Author: AIN Author

ಬೆಂಗಳೂರು:- ವಿವಿಧ ಸಂಘಟನೆಗಳಿಂದ ರಾಜಧಾನಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆಗೆ ಮತ್ತು ರಾಜಭವನ ಚಲೋಗೆ ಇಂದು ಕರೆ ನೀಡಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಇಂದು ವಾಹನಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದ್ದು, ಈ ಕೆಳಗಿನಂತಿದೆ. ಬದಲಿ ಮಾರ್ಗ ಇಲ್ಲಿದೆ ಎಸ್‌ಬಿಎಂ ಸರ್ಕಲ್‌ನಿಂದ ಫ್ರೀಡಂಪಾರ್ಕ್‌ ಮಾರ್ಗದಲ್ಲಿ ಹೋಗುವವರು, ಮಹಾರಾಣಿ ಕಾಲೇಜು ಅಂಡರ್‌ಪಾಸ್‌ ಮೂಲಕ ಸಂಚರಿಸಬೇಕು. ಫ್ರೀಡಂಪಾರ್ಕ್‌ನಿಂದ ಕನಕದಾಸ ವೃತ್ತದ ಕಡೆ ಹೋಗಲು ಅವಕಾಶವಿಲ್ಲ. ಇನ್ನು ಕೋಡೆ ಜಂಕ್ಷನ್ ಕಡೆಯಿಂದ ಕೆ.ಆರ್.ಸರ್ಕಲ್‌ಗೆ ಹೋಗುವವರು, ಹಳೇ ಜೆಡಿಎಸ್ ಕಚೇರಿಯ ರಸ್ತೆ ಮೂಲಕ ಸಂಚರಿಸಲು ಸೂಚಿಸಲಾಗಿದೆ. ಸುಬ್ಬಣ್ಣ ಜಂಕ್ಷನ್‌ನಿಂದ ಎಂಟಿಆರ್‌ ಜಂಕ್ಷನ್‌ ಕಡೆ ಹೋಗುವವರಿಗೆ ದ್ವಿಮುಖ ಸಂಚಾರಕ್ಕೆ ಸಂಚಾರಿ ಪೊಲೀಸರು ಅವಕಾಶ ನೀಡಲಾಗಿದೆ. ಇನ್ನು ಕೋಡೆ ಜಂಕ್ಷನ್, ಮಹಾರಾಣಿ ಜಂಕ್ಷನ್, ವೈ.ರಾಮಚಂದ್ರ ರಸ್ತೆ, ಕಾಳಿದಾಸ, ಪ್ಯಾಲೆಸ್ ರಸ್ತೆ, ಕೆ.ಜಿ.ರಸ್ತೆಗಳಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Read More

ಬೆಂಗಳೂರು:- ಕರ್ನಾಟಕದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯ ಆರ್ಭಟ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ತಾಳಗುಪ್ಪ, ಗುಬ್ಬಿ, ಕೊಣನೂರು, ಬೆಳ್ತಂಗಡಿಯಲ್ಲಿ ಭಾರಿ ಮಳೆಯಾಗಿದೆ. ವಿಜಯಪುರದಲ್ಲಿ 17.1 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲೂ ಮೋಡಕವಿದ ವಾತಾವರಣವಿರಲಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ. ಎಚ್​ಎಎಲ್​ನಲ್ಲಿ 25.3 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 16.7 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 26.7 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 18.8 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 25.9 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 18.4 ಡಿಗ್ರಿ ಸೆಲ್ಸಿಯಸ್​…

