Author: AIN Author

ಉಡುಪಿ:- ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಸಲಹೆ ನೀಡಿದ್ದಾರೆ. ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕೈಗೊಂಡಿರುವ ಕಾಮಗಾರಿಗಳ ಕುರಿತು ವಿಳಂಬ ಧೋರಣೆಯನ್ನು ತಾಳದೆ, ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ತಪ್ಪಿದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದ್ದಾರೆ. ಬೈಂದೂರು ತಾಲೂಕಿನ ಮರವಂತೆಯಲ್ಲಿ ಹೊರ ಬಂದರು, ಗಂಗೊಳ್ಳಿ ಮೀನುಗಾರಿಕೆ ಬಂದರಿನ ಮರು ನಿರ್ಮಾಣ ಹಾಗೂ ಗಂಗೊಳ್ಳಿ ಮೀನುಗಾರಿಕಾ ಬಂದರು ಹಾಗೂ ಕೋಡಿ ಜೆಟ್ಟಿಯ ನ್ಯಾವಿಗೇಷನ್ ಚಾನೆಲ್‌ನಲ್ಲಿ ಹೂಳೆತ್ತುವ ಕಾಮಗಾರಿಗಳನ್ನು ತಾಂತ್ರಿಕ ಸಮಸ್ಯೆಗಳಿಂದಾಗಿ ಕೈಗೊಳ್ಳದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಬಂದರು ಇಲಾಖೆ ಹಾಗೂ ಸಿಆರ್ ಝ್ ನವರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಕಾಮಗಾರಿಗಳನ್ನು ತ್ವರಿತವಾಗಿ…

Read More

6 ಬಾರಿ ಏಕದಿನ ವಿಶ್ವಕಪ್​ ಗೆದ್ದು ಬೀಗುತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಇದೀಗ ಸಂಕಷ್ಟ ಒಂದು ಎದುರಾಗಿದ್ದು, ತಂಡದ ಪ್ರಮುಖ ಆಟಗಾರನ ವಿರುದ್ಧ FIR ದಾಖಲಾಗಿದೆ. ಆಸ್ಟ್ರೇಲಿಯಾ ತಂಡದ ಆಟಗಾರ ಮಿಚೆಲ್​ ಮಾರ್ಷ್​ ವಿಶ್ವಕಪ್​ ಟ್ರೋಫಿಯ ಮೇಲೆ ಕಾಲನ್ನು ಇರಿಸಿ ಫೋಟೋವನ್ನು ತೆಗೆಸಿಕೊಂಡಿದ್ದರು. ಈ ಫೋಟೋವನ್ನು ಸ್ವತಃ ಆಸ್ಟ್ರೇಲಿಯಾ ತಂಡದ ಆಟಗಾರ ಪ್ಯಾಟ್​ ಕಮ್ಮಿನ್ಸ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ದೊಡ್ಡ ಪ್ರಶಸ್ತಿಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಕ್ರೀಡಾಭಿಮಾನಿಗಳು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ವಿಶ್ವಕಪ್​ಗೆ ಅಗೌರವ ತೋರಿದ್ಧಾರೆ ಎಂದು ಆರೋಪಿಸಿ ಆಸೀಸ್​ ಆಟಗಾರ ಮಿಚೆಲ್​ ಮಾರ್ಷ್​ ವಿರುದ್ಧ ಉತ್ತರಪ್ರದೇಶದ ಆಲಿಘರ್​ನಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ. ಆರ್​ಟಿಐ ಕಾರ್ಯಕರ್ತ ಪಂಡಿತ್​ ಕೇಶವ್​ ಮಿಚೆಲ್​ ಮಾರ್ಷ್​ ವಿರುದ್ಧ ದೂರು ದಾಖಲಿಸಿದ್ದು, ವಿಶ್ವಕಪ್​ ಟ್ರೋಫಿಯ ಮೇಲೆ ಕಾಲಿಡುವ ಮೂಲಕ ಕ್ರೀಡಾಭಿಮಾನಿಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

