Author: AIN Author

ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಕ್ಯಾಬಿನೆಟ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಕೇಸ್ ವಿಥ್‌ಡ್ರಾ ಮಾಡಿದ್ದನ್ನು ನೋಡಿದರೆ ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ ಸರ್ಕಾರ ನಡೆಸುತ್ತಿರೋರು ಸಿದ್ದರಾಮಯ್ಯ ಅಲ್ಲ ಡಿಕೆ ಶಿವಕುಮಾರ್ ಅಂತ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ‌ (Murugesh Nirani) ಹೇಳಿಕೆ ನೀಡಿದ್ದಾರೆ. ಡಿಸಿಎಂ ಡಿಕೆಶಿ ಮೇಲೆ ಸಿಬಿಐ ಕೇಸ್ (CBI Case) ಪ್ರಸ್ತಾವನೆ ವಾಪಸ್ ವಿಚಾರವಾಗಿ ಬಾಗಲಕೋಟೆಯಲ್ಲಿ ಮಾತನಾಡಿದ ನಿರಾಣಿ, ಡಿಕೆ ಶಿವಕುಮಾರ್ ಅವರು ರಾಜಕೀಯವಾಗಿ ಹಿರಿಯರು. ಸಾಕಷ್ಟು ಏಳು ಬೀಳು ನೋಡಿದಂತವರು. ಈಗಾಗಲೇ ಈ ಕೇಸ್ ಕೋರ್ಟ್‌ನಲ್ಲಿ ತನಿಖೆ ಹಂತದಲ್ಲಿರುವಾಗ ಅದನ್ನು ಏಕಾಏಕಿಯಾಗಿ ಹೆದರಿಕೆಯಿಂದ ಸೋಲಾಗುತ್ತದೆ ಎಂಬ ಭಾವನೆಯಿಂದ ಕ್ಯಾಬಿನೆಟ್‌ನಲ್ಲಿ ವಿಥ್ ಡ್ರಾ ಮಾಡಿದ್ದಾರೆ. ಇದು ಶೋಭೆ ತರುವಂತದ್ದಲ್ಲ ಎಂದು ಹೇಳಿದರು. https://ainlivenews.com/upi-id-with-no-transaction-for-1-year-upi-number-de-activate-reason/#google_vignette ಸಿದ್ದರಾಮಯ್ಯ ಅವರ ಬಗ್ಗೆ ಕರ್ನಾಟಕದಲ್ಲಿ ಅವರದ್ದೇ ಆದ ಘನತೆ ಗೌರವವಿತ್ತು. ಅವರು ಕಾನೂನಿಗೆ ತಲೆ ಬಾಗುತ್ತಾರೆ. ಕಾನೂನಿಗೆ ಹೆಚ್ಚು ಗೌರವ ಕೊಡುತ್ತಾರೆ ಎಂಬ ಭಾವನೆ ಎಲ್ಲರಲ್ಲಿತ್ತು. ಆದರೆ ಸಿದ್ದರಾಮಯ್ಯ ಅವರು…

Read More

ಬಿಗ್ ಬಾಸ್ ಮನೆಗೆ (Bigg Boss Kannada 10) ಬಂದ ಮೇಲೆ ಮೈಕಲ್ ಕನ್ನಡ ಮತ್ತಷ್ಟು ಕಲಿತು ಮಾತನಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕನ್ನಡ ಗೊತ್ತಿದ್ದೂ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವವರಿಗೆ ಸುದೀಪ್ ಹೇಳಿ, ಮೈಕಲ್‌ಗಿರುವ ಕನ್ನಡ ಭಾಷೆಯ ಮೇಲಿನ ಪ್ರೀತಿಗೆ ಚಪ್ಪಾಳೆ ನೀಡಿದ್ದಾರೆ. ಮೈಕಲ್ ಪ್ರಯತ್ನಕ್ಕೆ ಕಿಚ್ಚ (Sudeep) ಬೆನ್ನು ತಟ್ಟಿದ್ದಾರೆ. ದೊಡ್ಮನೆಯಲ್ಲಿ ಕೋಪ ಬಂದಾಗ, ಅಪ್ಪಟ ಕನ್ನಡ ಮಾತಾನಾಡುವವರ ಬಾಯಲ್ಲೇ ಇಂಗ್ಲಿಷ್ ಬಂದುಬಿಡುತ್ತದೆ. ಆದರೆ ಮೊನ್ನೆ ಆದ ಗಲಾಟೆಯಯಲ್ಲಿ ನೀವು ಕೋಪದಲ್ಲಿದ್ರೂ ಕೂಡ ಹುಡುಕಿ ಕನ್ನಡ ಪದಗಳಲ್ಲೇ ಎದುರಾಳಿಗೆ ಉತ್ತರ ಕೊಡ್ತಾ ಇದ್ರಿ, ಅದಕ್ಕಾಗಿ ನಾನು ನಿಮ್ಮನ್ನು ಪ್ರಶಂಸಿಸುತ್ತೇನೆ. Opportunist ಅನ್ನೋ ಪದಕ್ಕೆ ಅರ್ಥ ಏನೆಂದು ತಿಳಿದುಕೊಂಡು ಕೊನೆಗೆ ಅವಕಾಶವಾದಿ ಅಂತ ಹೇಳಿದ್ದಕ್ಕೆ ಸುದೀಪ್ ಭೇಷ್ ಎಂದಿದ್ದಾರೆ. ದೊಡ್ಮನೆಯಲ್ಲಿ ಕೋಪ ಬಂದಾಗ, ಅಪ್ಪಟ ಕನ್ನಡ ಮಾತಾನಾಡುವವರ ಬಾಯಲ್ಲೇ ಇಂಗ್ಲಿಷ್ ಬಂದುಬಿಡುತ್ತದೆ. ಆದರೆ ಮೊನ್ನೆ ಆದ ಗಲಾಟೆಯಯಲ್ಲಿ ನೀವು ಕೋಪದಲ್ಲಿದ್ರೂ ಕೂಡ ಹುಡುಕಿ ಕನ್ನಡ ಪದಗಳಲ್ಲೇ ಎದುರಾಳಿಗೆ ಉತ್ತರ ಕೊಡ್ತಾ ಇದ್ರಿ, ಅದಕ್ಕಾಗಿ…

Read More

ಧಾರವಾಡ : ಜಮ್ಮು – ಕಾಶ್ಮೀರದಲ್ಲಿ ಉಗ್ರರೊಂದಿಗೆ ಹೋರಾಡಿ ವೀರ ಮರಣಹೊಂದಿದ ಯೋಧರಿಗೆ ಶ್ರದ್ಧಾಂಜಲಿ ಸಭೆಯನ್ನು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಳಿಯ ಕಾರ್ಗಿಲ್ ವಿಜಯ ಸ್ತೂಪದಲ್ಲಿ ಹಮ್ಮಿಕೊಳ್ಳಲಾಗಿತ್ತು . ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ, ಮಾಜಿ ಸೈನಿಕರ ಬಳಗದ ಸದಸ್ಯರು ಹಾಗೂ ಸಾರ್ವಜನಿಕರು ಹುತಾತ್ಮ ಯೋಧರ ಭಾವಚಿತ್ರಕ್ಕೆ ಹಾಗೂ ಕಾರ್ಗಿಲ್ ವಿಜಯ ಸ್ತೂಪಕ್ಕೆ ಪುಷ್ಪ ನಮನ ಸಲ್ಲಿಸಿದರು. https://ainlivenews.com/upi-id-with-no-transaction-for-1-year-upi-number-de-activate-reason/#google_vignette ಶ್ರದ್ಧಾಂಜಲಿ ಸಭೆಯಲ್ಲಿ ಮಡಿದ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಒಂದು ನಿಮಿಷ ಮೌನ ಆಚರಿಸಿ, ಪೊಲೀಸ್ ವಾದ್ಯ ತುಕಡಿಗಳು ವಾದ್ಯ ನುಡಿಸುವ ಮೂಲಕ ಗೌರವ ಸಮರ್ಪಣೆ ಮಾಡಿದರು.

