ದೇವರಹಿಪ್ಪರಗಿ ತಾಲೂಕು ಸೇರಿದಂತೆ ಜಿಲ್ಲಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬನ್ನು ಕಾರ್ಖಾನೆಗೆ ಸಾಗಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಬೆಳೆದ ಕಬ್ಬು ಕಟಾವು ಮಾಡಿ ಸಕ್ಕರೆ ಕಾರ್ಖಾನೆಗಳಿಗೆ ರವಾನಿಸಲು ನುರಿತ ಕಾರ್ಮಿಕರು ಕೊರತೆ ಒಂದೆಡೆಯಾದರೆ, ಇನ್ನೊಂದೆಡೆ ಬೆಳೆದ ಕಬ್ಬು ಗಾಳಿಗೆ ನೆಲಕ್ಕೆ ಒರಗಿ ಬೀಳುತ್ತಿದೆ. ಮೇಲಾಗಿ ಈ ಸಲ ನೀರಿನ ಕೊರತೆಯುಂಟಾಗಿ ಕಬ್ಬು ಎತ್ತರವಾಗಿ ಬೆಳೆದಿಲ್ಲ, ಇದರಿಂದ ಕಬ್ಬು ಕಡಿಯಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ಕಾರ್ಖಾನೆ ನಿಗದಿಪಡಿಸಿದ ದರ ನೀಡುತ್ತದೆ. ಆದರೆ, ಈಗ ಕಾರ್ಖಾನೆ ನೀಡುವ ಕಟಾವು ದರದ ಜತೆಗೆ ರೈತರಿಗೆ ಎಕರೆಗೆ 8 ರಿಂದ 10 ಸಾವಿರ ರೂ. ಹೆಚ್ಚುವರಿ ಹಣವನ್ನು ಏಜೆಂಟರ್ ಮೂಲಕ ಕೇಳುತ್ತಿದ್ದಾರೆ ಎಂದು ಕಬ್ಬು ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ. 11 ತಿಂಗಳದ ಕಬ್ಬು ಕಟಾವಿಗೆ ಬಂದಿದೆ. ಕಾರ್ಖಾನೆಗೆ ಸಂಪರ್ಕಿಸಿದರೆ ಕಟಾವು ತಂಡ ಬರುತ್ತದೆ ಎಂದು ಹೇಳುತ್ತಾರೆ. ಆದರೆ, ಹಲವು ವರ್ಷಗಳಿಂದ ಕಬ್ಬು ಬೆಳೆಯುತ್ತಿರುವ ರೈತರು, ಏಜೆಂಟರ್ ಮೂಲಕ ಹೆಚ್ಚುವರಿ ಹಣದ ಆಮಿಷ ನೀಡಿ ತಮ್ಮ…
Author: AIN Author
ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವ ಅದ್ಭುತ ಆರೋಗ್ಯ ಪ್ರಯೋಜನಗಳು “ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಒಳ್ಳೆಯದು?” ಎಂಬ ಪ್ರಶ್ನೆಗೆ ಉತ್ತರ ಹೌದು. ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದು ನಿಮ್ಮ ಆರೋಗ್ಯ ಮತ್ತು ಸಾಮಾನ್ಯ ಜೀವನದಲ್ಲಿ ಹಲವಾರು ಉತ್ತಮ ಪ್ರಯೋಜನಗಳನ್ನು ಹೊಂದಿದೆ. ಈ ಕೆಲವು ಪ್ರಯೋಜನಗಳು ಇಲ್ಲಿವೆ. 1. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ತೂಕ ನಷ್ಟಕ್ಕೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಒಂದೆರಡು ಕಾಳುಗಳನ್ನು ತಿನ್ನುವುದು ತುಂಬಾ ಪ್ರಯೋಜನಕಾರಿ. ಬೆಳ್ಳುಳ್ಳಿಯು ನಿಮ್ಮ ದೇಹದಲ್ಲಿನ ಕೆಟ್ಟ ಮತ್ತು ಅತಿಯಾದ ಕೊಬ್ಬನ್ನು ಸುಡಲು ಸಹಾಯ ಮಾಡುವ ಅಂಶಗಳನ್ನು ಒಳಗೊಂಡಿದೆ. ಹಲವಾರು ಪೌಷ್ಟಿಕಾಂಶದ ನಿಯತಕಾಲಿಕಗಳ ಅಧ್ಯಯನಗಳು ಬೆಳ್ಳುಳ್ಳಿ ಸಾಮಾನ್ಯವಾಗಿ ನಿಮ್ಮ ಚಯಾಪಚಯವನ್ನು ವೇಗಗೊಳಿಸುತ್ತದೆ ಎಂದು ಹೇಳುತ್ತದೆ. 2. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಸಕ್ಕರೆ ಸ್ನೇಹಿ ಆಹಾರದಲ್ಲಿ ಬೆಳ್ಳುಳ್ಳಿ ಅತ್ಯಂತ ಉಪಯುಕ್ತ ಘಟಕಾಂಶವಾಗಿದೆ. ಇದು ಅಲಿಸಿನ್ ಎಂಬ ಸಂಯುಕ್ತದಲ್ಲಿ ಸಮೃದ್ಧವಾಗಿದೆ. ಈ ಘಟಕವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಕಡಿಮೆ ಮಾಡಲು ಹೆಸರುವಾಸಿಯಾಗಿದೆ. ನೀವು…
ಬೀಜಿಂಗ್: ತಂತ್ರಜ್ಞಾನ ವಲಯದಲ್ಲಿ ಜಗತ್ತಿನ ವೇಗಕ್ಕಿಂತ ಒಂದು ಹೆಜ್ಜೆ ಮುಂದಿರುವ ಚೀನಾ, ಇದೀಗ ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ ಅನ್ನು ಅನಾವರಣಗೊಳಿಸಿದೆ. ಹೊಸ ತಲೆಮಾರಿನ ವೇಗದ ಇಂಟರ್ನೆಟ್ ಎಂದೇ ಬಣ್ಣಿಸಲಾಗಿರುವ ಇದರಲ್ಲಿ 1 ಸೆಕೆಂಡ್‌ಗೆ 1.2 ಟೆರಾಬೈಟ್ ವೇಗದಲ್ಲಿ ಮಾಹಿತಿ ರವಾನಿಸಬಹುದಾಗಿದೆ. ಅಂದರೆ ಒಂದು ಸೆಕೆಂಡ್‌ಗೆ ಎಚ್‌ಡಿ ಗುಣಮಟ್ಟದ 156 ಚಲನಚಿತ್ರಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ರವಾನಿಸಬಲ್ಲದು. ಹಾಲಿ, ಇಡೀ ವಿಶ್ವದ ಜೀವನಾಡಿಯಾಗಿರುವ ಇಂಟರ್ನೆಟ್ ಸೆಕೆಂಡ್‌ಗೆ 100 ಗಿಗಾಬೈಟ್ ವೇಗದಲ್ಲಿ ಮಾಹಿತಿ ರವಾನಿಸುತ್ತಿದೆ. ಇನ್ನು ಅಮೆರಿಕ ಇತ್ತೀಚೆಗಷ್ಟೇ ತನ್ನ 5ನೇ ತಲೆಮಾರಿನ ಅಂದರೆ ಸೆಕೆಂಡ್‌ಗೆ 400 ಗಿಗಾಬೈಟ್ ವೇಗದ ಇಂಟರ್ನೆಟ್ ಅನಾವರಣಗೊಳಿಸಿತ್ತು. ಆದರೆ ಚೀನಾ ಜಾಗತಿಕ ಮಟ್ಟದಲ್ಲಿ ಲಭ್ಯವಿರುವ ವೇಗಕ್ಕಿಂತ 12 ಪಟ್ಟು ವೇಗದ ಇಂಟರ್ನೆಟ್ ವೇಗ (1200 ಗಿಗಾಬೈಟ್) ಸಾಧಿಸುವ ಮೂಲಕ ಜಾಗತಿಕ ಕಂಪನಿಗಳಿಗೆ ಸವಾಲು ಎಸೆದಿದೆ. ಚೀನಾದ ಹುವಾಯ್ ಟೆಕ್ನಾಲಜೀಸ್(Huawei Technologies), ಸಿಂಗ್‌ಹ್ವಾ ವಿಶ್ವವಿದ್ಯಾಲಯ (Tsinghua University) ಹಾಗೂ ಸೆರ್‌ನೆಟ್ ಎಂಬ ಶಿಕ್ಷಣ ಸಂಸ್ಥೆ ಜಂಟಿಯಾಗಿ ಬೀಜಿಂಗ್, ವುಹಾನ್ ಹಾಗೂ…