Read More

ಪುತ್ತೂರು : ತೋಟಕ್ಕೆ ಬಳಸುವ ವಿಷಕಾರಿ ಕೀಟನಾಶಕ ಸೇವಿಸಿದ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತ ಯುವತಿ ನಿಶಾ (17) ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಸಂಪ್ಯ ಬೈಲಾಡಿ ನಿವಾಸಿ ಮಂಜಪ್ಪ ಗೌಡರ ಪುತ್ರಿ ಎಂದು ಗುರುತಿಸಲಾಗಿದೆ. ನಿಶಾ ಬಿ ಎಮ್ ರವರು ಪುತ್ತೂರು ನಗರ ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಹದಿನೈದು ದಿನಗಳ ಹಿಂದೆ ಬಿಹಾರದಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ (ಓಟ ಸ್ಪರ್ಧೆ) ಭಾಗವಹಿಸಿ ಅಲ್ಲಿ ಯಾವುದೇ ಬಹುಮಾನ ದೊರೆಯದೇ ಹಿಂತಿರುಗಿ ಮನೆಗೆ ಬಂದವರು ಬೇಸರದಲ್ಲಿದ್ದು ನ.14 ರಂದು ವಿಪರೀತವಾಗಿ ವಾಂತಿ ಮಾಡುತ್ತಿದ್ದು, https://ainlivenews.com/upi-id-with-no-transaction-for-1-year-upi-number-de-activate-reason/  ಇದರಿಂದ ಅಸ್ವಸ್ಥಳಾದವಳನ್ನು ಈ ಬಗ್ಗೆ ವಿಚಾರಿಸಿದಾಗ ನ.13 ರಂದು ಸಂಜೆ ತೋಟಕ್ಕೆ ಬೀಡುವ ಕೀಟನಾಶಕವನ್ನು ಸೇವಿಸಿರುವುದಾಗಿ ತಿಳಿಸಿದ್ದು, ನಂತರ ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯರಲ್ಲಿ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಖಾಸಗಿ ಆಸ್ಪತ್ರೆಯ…

Read More

ದಕ್ಷಿಣದ ಲೇಡಿ ಸೂಪರ್ ಸ್ಟಾರ್ ನಯನತಾರಾ ನಟನೆಗೆ ಕೊಂಚ ವಿರಾಮ ತೆಗೆದುಕೊಂಡು ನಿರ್ದೇಶನಕ್ಕೆ (Directio) ಹಾರಲಿದ್ದಾರೆ. ನಿರ್ದೇಶನ ಅವರ ಕನಸಂತೆ. ಹಾಗಾಗಿ ಶೀಘ್ರದಲ್ಲೇ ಆ ಕನಸನ್ನು ನನಸು ಮಾಡಿಕೊಳ್ಳಲಿದ್ದಾರೆ ಸ್ಟಾರ್ ನಟಿ. ಸಿನಿಮಾ ಯಾವುದು? ಕಥೆ ಏನು? ಯಾವುದನ್ನೂ ಇನ್ನೂ ಬಿಟ್ಟುಕೊಡದ ನಯನತಾರಾ, ಮುಂದಿನ ದಿನಗಳಲ್ಲಿ ಹಲವು ವಿಷಯಗಳು ಬಹಿರಂಗಗೊಳ್ಳಲಿವೆ. ಈ ನಡುವೆ ನಯನತಾರಾ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಖ್ಯಾತ ನಟ ಕಮಲ್ ಹಾಸನ್ ಅವರ ಹೊಸ ಚಿತ್ರಕ್ಕೆ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಇದೇ ಸಿನಿಮಾಗೆ ತ್ರಿಷಾ ನಾಯಕಿ ಎಂದು ಹೇಳಲಾಗಿತ್ತು. ತ್ರಿಷಾ ಬದಲಾಗಿ ಇದೀಗ ನಯನತಾರಾ ಹೆಸರು ಕೇಳಿ ಬಂದಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಈ ಜೋಡಿಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಈಗಲೇ ಕಾತರದಿಂದ ಕಾಯುವಂತಾಗಿದೆ. ಭಾರತೀಯ ಸಿನಿಮಾ ರಂಗದ ಇಬ್ಬರು ದಂತಕಥೆಗಳು ಬರೋಬ್ಬರಿ 36 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ. ನಿರ್ದೇಶಕ…