Read More

ಬೆಂಗಳೂರು:- ಸಿದ್ದರಾಮಯ್ಯರೇ ಕಾಂತರಾಜು ವರದಿಯನ್ನು ಸ್ವೀಕರಿಸಲಿ ಎಂದು ಮಾಜಿ ಸಿಎಯ ಯ ಎಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,2018ರಲ್ಲಿ ಕಾಂತರಾಜು ವರದಿ ಸ್ವೀಕಾರ ಮಾಡಲು ಕುಮಾರಸ್ವಾಮಿ ಒಪ್ಪಿಲ್ಲ ಎಂದು ನೀವು ಆರೋಪ, ಆಪಾದನೆ ಮಾಡುತ್ತಿದ್ದೀರಿ. ಈಗ ನಿಮ್ಮ ಸರಕಾರ ಬಂದು 6 ತಿಂಗಳಾಗಿದೆ. ನೀವು ಯಾಕೆ ವರದಿ ಸ್ವೀಕಾರ ಮಾಡಿಲ್ಲ? ಎಂದು ಸಿದ್ದರಾಮಯ್ಯ ಅವರನ್ನೇ ಪ್ರಶ್ನಿಸಿದರು. ಜನರಿಗೆ ಒಳ್ಳೆಯದು ಮಾಡಬೇಕು ಎನ್ನುವುದಕ್ಕಿಂತ ತಮ್ಮ ಶಕ್ತಿ ಹೆಚ್ಚಿಸಿಕೊಳ್ಳಬೇಕು, ಸಮಾಜದಲ್ಲಿ ಸಂಘರ್ಷ ಸೃಷ್ಟಿ ಮಾಡಲು ವೇದಿಕೆ ಮಾಡಲು ಹೊರಟಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಹಾದಿ ಬೀದಿಯಲ್ಲಿ ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಗುರುವಾರದ ಕ್ಯಾಬಿನೆಟ್​ನಲ್ಲಿ ಮಾಡಿದ ತೀರ್ಮಾನಕ್ಕೆ ಇದೇ ಅರ್ಥವೇ ಎಂದು ಸಿದ್ದರಾಮಯ್ಯರನ್ನು ಕುಮಾರಸ್ವಾಮಿ ಪ್ರಶ್ನಿಸಿದರು. ಕಾಂತರಾಜು ವರದಿಯ ಮೂಲ ಪ್ರತಿ ಕಳ್ಳತನವಾಗಿರುವುದು ಗೊತ್ತಿಲ್ಲ ಎಂದು ಗೃಹ ಸಚಿವರು ಹೇಳುತ್ತಿದ್ದಾರೆ. ಅವರಲ್ಲೇ ದ್ವಂದ್ವವಿದೆ. ಜಾತಿಗಣತಿಯನ್ನು ಮನೆಗಳಿಗೆ ಹೋಗಿ ಮಾಡಿಲ್ಲ, ವಿದ್ಯಾರ್ಥಿಗಳಿಂದ ಮಾಡಿಸಿದ್ದಾರೆ ಎಂಬ ಆರೋಪವಿದೆ. ಕಾಂತರಾಜು ವರದಿ…

Read More

ಬೆಂಗಳೂರು :- ಸಿಬಿಐ ತನಿಖೆಯಿಂದ ಪಾರಾಗಲು ಶಿವಕುಮಾರ್ ಹೂಡಿರುವ ತಂತ್ರ ಸುಲಭಕ್ಕೆ ಫಲ ಕೊಡುವ ಲಕ್ಷಣಗಳು ಕಾಣುತ್ತಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿಯನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ. ಕೋರ್ಟ್​ನಲ್ಲಿ ಈ ಬಗ್ಗೆ ಕಾನೂನು ಹೋರಾಟಕ್ಕೆ ಸಿದ್ಧತೆಗಳು ಆರಂಭವಾಗಿವೆ. ಹಾಗಾದರೆ ಸಿಬಿಐ ಮುಂದಿನ ದಾರಿ ಏನು? ಶಿವಕುಮಾರ್ ಮುಂದಿರುವ ಹಾದಿ ಏನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಏನಾದರೂ ಸರಿ ಸಿಬಿಐ ತನಿಖೆಯಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಬಚಾವು ಮಾಡಲೇಬೇಕು ಎಂದು ರಾಜ್ಯ ಸರ್ಕಾರ ತೀರ್ಮಾನಿಸಿದಂತಿದೆ. ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆಗೆ ರಾಜ್ಯ ಸರ್ಕಾರದ ನೀಡಿದ ಸಮ್ಮತಿ ಹಿಂಪಡೆಯಲು ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಬಗ್ಗೆ ನಿರ್ಧಾರ ಕೈಗೊಂಡಿದೆ. ಸರ್ಕಾರ ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದು ಈ ನಿರ್ಧಾರ ಕೈಗೊಂಡಿದ್ದರೂ, ಸರ್ಕಾರ ಹಾಗೂ ಡಿಕೆ ಶಿವಕುಮಾರ್ ಮುಂದಿನ ಹಾದಿ ಸುಲಭವಾಗೇನೂ ಇಲ್ಲ. 2020 ರಲ್ಲೇ ಸಿಬಿಐ…

Read More

ಬೆಂಗಳೂರು:- ನಗರದ ಹೈಕೋರ್ಟ್ ಪೀಠವು ಮಹತ್ವದ ತೀರ್ಪು ನೀಡಿದ್ದು, ಮೃತ ಸರ್ಕಾರಿ ನೌಕರನ 2ನೇ ಪತ್ನಿಗೆ ಕುಟುಂಬ ಪಿಂಚಣಿ‌ ಅಧಿಕಾರವಿಲ್ಲ ಎಂದು ಹೇಳಿದೆ. ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಹಾಗೂ ನ್ಯಾ.ಕೃಷ್ಣ ಎಸ್ ದೀಕ್ಷಿತ್‌ರಿದ್ದ ಪೀಠ ಆದೇಶಿಸಿದೆ. ಮೊದಲ ಪತ್ನಿಗೆ ಮಾತ್ರ ಮೃತ ಪತಿಯ ಕುಟುಂಬ ಪಿಂಚಣಿ ಅಧಿಕಾರವಿದೆ. ಪತ್ನಿ ಬದುಕಿದ್ದಾಗ 2ನೇ ವಿವಾಹಕ್ಕೆ ಮಾನ್ಯತೆಯಿಲ್ಲ. ಹೀಗಾಗಿ ಪಿಂಚಣಿಯ ಹಕ್ಕನ್ನು 2ನೇ ಪತ್ನಿ ಕೇಳುವಂತಿಲ್ಲ ಎಂದು ಹೇಳಿದೆ. ಇನ್ನೂ ಈ ಪಿಂಚಣಿ ಎಂಬುದು ಸಾಮಾನ್ಯವಾಗಿ, ಜನರು ಉದ್ಯೋಗದಿಂದ ಕ್ರಮಬದ್ಧ ವರಮಾನವನ್ನು ಗಳಿಸದಿರುವಂಥ ಕಾಲದಲ್ಲಿ ಅವರಿಗೆ ವರಮಾನವನ್ನು ಒದಗಿಸುವಂತಹ ಒಂದು ವ್ಯವಸ್ಥೆಯಾಗಿದೆ.

Read More

ಬೆಂಗಳೂರು :- ರಾಜಕಾರಣಿಗಳು, ಸಿನಿಮಾ ನಟರು ಮತ್ತು ಕಂಬಳ ಅಭಿಮಾನಿಗಳು, ಕುತೂಹಲಿಗಳು ಸೇರಿ ಎರಡು ದಿನದಲ್ಲಿ ಆರರಿಂದ ಏಳು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇಷ್ಟು ಜನರಿಗೆ ಅನುಕೂಲವಾಗುವಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳಕ್ಕೆ ಬರುವವರಿಗಾಗಿ ಸಂಚಾರಿ ಪೊಲೀಸರು ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ. ಪ್ರವೇಶ ಮತ್ತು ವಾಹನ ನಿಲುಗಡೆ ಸ್ಥಳಗಳು ಸಿಬಿಡಿ ಏರಿಯಾದಿಂದ ಬರುವ ವಾಹನಗಳಿಗೆ ಮೇಖ್ರಿ ಸರ್ಕಲ್ ಬಳಿಯ ಗೇಟ್ ನಂ 1(ಕೃಷ್ಣ ವಿಹಾರ್) ನಲ್ಲಿ ಪ್ರವೇಶದ ಪಾರ್ಕಿಂಗ್. ಹೆಬ್ಬಾಳ ಕಡೆಯಿಂದ ಬರುವ ವಾಹನಗಳಿಗೆ ಮೇಖ್ರಿ ಸರ್ಕಲ್ ಅಂಡರ್ ಪಾಸ್ ಮೂಲಕ ಗೇಟ್ ನಂ.1ರಿಂದ ಪ್ರವೇಶ. ಯಶವಂತಪುರ ಕಡೆ ಬರುವ ವಾಹನಗಳು ಮೇಖ್ರಿ ಸರ್ಕಲ್ ಬಳಿ ಬಲ ತಿರುವು ಗೇಟ್ ನಂಬರ್ 1ರಲ್ಲಿ ಪ್ರವೇಶ. ಕ್ಯಾಬ್‌ನಲ್ಲಿ ಬರುವವರು ಗೇಟ್ ನಂಬರ್ 2ರ ಮೂಲಕ ಪ್ರವೇಶ. ಗೇಟ್ ನಂಬರ್ 3ರ ಮೂಲಕ ಕ್ಯಾಬ್‌ಗಳಿಗೆ ಎಕ್ಸಿಟ್‌ಗೆ ಸೂಚನೆ ನೀಡಲಾಗಿದೆ. ಇತರೆ ವಾಹನಗಳು ವಾಪಸ್ ಹೋಗುವಾಗ ಜಯಮಹಲ್ ರಸ್ತೆಯ…

