂಡಿಸಿದ್ದಾರೆ. ಸಂಚಾರ ನಿಯಮ ಪಾಲಿಸದ…
ಬೆಂಗಳೂರು: ಮೇಕೆದಾಟು ಯೋಜನೆಗೆ ಕೂಡಲೇ ಅನುಮತಿ ಕೊಡುವಂತೆ ಮನವಿ ಮಾಡಿದ್ದೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು. ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಕೂಡಲೇ ಅನುಮತಿ ಕೊಡುವಂತೆ ಮನವಿ ಮಾಡಿದ್ದೇವೆ. ಮೇಕೆದಾಟು ಕುಡಿಯುವ ನೀರಿನ ಯೋಜನೆ. ಹೀಗಾಗಿ ಕೂಡಲೇ ಮೇಕೆದಾಟು ಯೋಜನೆಗೆ ಅನುಮತಿ ಕೊಡುವಂತೆ ಮನವಿ ಮಾಡಿದ್ದೇವೆ ಎಂದರು. https://ainlivenews.com/mukesh-ambani-property-once-again-joins-the-100-billion-club/ ಇನ್ನೂ ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ. ಕಾವೇರಿ ನೀರಾವರಿ ಬೋರ್ಡ್‌ನ ತೀರ್ಪು ರಾಜ್ಯಕ್ಕೆ ಮರಣ ಶಾಸನ. ನಿನ್ನೆ ಕೇಂದ್ರ ಜಲಶಕ್ತಿ ಸಚಿವಾಲಯದ ಜಲ ಸಂಪನ್ಮೂಲ ಸ್ಥಾಯಿ ಸಮಿತಿ ಸಭೆ ಇತ್ತು. ಆ ಸಭೆಯಲ್ಲಿ ಈ ಎಲ್ಲಾ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಹೇಳಿದರು