Author: AIN Author

ಕೋಲಾರ: ಜಿಲ್ಲೆಯ ಅಬಕಾರಿ ಪೊಲೀಸರ ಮಹತ್ ಕಾರ್ಯಚರಣೆ ನಡೆಸಿದ್ದು ನಗರದ ಎರಡು ಕಡೆ  1,300 ಗ್ರಾಂ ಗಾಂಜಾ ವನ್ನು ಜಪ್ತಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಬೆಂಗಳೂರು ದಕ್ಷಿಣ ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ರಮೇಶ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿದ್ದು ಅಪಾರ ಪ್ರಮಾಣದ ಗಾಂಜಾ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಕೋಲಾರ ತಾಲ್ಲೂಕಿನ  ಶ್ರೀನಿವಾಸಪುರ ಕೋಲಾರ ರಸ್ತೆಯ ಮಹರ್ಷಿ  ಸ್ಕೂಲ್  ಬಳಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ 800 ಗ್ರಾಂ  ಹೂ ಮತ್ತು ಬೀಜಗಳಿಂದ ಕೂಡಿದ ಒಣ ಗಾಂಜಾ  ಸೊಪ್ಪನ್ನು  ಹೊಂದಿ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿದ್ದು ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಹಿಡಿದಿದ್ದಾರೆ . ಹಾಗೆ ಕೋಲಾರದ ಮೂರಂಡಹಳ್ಳಿ ಕ್ರಾಸ್ ಬಳಿ ಕೂಡ ಪೊಲೀಸರು ದಾಳಿ ನಡೆಸಿದ್ದು  ಸುಮಾರು 400 ಗ್ರಾಂ ಹೂ ಮತ್ತು ಬೀಜದಿಂದ ಕೂಡಿರುವ ಒಣ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಹೊಂದಿರುವುದನ್ನು ಪತ್ತೆ ಹಚ್ಚಿ ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರಿಂದ ಕೃತ್ತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳು, ಜಪ್ಪಿ…

Read More

ಬೆಂಗಳೂರು: ದಕ್ಷತೆಗೆ ಹೆಸರಾದ ಬೆಂಗಳೂರು ಪೊಲೀಸರಿಂದ ಮಹಾಯಡವಟ್ಟು ಮಹತ್ವದ ವಿಚಾರಗಳಲ್ಲೂ ಹೀಗ್ ಮಾಡುದ್ರೆ ಹೇಗೆ ಪೊಲೀಸರೇ..? ಸಮಾಜಕ್ಕೆ ಮಾದರಿಯಾಗೋ ಕಾರ್ಯಕ್ರಮದಲ್ಲಿ ಪೊಲೀಸರು ಮಾಡಿದ್ದೇನು ಗೊತ್ತಾ..? ಡ್ರಗ್ ಜಾಗೃತಿ ಕಾರ್ಯಕ್ರಮದಲ್ಲಿ ಪೊಲೀಸರ ಯಡವಟ್ಟುಡ್ರಗ್  ಕನ್ಸೂಮ್ ಮಾಡಿದ್ದವರಿಂದಲೇ ಜಾಗೃತಿ ಕಾರ್ಯಕ್ರಮ ಮಾಡಿಸಿದ್ರಾ ಪೊಲೀಸ್ರು.. ಬೆಂಗಳೂರು ನಗರದಲ್ಲಿ ಡ್ರಗ್ಸ್ ಕುರಿತಾಗಿ ಜಾಗೃತಿ ಮೂಡಿಸುತ್ತಿರುವ ನಗರ ಪೊಲೀಸರು ನಗರದ ಪ್ರತೀ ಡಿವಿಷನ್ ನಲ್ಲೂ SAY NO TO DRUGS (ಮಾದಕ ವಸ್ತು ನಮಗೆ ಬೇಡ) ಎಂಬ ಜಾಗೃತಿ ಕಾರ್ಯಕ್ರಮ ಮಾಡುತ್ತಿರುವ ಪೊಲೀಸರು… ಕಳೆದ ಭಾನುವಾರ ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರಿಂದಲೂ ಜಾಗೃತಿ ಈ ಜಾಗೃತಿ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು ಹಾಗೆ ಜಾಗೃತಿ ಕಾರ್ಯಕ್ರಮದಲ್ಲಿ ನಟ ದಿಗಂತ್ ಸಹ ಭಾಗವಹಿಸಿ ಭಾಷಣ ಮಾಡಿದ್ದರು.ಆದ್ರೆ ನಟ ದಿಗಂತ್ ಈ ಹಿಂದೆ ಸಿಸಿಬಿ ಪೊಲೀಸರ ವಿಚಾರಣೆ ಎದುರಿಸಿದ್ದರೂ ಅದ್ರಲ್ಲೂ ಸೆಲೆಬ್ರಿಟಿಗಳ ಡ್ರಗ್ ಕೇಸ್ ನಲ್ಲಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ನಟ.. ಈ ವೇಳೆ ಡ್ರಗ್ ಸೇವಿಸೋದಾಗಿ…

