ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿಯು ಇಂದಿನಿಂದ ಪ್ರಾರಂಭವಾಗಲಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ. ಈಗಾಗಲೇ ಭಾರತದ ಆಟಗಾರರು ಭರ್ಜರಿ ಅಭ್ಯಾಸ ನಡೆಸಿದ್ದಾರೆ. ಮತ್ತೊಂದೆಡೆ ಇಂಗ್ಲೆಂಡ್ ವಿಭಿನ್ನ ತಂತ್ರಗಳನ್ನು ಪ್ರಯೋಗಿಸಲು ಮುಂದಾಗಿದೆ. ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಲು ಬೆನ್ ಸ್ಟೋಕ್ಸ್ ಬಳಗ ಕಾಯುತ್ತಿದೆ. ಇತ್ತ, ಅಜೇಯ ದಾಖಲೆ ಮುಂದುವರಿಸಲು ರೋಹಿತ್ ಶರ್ಮಾ ಪಡೆ ಪ್ಲಾನ್ ಮಾಡಿದೆ. ರನ್ ಮೆಷಿನ್ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಹೀಗಾಗಿ, ನಾಯಕ ರೋಹಿತ್ ಶರ್ಮಾ ಅವರ ಮೇಲೆ ಬ್ಯಾಟಿಂಗ್ ಹೊರೆ ಬೀಳಲಿದೆ. ಇನ್ನೂ ಇಂಗ್ಲೆಂಡ್ ವಿರುದ್ಧ ಹಿಟ್ಮ್ಯಾನ್ ಶರ್ಮಾ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಆಂಗ್ಲರ ವಿರುದ್ಧ ರೋಹಿತ್ ಘರ್ಜನೆ ಇಂಗ್ಲೆಂಡ್ ವಿರುದ್ಧ ಆಡಿರುವ 17 ಇನ್ನಿಂಗ್ಸ್ಗಳಲ್ಲಿ ರೋಹಿತ್ 747 ರನ್ ಸಿಡಿಸಿದ್ದಾರೆ. ಗರಿಷ್ಠ ಸ್ಕೋರ್ 161 ಆಗಿದ್ದು, 49.80 ಸರಾಸರಿಯಲ್ಲಿ ಎರಡು ಶತಕ ಹಾಗೂ ಮೂರು ಅರ್ಧಶತಕ ರೋಹಿತ್ ಬ್ಯಾಟ್ನಿಂದ ಸಿಡಿದಿವೆ. ಭಾರತ ತಂಡ…
Author: AIN Author
ಇಂಫಾಲ್: ಅಸ್ಸಾಂ ರೈಫಲ್ಸ್‌ನ ಸೈನಿಕನೊಬ್ಬ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಮಣಿಪುರದಲ್ಲಿ ನಡೆದಿದೆ. ಘಟನೆಯಲ್ಲಿ ಆರು ಯೋಧರಿಗೆ ಗಾಯಗಳಾಗಿದ್ದು, ಅವರನ್ನು ಚುರಾಚಂದ್‍ಪುರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಆರ್ ಬೆಟಾಲಿಯನ್ ಆವರಣದಲ್ಲಿ ಈ ಘಟನೆ ನಡೆದಿದೆ. ಗುಂಡು ಹಾರಿಸಿದ್ದು ಕಲಹ ಪೀಡಿತ ಮಣಿಪುರದ ಚುರಾಚಂದ್‍ಪುರ ಮೂಲದ ಯೋಧ ಎಂದು ತಿಳಿದುಬಂದಿದೆ. ಗುಂಡಿನ ದಾಳಿಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. https://ainlivenews.com/there-are-many-benefits-of-eating-almonds/ ಈ ಬಗ್ಗೆ ಸೇನೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಇದೊಂದು ದುರದೃಷ್ಟಕರ ಘಟನೆಯಾಗಿದೆ. ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷದ ವಿಚಾರವಾಗಿ ಯೋಧರು ಯಾವುದೇ ಸಂಬಂಧವನ್ನು ಹೊಂದಿರಬಾರದು. ಎಲ್ಲಾ ಅಸ್ಸಾಂ ರೈಫಲ್ಸ್‌ನ ಸಿಬ್ಬಂದಿ ಮಣಿಪುರದ ವಿವಿಧ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಮಣಿಪುರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲಾ ಸಿಬ್ಬಂದಿ ಒಟ್ಟಿಗೆ ಉಳಿದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ. ಮಣಿಪುರದಲ್ಲಿ ಕಳೆದ ಮೇ ತಿಂಗಳಿನಿಂದ ಮೇಥಿ ಮತ್ತು ಕುಕಿ-ಜೋ ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ (Manipur violence) ನಡೆಯುತ್ತಿದೆ.…
ವಿಶ್ವಚಾಂಪಿಯನ್ ಮತ್ತು ಒಲಿಂಪಿಕ್ ಪದಕ ವಿಜೇತರ ಮೇರಿ ಕೋಂ ಬಾಕ್ಸಿಂಗ್ಗೆ ವಿದಾಯ ಹೇಳಿದ್ದಾರೆ. 6 ಬಾರಿಯ ವಿಶ್ವ ಚಾಂಪಿಯನ್ ಮತ್ತು 2012ರ ಒಲಿಂಪಿಕ್ ಪದಕ ವಿಜೇತೆ ಮಾಂಗ್ಟೆ ಚುಂಗ್ನೀಜಾಂಗ್ ಮೇರಿ ಕೋಮ್ ಅವರು ಇಂಟರ್ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ (IBA) ನಿಯಮಗಳು ಪುರುಷ ಮತ್ತು ಮಹಿಳಾ ಬಾಕ್ಸರ್‌ಗಳು 40 ವರ್ಷ ವಯಸ್ಸಿನವರೆಗೆ ಮಾತ್ರ ಎಲೈಟ್ ಲೇವಲ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುತ್ತವೆ. ಹಾಗಾಗಿ ತಮ್ಮ ಬಾಕ್ಸಿಂಗ್ ಕೈಗವಸುಗಳಿಗೆ ರೆಸ್ಟ್ ನೀಡಿದ್ದಾರೆ. 41 ವರ್ಷದ ಮೇರಿ ಕೋಮ್ ಅವರು ಈಗಲೂ ತಮ್ಮಲ್ಲಿ ಬಾಕ್ಸಿಂಗ್ ಹಸಿವು ತಣಿದಿಲ್ಲ. ಎಲೈಟ್ ಲೇವಲ್‌ನಲ್ಲಿ ಆಡುವಷ್ಟು ಸಾಮರ್ಥ್ಯವಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ದುರದೃಷ್ಟವಶಾತ್ ವಯಸ್ಸಿನ ಮಿತಿ ಮುಗಿದಿರುವುದರಿಂದ ನಾನು ಯಾವುದೇ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನಾನು ಹೆಚ್ಚು ಆಡಲು ಬಯಸುತ್ತೇನೆ. ಆದರೆ ನಾನು ಬಲವಂತವಾಗಿ ಬಾಕ್ಸಿಂಗ್ ತೊರೆಯುತ್ತಿದ್ದೇನೆ (ವಯಸ್ಸಿನ ಮಿತಿಯಿಂದಾಗಿ). ನಾನು ನಿವೃತ್ತಿಯನ್ನು ಹೊಂದಲೇಬೇಕು. ನನ್ನ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ ಎಂದು ಹೇಳಿದರು.
ತಮಿಳುನಾಡು: ತಮಿಳುನಾಡಿನ ಧರ್ಮಾಪುರಿ ಜಿಲ್ಲೆಯ ಸೇಲಂ ಮತ್ತು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಐದು ವಾಹನಗಳು ನಡುವೆ ಡಿಕ್ಕಿ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಒಂದು ಲಾರಿ ಮತ್ತು ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ. ಇಲ್ಲಿನ ತೊಪ್ಪೂರು ಪ್ರದೇಶದ ರಾಷ್ಟ್ರೀಯ ಹೆದ್ದಾರಿಯ ಸೇತುವೆಯಲ್ಲಿ ಈ ದುರಂತ ನಡೆದಿದೆ. ಧರ್ಮಾಪುರಿಯಿಂದ ಸೇಲಂ ಕಡೆಗೆ ಭತ್ತದ ಚೀಲಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಲಾರಿ ಹಾಗೂ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಎರಡು ಕಾರುಗಳು ನಡುವೆ ಮೂರು ಲಾರಿಗಳು ಸಿಲುಕಿಕೊಂಡಿವೆ. ಈ ಇದೇ ವೇಳೆ, ಮುಂದೆ ಹೋಗುತ್ತಿದ್ದ ಒಂದು ಲಾರಿ ಸೇತುವೆಯಿಂದ ಕೆಳಗಡೆಗೆ ಬಿದ್ದಿದೆ. ಆದರೆ, ಅಪಘಾತಕ್ಕೆ ಕಾರಣ ಎನ್ನಲಾಗುವ ಲಾರಿ ಮುಂದೆ ಸಾಗುತ್ತಿದ್ದ ಮತ್ತೊಂದು ಲಾರಿಯೊಂದಿಗೆ ಘರ್ಷಣೆಗೆ ಒಳಗಾಗಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಎರಡು ಕಾರುಗಳಿಗೂ ಬೆಂಕಿ ತಲುಗಿದೆ ಎನ್ನಲಾಗುತ್ತಿದೆ. ಇದರ ದೃಶ್ಯಗಳು ಸಿಸಿವಿಟಿಯಲ್ಲಿ ದಾಖಲಾಗಿದ್ದು,…
ಕೆನಡಾ: ಭಾರತ – ಕೆನಡಾ ನಡುವೆ ತೀವ್ರತರದ ರಾಜತಾಂತ್ರಿಕ ಬಿಕ್ಕಟ್ಟು ತಲೆದೋರಿದ ನಂತರ ಕೆನಡಾಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಕಳೆದ ಮೂರು ತಿಂಗಳಲ್ಲಿ ಉನ್ನತ ಅಧ್ಯಯನಕ್ಕೆಂದು ಕೆನಡಾಗೆ ತೆರಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. 86ರಷ್ಟು ಇಳಿಮುಖವಾಗಿದೆ. ”ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಬಳಿಕ ಭಾರತದ ವಿದ್ಯಾರ್ಥಿಗಳು ಸಲ್ಲಿಸುವ ಅರ್ಜಿಗಳನ್ನು ಇತ್ಯರ್ಥಗೊಳಿಸುವ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ. ಇದರಿಂದಾಗಿ ಕಳೆದ ಮೂರು ತಿಂಗಳಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ‘ಸ್ಟೂಡೆಂಟ್ ವೀಸಾ’ ಸುಲಭದಲ್ಲಿ ಸಿಗುತ್ತಿಲ್ಲ. ಪರಿಣಾಮ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ,” ಎಂದು ವಲಸೆ ಸಚಿವ ಮಾರ್ಕ್ ಮಿಲ್ಲರ್ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. https://ainlivenews.com/peanut-is-good-for-health-but-if-people-with-this-problem-eat-it-there-is-no-danger/ ಇದೇ ವೇಳೆ ಅವರು ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ”2022ರ ಕೊನೆಯ ತ್ರೈಮಾಸಿಕದಲ್ಲಿ 1.08 ಲಕ್ಷ ವಿದ್ಯಾರ್ಥಿಗಳಿಗೆ ವೀಸಾ ನೀಡಲಾಗಿದ್ದರೆ, 2023ರ ಕೊನೆಯ ತ್ರೈಮಾಸಿಕದಲ್ಲಿ 14,910 ವಿದ್ಯಾರ್ಥಿಗಳಿಗೆ ಮಾತ್ರ ವೀಸಾ ನೀಡಲಾಗಿದೆ,” ಎಂದು ಅವರು ಹೇಳಿದ್ದಾರೆ. ಕೆನಡಾದ ವಿಶ್ವವಿದ್ಯಾಲಯಗಳಿಗೆ ಭಾರತೀಯ…
