Author: AIN Author

ಬೆಂಗಳೂರು: ಜಾತಿಗಣತಿ ಮೂಲ ಪ್ರತಿ ನಾಪತ್ತೆ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಕಾಂತರಾಜ ವರದಿ ಹಲವು ಗೊಂದಲಗಳಿಗೆ ಕಾರಣವಾಗಿದೆ. ಸಿದ್ದರಾಮಯ್ಯ ಏಕಾಏಕಿ ಮಾಡಿದ್ದಾರೆ. ಇದು‌ಹತ್ತು ವರ್ಷದ ಹಳೆಯ ವರದಿಯಾಗಿದೆ. ಈಗ ಜನಸಂಖ್ಯೆ ಹೆಚ್ಚಾಗಿದೆ, ಜನರಿಂದ ವಿರೋಧ ವ್ಯಕ್ತವಾಗುತ್ತಿದೆ. ಕಾಂತರಾಜು ವರದಿಯಲ್ಲಿ ಸೆಕ್ರೆಟರಿ ಸಹಿ ಹಾಕಬೇಕು. https://ainlivenews.com/opposition-leader-ashok-warned-of-a-fight-against-the-congress-government/ ನಮ್ಮ‌ಅವಧಿಯಲ್ಲಿ ಸಹಿ ಹಾಕಲೇ ಇಲ್ಲ, ಈಗ ಕಾಂತರಾಜು ವರದಿಯ ಮೂಲ ಪ್ರತಿಯೇ ಕಾಣೆಯಾಗಿದೆ. 168 ಕೋಟಿ ಸರ್ಕಾರದ ಹಣ ಖರ್ಚು ಮಾಡಿ ವರದಿ ಕಾಣೆಯಾಗಿದೆ ಅಂದ್ರೆ ಸರ್ಕಾರ ಯಾಕೆ ತನಿಖೆ ಮಾಡುತ್ತಿಲ್ಲ? ಕಾಣೆಯಾಗಿರುವ ಬಗ್ಗೆ ಏನೂ ಮಾತನಾಡುತ್ತಿಲ್ಲ, ಇದನ್ನ ನಾನು‌ ಖಂಡಿಸುತ್ತೇನೆ. ಯಾರು ಖದ್ದಿದ್ದಾರೆ ಎಂಬುದರ ವಿಚಾರವಾಗಿ ತನಿಖೆ ಆಗಲೇಬೇಕು. ಸರಿಯಾದ ಮಾನದಂಡವಾಗಿ ಸಮಿಕ್ಷೆ ಮಾಡಬೇಕು. ಅತೀ ಆತುರ, ಓವರ್ ಆಕ್ಷನ್ ಆಗಿ ಸಿದ್ದರಾಮಯ್ಯ ವರದಿ ಸ್ವೀಕಾರಕ್ಕೆ ಮುಂದಾಗಿದ್ದಾರೆ ಎಂದರು.

Read More

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಗಡಿ ಜಿಲ್ಲೆಯ ರಜೌರಿಯಲ್ಲಿ ಬುಧವಾರ ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಸೇನಾ ಯೋಧರು ಹುತಾತ್ಮರಾಗಿದ್ದಾರೆ. ಹುತಾತ್ಮರಾದ ನಾಲ್ವರಲ್ಲಿ 63 ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ (MV Pranjal) ಸೇರಿದ್ದಾರೆ. ಹುತಾತ್ಮ ಯೋಧ (Soldier) ಪ್ರಾಂಜಲ್‌ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ. ಬಂಧು-ಬಳಗದವರು ನೋವಿನಲ್ಲಿರುವ ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ಪೋಷಕರಿಗೆ ಸಾಂತ್ವನ ಹೇಳುತ್ತಿದ್ದಾರೆ. ಸದ್ಯ ಪ್ರಾಂಜಲ್‌ ಪಾರ್ಥೀವ ಶರೀರ ಜಮ್ಮು ಮತ್ತು ಕಾಶ್ಮೀರದಲ್ಲಿಯೇ ಇದೆ. ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರುವ ಬಗ್ಗೆ ಕುಟುಂಬಸ್ಥರಿಗೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಪ್ರಾಂಜಲ್‌ ಹುತಾತ್ಮನಾದ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಮತ್ತು ಆಪ್ತರು ಮನೆಯ ಬಳಿ ಜಮಾಯಿಸಿದ್ದಾರೆ. ಗುರುವಾರ (ನ.23) ಬೆಂಗಳೂರಿಗೆ ಪಾರ್ಥಿವ ಶರೀರ ಬರುವುದು ಬಹುತೇಕ ಅನುಮಾನ, ಶುಕ್ರವಾರ ಮುಂಜಾನೆ ವೇಳೆಗೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಜಿಗಣಿಯ ನಂದನವನ ಬಡಾವಣೆಯಲ್ಲಿರುವ ಮನೆಯ ಸಮೀಪ ಹುತಾತ್ಮ ಯೋಧ…

