Author: AIN Author

ಇಂದು ಕನ್ನಡ ಚಿತ್ರರಂಗದ ಖ್ಯಾತ ನಟ‌‌ ಹಾಗೂ ಮಾಜಿ ಸಚಿವರಾದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುಣ್ಯಸ್ಮರಣೆ. ಕಲಾಸೇವೆಯ ಜೊತೆ ಜೊತೆಗೆ ರಾಜಕೀಯದಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿದ್ದ ಅಂಬಿ ಅವರು ಕನ್ನಡಿಗರ ಹೃದಯದಲ್ಲಿ ಸದಾ ಅಜರಾಮರವಾಗಿದ್ದಾರೆ. ಅಂಬಿ ನಮ್ಮನ್ನ ಅಗಲಿ ಭರ್ತಿ ಐದು ವರ್ಷವಾಗಿದೆ ಇವತ್ತು ಪುತ್ರ ನಟನೆಯ ಸಿನಿಮಾ ಬ್ಯಾಡ್ ಮ್ಯಾನರ್ಸ್ ಕೂಡ ರಿಲೀಸ್ ಆಗುತ್ತಿದೆ ಮಂಡ್ಯದ ಗಂಡು ಇದ್ದಷ್ಟು ದಿನ ಎಲ್ಲರನ್ನು ರಂಜಿಸಿಯೇ ಹೋಗಿದ್ದು ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ

Read More

ಚಿತ್ರದುರ್ಗ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತಿನ ಹೊಡೆತಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ತಡೆದುಕೊಳ್ಳುವುದಿಲ್ಲ ಎಂದು ಬಿಜೆಪಿ ವಿರುದ್ಧ ಕೃಷಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದರು. ಚಿತ್ರದುರ್ಗ ನಗರದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ” ಆರ್‌ಎಸ್‌ಎಸ್‌ ಅನ್ನು ನಾವು ಬ್ಯಾನ್ ಮಾಡುತ್ತೇವೆ ಎಂದು ನಾವು ಎಲ್ಲಿಯೂ ಹೇಳಿಲ್ಲ. ಸಾರ್ವಜನಿಕ ಹಾನಿ‌ ಮಾಡಿದ ಸಂಘ ಯಾವುದೇ ಇದ್ರೂ ಕ್ರಮ ಅಂತಾ ಹೇಳೀದ್ದಿವಿ ” ಎಂದರು. ಬಿಜೆಪಿಯವರಿಗೆ ಏನೂ ಸಿಗ್ತಿಲ್ಲ, ಅದಕ್ಕೆ ಒಂದೇನಾದ್ರೂ ಹುಡುಕಕ್ಕೆ ಹೋಗ್ತಿದ್ದಾರೆ ಅಷ್ಟೇ, ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕರನ್ನ ಆಯ್ಕೆ ಮಾಡೋಕೆ ಇವರಿಗೆ 6 ತಿಂಗಳು ಬೇಕಾಯ್ತು, ಇವರಿಬ್ಬರ ಸ್ಥಿತಿ ಈ ಪಾರ್ಲಿಮೆಂಟ್ ಚುನಾವಣೆ ಮುಗಿಲೀ ಗೊತ್ತಾಗುತ್ತೆ ಎಂದರು. ಈಗಾಗಾಲೇ ಯತ್ನಾಳ್ ಶುರು ಮಾಡ್ಕೊಂಡಿದಾರೆ. ಯತ್ನಾಳ್ ಹೊಡೆತನ್ನು ಬೊಮ್ಮಾಯಿ, ಯಡಯೂರಪ್ಪನೇ ತಡಕೋಳಕ್ಕಾಗಿಲ್ಲ, https://ainlivenews.com/housewifes-body-found-hanging-in-bangalore/ ಇವರಿಬ್ಬರೂ ತಡಕೋತಾರಾ ನೋಡೋಣ ಎಂದು ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸನವರು ಬಚ್ಚಾಗಳು ಎಂಬ ಆರ್. ಅಶೋಕ್ ಹೇಳಿಕೆಗೆ ಕಿಡಿಕಾರಿದ ಕೃಷಿ ಸಚಿವರು ನಾವೆಲ್ಲ ಬಚ್ಚಾಗಳಾ?,…

