ಅನ್ನದಿಂದ ಮಾಡುವ ಪದಾರ್ಥಗಳು ಕೆಲವರಿಗೆ ತುಂಬಾ ಇಷ್ಟವಾಗುತ್ತದೆ. ಏಕೆಂದರೆ ಹೊಟ್ಟೆ ತುಂಬುತ್ತದೆ ನಾಲಿಗೆಗೂ ರುಚಿ ಸಿಗುತ್ತದೆ ಎಂದು ಹಲವರು ಹೇಳುತ್ತಾರೆ. ಫಲಾವ್, ಚಿತ್ರಾನ್ನ, ಪುಳಿಯೋಗರೆ ಪ್ರತಿದಿನ ತಿಂದು ನಾಲಿಗೆ ರುಚಿ ಕೆಟ್ಟು ಹೋಗಿದೆ. ಇಂದು ಏನಾದ್ರೂ ಹೊಸ ರುಚಿಯ ಅಡುಗೆ ತಿನ್ನಬೇಕು ಅದು ಅನ್ನದಿಂದಲೇ ಮಾಡಿರುವ ಅಡುಗೆಯಾಗಿರಬೇಕು ಎಂದು ಯೋಚಿಸುವ ನಿಮಗೆ, ತಟ್ಟನೇ ಮಾಡಬೇಕು ಎಂದರೆ ಯಾವ ಅಡುಗೆಯು ನೆನಪಿಗೆ ಬರುವುದಿಲ್ಲ. ಚಿತ್ರಾನ್ನ, ಫಲಾವ್ ಮಾಡಿ ಮಾತ್ರ ಗೊತ್ತಿರುವ ನಮಗೆ ಹೊಸ ಅಡುಗೆ ಸವಿಯ ಬೇಕೆಂದರೆ ಹೋಟೆಲ್‍ಗಳ ಮೊರೆ ಹೋಗುತ್ತೇವೆ. ಆದರೆ ಇಂದು ಮನೆಯಲ್ಲಿಯೇ ಸರಳವಾಗಿ ಮಾಡುವ ಪನ್ನೀರ್ ಬಿರಿಯಾನಿಯನ್ನು ಟ್ರೈ ಮಾಡಲು ಇಲ್ಲಿದೆ ಮಾಡುವ ವಿಧಾನ. ಬೇಕಾಗುವ ಸಾಮಗ್ರಿಗಳು: * ಪನ್ನೀರ್ – 2 ಕಪ್ * ಅಕ್ಕಿ – 2 ಕಪ್ * ಬಟಾಣಿ ಕಾಳು – ಅರ್ಧ ಕಪ್ * ಶುಂಠಿ,ಬೆಳ್ಳುಳ್ಳಿ ಮಿಶ್ರಣ – 1 ಟೀ ಸ್ಪೂನ್ * ಮೊಸರು – 2 ಕಪ್ *…
Author: AIN Author
ಸೂರ್ಯೋದಯ: 06:53, ಸೂರ್ಯಾಸ್ತ : 05:58 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಶೋಭಕೃತ ಶಕ ಸಂವತ ಪುಷ್ಯ ಮಾಸ , ಶುಕ್ಲ ಪಕ್ಷ, ಉತ್ತರಾಯಣ, ಹೇಮಂತ ಋತು, ತಿಥಿ: ಸಪ್ತಮಿ, ನಕ್ಷತ್ರ: ರೇವತಿ, ಯೋಗ: ಶಿವ, ಕರಣ: ಗರಜ ರಾಹು ಕಾಲ: 12:00 ನಿಂದ 01:30 ತನಕ ಯಮಗಂಡ: 07:30 ನಿಂದ 09:00 ತನಕ ಗುಳಿಕ ಕಾಲ: 10:30 ನಿಂದ 12:00 ತನಕ ಮೇಷ ರಾಶಿ: ರಾಜಕಾರಣಿಗಳಿಗೆ ವಿಶೇಷ ಸ್ಥಾನಮಾನ ನಿಮ್ಮ ಚಾಣಕ್ಷತನದಿಂದ ಮಂತ್ರಿಸ್ಥಾನ ಲಭ್ಯ, ಹಿತೈಷಿಗಳ ಸಹಕಾರ, ರಿಯಲ್ ಎಸ್ಟೇಟ್ ಮತ್ತು ಗುತ್ತಿಗೆ ಉದ್ಯಮದಾರರ ಮನಸ್ಸಿನಲ್ಲಿ ಒಂದು ಕೆಲಸ ತುಂಬಾ ದಿನದಿಂದ ಕಾಡುತ್ತಿದ್ದು ಇಂದು ಸಕಾಲ ಗೊಳ್ಳಲಿದೆ, ಪ್ರೇಮಿಗಳ ಬಾಂಧವ್ಯ ಉತ್ತಮಗೊಳ್ಳಲಿದೆ, ಆರೋಗ್ಯದಲ್ಲಿ ಸುಧಾರಣೆ, ಆಸ್ತಿ ಲೋಪ ದೋಷ ನಿವಾರಣೆ, ಕುಟುಂಬದ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬೀಳಲಿದೆ, ಕಚೇರಿಯಲ್ಲಿ ವ್ಯವಹರಿಸುವಾಗ ಜಾಗ್ರತೆವಹಿಸಿ, ಸಹೋದ್ಯೋಗಿಗಳ ಜೊತೆ ಹಾಗೂ ಗ್ರಾಹಕರೊಡನೆ ವಾಗ್ವಾದ ಬೇಡ, ಉದ್ಯೋಗ ಬದಲಾವಣೆ ಮತ್ತು ಮನೆ…