ಬೆಂಗಳೂರು:- ಬೆಂಗಳೂರಿನ ಉದ್ಯಾನವೊಂದರ ಬಳಿ ಜೋಡಿಯೊಂದು ಮಟ ಮಟ ಮಧ್ಯಾಹ್ನವೇ ಕಾರಿನಲ್ಲೇ ಬೆತ್ತಲಾಗಿ ಕಾಮತೃಷೆ ತೀರಿಸಿಕೊಳ್ಳಲು ಮುಂದಾದ ಘಟನೆ ಜರುಗಿದೆ. ಇದೇ ವೇಳೆ, ದೃಶ್ಯ ಕಂಡು ಬುದ್ಧಿಹೇಳಲು ಬಳಿ ತೆರಳಿದ ಪೊಲೀಸ್ ಮೇಲೆಯೆ ಕಾರು ಚಲಾಯಿಸಿಕೊಂಡು ಜೋಡಿ ಪರಾರಿಯಾಗಿದೆ. ಗಾಯಗೊಂಡ ಸಬ್ ಇನ್ಸ್ಪೆಕ್ಟರ್ ಮಹೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಉದ್ಯಾನವನವೊಂದರ ಬಳಿ ಕಿಯೋ ಸೆಲಾಟೋಸ್ ಕಾರಿನಲ್ಲಿ ಬಂದಿದ್ದ ಜೋಡಿಯೊಂದು ಅಲ್ಲೇ ಬಟ್ಟೆಬಿಚ್ಚಿ ಕಾಮಕೇಳಿ ಆರಂಭಿಸಿದೆ. ಪಾರ್ಕ್ನಲ್ಲಿ ಅನೇಕ ಮಂದಿ ಇದ್ದರೂ, ಅವರಿಗೆಲ್ಲ ತಾವು ಕಾಣಿಸುತ್ತಿದ್ದರೂ ಅದನ್ನು ಲೆಕ್ಕಿಸದೆ ಜೋಡಿ ಸರಸದಲ್ಲಿ ತಲ್ಲೀನವಾಗಿದೆ. ಇದೇ ವೇಳೆ ಅಲ್ಲಿ ಕರ್ತವ್ಯ ನಿರತರಾಗಿದ್ದ ಸಬ್ ಇನ್ಸ್ಪೆಕ್ಟರ್ ಮಹೇಶ್ ಆ ಜೋಡಿಯನ್ನು ಗಮನಿಸಿದ್ದಾರೆ. ಜೋಡಿಗೆ ಬುದ್ಧಿ ಹೇಳಬೇಕು ಎಂದುಕೊಂಡ ಸಬ್ ಇನ್ಸ್ಪೆಕ್ಟರ್ ಮಹೇಶ್ ಕಾರಿನ ಬಳಿ ತೆರಳಿದ್ದಾರೆ. ಕಾರಿನ ಬಳಿ ಹೋಗಿ ನಂಬರ್ ಪ್ಲೇಟ್ ಪರಿಶೀಲನೆ ನಡೆಸಿದ್ದಾರೆ. ಅಷ್ಟರಲ್ಲಿ ಎಚ್ಚೆತ್ತುಕೊಂಡ ಯುವಕ ಏಕಾಏಕಿ ಕಾರು ಚಲಾಯಿಸಿದ್ದಾನೆ. ದಿಢೀರ್ ಕಾರು…
ಬೆಂಗಳೂರು:- ಸಾಮಾಜಿಕ ಜಾಲತಾಣಗಳ ನೆರವಿನಿಂದ ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ 12 ವರ್ಷದ ಬಾಲಕನನ್ನು ಹೈದರಾಬಾದ್‌ನಲ್ಲಿ ಪತ್ತೆಹಚ್ಚಲಾಗಿದೆ. ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಾಪತ್ತೆಯಾದ ಪ್ರಣವ್ ಎಂಬ 12 ವರ್ಷದ ಬಾಲಕನನ್ನು ಸೋಷಿಯಲ್ ಮೀಡಿಯಾಗಳ ಮೂಲಕ ಹೈದರಾಬಾದ್‌ನಲ್ಲಿ ಪತ್ತೆಹಚ್ಚಲಾಗಿದೆ. ಡೀನ್ಸ್ ಅಕಾಡೆಮಿಯಲ್ಲಿ ಆರನೇ ತರಗತಿ ಓದುತ್ತಿರುವ ಪ್ರಣವ್, ಮೂರು ದಿನಗಳ ಹಿಂದೆ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಬಸ್ ಹತ್ತಿ ಹೊರಟಿದ್ದ. ಮೂರು ದಿನಗಳಿಂದ ಆತ ಬೇರೆ ಬೇರೆ ನಗರಗಳಲ್ಲಿ ಸುತ್ತಾಡಿದ್ದ. ಸಿಸಿಟಿವಿ ಪರಿಶೀಲನೆ, ಲೊಕೇಷನ್ ಟ್ರ್ಯಾಕ್ ಮಾಡಿದ್ದರೂ ಆತನನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಅದರೆ, ಈತನ ಪತ್ತೆಗೆ ಸೋಷಿಯಲ್ ಮೀಡಿಯಾ ನೆರವಾಗಿವೆ. ವೈಟ್‌ಫೀಲ್ಡ್‌ನಲ್ಲಿರುವ ಕೋಚಿಂಗ್ ಸೆಂಟರ್‌ನಿಂದ ಮೆಜೆಸ್ಟಿಕ್‌ಗೆ ಬಂದ ಬಾಲಕ ಬಸ್ ಹತ್ತಿ ಹೊರಟಿದ್ದ. ಇದನ್ನು ತಿಳಿದುಕೊಂಡ ಕೆಲವು ಸ್ವಯಂ ಸೇವಕರು ಆತನ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು. ಈತನ ಗುರುತು ಸಿಕ್ಕರೆ ಮಾಹಿತಿ ನೀಡಿ ಎಂದು ತಿಳಿಸಿದ್ದರು. ಈತನ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳಿದ್ದ ವ್ಯಕ್ತಿಯೊಬ್ಬರು ಹೈದರಾಬಾದ್‌ನ ಮೆಟ್ರೋದಲ್ಲಿ ಬಾಲಕನನ್ನು…
ಬೆಂಗಳೂರು:- ಬಿಎಂಟಿಸಿ ಅಧಿಕಾರಿಗಳು, ಬಸ್ನಲ್ಲಿ ಪ್ರಯಾಣಿಸುವ ಅಪ್ರಾಪ್ತರ ಮೇಲೆ ನಿಗಾ ಇರಿಸಲು ಮುಂದಾಗಿದ್ದಾರೆ. ಒಂಟಿಯಾಗಿ ಸಂಚರಿಸುವ ಅಪ್ರಾಪ್ತರ ಮೇಲೆ ನಿಗಾ ಇರಿಸಲು ಮುಂದಾದ ಬಿಎಂಟಿಸಿ ಅಧಿಕಾರಿಗಳು, ಅನುಮಾನಾಸ್ಪದ ಓಡಾಟ ಕಂಡು ಬಂದರೆ ಮಕ್ಕಳ ಸಹಾಯವಾಣಿಗೆ ತಿಳಿಸುವಂತೆ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ. ಶಾಲಾ ಸಮವಸ್ತ್ರದಲ್ಲಿರುವ ಮಕ್ಕಳನ್ನ ಹೊರತು ಪಡಿಸಿ ಬಸ್ಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಒಬ್ಬಂಟಿಯಾಗಿ ಪ್ರಯಾಣಿಸುತ್ತಿರುವ ಮಕ್ಕಳ ಮೇಲೆ ಹೆಚ್ಚಿನ ನಿಗಾ ಇರಿಸಬೇಕು. ಮಕ್ಕಳ ಹಾವ-ಭಾವದಲ್ಲಿ ಗೊಂದಲಗಳಿದಲ್ಲಿ ಅಥವಾ ಅನುಮಾನಸ್ಪದವಾಗಿ ಪ್ರಯಾಣಿಸುತ್ತಿವುದು ಕಂಡುಬಂದಲ್ಲಿ ಅಂತಹ ಮಕ್ಕಳನ್ನ ಗುರುತಿಸಿ ಅವರ ಬಳಿ ಮಾತನಾಡಿ ಪೋಷಕರ ಬಗ್ಗೆ ಮಾಹಿತಿಯನ್ನ ಪಡೆಯಬೇಕು. ಮಕ್ಕಳು ಗೊಂದಲದ ಉತ್ತರವನ್ನ ನೀಡಿದಲ್ಲಿ, ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡಬೇಕು. ಹತ್ತಿರದ ಪೊಲೀಸ್ ಠಾಣೆಗೆ ಅಂತಹ ಮಕ್ಕಳ ಕರೆದೊಯ್ಯುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಇನ್ನೂ ಇತ್ತೀಚೆಗೆ ಟ್ಯೂಷನ್ಗೆ ತೆರಳಿದ್ದ ವೈಟ್‌ಫೀಲ್ಡ್‌ನ ನಿವಾಸಿ 12 ವರ್ಷದ ಬಾಲಕ ಪರಿಣವ್ ನಾಪತ್ತೆಯಾಗಿದ್ದನು. ಬಳಿಕ ಈತನನ್ನು ಹೈದರಾಬಾದ್‌ನಲ್ಲಿ…