Read More

ಬೆಂಗಳೂರು:- ಡಿಸಿಎಂ ಡಿ.ಕೆ.ಶಿವಕುಮಾರ್ ಕೇಸ್ ನಲ್ಲಿ ಅನುಮತಿ ವಾಪಸ್ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಸ್ವಜನ ಪಕ್ಷಪಾತ ಅಲ್ಲ ಇದು. ದರೋಡೆಕೋರನ್ನ ರಕ್ಷಣೆ ಮಾಡೋಕೆ ಇರುವ ಸರ್ಕಾರ ಇದು. ಅಮೇಲೆ ಮಾತಾಡ್ತೀನಿ. ಕೋರ್ಟ್ ನಲ್ಲಿ ಇರುವುದರಿಂದ ಜಾಸ್ತಿ ಮಾತಾಡೋದು ಬೇಡ. ಮರ್ಯಾದೆ ಇದ್ದರೆ ಹೆದರುತ್ತಾರೆ. ಮರ್ಯಾದೆ ಇಲ್ಲದವರಿಗೆ ಕೋರ್ಟ್ ನಲ್ಲಿ ಇದ್ದರೇನು? ಯಾವುದರಲ್ಲಿ ಇದ್ದರೇನು? ಯಾವುದನ್ನು ಬೇಕಾದರು ಕೊಂಡುಕೊಳ್ಳಬಹುದು ಎಂಬ ದುರಹಂಕಾರದಲ್ಲಿ ಇದ್ದಾರೆ ಎಂದು ಸರ್ಕಾರ ಡಿಕೆಶಿ ವಿರುದ್ಧ ಕೇಸ್ ವಾಪಸ್ ಪಡೆದಿದಕ್ಕೆ ಹೆಚ್ಡಿಕೆ ಕಿಡಿಕಾರಿದ್ದಾರೆ.

Read More

ಮಂಡ್ಯ: ಮುಂದಿನ ಒಂದು ತಿಂಗಳು ತಮಿಳುನಾಡಿಗೆ ನೀರು ಬಿಡುವಂತೆ ಸಿಡಬ್ಲ್ಯುಆರ್​ಸಿ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ. ಪ್ರತಿನಿತ್ಯ 2700 ಕ್ಯೂಸೆಕ್ ನೀರು ಹರಿಸಲು ಶಿಫಾರಸ್ಸು ಮಾಡಿದ್ದು, ಇದಕ್ಕೆ ಮಂಡ್ಯದ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. https://ainlivenews.com/miley-is-the-new-president-of-argentina-who-talks-to-a-dead-dog/ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುತ್ತಿದ್ದು,  ಸರ್ಕಾರ, ಪ್ರಾಧಿಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಲಾಗುತ್ತಿದೆ. ತಮಿಳುನಾಡಿಗೆ ನೀರು ಹರಿಸದಂತೆ ರೈತ ಹಿತರಕ್ಷಣಾ ಸಮಿತಿ ಕಳೆದ 80 ದಿನಗಳಿಂದ ರೈತರ ಹೋರಾಟ ನಡೆಯುತ್ತಿದೆ.

