Author: AIN Author

ಬೆಂಗಳೂರು: ಗ್ಯಾರಂಟಿ ಯೋಜನೆಗೆ ಹಣ ನೀಡಿ ರಾಜ್ಯ ಸರ್ಕಾರ ಪಾಪರ್ ಆಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್​. ಅಶೋಕ್ ಕಿಡಿಕಾರಿದ್ದಾರೆ. ನಗರದಲ್ಲಿ  ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟದ ತೀರ್ಮಾನ ಅಕ್ರಮ, ಅನ್ಯಾಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಕೀಲರಾಗಿದ್ದವರು. ಈ ರೀತಿಯ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸುತ್ತಿರಲಿಲ್ಲ. ಸೋನಿಯಾ, ರಾಹುಲ್‌, ಸುರ್ಜೆವಾಲಾ ಒತ್ತಡದಿಂದಾಗಿ ಒಪ್ಪಿದ್ದಾರೆ ಎಂದು ಕಿಡಿಕಾರಿದರು. https://ainlivenews.com/laser-therapy-soukhy-robotic-ortho-care/ ಈ ತೀರ್ಮಾನ ಇಡೀ ಸಂಪುಟಕ್ಕೆ ಕಪ್ಪು ಚುಕ್ಕೆ, ಡಿಕೆಶಿ ರಕ್ಷಣೆಗಾಗಿಯೇ ವಿಶೇಷ ಸಂಪುಟ ಸಭೆ ನಡೆದಿದೆ. ಎಲ್ಲವನ್ನೂ ರಹಸ್ಯವಾಗಿ ಸಿದ್ಧಪಡಿಸಿಕೊಂಡು ಏಕಾಏಕಿ ಘೋಷಣೆ ಮಾಡಿದ್ದಾರೆ. ನ್ಯಾಯಾಂಗಕ್ಕೆ ಮಣ್ಣೆರಚುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡಿದೆ. ಸಿಬಿಐ ಶೇ.70ರಷ್ಟು ತನಿಖೆ‌ ಮುಗಿಸಿದ ವೇಳೆ ವಾಪಸ್ ಗೆ ನಿರ್ಧಾರ. ಡಿಕೆಶಿ ಸದಸ್ಯರಾಗಿರುವ ಸಂಪುಟದಲ್ಲಿ ಅವರ ಪರ ತೀರ್ಮಾನ, ಡಿಕೆಶಿ ಸಂಪುಟ ಸಭೆಯಲ್ಲಿ ಇರಲಿಲ್ಲ ಎಂಬುದು ಲೆಕ್ಕ ಅಲ್ಲ. ಈ ರೀತಿಯ ಪ್ರಕರಣಗಳಲ್ಲಿ ಹಿಂದೆ ಕೋರ್ಟ್ ಛೀಮಾರಿ ಹಾಕಿದ್ದಿದೆ. ಬಿಜೆಪಿ ಆಡಳಿತದಲ್ಲಿ ಅಕ್ರಮವಾಗಿ ಡಿಕೆಶಿ ಕೇಸ್ ಸಿಬಿಐಗೆ ನೀಡಿದ…

Read More

ಬೆಂಗಳೂರು: ಇಂದು ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಪುಷ್ಪನಮನ ಸಲ್ಲಿಸಿಲಾಯಿತು. ಸಂವಿಧಾನ ದಿನಾಚರಣೆಯ ಅಂಗವಾಗಿ ಇಂದು ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು‌. ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ಸಂವಿಧಾನ ದಿನಾಚರಣೆಯ ಪ್ರಯುಕ್ತ ಬಿಬಿಎಂಪಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಭಾರತದ ಸಂವಿಧಾನ “ಪ್ರಸ್ತಾವನೆ” ಭಾಗ ವನ್ನು ಬೋಧಿಸಿದರು.. ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ. ಹರೀಶ್ ಕುಮಾರ್, ವಲಯ ಆಯುಕ್ತರಾದ ಸ್ನೇಹಲ್, ವಿನೋತ್ ಪ್ರಿಯಾ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಹುಬ್ಬಳ್ಳಿ: ಸಿಬಿಐ, ಇಡಿ, ಐಟಿ ಸಂಸ್ಥೆಗಳನ್ನ ರಾಜಕೀಯ ವಿರೋಧಿಗಳನ್ನ ಹಣಿಯಲಿಕ್ಕೆ ಉಪಯೋಗಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗಂಭೀರ ಸ್ವರೂಪದ ಆರೋಪ ಮಾಡಿದರು. ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಡಿಸಿಎಂ ಡಿ. ಕೆ ಶಿವಕುಮಾರ್ ಅವರ ಮೇಲಿನ ಅಕ್ರಮ ಪ್ರಕರಣ ವಾಪಾಸ್ ಪಡೆಯಲು ಸಚಿವ ಸಂಪುಟದ ಒಪ್ಪಿಗೆ ವಿಚಾರ ಅವರು ಪ್ರತಿಕ್ರಿಯೆ ನೀಡಿದ್ದು ಇಂದು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಡಿ.ಕೆ. ಶಿವಕುಮಾರ್ ಮೇಲಿ‌ನ ಪ್ರಕರಣವನ್ನ ಸಿಬಿಐಗೆ ಕೊಟ್ಟವರು ಯಾರು ಅಂದು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಇದ್ದರು ಅವರೇ ಈ ಪ್ರಕರಣ ಸಿಬಿಐಗೆ ಕೊಟ್ಟವರು ಇಂದು ಕಾಂಗ್ರೆಸ್ ಸರ್ಕಾರದ ಬಂದಿದೆ. ರಾಜ್ಯದಲ್ಲಿ ಸಿದ್ದರಾಮಯ್ಯಾ ಮುಖ್ಯಮಂತ್ರಿ ಆಗಿದ್ದಾರೆ ಸಹಜವಾಗಿಯೇಡಿಸಿಎಂ ಶಿವಕುಮಾರ್ ಮೇಲಿನ ಪ್ರಕರಣ ವಾಪಾಸ್ ಪಡೆದರೆ ಏನು ತಪ್ಪು ಏನು ಇಲ್ ಇದನ್ನು ನಾನು ಸ್ವಾಗತ ಮಾಡುವೆ ಈ ಕುರಿತು ಮಾತನಾಡಲು ಯಾರಿಗೂ ನೈತಿಕತೆ ಇಲ್ಲ. ಪಾರ್ಲಿಮೆಂಟ್ ನಲ್ಲಿ…

Read More

ಬೆಂಗಳೂರು: ಇತ್ತೀಚೆಗೆ ರಾಜ್ಯ ರಾಜಧಾನಿಯಲ್ಲಿ ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಒಂದು ಚೂರು ಯಾಮಾರಿದ್ರೆ ಸಾಕು ಕೋಟಿ ಕೋಟಿ ಗುಳುಂ ಮಾಡಿ ಬಿಡುತ್ತಾರೆ. ಹಾಗೆ  ರಾಜ್ಯ ರಾಜಧಾನಿಯಲ್ಲಿ GST ಅಧಿಕಾರಿ ಹೆಸರಲ್ಲಿ ಕೋಟಿ ಕೋಟಿ ದೋಖಾ ಮಾಡಿರುವ ಘಟನೆ ಪತ್ತೆಯಾಗಿದ್ದು  ಕೋಟಿ ಕೋಟಿ ದೋಖಾ ಹಾಕುತ್ತಿದ್ದ ಯೂಸುಫ್ ಎಂಬಾತನ ವಿರುದ್ದ FIR ದಾಖಲಾಗಿದೆ. ಬಿಜೆಪಿ ನಾಯಕರು ಗೊತ್ತು, ಇನ್ ಕಮ್ ಟ್ಯಾಕ್ಸ್ ಆಫೀಸರ್ ಗಳು ಗೊತ್ತು ಏನೇ ಡೀಲ್ ಇದ್ರು ಕ್ಲಿಯರ್ ಮಾಡ್ತೀನಿ ಅಂತ ಕೋಟ್ಯಾಂತರ ಹಣ ಪಡೆದು ವಂಚನೆ ಮಾಡಿರುವ ಯೂಸೂಫ್ ಯೂಸುಫ್ ವಿರುದ್ದ ಬೆಂಗಳೂರಿನ ಎರಡು ಪೊಲೀಸ್ ಠಾಣೆಯಲ್ಲಿ ವಂಚನೆ ಕೇಸ್ ದಾಖಲಾಗಿದ್ದು  ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲೇ ಎರಡು ಪ್ರತ್ಯೇಕ FIR ದಾಖಲಾಗಿದೆ GST ಅಧಿಕಾರಿ ಹೆಸರಲ್ಲಿ ವಂಚನೆ ಮಾಡಿದ್ದ ಒಂದು ಕೇಸ್ , ಬ್ಯಾಂಕ್ ನಲ್ಲಿ ಲೋನ್ ಕೊಡಿಸೋದಾಗಿ 2.4 ಕೋಟಿ ವಂಚನೆ ಮಾಡಿದ್ದ ಮತ್ತೊಂದು ಕೇಸ್ ಬಿಜೆಪಿ ಹೈಕಮಾಂಡ್ ಗೊತ್ತು, ಮಾಜಿ ಸಿಎಂ ಗೊತ್ತು ಅಂತ…