Read More

ಸಂಕ್ರಾಂತಿ ಸಂಭ್ರಮಕ್ಕೆ ನೋ ಎಲಿಮಿನೇಷನ್‌ ಸಿಹಿ ಕೊಟ್ಟಿರುವ ಬಿಗ್‌ಬಾಸ್‌, ಹೊಸ ವಾರಕ್ಕೆ ಸ್ಪರ್ಧಿಗಳಿಗೆ ಹೊಸ ಹೊಸ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ. ಸದಸ್ಯರ ನಡುವಿನ ಸ್ಪರ್ಧೆಯ ತುರುಸನ್ನು ಹೆಚ್ಚಿಸುವ ಬೆಂಕಿ ಚಟುವಟಿಕೆಯೊಂದು ಮನೆಯೊಳಗೆ ನಡೆದಿದೆ. JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಅದರ ಝಲಕ್ ಜಾಹೀರಾಗಿದೆ. ‘ಈ ವಾರದ ನಾಮಿನೇಷನ್‌ನಲ್ಲಿ ನಿಮ್ಮೊಳಗಿರುವ ಗೆಲುವಿನ ಕಿಚ್ಚಿಗೆ ಇಬ್ಬರುಸದಸ್ಯರು ಬಲಿಯಾಗಬೇಕು’ ಎಂದು ಹೇಳಿದ್ದಾರೆ. ಎದುರಿಗೆ ಧಗದಹಿಸಿ ಉರಿಯುತ್ತಿರುವ ಬೆಂಕಿಗೆ ತಾವು ಇಚ್ಛಿಸಿರುವ ಇಬ್ಬರು ಸದಸ್ಯರ ಫೊಟೊಗಳನ್ನು ಹಾಕಬೇಕು. ಮನೆಯೊಳಗೇ ರೂಪುಗೊಂಡಿರುವ ಬಾಂಧವ್ಯವೆಲ್ಲವೂ ಈ ಬೆಂಕಿಯಲ್ಲಿ ಹಾದು ಬಣ್ಣ ಬದಲಿಸಿಕೊಳ್ಳುತ್ತಿವೆ. ಕೆಲವು ಉರಿದು ಬೂದಿಯಾಗುತ್ತಿವೆ. ಕೆಲವು ಕರಕಲಾಗುತ್ತಿವೆ. ಯಾವುದಾದರೂ ಬೆಂಕಿಯಲ್ಲಿ ಬೆಂದು ಅಪ್ಪಟ ಚಿನ್ನವಾಗಿ ಹೊರಬರಲಿವೆಯೇ ಎಂದು ಕಾದು ನೋಡಬೇಕಿದೆ. ಸಂಗೀತಾ, ಪ್ರತಾಪ್ ಅವರ ಫೋಟೊವನ್ನು ಬೆಂಕಿಗೆ ಎಸೆದಿದ್ದಾರೆ. ‘ನಾನು ಇದುವರೆಗೆ ನೋಡಿರುವ ಪ್ರತಾಪ್ ಬೇರೆಯೇ, ಈಗ ನೋಡ್ತಿರೋ ಪ್ರತಾಪ್ ಬೇರೆಯೇ. ಹಾಗಾಗಿ ಅವರನ್ನು ನಾಮಿನೇಟ್ ಮಾಡುತ್ತೇನೆ’ ಎಂದು ಸಂಗೀತಾ ವಿವರಣೆ ನೀಡಿದ್ದಾರೆ. ತುಕಾಲಿ ಸಂತೋಷ್ ಮತ್ತು ತನಿಷಾ ಇಬ್ಬರೂ…