Read More

ಬೆಂಗಳೂರು:- ಇಷ್ಟುದಿನ ಮೆಟ್ರೋ ಆವರಣದಲ್ಲಿ ಕ್ಯಾಮರಾ ಬಳಕೆ, ಚಿತ್ರೀಕರಣಕ್ಕೆ ಅವಕಾಶ ಸಿಗದೇ ಚಾನ್ಸ್‌ಗಾಗಿ ಕಾಯ್ತಿದ್ದ ಚಿತ್ರರಂಗದ ಮಂದಿಗೆ ಬಿಎಂಆರ್‌ಸಿಎಲ್‌ ಗುಡ್‌ನ್ಯೂಸ್‌ ಕೊಟ್ಟಿದೆ. ದೆಹಲಿ, ಚೆನ್ನೈ ಮೆಟ್ರೋ ಬಳಿಕ ಬೆಂಗಳೂರಿನ ನಮ್ಮ ಮೆಟ್ರೋದಲ್ಲೂ ಸಿನಿಮಾ ಹಾಗೂ ಸೀರಿಯಲ್‌ಗಳ ಶೂಟಿಂಗ್‌ಗೆ ಅನುಮತಿ ಕೊಡೋಕೆ BMRCL ಮುಂದಾಗಿದ್ದು, ಇನ್ಮುಂದೆ ಬೆಂಗಳೂರಿನ ಮೆಟ್ರೋ ನಿಲ್ದಾಣಗಳು, ಮೆಟ್ರೋ ರೈಲುಗಳಲ್ಲೂ ಬಣ್ಣದ ಲೋಕದ ಕಲರವ ಕೇಳುವ ಕಾಲ ಹತ್ತಿರವಾಗ್ತಿದೆ. ಬೆಂಗಳೂರಿನ ಮೆಟ್ರೋಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ಸಿಕ್ಕಿದ್ದು ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷೆ ಪ್ರಮೀಳಾ ಜೋಶಾಯಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಒಳ್ಳೆಯ ವಿಚಾರ ಕನ್ನಡ ಚಲನಚಿತ್ರರಂಗ ಇದನ್ನು ಸ್ವಾಗತ ಮಾಡ್ತಿವಿ. 25% ರಿಯಾಯಿತಿ ನೀಡಿರೋದ್ರಿಂದ ಕನ್ನಡ ಚಿತ್ರರಂಗ ಬೆಳೆಯುತ್ತದೆ ಮತ್ತು ಬೇರೆಬೇರೆ ಭಾಷೆಯ ಚಲನಚಿತ್ರಗಳು ನಮ್ಮ ರಾಜ್ಯದಲ್ಲಿ ‌ಚಿತ್ರೀಕರಣ ಆಗುತ್ತದೆ ಎಂದು ತಿಳಿಸಿದರು. ಇನ್ನು ಮೆಟ್ರೋ ಆವರಣ, ಮೆಟ್ರೋ ರೈಲುಗಳಲ್ಲಿ ಶೂಟಿಂಗ್‌ ಮಾಡಲು ಒಂದು ದಿನಕ್ಕೆ 6 ಲಕ್ಷ ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ.…