Read More

ಬೆಂಗಳೂರು : ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಭಾರತೀಯರಿಂದ ಅತಿ ಹೆಚ್ಚು ಬಳಕೆಯಾದ Top 10 ವೆಬ್ ಸೈಟ್​ಗಳ ಪಟ್ಟಿಯನ್ನು ವರ್ಲ್ಡ್​ ಆಫ್​ ಸ್ಟಾಟಿಸ್ಟಿಕ್ಸ್​ ಬಿಡುಗಡೆಯಾಗಿದೆ. ಪ್ರತಿ ತಿಂಗಳಿನಂತೆ ಅಕ್ಟೋಬರ್ ತಿಂಗಳಿನಲ್ಲಿ ಅಂತರ್ಜಾಲದಲ್ಲಿ ಅತಿ ಹೆಚ್ಚು ಸರ್ಚ್ ಆದ ಟಾಪ್ 10​ ವೆಬ್​ ಸೈಟ್​ಗಳನ್ನು ಗೂಗಲ್​ ಬಿಡುಗಡೆಗೊಳಿಸಿದ್ದು ಈ ಪೈಕಿ ಅಂತರ್ಜಾಲದಲ್ಲಿ ಅತಿ ಹೆಚ್ಚು ಬಳಕೆಯಾದ​ ಸರ್ಚ್​ ಎಂಜಿನ್​ ಗಳ ಪೈಕಿ ಗೂಗಲ್​ ಅಗ್ರ ಸ್ಥಾನದಲ್ಲಿದೆ. ಇನ್ನು ಎರಡನೇ ಸ್ಥಾನದಲ್ಲಿ ಯೂಟೂಬ್​ ಮತ್ತು ಮೂರನೇ ಸ್ಥಾನದಲ್ಲಿ ಫೇಸ್​ ಬುಕ್​ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಭಾರತೀಯರು ಅತಿ ಹೆಚ್ಚು ಬಳಕೆ ಮಾಡಲಾದ ಟಾಪ್​ 10 ವೆಬ್ ಸೈಟ್​ಗಳು ಇಂತಿವೆ. 1. google.com 2.Youtube.com 3.Facebook 4.instagram 5.xhamster.desi 6.cricbuzz.com 7.samsung.com 8.ajtak.com 9.xhamster.com 10.whatsapp.com

Read More

ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ಗ್ರಾಹಕರ ಸಾಲಗಳ ನಿಯಮಗಳನ್ನು ಬಿಗಿಗೊಳಿಸಿದ ಬೆನ್ನಲ್ಲೇ ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿ ಸಂಸ್ಥೆಗಳ ಷೇರುಗಳು ಭಾರೀ ಮಾರಾಟದ ಒತ್ತಡ ಎದುರಿಸುತ್ತಿದ್ದು, ಶುಕ್ರವಾರದ ಬೆಳಗಿನ ವಹಿವಾಟಿನಲ್ಲಿ ಶೇ. 7ರಷ್ಟು ತೀವ್ರ ಕುಸಿತ ಕಂಡಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಶೇ. 3.34ರಷ್ಟು ಕುಸಿತ ಕಂಡರೆ, ಆಕ್ಸಿಸ್ ಬ್ಯಾಂಕ್ ಷೇರುಗಳು ಶೇ. 3ರಷ್ಟು ಇಳಿಕೆ ಕಂಡಿವೆ, ಕೆನರಾ ಬ್ಯಾಂಕ್ ಷೇರುಗಳು ಶೇ. 2.67ರಷ್ಟು ಮತ್ತು ಬ್ಯಾಂಕ್ ಆಫ್ ಬರೋಡಾ ಶೇ. 2.31ರಷ್ಟು ಕುಸಿತ ಕಂಡಿವೆ. ಫೆಡರಲ್ ಬ್ಯಾಂಕ್ ಶೇ 1.39, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ. 1.26, ಐಸಿಐಸಿಐ ಬ್ಯಾಂಕ್ ಶೇ. 1.16 ಮತ್ತು ಇಂಡಸ್‌ಇಂಡ್ ಬ್ಯಾಂಕ್ ಶೇ 0.89 ಕೂಡ ಬಿಎಸ್‌ಇಯಲ್ಲಿ ಕುಸಿತ ದಾಖಲಿಸಿವೆ. ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಲ್ಲಿ ಎಸ್‌ಬಿಐ ಕಾರ್ಡ್ಸ್‌ ಆಂಡ್‌ ಪೇಮೆಂಟ್‌ ಸರ್ವೀಸಸ್‌ ಷೇರುಗಳು ಶೇ. 6.70ಯಷ್ಟು ಕುಸಿತ ಕಂಡರೆ, ಉಜ್ಜೀವನ್ ಫೈನಾನ್ಶಿಯಲ್ ಸರ್ವಿಸಸ್ ಶೇ. 5, ಅರ್ಮಾನ್ ಫೈನಾನ್ಶಿಯಲ್ ಸರ್ವಿಸಸ್ ಶೇ. 3.91…

