Author: AIN Author

ನಿಂಬೆ ನೀರನ್ನು (Lemon water) ಡಿಟಾಕ್ಸ್ ಪಾನೀಯ ಎಂದು ಕರೆಯಲಾಗುತ್ತದೆ. ಇದು ತೂಕವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ನಿಂಬೆ ನೀರು, ಹೆಚ್ಚಿನ ಪ್ರಮಾಣದ ಆಮ್ಲವನ್ನು ಹೊಂದಿರುತ್ತದೆ. ಹೀಗಾಗಿಯೇ ಪ್ರತಿದಿನ ನಿಂಬೆ ಬೆರೆಸಿದ ನೀರನ್ನು ಕುಡಿಯೋದ್ರಿಂದ ಆರೋಗ್ಯದಲ್ಲಿ (Health) ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅವು ಯಾವುವು? ದೇಹದಲ್ಲಿ ನೀರಿನ ಕೊರತೆ ನಿಂಬೆ ರಸವು ದೇಹ (Body)ವನ್ನು ಹೈಡ್ರೇಟ್ ಮಾಡುತ್ತದೆ. ಆದರೆ ನೀವು ಇದನ್ನು ನಿಯಮಿತವಾಗಿ ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ, ಅದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಂಬೆರಸ ಜಾಸ್ತಿ ಕುಡಿದರೆ ಆಗಾಗ ಮೂತ್ರ (Urine) ವಿಸರ್ಜನೆಯಾಗುತ್ತದೆ. ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ.  ಜೀರ್ಣಕಾರಿ ಸಮಸ್ಯೆಗಳು ನಿಂಬೆ ರಸವನ್ನು ಕುಡಿಯುವುದರಿಂದ ಆಹಾರವು (Food) ವೇಗವಾಗಿ ಜೀರ್ಣವಾಗುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ ಹೆಚ್ಚು ನಿಂಬೆ ರಸವನ್ನು ಕುಡಿಯುವುದು ವಾಕರಿಕೆ ಮತ್ತು ವಾಯು ಮುಂತಾದ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.  ಎದೆಯುರಿ ಅಗತ್ಯಕ್ಕಿಂತ ಹೆಚ್ಚು ನಿಂಬೆ ರಸ ಕುಡಿದರೆ ಎದೆಯುರಿ…

Read More

ರಾಂಚಿ: ಭಾರತದ ಮಾಜಿ ಕ್ರಿಕೆಟಿಗ ಹಾಗೂ ಐಪಿಎಲ್‌ನ ಸಿಎಸ್‌ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಬಳಸಿಕೊಂಡು ಮಗುವೊಂದನ್ನು ಅಪಹರಣ ಮಾಡಿ ಆ ಮಗುವಿನ ತಾಯಿಯನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಧೋನಿ ತವರು ಜಿಲ್ಲೆ ಜಾರ್ಖಂಡ್‌ನ ರಾಜಧಾನಿಯಲ್ಲೇ ಈ ಆಘಾತಕಾರಿ ಘಟನೆ ನಡೆದಿದೆ. ಧೋನಿ ಬಡವರಿಗೆ ಹಣ ಮತ್ತು ಮನೆಗಳನ್ನು ಹಂಚುತ್ತಿದ್ದಾರೆ ಎಂದು ಅಪಹರಣಕಾರರು ಮಗುವಿನ ತಾಯಿಯನ್ನು ನಂಬಿಸಿ, ತಮ್ಮ ಬಲೆಗೆ ಬೀಳಿಸಿಕೊಂಡಿದ್ದಾರೆ ಎಂದು ಮಹಿಳೆ ದೂರು ನೀಡಿರುವ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.  ಮೂರು ದಿನಗಳ ಹಿಂದೆ ಮಧುದೇವಿ ತನ್ನ ಇಬ್ಬರು ಮಕ್ಕಳೊಂದಿಗೆ ರಾಂಚಿಯ ಸ್ಟಾಲ್‌ನಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಧೋನಿ ಬಡ ಜನರಿಗೆ ಹಣ ನೀಡುತ್ತಿದ್ದಾರೆ ಎಂದು ಹೇಳಿಕೊಂಡು ಬೈಕ್‌ವೊಂದರಲ್ಲಿ ಬಂದ ಪುರುಷ ಮತ್ತು ಮಹಿಳೆ ಆಕೆಯ ಬಳಿಗೆ ಬಂದರು. ಅದನ್ನು ನಂಬಿದ ಮಹಿಳೆ, ಎಲ್ಲಿ ಈ ಹಣ ವಿತರಣೆ ನಡೆಯುತ್ತಿದೆಯೋ ಅಲ್ಲಿಗೆ ಕರೆದುಕೊಂಡು ಹೋಗಬಹುದೇ ಎಂದು ಕೇಳಿದ್ದಾರೆ. ಇದಕ್ಕೆ ಒಪ್ಪಿದ ದ್ವಿಚಕ್ರ…

Read More

ಗುರು ನಾನಕ ಜಯಂತಿ,ಪೂರ್ಣಿಮಾ ಸೂರ್ಯೋದಯ: 06.24 AM, ಸೂರ್ಯಾಸ್ತ : 05.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಕಾರ್ತೀಕ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಹುಣ್ಣಿಮೆ  02:45 PM ತನಕ ನಂತರ ಪಾಡ್ಯ ನಕ್ಷತ್ರ: ಇವತ್ತು ಕೃತ್ತಿಕ 01:35 PM ತನಕ ನಂತರ ರೋಹಿಣಿ ಯೋಗ: ಇವತ್ತು ಪರಿಘ 01:37 AM ತನಕ ನಂತರ ಶಿವ 11:39 PM ತನಕ ನಂತರ ಸಿದ್ದಿ ಕರಣ: ಇವತ್ತು ವಿಷ್ಟಿ 03:16 AM ತನಕ ನಂತರ ಬವ 02:45 PM ತನಕ ನಂತರ ಬಾಲವ ರಾಹು ಕಾಲ: 07:30 ನಿಂದ 09:00 ವರೆಗೂ ಯಮಗಂಡ: 10:30 ನಿಂದ 12:00 ವರೆಗೂ ಗುಳಿಕ ಕಾಲ:01:30 ನಿಂದ 03:00 ವರೆಗೂ ಅಮೃತಕಾಲ: 11.14 AM to 12.48 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:41 ನಿಂದ ಮ.12:25 ವರೆಗೂ ಮೇಷ ರಾಶಿ: ಕಂಕಣ ಬಲದ ಸಿಹಿ ಸುದ್ದಿ ಹಂಚಿಕೊಳ್ಳುವಿರಿ,…

Read More

ಹುಬ್ಬಳ್ಳಿ:- ಸಿಬಿಐ, ಇಡಿ, ಐಟಿ ಸಂಸ್ಥೆಗಳನ್ನ ರಾಜಕೀಯ ವಿರೋಧಿಗಳನ್ನ ಹಣಿಯಲಿಕ್ಕೆ ಉಪಯೋಗಿಸಲಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಮೇಲಿನ ಅಕ್ರಮ ಪ್ರಕರಣ ವಾಪಾಸ್ ಪಡೆಯಲು ಸಚಿವ ಸಂಪುಟದ ಒಪ್ಪಿದ್ದು ಸ್ವಾಗತಾರ್ಹ. ಇಂದು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಡಿಕೆ ಶಿವಕುಮಾರ್ ಮೇಲಿ‌ನ ಪ್ರಕರಣವನ್ನ ಸಿಬಿಐಗೆ ಕೊಟ್ಟವರು ಯಾರು?, ಅಂದು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಇದ್ದರು. ಅವರೇ ಈ ಪ್ರಕರಣ ಸಿಬಿಐಗೆ ಕೊಟ್ಟವರು. ಇಂದು ಕಾಂಗ್ರೆಸ್ ಸರ್ಕಾರದ ಬಂದಿದೆ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ ಸಹಜವಾಗಿಯೇ ಡಿಸಿಎಂ ಶಿವಕುಮಾರ್ ಮೇಲಿನ ಪ್ರಕರಣ ವಾಪಾಸ್ ಪಡೆದರೆ ಏನು ತಪ್ಪು?. ಯಾವುದೇ ತಪ್ಪಿಲ್ಲ ಎಂದು ಅವರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಪಾರ್ಲಿಮೆಂಟ್ ನಲ್ಲಿ ಆದಾನಿ ವಿರುದ್ಧ ಮಾತಾಡಿದರೆ ನೋಟಿಸ್ ಕೊಡುತ್ತಾರೆ. ಯಾವ ಆಧಾರದ ಮೇಲೆ ಕೊಡುತ್ತಾರೆ ಯಾವುದೇ ಪ್ರಕರಣ, ದೂರು…