ಬೆಂಗಳೂರು’:- ಹಿಂದೂ ಜಾಗರಣಾ ವೇದಿಕೆ ಸಹ ಸಂಚಾಲಕ ಶಿವಕುಮಾರ್ ಅವರ ಕಾರು ತಡೆದ ನಾಲ್ವರು ಅಪರಿಚಿತ ಯುವಕರು ನಿಂದಿಸಿ, ಹಲ್ಲೆ ಮಾಡಿದ್ದಾರೆ. ಸ್ಕೂಟಿ ಹಾಗೂ ಬೈಕ್‌ನಲ್ಲಿ ಬಂದ ನಾಲ್ವರು ಅಪರಿಚಿತ ಯುವಕರು ಈ ಕೃತ್ಯ ವೆಸಗಿ ಎಸ್ಕೇಪ್ ಆಗಿದ್ದಾರೆ. ಹಲ್ಲೆಗೊಳಗಾದ ಶಿವಕುಮಾರ್ ಅವರನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಶಿವಕುಮಾರ್ ಏರ್‌ಪೋರ್ಟ್ ನಲ್ಲಿ ಟ್ಯಾಕ್ಸಿ ಡ್ರೈವಿಂಗ್ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಬಸ್ ನಿಲ್ದಾಣಕ್ಕೆ ಪ್ಯಾಸೆಂಜರ್ ಡ್ರಾಪ್ ಮಾಡಿ ಹೋಗುವಾಗ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನ ಗಾಡಿ ನಂಬರ್ ನೋಡಿಕೊಂಡಿದ್ದೇವೆ, ಜೀವ ಸಹಿತ ಬಿಡಲ್ಲ ಎಂದು ಬೆದರಿಕೆ ಸಹ ಹಾಕಲಾಗಿದೆ. ನಡುರಸ್ತೆಯಲ್ಲಿ ಹಲ್ಲೆ ಮಾಡುತ್ತಿರುವುದನ್ನು ಸ್ಥಳೀಯರು ತಡೆದಿದ್ದಾರೆ. ನಂತರ ಗಾಯಗೊಂಡಿದ್ದ ಶಿವಕುಮಾರ್ ಅವರನ್ನು ಸ್ಥಳೀಯರೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಂಗಳೂರು:- ಸಿಎಂ ಸಿದ್ದರಾಮಯ್ಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆ, ಅನಂತಕುಮಾರ ಹೆಗಡೆ ವಿರುದ್ಧ ಪೊಲೀಸ್ ಕಮಿಷನರ್‌ಗೆ ಲಿಖಿತ ದೂರು ನೀಡಲಾಗಿದೆ. ಪೊಲೀಸ್ ಕಮಿಷನರ್‌ಗೆ ಡಿಸಿಪಿ ಮುತ್ತುರಾಜ್ ಮೂಲಕ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಲಿಖಿತ ದೂರು ನೀಡಿದ್ದಾರೆ. ಅನಂತ ಕುಮಾರ್ ಹೆಗಡೆ ಕೋಮು ಸಂಘರ್ಷಕ್ಕೆ ಪ್ರಚೋದಿಸುತ್ತಿದ್ದಾರೆ. ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇನ್ನೂ ಜನವರಿ 13ರಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕುಮಟಾದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ, ಸಿಎಂ ಸಿದ್ದರಾಮಯ್ಯನವರನ್ನು ಏಕವಚನದಲ್ಲಿ ನಿಂದಿಸುವುದಲ್ಲದೆ ಪ್ರಚೋದಿಸುವ ಮಾಡಿದ್ದಾರೆ. ಹಿಂದೂ ಸಮಾಜವನ್ನು ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಮುರುಕುರಾಮಯ್ಯ ಅಂಥವರು ಒಡೆಯುತ್ತಿದ್ದಾರೆ ಎಂದು ಆಧಾರರಹಿತ ಆರೋಪ ಮಾಡಿದ್ದಾರೆ. ನಮ್ಮ ವಿರೋಧಿ ಸಿದ್ದರಾಮಯ್ಯ ಹೊರತು ಕಾಂಗ್ರೆಸ್ ಅಲ್ಲ. ಅಲ್ಪಸಂಖ್ಯಾತರ ಮತಗಳಿಗಾಗಿ ಗತಿಗೆಟ್ಟ ಮಾನಸಿಕತೆಗೆ ನಮ್ಮ ವಿರೋಧವಿದೆ. ಇದಲ್ಲದೇ ಭಟ್ಕಳದ ಚಿನ್ನದಪಳ್ಳಿ ಮಸೀದಿ ಧ್ವಂಸ ಮಾಡುವುದಾಗಿ ಹೇಳಿದ್ದಾರೆ. ಅನಂತಕುಮಾರ್ ಹೆಗಡೆಯವರು “ಸಿದ್ದರಾಮಯ್ಯ ನೀ…
ಉತ್ತರ ಪ್ರದೇಶ: ಇನ್ನು ಕೆಲವೇ ದಿನಗಳಲ್ಲಿ ಶ್ರೀರಾಮಮಂದಿರ ಪ್ರಾಣಪ್ರತಿಷ್ಠೆ (RamLalla Pran Pratishtha) ನೆರವೇರಲಿದೆ. ಈ ಐತಿಹಾಸಿಕ ಕ್ಷಣಕ್ಕಾಗಿ ದೇಶ, ವಿದೇಶಗಳಲ್ಲಿ ನೆಲೆಸಿರುವ ರಾಮನ ಭಕ್ತರು ಉತ್ಸುಕರಾಗಿ ಕಾಯುತ್ತಿದ್ದಾರೆ. ಅಂತಹ ಭಕ್ತರಲ್ಲಿ ಮಧ್ಯಪ್ರದೇಶದ (Madhya Pradesh) ದಾತಿಯಾ ಮೂಲದ ಮೌನಿ ಬಾಬಾ ಸಹ ಒಬ್ಬರು. ಇವರು ಕಳೆದ 44 ವರ್ಷಗಳಿಂದ ಶ್ರೀರಾಮಮಂದಿರಕ್ಕಾಗಿ ಊಟ ತ್ಯಜಿಸಿ, ಪ್ರಾಣಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದಾರೆ. ಆದ್ರೆ ಈವರೆಗೂ ಆಹ್ವಾನ ಸಿಗದೇ ನಿರಾಸೆಗೊಂಡಿದ್ದಾರೆ. ಹೌದು, ಮಧ್ಯಪ್ರದೇಶ ದಾತಿಯಾ ಮೂಲದ ಸಂತರೊಬ್ಬರು, ರಾಮ ಮಂದಿರ ನಿರ್ಮಾಣವಾಗುವವರೆಗೆ ಊಟ ಮಾಡುವುದಿಲ್ಲ ಎಂದು 1980ರಲ್ಲಿ ಮೌನ ಪ್ರತಿಜ್ಞೆ ಮಾಡಿದ್ದರು ಎಂದು ಹೇಳಲಾಗಿದೆ. ಆದ್ರೆ ಈವರೆಗೆ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನ ಬಾರದೇ ನಿರಾಸೆಗೊಂಡಿದ್ದಾರೆ. ಬುಂದೇಲ್‌ಖಂಡ್‌ನ ದಾತಿಯಾ ಮೂಲದ ಮೌನಿ ಬಾಬಾ ಎಂದೇ ಖ್ಯಾತರಾದ ಸಂತರು 1980 ರಲ್ಲಿ ರಾಮ ಮಂದಿರ ನಿರ್ಮಿಸುವವರೆಗೆ ಆಹಾರ ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಕಳೆದ 44 ವರ್ಷಗಳಿಂದಲೂ ಊಟ ತ್ಯಜಿಸಿ ಹಣ್ಣು-ಹಂಪಲು ತಿಂದು ಬದುಕುತ್ತಿದ್ದಾರೆ.…
ಸೀತಾಫಲದಿಂದ ಮಾಡಲಾಗುವ ಆರೋಗ್ಯಕರ ಸ್ಮೂದಿ ಬಾಯಾರಿಕೆಯನ್ನು ತಣಿಸುತ್ತದೆ. ಶುಂಠಿ, ಬಾದಾಮಿಯನ್ನು ಸೇರಿಸಿ ಮಾಡಲಾಗುವ ಸೀತಾಫಲ ಸ್ಮೂದಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಬಹಳಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಈ ನವರಾತ್ರಿ ಸಂದರ್ಭದಲ್ಲಿ ಸೀತಾಫಲದ ಸ್ಮೂದಿಯನ್ನು ನೀವು