Read More

ಬಿಗ್‌ಬಾಸ್‌ ಈ ಸಲದ ಷೋ 50ನೇ ದಿನವನ್ನು ತಲುಪಿದೆ. ಈ ವಾರದ ‘ಸೂಪರ್ ಸಂಡೆ ವಿಥ್ ಸುದೀಪ್‌’ ಎಪಿಸೋಡ್‌ನಲ್ಲಿ ಐವತ್ತು ದಿನಗಳ ಪಯಣದ ವಿಟಿಯನ್ನೂ ಹಾಕಿ ತೋರಿಸಲಾಗಿದೆ. ಐವತ್ತು ದಿನಗಳ ಕಾಲದ ಏಳುಬೀಳಿನ ಹಾದಿಯನ್ನು ನೋಡಿ ಸ್ಪರ್ಧಿಗಳು ಖುಷಿಪಟ್ಟರು. ನಂತರ ನಾಮಿನೇಷನ್‌ ಲೀಸ್ಟ್‌ನಲ್ಲಿರುವ ಸ್ಪರ್ಧಿಗಳಲ್ಲಿ ಮೊದಲು ನಮ್ರತಾ ಅವರು ಸೇಫ್‌ ಎಂದು ಕಿಚ್ಚ ಘೋಷಣೆ ಮಾಡಿದರು. ನಂತರ ಸೇಫ್‌ ಆಗಿದ್ದು, ತುಕಾಲಿ ಸಂತೋಷ್. ಸ್ನೇಹಿತ್‌ ಕೂಡ ಸೇಫ್‌ ಆದರು. ಆ ಹಂತದಲ್ಲಿ ನಾಮಿನೇಷನ್ ಲೀಸ್ಟ್‌ನಲ್ಲಿ ಉಳಿದವರು ನೀತು ಮತ್ತು ಸಿರಿ. ಅವರಿಬ್ಬರಲ್ಲಿ ಸಿರಿ ಸೇಫ್ ಆಗಿದ್ದಾರೆ ಮತ್ತು ನೀತು ವನಜಾಕ್ಷಿ ಅವರ ಬಿಗ್‌ಬಾಸ್ ಪಯಣ ಈ ಎಪಿಸೋಡ್‌ನೊಂದಿಗೆ ಮುಗಿದಿದೆ. ಬಿಗ್‌ಬಾಸ್‌ ಕನ್ನಡ ಇತಿಹಾಸದಲ್ಲಿಯೇ, ಕ್ಯಾಪ್ಟನ್‌ಷಿಪ್‌ನಲ್ಲಿ ಇದ್ದು, ಎಲಿಮಿನೇಟ್‌ ಆದ ಮೊದಲ ಸ್ಪರ್ಧಿಯಾಗಿ ನೀತು ಹೊರಗೆ ಹೋಗಿದ್ದಾರೆ. ಟ್ರಾನ್ಸ್‌ಜೆಂಡರ್‍ ಸಮುದಾಯದಿಂದ ಬಂದಿರುವ ನೀತು, ‘ನಮ್ಮ ಸಮುದಾಯದವರ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಬಿಗ್‌ಬಾಸ್‌ ವೇದಿಕೆಯ ಮೂಲಕ ಮಾಡುತ್ತೇನೆ’ ಎಂದು ಆರಂಭದಲ್ಲಿಯೇ ಹೇಳಿದ್ದರು. ಹಾಗೆಂದು…

