Author: AIN Author

ಬೆಂಗಳೂರು : ನಮ್ಮ ನೋವು ಏನು ಅಂತ ಈಗ ಹೇಳಕ್ಕೆ ಬರಲ್ಲ, ಲೋಕಸಭಾ ಚುನಾವಣೆವರೆಗೂ ಅಸಮಾಧಾನ ತೋರಿಸಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ಬಳಿಕ ಮಾತನಾಡಿದ ಅವರು, ನಾವು ಇಬ್ಬರೂ ಚರ್ಚೆ ಮಾಡಿದ್ದೇವೆ. ನಾಲ್ಕು ಗೋಡೆ ಮಧ್ಯೆ ಮಾಡಿದ ಚರ್ಚೆ ಹೇಳಲ್ಲ, ವಿಜಯೇಂದ್ರ ಈಗ ನಮ್ಮ ಅಧ್ಯಕ್ಷರು, ಅವರ ಬಗ್ಗೆ ನಾವು ಪ್ರಶ್ನೆ ಮಾಡಲ್ಲ ಎಂದು ತಿಳಿಸಿದರು. ನಿನ್ನೆ ನಾನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್ ಚರ್ಚೆ ಮಾಡಿ ಸಹಕಾರ ಕೊಡಲು ನಿರ್ಣಯ ತೆಗೆದುಕೊಂಡಿದ್ದೇವೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಕೂಡಿ ಕೆಲಸ ಮಾಡಲು ಒಪ್ಪಿದ್ದೇವೆ. ವಿಜಯೇಂದ್ರ ಇವತ್ತು ಬಂದಿದ್ದಾರೆ, ಎಲ್ಲವೂ ಈಗ ಸರಿಯಾಗಿದೆ. ನಾವೆಲ್ಲ ಒಟ್ಟಿಗೆ ಕೆಲಸ ಮಾಡ್ತೇವೆ, ನಾವು ಅಸಮಾಧಾನ ತೋರಿಸಲ್ಲ ಎಂದು ಹೇಳಿದರು. ಅಸಮಾಧಾನ ಇತ್ತು, ನಾವೂ ಮನುಷ್ಯರೇ ಅಲ್ವಾ? ಬಿ.ವೈ. ವಿಜಯೇಂದ್ರ, ಆರ್. ಅಶೋಕ್ ಅವರನ್ನು ಒಪ್ಪಿಕೊಂಡಿದ್ದೇವೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಸಹಕಾರ ಕೊಡ್ತೇವೆ, ಬಿಜೆಪಿಯಲ್ಲಿ ಪಕ್ಷದ ಸಂಘಟನೆ…

Read More

ಬೆಂಗಳೂರಿನಲ್ಲಿ ಸರಿಯಾಗಿ ಫುಟ್ ಪಾತ್ ನಲ್ಲಿ ನಡೆಯೋದೇ ಕಷ್ಟ. ಅತ್ತೊಂದ್ರಲ್ಲಿ ಫುಟ್‌ಪಾತ್‌ಗಳ ಮೇಲೆ ಯಮರೂಪಿ ಟ್ರಾನ್ಸ್‌ ಫಾರ್ಮರ್‌ ಹಾಗೂ ವಿದ್ಯುತ್ ಕಂಬಗಳು ಜನರ ಪಾಲಿಗೆ ಕಂಟಕ ತಂದಿವೆ.ಇವುಗಳ ಬಳಿ ಸ್ವಲ್ಪ ಯಾಮಾರಿದ್ರೂ ಯಮನ ಪಾದ ಸೇರೋದು ಗ್ಯಾರಂಟಿ.. ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗ ಕೂಡ ಸೇಫಲ್ಲ ಅನ್ನೋದು ಆಗಾಗ ನಡೆಯೋ ದುರ್ಘಟನೆಗಳೇ ಸಾಕ್ಷಿ.. ಪಾದಚಾರಿ ಮಾರ್ಗದಲ್ಲಿರೋ ಟ್ರಾನ್ಸ್ ಫಾರ್ಮರ್ ಗಳು ಹಾಗೂ ವಿದ್ಯುತ್ ಕಂಬಗಳಿಂದ ಹೊರಚಾಚಿರುವ ವೈರ್ಗಳು ಜನರ ಜೀವ ನುಂಗಲು ಕಾದು ಕುಳಿತಿವೆ. ಕಳೆದ ಎರಡು ಮೂರು ವರ್ಷಗಳಲ್ಲಿ ನಗರ ವ್ಯಾಪ್ತಿಯಲ್ಲಿ 100 ಕ್ಕೂ ಹೆಚ್ಚು ಮಂದಿ ವಿದ್ಯುತ್ ಅವಘಡಗಳಿಂದ ಜೀವ ಕಳೆದುಕೊಂಡಿದ್ದಾರೆ.ಜನರ ಓಡಾಟಕ್ಕೆ ತೊಂದರೆಯಾಗಿರುವ ಟ್ರಾನ್ಸ್ ಫಾರ್ಮರ್‌ಗಳನ್ನು ಹೈಕೋರ್ಟ್ ಆದೇಶದ ಮೇರೆಗೆ ಅವುಗಳ ವಿನ್ಯಾಸ ಬದಲಾಯಿಸಿ ಸ್ಥಳಾಂತರಿಸುವ ಕೆಲಸವನ್ನು ಮಾಡಬೇಕು .ಅಂದರೆ ಈ ಬಗ್ಗೆ ಬೆಸ್ಕಾಂ ನಿರ್ಲಕ್ಷ್ಯ ವಹಿಸಿರೋ ಜನರ ಕೆಂಗಣ್ಣಿಗೆ ಕಾರಣವಾಗಿದೆ. https://ainlivenews.com/opposition-leader-ashok-warned-of-a-fight-against-the-congress-government/ ಮೂರು ಕಂಬಗಳ ಬದಲಾಗಿ ಹೊಸ ವಿನ್ಯಾಸದಲ್ಲಿ ಒಂದೇ ಕಂಬದಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಸಲಾಗುತ್ತಿದೆ. ನೆಲಮಟ್ಟದಲ್ಲಿದ್ದ…