Read More

ಉಡುಪಿ: ಒಂದೇ ಕುಟುಂಬದ ನಾಲ್ವರ (Udupi Murder Case) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಗಳನ್ನು ಉಡುಪಿ ಎಸ್‌ಪಿ ಅರುಣ್ ಅವರು ಹಂಚಿಕೊಂಡಿದ್ದಾರೆ. ನೇಜಾರು ತೃಪ್ತಿ ನಗರದಲ್ಲಿ ಹಸೀನಾ, ಆಫ್ನಾನ್, ಅಯ್ನಾಝ್, ಆಸಿಮ್ ಹತ್ಯೆಯಾಗಿತ್ತು. ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಪಿ ನಾಲ್ವರ ಕೊಲೆಗೈದು ಚೂರಿಯನ್ನು ಅಡುಗೆ ಮನೆಯಲ್ಲಿ ಇಟ್ಟಿದ್ದ. ಪತ್ನಿಗೆ ಸಂಶಯ ಬಾರದ ಹಾಗೆ ಮನೆಯಲ್ಲಿ ಪ್ರವೀಣ್ ಚೌಗಲೆ ವರ್ತಿಸಿದ್ದ ಎಂದು ತಿಳಿಸಿದ್ದಾರೆ. ತನಿಖೆಗೆ ಬೇಕಾದ ಎಲ್ಲಾ ದಾಖಲಾತಿ ಪ್ರಕ್ರಿಯೆ ಮಾಡಿದ್ದೇವೆ. ಇಬ್ಬರಿಗೂ ಎಂಟು ತಿಂಗಳಿಂದ ಪರಿಚಯ ಇತ್ತು. ಇಬ್ಬರ ಮಧ್ಯೆ ಗೆಳೆತನ ಇತ್ತು. ಪ್ರವೀಣ್, ಆಯ್ನಾಸ್‌ಗೆ ಹಲವಾರು ಸಹಾಯ ಮಾಡದ್ದಾನೆ. ತಿಂಗಳಿಂದ ಸರಿಯಾಗಿ ಮಾತನಾಡುತ್ತಿರಲಿಲ್ಲ. ಪೊಸೆಸಿವ್‌ನೆಸ್‌ನಿಂದ ಕೊಲೆ ಮಾಡಬೇಕೆಂದು ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ಪ್ರವೀಣ್. ಆರಂಭದಲ್ಲಿ ಅಯ್ನಾಸ್‌ಗೆ ಮೊದಲ ಅಟ್ಯಾಕ್ ಮಾಡುತ್ತಾನೆ. ಹಸೀನಾ, ಅಫ್ನಾನ್, ಆಸಿಂಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಂತರ ಬೇರೆ ಬೇರೆ ವಾಹನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪರಾರಿಯಾಗಿದ್ದಾನೆ. ಕೈ ಗಾಯಕ್ಕೆ ಚಿಕಿತ್ಸೆ…

Read More

ಮಂಡ್ಯ: ಜಾತಿಗಣತಿ ವರದಿ ಜಾರಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯು ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಲ್ಲ. ಬದಲಿಗೆ ಸಮಾಜವನ್ನು ಒಡೆಯುವ ಉದ್ದೇಶ ಹೊಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಕ್ಷೇಪಿಸಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ”ಜಾತಿಗಣತಿ ವಿಚಾರವಾಗಿ ಮುಖ್ಯಮಂತ್ರಿ ಮಾಡಿರುವ ಟ್ವೀಟ್‌ ಅನ್ನು ಗಮನಿಸಿದ್ದೇನೆ. ಅವರ ಹೆಮ್ಮೆಯ ರಾಹುಲ್‌ ಗಾಂಧಿ ಭಾವನೆಗೆ ಸ್ಪಂದಿಸಿ ಜಾತಿಗಣತಿ ವರದಿ ಸ್ವೀಕರಿಸುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಫಲವನ್ನು ಉಣ್ಣಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿದರು. https://ainlivenews.com/housewifes-body-found-hanging-in-bangalore/ ”ಒಂದೆಡೆ ಮುಖ್ಯಮಂತ್ರಿಗಳು ವರದಿ ಸ್ವೀಕರಿಸಿ, ಅವಕಾಶಗಳಿಂದ ವಂಚಿತವಾದ ಸಮುದಾಯಗಳಿಗೆ ನ್ಯಾಯ ಕೊಡಿಸುವುದಾಗಿ ಹೇಳುತ್ತಾರೆ. ಮತ್ತೊಂದೆಡೆ ವರದಿಯ ಮೂಲ ಪ್ರತಿಯೇ ಕಾಣೆಯಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ಸರಕಾರಕ್ಕೆ ಪತ್ರ ಬರೆದಿದ್ದಾರೆ ಎನ್ನುವ ಮಾಹಿತಿ ಇದೆ. ಮೂಲ ಪ್ರತಿ ಕಳ್ಳತನ ಆದ ಮೇಲೆ ಹೇಗೆ ಜಾರಿ ಮಾಡುತ್ತಾರೆ,” ಎಂದು ಮಾರ್ಮಿಕವಾಗಿ ನುಡಿದರು. ”ಪದೇ ಪದೇ ಕಾಂತರಾಜು ವರದಿಯನ್ನು ಎಚ್‌.ಡಿ. ಕುಮಾರಸ್ವಾಮಿ ತಿರಸ್ಕರಿಸಿದರೆಂದು…

