Author: AIN Author

ಬೆಂಗಳೂರು: ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ 75ನೇ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಕ್ಷದ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀಮತಿ ಲೀಲಾ ದೇವಿ ಆರ್, ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ಮತ್ತು ಬೆಂಗಳೂರು ನಗರದ ಎಲ್ಲ ಜಿಲ್ಲಾಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು

Read More

ಬೆಂಗಳೂರು : ಸುಮಲತಾ ಅಂಬರೀಶ್ ಜೊತೆಗೆ ಮಾತನಾಡಿದ್ದೇವೆ. ಮಂಡ್ಯದಿಂದಲೇ ಸ್ಪರ್ಧೆ ಮಾಡ್ತೇನೆ ಎಂದು ಮೇಡಂ ಹೇಳಿದ್ದಾರೆ. ಬೇರೆ ಕಡೆ ಹೋಗಲ್ಲ ಎಂದು ಹೇಳಿದ್ದಾರೆ, ಖುಷಿಯಾಗಿದೆ ಎಂದು ಮಾಜಿ ಸಚಿವ ನಾರಾಯಣಗೌಡ ಹೇಳಿದರು. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಭೇಟಿ ಬಳಿಕ ಮಾಜಿ ಸಚಿವ ನಾರಾಯಣಗೌಡ ಪ್ರತಿಕ್ರಿಯೆ ನೀಡಿದ್ದು, ಜೆಡಿಎಸ್​ಗೂ ಮನವಿ ಮಾಡುತ್ತೇವೆ ಎಂದು ತಿಳಿಸಿದರು. ದೇವೇಗೌಡರು, ಕುಮಾರಸ್ವಾಮಿ ಮಂಡ್ಯದಿಂದ ಹುಟ್ಟಿ ಬೆಳೆದವರಲ್ಲ. ರಾಮನಗರ ಅವರ ಲಕ್ಕಿ ಪ್ಲೇಸ್. ಕುಮಾರಸ್ವಾಮಿಯವರು ರಾಮನಗರದಿಂದ ಸ್ಪರ್ಧೆ ಮಾಡಲಿ. ಮಂಡ್ಯ ಜಿಲ್ಲೆಯಿಂದ ಸುಮಲತಾ ಅವರೇ ಮುಂದುವರಿದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.

Read More

ನವದೆಹಲಿ: 75ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು  ಅವರು ದೆಹಲಿಯಲ್ಲಿ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಗೀತೆಯೋಂದಿಗೆ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ 21 ಸುತ್ತು ಕುಶಾಲ ತೋಪು ಸಿಡಿಸಿ ಗೌರವ ಸೂಚಿಸಲಾಯಿತು. ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಅವರ ಸಮ್ಮುಖದಲ್ಲಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದ್ದಾರೆ.  ಇದಾದ ಬಳಿಕ ಬೆಳಗ್ಗೆ 10.30ರಿಂದ ವಿಜಯ್‌ ಚೌಕ್‌ನಿಂದ ಕರ್ತವ್ಯ ಪಥದವರೆಗೆ ಪರೇಡ್‌ ನಡೆಯಲಿದೆ. ದೇಶದ ಹಲವು ರಾಜ್ಯಗಳಿಂದ ಆಗಮಿಸಿದ ಸ್ತಬ್ಧಚಿತ್ರಗಳ ಮೆರವಣಿಗೆ ಕೂಡ ನಡೆಯಲಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಹ ಪರೇಡ್‌ ಮೈದಾನಕ್ಕೆ ಆಗಮಿಸಿದ್ದು, ಕೆಲವೇ ಕ್ಷಣಗಳಲ್ಲಿ ಪರೇಡ್‌ ಆರಂಭವಾಗಲಿದೆ. https://ainlivenews.com/rs-3-lakh-loan-for-women-without-interest-how-to-apply-here-is-the-complete-details/ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಪರೇಡ್‌ ವೀಕ್ಷಣೆಗೆ 77 ಸಾವಿರ ಜನರಿಗೆ ಅವಕಾಶ ನೀಡಲಾಗಿದೆ. ಪರೇಡ್‌ ವೀಕ್ಷಿಸುವ 70 ಸಾವಿರಕ್ಕೂ ಹೆಚ್ಚು ಜನರಲ್ಲಿ 13, ಸಾವಿರ ಅತಿಥಿಗಳೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ವೈಮಾನಿಕ ಪ್ರದರ್ಶನಗಳನ್ನು ಹಮ್ಮಿಕೊಂಡಿದ್ದು, ಹವಾಮಾನ ಅಡೆತಡೆಯಾಗಬಾರದು…