Read More

ತುಮಕೂರು : -ಒಂದೇ ಮನೆಯ ಐವರು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರಿನ ಸದಾಶಿವನಗರದಲ್ಲಿ ಘಟನೆ ಜರುಗಿದೆ. ಪತಿ ಪತ್ನಿ ಮೂವರು ಮಕ್ಕಳು ಆತ್ಮಹತ್ಯೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ..ಸ್ಥಳಕ್ಕೆ ಎಸ್ ಪಿ ಅಶೋಕ್ ಭೇಟಿ ಪರಿಶೀಲನೆ ಮಾಡಿದ್ದಾರೆ. ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ಕೋಲಾರ:- ಸರ್ಕಾರ ಡಿಕೆಶಿ ಕೈಗೊಂಬೆಯಾಗಿದೆ ಎಂದು ಮಾಜಿ ಸಚಿವ ಶ್ರೀ ರಾಮುಲು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಇತಿಹಾಸದಲ್ಲಿ ಯಾವುದೇ ಸರ್ಕಾರಗಳು ಈ ತರಹದ ನಿರ್ಧಾರ ಮಾಡಿಲ್ಲ. ಕಾಂಗ್ರೆಸ್‌ನ ಈ ನಿರ್ಧಾರದಿಂದ ಕಾನೂನು ಮತ್ತು ರಾಜಕಾರಣಕ್ಕೆ ಸಂಘರ್ಷ ಆಗುವಂತೆ ಮಾಡಿದೆ. ತಪ್ಪು ಮಾಡಿಲ್ಲ ಅನ್ನೋ ವಿಶ್ವಾಸ ಡಿಕೆಶಿ ಗೆ ಇರಬೇಕಾಗಿತ್ತು. ಆದರೆ ಅವರು ತಪ್ಪು ಮಾಡಿದ್ದರಿಂದಲೇ ಇಂಥ ನಿರ್ಧಾರ ಮಾಡಿದ್ದಾರೆ. ಸರ್ಕಾರವನ್ನು ಕೈಗೊಂಬೆಯಂತೆ ಡಿಕೆಶಿ ಆಡಿಸುತ್ತಿದ್ದಾರೆ. ಈ ನಿರ್ಧಾರದಿಂದ ಸರ್ಕಾರಕ್ಕೆ ಘೋರ ಅಪಚಾರವೆಸಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇನ್ನು ಬೆಳಗಾವಿಯಲ್ಲಿ ಮೈತ್ರಿ ಸರ್ಕಾರ ಪತನ ಎಂದು ಆರ್.ಅಶೋಕ್ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರಕಾರಕ್ಕೆ ಜನರು ಬಹುಮತ ನೀಡಿದ್ದಾರೆ. ಆದರೆ ನೆನಪಿಡಿ ಮುಂದಿನ ದಿನಗಳಲ್ಲಿ ಶಾಸಕರನ್ನು ಜನರೇ ಬೆನ್ನಟ್ಟಿ ಕಲ್ಲಲ್ಲಿ ಓಡಿತ್ತಾರೆ. 5 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರ ನಡೆಸಬೇಕು. ಆಗ ಮಾತ್ರ ಸರ್ಕಾರದ ಬಂಡವಾಳ ಜನರಿಗೆ ತಿಳಿಯಲಿದೆ. ಶೇ.25 ರಷ್ಟು ಜನರಿಗೆ ಆಶ್ವಾಸನೆಗಳು ತಲುಪಿಲ್ಲ. ಅನುದಾನ ಇಲ್ಲದೆ ಶಾಸಕರು…

Read More

ಹೈದರಾಬಾದ್ :- ಕೆಸಿಆರ್‌ ದೇಶದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರ ನಡೆಸುತ್ತಿದ್ದಾರೆ ಎಂದು AICC ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ತೆಲಂಗಾಣಕ್ಕಾಗಿ ಕಾಂಗ್ರೆಸ್‌ ಪಕ್ಷ ಏನು ಮಾಡಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ತೆಲಂಗಾಣಕ್ಕಾಗಿ ಕಾಂಗ್ರೆಸ್‌ ಪಕ್ಷ ಏನು ಮಾಡಿದೆ ಎಂದು ಪ್ರಶ್ನಿಸುವ ಮೊದಲು, ರಾಜ್ಯಕ್ಕಾಗಿ ಬಿಆರ್‌ಎಸ್‌ ನಾಯಕ, ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರು ಏನು ಮಾಡಿದ್ದಾರೆ ಎಂಬುದನ್ನು ಜನರಿಗೆ ಹೇಳಲಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಕೆಸಿಆರ್‌ ಅವರು ದೇಶದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರವನ್ನು ನಡೆಸುತ್ತಿದ್ದಾರೆ. ಹೆಚ್ಚು ಹಣ ಗಳಿಸುವಂತಹ ಖಾತೆಗಳು ತಮ್ಮ ಕುಟುಂಬಸ್ಥರ ಬಳಿಯೇ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲಿಯೇ ಪಕ್ಷ ನೀಡಿರುವ ಆರು ಭರವಸೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ರಾಹುಲ್‌ ಹೇಳಿದರು. ‘ತೆಲಂಗಾಣ ಚುನಾವಣೆಯಲ್ಲಿ ಊಳಿಗಮಾನ್ಯ ಪದ್ಧತಿಯನ್ನು ಅನುಸರಿಸುವ ಸರ್ಕಾರ ಮತ್ತು ಜನರ ಪರವಾಗಿರುವ ಸರ್ಕಾರದ ನಡುವೆ ಹೋರಾಟ ನಡೆಯಲಿದೆ ಎಂದರು.