Read More

ಬೆಂಗಳೂರು:- ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಮಹಿಳಾ ಪ್ರಯಾಣಿಕರ ಸಂಖ್ಯೆ ಶತ ಕೋಟಿ ದಾಟಿದೆ. ಯೋಜನೆಯಲ್ಲಿ ಅನುಕೂಲ ಪಡೆದಿರುವ ಮಹಿಳಾ ಪ್ರಯಾಣಿಕರ ಸಂಖ್ಯೆ ಬರೋಬ್ಬರಿ 100 ಕೋಟಿ ದಾಟಿದೆ. ಶಕ್ತಿ ಯೋಜನೆ ಜಾರಿಯಾಗಿ ಐದೇ ತಿಂಗಳಿಗೆ 2397 ಕೋಟಿ ರೂ. ವ್ಯಯವಾಗಿದ್ದು, ಕೆಲವೇ ದಿನಗಳಲ್ಲಿ 2500 ಕೋಟಿ ರೂ. ತಲುಪಲಿದೆ. ಪ್ರತಿ‌ನಿತ್ಯ‌ ಲಕ್ಷ ಲಕ್ಷ ಮಹಿಳಾ ಮಣಿಗಳ ಪ್ರಯಾಣದಿಂದ 2397 ಕೋಟಿ ವ್ಯಯವಾಗಿದೆ. ಕಳೆದ 165 ದಿನಗಳಲ್ಲಿ 100,47,56,184 ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಮಹಿಳಾ ಪ್ರಯಾಣಿಕರ ವಿವರ ಕೆಎಸ್‌ಆರ್‌ಟಿಸಿ – 30,12,17,350 ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 900,29,21,508 ಬಿಎಂಟಿಸಿ – 32,69,60,082 ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 420,82,19,200 ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ – 23,37,23,007 ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 600,69,91,513 ಕಲ್ಯಾಣ ಕರ್ನಾಟಕ – 14,28,55,745 ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 475,98,79,341 ಶಕ್ತಿ ಯೋಜನೆ ಜಾರಿಯಾದ ಬಳಿಕ ಅಂದರೆ ಕಳೆದ…

