ಬೆಂಗಳೂರು:- 75ನೇ ಗಣರಾಜ್ಯೋತ್ಸವ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಾಳೆ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಗೌರವಾನ್ವಿತ ರಾಜ್ಯಪಾಲರಿಗೆ ಮುಖ್ಯ ಕಾರ್ಯದರ್ಶಿಯಾದ ಶ್ರೀ ರಜನೀಶ್ ಗೋಯಲ್ ಅವರು ಆಮಂತ್ರಣ ಮಾಡಿದ್ದಾರೆ. ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರಿಂದ ಆಮಂತ್ರಣ ನೀಡಲಾಗಿದೆ. ನಗರ ಜಿಲ್ಲೆಯ ಜಿಲ್ಲಾಧಿಕಾರಿಯಾದ ದಯಾನಂದ್ ಕೂಡ ಸಾಥ್ ಕೊಟ್ಟಿದ್ದಾರೆ.
Author: AIN Author
ಚಂಡೀಗಢ: ಹನುಮ ವೇಷಧಾರಿಯೊಬ್ಬರು ವೇದಿಕೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಹರಿಯಾಣದ ಭಿವಾನಿಯಲ್ಲಿ ನಡೆದಿದೆ. ಮೃತರನ್ನು ಹರೀಶ್ ಮೆಹ್ತಾ ಎಂದು ಗುರುತಿಸಲಾಗಿದ್ದು, ಇವರು ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ರಾಮಲೀಲಾ ಸ್ಕಿಟ್ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹರೀಶ್ ಮೆಹ್ತಾ ಅವರು ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದರು. ಸ್ಕಿಟ್ ಮಾಡ್ತಿದ್ದಂತೆಯೇ ಹರೀಶ್ ಮೆಹ್ತಾ ಏಕಾಏಕಿ ಕುಸಿದು ಬಿದ್ದರು. ಆದರೆ ಪ್ರೇಕ್ಷಕರು ಮಾತ್ರ ಇದು ಸ್ಕಿಟ್ ಭಾಗವೆಂದು ಭಾವಿಸಿ ಕೂಡಲೇ ಯಾರೂ ರಕ್ಷಣೆಗೆ ಬರಲಿಲ್ಲ. ಆದರೆ ಕೆಲಹೊತ್ತಾದರೂ ಮೆಹ್ತಾ ಅವರು ಎದ್ದೇಳಲೇ ಇಲ್ಲ. ಇದರಿಂದ ಆತಂಕಗೊಂಡ ಜನ ತಕ್ಷಣವೇ ಕಾರ್ಯಪ್ರವೃತ್ತರಾದರು. https://twitter.com/TheSamacharlive/status/1749484617000714458?ref_src=twsrc%5Etfw%7Ctwcamp%5Etweetembed%7Ctwterm%5E1749484617000714458%7Ctwgr%5E30fee0905f98d6448e5e9f0be1bdbb287426677d%7Ctwcon%5Es1_&ref_url=https%3A%2F%2Fkannadadunia.com%2Flive-news%2Fhanumans-protagonist-died-of-a-heart-attack-during-the-performance-of-the-play-shocking-video-viral-video%2F ಕೂಡಲೇ ಸ್ಥಳೀಯರು ಮೆಹ್ತಾ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಅವರಿಗೆ ಹೃದಯಾಘಾತವಾಗಿರುವುದಾಗಿ ವೈದರು ಹೇಳಿದ್ದಾರೆ. ಹರೀಶ್ ಮೆಹ್ತಾ ಅವರು, ಕಳೆದ 25 ವರ್ಷಗಳಿಂದ ಹಲವಾರು ರಾಮಲೀಲಾ ಸ್ಕಿಟ್‌ಗಳಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಮಾಂಗ್ಟೆ ಚುಂಗ್ನೈಜಾಂಗ್ ಮೇರಿ ಕೋಮ್ ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿದ್ದಾರೆ. 