ಪೀಣ್ಯ ದಾಸರಹಳ್ಳಿ:’ ಕ್ಷೇತ್ರದಲ್ಲೆಡೆ ಸಾಕಷ್ಟು ಮೂಲಭೂತ ಸಮಸ್ಯೆಗಳಿವೆ. ಆದರೆ ಅನುದಾನದ ಕೊರತೆಯಿಂದಾಗಿ ಬಗೆಹರಿಸಲು ಸಾಧ್ಯವಾಗುತ್ತಿಲ್ಲ’ ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಬೇಕು ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು. ಬಾಗಲಗುಂಟೆ ವಾರ್ಡ್ ನೆನೆಗುದಿಗೆ ಬಿದ್ದಿದ್ದ ಚಿಮ್ನಿ ಹಿಲ್ಸ್ ರಸ್ತೆಗೆ ಡಾಂಬರೀಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ಷೇತ್ರದ ಎಲ್ಲಾ ಕಡೆ ನೀರು, ರಸ್ತೆ, ಚರಂಡಿ ಇನ್ನು ಅನೇಕ ಮೂಲಭೂತ ಸಮಸ್ಯೆಗಳಿವೆ. ಜನರು ಎಲ್ಲಿ ಹೋದರು ರಸ್ತೆ ಸರಿಪಡಿಸಲು ಮನವಿ ಮಾಡುತ್ತಿದ್ದಾರೆ ಆದರೆ ಅನುದಾನದ ಕೊರತೆಯಿಂದಾಗಿ ಸಾಧ್ಯವಾಗುತ್ತಿಲ್ಲ!’ ಎಂದರು. ನನ್ನ ಕ್ಷೇತ್ರದ ಮತದಾರರು ನನಗೆ ಆಶೀರ್ವಾದ ಮಾಡಿದ್ದಾರೆ. ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಚಿರ ಋಣಿ, ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ತರುವ ಮೂಲಕ ಕೆಲಸ ಮಾಡಲು ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಘು ಸೂರ್ಯ, ಚಿಕ್ಕಲಕ್ಕಣ್ಣ, ಜೈ ಶ್ರೀ ರಾಮ್ ವಿಜಯಲಕ್ಷ್ಮಿ, ತುಂಗಭದ್ರಾ, ಪದ್ಮ ಮುಂತಾದವರಿದ್ದರು.
ಬೆಂಗಳೂರು:- ಎಸ್‌ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿ ಬಿಟ್ ಕಾಯಿನ್ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ಮತ್ತು ಸಂತೋಷ್‌ನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದು, ಸಾಕ್ಷ್ಯ ನಾಶ ಮಾಡಿದ ಹಿನ್ನೆಲೆ ಈ ಇಬ್ಬರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಐವರನ್ನು ವಶಕ್ಕೆ ಪಡೆದಿದ್ದರು. ಬಂಧಿತರಲ್ಲಿ ಪ್ರಶಾಂತ್ ಬಾಬು ಸೈಬರ್ ಇನ್ಸ್ಪೆಕ್ಟರ್ ಆಗಿದ್ದು, ಸಂತೋಷ್ ಸೈಬರ್ ಸೆಂಟರ್ ವ್ಯಕ್ತಿ ಆಗಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಶ್ರೀಕಿಯನ್ನು 90 ದಿನ ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಂಡಿದ್ದರು. ಸಿಸಿಬಿ ಬಂಧನದಲ್ಲಿದ್ದಾಗ ಬಿಟ್ ಕಾಯಿನ್ ಅಕ್ರಮ ಆಗಿರೋದು ಸಾಬೀತಾಗಿದೆ. ಅಕ್ರಮ ಸಾಬೀತಾದ ಹಿನ್ನೆಲೆ ಬಂಧಿಸಲಾಗಿದೆ. ಇಂದು ಮೂವರು ಡಿವೈಎಸ್ಪಿಗಳನ್ನು ಎಸ್‌ಐಟಿ ವಿಚಾರಣೆಗೆ ಕರೆದಿದೆ. ಸಿಸಿಬಿಯಲ್ಲಿ ಅಧಿಕಾರಿಗಳು ಶ್ರೀಕಿಯನ್ನು ತನಿಖೆ ನಡೆಸಿದ್ದು, ಇಂದು ವಿಚಾರಣೆಗೆ ಹಾಜರಾಗಲಿದ್ದಾನೆ. ಪ್ರಕರಣದ ಕುರಿತು ಅರೆಸ್ಟ್ ಪರ್ವ ಇಂದೂ ಸಹ ಮುಂದುವರಿಯಲಿದ್ದು, ಅಕ್ರಮ ಸಾಬೀತಾದ ಹಿನ್ನೆಲೆ ತನಿಖೆಯನ್ನು ಚುರುಕುಗೊಳಿಸಲಾಗಿದೆ