Read More

ಸಿಹಿ ಗೆಣಸು ಚಳಿಗಾಲದಲ್ಲಿ ಹೇರಳವಾಗಿ ದೊರೆಯುತ್ತದೆ. ಈ ವೇಳೆ ಎಲ್ಲರೂ ಬೇಯಿಸಿದ ಸಿಹಿಗೆಣಸು ತಿನ್ನಲು ಇಷ್ಟಪಡುತ್ತಾರೆ. ಸಿಹಿ ಗೆಣಸು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಹಣ್ಣು. ಹೊಳೆಯುವ ಚರ್ಮಕ್ಕಾಗಿ ಸಿಹಿ ಆಲೂಗಡ್ಡೆ ಬೀಟಾ-ಕ್ಯಾರೋಟಿನ್ ನಲ್ಲಿ ಸಮೃದ್ಧವಾಗಿದೆ, ಇದು ಚರ್ಮದ ಆರೋಗ್ಯಕ್ಕೆ ಅವಶ್ಯಕವಾಗಿದೆ. ಅವುಗಳ ಕಿತ್ತಳೆ ಬಣ್ಣವು ಅವುಗಳ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶಕ್ಕೆ ಸಾಕ್ಷಿಯಾಗಿದೆ, ವಿಶೇಷವಾಗಿ ಬೀಟಾ-ಕ್ಯಾರೋಟಿನ್. ಆಂಟಿಆಕ್ಸಿಡೆಂಟ್‌ಗಳು ನಿಮ್ಮ ಚರ್ಮವನ್ನು ಸ್ವತಂತ್ರ ರಾಡಿಕಲ್‌ಗಳ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ, ಅದು ಚರ್ಮದ ಕೋಶಗಳನ್ನು ಹಾನಿಗೊಳಿಸುತ್ತದೆ ಮತ್ತು ವಯಸ್ಸಾದ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಸಿಹಿ ಆಲೂಗಡ್ಡೆಯ ನಿಯಮಿತ ಸೇವನೆಯು ಯೌವನ ಮತ್ತು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ ನಿಮ್ಮ ಚರ್ಮವನ್ನು ನಯವಾಗಿ ಮತ್ತು ಸುಕ್ಕು-ಮುಕ್ತವಾಗಿಡುವ ಪ್ರೋಟೀನ್, ವಿಟಮಿನ್ ಸಿ ಮೇಲೆ ಅವಲಂಬಿತವಾಗಿರುತ್ತದೆ. ಸಿಹಿ ಆಲೂಗಡ್ಡೆಯಲ್ಲಿ ಹೇರಳವಾಗಿರುವ ವಿಟಮಿನ್ ಸಿ, ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ ಮತ್ತು ವಯಸ್ಸಾದ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ. ಸಿಹಿ…

