Author: AIN Author

ನೆಲಮಂಗಲ:- ಇಲ್ಲಿನ ಅಡಕಿಮಾರನಹಳ್ಳಿಯ ಫ್ಲೈಓವರ್ ಮೇಲೆ ಎರಡು ಬೈಕ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಹಿಳೆ ಗಂಭೀರ ಗಾಯಗೊಂಡ ಘಟನೆ ಜರುಗಿದೆ. ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಡ, ಹೆಂಡತಿ ಹಾಗೂ ಮಗು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಭೀಕರ ಅಪಘಾತದ ಪರಿಣಾಮ ತಂದೆ ಹಾಗೂ ನಾಲ್ಕು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಿಂದ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ , ಸಂಕ್ರಾಂತಿ ಹಬ್ಬವನ್ನು ಮುಗಿಸಿಕೊಂಡು ತುಮಕೂರು ಮಾರ್ಗವಾಗಿ ಬೆಂಗಳೂರಿಗೆ (Bengaluru) ಬರುವಾಗ ಅಪಘಾತ ಸಂಭವಿಸಿದೆ. ಮೃತರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭಿಸಿಲ್ಲ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Read More

ಕಾರವಾರ:- ಸಭ್ಯತೆ ವಿಷಯದಲ್ಲಿ ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಬರಲಿ ಎಂದು ಅನಂತಕುಮಾರ ಹೆಗಡೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ತಾನಾಡಿರುವ ಮಾತನ್ನು ತಮ್ಮ ಪಕ್ಷದ ನಾಯಕರು ಸಮರ್ಥಿಸದಿರುವುದು ಸ್ವಾಭಾವಿಕ, ಅದು ತನ್ನ ವೈಯಕ್ತಿಕ ಹೇಳಿಕೆ ಎಂದರು. ಸಭ್ಯತೆ ವಿಷಯದಲ್ಲಿ ಸಿದ್ದರಾಮಯ್ಯ ತನ್ನೊಂದಿಗೆ ಸಾರ್ವಜನಿಕ ಚರ್ಚೆಯಲ್ಲಿ ಭಾಗಿಯಾಬೇಕು ಮತ್ತು ಜನ ಅದನ್ನು ನೋಡಬೇಕು, ಸಭ್ಯತೆಯಿಂದ ಅವರು ಮಾತಾಡಿದ್ದು ಯಾವಾಗ? ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ, ದೇವಸ್ಥಾನಗಳು ಮತ್ತು ಹಿಂದೂತ್ವದ ಬಗ್ಗೆ ಅವರು ಅಸಭ್ಯವಾಗಿ ಮಾತಾಡಿದ್ದಾರೆ. ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿಯವರ ಬಗ್ಗೆ ಮಾತಾಡುವಾಗ ಸಭ್ಯತೆ ಮತ್ತು ಸಂಸ್ಕೃತಿಯ ಎಲ್ಲೆ ಮೀರಿ ಮಾತಾಡಿದ್ದಾರೆ ಎಂದು ಅನಂತಕುಮಾರ ಹೆಗಡೆ ಹೇಳಿದರು.

Read More

ಬೆಂಗಳೂರು: ಬಾಂಬ್​ ಪತ್ತೆ ಹಾಗು ನಿಷ್ಕ್ರಿಯ ದಳದ ಮೊಬೈಲ್​ ಲ್ಯಾಬ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶೀಲನೇ ಮಾಡಿದರು. ನಗರದ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿ ಮುಖ್ಯಮಂತ್ರಿಗಳು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಮೊಬೈಲ್ ಲ್ಯಾಬ್, ವಿಧಿ ವಿಜ್ಞಾನ ಮೊಬೈಲ್ ಲ್ಯಾಬ್ ವಾಹನ, ಮೊಬೈಲ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ವಾಹನದ ಉನ್ನತೀಕರಣದ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು. ಬಳಿಕ ಪೊಲೀಸ್ ಐಟಿ-V2, ITPA ಸರಳ ಆಪ್, ಪೊಲೀಸ್ ಮಿತ್ರ ಚಾಟ್ ಬಾಟ್, CG ನೋಂದಣಿ ಪೋರ್ಟಲ್, ರಾಜ್ಯ ಪೊಲೀಸ್ ಕೃತಕ ಬುದ್ದಿ ಮತ್ತೆ ತಂತ್ರಾಂಶ, ಆರ್ಥಿಕ ಇಂಟೆಲಿಜೆನ್ಸ್ ತಂತ್ರಾಂಶಗಳನ್ನು ಬಿಡುಗಡೆ ಮಾಡಿದರು. ಇದೇ ಹೊತ್ತಿನಲ್ಲಿ ಸಂಕ್ಷಿಪ್ತ ಸೈಬರ್ ಅಪರಾಧ ಕೈಪಿಡಿಯನ್ನು ಲೋಕಾರ್ಪಣೆಗೊಳಿಸಿದರು. ಈ ವೇಳೆ ಗೃಹ ಸಚಿವರಾದ ಜಿ.ಪರಮೇಶ್ವರ್, ಗೃಹ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ತ್ರಿಲೋಕ್ ಚಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು…