ಕೂಡಾ ತಯಾರಿಸಿ, ಸವಿದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಬೇಕಾಗುವ ಪದಾರ್ಥಗಳು: ಬಾದಾಮಿ ಹಾಲು – 1 ಕಪ್ ಸೀತಾಫಲದ ತಿರುಳು – 1 ಕಪ್ ಕೊಚ್ಚಿದ ಶುಂಠಿ – ಅರ್ಧ ಟೀಸ್ಪೂನ್ ಜೇನುತುಪ್ಪ – 1 ಟೀಸ್ಪೂನ್ ಬಾದಾಮಿ ಚೂರುಗಳು – 1 ಟೀಸ್ಪೂನ್ ಏಲಕ್ಕಿ ಪುಡಿ – 1 ಚಿಟಿಕೆ ಮಾಡುವ ವಿಧಾನ: * ಮೊದಲಿಗೆ ಬಾದಾಮಿ ಚೂರುಗಳನ್ನು ಪೂರ್ವಭಾವಿಯಾಗಿ ಕಾಯಿಸಲ್ಪಟ್ಟ ಓವನ್‌ನಲ್ಲಿ ಸುಮಾರು 5 ನಿಮಿಷಗಳ ಕಾಲ 150 ಡಿಗ್ರಿ ತಾಪದಲ್ಲಿ ಹುರಿದುಕೊಳ್ಳಿ. * ಒಂದು ಮಿಕ್ಸರ್ ಜಾರ್‌ನಲ್ಲಿ ಹುರಿದ ಬಾದಾಮಿ ಚೂರುಗಳು, ಕೊಚ್ಚಿದ ಶುಂಠಿ, ಸೀತಾಫಲ ತಿರುಳು, ಬಾದಾಮಿ ಹಾಲು, ಜೇನುತುಪ್ಪ ಮತ್ತು ಚಿಟಿಕೆ ಏಲಕ್ಕಿ ಪುಡಿಯನ್ನು ಸೇರಿಸಿ. ಅದನ್ನು…
ಬೆಂಗಳೂರು:- ರಾಜ್ಯದ ಜಿಲ್ಲಾ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಬಿಜೆಪಿ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಚಾಲಕರಾಗಿ ಎಸ್. ದತ್ತಾತ್ರಿ ಅವರನ್ನು ನೇಮಕ ಮಾಡಲಾಗಿದೆ. ಬಿಜೆಪಿ ರಾಜ್ಯ ಕಾರ್ಯಾಲಯ ಕಾರ್ಯದರ್ಶಿಯಾಗಿ ಲೋಕೇಶ್ ಅಂಬೆಕಲ್ಲು, ಸಹ ಕಾರ್ಯದರ್ಶಿಯಾಗಿ ಬಿ.ಹೆಚ್. ವಿಶ್ವನಾಥ್ ನೇಮಕಗೊಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರ ಪಟ್ಟಿ ► ದಕ್ಷಿಣ ಕನ್ನಡ- ಸತೀಶ್ ಕುಂಪಲ ► ಉಡುಪಿ- ಕಿಶೋರ್ ಕುಂದಾಪುರ ► ಮೈಸೂರು ನಗರ- ಎಲ್. ನಾಗೇಂದ್ರ ► ಮೈಸೂರು ಗ್ರಾಮಾಂತರ- ಎಲ್.ಆರ್. ಮಹದೇವಸ್ವಾಮಿ ► ಚಾಮರಾಜನಗರ- ಸಿ.ಎಸ್. ನಿರಂಜನ್ ಕುಮಾರ್ ► ಹಾಸನ- ಸಿದ್ದೇಶ್ ನಾಗೇಂದ್ರ ಮೈಸೂರು ಗ್ರಾಮಾಂತರ- ಎಲ್.ಆರ್. ಮಹದೇವಸ್ವಾಮಿ ► ಚಾಮರಾಜನಗರ- ಸಿ.ಎಸ್. ನಿರಂಜನ್ ಕುಮಾರ್ ► ಹಾಸನ- ಸಿದ್ದೇಶ್ ನಾಗೇಂದ್ರ ► ಕೊಡಗು- ರವಿ ಕಾಳಪ್ಪ ► ಚಿಕ್ಕಮಗಳೂರು- ದೇವರಾಜ ಶೆಟ್ಟಿ…