Read More

ಕನ್ನಡದಲ್ಲಿ ಮತ್ತೊಂದು ಹೊಸ ಭರವಸೆಯ ಸಿನಿಮಾ ತಯಾರಾಗಿದೆ. ಸಿನಿಮಾದ ಭಾಗವಾಗಿ ಇಂದು ಕೇಂಜ ಚೇತನ್ ಕುಮಾರ್ ನಿರ್ದೇಶನದ `ಚೌ ಚೌ ಬಾತ್’ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಇಂದು ಬೆಳಗ್ಗೆ ಬೆಂಗಳೂರಿನ ಮಲ್ಲೇಶ್ವರದ ಎಸ್ ಆರ್ ವಿ ಥಿಯೇಟರ್ ನಲ್ಲಿ ಜರುಗಿದ  ಪತ್ರಿಕಾ ಗೋಷ್ಠಿಯಲ್ಲಿ  ಈ ಟ್ರೈಲರ್ ಅನ್ನು ಚಿತ್ರದ ನಿರ್ಮಾಪಕರಾದ ಸತೀಶ್ ಎಸ್.ಬಿ ತಮ್ಮ ಧರ್ಮಪತ್ನಿಯೊಂದಿಗೆ ಲೋಕಾರ್ಪಣೆಗೊಳಿಸಿದ್ದಾರೆ. ಬಿಗ್ ಬಾಸ್‍ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಅವಿನಾಶ್ ಶೆಟ್ಟಿ ಈ ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಇನ್ನುಳಿದಂತೆ ಗೀತಸಾಹಿತಿ ಪ್ರಮೋದ್ ಮರವಂತೆ, ಸಂಗೀತ ನಿರ್ದೇಶಕ ಹೇಮಂತ್ ಜೋಯಿಸ್, ಛಾಯಾಗ್ರಾಹಕ ರುದ್ರಮೂರ್ತಿ ಬೆಳಗೆರೆ, ಸಾಗರ್ ಗೌಡ, ಪ್ರಕರ್ಷ ಶಾಸ್ತ್ರಿ, ಗೀತಾ ಬಂಗೇರ, ಹರ್ಷವರ್ಧನ್, ಪ್ರಸಾದ್, ನಿಶಾಂತ್ ಶೆಟ್ಟಿ ಸೇರಿದಂತೆ ಚಿತ್ರತಂಡ ಈ ಪತ್ರಿಕಾ ಗೋಷ್ಠಿಯಲ್ಲಿ ಭಾಗಿಯಾಗಿತ್ತು. ಈಗೊಂದಷ್ಟು ಕಾಲದಿಂದ ಚೌ ಚೌ ಬಾತ್ ಚಿತ್ರ ಸುದ್ದಿ ಕೇಂದ್ರದಲ್ಲಿದೆ. ಇದೀಗ ಬಿಡುಗಡೆಗೊಂಡಿರುವ ಟ್ರೈಲರ್ ಮೂಲಕ ನಿರೀಕ್ಷೆ ಮತ್ತಷ್ಟು ತೀವ್ರವಾಗುವ ಸಾಧ್ಯತೆಯಿದೆ. ಈ ಪತ್ರಿಕಾ ಗೋಷ್ಠಿಯಲ್ಲಿ ನಿರ್ದೇಶಕ…