40 ವರ್ಷ ವಯಸ್ಸಿನವರೆಗೆ ಮಾತ್ರ ಪುರುಷ ಮತ್ತು ಮಹಿಳಾ ಬಾಕ್ಸರ್‌ಗಳಿಗೆ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆ. ಆದರೆ ಇದೀಗ ಮೇರಿಯವರಿಗೆ 41 ವರ್ಷ ವಯಸ್ಸಾಗಿದ್ದರಿಂದ ಬುಧವಾರ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಬಾಕ್ಸಿಂಗ್ ನಲ್ಲಿ ಹೋರಾಡುವ ಹಸಿವು ನನಗೆ ಇನ್ನೂ ಇದೆ. ದುರದೃಷ್ಟವಶಾತ್ ವಯಸ್ಸಿನ ಮಿತಿ ಮುಗಿದಿರುವುದರಿಂದ ನಾನು ಯಾವುದೇ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಹೀಗಾಗಿ ಇಂದು ನಾನು ಬಲವಂತವಾಗಿ ತೊರೆಯುತ್ತಿದ್ದೇನೆ ನಾನು ನಿವೃತ್ತಿ ಹೊಂದುತ್ತಿದ್ದೇನೆ. ನನ್ನ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ. ಈ ಹಿನ್ನೆಲೆಯಲ್ಲಿ ನಾನು ತುಂಬಾ ದುಃಖದಿಂದ ಇಂದು ನನ್ನ ಬಾಕ್ಸಿಂಗ್ ಗ್ಲೌಸ್ ಅನ್ನು ಬಿಚ್ಚಿಡುತ್ತಿದ್ದೇನೆ ಎಂದು ಹೇಳಿದರು ಬಾಕ್ಸಿಂಗ್ ಇತಿಹಾಸದಲ್ಲಿ ಆರು ವಿಶ್ವ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜೊತೆಗೆ ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಅವರು 2014 ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದ ಭಾರತದ ಮೊದಲ ಮಹಿಳಾ ಬಾಕ್ಸರ್ ಎನಿಸಿಕೊಂಡಿದ್ದಾರೆ.
ಹೊಸಪೇಟೆ: ತುಂಗಭದ್ರಾ ವಿಜಯನಗರ ಕಾಲುವೆಗೆ ಶಾಸಕ ಎಚ್.ಆರ್.ಗವಿಯಪ್ಪ ಬುಧವಾರ ನೀರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸತತ ಪ್ರಯತ್ನದ ಫಲವಾಗಿ ಕಾಡಾ ಅಧ್ಯಕ್ಷರು ಸಹಕಾರದೊಂದಿಗೆ ವಿಜಯನಗರ ಕಾಲುವೆಗೆ ಪ್ರತಿ ದಿನ ನೀರು ಬಿಡಲಾಗುವುದು ಎಂದರು. ಇಂದಿನಿಂದ ಮೇ 30 ರವರೆಗೆ ನೀರನ್ನು ಕಾಲುವೆಗೆ ಬಿಡುಗಡೆ ಮಾಡಲಾಗುತ್ತದೆ. ಇದರಿಂದ 12 ಸಾವಿರ ಎಕರೆ ಕಬ್ಬು ರೈತರು ಹಾಗೂ 4 ರಿಂದ 5 ಎಕರೆ ಬಾಳೆ ರೈತರು ತಮ್ಮ ಹೊಲಗಳಿಗೆ ನೀರು ಹರಿಸಲು ಅನುಕೂಲವಾಗಲಿದೆ ಎಂದರು.
ಬಾದಾಮಿ ದೇಹದಲ್ಲಿ ತುಂಬಾ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ಬಾದಾಮಿಯನ್ನು ನೆನೆಸಿ ತಿಂದರೆ ಪ್ರಯೋಜನಗಳು ವರ್ಧಿಸುತ್ತವೆ. ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಏನೆಲ್ಲಾ ಪ್ರಯೋಜವಾಗುತ್ತದೆ ಎನ್ನುವುದನ್ನು ತಿಳಿಯೋಣ ಬನ್ನಿ ತೀಕ್ಷ್ಣ ಮನಸ್ಸಿಗೆ ಆರೋಗ್ಯಕರ ಹೃದಯ:- ಬಾದಾಮಿಯಲ್ಲಿ ಆಂಟಿ ಆಕ್ಸಿಡೆಂಟ್‌ಗಳ ಜೊತೆಗೆ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಕಂಡುಬರುತ್ತವೆ, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. ಜೀರ್ಣಕ್ರಿಯೆ ನೆನೆಸಿದ ಬಾದಾಮಿ ಫೈಬರ್ ಮತ್ತು ವಿಟಮಿನ್ E ಯ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಮಲಬದ್ಧತೆಯೊಂದಿಗೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳ ವಿರುದ್ಧ ಹೋರಾಡಲು, ನೆನೆಸಿದ ಬಾದಾಮಿ ಸೇವಿಸುವುದು ಒಳ್ಳೆಯದು. ಸಕ್ಕರೆ ಮಟ್ಟ ನೆನೆಸಿದ ಬಾದಾಮಿಯಲ್ಲಿ ಮೆಗ್ನೀಸಿಯಮ್ ಇದ್ದು, ಇದರ ಸೇವನೆಯು ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹ ರೋಗಿಗಳು ದಿನಕ್ಕೆ 6 ರಿಂದ 8 ಬಾದಾಮಿಗಳನ್ನು ತಿನ್ನುವುದರಿಂದ ಮಧುಮೇಹವನ್ನು ಕಡಿಮೆ ಮಾಡಬಹುದು. ಕೂದಲು ಮತ್ತು ಚರ್ಮಕ್ಕಾಗಿ ನೆನೆಸಿದ ಬಾದಾಮಿಯಲ್ಲಿ ವಿಟಮಿನ್ E ಇರುವುದರಿಂದ ಚರ್ಮವನ್ನು ಹೊಳೆಯುವಂತೆ…
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜನವರಿ 25ರಂದು ಆರಂಭವಾಗಲಿದೆ. ಈ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್, ಹೈದರಾಬಾದ್ ಟೆಸ್ಟ್‌ನಲ್ಲಿ ಬೆನ್ ಸ್ಟೋಕ್ಸ್ ಸಾರಥ್ಯದ ಇಂಗ್ಲೆಂಡ್ ತಂಡ ತನ್ನ ಆಕ್ರಮಣಕಾರಿ ರಣನೀತಿ ‘ಬ್ಯಾಝ್‌ಬಾಲ್ ಕ್ರಿಕೆಟ್’ ಮೂಲಕ ಆತಿಥೇಯ ಟೀಮ್ ಇಂಡಿಯಾಗೆ ಆಘಾತ ನೀಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ. “ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಟೆಸ್ಟ್ ಸರಣಿಯನ್ನು ಬಹಳ ಕಾತುರದಿಂದ ಎದುರು ನೋಡುತ್ತಿದ್ದೇನೆ. ಈ ಸರಣಿಯಲ್ಲಿ ಟ್ರೋಫಿ ಗೆಲ್ಲುವ ಫೇವರಿಟ್ ಟೀಮ್ ಇಂಡಿಯಾ ಎಂಬುದು ಸಹಜ. ಆದರೆ, ಇಂಗ್ಲೆಂಡ್ ತಂಡ ಒಂದೆರಡು ಪಂದ್ಯಗಳನ್ನು ಗೆದ್ದು ಶಾಕ್ ಕೊಡುವ ಸಾಧ್ಯತೆ ಹೆಚ್ಚಿದೆ. ಅದು ಹೈದರಾಬಾದ್‌ನಲ್ಲೇ ಆಗಬಹುದು. ಆಕ್ರಮಣಕಾರಿ ರಣನೀತಿ ಮೈಗೂಡಿಸಿಕೊಂಡಿರುವ ಈ ಇಂಗ್ಲೆಂಡ್ ತಂಡದ ಎದುರು ಆಡುವುದು ಅಷ್ಟು ಸುಲಭದ ಮಾತಲ್ಲ,” ಎಂದು ಮೈಕಲ್ ತಮ್ಮ ಟ್ವಿಟರ್ ಗೋಡೆಯ ಮೇಲೆ ಬರೆದುಕೊಂಡಿದ್ದಾರೆ. ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮೆಕಲಮ್ ಮಾರ್ಗದರ್ಶನದ ಅಡಿಯಲ್ಲಿ ಇಂಗ್ಲೆಂಡ್…
ಕಲಬುರಗಿ :- ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ನಿರ್ಮಿಸಿರುವ ಸಿಟಿ ಬಸ್ ನಿಲ್ದಾಣವನ್ನ ಸಚಿವ ರಾಮಲಿಂಗಾರೆಡ್ಡಿ ಇವತ್ತು ಉದ್ಘಾಟನೆ ಮಾಡಲಿದ್ದಾರೆ. ಥೇಟ್ ಕೋಟೆ ತರ ಕಾಣುವ ಈ ಬಸ್ ನಿಲ್ದಾಣವನ್ನ 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.. ಎರಡು ಅಂತಸ್ತಿನ ಈ ಬಸ್ ನಿಲ್ದಾಣದ ವಿಸ್ತೀರ್ಣ4,455 ಚ.ಮೀ ಇದೆ. ಏಕಕಾಲದಲ್ಲಿ 12 ಬಸ್ ನಿಲುಗಡೆ ಮಾಡಬಹುದಾಗಿದ್ದು ಒಟ್ಟಾರೆ 9 ಅಂಕಣಗಳಿವೆ. ಇದಲ್ಲದೆ ವಾಣಿಜ್ಯ ಸಂಕೀರ್ಣ ಶುದ್ಧ ಕುಡಿಯುವ ನೀರಿನ ಘಟಕ ಉದ್ಯಾನವನ ಸಹ ಒಳಗೊಂಡಿದೆ.ಈ ಬಸ್ ನಿಲ್ದಾಣದಿಂದ ಪ್ರತಿನಿತ್ಯ 450 ಬಸ್ ಟ್ರಿಪ್ ಮಾಡಬಹುದಾಗಿದೆ ಅಂತ ಸಾರಿಗೆ ಇಲಾಖೆ ತಿಳಿಸಿದೆ..