ಈ ವಾರ ಸಂಕ್ರಾಂತಿ ಹಿನ್ನೆಲೆಯಲ್ಲಿ ಬಿಗ್ ಬಾಸ್ ನೀಡಿದ ಟ್ವಿಸ್ಟ್‌ನಿಂದ ಸ್ಪರ್ಧಿಗಳು ಫುಲ್ ಖುಷಿಯಾಗಿದ್ದಾರೆ. ಯಾಕೆಂದರೆ ಈ ವಾರ ಯಾವುದೇ ಎಲಿಮಿನೇಷನ್ ನಡೆಯದ ಕಾರಣ, ಮನೆಯಲ್ಲಿ ಸಂತು- ಪಂತು ಎಂದು ಕರೆಸಿಕೊಳ್ಳುವ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಸೇಫ್ ಆಗಿದ್ದಾರೆ. ಈ ವಾರ ವಿನಯ್ ಗೌಡ, ತನಿಷಾ ಕುಪ್ಪಂಡ, ಕಾರ್ತಿಕ್, ವರ್ತೂರು ಸಂತೋಷ್, ತುಕಾಲಿ ಸಂತೋಷ್, ನಮ್ರತಾ ಗೌಡ ನಾಮಿನೇಟ್ ಆಗಿದ್ದರು. ಒಬ್ಬೊಬ್ಬರಾಗಿಯೇ ಎಲ್ಲರೂ ಸೇಫ್ ಆದರು. ಆದರೆ ಕೊನೆಗೆ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತು ಮಾತ್ರ ಉಳಿದುಕೊಂಡಿದ್ದರು. ಇವರಿಬ್ಬರಲ್ಲಿ ಯಾರಾದರೂ ಒಬ್ಬರು ಎಲಿಮಿನೇಟ್ ಆಗುವುದು ಖಚಿತ ಎನ್ನಲಾಗಿತ್ತು. ಆದರೆ, ಇಬ್ಬರೂ ಸೇಫ್ ಆಗಿದ್ದಾರೆ. ಬಿಗ್ ಬಾಸ್ ಸ್ಪರ್ಧೆಯ ಭಾರಿ ಟಫ್ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ವರ್ತೂರು ಸಂತೋಷ್ (Varthur Santhosh) ಅವರು ಬಿಗ್ ಬಾಸ್ ಮನೆಯಲ್ಲಿ ಕೊನೆಯವರೆಗೂ ಉಳಿಯಲಿದ್ದಾರೆಂದು ಬಹುತೇಕರು ಭಾವಿಸಿದ್ದರು. ಆದರೆ, ಈ ವಾರ ಅವರೇ ಮನೆಯಿಂದ ಹೊರ ಬೀಳಲಿದ್ದಾರೆ ಎನ್ನಲಾಗಿತ್ತು. ಆದರೆ, ಆ ಊಹೆ…
ಇಂದು ಚಿನ್ನ ಮತ್ತು ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಕಳೆದ 2 ದಿನಗಳಿಂದ ಚಿನ್ನದ ಬೆಲೆ ಹೆಚ್ಚಾಗಿತ್ತು. ಆದರೆ ಇಂದು ಏರಿಕೆಯಾಗಿಲ್ಲವಲ್ಲ ಎಂದು ತುಸು ಸಮಾಧಾನ ಎನಿಸಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇತರ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ.. 22 ಕ್ಯಾರೆಟ್ ಚಿನ್ನದ ದರ 1 gram: ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,800 ರೂ. ಆಗಿದೆ. ನಿನ್ನೆ ಕೂಡ ಇಷ್ಟೇ ಇತ್ತು. ಮೊನ್ನೆ 5,770 ರೂ. ಇತ್ತು. 8 gram: ಇಂದಿನ 8 ಗ್ರಾಂ ಚಿನ್ನದ ಬೆಲೆ 46,400 ರೂ ಇದೆ. ಮೊನ್ನೆ 46,160 ರೂ ಇತ್ತು. 10 gram: ಹತ್ತು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 58,000 ರೂ. ನೀಡಬೇಕು. ಮೊನ್ನೆ ಇದರ ಬೆಲೆ 57,700 ರೂ ಇತ್ತು. 100 gram: ನೂರು ಗ್ರಾಂ ಚಿನ್ನಕ್ಕೆ 5,80,000 ರೂ. ಆಗಿದೆ. ಮೊನ್ನೆ 5,77,000 ರೂ. ಇತ್ತು. 24 ಕ್ಯಾರೆಟ್ ಗೋಲ್ಡ್ ದರ 1 gram:…