Read More

ಹುಬ್ಬಳ್ಳಿ: ನಗರದ ಅಂತಾರಾಷ್ಟ್ರೀಯ ರೋಟರಿ ರೋಟರಿ ಸರಸ್ವತಿ ಶಾಲೆಯಲ್ಲಿ ರೋಟರಿ ಇಂಟರಾಕ್ಟ್ ಕ್ಲಬ್ ರೋಟರಿ ಕ್ಲಬ್ ಆಫ್ ಮಿಡ್ ಟೌನ್, ಯುವ ಭಾರತ ಸಂಘಟನೆ ಸಹಯೋಗದೊಂದಿಗೆ ಮಂಗಳವಾರ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವತಿಯಿಂದ ವಿದ್ಯಾರ್ಥಿಗಳಿಗೆ ಸಂಚಾರ ನಿಯಮ ಕುರಿತು ಜಾಗೃತಿ ಶಿಬಿರ ನಡೆಸಲಾಯಿತು. ಶಾಲೆಯ ಅಧ್ಯಕ್ಷ ಹಾಗೂ ರೋಟರಿಯನ್ ಲಿಂಗರಾಜ ಪಾಟೀಲ್, ರೋಟರಿಯನ್ ಶಿವಪ್ರಸಾದ್ ಲಕಮನಹಳ್ಳಿ, ಖಜಾಂಚಿ ಹಾಗೂ ರೋಟರಿಯನ್ ಪ್ರವೀಣ್ ಬನ್ಸಾಲಿ, ಐಪಿಪಿ ಎನ್. ಡಾ. ಪ್ರಕಾಶ್ ವಾರಿ, ಎನ್. ಡಾ. ಶಿವಾನಂದ್, ಡಾ.ಮುದುಕನಗೌಡ, ಡಾ.ವಸಂತ ಪಾಟೀಲ್, ಡಾ. ಪ್ರಕಾಶ ವಾರಿ,ಪ್ರಾಂಶುಪಾಲರಾದ ಶ್ರೀಮತಿ. ಕೀರ್ತಿ ದೇಶಪಾಂಡೆ , ಇಂಟರ್ ಯಾಕ್ಟ್ ಕ್ಲಬ್ ಅಧ್ಯಕ್ಷೆ ಸಮಿತಾ ರೇವಣಕರ ಮತ್ತು ಅನುಕ್ಸಾ ರಾವ್, ಭರತ ಪ್ರದೀಪ್, ರೋಹನ್ ಹೆಬಸೂರು ಮುಂತಾದವರು ಉಪಸ್ಥಿತರಿದ್ದರು

Read More

ಬೆಂಗಳೂರು: ನಾಡಿನಾದ್ಯಂತ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಸಂಭ್ರಮ ಎಲ್ಲರು ಸಂತೋಷದಿಂದ ಆಚರಿಸಿದ್ದಾರೆ  ಹಾಗೆ ರಾಜಕಾರಣಿಗಳು ಸಹ ಬಹಳ ಸಂಭ್ರಮದಿಂದ ಹಬ್ಬವನ್ನು ಆಚರಿಸಿದ್ದಾರೆ ಅಂದ ಹಾಗೆ  ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿ ಮಾಡಿ ಹಬ್ಬದ ಶುಭಾಶಯಗಳನ್ನ ಕೋರಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು.

Read More

ಗದಗ:- ರೋಣ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಹತ್ತು ಬೈಕ್ ಕದ್ದು ಪರಾರಿಯಾಗಿದ್ದ ಕಳ್ಳನನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿ ಸಿರಾಜುಲಹಸನ ಎಂಬಾತ ಬಂಧಿತ ಆರೋಪಿ. ಗದಗ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡಿದ್ದ. ಆರೋಪಿ ಸಿರಾಜುಲಹಸನ ರೋಣ ಪಟ್ಟಣದ ನಿವಾಸಿ ಆಗಿದ್ದು, ಎಸ್ಪಿ ಬಿಎಸ್ ನೇಮಗೌಡ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. ಆರೋಪಿಯಿಂದ 3 ಲಕ್ಷ 45 ಸಾವಿರ ಮೌಲ್ಯದ 10 ಬೈಕ್ ವಶಕ್ಕೆ ಪಡೆಯಲಾಗಿದೆ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ ಕಳ್ಳ ಹಿಡಿಯಲು ಯಶಸ್ವಿಯಾದ ಪೊಲೀಸರಿಗೆ ಸಾರ್ವಜನಿಕರು ಮೆಚ್ಚುಗೆ ಸುರಿಸಿದ್ದಾರೆ.

Read More

ದೆಹಲಿ: ರಾಮಮಂದಿರದ (Ram Mandir) ರಾಮಲಲ್ಲಾನ ಪ್ರಾಣಪ್ರತಿಷ್ಠೆಗೆ ಕೇವಲ 7 ದಿನಗಳು ಬಾಕಿ ಉಳಿದಿದ್ದು, ಇಂದಿನಿಂದ ಪೂಜಾಕಾರ್ಯಗಳು ಆರಂಭಗೊಂಡಿದೆ. ಈಗಾಗಲೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗಿದೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್  (CSK) ತಂಡದ ನಾಯಕನಾಗಿರುವ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಲಾಗಿದೆ. ಸೋಮವಾರ ರಾಂಚಿಯಲ್ಲಿರುವ (Ranchi) ಅವರ ನಿವಾಸದಲ್ಲಿ ಆಹ್ವಾನವನ್ನು ನೀಡಿದ್ದು, ಎಂಎಸ್ ಧೋನಿ ಭಕ್ತಿಪೂರ್ವಕವಾಗಿ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಧೋನಿ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಹ-ಪ್ರಾಂತೀಯ ಕಾರ್ಯದರ್ಶಿ ಧನಂಜಯ್ ಸಿಂಗ್ ಅವರು ಆಹ್ವಾನ ನೀಡಿದ್ದಾರೆ. ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ರಾಮಮಂದಿರ ಪ್ರತಿಷ್ಠಾಪನೆಗೆ ಧೋನಿಯನ್ನು ಆಹ್ವಾನಿಸಿದ ಸಂದರ್ಭ ಬಿಜೆಪಿ ರಾಜ್ಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕರ್ಮವೀರ್ ಸಿಂಗ್ ಸಹ ಉಪಸ್ಥಿತರಿದ್ದರು. ಇತ್ತೀಚಿಗಷ್ಟೇ ಸ್ಟಾರ್ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ (Sachin Tendulkar) ಮತ್ತು ವಿರಾಟ್ ಕೊಹ್ಲಿ (Virat Kohli) ಅವರನ್ನೂ ಪ್ರಾಣಪ್ರತಿಷ್ಠೆ…