ಪ್ರತಿದಿನ ಮಗುವಿಗೆ ಆಹಾರ ನೀಡುವಾಗ ಮೊಬೈಲ್ ತೋರಿಸಿದರೆ, ಇದು ಮಗುವಿನ ಮಾನಸಿಕ ಆರೋಗ್ಯದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಟಿವಿ ಅಥವಾ ಮೊಬೈಲ್ ನೋಡದೆ ಇದ್ದರೆ ಊಟ ಸೇವಿಸಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಗೆ ಮಗು ಬರುತ್ತದೆ. ನಾವು ಆಹಾರವನ್ನು ಸೇವಿಸಿದಾಗ, ನಮ್ಮ ಸಂಪೂರ್ಣ ಗಮನವು ಆಹಾರದ ಮೇಲಿರುತ್ತದೆ ಮತ್ತು ನಾವು ಎಷ್ಟು ಆಹಾರವನ್ನು ಸೇವಿಸಿದ್ದೇವೆ ಎಂಬುದರ ಅರಿವು ನಮಗೆ ಇರುತ್ತದೆ. ಮಗುವು ಮೊಬೈಲ್ ನೋಡುತ್ತಾ ಆಹಾರವನ್ನು ಸೇವಿಸಿದರೆ, ಮಗುವು ಏನು ತಿನ್ನುತ್ತಿದೆ ಎಂದು ತಿಳಿಯಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ, ಮಗುವಿಗೆ ಹೊಟ್ಟೆಯ ಸಮಸ್ಯೆಗಳು ಅಥವಾ ವಾಂತಿ ಇರಬಹುದು. ನಿಮ್ಮ ಮಗುವಿಗೆ ಆಹಾರ ನೀಡುವಾಗ ನೀವು ನಿಮ್ಮ ಮೊಬೈಲ್ ಅನ್ನು ತೋರಿಸುತ್ತಿದ್ದರೆ, ಅವನು ಎಂದಿಗೂ ತನ್ನ ತಾಯಿಯೊಂದಿಗೆ ಮಧ್ಯಾಹ್ನ ಅಥವಾ ರಾತ್ರಿಯ ಊಟದ ಸಮಯದಲ್ಲಿ ಸಂಭಾಷಣೆಯನ್ನು ಪ್ರಾರಂಭಿಸುವುದಿಲ್ಲ ಮತ್ತು ಕುಟುಂಬದ ಬಂಧವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಹಾರವು ಬಾಯಿಗೆ ಹೋದ ತಕ್ಷಣ, ಅದರ ರುಚಿ ಪ್ರಕಟವಾಗುತ್ತದೆ. ಹೀಗಿರುವಾಗ ನಮಗೆ ಯಾವುದು ಇಷ್ಟ, ಯಾವುದು ಬೇಡ…
ತ್ವರಿತ ಲೋನ್ ಅಪ್ಲಿಕೇಷನ್‌ಗಳು ಕೊಟ್ಟ ಕಾಟ ಎಷ್ಟು, ಇವುಗಳ ಕಿರುಕುಳಕ್ಕೆ ಜೀವ ಕಳೆದುಕೊಂಡವರು ಎಷ್ಟು ಮಂದಿ ಎಂಬುದು ಎಲ್ಲರಿಗೂ ಗೊತ್ತಿದೆ. ಈ ದುರುದ್ದೇಶಪೂರಿತ ಬಹುತೇಕ ಆ್ಯಪ್‌ಗಳ ಹಿಂದೆ ಇರುವುದು ಚೀನಾ ಮೂಲಕ ಸ್ಕ್ಯಾಮರ್‌ಗಳು. ಚೀನಾದ ಕೆಲ ವಂಚಕರು ಭಾರತದಲ್ಲಿ ಸಾವಿರಾರು ಜನರನ್ನು ವಂಚಿಸಲು ಅಕ್ರಮ ತ್ವರಿತ ಸಾಲದ ಆ್ಯಪ್‌ಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಸೈಬರ್‌ಸೆಕ್ಯುರಿಟಿ ಸಂಶೋಧಕರು ಎಚ್ಚರಿಸಿದ್ದಾರೆ ಇದೀಗ ಮತ್ತೆ ಇಂತಹದ್ದೇ ಆ್ಯಪ್‌ಗಳು ವಕ್ಕರಿಸಿವೆಯಂತೆ. ಸದ್ಯದ ಮಾಹಿತಿಯ ಪ್ರಕಾರ 55ಕ್ಕೂ ಹೆಚ್ಚು ಹಾನಿಕಾರಕ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ವಿವಿಧ ದಾರಿಗಳ ಮೂಲಕ ವಿತರಿಸಲಾಗಿದೆ ಎಂಬುದು ಕಂಡುಬಂದಿದೆ. ಈ ಮೋಸದ ಜಾಲದಲ್ಲಿ ಭಾಗಿಯಾಗಿರುವ ಚೀನೀ ವ್ಯಕ್ತಿಗಳು ನಿರ್ವಹಿಸುತ್ತಿರುವ 15 ಕ್ಕೂ ಹೆಚ್ಚು ಪಾವತಿ ವ್ಯವಸ್ಥೆಗಳನ್ನು ಸಂಶೋಧಕರು ಗುರುತಿಸಿದ್ದಾರೆ. ಚೀನೀ ವ್ಯಕ್ತಿಗಳು ಇಂಡೋನೇಷ್ಯಾ, ಮಲೇಷ್ಯಾ, ದಕ್ಷಿಣ ಆಫ್ರಿಕಾ, ಮೆಕ್ಸಿಕೋ, ಬ್ರೆಜಿಲ್, ಟರ್ಕಿ, ವಿಯೆಟ್ನಾಂ, ಫಿಲಿಪೈನ್ಸ್ ಮತ್ತು ಕೊಲಂಬಿಯಾ ಸೇರಿದಂತೆ ಅನೇಕ ದೇಶಗಳಲ್ಲಿ ಈ ಮೋಸದ ಪಾವತಿ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನಕಲಿ ತ್ವರಿತ ಸಾಲದ ಅಪ್ಲಿಕೇಶನ್‌ಗಳನ್ನು…
ನವದೆಹಲಿ:-ಸ್ಪೈಸ್ಜೆಟ್ ವಿಮಾನಕ್ಕೆ ಬಾಂಬ್ ದಾಳಿ ಬೆದರಿಕೆ ಹಿನ್ನೆಲೆ ದೆಹಲಿ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ವಿಮಾನದಲ್ಲಿದ್ದ 200ಕ್ಕೂ ಆತಂಕಕ್ಕೀಡಾದರು. ಬೆದರಿಕೆ ಸಂದೇಶ ದೊರೆತ ಬೆನ್ನಲ್ಲೇ ವಿಮಾನದಿಂದ ಪ್ರಯಾಣಿಕರನ್ನು ಇಳಿಸಿ ಸಂಪೂರ್ಣ ತಪಾಸಣೆಗಾಗಿ ಪ್ರತ್ಯೇಕ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಯಿತು. ನಂತರ ವಿಮಾನ ನಿಲ್ದಾಣದಲ್ಲಿ ಭದ್ರತಾ ಕಟ್ಟೆಚ್ಚರ ಘೋಷಿಸಲಾಯಿತು ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಎರಡು ದಿನಗಳ ಮುನ್ನವೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಆದಾಗ್ಯೂ, ಸ್ಪೈಸ್ಜೆಟ್ ವಿಮಾನದಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿ ನಂತರ ಶೋಧ ನಡೆಸಿದಾಗ ಅನುಮಾನಾಸ್ಪದ ಏನೂ ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಪರಿಗಣಿಸಲಾಯಿತು. ಬಿಹಾರದ ದರ್ಭಾಂಗಾದಿಂದ ಹೊರಟಿದ್ದ ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಬುಕಿಂಗ್ ಕಚೇರಿಗೆ ಕರೆ ಬಂದಿತ್ತು ಎಂದು ಸ್ಪೈಸ್ಜೆಟ್ ಏರ್‌ಲೈನ್ಸ್ ತಿಳಿಸಿದೆ. ನಿನ್ನೆ ಸಂಜೆ 6 ಗಂಟೆಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು ಮತ್ತು ಪ್ರತ್ಯೇಕ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ನಂತರ ವ್ಯಾಪಕ ಶೋಧ ನಡೆಸಲಾಯಿತು ಎಂದು ಏರ್‌ಲೈನ್ಸ್ ತಿಳಿಸಿದೆ. ಸಂಜೆಯ…