Read More

ದೊಡ್ಡಬಳ್ಳಾಪುರ : ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಾವಳಿಯನ್ನ ಬಾರ್ ನಲ್ಲಿ ನೋಡುತ್ತಿದ್ದ ವೇಳೆ, ಯುವಕನ ನಡುವೆ ಜಗಳವಾಗಿದೆ, ಯುವಕರ ನಡುವಿನ ಜಗಳವನ್ನ ಸ್ನೇಹಿತನೊಬ್ಬ ಸುಮ್ಮನಾಗಿಸಿದ್ದ, ಅದೇ ವ್ಯಕ್ತಿಯನ್ನ ರಾಜಿ ಸಂಧಾನಕ್ಕೆ ಕರೆದಿದ್ದಾಗ, ಆತ ಬರದೆ ಇದ್ದಾಗ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡಿಸಿ ಪರಾರಿಯಾಗಿದ್ದರು, ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನ ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಅರೆಗುಡ್ಡದಹಳ್ಳಿ ಗ್ರಾಮದ 26 ವರ್ಷದ ಯುವಕ ಪೃಥ್ವಿರಾಜ್ ಹಲ್ಲೆಗೆ ತುತ್ತಾಗಿದ್ದ, ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾದಿದ್ದ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಚಿಕಿತ್ಸೆಯ ನಂತರ ಚೇತರಸಿಕೊಂಡಿದ್ದಾನೆ, ಹಲ್ಲೆ ನಡೆಸಿದ ಉಲ್ಲಾಸ್, ಮಧು ಸೇರಿದಂತೆ ಆತನ ಸ್ನೇಹಿತರು ಪರಾರಿಯಾಗಿದ್ದರು, ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ನಗರ ಪೊಲೀಸರು ಆರೋಪಿಗಳನ್ನ ಬೆನ್ನತ್ತಿದ್ದರು, ಉಲ್ಲಾಸ್ ಮತ್ತು ಮಧುನನ್ನ ಪೊಲೀಸರು ಬಂಧಿಸಿದ್ದು ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಬಲೆ ಬಿಸಿದ್ದಾರೆ. https://ainlivenews.com/upi-id-with-no-transaction-for-1-year-upi-number-de-activate-reason/ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ನಡೆದ ಜಗಳವನ್ನ ಬಿಡಿಸಿ ಬಂದಿದ್ದ ಪೃಥ್ವಿರಾಜ್ ತನ್ನ ಪಾಡಿಗೆ ಸುಮ್ಮನಿದ್ದ, ನವೆಂಬರ್ 22ರ ಸಂಜೆ ರೈಲ್ವೆ ಸ್ಟೇಷನ್…

Read More

ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ರೂಪೇಶ್ ಶೆಟ್ಟಿ (Roopesh Shetty) ವಿನ್ನರ್ ಆಗಿ ಗೆದ್ದು ಬೀಗಿದ್ದರು. ಇದೀಗ ತುಳು, ಕನ್ನಡ ಸಿನಿಮಾಗಳಲ್ಲಿ ರೂಪೇಶ್ ಬ್ಯುಸಿಯಾಗಿದ್ದಾರೆ. ‘ಅಧಿಪತ್ರ’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದಲ್ಲಿನ ರೂಪೇಶ್ ಲುಕ್ ಹೇಗಿದೆ. ಇದೀಗ ರಿವೀಲ್ ಆಗಿದೆ. ಬಿಗ್ ಬಾಸ್ ಗೆದ್ದ ಮೇಲೆ ಹಲವು ಸಿನಿಮಾಗಳನ್ನ ರೂಪೇಶ್ ಶೆಟ್ಟಿ ಒಪ್ಪಿಕೊಂಡಿದ್ದಾರೆ. ‘ಅಧಿಪತ್ರ’ ಚಿತ್ರದಲ್ಲಿ ರೂಪೇಶ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೂಲಿಂಗ್ ಗ್ಲಾಸ್ ಧರಿಸಿ ಬೈಕ್ ಮೇಲೆ ಕುಳಿತು ಖಡಕ್ ಆಗಿ ಕ್ಯಾಮೆರಾ ಕಣ್ಣಿಗೆ ರೂಪೇಶ್ ಪೋಸ್ ನೀಡಿದ್ದಾರೆ. ಚಹನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಅಧಿಪತ್ರ ಚಿತ್ರದಲ್ಲಿ ಹೀರೋ ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ಜಾಹ್ನವಿ ನಟಿಸುತ್ತಿದ್ದಾರೆ. ಬೃಹತಿ ಎಂಬ ಪಾತ್ರಕ್ಕೆ ಗಿಚ್ಚಿ ಗಿಲಿ ಗಿಲಿ ನಟಿ ಬಣ್ಣ ಹಚ್ಚಿದ್ದಾರೆ.‌ ಸದ್ಯ ಚಿತ್ರದ ಶೂಟಿಂಗ್‌ ಭರದಿಂದ ಸಾಗುತ್ತಿದೆ

Read More

ದೊಡ್ಮನೆಯಲ್ಲಿ ಆಟ (Bigg Boss Kannada 10) 8ನೇ ವಾರಕ್ಕೆ ಕಾಲಿಟ್ಟಿದೆ. 5 ಎಲಿಮಿನೇಟ್ ಆಗಿ 12 ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಪ್ರತಿ ವಾರಾಂತ್ಯ ಬಂದು ಸುದೀಪ್, ಸ್ಪರ್ಧಿಗಳ ಕಿವಿ ಹಿಂಡುತ್ತಾರೆ. ಹೀಗಿರುವಾಗ, ಬಿಗ್ ಮನೆಗೆ ಕಾಲಿಟ್ಟ ದಿನದಿಂದ ಪ್ರತಾಪ್ ಕೆಲ ಸ್ಪರ್ಧಿಗಳಿಂದ ಹೆಜ್ಜೆ ಹೆಜ್ಜೆಗೂ ಟಾರ್ಗೆಟ್ ಆಗುತ್ತಲೇ ಬಂದಿದ್ದಾರೆ. ಇದೀಗ ಬಾತ್‌ರೂಮ್ ವಿಚಾರವಾಗಿ ಡ್ರೋನ್‌ ಪ್ರತಾಪ್‌ಗೆ (Drone Prathap) ಬೆದರಿಸಿದ್ದ ಸ್ನೇಹಿತ್‌ಗೆ ಸುದೀಪ್ (Kichcha Sudeep) ಸ್ಪೆಷಲ್ ಕ್ಲಾಸ್ ಮಾಡಿದ್ದಾರೆ. ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ತಿರೋ ದೊಡ್ಮನೆ ಆಟ ಮತ್ತಷ್ಟು ಟಫ್ ಆಗ್ತಿದೆ. ಹೀಗಿರುವಾಗ ಸ್ನೇಹಿತ್ (Snehith Gowda) ಆಟ ಮತ್ತು ಸ್ಪರ್ಧಿಗಳ ಜೊತೆ ವರ್ತಿಸುವ ರೀತಿಯನ್ನ ಖಂಡಿಸಿದ ಸುದೀಪ್ ತಿದ್ದಿ ಬುದ್ಧಿ ಹೇಳಿದ್ದಾರೆ. ಬಾತ್‌ರೂಮ್ ಬಿಟ್ಟು ಕೊಡುವ ವಿಷ್ಯದಲ್ಲಿ ಸ್ನೇಹಿತ್ ನಡೆದುಕೊಂಡ ರೀತಿಗೆ ತರಾಟೆ ತೆಗೆದುಕೊಂಡಿದ್ದಾರೆ ಶುಕ್ರವಾರದ ಎಪಿಸೋಡ್‌ನಲ್ಲಿ ಬಾತ್‌ರೂಂಗೆ ಹೋಗಲು ಬಂದ ಡ್ರೋನ್ ಪ್ರತಾಪ್ ಅನ್ನು ಅಲ್ಲೇ ಇದ್ದ ಸ್ನೇಹಿತ್ ಉದ್ದೇಶಪೂರ್ವಕವಾಗಿ ತಡೆದಿದ್ದರು. ಆಗಿದ್ದಿಷ್ಟು…

