ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿರ್ಲಕ್ಷ್ಯ ಹಾಗೂ ಅತಿ ವೇಗದ ಬಸ್ ಚಾಲನೆಗೆ ಫುಡ್ ಡೆಲಿವರಿ ಬಾಯ್ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಸವಾರಾಜು ಮೃತ ಫುಡ್ ಡೆಲಿವರಿ ಬಾಯ್. ತಡರಾತ್ರಿ 2 ಗಂಟೆ ವೇಳೆ ಸ್ಯಾಟಲೈಟ್ ಬಸ್ ನಿಲ್ದಾಣದ ಮುಂಭಾಗ ಈ ಅಪಘಾತ ಸಂಭವಿಸಿದೆ. ಫುಡ್ ಡೆಲಿವರಿ ಬಾಯ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. https://ainlivenews.com/the-benefits-of-consuming-cumin-seeds-are-not-one-or-two/ ಮೈಸೂರು ರೋಡ್ ಕಡೆಗೆ ರಾತ್ರಿ ಫುಡ್ ಡೆಲಿವರಿ ಮಾಡಲು ಬಸವರಾಜು ತೆರಳುತ್ತಿದ್ದ. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ಬಸವರಾಜು ಮೃತಪಟ್ಟಿದ್ದಾನೆ. ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಚಾಲಕನನ್ನ ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Author: AIN Author
ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ನಿಲ್ದಾಣ ಬಳಿ ಅಗ್ನಿ ಅವಘಡ ಸಂಭವಿಸಿದೆ. ರಾಜಾಜಿನಗರ ಮೆಟ್ರೋ ನಿಲ್ದಾಣ ಬಳಿ ನಿಂತಿದ್ದ 4 ಬೈಕ್ಗಳಿಗೆ ಬೆಂಕಿ ತಗುಲಿದ್ದು ಬೈಕ್ಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. https://ainlivenews.com/the-benefits-of-consuming-cumin-seeds-are-not-one-or-two/ ಇಂದು ಬೆಳಗಿನ ಜಾವ ರಾಜಾಜಿನಗರ ಮೆಟ್ರೋ ನಿಲ್ದಾಣದ ಬಳಿ ನಿಂತಿದ್ದ ಬೈಕ್ಗಳಿಗೆ ಏಕಾಏಕಿ ಬೆಂಕಿ ತಗುಲಿದೆ. ಈ ಪರಿಣಾಮ ಬೈಕ್ಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದ್ವಿಚಕ್ರ ವಾಹನಗಳು ಸುಟ್ಟು ಹೋದ ಕಾರಣ ಸವಾರರು ಕಂಗಾಲಾಗಿದ್ದಾರೆ.
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ಏಕವಚನದಲ್ಲಿ ಮಾತನಾಡಿದ ಸಂಸದ ಅನಂತ್‍ಕುಮಾರ್ ಹೆಗಡೆಯವರ ( AnanthKumar Hegade) ಹೇಳಿಕೆ ವೈಯಕ್ತಿಕವಾಗಿ ಬೇಸರ ತರಿಸಿದೆ ಎಂದು ಮಾಜಿ ಸಚಿವ ವಿ.ಸೋಮಣ್ಣ (V.Somanna) ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಅನಂತ್‍ಕುಮಾರ್ ಹೆಗಡೆಯವರ ಹೇಳಿಕೆಯನ್ನು ಗಮನಿಸಿದ್ದೇನೆ. ಅವರು ಪಕ್ಷದ ಹಿರಿಯ ನಾಯಕರು. ಅವರಿಗೆ ನಿಷ್ಕಲ್ಮಶ ಭಾವನೆ ಇದೆ. ಏನು ಬಾಯಿಗೆ ಬರುತ್ತೋ ಅದನ್ನು ಅವರು ನನ್ನ ಹಾಗೆ ಮಾತಾಡಿ ಬಿಡ್ತಾರೆ. ಹಿಂದೆ ಮುಂದೆ ನೋಡೋದೇ ಇಲ್ಲ. ಸಿದ್ದರಾಮಯ್ಯ ಕೇವಲ ಸಿದ್ದರಾಮಯ್ಯ ಅಲ್ಲ, ಈ ರಾಜ್ಯದ ಸಿಎಂ. ಸಿದ್ದರಾಮಯ್ಯ (Siddaramaiah) ಏನೋ ಮಾತಾಡ್ತಾರೆ ಎಂದು ನಾವ್ಯಾಕೆ ಚಿಕ್ಕವರಾಗಬೇಕು? ನಾವು ಚಿಕ್ಕವರಾಗೋದು ಬೇಡ ಎಂದಿದ್ದಾರೆ.
ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ನಿರ್ಮಾಣದಿಂದ 74% ಮುಸ್ಲಿಮರು ಸಂತಸಗೊಂಡಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಭಾರತದ ಅತ್ಯಂತ ಯಶಸ್ವಿ ಪ್ರಧಾನಿ ಎಂದು ಅವರೆಲ್ಲ ನಂಬಿದ್ದಾರೆ ಎಂದು ರಾಷ್ಟ್ರೀಯವಾದಿ ಮುಸ್ಲಿಂ ಸಂಘಟನೆ `ಮುಸ್ಲಿಂ ರಾಷ್ಟ್ರೀಯ ಮಂಚ್’ (Muslim Rashtriya Manch) ಹೇಳಿಕೊಂಡಿದೆ. ಗುಜರಾತ್‍ನ ಸ್ವತಂತ್ರ ಸಂಶೋಧನಾ ಮತ್ತು ಸಮೀಕ್ಷಾ ಸಂಸ್ಥೆ `ಆಯುರ್ವೇದ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್’ ಮೂಲಕ ದೇಶದ ಮುಸ್ಲಿಮರ ಸಮೀಕ್ಷೆ ನಡೆಸಿ ಈ ಬಗ್ಗೆ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಯಲ್ಲಿ ಎಂಆರ್‍ಎಂ ತಿಳಿಸಿದೆ. ಸಮೀಕ್ಷಾ ವರದಿಯಲ್ಲಿ, ಭಗವಾನ್ ರಾಮನು ಜನಮನದಲ್ಲಿ ನೆಲೆಸಿದ್ದಾನೆ. ಮೋದಿ ಭಾರತದ ಅತ್ಯಂತ ಯಶಸ್ವಿ ಪ್ರಧಾನಿಯಾಗಿದ್ದು ಅವರ ಮಾತುಗಳನ್ನು ಭಾರತ ಮಾತ್ರವಲ್ಲದೆ ಇಡೀ ಜಗತ್ತು ಕೇಳುತ್ತದೆ ಮತ್ತು ಸ್ವೀಕರಿಸುತ್ತದೆ. ಅಲ್ಲದೇ ಅಸಂಖ್ಯಾತ ಮುಸ್ಲಿಮರು ಇಸ್ಲಾಮ್ ಹೆಸರಿನಲ್ಲಿ ತಮ್ಮ ರಾಜಕೀಯ ಹಿತಾಸಕ್ತಿಗೆ ಪ್ರಯತ್ನಿಸುತ್ತಿರುವ ಉಲೇಮಾಗಳು, ಮೌಲಾನಾಗಳು ಮತ್ತು ವಿರೋಧ ಪಕ್ಷದ ನಾಯಕರನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕೆಂದು ಬಯಸುತ್ತಾರೆ…
ಗೌರಿಪುತ್ರ ಖ್ಯಾತಿಯ ಮಂಜು ಮಸ್ಕಲ್ ಮಟ್ಟಿ ಅವರ ನಿರ್ದೇಶನದ ಚಿತ್ರ ವರಾಹಚಕ್ರಂ. ಬೆಂಗಳೂರಿನಲ್ಲಿ ನಡೆಯುತ್ತಿರುವ ಅವ್ಯವಸ್ಥಿತ ಪದ್ದತಿಗಳು, ಸಂಸ್ಕ್ರತಿಯ ಕಗ್ಗೊಲೆ, ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕಥಾಹಂದರ ಒಳಗೊಂಡ ವರಾಹಚಕ್ರಂ ಚಿತ್ರದಲ್ಲಿ ಹಿರಿಯನಟಿ ಪ್ರೇಮಾ (Prema), ಸಾಯಿಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮನ್ವಂತರಿ ಮೂವಿ ಮೇಕರ್ಸ್ ಅಡಿಯಲ್ಲಿ ಸ್ನೇಹಿತರೆಲ್ಲ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಲಾವಣ್ಯ ಗ್ರೂಪ್, ನಾಗಭೂಷಣ್ ಎಂ.