ಗುರು ಗೋಬಿಂದ ಸಿಂಹ ಜಯಂತಿ ಸೂರ್ಯೋದಯ: 06:53, ಸೂರ್ಯಾಸ್ತ : 05:58 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಶೋಭಕೃತ ಶಕ ಸಂವತ ಪುಷ್ಯ ಮಾಸ , ಶುಕ್ಲ ಪಕ್ಷ, ಉತ್ತರಾಯಣ, ಹೇಮಂತ ಋತು, ತಿಥಿ: ಸಪ್ತಮಿ, ನಕ್ಷತ್ರ: ರೇವತಿ, ಯೋಗ: ಶಿವ, ಕರಣ: ಗರಜ ರಾಹು ಕಾಲ: 12:00 ನಿಂದ 01:30 ತನಕ ಯಮಗಂಡ: 07:30 ನಿಂದ 09:00 ತನಕ ಗುಳಿಕ ಕಾಲ: 10:30 ನಿಂದ 12:00 ತನಕ ಮೇಷ ರಾಶಿ: ರಾಜಕಾರಣಿಗಳಿಗೆ ವಿಶೇಷ ಸ್ಥಾನಮಾನ ನಿಮ್ಮ ಚಾಣಕ್ಷತನದಿಂದ ಮಂತ್ರಿಸ್ಥಾನ ಲಭ್ಯ, ಹಿತೈಷಿಗಳ ಸಹಕಾರ, ರಿಯಲ್ ಎಸ್ಟೇಟ್ ಮತ್ತು ಗುತ್ತಿಗೆ ಉದ್ಯಮದಾರರ ಮನಸ್ಸಿನಲ್ಲಿ ಒಂದು ಕೆಲಸ ತುಂಬಾ ದಿನದಿಂದ ಕಾಡುತ್ತಿದ್ದು ಇಂದು ಸಕಾಲ ಗೊಳ್ಳಲಿದೆ, ಪ್ರೇಮಿಗಳ ಬಾಂಧವ್ಯ ಉತ್ತಮಗೊಳ್ಳಲಿದೆ, ಆರೋಗ್ಯದಲ್ಲಿ ಸುಧಾರಣೆ, ಆಸ್ತಿ ಲೋಪ ದೋಷ ನಿವಾರಣೆ, ಕುಟುಂಬದ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬೀಳಲಿದೆ, ಕಚೇರಿಯಲ್ಲಿ ವ್ಯವಹರಿಸುವಾಗ ಜಾಗ್ರತೆವಹಿಸಿ, ಸಹೋದ್ಯೋಗಿಗಳ ಜೊತೆ ಹಾಗೂ ಗ್ರಾಹಕರೊಡನೆ ವಾಗ್ವಾದ ಬೇಡ,…
ಬೆಂಗಳೂರು: ಲೋಕಸಭೆ ಚುನಾವಣೆಗೆ ಭರ್ಜರಿ ಹುರುಪಿನಿಂದ ಮುನ್ನುಗ್ಗುತ್ತಿರುವ ರಾಜ್ಯ ಬಿಜೆಪಿ ಮೋದಿ ಬಲವನ್ನೇ ನಂಬಿಕೊಂಡಿದೆ. ಅವರು ರಾಜ್ಯದಲ್ಲಿ ಹೆಚ್ಚು ಹೆಚ್ಚು ಪ್ರಚಾರ ನಡೆಸಿದಷ್ಟು ಪಕ್ಷಕ್ಕೆ ಆನೆಬಲ ಬರಲಿದೆ, ಈ ಹಿಂದೆ ಚಂದ್ರಯಾನ ಯಶಸ್ಸಿನ ಬಳಿಕ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೆ ಮೋದಿ ಬೆಂಗಳೂರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ರೋಡ್ ಶೋ ಮಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿಕೆ ನೀಡಿ ನಂತರ ರೋಡ್ ಶೋ ಕ್ಯಾನ್ಸಲ್ ಆಗಿದ್ದಕ್ಕೆ ಕೇಸರಿ ನಾಯಕರು ಮುಜುಗರಕ್ಕೀಡಾಗಿದ್ದರು. ಹೀಗಾಗಿ ಈ ಬಾರಿ ಎಚ್ಚರಿಕೆಯ ಹೆಜ್ಜೆ ಇಡಲು ಬಿಜೆಪಿಯವರು ಯೋಜಿಸಿದ್ದು ಪ್ರಧಾನಮಂತ್ರಿ ಕಛೇರಿಯಿಂದ ಅನುಮತಿ ಪಡೆಯಲು ಪ್ಲಾನ್ ಮಾಡ್ತಿದ್ದಾರೆ ಎಲ್ಲವೂ ಅಂದುಕೊಂಡಂತೆ ಆದ್ರೆ ಶುಕ್ರವಾರ ನಮೋ ರೋಡ್ ಶೋ ನಡೆಯಲಿದೆ. ಒಟ್ನಲ್ಲಿ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ನಾಯಕರು ಪ್ಲಾನ್ ಮಾಡ್ತಿದ್ದು, ರಾಮ ಮಂದಿರ ಉದ್ಘಾಟನೆಗೂ ಮುನ್ನ ಮೋದಿ ಬರ್ತಿರೋದು ರಾಜ್ಯ ಬಿಜೆಪಿ ನಾಯಕರಲ್ಲಿ ರಣೋತ್ಸಾಹ ತಂದಿದೆ. ರೋಡ್ ಶೋ ಮೂಲಕ ಪಕ್ಷದ ಬಲ…
ಬೆಂಗಳೂರು: ರಾಮ ಮಂದಿರ ಉದ್ಘಾಟನೆಗೂ ಮುನ್ನವೇ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರ್ತಿದ್ದಾರೆ, BIETCಗೆ ಬರ್ತಿರೋ ನಮೋ ಚಾಮರಾಜನಗರಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ. ರಾಜ್ಯ ಬಿಜೆಪಿ ನಾಯಕರಲ್ಲಿ ಲೋಕಸಭಾ ರಣೋತ್ಸಾಹ ಬಂದಿದ್ದು ಹೊಸ ಹುರುಪಿನಲ್ಲಿದ್ದಾರೆ, ಬೆಂಗಳೂರಿನಲ್ಲಿ ನಮೋ ಬೃಹತ್ ರೋಡ್ ಶೋಗೆ ಕೇಸರಿ ನಾಯಕರು ಪ್ಲಾನ್ ಮಾಡ್ತಿದ್ದು ಲೋಕಸಮರಕ್ಕೆ ರಣಕಹಳೆ ಮೊಳಗಿಸಲು ಸಜ್ಜಾಗ್ತಿದ್ದಾರೆ ಕಮಲನಾಯಕರು.. ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ ಬಿಜೆಪಿ ಹೈಕಮಾಂಡ್ ನಾಯಕರು ರಾಮ ಜಪದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಕೇಸರಿನಾಯಕರಲ್ಲಿ ಲೋಕಸಭೆಯ ತಯಾರಿಯೂ ಆರಂಭವಾಗಿದೆ, ರಾಮ ಮಂದಿರ ಉದ್ಘಾಟನೆಗೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬರ್ತಿದ್ದಾರೆ. ಜನವರಿ 19 ರಂದು ಬೆಂಗಳೂರಿನ ಏರೋಸ್ಪೇಸ್ ಇಂಜಿನಿಯರಿಂಗ್ ಸ್ಪೆಷಾಲಿಟಿ ಇಂಡಿಯಾ ಇಂಜಿನಿಯರಿಂಗ್ ಟೆಕ್ನಾಲಜಿ ಸೆಂಟರ್ಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಲೋಕಸಮರದ ರಣೋತ್ಸಾಹದಲ್ಲಿದ್ದಾರೆ ಸಿಲಿಕಾನ್ ಸಿಟಿಯಲ್ಲಿ ನಮೋ ಮೆಗಾ ರೋಡ್ ಶೊ ನಡೆಸಿ ಲೋಕಸಮರದ ರಣಕಹಳೆ ಮೊಳಗಿಸಲು ರಾಜ್ಯ ಬಿಜೆಪಿ ನಾಯಕರು ಪ್ಲಾನ್ ಮಾಡ್ತಿದ್ದಾರೆ.. ವಿಧಾನಸಭೆ…