Read More

ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಕರಾಚಿಯ (Karachi) ರಶೀದ್ ಮಿನ್ಹಾಸ್ ರಸ್ತೆಯಲ್ಲಿರುವ ಬಹುಮಹಡಿ ಶಾಪಿಂಗ್ ಮಾಲ್‌ನಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 11 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರಾಚಿ ಮೇಯರ್ ಮುರ್ತಾಜಾ ವಹಾಬ್ ಅವರು ಬೆಂಕಿ ಅವಘಡದಿಂದ ಆಗಿರುವ ಸಾವುನೋವುಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮೃತದೇಹಗಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ಕೆಎಂಸಿ ಅಗ್ನಿಶಾಮಕ ದಳ ಈವರೆಗೆ ಬೆಂಕಿ ಅವಘಡದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ. https://ainlivenews.com/upi-id-with-no-transaction-for-1-year-upi-number-de-activate-reason/ 7 ಮೃತದೇಹಗಳನ್ನು ಜಿನ್ನಾ ಆಸ್ಪತ್ರೆಗೆ ಹಾಗೂ ಮತ್ತೆರಡು ಮೃತದೇಹಗಳನ್ನು ಸಿವಿಲ್ ಮತ್ತು ಅಬ್ಬಾಸಿ ಶಹೀದ್ ಆಸ್ಪತ್ರೆಗೆ ರವಾನಿಸಲಾಗಿದೆ. ಎರಡು ಸ್ನಾರ್ಕೆಲ್‌ಗಳು, ಎಂಟು ಅಗ್ನಿಶಾಮಕ ಟೆಂಡರ್‌ಗಳು ಮತ್ತು ಒಂದು ಬೌಸರ್ ಒಳಗೊಂಡ ಕಾರ್ಯಾಚರಣೆಯಲ್ಲಿ ಆರ್‌ಜೆ ಶಾಪಿಂಗ್ ಮಾಲ್‌ನಲ್ಲಿ ಸಿಲುಕಿಕೊಂಡಿದ್ದ ಸುಮಾರು 50 ಜನರನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ದಳ ತಿಳಿಸಿದೆ.

Read More

ಕಲಬುರಗಿ:- ಅನ್ನಭಾಗ್ಯಕ್ಕೆ ಸೇರಿದ ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಪೋಲೀಸರು ದಾಳಿ ನಡೆಸಿ ಪತ್ತೆಹಚ್ಚಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿಯಿಂದ ಸೇಡಂ ಕಡೆ ಟೆಂಪೋದಲ್ಲಿ ಸಾಗಾಟ ಮಾಡ್ತಿದ್ದ 33ಕ್ವಿಂಟಾಲ್ ಅಕ್ಕಿಯನ್ನ ಜಪ್ತಿ ಮಾಡಿದ್ದು ಮಲ್ಲಪ್ಪ ಎಂಬಾತನನ್ನ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ಮುಂದುವರೆದಿದೆ..