Read More

ಧಾರವಾಡ:- ಮನೆಯ ಬೀಗ ಮುರಿದು ಮನೆಯಲ್ಲಿದ ನಗ ನಾಣ್ಯಗಳನ್ನು ದೋಚ್ಚುತ್ತಿದ್ದ ಖದೀಮ ಕಳ್ಳನನ್ನು ಬಂಧಿಸುವಲ್ಲಿ ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಮುಜಾವರ್ ಮಹ್ಮದ್ ರಫೀಕ್ ಸೌದಾಗರ ಬಂಧಿತ ಆರೋಪಿಯಾಗಿದ್ದಾನೆ. ಇತ್ತೀಚೆಗೆ ಜುಲೈ 20ರಂದು ರಾಜೀವ ಗಾಂಧಿನಗರದಲ್ಲಿ ಮನೆಯೊಂದರ ಕೀ ಮುರಿದು, ಮನೆಯಲ್ಲಿ ಬಂಗಾರ ಬೆಳ್ಳಿ ಹಾಗೂ ನಗದು ಕಳ್ಳತನವಾಗಿತ್ತು. ಈ ಕುರಿತು ಮಾಲೀಕರು ವಿದ್ಯಾಗಿರಿ ಪೊಲೀಸ ಠಾಣೆಯಲ್ಲಿ ದೂರು ದಾಖಲು ಮಾಡಿದರು. ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಾಲಕಿ ಕಳ್ಳನ ಬಂಧನಕ್ಕೆ ಕ್ರಮ ಕೈಗೊಂಡಿದ್ದರು. ಆರೋಪಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಈಗ ಓರ್ವ ಆರೋಪಿಯನ್ನು ಬಂಧನ ಮಾಡಿದ್ದಾರೆ. ಇನ್ನೂ ಬಂಧಿತನಿಂದ 2ಲಕ್ಷ 38ಸಾವಿರ 500 ರೂಪಾಯಿ ಕಿಮ್ಮತ್ತಿನ 38 ಗ್ರಾಂ ಬಂಗಾರ, 220ಗ್ರಾಂ ಬೆಳ್ಳಿ ಹಾಗೂ 5,300ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಈಗ ಆರೋಪಿ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಬಂಧಿತನನ್ನು ನ್ಯಾಯಾಂಗದ ಮುಂದೆ ಹಾಜರುಪಡಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

Read More

ಬೆಂಗಳೂರು:- ಇನ್ನು ನಾಲ್ಕೈದು ದಿನದಲ್ಲಿ ಗೃಹಲಕ್ಷ್ಮಿ ಅದಾಲತ್ ಆರಂಭಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದೆ. ಹೀಗಾಗಿ ಇನ್ನೂ ಹಣ ಜಮೆಯಾಗದೇ ಇರುವವರ ಬಳಿ ಸರ್ಕಾರ ಹೋಗಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದೆ. ಹೀಗಾಗಿ ಇನ್ನೂ ಹಣ ಸಿಗದವರು ಅದಾಲತ್‌ನಲ್ಲಿ ದೂರು ಕೊಡಲು ಸಿದ್ಧರಾಗಿ. ಈಗಾಗಲೇ 1 ಕೋಟಿ 10 ಲಕ್ಷ ಮಹಿಳೆಯರಿಗೆ ಈ ಯೋಜನೆ ತಲುಪಿದ್ದು, ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಆಯಾ ಪಂಚಾಯಿತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಸಭೆ ನಡೆಸಿ ಹಣ ಹಾಕುವ ವ್ಯವಸ್ಥೆ ಮಾಡುವ ನಿರ್ಧಾರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಂದಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವುದಾಗಿ ಹೇಳಿದ್ದಾರೆ. ಈಗಾಗಲೇ ಮೂರು ಕಂತಿನ ದುಡ್ಡು ಬಾರದೇ ಇದ್ದವರಿಗೆ ಏಕಕಾಲಕ್ಕೆ ಆರು ಸಾವಿರ ದುಡ್ಡು ಹಾಕುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಈಗಾಗಲೇ ಹೇಳಿದ್ದಾರೆ. ಹೀಗಾಗಿ ತಮಗೆ ಹಣವೇ ಬರುವುದಿಲ್ಲ ಎಂದು ನಿರಾಶರಾದವರಿಗೆ ಈಗ ಹೊಸ ಆಸೆ…

Read More