Read More

ಚಾಮರಾಜನಗರ: ಮಕರ ಸಂಕ್ರಾಂತಿ ಹಬ್ಬದಂದು ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ  ಕೊಳ್ಳೇಗಾಲ  ತಾಲೂಕಿನ ಜಿನಕನಹಳ್ಳಿ ಗ್ರಾಮದ ಸಮೀಪ ಈ  ದುರ್ಘಟನೆ  ನಡೆದಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ನಿವಾಸಿಗಳಾದ   ಸಂತೋಷ್(32), ಸೌಮ್ಯ(27) ನಿತ್ಯಸಾಕ್ಷಿ (4) ಅಭಿ(9) ಮೃತ ದುರ್ದೈವಿಗಳು. ಪಾಳ್ಯದ ಗ್ರಾಮದ ಮೃತ ಕುಟುಂಬದವರು ಹೊಸ ಬಟ್ಟೆ ಖರೀದಿಸಲು ಕೊಳ್ಳೇಗಾಲಕ್ಕೆ ತೆರಳುತ್ತಿದ್ದವರು  ಈ ವೇಳೆ ಭತ್ತ ಕಟಾವು ಮಾಡುವ ಲಾರಿಯು ಬೈಕ್ ಗೆ  ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ತೆರಳುತ್ತಿದ್ದ  ನಾಲ್ವರು  ಮೃತಪಟ್ಟಿರುವ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Read More

ಬಳ್ಳಾರಿ: ಬಿಸ್ಕೆಟ್ ಫ್ಯಾಕ್ಟರಿಯಲ್ಲಿ (Biscuit Factory) ಬಾಯ್ಲರ್ (Boiler) ಸ್ಫೋಟಗೊಂಡ ಪರಿಣಾಮ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡ ಘಟನೆ ಬಳ್ಳಾರಿಯಲ್ಲಿ (Ballari) ನಡೆದಿದೆ. ಬಳ್ಳಾರಿ ನಗರದ ಗುಗ್ಗರಹಟ್ಟಿ ಪ್ರದೇಶದ ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಅವಘಡ ಸಂಭವಿಸಿದೆ. ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಸಲೀಂ ಎನ್ನುವ ಕಾರ್ಮಿಕ ಸಾವನ್ನಪ್ಪಿದ್ದಾರೆ. ಮತ್ತೋರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಐವರಿಗೆ ಗಂಭೀರ ಗಾಯಗಳಾಗಿವೆ.  https://ainlivenews.com/rowdysheeter-arrested-by-kylie-machi-and-shouting-at-a-woman/ ಘಟನೆಯಲ್ಲಿ ಗಂಭೀರ ಗಾಯಗೊಂಡವರನ್ನು ನಗರದ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಬಾಯ್ಲರ್ ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Read More

ಬೆಂಗಳೂರು: ಜೆಟ್ಲಾಗ್ ನಲ್ಲಿ ಕಾಟೇರ ಸಿನಿಮಾ ಸಕ್ಸಸ್ ಪಾರ್ಟಿ ಪ್ರಕರಣ ಹಿನ್ನೆಲೆ  ತನಿಖಾ ವರದಿ ತಯಾರು ಮಾಡಿರೋ ಸುಬ್ರಮಣ್ಯನಗರ ಪೊಲೀಸರು ರಿಪೋರ್ಟ್ ನೀಡೋಕೆ ಮಲ್ಲೇಶ್ವರಂ ಎಸಿಪಿಗೆ ಸೂಚಿಸಿದ್ದ ಕಮೀಷನರ್ ದಯಾನಂದ್ ಸ್ಟಾರ್ ಗಳ ಹೇಳಿಕೆ ಹಾಗೂ ಸಿಬ್ಬಂದಿ ತನಿಖಾ ವರದಿ ಕೇಳಿದ್ದ ಕಮೀಷನರ್ ನಾಳೆ (ಮಂಗಳವಾರ) ತನಿಖಾ ವರದಿ ಸಲ್ಲಿಕೆಗೆ ಸಿದ್ಧತೆ ಮಾದಕ ವಸ್ತು ಬಳಕೆ ಬಗ್ಗೆ ಸ್ಟಾರ್ ಗಳಿಗೆ ಪ್ರಶ್ನೆ ಮಾಡಿದ್ದ ಪೊಲೀಸರು..! ತಡರಾತ್ರಿ ವರೆಗೂ ಪಾರ್ಟಿಯಲ್ಲಿ ಭಾಗಿಯಾಗಿದ್ದ ಮಾಹಿತಿ ಕೇಳಿರೊ ಖಾಕಿ ಪಾರ್ಟಿಯಲ್ಲಿ ಮಾದಕ ವಸ್ತು ಬಳಸಿರಬಹುದು ಎಂಬ ಶಂಕೆ ಹೀಗಾಗಿ ಗಾಂಜಾ ಸೇವನೆ ಬಗ್ಗೆ ಸ್ಟಾರ್ ನಟರನ್ನ ಪ್ರಶ್ನೆ ಮಾಡಿದ್ದ ಪೊಲೀಸರು ಗಾಂಜಾ ಪ್ರಶ್ನೆಗೆ ದರ್ಶನ್ ಗರಂ ಆಗಿದ್ರಂತೆ!ಗಾಂಜಾ ಬಗ್ಗೆ ಯಾಕೆ ಕೇಳ್ತಿದ್ದೀರಾ..? ಯಾವುದಾದ್ರೂ ಮಾಧ್ಯಮದಲ್ಲಿ ಬಂದಿದ್ಯಾ ಅಂತಾ ಗರಂ ಆಗಿದ್ದ ದರ್ಶನ್ ಅಲ್ಲಿ ಯಾವುದೇ ರೀತಿ ಮಾದಕ ವಸ್ತು ಸೇವನೆ ಆಗಿಲ್ಲ ಅಂತ ಉತ್ತರ ನೀಡಿದ್ದ ದರ್ಶನ್. ಊಟ, ಸಿನಿಮಾ ವಿಚಾರದ ಮಾತುಕತೆ ಎಂದಿರೋ ಸ್ಟಾರ್ಸ್…