Read More

ದೊಡ್ಡಬಳ್ಳಾಪುರ: ಹಳೇ ದ್ವೇಷದ ಹಿನ್ನೆಲೆ ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ರೈಲ್ವೆ ಸ್ಟೇಷನ್ ಬಳಿ ಘಟನೆ ನಡೆದಿದೆ. ಅರೆಹಳ್ಳಿ ಗುಡ್ಡಹಳ್ಳಿ ನಿವಾಸಿ ಪೃಥ್ವಿರಾಜ್‌ (26) ಹಲ್ಲೆಗೆ ಒಳಗಾದ ಯುವಕ. ಕ್ಷುಲ್ಲಕ ಕಾರಣಕ್ಕೆ ಭಾನುವಾರ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ನಿನ್ನೆ ಸಂಜೆ ಒಬ್ಬಂಟಿಯಾಗಿ ಸಿಕ್ಕ ಪೃಥ್ವಿರಾಜ್‌ ಮೇಲೆ ಕೋಳಿ ಅಂಗಡಿಯಲ್ಲಿ ಇದ್ದ ಚಿಕನ್ ಕಟ್ ಮಾಡುವ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ. ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿರುವ ಪೃಥ್ವಿರಾಜ್‌ ನನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಡಾಬಾ ಬಳಿ ನಡೆದ ಯುವಕನ ಕೊಲೆ ಪ್ರಕರಣ ಮಾಸುವ ಮೊದಲೇ ನಿನ್ನೆ ಸಂಜೆ ನಡೆದ ಹಲ್ಲೆ ಘಟನೆಯಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಸಿಕೊಂಡಿದ್ದಾರೆ.