Read More

ಗದಗ: ಮೆಣಸಿನಕಾಯಿಯನ್ನು ಕದ್ದ ಕಳ್ಳರಿಬ್ಬರಿಗೆ ಗ್ರಾಮಸ್ಥರು ಕದ್ದ ಮೆಣಸಿನಕಾಯಿಯನ್ನು ತಿನ್ನುವಂತೆ ಒತ್ತಾಯಿಸಿ, ಹಿಗ್ಗಾಮುಗ್ಗ ಧರ್ಮದೇಟು ನೀಡಿರುವ ಅಮಾನವೀಯ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಿವಣ್ಣ ಅಂಗಡಿ ಹಾಗೂ ಮಂಜುನಾಥ ಗೌಡರ ಮೆಣಸಿನಕಾಯಿ ಕದ್ದ ಕಳ್ಳರು. ಮೆಣಸಿನಕಾಯಿಯನ್ನು ಕದ್ದಿರುವ ವಿಚಾರ ತಿಳಿಯುತ್ತಲೇ ಗ್ರಾಮಸ್ಥರು ಅವರಿಬ್ಬರನ್ನು ಹಿಡಿದು, ಕದ್ದ ಮೆಣಸಿನಕಾಯಿ ಮೂಟೆಯನ್ನು ಹೊರಿಸಿ, ಊರಿಡೀ ಮೆರವಣಿಗೆ ಮಾಡಿದ್ದಾರೆ. ಬಳಿಕ ಇಬ್ಬರಿಗೂ ಕದ್ದ ಮೆಣಸಿನಕಾಯಿಗಳನ್ನು ಸ್ಥಳದಲ್ಲೇ ತಿನ್ನುವಂತೆ ಒತ್ತಾಯಿಸಿದ್ದಾರೆ. ತಿನ್ನದೇ ಹೋದರೆ ಪೊಲೀಸರಿಗೆ ಕಂಪ್ಲೆಂಟ್ ಕೊಡುವುದಾಗಿ ಎಚ್ಚರಿಸಿದ್ದಾರೆ. ಈ ವೇಳೆ ಆರೋಪಿಗಳಿಬ್ಬರು ತಮ್ಮನ್ನು ಬಿಟ್ಟುಬಿಡುವಂತೆ ಗ್ರಾಮಸ್ಥರಲ್ಲಿ ಕೈಮುಗಿದು ಕೇಳಿಕೊಂಡಿದ್ದಾರೆ. ಇಷ್ಟಾದರೂ ಬಿಡದ ಗ್ರಾಮಸ್ಥರು ಇಬ್ಬರಿಗೂ ಧರ್ಮದೇಟು ನೀಡಿ, ಕಂಬಕ್ಕೆ ಕಟ್ಟಿಹಾಕಿ, ಹಿಗ್ಗಾಮುಗ್ಗ ಥಳಿಸಿದ್ದಾರೆ. ಗ್ರಾಮಸ್ಥರು ಅಮಾನವೀಯವಾಗಿ ವರ್ತಿಸಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

Read More

ಗದಗ: ಊರಲ್ಲಿ, ಓಣಿಯಲ್ಲಿ, ಶಾಲಾ, ಕಾಲೇಜಿನಲ್ಲಿ ನಲ್ಲಿ ಅನ್ಯ ಧರ್ಮದ ಯುವಕರ ಜೊತೆ ಪ್ರೀತಿ, ಪ್ರೇಮ, ಸ್ನೇಹದ ಬಲೆಗೆ ಬಿಳ್ಳುವುದಿಲ್ಲ, ಅನ್ಯ ಧರ್ಮದವರ ಸ್ನೇಹ, ಪ್ರೀತಿ ಒಪ್ಪಲ್ಲ, ಅನ್ಯ ಧರ್ಮದ ಯುವಕ ಪ್ರೀತಿ, ಪ್ರೇಮ ಅಂತ ಬೆನ್ನುಬಿದ್ದರೇ ತಂದೆ-ತಾಯಿ ಗಮನಕ್ಕೆ ತರುತ್ತೇನೆ ಅಥವಾ ನಾನೇ ಅಂಥವರಿಗೆ ಬುದ್ಧಿ ಕಲಿಸುತ್ತೇನೆ… ಇದು ಲವ್‌ ಜಿಹಾದ್‌ಗೆ ಒಳಗಾಗದಂತೆ ಗದಗದ ಎಸ್‌ಎಸ್‌ಕೆ ಸಮಾಜದ ಜನ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಪರಿ. ರಾಜ್ಯದಲ್ಲಿ ಲವ್ ಜಿಹಾದ್ ವಿಚಾರ ಮತ್ತೆ ಸದ್ದು ಮಾಡ್ತಿದ್ದು, ಮತ್ತೆ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಆರೋಪಗಳು ಕೇಳಿಬರುತ್ತಿವೆ. ಈ ನಡುವೆ ಲವ್ ಜಿಹಾದ್‌ಗೆ ಒಳಗಾಗದಂತೆ ದೇವರ ಹೆಸರಿನಲ್ಲಿ ಸಮಾಜದ ಜನ ಪ್ರಮಾಣ ವಚನ ಸ್ವೀಕರಿಸಿರುವುದು ಗಮನ ಸೆಳೆದಿದೆ.