Read More

ಹುಬ್ಬಳ್ಳಿ: ಅಯೋಧ್ಯೆಯಲ್ಲಿ (Ayodhya) ಜನವರಿ 22ರಂದು ನಡೆಯಲಿರುವ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ಭಾಗವಾಗಿ ಬಿಜೆಪಿ ದೇಶಾದ್ಯಂತ ದೇವಾಲಯಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಚಿಗೊಳಿಸುವ ʻಸ್ವಚ್ಛ ತೀರ್ಥʼ ಅಭಿಯಾನ (Swachh Teerth Campaign) ಹಮ್ಮಿಕೊಂಡಿದೆ. ಪಕ್ಷದ ನಾಯಕರು (BJP Leaders), ಕೇಂದ್ರ ಸಚಿವರು ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ದೇಶದ ವಿವಿಧ ಭಾಗಗಳಲ್ಲಿ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಖ್ಯಾತ ಬಾಲಿವುಡ್‌ ನಟರೂ ಈ ಅಭಿಯಾನಕ್ಕೆ ಸಾಥ್‌ ನೀಡಿದ್ದಾರೆ. ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದಿನ ಸಮೀಪಿಸುತ್ತಿರುವಾಗ ದೇಶಾದ್ಯಂತ ಸಂಭ್ರಮದ ವಾತಾವರಣ ಮೂಡಿಸಲು ಬಿಜೆಪಿ ಈ ಅಭಿಯಾನ ಕೈಗೊಂಡಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಹಿರಿಯ ನಾಯಕರು, ಕಾರ್ಯಕರ್ತರು ಈ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಅವರು ಸೋಮವಾರ ಹುಬ್ಬಳ್ಳಿಯ ಸಾಯಿನಗರ ರಸ್ತೆಯಲ್ಲಿರುವ ಶ್ರೀ ಸಿದ್ದಪ್ಪಾಜಿ ಮೂಲ ಗದ್ದುಗೆ ಮಠದ ಆವರಣದಲ್ಲಿ ದೇವಸ್ಥಾನ ಸ್ವಚ್ಛಗೊಳಿಸಿ ತಮ್ಮ ಸೇವೆ ಸಲ್ಲಿದ್ದಾರೆ. ಬಿಜೆಪಿ ಹುಬ್ಬಳ್ಳಿ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಹಾನಗರ…