Read More

ವಿಜಯಪುರ: ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ದ ವಿಜಯಪುರದ ಪರಿಶ್ರಮ ಮಹಿಳಾ ಸಾಂತ್ವನ ಸಂಸ್ಥೆ ಅಧ್ಯಕ್ಷೆ ವಿದ್ಯಾ ಪಾಟೀಲ್ ಎಂಬುವವರು ನಾಲಿಗೆ ಹರಿ ಬಿಟ್ಟಿದ್ದಾರೆ. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ವಿದ್ಯಾ ಪಾಟೀಲ್, ಪಂಚಮಸಾಲಿ ಶ್ರೀಗಳಿಗೆ ಕಾವಿ ಬಿಚ್ಚಿ ಚಪ್ಪಲಿ ಸೇವೆ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಲುಬಿಚ್ಚಿದ್ದ ಕತ್ತೆಯೆಂದು ಸ್ವಾಮೀಜಿಗೆ ಜರಿದ ಮಹಿಳೆ, ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ರಾಜಕೀಯ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ತಾವು ಬಸವಣ್ಣನವರ ಹೆಸರಿನಲ್ಲಿ ಕಾವಿ ಧರಿಸಿದನ್ನು ಮರೆತಿದ್ದಾರೆ. ಬಸವಣ್ಣನ ಹೆಸರಿನಲ್ಲಿ ರಾಜಕೀಯ ಮಾಡುವುದಕ್ಕೆ ನಿಮಗೆ ಯಾವ ಅರ್ಹತೆ ಇಲ್ಲ. ಬಸವಣ್ಣನವರಿಗೆ ಯಾವುದೇ ಜಾತಿ ಇಲ್ಲ, ನಿಮಗೆ ಜಾತಿ ಬಗ್ಗೆ ಸರ್ಕಾರದ ಜೊತೆ ಹೋರಾಟ ಮಾಡಬೇಕಿದ್ದರೆ ಕಾವಿ ಬಿಚ್ಚಿಟ್ಟು ಮಾಡಿ ಎಂದು ಗುಡುಗಿದ್ದಾರೆ. ಈ ಕುರಿತು ರಾಜ್ಯದ ಇತರೆ ಸ್ವಾಮೀಜಿಗಳ ಜೊತೆಗೆ ಮಾತನಾಡಿದ್ದಾಗಿಯೂ ಹೇಳಿದ್ದಾರೆ. ಇನ್ನು ಪಂಚಮಸಾಲಿ ಸಮಾಜಕ್ಕೆ 2ಎ…

Read More

ಕನ್ನಡದ ನಟಿ ರಾಗಿಣಿ ದ್ವಿವೇದಿ (Ragini Dwivedi) ಜಮ್ಮು ಕಾಶ್ಮೀರದ ವೈಷ್ಣೋ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಕುಟುಂಬದ ಜೊತೆ ದೇವರ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ವೈಷ್ಣೋ ದೇವಿ ದೇವಸ್ಥಾನಕ್ಕೆ ನಟಿ ಭೇಟಿ ನೀಡಿದ್ದಾರೆ. ಜೈ ವೈಷ್ಣೋ ಮಾ. ನಿಮ್ಮ ಮೇಲೆ ದೈವಿಕ ಶಕ್ತಿಯು ಪ್ರಜ್ವಲಿಸುತ್ತದೆ ಎಂದು ತಿಳಿದುಕೊಳ್ಳುವುದು ಅನುಭವಿಸುವುದು ಮತ್ತೊಂದು ಭಾವನೆ ಎಂದು ರಾಗಿಣಿ ತಮ್ಮ ಸೋಷಿಯಲ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕೆಂಪೇಗೌಡ ಚಿತ್ರದ (Kempegowda) ನಟಿ ರಾಗಿಣಿ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸುತ್ತಿದ್ದಾರೆ. 8ಕ್ಕೂ ಹೆಚ್ಚು ಸಿನಿಮಾಗಳು ರಾಗಿಣಿ ಕೈಯಲ್ಲಿವೆ.

Read More

ಮೈಸೂರು: ರೈಲು ನಿಲ್ದಾಣದಲ್ಲಿ ರೈಲಿಗೆ ತಲೆ ಕೊಟ್ಟು ರೈಲ್ವೆ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಮೈಸೂರು ರೈಲು ನಿಲ್ದಾಣದ ಪ್ಲಾಟ್​ಫಾರಂ ನಂಬರ್ 6ರಲ್ಲಿ ನಡೆದಿದೆ. https://ainlivenews.com/housewifes-body-found-hanging-in-bangalore/ ಮೆಕ್ಯಾನಿಕಲ್ ವಿಭಾಗದ ಸೀನಿಯರ್ ಸೆಕ್ಷನ್ ಇಂಜಿನಿಯರ್ ಪ್ರಭು(45) ಮೃತ ವ್ಯಕ್ತಿ. ಘಟನಾ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ಸಂಬಂಧ ರೈಲ್ವೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