Read More

ಬೆಂಗಳೂರು: ಕಾಂಗ್ರೆಸ್ ನ ಧ್ಯೇಯ ಏನು ಅಂದರೆ ಜನರಿಗೆ ನ್ಯಾಯ ಕೊಡಬೇಕು ಎಂಬುದು ಅಲ್ಲ ನೆಹರು ಕುಟುಂಬದ ಕಟ್ಟ ಕಡೆಯ ಸದಸ್ಯನಿಗೂ ಅಧಿಕಾರ ಸಿಗಬೇಕೆಂಬುದು ಕಾಂಗ್ರೆಸ್ ನಾಯಕರ ಬಾಯಲ್ಲಿ ಮಾತ್ ಎತ್ತಿದ್ರೆ ಸಾಕು ಅಂಬೇಡ್ಕರ್ ಹೆಸರು ಪಠಣ ಮಾಡ್ತಾರೆ ಅಂಬೇಡ್ಕರ್ ರವರಿಗೆ ಗೌರವ ರೀತಿ ಶವ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ ಇವಾಗ ಅಂಬೇಡ್ಕರ್ ಹೆಸರು ಹೇಳೋಕೆ ನಿಜವಾಗಿಯೂ ನೈತಿಕತೆ ಇದೆಯಾ..? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿ ಕಾರಿದರು. https://ainlivenews.com/laser-therapy-soukhy-robotic-ortho-care/ ನಗರದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ಮಾರಕ ನಿರ್ಮಾಣ ಮಾಡುವ ಯೋಗ್ಯತೆ ಕಾಂಗ್ರೆಸ್ಸಿಗೆ ಇರಲಿಲ್ವಾ ಕಾಂಗ್ರೆಸ್ ನವರಿಂದ ಅಂಬೇಡ್ಕರ್ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಲ್ಲಾ ಸಮಾಜಗಳನ್ನು ಮತ ಬ್ಯಾಂಕ್ ಗೆ ಉಪಯೋಗ ಮಾಡಿಕೊಂಡರೇ ವಿನಹ ಆ ಸಮಾಜಗಳಿಗೆ ಯಾವತ್ತಿಗೂ ನ್ಯಾಯ ಕೊಟ್ಟಿಲ್ಲ ಅಂಬೇಡ್ಕರ್ ರವರ ಆಶಯವನ್ನು ಅನುಷ್ಠಾನ ಮಾಡ್ತಿರೋದು ಪ್ರಧಾನಿ ನರೇಂದ್ರ ಮೋದಿಯವರು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಈ ಸಂವಿಧಾನ ಉಳಿಸುವಂತ ಮಹತ್ತರ ಜವಾಬ್ದಾರಿ…

Read More

ಬೆಂಗಳೂರು : ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದ ಪೂರ್ವ ದ್ವಾರದ  ಬಳಿ ಸಂವಿಧಾನ ದಿನಾಚರಣೆಯ ಪ್ರಯುಕ್ತ ಡಾ. ಬಿ ಆರ್  ಅಂಬೇಡ್ಕರ್ ರವರ ಪ್ರತಿಮೆಗೆ ಪುಷ್ಪರ್ಚನೆ ಮಾಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣ ದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ಭಾರತದ ಸಂವಿಧಾನ  ಪ್ರಸ್ತಾವನೆ ಭಾಗವನ್ನು ಬೋಧಿಸಿದರು. ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಕೈಗೊಳ್ಳಲು ಕೈಗೊಳ್ಳಲು ತೆಳಂಗಾಣಕ್ಕೆ ತೆರಳುತ್ತಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.