ತುಮಕೂರು: ತುಮಕೂರು ಕಾಂಗ್ರೆಸ್ ರೇಸ್ ಬೆನ್ನಲ್ಲೆ ಮಾಜಿ ಸಂಸದ ಮುದ್ದಹನುಮೇಗೌಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆರನ್ನ ಭೇಟಿಯಾಗಿದ್ದಾರೆ. ಕಾಂಗ್ರೆಸ್ ಗೆ ವಾಪಸ್ ಬರಲು ಮುದ್ದಹನುಮೇಗೌಡ ಶತಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಸಿಎಮ್ ಡಿಕೆ ಶಿವಕುಮಾರ್ ,ಪರಮೇಶ್ವರ್, ರಾಜಣ್ಣರನ್ನ ಭೇಟಿಯಾಗಿದ್ದಾರೆ. ಸದ್ಯ ಮಲ್ಲಿಕಾರ್ಜುನ್ ಖರ್ಗೆರನ್ನ ಭೇಟಿಯಾಗಿ ಚರ್ಚೆ ನಡೆಸಿರುವ ಸಾಧ್ಯತೆಯಿದೆ.
ರಾಯಚೂರು: ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಫೈಲ್‌ಗಳನ್ನ ಇ- ಫೈಲ್ ಸಿಸ್ಟಮ್‌ಗೆ ಅಳವಡಿ ಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಹಿನ್ನಲೆ ರಾಯಚೂರು ಜಿಲ್ಲೆಯ ತಹಶಿಲ್ದಾರರು ಹಾಗೂ ಸಹಾಯಕ ಆಯುಕ್ತರನ್ನ ಕಂದಾಯ ಸಚಿವ ಕೃಷ್ಣಾ ಬೈರೆಗೌಡ ತರಾಟೆಗೆ ತೆಗೆದುಕೊಂಡರು. ನಗರದ ಜಿಲ್ಲಾ ಪಂಚಾ ಯತ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಕೃಷ್ಣ ಬೈರೆಗೌಡ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ಇ- ಫೈಲ್ ಸಿಸ್ಟಮ್ ಸಮರ್ಪಕ ಜಾರಿ ಮಾಡದ ಹಿನ್ನೆಲೆ ಗರಂ ಆದ ಸಚಿವರು ರಾಯಚೂರು ಉಪವಿಭಾಗ ಸಹಾಯಕ ಆಯುಕ್ತರು, ದೇವದುರ್ಗ ಹಾಗೂ ಮಾನ್ವಿ ತಹಶಿಲ್ದಾರಗಳ ವಿರುದ್ದ ಹರಿಹಾಯ್ದರು. ಕತ್ತೆ ಕಾಯ್ತಿದ್ದಿರಾ..? ಜನರಿಂದ ಫಿಸಿಕಲ್ ಫೈಲ್ ಸ್ವೀಕರಿಸದಂತೆ ಹೇಳಿಲ್ವಾ..? 5 ತಿಂಗಳಿಂದ ಹೇಳ್ತಾಯಿದಿನಿ ಯಾರಿಗೆ ಯಾಮಾರಿಸುತ್ತಿದ್ದೀರಿ ಅಂತ ಬೇಸರ ವ್ಯಕ್ತಪಡಿಸಿದರು. ಪಾರದರ್ಶಕತೆಯಿಂದ ಆಡಳಿತ ನಡೆಯಬಾರದು, ಫೈಲ್‌ಗಳು ಈ ಟೇಬಲ್ ನಿಂದ ಆ ಟೇಬಲ್ ಗೆ ಹೋಗ್ತಾಯಿರಬೇಕಾ. ಯಾಕೆ ಇ- ಫೈಲ್ ಸಿಸ್ಟಮ್ ಪ್ರಗತಿ ಕಾಣ್ತಿಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದರು. ಜನರನ್ನು ಅಲೆದಾಡಿ ಸೋದೆ…
ದೊಡ್ಡಬಳ್ಳಾಪುರ : ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಇಂದು ಅದ್ಧೂರಿಯಾಗಿ ಬ್ರಹ್ಮರಥೋತ್ಸವ ನಡೆಯಿತು, ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು, ಇದೇ ರಥೋತ್ಸದ ವೇಳೆ ಕೂದಲೆಳೆಯ ಅಂತರದಲ್ಲಿ ಅನಾಹುತ ತಪ್ಪಿ ಭಕ್ತರ ಆತಂಕವನ್ನ ದೂರ ಮಾಡಿತು. ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯ ಕ್ಷೇತ್ರ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ನಾಗರಾಧನೆಯ ಕ್ಷೇತ್ರ, ಇಂದು ಮಧ್ಯಾಹ್ನ 12-15 ರಿಂದ 12-30 ಕ್ಕೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ಶ್ರೀಸುಬ್ರಮಣ್ಯ ಸ್ವಾಮಿಯ ಬ್ರಹ್ಮರಥೋತ್ಸ ನೆರವೇರಿತು, ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿಯವರು ರಥೋತ್ಸವಕ್ಕೆ ಚಾಲನೆ ನೀಡಿದರು, ಸುಬ್ರಮಣ್ಯಸ್ವಾಮಿಯ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದು, ರಥಕ್ಕೆ ಹೂವು,ದವನ ಮತ್ತು ಬಾಳೆಹಣ್ಣು ಎಸೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ರಥೋತ್ಸದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್.ಮುನಿಯಪ್ಪ ಮತ್ತು ದೊಡ್ಡಬಳ್ಳಾಪುರದ ಶಾಸಕರಾದ ಧೀರಜ್ ಮುನಿರಾಜು ಸೇರಿದಂತೆ ಗಣ್ಯರು ಭಾಗವಹಿಸುವರು. https://ainlivenews.com/garbage-collection-rs-20-grandmother-who-donated-is-invited-to-the-opening-of-the-ram-mandir/ ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್.ಮುನಿಯಪ್ಪ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗು ಡಿಸಿಎಂ ಡಿ.ಕೆ.ಶಿವಕುಮಾರ್ ಸಂಕ್ರಾಂತಿ ಹಬ್ಬದ ವೇಳೆ ನಿಗಮ ಮಂಡಳಿ ನೇಮಕ ಆಗಲಿದೆ ಎಂದಿದ್ದರು.ಆದ್ರೆ, ಇಂದಿನ ವಾತಾವರಣವೇ ಬದಲಾಗಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನ ಕೇಳಿದ್ರೆ ನೀವು ಸಿಎಂ,ಡಿಸಿಎಂ ಕೇಳಿ ಅಂತಾರೆ.ಖರ್ಗೆಯವರ ಮಾತು ನೋಡಿದ್ರೆ ಯಾಕೋ ಸದ್ಯಕ್ಕೆ ಆಗುವಂತೆ ಕಾಣ್ತಿಲ್ಲ. ಎಐಸಿಸಿ ಅಧ್ಯಕ್ಷರಿಗೆ ಮಾಹಿತಿ ಇಲ್ಲ ಅಂದ್ರೆ ನೇಮಕದ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ ಅನ್ನೋದು ಅಷ್ಟೇ ಸ್ಪಷ್ಟ.ಯಾಕಂದ್ರೆ ಗೊಂದಲಗಳು ಇನ್ನೂ ಮುಂದುವರಿದಿವೆ.ಪಟ್ಟಿ ಬಿಡುಗಡೆ ಮಾಡಿದ್ರೆ ಸಿಗದವರು ಚುನಾವಣೆಯಲ್ಲಿ ಕೈಕೊಡಬಹುದು ಅನ್ನೋ ಅನುಮಾನವೂ ಇದೆಯಂತೆ.