Read More

ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ‌ ಸ್ವಾಮಿ ಬ್ರಹ್ಮರಥೋತ್ಸವವು ಭಕ್ತಮಹಾಗಣ ಸಮ್ಮುಖದಲ್ಲಿ ಇಂದು ಮಧ್ಯಾಹ್ನ 12-15ರಿಂದ 12-30 ಗಂಟೆಗೆ ಸಲ್ಲುವ ಶುಭ ಮೇಷ ಲಗ್ನ ಮುಹೂರ್ತದಲ್ಲಿ ಬಹಳ ವೈಭವದೊಂದಿಗೆ ನೆರವೇರಿತು. ರಥೋತ್ಸವಕ್ಕೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತಗಣ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದು, ರಥವನ್ನ ಎಳೆದು, ರಥಕ್ಕೆ ಬಾಳೆಹಣ್ಣು, ದವನ ಎಸೆದು ತಮ್ಮ ಭಕ್ತಿ ಇಚ್ಚಾನುಸಾರ ಸಮರ್ಪಿಸಿ ಪುನೀತರಾದರು. ಷಷ್ಠಿಯ ದಿನದಂದು ಮುಂಜಾನೆ 3ರಿಂದ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು ಆರಂಭವಾಗಲಿವೆ. ಅಭಿಷೇಕ ಕಾರ್ಯಗಳು ಪ್ರಾರಂಭಗೊಂಡು, 5:30ಕ್ಕೆ ಮಹಾಮಂಗಳಾರತಿ ನೆರವೇರಿತು. ಗರ್ಭಗುಡಿಯಲ್ಲಿನ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಲಕ್ಷ್ಮೀನರಸಿಂಹಸ್ವಾಮಿ ಮೂರ್ತಿಗಳಿಗೆ ಪ್ರಾತಃ ಕಾಲದಲ್ಲಿ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಶ್ರೀಗಂದಾಭಿಷೇಕ, ಭಸ್ಮದಭಿಷೇಕದೊಂದಿಗೆ ಹೂವಿನ ಅಲಂಕಾರ ನೆರವೇರಿಸಲಾಯಿತು. ರಾತ್ರಿ 8:30ರವರೆಗೂ ಭಕ್ತರಿಗೆ ದರ್ಶನ ವ್ಯವಸ್ಥೆ ದೊರೆಯಲಿದೆ. ಭಕ್ತರಿಗೆ ಅನ್ನ ದಾಸೋಹ, ಮಜ್ಜಿಗೆ, ಪಾನಕದ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಗೆ ಆಗಮಿಸುವ ಭಕ್ತರಿಗೆ ವಿಶೇಷ ಬಸ್‍ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.…

Read More

ಬಿಗ್ ಬಾಸ್’ ಸೀಸನ್ 6 (Bigg Boss Kannada 6) ವಿನ್ನರ್ ಶಶಿ ಅವರಿಗೆ ಪೆಟ್ಟಾಗಿದೆ. ಮೈಸೂರಿನಲ್ಲಿ ನಡೆಯುತ್ತಿದ್ದ ‘ಮೆಹಬೂಬಾ’ ಚಿತ್ರೀಕರಣದ ವೇಳೆ ಶಶಿ ಪೆಟ್ಟು ಮಾಡಿಕೊಂಡಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್‌ ಆತಂಕಗೊಂಡಿದ್ದಾರೆ ಮಾಡ್ರನ್ ರೈತ ಎಂದೇ ಫೇಮಸ್ ಆಗಿದ್ದ ‘ಬಿಗ್ ಬಾಸ್’ ಶಶಿ ಅವರು ತಮ್ಮ ಮುಂಬರುವ ಸಿನಿಮಾ ‘ಮೆಹಬೂಬಾ’ (Mehabooba) ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಕ್ಲೈಮ್ಯಾಕ್ಸ್‌ನಲ್ಲಿ ರಿಸ್ಕಿ ಸೀನ್ಸ್ ಶೂಟ್ ಮಾಡುವಾಗ ಬಿದ್ದು ಶಶಿ ಏಟು ಮಾಡಿಕೊಂಡಿದ್ದಾರೆ. ಸೂಕ್ತ ಚಿಕಿತ್ಸೆಯ ಬಳಿಕ ಶಶಿ ಇದೀಗ ಚೇತರಿಕೊಳ್ಳುತ್ತಿದ್ದಾರೆ. ಕಳೆದ ಸೀಸನ್ 6 ಬಿಗ್ ಬಾಸ್ ಶೋನಲ್ಲಿ ವಿಜೇತರಾಗಿದ್ದ ಶಶಿ ಕೃಷಿ ಮತ್ತು ಸಿನಿಮಾರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ಗೊಂಬೆಗಳ ಲವ್’ ಖ್ಯಾತಿಯ ಪಾವನಾ ಜೊತೆ ‘ಮೆಹಬೂಬಾ’ ಎಂಬ ಲವ್‌ಸ್ಟೋರಿ ಹೇಳಲು ಶಶಿ ರೆಡಿಯಾಗಿದ್ದಾರೆ. ಸದ್ಯದಲ್ಲೇ ಚಿತ್ರದ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