Read More

ಬೆಂಗಳೂರು: ಜಾತಿಗಣತಿ (Caste Census) ವರದಿ ಜಾರಿಯಾದರೆ ಲಿಂಗಾಯತರು ಹಾಗೂ ಒಕ್ಕಲಿಗರ ಪ್ರಾಬಲ್ಯ ಕಡಿಮೆಯಾಗುವುದಿಲ್ಲ ಎಂದು ಶಾಸಕ ಬಸವರಾಜ್ ರಾಯರೆಡ್ಡಿ (Basvaraj Rayareddi) ಹೇಳಿದ್ದಾರೆ. https://ainlivenews.com/opposition-leader-ashok-warned-of-a-fight-against-the-congress-government/ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ವಿಚಾರವಾಗಿ ಸಚಿವರ ಸಹಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಜಾತಿ ಜನಗಣತಿ ಸ್ವೀಕಾರ ಮಾಡಲಿ. ನಾನೂ ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವನು. ಸಚಿವರು ಪತ್ರಕ್ಕೆ ಸಹಿ ಹಾಕಿದ್ದಕ್ಕೆ ನನ್ನ ಆಕ್ಷೇಪ ಇದೆ. ಸಚಿವರು ಸರ್ಕಾರದ ಭಾಗವಾಗಿ ಹೇಗೆ ಈ ವರದಿಯನ್ನು ವಿರೋಧಿಸಿ ಸ್ವೀಕಾರ ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಕೇವಲ ಒಬ್ಬರು ಇಬ್ಬರ ಬಗ್ಗೆ ನಾನು ಮಾತನಾಡುತ್ತಿಲ್ಲ. ಎಲ್ಲ ಸಚಿವರೂ ಹೀಗೆ ಸಹಿ ಹಾಕಿದರೆ ನನ್ನ ಆಕ್ಷೇಪವಿದೆ. ಜಾತಿಗಣತಿ ವಿಚಾರದಲ್ಲಿ ಏನು ಮಾಡಲು ಆಗುತ್ತದೆ? ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿಗಳ ಬಗ್ಗೆ ಜಾತಿಗಣತಿ ಮಾಡಲಾಗಿದೆ. ಲಿಂಗಾಯತ ಹಾಗೂ ಒಕ್ಕಲಿಗ ಬಲಿಷ್ಠ ಜಾತಿಗಳು. ಲಿಂಗಾಯತ ಸಮುದಾಯಕ್ಕೆ ಆತಂಕ ಬೇಕಾಗಿಲ್ಲ. ಯಾವುದೇ ಕಾರಣಕ್ಕೂ ರಾಜಕೀಯ ಪ್ರಾಬಲ್ಯ ಕಡಿಮೆ ಆಗುವುದಿಲ್ಲ ಎಂದಿದ್ದಾರೆ.