ರಾವ್, ಮಂಜುನಾಥ್ ಸಿ.ಗೌಡ್ರು, ಕೆ.ಎಸ್.ಜೈ ಸುರೇಶ್ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ವಿಶೇಷವಾಗಿ ನಾಯಕಿ ಪ್ರೇಮಾ ಅವರು ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ದೇಶಭಕ್ತಿ ಗೀತೆಯೊಂದನ್ನು ಹಾಡಿದ್ದಾರೆ. ವಾರಣಾಸಿಯಲ್ಲಿ ಚಿತ್ರೀಕರಿಸಲಾಗಿರುವ ಈ ಹಾಡಿನ ಬಿಡುಗಡೆ ಕಾರ್ಯಕ್ರಮ ಜನವರಿ 26ರ ಗಣರಾಜ್ಯೋತ್ಸವದಂದು ನಡೆಯಲಿದೆ. ಶೂಟಿಂಗ್ ಟೈಮ್ ನಲ್ಲಿ ಸೆಟ್ ನಲ್ಲಿ ಪ್ರೇಮ ಅವರು ಹಾಡುತ್ತಿರುವಾಗ ಅದನ್ನು ಕೇಳಿದ ನಿರ್ದೇಶಕರು ಈ ಹಾಡನ್ನು ನೀವೆ ಹಾಡಿ ಎಂದು ಕೇಳಿದಾಗ ಅವರೂ ಒಪ್ಪಿ ಪ್ರೀತಿಯಿಂದ ಹಾಡಿಗೆ ದನಿಯಾಗಿದ್ದಾರೆ. ನಾಯಕಿ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿರುವ ಪ್ರೇಮ ಅವರು…
ಬೆಂಗಳೂರು: ನಾವು ಕೂಡಾ ಸೋಮಣ್ಣಗೆ ಸಂಪೂರ್ಣ ಬೆಂಬಲಿಸ್ತೇವೆ. ಅವರು ಹೈಕಮಾಂಡ್ ಎದುರು ಏನು ಅಪೇಕ್ಷೆ ಇಟ್ಟಿದ್ದಾರೋ ಅದರ ಬಗ್ಗೆಯೂ ಹೈಕಮಾಂಡ್ ಜೊತೆ ಚರ್ಚೆ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು. ಬೆಂಗಳೂರಿನಲ್ಲಿ ಗೋಡೆ ಬರಹ ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಚಾಲನೆ ಕೊಟ್ಟರು. ಬಳಿಕ ಸಂಸದರ ವಿವಾದಾತ್ಮಕ ಹೇಳಿಕೆಗಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊದಲೇ ರಾಜಕಾರಣಿಗಳು ಅಂದ್ರೆ ಜನ ನಂಬಲ್ಲ, ಅಂಥ ಪರಿಸ್ಥಿತಿ ಇದೆ. ಯಾರೇ ಇದ್ದರೂ ನಮ್ಮ ಹೇಳಿಕೆ ಗಂಭೀರವಾಗಿರಬೇಕು. ಸಮಾಜ ಒಪ್ಪುವಂತೆ ಮಾತು ಇರಬೇಕು. ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗಳನ್ನು ನಾನೂ ಗಮನಿಸಿದ್ದೇನೆ ಎಂದರು. ನಾನು ಅವರ ಜೊತೆಗೂ ಇದರ ಬಗ್ಗೆ ಮಾತಾಡುತ್ತೇನೆ. https://ainlivenews.com/killing-a-child-by-drinking-nail-polish-remover-woman-arrested/ ಅನಂತ್ ಕುಮಾರ್ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ. ಅವರು ಹೇಳಿರೋದೆಲ್ಲ ಅವರ ವೈಯಕ್ತಿಕ ಅಭಿಪ್ರಾಯಗಳು. ಇದರ ಬಗ್ಗೆ ಅವರ ಜೊತೆ ವೈಯಕ್ತಿಕವಾಗಿ ಮಾತಾಡುತ್ತೇನೆ. ನಾವು ಕೂಡಾ ಸೋಮಣ್ಣಗೆ ಸಂಪೂರ್ಣ ಬೆಂಬಲಿಸ್ತೇವೆ. ಅವರು ಹೈಕಮಾಂಡ್ ಎದುರು ಏನು ಅಪೇಕ್ಷೆ ಇಟ್ಟಿದ್ದಾರೋ ಅದರ ಬಗ್ಗೆಯೂ ಹೈಕಮಾಂಡ್…
ಮೊಬೈಲ್ ಸಾಧನಗಳ ಮೂಲಕ ತಕ್ಷಣವೇ ಹಣವನ್ನು ವರ್ಗಾವಣೆ ಮಾಡುವಲ್ಲಿ ಏಕೀಕೃತ ಪಾವತಿಗಳ ಇಂಟರ್‌ಫೇಸ್ (UPI) ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಾವತಿ ವಿಧಾನವಾಗಿದೆ. ಇಲ್ಲಿಯವರೆಗೆ ಎಟಿಎಂ ಕಾರ್ಡ್‌ಗಳನ್ನು ಬಳಸಿ ಎಟಿಎಂನಿಂದ (ATM) ಹಣವನ್ನು ಪಡೆಯಬಹುದಿತ್ತು. ಇನ್ನು ಮುಂದೆ ಹಣ ವಿತ್‌ಡ್ರಾ ಮಾಡಲು ಡೆಬಿಟ್ ಕಾರ್ಡ್ ಅಗತ್ಯವಿರುವುದಿಲ್ಲ. ಕೇವಲ ಯುಪಿಐ ಬಳಸಿ ಎಟಿಎಂನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರಾಯ್ತು. ತಕ್ಷಣವೇ ಕ್ಯಾಶ್ ನಿಮ್ಮ ಕೈ ಸೇರುತ್ತದೆ. ಮಂಗಳವಾರ ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್‌ಟೆಕ್ (FinTech) ಫೆಸ್ಟ್‌ನಲ್ಲಿ ಈ ಕಾರ್ಡ್ ಬಳಕೆ ಮಾಡದೆ ಹಣವನ್ನು ತೆಗೆದುಕೊಳ್ಳುವ ‘ಯುಪಿಐ ಎಟಿಎಂ’ (UPI ATM) ಅನ್ನು ಮೊದಲ ಬಾರಿಗೆ ಪ್ರದರ್ಶಿಸಲಾಗಿದೆ. ಭಾರತದ ಮೊದಲ ಯುಪಿಐ ಎಟಿಎಂ ಇದಾಗಿದ್ದು, ಜನರು ಪ್ರತಿ ಬಾರಿ ಎಟಿಎಂ ಹೋದಾಗ ಕಾರ್ಡ್ ಅನ್ನು ಎತ್ತಿಕೊಂಡು ಹೋಗುವ ಅಗತ್ಯವನ್ನು ಕಡಿಮೆ ಮಾಡುತ್ತದೆ. ನೆಟ್ಟಿಗರು ಈ ಹೊಸ ಫೀಚರ್ ಅನ್ನು ‘ಗೇಮ್ ಚೇಂಜರ್’ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಎಟಿಎಂ ಪರದೆ ಮೇಲೆ ತೋರಿಸುವ ಯುಪಿಐ ಕಾರ್ಡ್‌ಲೆಸ್…
ಚಳಿಗಾಲದಲ್ಲಿ ಬೆಚ್ಚಗಿರುವ ಆಹಾರ ಸೇವಿಸಿದರೆ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಅದರಲ್ಲೂ ಹೆಚ್ಚಿನ ಪ್ರಮಾಣದ ವಿಟಮಿನ್, ಪ್ರೋಟಿನ್ ಹೊಂದಿರುವ ಆಹಾರ, ತರಕಾರಿ ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆರೋಗ್ಯಕರ ಕ್ಯಾರೆಟ್ ಬಾದಾಮ್ ಮಿಲ್ಕ್ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ ಬೇಕಾಗುವ ಸಾಮಗ್ರಿಗಳು: ಖರ್ಜೂರ – 8ರಿಂದ 10 ಬಾದಾಮಿ – 10ರಿಂದ 12 ಕ್ಯಾರೆಟ್ -2 ಹಾಲು – ಅರ್ಧ ಲೀಟರ್ ಏಲಕ್ಕಿ – 4 ಬೆಲ್ಲದ ಪೌಡರ್ – 2 ಚಮಚ ಮಾಡುವ ವಿಧಾನ: * ಮೊದಲಿಗೆ ಬಾದಾಮಿ ಹಾಗೂ ಖರ್ಜೂರವನ್ನು ಒಂದು ಬೌಲ್‌ನಲ್ಲಿ ಹಾಕಿ ಅದಕ್ಕೆ ನೀರನ್ನು ಹಾಕಿ 30 ನಿಮಿಷಗಳ ಕಾಲ ನೆನೆಸಿಡಿ. * ಬಳಿಕ ಸಿಪ್ಪೆ ತೆಗೆದ ಬಾದಾಮಿಯನ್ನು ಒಂದು ಮಿಕ್ಸಿ ಜಾರಿನಲ್ಲಿ ಹಾಕಿಕೊಳ್ಳಿ. ಬಳಿಕ ಅದಕ್ಕೆ ಹೆಚ್ಚಿದ ಕ್ಯಾರೆಟ್ ಅನ್ನು ಸೇರಿಸಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ. * ನಂತರ ಅದಕ್ಕೆ ಖರ್ಜೂರ ಹಾಗೂ ಅದರ ನೀರನ್ನು ಸೇರಿಸಿಕೊಂಡು…
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amitshah) ಅವರ ಹಿರಿಯ ಸಹೋದರಿ ರಾಜೇಶ್ವರಿಬೆನ್ ಶಾ (Rajeshwariben Shah) ನಿಧನರಾಗಿದ್ದಾರೆ. ರಾಜೇಶ್ವರಿಬೆನ್ ಅವರಿಗೆ ಸುಮಾರು 60 ವರ್ಷ ವಯಸ್ಸಾಗಿತ್ತು. ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಸಹೋದರಿಯ ನಿಧನದ ಹಿನ್ನೆಲೆಯಲ್ಲಿ ಹೇಗ ಸಚಿವರು ಇಂದು ಗುಜರಾತ್‌ನಲ್ಲಿ (Gujrat) ನಡೆಯಬೇಕಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಕೆಲ ದಿನಗಳಿಂದ ರಾಜೇಶ್ವರಿಬೆನ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಅವರು ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. https://ainlivenews.com/killing-a-child-by-drinking-nail-polish-remover-woman-arrested/ ಆದರೆ ಅವರು ಕೊನೆಯುಸಿರೆಳೆದರು ಎಂದು ಬಿಜೆಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸಹೋದರಿಯ ರಾಜೇಶ್ವರಿಬೆನ್ ಪಾರ್ಥಿವ ಶರೀರವನ್ನು ಅಹಮದಾಬಾದ್‌ನಲ್ಲಿರುವ ಅವರ ನಿವಾಸಕ್ಕೆ ತರಲಾಗಿತ್ತು. ನಂತರ ಥಾಲ್ತೇಜ್ ಚಿತಾಗಾರದಲ್ಲಿ ಅವರ ಅಂತಿಮ ಸಂಸ್ಕಾರ ನಡೆದಿದೆ.