Read More

ಬೆಂಗಳೂರು:- ರೈತರಿಗೆ ನೆರವಿನ ಜತೆಗೆ ಆತ್ಮವಿಶ್ವಾಸ ತುಂಬುವುದು ಅವಶ್ಯಕ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೃಷಿಯನ್ನು ಲಾಭದಾಯಕವಾಗಿ ಪರಿವರ್ತಿಸಿ, ರೈತರನ್ನು ಸಬಲೀಕರಣ ಗೊಳಿಸಲು ಎಲ್ಲ ತಾಂತ್ರಿಕ, ವೈಜ್ಞಾನಿಕ ನೆರವನ್ನು ಪರಿಣಾಮಕಾರಿಯಾಗಿ ವರ್ಗಾವಣೆ ಮಾಡುವಂತೆ ಸೂಚನೆ ನೀಡಿದರು. ಕೃಷಿ, ಜಲಾನಯನ ಇಲಾಖೆಗಳು, ವಿಶ್ವವಿದ್ಯಾನಿಲಗಳ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ರೈತರಿಗೆ ವಿವಿಧ ಯೋಜನೆಗಳ ನೆರವಿನ ಜತೆಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು. ವಿಶ್ವ ವಿದ್ಯಾನಿಲಯಗಳು ರೈತರಿಗೆ ಆಪ್ತವಾಗಬೇಕು, ಕೃಷಿ ವಿಜ್ಞಾನಿಗಳನ್ನು ತಯಾರು ಮಾಡುವುದರ ಜತೆಯಲ್ಲಿ ಯಶಸ್ವಿ ಸಂಶೋಧನೆಗಳ ಫಲವನ್ನು ಸಕಾಲದಲ್ಲಿ ರೈತರಿಗೆ ತಲುಪಿಸಬೇಕು ಎಂದರು. ರೈತರಿಗೆ ಸಕಾಲದಲ್ಲಿ ಬೆಳೆ ವಿಮೆ ಹಣ ಒದಗಿಸಬೇಕು .ಇದಕ್ಕೆ ಇಲಾಖಾ ಅಧಿಕಾರಿಗಳು ವಿಮಾ ಕಂಪನಿಗಳ ಜತೆ ಸಮನ್ವಯ ಮಾಡಿ ಕೃಷಿಕರಿಗೆ ನೆರವಾಗಿ ಎಂದರು. ಬೆಳೆ ಸಮೀಕ್ಷೆ ಶೇ.100 ರಷ್ಟು ಪೂರ್ಣ ಆಗಬೇಕು, ಬೆಳೆ ಹಾನಿ ವರದಿ ವೇಳೆ ಅಧಿಕಾರಿ, ಸಿಬ್ಬಂದಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸೂಚನೆ…