ಕೊಟ್ಟವರು ಕೆಲಸ ಮಾಡಿದ್ರೆ ಉಳಿದವ್ರು ನಾವ್ಯಾಕೆ ಲಾಭವಿಲ್ಲದೆ ಮಾಡ್ಬೇಕು ಅಂತಾರೆ. https://ainlivenews.com/garbage-collection-rs-20-grandmother-who-donated-is-invited-to-the-opening-of-the-ram-mandir/ ಹಾಗಾಗಿ ಚುನಾವಣೆಯವರೆಗೆ ಸುಮ್ಮನಿದ್ರೆ ಆಗ ಎಲ್ಲರು ಕೆಲಸ ಮಾಡ್ತಾರೆ. ಹೆಚ್ಚಿನ ಸೀಟು ಗಳನ್ನ ಗೆಲ್ಲಬಹುದು.ಒಂದ್ವೇಳೆ ಪಟ್ಟಿ ಬಿಟ್ರೆ ಚುನಾವಣೆ ಮೇಲೆ ಪರಿಣಾಮ ಬೀರಬಹುದೆಂಬ ಅನುಮಾನಗಳೂ ಇವೆಯಂತೆ..ಹಾಗಾಗಿಯೇ ಈಗ ಆಗ ಅಂತ ಕಾಲ ತಳ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಎನ್ನಲಾಗಿದೆ. ಇನ್ನು ಕಾಂಗ್ರೆಸ್ ನಾಯಕರ ತೀರ್ಮಾನಕ್ಕೆ ನಿಗಮ ಮಂಡಳಿ ಆಕಾಂಕ್ಷಿಗಳು ಅಸಮಧಾನ…
ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ ಶೀತಲ ಸಮರದಿಂದ,ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮತ್ತೆ ಮುಂದಕ್ಕೆ ಹೋಗಿದೆ.ಸಂಕ್ರಾಂತಿಗೆ ಸಿಹಿ ಸುದ್ಧಿ ಕೊಡುತ್ತೇವೆ ಎಂದಿದ್ದ ಸಿಎಂ,ಡಿಸಿಎಂ ಮಾತು ಮತ್ತೆ ಹುಸಿಯಾಗಿದೆ.ಸರ್ಕಾರ ನಡೆಗೆ ಶಾಸಕರು, ಕಾರ್ಯಕರ್ತರಲ್ಲಿ, ಅಸಮಾಧಾನ ಸ್ಪೋಟವಾಗುವ ಸಾಧ್ಯತೆ ಇದೆ.ಇದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ. https://ainlivenews.com/garbage-collection-rs-20-grandmother-who-donated-is-invited-to-the-opening-of-the-ram-mandir/ ಇಂದು ಅಥವಾ ನಾಳೆ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪಟ್ಟಿ ಹೊರಬೀಳಲಿದೆ.ಗೂಟದ ಕಾರಿನ ಭಾಗ್ಯ ಸಿಗಲಿದೆ ಎಂಬ ಶಾಸಕರ ಕನಸು ಕಮರುವಂತೆ ಕಾಣ್ತಿದೆ.ನಿನ್ನೆಯಷ್ಟೇ ಡಿಸಿಎಂ ಡಿಕೆಶಿ ಆಗೇ ಅಗುತ್ತದೆ ಅಂತ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದರು.ಹಾಗಾಗಿ ಶಾಸಕರು ಹಾಗೂ ಕಾರ್ಯಕರ್ತರು ಇಂದೋ ನಾಳೆಯೂ ಆಗುತ್ತದೆ ಎಂದು ಕನಸು ಕಂಡಿದ್ದರು.ಆದ್ರೆ ಅಂತಹ ಯಾವ ಲಕ್ಷಣಗಳೂ ಕಾಣ್ತಿಲ್ಲ.ಪಕ್ಷದಲ್ಲಿರುವ ಬಣ ಬಡಿದಾಟದಿಂದ ನಿಗಮ ಮಂಡಳಿ ನೇಮಕ ಮತ್ತೆ ಮುಂದಕ್ಕೆ ಹೋಗಿದೆ.