Read More

ಧಾರವಾಡ: ಚುನಾವಣಾಧಿಕಾರಿ ಮಾತಿನಿಂದ ಬೇಸತ್ತು ಬಿಎಲ್‌ಓ ಒಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಲ್ಲಿ ಕಿರಿಯ ಸಹಾಯಕ ಕ್ಲರ್ಕ್ ಆಗಿ ಕೆಲಸ ಮಾಡುತ್ತಿರುವ ಆತ್ಮಾನಂದ ಬಡಿಗೇರ ಎಂಬುವವರೇ ಇದೀಗ ಆತ್ಮಹತ್ಯೆಗೆ ಯತ್ನಿಸಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತ್ಮಾನಂದ ಬಡಿಗೇರ ಅವರನ್ನು ಜಿಲ್ಲಾಧಿಕಾರಿಗಳು ಚುನಾವಣಾ ಬಿಎಲ್‌ಓ (ಬೂತ್ ಮಟ್ಟದ ಚುನಾವಣಾಧಿಕಾರಿ) ಆಗಿ ನೇಮಕ ಮಾಡಿದ್ದರು. ಸದ್ಯ ಕಾಲೇಜಿನಲ್ಲಿ ಸೆಮಿಸ್ಟರ್ ಪ್ರವೇಶಾತಿ ಆರಂಭವಾಗಿದ್ದರಿಂದ ಆ ಕೆಲಸ ಮುಗಿಸಿಕೊಂಡು ಆತ್ಮಾನಂದ ಅವರು, ಪಾಲಿಕೆಯಲ್ಲಿ ನಡೆದಿದ್ದ ಚುನಾವಣಾ ಸಭೆಗೆ ತಡವಾಗಿ ಹಾಜರಾಗಿದ್ದರು. ಆ ವೇಳೆ ಪಾಲಿಕೆ ಚುನಾವಣಾಧಿಕಾರಿ ಸಭೆಯಲ್ಲಿಯೇ ಆತ್ಮಾನಂದ ಅವರನ್ನು ತಡವಾಗಿ ಬಂದಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. https://ainlivenews.com/housewifes-body-found-hanging-in-bangalore/ ಚುನಾವಣಾಧಿಕಾರಿ ನಿಂದಿಸಿದ್ದರಿಂದ ಮನನೊಂದ ಆತ್ಮಾನಂದ ಮನೆಗೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ನಡೆದು ಒಂದು ವಾರವಾಗಿದ್ದರೂ…

Read More

ಬೆಂಗಳೂರು:  ಕುಮಾರಸ್ವಾಮಿ ವಿರುದ್ದ ಜೆಡಿಎಸ್ ಕಚೇರಿಗೆ ಪೋಸ್ಟರ್ ಅಂಟಿಸಿದ ವಿಚಾರವಾಗಿ ಮಾತನಾಡಿದ ಪೋಸ್ಟರ್ ಅಂಟಿಸಿದ್ದ ಕಾಂಗ್ರೆಸ್ ಮುಖಂಡ ಎಸ್ ಮನೋಹರ್, ಪೋಸ್ಟರ್ ವಾರ್ ಎಂಬ ಪದ ಜೆಡಿಎಸ್ ಬಳಸಿದೆ. ಅನೇಕ ಬಾರಿ ಕುಮಾರಸ್ವಾಮಿ ಬ್ಲ್ಯೂ ಫಿಲಂ ಪದ ಬಳಸಿದ್ದಾರೆ. ಬ್ಲ್ಯೂ ಫಿಲಂ ನೋಡೋದು ತಪ್ಪೇ ಮಾಡೋದು ತಪ್ಪೇ. ಎಲ್ಲರನ್ನೂ ಬ್ಲ್ಯಾಕ್ ಮೇಲ್ ಮಾಡಿಕೊಂಡೇ ಬಂದ ರಾಜಕಾರಣಿ ಕುಮಾರಸ್ವಾಮಿ. ಅವರನ್ನು ನಾವು ಗೌರವದಿಂದಲೇ ಮಾತನಾಡಿಕೊಂಡು ಬಂದಿದ್ದೇವೆ. https://ainlivenews.com/opposition-leader-ashok-warned-of-a-fight-against-the-congress-government/ ಆದರೆ ಕುಮಾರಸ್ವಾಮಿ ಅವರು ಎಲ್ಲ ರಾಜಕಾರಣಿಗಳ ಬಗ್ಗೆ ಬೇರೆ ಬೇರೆ ಪದಗಳನ್ನು ಬಳಕೆ ಮಾಡುತ್ತಾರೆ. ಅವರ ಯೋಗ್ಯತೆ ಅರ್ಹತೆ ಅನುಸಾರ ಪದ ಬಳಸುತ್ತಾರೆ. ನಾನೊಬ್ಬನೆ ಸಿಂಹ ಎಂಬ ಕುಮಾರಸ್ವಾಮಿ ಯಾಕೆ ಭ್ರಷ್ಟಾಚಾರ ಆರೋಪ ಮಾಡಿ ಅವರೇ ಸಿಎಂ ಆಗಿದ್ದಾಗ ತನಿಖೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಪೋಸ್ಟರ್ ವಾರ್ ನಡೆಯುವಾಗ ನಾವು ಎಲ್ಲ ಮಾಹಿತಿ ಮಾಧ್ಯಮಗಳಿಗೆ ನೀಡಿಯೇ ಕಾನೂನಾತ್ಮಕವಾಗಿಯೇ ಮಾಡುತ್ತೇವೆ. ಜೆಡಿಎಸ್ ಸಾಮಾಜಿಕ ಜಾಲತಾಣಗಳಲ್ಲಿ ಯಾವ ಯಾವ ಸುದ್ದಿ ಬರುತ್ತಿದೆ ಎಂಬುದನ್ನು ಮಾಧ್ಯಮಗಳೇ ನೋಡಲಿ. ಜೆಡಿಎಸ್…