Read More

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಪತ್ನಿ ಹಾಗು ಪವಿತ್ರಾ ಗೌಡ ನಡುವೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್​ ಕಿತ್ತಾಟ ಶುರುವಾಗಿದ್ದು, ಪವಿತ್ರಾ ಗೌಡ ಗೆ  ದರ್ಶನ್​ ಪತ್ನಿ ವಿಜಯಲಕ್ಷ್ಮಿ ವಾರ್ನಿಂಗ್​ ನೀಡಿದ್ದಾರೆ. ಪವಿತ್ರ ಗೌಡ ಹಾಗು ನಟ ದರ್ಶನ್ ನಡುವಿನ ಸ್ನೇಹ ಹತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ ದರ್ಶನ್ ಜೊತೆಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಪವಿತ್ರ ಗೌಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ಮಳೆಬಿಲ್ಲು ಹಾಡೊಂದನ್ನು ಹಾಕಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪತ್ರಿಯಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿಜಿ ದರ್ಶನ್​ ಎಂಬ ಇನ್ಸ್ಟಾಗ್ರಾಂ ಖಾತೆಯ ಮೂಲಕ ಪವಿತ್ರ ಗೌಡ ಅವರಿಗೆ ಸಂಬಂಧಿಸಿದ ಫೋಟೋಗಳನ್ನು ದರ್ಶನ್​ ಪತ್ನಿ ಪೋಸ್ಟ್​ ಮಾಡುವ ಮೂಲಕ ಲೀಗಲ್​ ಆ್ಯಕ್ಷನ್​ ತೆಗೆಕೊಳ್ಳುವ ಎಚ್ಚರಿಕೆಯನ್ನು ಪವಿತ್ರಗೌಡಗೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಪರ್ಸನಲ್ ವಾರ್ ಮುಂದುವರೆದಿದೆ.

Read More

‘ಬಿಗ್ ಬಾಸ್’ (Bigg Boss Kannada 10) ಖ್ಯಾತಿಯ ರಕ್ಷಕ್ ಬುಲೆಟ್ (Rakshak Bullet) ಅವರು ಇತ್ತೀಚೆಗೆ ಅದೇನೇ ಮಾತನಾಡಿದರೂ ಕಾಂಟ್ರವರ್ಸಿ ಆಗುತ್ತಿದೆ. ತಮ್ಮ ಹೇಳಿಕೆಗಳನ್ನು ತಿರುಚಿ ವೈರಲ್ ಆಗ್ತಿರೋ ವಿಡಿಯೋ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಈ ಕುರಿತು ಪೋಸ್ಟೊಂದನ್ನು ಹಂಚಿಕೊಂಡಿದ್ದಾರೆ. ಬುಲೆಟ್ ಪ್ರಕಾಶ್ (Bullet Prakash) ಪುತ್ರ ರಕ್ಷಕ್ ತಮ್ಮ ಇತ್ತೀಚಿನ ದಿನಗಳಲ್ಲಿ ನೀಡಿರುವ ಕೆಲವೇ ಹೇಳಿಕೆಗಳನ್ನು ತಿರುಚಿ ಬೇರೇಯದ್ದೇ ರೂಪ ಕೊಟ್ಟಿರುವ ಬಗ್ಗೆ ಅದರಿಂದ ತಮಗೆ ಮಾನಸಿಕ ಹಿಂಸೆ ಆಗುತ್ತಿದೆ ಎಂದು ರಕ್ಷಕ್ ಹೇಳಿಕೊಂಡಿದ್ದಾರೆ. ನಾನು ಬುಲೆಟ್ ಪ್ರಕಾಶ್ ಅವರ ಮಗ, ನನ್ನ ತಂದೆ ಸುಮಾರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರನ್ನು ಹರಸಿ ಬೆಳೆಸಿದ್ದೀರಾ. ಅವರ ಮಗನಾಗಿ ನಾನು ಜನಸಿರೋದು ನನ್ನ ಪುಣ್ಯ ಎಂದಿದ್ದಾರೆ. ಬಳಿಕ ನನ್ನ ತಂದೆಯಲ್ಲಿರುವ ನೇರ ನುಡಿ ನನಗೂ ಬಂದಿದೆ. ಇತ್ತೀಚಿನ ದಿನಗಳಲ್ಲಿ ನನ್ನ ಹೇಳಿಕೆಗಳನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತಿದ್ದಾರೆ. ಅದರಿಂದ ನನಗೆ ಕೆಲವೊಮ್ಮೆ ಮಾನಸಿಕವಾಗಿ ಹಿಂಸೆಯಾಗುತ್ತಿದ್ದು, ನಾನು ಯಾರ ಭಾವನೆಗೂ…