Read More

ಬೆಂಗಳೂರು ಕೇಂದ್ರ ವ್ಯಾಪ್ತಿಯಲ್ಲಿ ಬರುವ ಲಿಂಗ ಪ್ರಮಾಣ, ಚುನಾವಣಾ ಜನಸಂಖ್ಯೆ(EP) ಪ್ರಮಾಣ ಹಾಗೂ ಯುವ ಮತದಾರರ ನೋಂದಣಿ ಪ್ರಮಾಣವನ್ನು ಹೆಚ್ಚಳ ಮಾಡಲು ಕ್ರಿಯಾಯೋಜನೆ ರೂಪಿಸಿಕೊಳ್ಳಲು ಬೆಂಗಳೂರು ಕೇಂದ್ರದ ಮತದಾರರ ಪಟ್ಟಿ ವೀಕ್ಷಕರು(Roll Observer) ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀಮತಿ ಉಮಾ ಮಹದೇವನ್, ಭಾ.ಆ.ಸೇ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು‌. ಬೆಂಗಳೂರು ಕೇಂದ್ರ ವ್ಯಾಪ್ತಿಯಲ್ಲಿನ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ಪರಿಶೀಲನೆ ಕುರಿತು ಇಂದು ರಾಜಕೀಯ ಪಕ್ಷದ ಪ್ರತಿನಿಧಿಗಳ ಜೊತೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಕೇಂದ್ರ ವ್ಯಾಪ್ತಿಯಲ್ಲಿ ಬರುವ 7 ವಿಧಾನ ಸಭಾ ಕ್ಷೇತ್ರ(ಆರ್‌ಆರ್ ನಗರ, ಶಿವಾಜಿನಗರ, ಶಾಂತಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ರಾಜಾಜಿನಗರ)ಗಳಲ್ಲಿ ಮತದಾರರ ಪ್ರಮಾಣ ಹೆಚ್ಚಳ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಯಿತು. ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಮಾಡಿ: ಬೆಂಗಳೂರು ಕೆಂದ್ರ ವ್ಯಾಪ್ತಿಯಲ್ಲಿ IEC ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಂಡು ಮತದಾರರ…

Read More

ಬೆಂಗಳೂರು: ಕರಾವಳಿಯಲ್ಲಿ ಕೇಳಿ ಬರುತ್ತಿದ್ದ ಕಂಬಳದ ಕೊಂಬಿನ ಕಹಳೆ ಇನ್ನುಂದೆ ಬೆಂಗಳೂರಿನಲ್ಲಿಯೂ ಕೇಳಿಬರಲಿದೆ. ಹೌದು, 2023-24ರ ಕಂಬಳ ಸೀಸನ್ ಈಗಾಗಲೇ ಆರಂಭವಾಗಿದ್ದು,ನ.25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಸ್ಪರ್ಧೆ ನಡೆಯಲಿದೆ. ಪುತ್ತೂರು ಶಾಸಕ ಅಶೋಕ್ ರೈಗಳ ಸಾರಥ್ಯದಲ್ಲಿ ಬೆಂಗಳೂರು ಕಂಬಳಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ಮೊದಲು ಬಂಟ್ವಾಳ ತಾಲೂಕಿನ ಕಕ್ಯಪದವು ಎಂಬಲ್ಲಿ ಮೊದಲ ಕಂಬಳ ನಡೆದಿದೆ. 189 ಜೋಡಿ ಕೋಣಗಳು ಈ ಕೂಟದಲ್ಲಿ ಭಾಗವಹಿಸಿದ್ದವು. ಇದೀಗ ಈ ಕೋಣಗಳು ಬೆಂಗಳೂರಿನತ್ತು ಪ್ರಯಾಣ ಬೆಳಸಿದ್ದಾವೆ. ಉಪ್ಪಿನಂಗಡಿಯಿಂದ ಪ್ರಯಾಣ ಆರಂಭ ಉಭಯ ಜಿಲ್ಲೆಯ ಎಲ್ಲಾ ಓಟದ ಕೋಣಗಳೊಂದಿಗೆ ಯಜಮಾನರುಗಳು ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಇಂದು  ಬೆಳಗ್ಗೆ 9 ಗಂಟೆಯ ಸುಮಾರಿಗೆ ಉಪ್ಪಿನಂಗಡಿಯ ಕಾಲೇಜು ಮೈದಾನದಲ್ಲಿ ಸೇರಲಿದ್ದಾರೆ. ಅಲ್ಲಿ ಗಣಹೋಮ ನಡೆದು, ಬಳಿಕ ಉಪಹಾರ ಸೇವಿಸಿ 10.30ಕ್ಕೆ ಸರಿಯಾಗಿ ಬೆಂಗಳೂರು ಕಡೆ ಪ್ರಯಾಣ ಆರಂಭಿಸಲಿದ್ದಾರೆ.