Read More

ಬೆಂಗಳೂರು: ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ, ನಮ್ಮ ಪ್ರಧಾನಿಗಳು ನಡ್ಡಾ, ಅಮೀತ್ ಶಾ, ಸಂತೋಷ್ ಜೀ, ಬಿಎಸ್ವೈ, ಬೊಮ್ಮಾಯಿ ಗಣ್ಯರೆಲ್ಲ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ನನ್ನನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. https://ainlivenews.com/eskom-online-service-outage-for-3-days-from-tomorrow/ ವಿಪಕ್ಷ ನಾಯಕರ ಕಚೇರಿಗೆ ಇಂದು ಪೂಜೆ ಮಾಡಿ ವಿದ್ಯುಕ್ತವಾಗಿ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳುಗಳಲ್ಲಿ ಏನೂ ಆಗಿಲ್ಲ. ಅನೇಕ ಕಪ್ಪು ಚುಕ್ಕೆಗಳು ಕಾಣಿಸುತ್ತಿವೆ. ಸರ್ಕಾರದ ಕಿವಿ ಹಿಂಡುವ ಕೆಲಸಗಳನ್ನ ಸದನದಲ್ಲಿ ಮಾಡುತ್ತೇವೆ, ಅದಕ್ಕೂ ಬಗ್ಗದೇ ಹೋದರೆ ಉಗ್ರ ಹೋರಾಟ ಮಾಡುತ್ತೇವೆ. ವರ್ಗಾವಣೆಯಲ್ಲಿ ಸರ್ಕಾರ ಮುಳುಗಿದೆ ಎಂದರು

Read More

ಬೆಂಗಳೂರು:  ಪಕ್ಷದಲ್ಲಿ ಎಲ್ಲರನ್ನೂ ಜೊತೆಗೆ ಕರೆದೊಯ್ಯುವುದು ನನ್ನ ಜವಾಬ್ದಾರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಮಾತನಾಡಿದ ಅವರು, ಜಾರಕಿಹೊಳಿ ನಡೆ ಬಗ್ಗೆ ಹಲವು ರೀತಿಯಲ್ಲಿ ಚರ್ಚೆ ನಡೆಯುತ್ತಿತ್ತು. ಕೆಲವು ಬಾರಿ ಶಾಸಕ ರಮೇಶ್ ಅಸಮಾಧಾನ ತೋಡಿಕೊಂಡಿದ್ದರು. https://ainlivenews.com/eskom-online-service-outage-for-3-days-from-tomorrow/ ಹೀಗಾಗಿ ರಮೇಶ್ ಭೇಟಿ ಮಾಡಿ ಅರ್ಧಗಂಟೆ ಚರ್ಚೆ ಮಾಡಿದ್ದೇನೆ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕು. ಪಕ್ಷದಲ್ಲಿ ಸಹಕಾರ ಕೊಡೋದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಕೆಲವು ಸಣ್ಣಪುಟ್ಟ ಅಸಮಾಧಾನಗಳಿದ್ದವು, ಅದರ ಬಗ್ಗೆ ಚರ್ಚಿಸಿದ್ದೇವೆ ಎಂದರು. ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಸೋಮಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಪಕ್ಷದ ಹಿರಿಯರು ಏನೇ ಮಾತಾಡಿದರೂ ಆಶೀರ್ವಾದ ಅಂದುಕೊಳ್ಳುತ್ತೇನೆ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತೇನೆ ಎಂದರು.

