ಮುಂಬೈ: ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ (Milind Deora) ಅವರು, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಶೀಘ್ರದಲ್ಲೇ ಸಿಎಂ ಏಕನಾಥ್ ಶಿಂದೆ (Eknath Shinde) ಬಣದ ಶಿವಸೇನೆ ಸೇರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ದಿಯೋರಾ ಈ ಮಾಹಿತಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನ್ನ ರಾಜಕೀಯ ಪ್ರಯಾಣದಲ್ಲಿ ಮಹತ್ವದ ಅಧ್ಯಾಯವೊಂದು ಮುಕ್ತಾಯಗೊಂಡಿದೆ. ಕಾಂಗ್ರೆಸ್‌ನ (Congress) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ಜೊತೆಗಿನ ನನ್ನ ಕುಟುಂಬದ 55 ವರ್ಷಗಳ ಬಾಂಧವ್ಯವನ್ನು ಕೊನೆಗೊಳಿಸಿದ್ದೇನೆ. ನಮ್ಮನ್ನು ಬೆಂಬಲಿಸಿದ ಎಲ್ಲ ನಾಯಕರು, ಸಹೋದ್ಯೋಗಿಗಳು ಮತ್ತು ಕಾರ್ಯಕರ್ತರಿಗೆ ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ದಿಯೋರಾ ಅವರು ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಗೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. https://ainlivenews.com/we-will-not-go-because-bjp-is-doing-politics-in-the-name-of-ram-h-anjaneya/ 2004 ಮತ್ತು 2009ರಲ್ಲಿ ದಿಯೋರಾ ಮುಂಬೈ ದಕ್ಷಿಣ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಮಿಲಿಂದ್ ದಿಯೋರಾ ಅವರು ಕಾಂಗ್ರೆಸ್‌ನ ಹಿರಿಯ ನಾಯಕ, 7 ಬಾರಿಯ ಸಂಸದರಾಗಿದ್ದ ಮುರಳಿ ದಿಯೋರಾ ಅವರ ಮಗ. ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆ…
Author: AIN Author
ಭಾರತದಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜೂನ್ 2017 ರ ಮೊದಲು, ಪ್ರತಿ 15 ದಿನಗಳಿಗೊಮ್ಮೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿತ್ತು. ಆಂಧ್ರಪ್ರದೇಶ, ಛತ್ತೀಸ್‌ಗಢ, ಒಡಿಶಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಗ್ಗವಾಗಿದ್ದು, ರಾಜಸ್ಥಾನ, ಪಂಜಾಬ್ ಮತ್ತು ತಮಿಳುನಾಡಿನಲ್ಲಿ ಇಂಧನ ಬೆಲೆಗಳು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದೇ ಸಮಯದಲ್ಲಿ, ದೇಶದ ನಾಲ್ಕು ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ – ದೆಹಲಿಯಲ್ಲಿ ಪೆಟ್ರೋಲ್ 96.72 ರೂ. ಮತ್ತು ಡೀಸೆಲ್ ಲೀಟರ್‌ಗೆ 89.62 ರೂ. – ಮುಂಬೈನಲ್ಲಿ ಪೆಟ್ರೋಲ್ 106.31 ರೂ. ಮತ್ತು ಡೀಸೆಲ್ 94.27 ರೂ. ಇದೆ. – ಕೋಲ್ಕತ್ತಾದಲ್ಲಿ ಪೆಟ್ರೋಲ್ ರೂ. 