Read More

ಅದಿತಿ ಪ್ರಭುದೇವ ಹಾಗೂ ಪವನ್ ತೇಜ್ ನಾಯಕ – ನಾಯಕಿಯಾಗಿ‌ ನಟಿಸಿರುವ, ವಿ.ಚಂದ್ರು ನಿರ್ಮಾಣದ ಹಾಗೂ ಜೀವ ನಿರ್ದೇಶನದ “ಅಲೆಕ್ಸಾ” ಚಿತ್ರದ ಟ್ರೇಲರ್ ಹಾಗೂ ಆಡಿಯೋ (ಹಾಡುಗಳು) ಇತ್ತೀಚಿಗೆ ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಭಾ.ಮ.ಹರೀಶ್, ಹಿರಿಯ ಕಲಾವಿದರಾದ ಸುಂದರರಾಜ್, ಪ್ರಮೀಳಾ ಜೋಷಾಯಿ, ಐಪ್ಲೆಕ್ಸ್ ಆಡಿಯೋ ಸಂಸ್ಥೆಯ ಮೋಹನ್ ಮುಂತಾದ ಗಣ್ಯರು ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು “ಅಲೆಕ್ಸಾ” ಚಿತ್ರದ ಬಗ್ಗೆ ಮಾಹಿತಿ ನೀಡಿದರು. “ಅಲೆಕ್ಸಾ” ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಚಿತ್ರ. “ಬುಜಂಗ” ಚಿತ್ರದ ನಂತರ ನಾನು ನಿರ್ದೇಶಿಸಿರುವ ಎರಡನೇ ಚಿತ್ರವಿದು. ಚಿತ್ರತಂಡದ ಸಹಕಾರದಿಂದ “ಅಲೆಕ್ಸಾ” ಚೆನ್ನಾಗಿ ಮೂಡಿಬಂದಿದೆ. ಡಿಸೆಂಬರ್ 29 ನಮ್ಮ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ. ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ಎಂದರು ನಿರ್ದೇಶಕ ಜೀವ. ನಾನು ಈ ಚಿತ್ರದಲ್ಲಿ ಇನ್ವೆಸ್ಟಿಕೇಶನ್ ಪೊಲೀಸ್ ಆಫೀಸರ್. “ಅಲೆಕ್ಸಾ” ನನ್ನ ಪಾತ್ರದ…

Read More

ಬೀದರ್: ಉಡಬಾಳದ ಶ್ರೀ ರೇಣುಕಾ ಯಲ್ಲಮ್ಮ ತಾಯಿಯ ಪವಾಡಗಳನ್ನು ನಾನು ಕೂಡ ಕಂಡಿದ್ದೇನೆ. ತಾಯಿಯ ಪವಾಡಗಳು ಬಹಳಷ್ಟು ಇವೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಡಬಾಳ ಗ್ರಾಮದಲ್ಲಿ ನಡೆದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಗೋಪೂರ ಉದ್ಘಾಟನಾ ಹಾಗೂ ಕಳಸಾರೋಹಣ ಮತ್ತು ಲಕ್ಷ ದಿಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೇಣುಕಾ ಯಲ್ಲಮ್ಮ ದೇವಿಯ ಪವಾಡಗಳ ಬಗ್ಗೆ ತಿಳಿಸಿದರು.2013ರ ಫೆಬ್ರುವರಿ ತಿಂಗಳಲ್ಲಿ ತಾಯಿಯ ಜಾತ್ರೆ ಇತ್ತು. ಕ್ಷೇತ್ರದ ಶಾಸಕನಾಗಿ ನಾನು ಜಾತ್ರೆಯಲ್ಲಿ ಪಾಲ್ಗೊಂಡಿದ್ದೆ. ಅಂದು ತಾಯಿಯ ಗೋಪೂರ ಕಟ್ಟಿಸಬೇಕೆಂದು ಗ್ರಾಮಸ್ಥರು ಹೇಳಿದ್ದರು. ಆಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜಕಾರಣಿಯೊಬ್ಬರು ಗೋಪೂರ ನಾನು ಕಟ್ಟಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು. https://ainlivenews.com/upi-id-with-no-transaction-for-1-year-upi-number-de-activate-reason/ ಮೂರು ತಿಂಗಳ ಬಳಿಕ ನಡೆದ ಚುನಾವಣೆಯಲ್ಲಿ ಗೋಪೂರ ಕಟ್ಟಿಸಿಕೊಡುವ ಭರವಸೆ ನೀಡಿದ್ದ ರಾಜಕಾರಣಿಯೇ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ 2013…

Read More