Read More

ಬೆಂಗಳೂರು: ಜಾತಿಗಣತಿ ಮೂಲ ಪ್ರತಿ ಕಾಣೆ ಆಗಿದೆ ಅನ್ನೋದೆಲ್ಲ ಸುಳ್ಳು ವಿರೋಧ ಪಕ್ಷವರು ಏನೇನೋ ಹೇಳಿಕೆಗಳನ್ನ ಕೊಡುತ್ತಿದ್ದಾರೆ ಅದು ಸರಿಯಲ್ಲ ಎಂದು ಹೇಳಿದ್ದರು. https://ainlivenews.com/luxury-cars-at-bangalore-it-office-auction/ ಜಾತಿಗಣತಿ ವರದಿ ಗೊಂದಲವಾಗಿರೋ ವಿಚಾರವಾಗಿ ಮಾತನಾಡಿದ ಅವರು, ಆ ವರದಿಯನ್ನ ನಾವಿನ್ನು ಹೊರಗೆ ತಂದೆ ಇಲ್ಲ.ಆಯೋಗದವರು ವರದಿಯನ್ನ ಸರ್ಕಾರಕ್ಕೆ ಕೊಟ್ಟ ನಂತರ ಸರ್ಕಾರ ಅದನ್ನ ತೀರ್ಮಾನ ಮಾಡುತ್ತದೆ ಎಂದರು.  ಮೂಲ ಪ್ರತಿ ಕಾಣೆ ಆಗಿದೆ ಅನ್ನೋದೆಲ್ಲ ಸುಳ್ಳು. ಆಯೋಗದ ಅಧ್ಯಕ್ಷರಿಗೆ ಒಂದು ತಿಂಗಳು ಹೆಚ್ಚಿಗೆ ಕಾಲಾವಕಾಶ ನೀಡಲಾಗಿದೆ. ವರದಿನೇ ಆಚೆ ಬಂದಿಲ್ಲ, ವರದಿ ಆಚೆ ಬಂದ ನಂತರ ಪರ ವಿರೋಧ ಅಭಿಪ್ರಾಯಗಳು ಕೇಳಿಬರಬಹದು. ಏನೂ ಇಲ್ಲದೇನೆ ಹೀಗೆ ಚರ್ಚೆ ನಡೆಸೋದು ಎಷ್ಟರ ಮಟ್ಟಿಗೆ ಸರಿ. ವಿರೋಧ ಪಕ್ಷವರು ಕೂಡ ಏನೇನೋ ಹೇಳಿಕೆಗಳನ್ನ ಕೊಡುತ್ತಿದ್ದಾರೆ. ವರದಿ ಬಂದ ಮೇಲೆ ತಾನೇ ಅದೆಲ್ಲ ಮಾತನಾಡೋದು ಎಂದರು.