106.03 ಡೀಸೆಲ್ ಲೀಟರ್‌ಗೆ 94.24 ರೂ. -ಬೆಂಗಳೂರು: ಪೆಟ್ರೋಲ್ 101.94ರೂ. ಡೀಸೆಲ್ 87.89 ರೂ. ಇದೆ. ಈ ನಗರಗಳಲ್ಲಿ ಬೆಲೆಗಳು ಎಷ್ಟು ಬದಲಾಗಿವೆ -ನೋಯ್ಡಾದಲ್ಲಿ ಪೆಟ್ರೋಲ್ 96.65 ರೂ. ಮತ್ತು ಡೀಸೆಲ್ ಲೀಟರ್‌ಗೆ 89.82 ರೂ. ಆಗಿದೆ. – ಗಾಜಿಯಾಬಾದ್‌ನಲ್ಲಿ ಡೀಸೆಲ್…
ಬಳ್ಳಾರಿ: ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವಾರು ಮಹಿಳಾ ಸಬಲೀಕರಣ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಕೊಪ್ಪಳ ಜಿಲ್ಲೆಯ ಹನುಮಸಾಗರ ಗ್ರಾಮದ ಅವನಿ ಗಂಗಾವತಿ ಜ.24 ರಂದು ಒಂದು ದಿನದ ಮಟ್ಟಿಗೆ ಕೊಪ್ಪಳ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಅವನಿ ಗಂಗಾವತಿ ಬಳ್ಳಾರಿಯ ಕೇಂದ್ರೀಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದು ಕಲೆ, ಸಂಗೀತ, ಸಾಹಿತ್ಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ಕಳೆದ 2022 ರಲ್ಲಿ ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಹೆಣ್ಣು ಮಕ್ಕಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಅಸಾಧಾರಣ ಪ್ರತಿಭೆ’ಯಾಗಿ ಹೊರ ಹೊಮ್ಮಿದ್ದರು. ಹೋದ ವರ್ಷ ದೇಶದಲ್ಲಿ ಆಚರಿಸಲ್ಪಟ್ಟಿದ್ದ 72ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸತತ 6 ತಿಂಗಳುಗಳ ಕಾಲ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಭಾಗಗಳಲ್ಲಿ ತರಬೇತಿ ಪಡೆದಿದ್ದರು. ಎನ್ ಸಿ ಸಿ ವಿಂಗ್ ನ ಮುಂಚೂಣಿ ವಹಿಸಿದ್ದು, ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಮ್ಮ ತಂಡದೊಂದಿಗೆ ಕರ್ನಾಟಕದಿಂದ ಪ್ರತಿನಿಧಿಸಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ…
ಸೌತ್ ನಟಿ ಕೀರ್ತಿ ಸುರೇಶ್ (Keerthy Suresh) ಅವರು ಡಿಫರೆಂಟ್ ಎನಿಸುವಂತಹ ಪಾತ್ರಗಳಲ್ಲಿ ನಟಿಸುತ್ತಾರೆ. ಆ ಪಾತ್ರವೇ ತಾವಾಗಿ ಜೀವ ತುಂಬುತ್ತಾರೆ. ತೆಲುಗು, ತಮಿಳಿನಲ್ಲಿ ನಟಿಸಿ ಸೈ ಎನಿಸಿಕೊಂಡ ಕೀರ್ತಿ ಸುರೇಶ್ ಬಾಲಿವುಡ್‌ನಲ್ಲಿ ರಾರಾಜಿಸಬೇಕು ಎಂಬುದು ಅದೆಷ್ಟೋ ಅಭಿಮಾನಿಗಳ ಕನಸಾಗಿತ್ತು. ಇದೀಗ ಅದು ನೆರವೇರಿದೆ. ಹಿಂದಿ ಸಿನಿಮಾಗೆ ನಾಯಕಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೀರ್ತಿ ಸುರೇಶ್ ನಟನೆಯ ‘ರಾಘುತಾತ’ ಚಿತ್ರದ ಟೀಸರ್ ರಿಲೀಸ್ ಆದ ಬೆನ್ನಲ್ಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿರುವ ಸಿಹಿಸುದ್ದಿ ಸಿಕ್ಕಿದೆ. ‘ಜವಾನ್’ (Jawan) ನಿರ್ದೇಶಕ ಅಟ್ಲೀ ಹೊಸ ಚಿತ್ರದಲ್ಲಿ ವರುಣ್ ಧವನ್‌ಗೆ ಹೀರೋಯಿನ್ ಆಗಿ ಕೀರ್ತಿ ಆಯ್ಕೆಯಾಗಿದ್ದಾರೆ ಇದೀಗ ವರುಣ್-ಕೀರ್ತಿ ಸುರೇಶ್ ಕಾಂಬಿನೇಷನ್‌ನ ಹೊಸ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಸಂಕ್ರಾಂತಿ ಹಬ್ಬದಂದು ಹೊಸ ಸಿನಿಮಾಗೆ ಚಿತ್ರತಂಡ ಚಾಲನೆ ನೀಡಿದೆ. ಕೀರ್ತಿ ಸುರೇಶ್, ವರುಣ್, ಅಟ್ಲೀ, ವಾಮಿಕಾ ಗಬ್ಬಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ತಮನ್ನಾ, ನಯನತಾರಾ (Nayanatar) ಅವರಂತೆಯೇ ಕೀರ್ತಿ ಸುರೇಶ್ ಕೂಡ ಬಾಲಿವುಡ್‌ನಲ್ಲಿ…
ಬೆಂಗಳೂರು: ಸಂಕ್ರಾಂತಿ ಹಬ್ಬದಂದೇ ನಗರದಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು ಸ್ಥಳದಲ್ಲೇ ಯುವಕ ಸಾವನ್ನಪ್ಪಿರುವ ಘಟನೆ ಬಾಣಸವಾಡಿ ಸಮೀಪದ ಸಿಎಂಆರ್ ರೋಡ್ ನಲ್ಲಿ ನಡೆದಿದೆ. ಮೆಲ್ವಿನ್ ಜೋಸ್ವಾ(25) ಮೃತಪಟ್ಟ ಯುವಕನಾಗಿದ್ದು ಬಾಣಸವಾಡಿ ಸಮೀಪದ ಸಿಎಂಆರ್ ರೋಡ್ ನಲ್ಲಿ ಮಧ್ಯ ರಾತ್ರಿ 2.30 ಸುಮಾರಿಗೆ ನಡೆದಿರುವ ಘಟನೆಯಾಗಿದೆ. ಕಾರಿನ ನಿಯಂತ್ರಣ ತಪ್ಪಿ ಮೊದಲು ಮರಕ್ಕೆ ಡಿಕ್ಕಿ ಹೊಡೆದಿದ್ದು ಬಳಿಕ ಮರದ ಕೆಳಗೆ ನಿಂತಿದ್ದ ಕಾರು ಹಾಗೂ ಕಾಂಪೌಂಡ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೆಯುವಕ ಸಾವನ್ನಪ್ಪಿದ್ದಾನೆ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಸ್ಯಾಂಡಲ್‌ವುಡ್ ಸಲಗ ದುನಿಯಾ ವಿಜಯ್ (Duniya Vijay) ಅವರು ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಯಶ್ (Yash) ಫ್ಯಾನ್ಸ್ ದುರಂತ ಸಾವಿನ ಬಳಿಕ ವಿಜಯ್ ಅಭಿಮಾನಿಗಳಿಗೆ ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದ (Birthday) ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದೇ ಜನವರಿ 20ರಂದು ದುನಿಯಾ ವಿಜಯ್ (Duniya Vijay) ಹುಟ್ಟುಹಬ್ಬವಿದೆ. ಹೀಗಾಗಿ ಪ್ರತಿ ಬಾರಿಯಂತೆ ಈ ಬಾರಿಯೂ ವಿಜಯ್ ತಮ್ಮ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ ಹುಟ್ಟೂರಾದ ಕುಂಬಾರನಹಳ್ಳಿಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಕುಂಬಾರನಹಳ್ಳಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಅಲ್ಲಿಯೇ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ನಟ ಯಶ್ ಬರ್ತಡೇ ದಿನ ನಡೆದ ದುರಂತಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಚಾರ ತಿಳಿಸಿದ್ದಾರೆ. ಇನ್ನೂ ಕಳೆದ ಬಾರಿ ಅಭಿಮಾನಿಯೊಬ್ಬರು ನಡೆದುಕೊಂಡೇ ವಿಜಯ್ ಹುಟ್ಟುಹಬ್ಬಕ್ಕೆ ಬಂದಿದ್ದರು. ಹಾಗಾಗಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಯಾವ ಅಭಿಮಾನಿಗಳು ಸಹ ಈ ಬಾರಿ ನಡೆದುಕೊಂಡು ಬರಬೇಡಿ, ಯಾರು ಕೇಕ್ ಮತ್ತು ಹೂವಿನ ಹಾರ ತರಬೇಡಿ. ನನಗೆ ನಿಮ್ಮ…
ಕಲಬುರಗಿ: ಬೆಂಗಳೂರು, ಶಿವಮೊಗ್ಗ ಬಳಿಕ ಮತ್ತೊಂದು ಶಾಲೆಯೊಂದರ ಮುಖ್ಯಶಿಕ್ಷಕಿ ವಿದ್ಯಾರ್ಥಿಗಳಿಂದ ಮನೆಗೆಲಸ ಹಾಗೂ ಶೌಚಾಲಯ ಶುಚಿಗೊಳಿಸುತ್ತಿದ್ದ ಆರೋಪ ಕೇಳಿಬಂದಿದ್ದು, ಶಾಲಾ ಮುಖ್ಯಶಿಕ್ಷಕಿ ವಿರುದ್ಧ FIR ದಾಖಲಾಗಿದೆ. ಕಲಬುರಗಿಯ ಮೌಲಾನ ಆಜಾದ್ ಮಾಡೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿಯೇ ಮುಖ್ಯಶಿಕ್ಷಕಿ ಜೋಹರಾ ಜಬೀನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ. ಈ ಸಂಬಂಧ ಇಲ್ಲಿನ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏನಿದು ಘಟನೆ? ಕಲಬುರಗಿ ಹೊರವಲಯದ ಸೋನಿಯಾ ಗಾಂಧಿ ಕ್ವಾಟರ್ಸ್ ಬಳಿಯಿರುವ ಶಾಲೆಯಲ್ಲಿ ಮುಖ್ಯಶಿಕ್ಷಕಿ ಶಾಲಾ ಮಕ್ಕಳಿಂದಲೇ ಶೌಚಾಲಯ ಶುಚಿತ್ವ, ಕಸಗುಡಿಸುವುದು ಹಾಗೂ ತನ್ನ ಮನೆಗೆಲಸ ಮಾಡಿಸುತ್ತಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿದ್ಯಾರ್ಥಿಯೊಬ್ಬ ಗಂಭೀರ ಆರೋಪ ಮಾಡಿದ್ದ. ವಿದ್ಯಾರ್ಥಿ ಪೋಷಕರೊಬ್ಬರು ಈ ಬಗ್ಗೆ ಪ್ರಶ್ನೆ ಮಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranaut) ಅವರು ಇದೀಗ ಸಿನಿಮಾ ಬಿಟ್ಟು ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ವಿದೇಶಿ ಹುಡುಗನ ಜೊತೆ ಮುಂಬೈನಲ್ಲಿ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕಂಗನಾ ಹೆಚ್ಚೆಚ್ಚು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಅವರ ಕೆರಿಯರ್‌ಗೆ ಹೇಳಿಕೊಳ್ಳುವಂತಹ ಬ್ರೇಕ್ ಸಿಗುತ್ತಿಲ್ಲ. ಇದರ ನಡುವೆ ನಟಿ ಡೇಟಿಂಗ್ ವಿಚಾರವಾಗಿ ಸದ್ದು ಮಾಡ್ತಿದ್ದಾರೆ. ಕಂಗನಾ ಪ್ರೀತಿಯಲ್ಲಿ ಬಿದ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ. ವಿದೇಶಿ ಮಿಸ್ಟರಿ ಮ್ಯಾನ್ ಜೊತೆ ಕೈ ಹಿಡಿದು ಮುಂಬೈನ ಸಲೂನ್ ಬಳಿ ಕಂಗನಾ ಕಾಣಿಸಿಕೊಂಡಿದ್ದಾರೆ. ಈ ವೇಳೆ, ಪಾಪರಾಜಿಗಳು ಫೋಟೋ ಕ್ಲಿಕ್ಕಿಸುವಾಗ ನಗುತ್ತಲೇ ಇಬ್ಬರೂ ಪೋಸ್ ನೀಡಿದ್ದಾರೆ. ಇಬ್ಬರ ಒಡನಾಟ ನೋಡಿ ಇಬ್ಬರೂ ಎಂಗೇಜ್ ಆಗಿದ್ದಾರೆ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನು ಕಂಗನಾ ಸ್ಪಷ್ಟನೆ ನೀಡಬೇಕಿದೆ ಇನ್ನೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನ…
ದೊಡ್ಮನೆಯ ಆಟ ಕೊನೆಯ ಹಂತ ತಲುಪಲು ಕೌಂಟ್‌ಡೌನ್ ಶುರುವಾಗಿದೆ. ಬಿಗ್ ಬಾಸ್ (Bigg Boss Kannada 10) ಆಟಕ್ಕೆ ಇನ್ನೇನು ಬ್ರೇಕ್ ಬೀಳಲು 2 ವಾರಗಳಿವೆ. ಬಿಗ್ ಬಾಸ್ ಫಿನಾಲೆಗೆ ಮೊದಲ ಫೈನಲಿಸ್ಟ್ ಆಗಿ ಸಂಗೀತಾ ಶೃಂಗೇರಿ (Sangeetha Sringeri) ಹೊರಹೊಮ್ಮಿದ್ದಾರೆ. ಇದರ ಬಗ್ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಡ್ರೋನ್ ಪ್ರತಾಪ್ (Drone Prathap) ಈ ವಾರ ಹೆಚ್ಚು ಅಂಕ ಗಳಿಸಿದ್ದರು. ಅವರು ಫಿನಾಲೆ ಫೈನಲಿಸ್ಟ್ ಆಗಬೇಕಿತ್ತು ಎಂಬ ಮಾತುಗಳಿಗೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಬಿಗ್ ಬಾಸ್ ಮೇಲೆ ಬಂದಿರೋ ಆರೋಪಕ್ಕೆ ಉತ್ತರ ನೀಡಿದ್ದಾರೆ. ಸಂಗೀತಾ ಮತ್ತು ಪ್ರತಾಪ್ ನಡುವಿನ ಫಿನಾಲೆ ಟಿಕೆಟ್ ವಿಚಾರದಲ್ಲಿ ಮೋಸವಾಗಿದ್ಯಾ? ಎಂಬುದಕ್ಕೆ ಉತ್ತರ ನೀಡಿದ್ದಾರೆ. ಬಿಗ್ ಬಾಸ್, ಈ ವಾರ ಅಷ್ಟು ಟಾಸ್ಕ್‌ಗಳಲ್ಲಿ ಯಾರು ಹೆಚ್ಚು ಅಂಕ ಪಡೆಯುತ್ತಾರೋ ಅವರಿಗೆ ಫಿನಾಲೆ ಮೊದಲ ಟಿಕೆಟ್ ಸಿಗಲಿದೆ ಎಂದು ಘೋಷಿಸಿದ್ದರು. ಅದರಂತೆ ಪ್ರತಾಪ್ 420, ಸಂಗೀತಾ 300, ನಮ್ರತಾ 210 ಅಂಕಗಳನ್ನು ಪಡೆದಿರುತ್ತಾರೆ. ಈ…
ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ನಾಡಿನಲ್ಲೇ ಸಂಕ್ರಾಂತಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ. ನಗರದಲ್ಲಿ ವರ್ಷದ ಮೊದಲ ಹಬ್ಬದ ಸಂಭ್ರಮದಲ್ಲಿ ಸಿಟಿ ಮಂದಿ ಮುಳುಗಿದ್ದು, ನಗರದ ಕೆಆರ್ ಮಾರ್ಕೆಟ್ ನಲ್ಲಿ ಹಬ್ಬದ ಖರೀದಿಯಲ್ಲಿ ಜನತೆ ಮುಗಿಬಿದ್ದಿದ್ದಾರೆ. ಮಾರ್ಕೆಟ್ ನಲ್ಲಿ ಎಲ್ಲಿ ನೋಡಿದರೂ ಜನತೆ ತುಂಬಿ ತುಳುಕುತ್ತಿದ್ದಾರೆ. ಬೆಳಗ್ಗೆಯಿಂದಲೇ ಹಬ್ಬದ ಖರೀದಿಗೆ ಬೇಕಾಗುವ ವಸ್ತುಗಳು ಖರೀದಿಗೆ ಜನ ಬರುತ್ತಿದ್ದು, ದರ ಏರಿಕೆ ನಡುವೆಯೂ ಹಬ್ಬದ ಖರೀದಿ ಭರಾಟೆ ಜೋರುಯಾಗಿದೆ. ಕೆಆರ್ ಮಾರ್ಕೆಟ್ ನಲ್ಲಿ ಖರೀದಿಗೆ ಜನತೆ ಮುಗಿಬಿದ್ದಿದ್ದು, ಕೆಆರ್ ಮಾರ್ಕೆಟ್ ಜಂಗುಳಿಯಿಂದ ತುಳುಕಿ ತುಂಬುತ್ತಿದೆ.