Read More

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಕೈಯಲ್ಲಿ ಲಾಂಗ್ ಹಿಡಿದು ನಡು ರಸ್ತೆಯಲ್ಲೇ ಮಹಿಳೆಗೆ ಅವಾಜ್ ಹಾಕಿ ಬೆದರಿಕೆ ಹಾಕಿದ ರೌಡಿಶೀಟರ್ ಮುತ್ತು ಮುರಳಿ ಅಲಿಯಾಸ್ ಮುರುಳಿಯನ್ನ ಪೊಲೀಸರು ಬಂಧಿಸಿದ್ದಾರೆ. ವರ್ತೂರು ಪೊಲೀಸರು ಆರ್ಮ್ ಆಕ್ಟ್ ಅಡಿಯಲ್ಲಿ ಬಂಧಿಸಲಾಗಿದೆ. ಮಹದೇವಪುರದ ಪಣತ್ತೂರು ದಿನ್ನೆಯಲ್ಲಿ‌ ರೌಡಿಶೀಟರ್ ಮುತ್ತುನ ಅಟ್ಟಹಾಸ ಮೆರೆದಿದ್ದು, ರೌಡಿ ಮುತ್ತು ಪ್ರತಿನಿತ್ಯ ಕುಡಿದು ಅಕ್ಕಪಕ್ಕದ ಮನೆಗಳಲ್ಲಿನ ಜನರಿಗೆ ಹಿಂಸೆ ನೀಡುತ್ತಿದ್ದ. ಮದ್ಯಾಹ್ನವೇ ಇಸ್ಪೀಟ್ ಮತ್ತು ಗಾಂಜಾ ಸೇವಿಸಿ ನೆರೆಹೊರೆ ಜನರಿಗೆ ಕಿರುಕುಳ ನೀಡುತ್ತಿದ್ದ. ಪ್ರಶ್ನಿಸಿದಕ್ಕೆ ಎದುರು ಮನೆ ಮಹಿಳೆಗೆ ಅವಾಜ್ ಹಾಕಿದ್ದಾನೆ. ಲಾಂಗ್ ಹಿಡಿದು ಮಹಿಳೆಗೆ ಅವಾಜ್ ಹಾಕುತ್ತಿರುವ ವಿಡೀಯೋ ವೈರಲ್ ಆಗಿದ್ದು, ವಿಡೀಯೋ ವೈರಲ್ ಆದ್ರೂ ಕಂಡು ಕಾಣದಂತೆ ವರ್ತೂರು ಪೊಲೀಸರು ವರ್ತಿಸುತ್ತಿದ್ದಾರೆ. ಅಲ್ಲದೇ ವರ್ತೂರು ಪೊಲೀಸರು ರೌಡಿಶೀಟರ್ ಮುತ್ತುಗೆ ಹೆದರುತ್ತಿದ್ದಾರಾ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ.

Read More

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನ ಬಿಜೆಪಿ ಮಾಜಿ ಸಚಿವ ಕೆ.ಸುಧಾಕರ್ ಅವರು ಭೇಟಿ ಮಾಡಿದರು. ಮಾಜಿ ಸಚಿವ ಸುಧಾಕರ್ ಅವರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು. ಬಿಡದಿ ತೋಟದ ಮನೆಯಲ್ಲಿ ಹೆಚ್‌ಡಿಕೆ ಭೇಟಿಯಾಗಿ ಮಾತುಕತೆ ನಡೆಸಿದ ಉಭಯ ನಾಯಕರು. ಪ್ರಸ್ತುತ ರಾಜಕೀಯ ವಿದ್ಯಾಮನಗಳ ಬಗ್ಗೆ ಚರ್ಚೆ ಹಾಗೆ ಲೋಕಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆಯೂ ಚರ್ಚೆ ನಡೆಸಿದರು.

Read More

ಮುಂಬೈ: ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿರುವ ಮಿಲಿಂದ್ ದಿಯೋರಾ ಅವರು ಶಿವಸೇನೆ (Shivasene) ಸೇರ್ಪಡೆಯಾಗಲಿದ್ದಾರೆ ಎಂಬ ಗುಮಾನಿ ಎದ್ದಿದೆ. ಈ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರು ಪಕ್ಷಕ್ಕೆ ಬಂದ್ರೆ ಸ್ವಾಗತಿಸುವುದಾಗಿ ಹೇಳಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ದಿಯೋರಾ ಅವರು ಕಾಂಗ್ರೆಸ್‌ (Congress) ತೊರೆದ ವಿಚಾರ ನನ್ನ ಗಮನಕ್ಕೆ ಬಂದಿದೆ. ಒಂದು ವೇಳೆ ಅವರು ಶಿವಸೇನೆಗೆ ಸೇರ್ಪಡೆಗೊಳ್ಳಲು ನಿರ್ಧರಿಸಿದರೆ ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದಿದ್ದಾರೆ. https://ainlivenews.com/we-will-not-go-because-bjp-is-doing-politics-in-the-name-of-ram-h-anjaneya/ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ದಕ್ಷಿಣ ಮುಂಬೈನ ಮಾಜಿ ಸಂಸದ ಮಿಲಿಂದ್ ದಿಯೋರಾ (Milind Deora) ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಕಾಂಗ್ರೆಸ್ ಮತ್ತು ಶಿವಸೇನೆ ಬಣದ ನಡುವಿನ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯ ವಿಚಾರದಿಂದ ಅಸಮಾಧಾನಗೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ವರದಿಯಾಗಿದೆ.  ದಿಯೋರಾ ಅವರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರುವ ಸಾಧ್ಯತೆ ಇದೆ ಎಂದು ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯಗಳಲ್ಲಿ ಊಹಾಪೋಹಗಳು ಹರಿದಾಡುತ್ತಿವೆ.…

Read More