Read More

ತಿರುವನಂತಪುರಂ: ಸುಪ್ರೀಂ ಕೋರ್ಟ್‌ ಮಾಜಿ ಜಡ್ಜ್‌  ಫಾತೀಮಾ ಬೀವಿ ಗುರುವಾರ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು ಎಂದು ಏಷ್ಯಾನೆಟ್‌ ನ್ಯೂಸ್‌ ಮಲಯಾಳಂ ವರದಿ ಮಾಡಿದೆ. ಫಾತಿಮಾ ಬೀವಿ ಅವರು ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶರಾಗಿದ್ದರು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾಜಿ ಸದಸ್ಯೆಯೂ ಆಗಿದ್ದ ಫಾತಿಮಾ ಬೀವಿ, ಅವರು 1997-2001ರವರೆಗೆ ತಮಿಳುನಾಡಿನ ರಾಜ್ಯಪಾಲರಾಗಿದ್ದರು. ದೇಶದ ಉನ್ನತ ನ್ಯಾಯಾಂಗಕ್ಕೆ ನೇಮಕಗೊಂಡ ಮೊದಲ ಮುಸ್ಲಿಂ ಮಹಿಳೆಯೂ ಆಗಿದ್ದರು. 1927 ರಲ್ಲಿ ಕೇರಳದಲ್ಲಿ ಜನಿಸಿದ್ದ ಫಾತೀಮಾ ಬೀವಿಗೆ ಅವರ ತಂದೆ ಕಾನೂನು ವಿದ್ಯಾಭ್ಯಾಸ ಮಾಡಲು ಪ್ರೋತ್ಸಾಹ ನೀಡಿದ್ದರು. 1950 ರಲ್ಲಿ, ಬಾರ್ ಕೌನ್ಸಿಲ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಇವರು,  ಬಾರ್ ಕೌನ್ಸಿಲ್ ಚಿನ್ನದ ಪದಕವನ್ನು ಪಡೆದ ಮೊದಲ ಮಹಿಳೆ ಎನಿಸಿಕೊಂಡಿದ್ದರು. https://ainlivenews.com/housewifes-body-found-hanging-in-bangalore/ ಕೇರಳದಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ಫಾತೀಮಾ ಬೀವಿ, 1974 ರಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದರು. 1980 ರಲ್ಲಿ ಅವರು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಸೇವೆ ಸಲ್ಲಿಸಿ 1983…

Read More

ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್)ಕ್ಕೆ ಇದೇ ಮೊದಲ ಬಾರಿಗೆ ರಾಯಭಾರಿಯನ್ನ ಆಯ್ಕೆ ಮಾಡಿದೆ…ನಟ‌ರಾಕ್ಷಸ ಡಾಲಿ ಧನಂಜಯ್ ಲಿಡ್ಕರ್ ಗೆ ರಾಯಭಾರಿಯಾಗಿದ್ದಾರೆ. ಸ್ಯಾಂಡಲ್‌ವುಡ್ ನಟ, ನಿರ್ಮಾಪಕನಾಗಿ ಡಾಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ಸ್ಟಾರ್. ನಟನೆ, ನಿರ್ಮಾಣದ ಜೊತೆಗೀಗ ಧನಂಜಯ ಜಾಹೀರಾತು ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಮೊದಲ ಬಾರಿಗೆ ಡಾಲಿ ಸರ್ಕಾರದ ಜಾಹೀರಾತಿನಲ್ಲಿ ಮಿಂಚುವ ಮೂಲಕ ಲಿಡ್ಕರ್ ಬ್ರಾಂಡ್ ಪ್ರಮೋಟ್ ಮಾಡುತ್ತಿದ್ದಾರೆ. ಲಿಡ್ಕರ್ ನಲ್ಲಿ 50 ಸಾವಿರಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳ ಕುಟುಂಬವಿದೆ. ಚರ್ಮ ಕೈಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸರ್ಕಾರ ಸ್ಯಾಂಡಲ್‌ವುಡ್ ಸ್ಟಾರ್ ಧನಂಜಯ್ ಅವರನ್ನು ರಾಯಾಭಾರಿಯಾಗಿ ನೇಮಕಮಾಡಿದೆ. ಈಗಾಗಲೇ ಡಾಲಿ ಜೊತೆ ಮಾತುಕತೆಯಾಗಿದ್ದು ಧನಂಜಯ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಧಿಕೃತ ಪ್ರಕಟಣೆಯೊಂದೆ ಬಾಕಿ ಇದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ಎಸ್ ವಸುಂಧರಾ, ಧನಂಜಯ್ ಅವರು ರಾಯಭಾರಿಯಾಗಿದ್ದು ತುಂಬಾ ಖುಷಿ ಇದೆ. ಅವರು ಸ್ಯಾಂಡಲ್‌ವುಡ್‌ನ ಲೀಡಿಂಗ್ ನಟ ಎಲ್ಲಾ ವರ್ಗದ…

Read More