Read More

ಬೆಂಗಳೂರು:- ರಾಜ್ಯ ಸರ್ಕಾರದ ವಿರುದ್ಧ ಕಾನೂನು ಸಮರ ನಡೆಸಲು ನಮ್ಮ ಅಭ್ಯಂತರವಿಲ್ಲ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಡಿ.ಕೆ.ಶಿವಕುಮಾರ ಅವರ ವಿರುದ್ಧ ಸಿಬಿಐ ತನಿಖೆಗೆ ಒಪ್ಪಿಸುವಾಗ ಬಿಜೆಪಿ ಸರ್ಕಾರ ಇದ್ದಾಗ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಅಡ್ವೋಕೇಟ್ ಅವರಿಂದ ಕಾನೂನು ಸಲಹೆ ಪಡೆದಿದ್ದರು. ಆದರೆ ನಮ್ಮ ಸರ್ಕಾರ ಅಡ್ವೋಕೇಟ್ ಜನರಲ್ ಅವರ ಸಲಹೆ ಪಡೆದೇ ಕಾನೂನು ಅನ್ವಯವೇ ಪ್ರಕರಣವನ್ನು ಹಿಂಪಡೆಯಲು ನಿರ್ಧರಿಸಿದೆ ಎಂದು ವಿವರಿಸಿದರು. ರಾಜ್ಯ ಸರ್ಕಾರದದ ವಿರುದ್ಧ ಸಿಬಿಐ ಕಾನೂನು ಸಮರ ನಡೆಸಲು ನಮ್ಮ ಅಭ್ಯಂತರ ಇಲ್ಲ. ಹಲವು ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಹಾಗೂ ಸಿಬಿಐ ಕಾನೂನು ಸಮರ ನಡೆದಿದೆ ಎಂದ ಸಚಿವ ಎಂ.ಬಿ.ಪಾಟೀಲ್, ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತ್ರ ಕೋರ್ಟ್ ಮೊರೆ ಹೋಗುತ್ತಾರಾ ಎಂದು ಕುಟುಕಿದರು. ವಿರೋಧ ಪಕ್ಷಗಳ ನಾಯಕರ ಆತ್ಮಸ್ಥೈರ್ಯ ಕುಗ್ಗಿಸುವುದಕ್ಕಾಗಿ ಕೇಂದ್ರ ಸರ್ಕಾರ ಸಿಬಿಐ, ಐಟಿ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದರ…