Read More

ಕೋಲಾರ : ತನ್ನ ಹೆಂಡತಿ ನೋಡೋಕೆ ಸುಂದರವಾಗಿದ್ದಾಳೆ ಅಂತ ನಿನ್ನಷ್ಟೇ ಸುಂದರವಾದ ಆಭರಣ ಹಾಗೂ ಹಣವನ್ನು ನಿನ್ನ ತವರು ಮನೆಯಿಂದ ತರಬೇಕು ಎಂದು ವರದಕ್ಷಿಣೆ ಕಿರುಕುಳ ಕೊಟ್ಟ ಗಂಡ, ತನ್ನ ಮುದ್ದಾದ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಕೋಲಾರದಲ್ಲಿ ನಡೆದಿದೆ. ಪತ್ನಿಯ ಕತ್ತು ಹಿಸುಕಿ ಪತ್ನಿಯೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಮೃತ ಮಹಿಳೆಯ ಕುಟುಂಬಸ್ಥರಿಂದ ಆಕೆಯ ಗಂಡನ ಮೇಲೆ ಆರೋಪ ಮಾಡಲಾಗಿದೆ. ಕೋಲಾರದ ಮಿಲ್ಲತ್ ನಗರದಲ್ಲಿ ಘಟನೆ ನಡೆದಿದೆ. ಮಿಲ್ಲತ್ ನಗರದ ಮಾಹೇನೂರ್ ( 22) ಮೃತ ಮಹಿಳೆಯಾಗಿದ್ದಾಳೆ. ಗಂಡ ಸಯ್ಯದ್ ಶುಹೇಬ್ ಕೊಲೆ ಮಾಡಿರುವುದಾಗಿ ಆರೋಪ ಮಾಡಲಾಗಿದೆ. ಮದುವೆ ಮಾಡಿಕೊಟ್ಟ ನಂತರ ವರದಕ್ಷಿಣೆ ಕಿರುಕುಳ ಕೊಟ್ಟು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಮಹಿಳೆ ಮನೆಯವರು ದೂರು ನೀಡಿದ್ದಾರೆ. https://ainlivenews.com/housewifes-body-found-hanging-in-bangalore/ ಕಳೆದ ಎರಡು ವರ್ಷಗಳ ಹಿಂದೆ ಮದುವೆ ಮಾಹೇನೂರ್‌ ಹಾಗೂ ಸಯ್ಯದ್‌ ಶುಹೇಬ್‌ಗೂ ಮದುವೆಯಾಗಿತ್ತು. ಆರಂಭದಲ್ಲಿ ಹೆಂಡತಿ ಯೊಂದಿಗೆ ಚೆನ್ನಾಗಿಯೇ ಇದ್ದ ಪತಿ ಕೆಲವೇ ದಿನಗಳಲ್ಲಿ ತನ್ನ…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿಗೆ ಕಂಬಳ ವೀಕ್ಷಣೆಗೆ ಲಕ್ಷಾಂತರ ಜನರು ಆಗಮಿಸುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರು ಸಂಚಾರ ಮಾರ್ಗ ಬದಲಾವಣೆಯ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಬೆಂಗಳೂರಲ್ಲಿ ಆಯೋಜಿಸಲಾದ ಕಂಬಳ (Kambala) ವೀಕ್ಷಣೆಗೆ ಬರುವವರ ಪ್ರವೇಶ ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳ ವ್ಯವಸ್ಥೆ ಮಾಡಲಾಗಿದೆ. ಸಿಬಿಡಿ ಏರಿಯಾ, ಮೇಖ್ರಿ ಸರ್ಕಲ್​​ ಬಳಿಯಿಂದ ಬರುವ ವಾಹನಗಳಿಗೆ ಗೇಟ್ ನಂ.1 ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಹೆಬ್ಬಾಳ, ಮೇಖ್ರಿ ಸರ್ಕಲ್ ಅಂಡರ್ ಪಾಸ್, ಯಶವಂತಪುರ ಕಡೆಯಿಂದ ಬರುವ ವಾಹನಗಳಿಗೆ ಗೇಟ್ ನಂ.1 ರ ಮೂಲಕ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕ್ಯಾಬ್​​ನಲ್ಲಿ ಬರುವವರು ಗೇಟ್ ನಂಬರ್ 2ರ ಮೂಲಕ ಪ್ರವೇಶಿಸಬೇಕು. ಗೇಟ್ ನಂಬರ್ 3ರ ಮೂಲಕ ಕ್ಯಾಬ್​​ಗಳು ನಿರ್ಗಮಿಸಬೇಕಾಗಿದೆ. ಅರಮನೆ ರಸ್ತೆ, ಬಿಡಿಎ ಜಂಕ್ಷನ್​​ನಿಂದ ಚಕ್ರವರ್ತಿ ಲೇಔಟ್ ಸೇರಿದಂತೆ ವಸಂತನಗರ ಅಂಡರ್ ಪಾಸ್​​ನಿಂದ ಹಳೇ ಉದಯ ಟಿವಿ ಜಂಕ್ಷನ್​​ವರೆಗೆ ಎಂ.ವಿ ಜಯರಾಂ ರಸ್ತೆ ಬಳಸುವಂತೆ ಸೂಚಿಸಿದ್ದಾರೆ. ಮೇಖ್ರಿ ವೃತ್ತದಿಂದ LRDE ಜಂಕ್ಷನ್​ವರೆಗೆ ಬಳ್ಳಾರಿ ರಸ್ತೆ…

Read More