Read More

ಬೆಂಗಳೂರು: ನಾನು ಡಿಸೆಂಬರ್ 6 ನಂತರ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. https://ainlivenews.com/opposition-leader-ashok-warned-of-a-fight-against-the-congress-government/ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ನನ್ನ ಮನಸ್ಸಿನ ಭಾವನೆಯನ್ನೂ ಇದೇ  ಡಿ. 6ರ ನಂತರ ಹೇಳುತ್ತೇನೆ. ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿರುವ ಮಾತಿಗೆ ನನ್ನ ಸಮ್ಮತಿ ಇದೆ. ನಮ್ಮ ಪಕ್ಷದಲ್ಲಿ ಒಂದು ರೀತಿ ಸೋಮನಹಳ್ಳಿ ಮುದುಕಿ ಕಥೆ ಆಗಿದೆ ಎಂದರು. ಹೈಕಮಾಂಡ್ ಸೂಚನೆ ತಲೆ ಮೇಲೆ ಹೊತ್ತು ದುಡಿಮೆ ಮಾಡಿದ ಮೇಲೆ ಯಾವ ರೀತಿ ನನಗೆ ಹೊಡೆತ ಆಯ್ತು ಎಂಬುದನ್ನು ಡಿ.6 ಬಳಿಕ ಹೇಳ್ತಿನಿ. ಬಿಡಿ, ಬಿಡಿಯಾಗಿ ವಿವರಿಸ್ತಿನಿ. ರಾಜಕಾರಣ ದೊಂಬರಾಟ ಅಲ್ಲ. ರಾಜಕಾರಣ ಯಾವುದೇ ಮನೆತನಕ್ಕೆ ಸೀಮಿತವಲ್ಲ.ರಾಜಕಾರಣ ನಾಟಕ ಕಂಪನಿ ಅಲ್ಲ. ಒಳ ಒಪ್ಪಂದಕ್ಕೆ ಸೀಮಿತವಲ್ಲ ಎಂದು ಹೇಳಿದ್ಧಾರೆ..

Read More

ಧಾರವಾಡ: ಸೈಬರ್ ಕ್ರೈಂ ಎನ್ನುವುದು ಇದೀಗ ಹೆಮ್ಮರವಾಗಿ ಹಬ್ಬಿದೆ. ಸಾಮಾನ್ಯ ಜನರಿಗಷ್ಟೇ ಸೈಬರ್ ಕ್ರೈಂನಿಂದ ಮೋಸವಾಗುತ್ತಿತ್ತು. ಆದರೆ, ಇದೀಗ ಕ್ರೈಂ ಮಾಡುವವರನ್ನು ಪತ್ತೆ ಮಾಡುವ ಪೊಲೀಸರಿಗೂ ಸೈಬರ್ ಕ್ರೈಂ ತನ್ನ ಕೈ ಚಳಕ ತೋರಿಸುತ್ತಿದೆ. ಹೌದು! ಧಾರವಾಡ ಉಪನಗರ ಠಾಣೆ ಇನ್‌ಸ್ಪೆಕ್ಟರ್ ದಯಾನಂದ ಶೇಗುಣಸಿ ಎಂಬುವವರ ಬ್ಯಾಂಕ್ ಖಾತೆಯಿಂದ ಬರೊಬ್ಬರಿ 8.25 ಲಕ್ಷ ರೂಪಾಯಿ ವರ್ಗಾವಣೆಯಾಗಿದೆ. ಈ ಸಂಬಂಧ ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್‌ಸ್ಪೆಕ್ಟರ್ ದಯಾನಂದ ಅವರು ವೈಯಕ್ತಿಕವಾಗಿ ತಮ್ಮ ಬ್ಯಾಂಕ್ ಖಾತೆಯ ವಿವರವನ್ನು ಬೇರೆ ಯಾರೊಂದಿಗೂ ಹಂಚಿಕೊಳ್ಳದೇ ಇದ್ದರೂ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಬ್ಯಾಂಕ್‌ನವರು ನೆಟ್ ಸೆಕ್ಯುರಿಟಿ ಬಳಸದೇ ನಿಷ್ಕಾಳಜಿಯಿಂದಲೋ ಅಥವಾ ಯಾವುದೋ ಅಧಿಕಾರಿಯ ಹಸ್ತಕ್ಷೇಪದಿಂದ ಅಪರಿಚಿತ ವ್ಯಕ್ತಿ ಹಣ ವರ್ಗಾಯಿಸಿಕೊಂಡಿದ್ದಾನೆ. https://ainlivenews.com/housewifes-body-found-hanging-in-bangalore/ ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದ ಸಂದರ್ಭದಲ್ಲಿ ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ 50 ಸಾವಿರ ರೂಪಾಯಿಯನ್ನು 12 ಬಾರಿ, 45 ಸಾವಿರ ರೂಪಾಯಿಯನ್ನು…

Read More