Read More

ಬೆಂಗಳೂರು: ಆರ್.ಟಿ.ಓ ಅಧಿಕಾರಿಗಳ ಯಡವಟ್ಟಿನಿಂದ‌ ವ್ಯಕ್ತಿಯ ಅನುಮಾನಾಸ್ಪದ‌ ಸಾವನ್ನಪ್ಪಿರುವ ಘಟನೆ  ಎಲೆಕ್ಟ್ರಾನಿಕ್ ಸಿಟಿ ಬಳಿಯ ಹುಸ್ಕೂರಿನಲ್ಲಿರುವ ಆರ್.ಟಿ.ಓ ದಲ್ಲಿ ನಡೆದಿದೆ ಡ್ರೈವರ್‌ ವಸಂತ್ ಕುಮಾರ್  ಅನುಮಾನಸ್ಪದ ಸಾವನ್ನಪ್ಪಿದ್ದು  ಇದೇ ತಿಂಗಳ 10ನೇ ತಾರೀಖಿನಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.. ಪೀಣ್ಯ 2 ನೇ ಹಂತದಿಂದ ಲಾರಿ ಡ್ರೈವ್ ಮಾಡಿಕೊಂಡು ಹೋಗಿದ್ದ ವಸಂತ್ 9 ನೇ ತಾರೀಖಿನಂದು ಎಲೆಕ್ಟ್ರಾನಿಕ್ ಸಿಟಿ ಬಳಿ ಡ್ರೈವ್ ಮಾಡಿಕೊಂಡು ಹೋಗುವಾಗ ಆರ್.ಟಿ.ಓ ಅಧಿಕಾರಿಗಳು ಹಿಡಿದಿದ್ದಾರೆ ನಂತರ ಲಾರಿ ಡಾಕ್ಯೂಮೆಂಟ್ಸ್ ಲ್ಯಾಪ್ಸ್ ಆಗಿದೆ ಅಂತ ಲಾರಿ ಸೀಜ್‌ ಮಾಡಿದ್ದಾರೆ ಸೀಜ್ ಮಾಡಿ ಎಲೆಕ್ಟ್ರಾನಿಕ್ ಆರ್.ಟಿ.ಓ ಕಚೇರಿಗೆ ಲಾರಿಯನ್ನು ತೆಗೆದುಕೊಂಡು ಹೋಗಿದ್ದಾರೆ ಆರ್.ಟಿ.ಓ ಇನ್ಸ್ಪೆಕ್ಟರ್ ಮತ್ತು ತಂಡದಿಂದ ಲಾರಿ ಪರಿಶೀಲನೆ ಮಾಡಿ ನಂತರ ಸೀಜ್ ಮಾಡಿದ್ದಾರೆ.. ಆಗ‌ ವಸಂತ್ ಲಾರಿ ಮಾಲಾಕನಿಗೆ ಮಾಹಿತಿ‌ ನೀಡಿದ್ದಾರೆ.. ಲಾರಿ ಮಾಲೀಕ ಬೆಳಿಗ್ಗೆ ನೋಡಿಕೊಳ್ಳೋಣ ಎಂದಿದ್ದಾರೆ ಆಗ ಲಾರಿಯಲ್ಲಿಯೇ ರಾತ್ರಿ ಇಡೀ ಮಲಗಿದ್ದ ವಸಂತ್..‌ ಬೆಳಗ್ಗೆ ಆರ್.ಟಿ.ಓ ಕಚೇರಿಯ ಒಳಭಾಗದಲ್ಲಿಯೇ ಮಲಗಿದ್ದ ಲಾರಿಯಲ್ಲಿ ಸಾವನಪ್ಪಿದ್ದ…

Read More