Read More

ದಕ್ಷಿಣ ಭಾರತದ ನಂಬರ್ 1 ಸಿನಿಮಾ ಪ್ರಚಾರ ಕಂಪನಿಯಾಗಿ ಹೊರಹೊಮ್ಮಿರುವ ಶ್ರೇಯಸ್ ಮೀಡಿಯಾ ಭಾರತದಲ್ಲಿ ತನ್ನ ಶಾಖೆಯನ್ನು ವಿಸ್ತರಿಸುತ್ತಿದೆ. ಹೈದ್ರಾಬಾದ್ ನಲ್ಲಿ ಯಶಸ್ವಿ ಕಾರ್ಯಕ್ರಮಗಳನ್ನು ಕೊಟ್ಟಿರುವ ಶ್ರೇಯಸ್ ಕಂಪನಿ, ಶ್ರೇಯಸ್ ಲೈವ್ ನಡಿ ಇದೀಗ ಬೆಂಗಳೂರಿನಲ್ಲಿಯೂ ಹೊಸ ವೆಂಚರ್ ಪ್ರಾರಂಭ ಮಾಡಿದೆ. ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಶುಭಾರಂಭಗೊಂಡ ಶ್ರೇಯಸ್ ಮೀಡಿಯಾದ ಹೊಸ ಶಾಖೆಯನ್ನು ತೆಲುಗಿನ ಖ್ಯಾತ ನಿರ್ದೇಶಕ ಮಾರುತಿ ಉದ್ಘಾಟಿಸಿದರು. Biz-Bash ಸಹಯೋಗದೊಂದಿಗೆ ಶ್ರೇಯಸ್ ಕೆಲಸಕ್ಕೆ ಸಾಥ್ ಕೊಟ್ಟಿದೆ. ಬಳಿಕ ಮಾತನಾಡಿದ ನಿರ್ದೇಶಕ ಮಾರುತಿ, ಕಳೆದ 20 ವರ್ಷಗಳಿಂದ ಶ್ರೇಯಸ್ ಹಾಗೂ ನಾನು ಗೆಳೆಯರು. ಬೆಂಗಳೂರಿನಲ್ಲಿಂದು ಶ್ರೇಯಸ್ ಲೈವ್ ಪ್ರಾರಂಭಿಸಿದ್ದಾರೆ. ಹೈದ್ರಾಬಾದ್ ನಲ್ಲಿ 2000 ಸಾವಿರಕ್ಕೂ ಹೆಚ್ಚು ಇವೆಂಟ್ ಗಳನ್ನು ನಡೆಸಿದ್ದಾರೆ. ಕನ್ನಡದಲ್ಲಿ ಈಗ ಸೇವೆ ಪ್ರಾರಂಭಿಸಿದ್ದು, ನಾನು ಶ್ರೇಯಸ್ ಲೈವ್ ಲಾಂಚ್ ಮಾಡಿರೋದು ಸಂತೋಷವಾಗಿದೆ. ಇಲ್ಲಿಯೂ ಶ್ರೇಯಸ್ ಮೀಡಿಯಾ ರಾಕ್ ಆಗ್ಲಿ ಎಂದು ಶುಭಾಷಯ ತಿಳಿಸಿದರು. ಶ್ರೇಯಸ್ ಮೀಡಿಯಾದ ಸಂಸ್ಥಾಪಕ ಶ್ರೇಯಸ್ ಶ್ರೀನಿವಾಸ್, ಬಾಲಿವುಡ್ ಹಾಗೂ ಸೌತ್ ಇಂಡಸ್ಟ್ರೀಯಲ್ಲಿ 2000ಕ್ಕೂ…