Read More

ಹಾಸನ: ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ಗಂಡನನ್ನು ಕಳೆದುಕೊಂಡಿದ್ದ ಜಿಲ್ಲಾಧಿಕಾರಿ ಕಚೇರಿ (DC Office) ಎಸ್‍ಡಿಎ (SDA) ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ (Hassan) ನಗರದ ರಕ್ಷಣಾಪುರಂನಲ್ಲಿ ನಡೆದಿದೆ. ಮೃತಳನ್ನು ಸುಚಿತ್ರಾ (31) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಪತಿ ಕೃಷ್ಣಮೂರ್ತಿ ವಿಲೇಜ್ ಅಕೌಂಟೆಂಟ್ ಆಗಿದ್ದರು.  ಕಳೆದ ಮೂರು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಅವರು ಪತಿಯನ್ನು ಕಳೆದುಕೊಂಡಿದ್ದರು. ಪತಿ ಮರಣದ ನಂತರ ಸುಚಿತ್ರಾಗೆ ಎಸ್‍ಡಿಎ ಹುದ್ದೆ ನೀಡಲಾಗಿತ್ತು. ಜಿಲ್ಲಾಧಿಕಾರಿ ಕಛೇರಿ ಗ್ರಾಮ ಒನ್ ಕೇಂದ್ರದಲ್ಲಿ ಸುಚಿತ್ರಾ ಎಸ್‍ಡಿಎ ಆಗಿ ಕೆಲಸ ಮಾಡುತ್ತಿದ್ದರು. ಸುಚಿತ್ರಾಗೆ ಒಂದು ಹೆಣ್ಣುಮಗುವಿದ್ದು ರಕ್ಷಣಾಪುರಂನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.  ಮಗಳು ಶಾಲೆ ಮುಗಿಸಿ ವಾಪಸ್ ಬಂದು ಮನೆಯ ಬಾಗಿಲು ಬಡಿದಿದ್ದು ಬಾಗಿಲು ತೆರೆಯದಿದ್ದಾಗ ತನ್ನ ಮಾವನಿಗೆ ಕರೆ ಮಾಡಿದ್ದಾರೆ.  ನಂತರ ಮಾವ ಆಗಮಿಸಿ ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿ ನೋಡಿದಾಗ ಸುಚಿತ್ರಾ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಗಿದೆ. https://ainlivenews.com/upi-id-with-no-transaction-for-1-year-upi-number-de-activate-reason/ ಆತ್ಮಹತ್ಯೆಗೆ…

Read More

ಬೆಂಗಳೂರು: 2024ರ ಐಪಿಎಲ್ ಮಿನಿ ಹರಾಜಿನ ಸಲುವಾಗಿ ತಂಡದ ಪರ್ಸ್ ನ ಮೊತ್ತವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ರಾಂಚೈಸಿ ತನ್ನ ಸ್ಟಾರ್ ಆಟಗಾರರಾದ ವಾನಿಂದು ಹಸರಂಗ ಹಾಗೂ ಹರ್ಷಲ್ ಪಟೇಲ್ ರನ್ನು ತಂಡದಿಂದ ಬಿಡುಗಡೆಗೊಳಿಸಿದ್ದಾರೆ. ಈ ಕುರಿತು ತಂಡದ ಮಾಜಿ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2022ರ ಮೆಗಾ ಹರಾಜಿನಲ್ಲಿ ತಲಾ 10.75 ಕೋಟಿ ವ್ಯಯಿಸಿದ ಆರ್ ಸಿಬಿ ಫ್ರಾಂಚೈಸಿ ಹರ್ಷಲ್ ಪಟೇಲ್ ಹಾಗೂ ವಾನಿಂದು ಹಸರಂಗರನ್ನು ಖರೀದಿಸಿ ತಂಡವನ್ನು ಬಲಿಷ್ಠಗೊಳಿಸಿ ಟ್ರೋಫಿ ಗೆಲ್ಲುವ ಕನಸು ಹೊತ್ತಿದ್ದರು. ಹಸರಂಗ 26 ವಿಕೆಟ್ ಪಡೆದು ಉತ್ತಮ ಪ್ರದರ್ಶನ ತೋರಿದರೂ ಆರ್ ಸಿಬಿ ಮಾತ್ರ ಟ್ರೋಫಿ ಗೆಲ್ಲದೆ ನಿರಾಸೆ ಮೂಡಿಸಿತ್ತು. 2021ರಲ್ಲಿ 32 ವಿಕೆಟ್ ಪಡೆದು ಗಮನ ಸೆಳೆದಿದ್ದ ಹರ್ಷಲ್ ಪಟೇಲ್ ಕಳೆದೆರಡು ಐಪಿಎಲ್ ಆವೃತ್ತಿಗಳಿಂದ ಉತ್ತಮ ಪ್ರದರ್ಶನ ತೋರಲು ಎಡವಿದ್ದು ಫ್ರಾಂಚೈಸಿ ಈ ಆಟಗಾರರನ್ನು ,2024ರ ಮಿನಿ ಹರಾಜಿಗೆ ಬಿಡುಗಡೆಗೊಳಿಸಿ ಟ್ರೋಫಿ ಗೆದ್ದುಕೊಡುವ ಆಟಗಾರರ…

Read More