Read More

ಸ್ಟಾರ್‌ ಆಲ್‌ರೌಂಡರ್‌ಗಳನ್ನು ಕೈಬಿಟ್ಟಿರುವ ಆರ್‌ಸಿಬಿಗೆ ಹಿನ್ನಡೆ ಆಗಬಹುದು ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಡಿಸೆಂಬರ್‌ 19 ರಂದು ನಡೆಯಲಿರುವ 2024ರ ಐಪಿಎಲ್‌ ಮಿನಿ ಹರಾಜಿನ ಹಿನ್ನೆಲೆಯಲ್ಲಿ ನಮ್ಮ ಆರ್‌ಸಿಬಿ ತಂಡ ಪ್ರಮುಖ ಇಬ್ಬರು ಆಟಗಾರರನ್ನು ಬಿಡುಗಡೆಗೊಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಿಸ್ಟರ್‌ 360 ಖ್ಯಾತಿಯ ಎಬಿ ಡಿವಿಲಿಯರ್ಸ್‌, ಇದು ಆರ್‌ಸಿಬಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದಿದ್ದಾರೆ. ಹರ್ಷಲ್‌ ಪಟೇಲ್‌ ಹಾಗೂ ವನಿಂದು ಹಸರಂಗ ಅವರನ್ನು ಬಿಡುಗಡೆಗೊಳಿಸಿದದ್ದು, ತಂಡಕ್ಕೆ ಭಾರಿ ಹಿನ್ನಡೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆರ್‌ಸಿಬಿ 2022ರ ಮೆಗಾ ಹರಾಜಿನಲ್ಲಿ 10.75 ಕೋಟಿ ಖರ್ಚು ಮಾಡಿ ಹರ್ಷಲ್‌ ಪಟೇಲ್‌ ಹಾಗೂ ವನಿಂದು ಹಸರಂಗ ಅವರನ್ನು ಖರೀದಿಸಿತ್ತು. ಹಸರಂಗ 26 ವಿಕೆಟ್‌ ಪಡೆದು ಉತ್ತಮ ಪ್ರದರ್ಶನ ತೋರಿದರು. 2021ರಲ್ಲಿ ಅಮೋಘ ಬೌಲಿಂಗ್‌ ಮೂಲಕ ಗಮನ ಸೆಳೆದಿದ್ದ ಪರ್ಪಲ್‌ ಪಟೇಲ್‌ ಕಳೆದೆರೆಡು ಆವೃತ್ತಿಯಲ್ಲಿ ನೀರಸ ಪ್ರದರ್ಶನ ತೋರಿದ್ದರು. ಹಾಗಾಗಿ ಇವರನ್ನು 2024ರ ಐಪಿಎಲ್‌ ಗೂ ಮುನ್ನಾ ಮಿನಿ ಹರಾಜಿನಲ್ಲಿ ಆರ್‌ಸಿಬಿ ತಂಡದಿಂದ ಬಿಡುಗಡೆಗೊಳಿಸಿದೆ. ತಂಡದ ಪರ್ಸ್ ಮೊತ್ತ…

Read More

ಸಾಮಾನ್ಯವಾಗಿ ಎಲ್ಲರಿಗೂ ವಾಸ್ತು ಶಾಸ್ತ್ರದ ಮಹತ್ವ ತಿಳಿದಿರುತ್ತದೆ. ವಾಸ್ತು ಸಲಹೆಗಳ ಮೂಲಕ ಮನೆಯ ಋಣಾತ್ಮಕ ಪರಿಣಾಮಗಳನ್ನು ಸುಲಭವಾಗಿ ನಿವಾರಿಸಬಹುದು ಎಂದು ಹೇಳಲಾಗುತ್ತದೆ. ಆದರೆ, ಕೆಲವೊಮ್ಮೆ ನಮ್ಮ ಜೀವನದಲ್ಲಿ ಸಣ್ಣ ತಪ್ಪುಗಳು ದೊಡ್ಡ ವಾಸ್ತು ದೋಷಗಳಿಗೆ ಕಾರಣವಾಗುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಮೇಲೆ ಕುಳಿತು ಆಹಾರವನ್ನು ಸೇವಿಸಬಾರದು. ಆಹಾರವನ್ನು ಯಾವಾಗಲೂ ಡೈನಿಂಗ್ ಟೇಬಲ್ ಅಥವಾ ನೆಲದ ಮೇಲೆ ಕುಳಿತು ತಿನ್ನಬೇಕು. ಮಲಗುವ ಕೋಣೆಯಲ್ಲಿ ಅಥವಾ ಹಾಸಿಗೆಯ ಮೇಲೆ ಕುಳಿತು ಊಟ ಮಾಡಿ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ . ಅಲ್ಲದೆ ನಿದ್ರೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ರಾತ್ರಿ ಮಲಗುವ ಮುನ್ನ ನಿಮ್ಮ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ. ಹಾಗೆಯೇ ಪಾತ್ರೆಗಳನ್ನು ತೊಳೆದಂತೆ ನೋಡಿಕೊಳ್ಳಿ, ಹಾಗೆ ಮಾಡದವರಿಗೆ ತಾಯಿ ಅನ್ನಪೂರ್ಣ ಕೋಪ ಬರುತ್ತಾಳೆ. ಅಲ್ಲದೆ ಇವರ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಿರುವುದಿಲ್ಲ . ವಾಸ್ತು ಶಾಸ್ತ್ರದ ಪ್ರಕಾರ, ಸಂಜೆ ಮಲಗುವುದನ್ನು ಅತ್ಯಂತ ಅಶುಭವೆಂದು ಪರಿಗಣಿಸಲಾಗುತ್ತದೆ. ಇದನ್ನು ಮಾಡುವವರು ಯಾವಾಗಲೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ, ಅವರ ಮನೆಯಲ್ಲಿ…

Read More