ತಲೆಗೂದಲು ತುಂಬಾ ನಯವಾಗಿರಬೇಕು ಅನ್ನೋದು ಎಲ್ಲಾ ಹುಡುಗಿಯರ ಆಸೆಯಾಗಿರುತ್ತೆ. ಹೀರೋಯಿನ್ಗಳ ಸಾಫ್ಟ್&ಸ್ಲೀಕ್ ಕೂದಲು ನೋಡಿದಾಗ ಅಯ್ಯೋ ಅಂಥ ಕೂದಲು ನಮಗಿಲ್ವಲ್ಲಾ ಅಂತಾನೂ ಅನ್ನಿಸುತ್ತೆ. ಅದಕ್ಕೆಲ್ಲಾ ಹಣ ಖರ್ಚು ಮಾಡ್ಬೇಕು ಅಂತ ವರಿ ಮಾಡ್ಬೇಡಿ. ಮನೆಯಲ್ಲೇ ಸುಲಭವಾಗಿ ಸಿಗೋ ಕೆಲವು ಸಾಮಗ್ರಿಗಳಿಂದ ಸಾಫ್ಟ್ ಕೂದಲು ನಿಮ್ಮದಾಗಿಸಿಕೊಳ್ಳಬಹುದು. ಇದಕ್ಕೆ ಸ್ವಲ್ಪ ಸಮಯ ಮೀಸಲಿಡಬೇಕು ಅಷ್ಟೇ. ಆ ಟಿಪ್ಸ್ ಇಲ್ಲಿದೆ ನೋಡಿ ಗುಲಾಬಿ ದಳ- ಕೊಬ್ಬರಿ ಎಣ್ಣೆ ಗುಲಾಬಿಯನ್ನ ಅಲಂಕಾರಕ್ಕೆ, ಮುಡಿದುಕೊಳ್ಳೋಕೆ ಬಳಸೋ ಜೊತೆಗೆ ಅದರಿಂದ ನಿಮ್ಮ ಕೂದಲ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಇದಕ್ಕೆ ನೀವು ಕಷ್ಟನೂ ಪಡಬೇಕಿಲ್ಲ. ತಲೆಗೆ ಎಣ್ಣೆ ಹಚ್ಚುವಾಗೆಲ್ಲಾ ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು. ಕೊಬ್ಬರಿ ಎಣ್ಣೆಯನ್ನ ಸ್ವಲ್ಪ ಬಿಸಿ ಮಾಡಿ(ಸ್ವಲ್ಪ ಬಿಸಿಯಾದ್ರೆ ಸಾಕು, ಹೊಗೆ ಬರುವಂತೆ ಕಾಯಿಸಬಾರದು) ಅದಕ್ಕೆ ಗುಲಾಬಿ ದಳಗಳನ್ನ ಹಾಕಿ. ಹೀಗೆ ಮಾಡಿದಾಗ ನೊರೆ ಬರುತ್ತದೆ. ಎಣ್ಣೆ ತಣ್ಣಗಾದ ನಂತರ ಗುಲಾಬಿ ದಳಗಳನ್ನ ಕಿವುಚಿ ತೆಗೆಯಿರಿ. ನಂತರ ಎಣ್ಣೆಯನ್ನ ತಲೆಗೆ ಸಂಪೂರ್ಣವಾಗಿ ಹಚ್ಚಿ ಮಸಾಜ್ ಮಾಡಿ. 3…