Read More

ಆನೇಕಲ್:- ದೇಶಕ್ಕಾಗಿ ಪ್ರಾಣತೆತ್ತ ಯೋದನ ವಿಚಾರದಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ ತೋರಿದೆ. ಇದುವರೆಗೂ ಅಂತಿಮ ವಿಧಿ ವಿಧಾನದ ಕಾರ್ಯದ ಬಗ್ಗೆ ಜಿಲ್ಲಾಡಳಿತ ಮಾಹಿತಿ ಪಡೆದಿಲ್ಲ ಬೆಂಗಳೂರು ನಗರ ಜಿಲ್ಲಾಧಿಕಾರಿಗಳೇ ಇದೆಂತ ಬೇಜವಾಬ್ದಾರಿ. ಖುದ್ದು ಜಿಲ್ಲಾಡಳಿತ ಮುಂದೆ ಸಿದ್ದತೆ ಮಾಡಿಸಬೇಕಿತ್ತು.. ಆದರೆ ಇದುವರೆಗೂ ಜಿಲ್ಲಾಧಿಕಾರಿಗಳಾಗಲಿ ಅಥವಾ ತಹಶಿಲ್ದಾರರಿಂದ ಸಹಕಾರ ಇಲ್ಲ.. ವೀರ ಮರಣ ಹೊಂದಿದ ಪ್ರಾಂಜಲ್ ಮನೆ ಮುಂದೆ ಸ್ಥಳೀಯಯಿಂದಲೇ ಸಿದ್ದತೆ ನಡೆದಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ದಿವ್ಯ ನಿರ್ಲಕ್ಷ್ಯ ತೋರಿದೆ. ಕನಿಷ್ಠ ಕುಟುಂಬದವರಿಗೆ ಸಾಂತ್ವನ ಹೇಳಲೂ ಕೂಡ ಜಿಲ್ಲಾಧಿಕಾರಿಗಳು ಆಗಮಿಸಿಲ್ಲ. ನಂದನವನ ಬಡಾವಣೆಯ ನಿವಾಸಿಗಳು ಹಾಗೂ ಜಿಗಣಿ ಪೊಲೀಸರು ಮಾತ್ರ ನಿವಾಸದ ಬಳಿ ಹಾಜರಾಗಿದ್ದಾರೆ.

Read More

ನವದೆಹಲಿ:- ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಎಚ್‍ಎಎಲ್ ಸಂಸ್ಥೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ವಿಧಾನಸಭೆ ಚುನಾವಣೆ ಬಳಿಕ ಆ.​ 26 ರಂದು ಪ್ರಧಾನಿ ಮೋದಿ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ್ದರು. ಚಂದ್ರಯಾನ-3 ಯಶಸ್ವಿ ಹಿನ್ನೆಲೆಯಲ್ಲಿ ಈ ಐತಿಹಾಸಿಕ ಸಾಧನೆಗೆ ಕಾರಣರಾದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿದ್ದರು. ಅದಾಗಿ 3 ತಿಂಗಳ ಬಳಿಕ ಪ್ರಧಾನಿ ಮತ್ತೆ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೊರಡಲಿರುವ ಮೋದಿ ಬೆಳಿಗ್ಗೆ 9.15ಕ್ಕೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಸಂಸ್ಥೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ತೇಜಸ್ ಜೆಟ್‌ಗಳ ಸೌಲಭ್ಯ ಸೇರಿದಂತೆ ಅವುಗಳ ಉತ್ಪಾದನಾ ಸೌಲಭ್ಯವನ್ನು ಪರಿಶೀಲಿಸಲಿದ್ದಾರೆ. ಕಾರ್ಯಕ್ರಮದ ಬಳಿಕ ಚುನಾವಣಾ ಪ್ರಚಾರಕ್ಕಾಗಿ ಅವರು ತೆಲಂಗಾಣಕ್ಕೆ ಪ್ರಯಾಣ ಬೆಳಸಲಿದ್ದಾರೆ.

Read More

ಬೆಂಗಳೂರು:- ವೀರಮರಣ ಹೊಂದಿರುವ ಎಂ ಪ್ರಾಂಜಲ್ ರ ಪಾರ್ಥೀವ ಶರೀರ ತರ್ತಿರೋ ಹಿನ್ನೆಲೆ, ಬೆಂಗಳೂರಿನ ಹೆಚ್ ಎಎಲ್ ಏರ್ಪೋರ್ಟ್ ಬಳಿ ಸಿದ್ಧತೆ ಕೈಗೊಳ್ಳಲಾಗಿದೆ. ಮಿಲಿಟರಿ ಅಧಿಕಾರಿಗಳು, ವಾಹನಗಳು, ಆ್ಯಂಬುಲೆನ್ಸ್ ಆಗಮಿಸಲಿದ್ದು, ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು,ಎಂ ಪ್ರಾಂಜಲ್ ರ ಅಂತಿಮ‌ ದರ್ಶನ ಪಡೆಯಲಿದ್ದಾರೆ.

Read More