Read More

ಮೋಹಕ ತಾರೆ ರಮ್ಯಾ (Ramya) ಮತ್ತೆ ಜಿಮ್ ನಲ್ಲಿ ಬೆವರಿಳಿಸುತ್ತಿದ್ದಾರೆ. ಆ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ನೆಚ್ಚಿನ ತಾರೆಯ ವರ್ಕೌಟ್ (Workout) ವಿಡಿಯೋ ಕಂಡು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ರಮ್ಯಾ ಫಿಟ್ನೆಸ್ (Fitness)ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಿನಿಮಾ ರಂಗದಿಂದ ದೂರವಾಗಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು ರಮ್ಯಾ. ನಂತರ ಅಲ್ಲಿಂದನೂ ದೂರವಾಗಿ ಅಜ್ಞಾತವಾಸದಲ್ಲಿ ಇದ್ದರು. ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ಬಂದಿದ್ದಾರೆ. ಇದೀಗ ನಾಯಕಿಯಾಗಿಯೂ ಮತ್ತೆ ಕಮ್ ಬ್ಯಾಕ್ ಆಗಲಿದ್ದಾರೆ. ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಪ್ತಮಿ ಗೌಡ ಕೂಡ ನಟಿಸುತ್ತಿದ್ದಾರೆ. ಇದೇ ಸಿನಿಮಾಗಾಗಿಯೇ ರಮ್ಯಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆ ವಿಡಿಯೋವನ್ನು ಹಂಚಿಕೊಂಡು ತಮ್ಮ ತಯಾರಿಯನ್ನೂ ಸಾಬೀತು ಪಡಿಸಿದ್ದಾರೆ.

Read More

ನವದೆಹಲಿ: ದೇಶಾದ್ಯಂತ 75ನೇ ಗಣರಾಜ್ಯೋತ್ಸವದ (75th Republic Day) ಸಂಭ್ರಮ ಮನೆ ಮಾಡಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಧ್ವಜಾರೋಹಣ (Flag hoisting) ನೆರವೇರಿದ್ದು, ಪರೇಡ್‌ಗಳಲ್ಲಿ ವಿಶೇಷ ಪ್ರದರ್ಶನಗಳು ಕಂಡುಬಂದಿವೆ. ಈ ಸಂದರ್ಭದಲ್ಲಿ 2024ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ (Padma Awards 2024) ಆಯ್ಕೆಯಾಗಿರುವ 132 ಸಾಧಕರಿಗೂ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನೂ ತಿಳಿಸಿದ್ದಾರೆ. ಕರ್ನಾಟಕದ 9 ಮಂದಿ ಸೇರಿ ಒಟ್ಟು 132 ಮಂದಿಗೆ ಪ್ರಶಸ್ತಿ ಲಭಿಸಿದ್ದು, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಭಿನಂದನೆ ಸಲ್ಲಿಸಿದ್ದಾರೆ. https://ainlivenews.com/rs-3-lakh-loan-for-women-without-interest-how-to-apply-here-is-the-complete-details/ ಈ ವ್ಯಕ್ತಿಗಳು ಅದ್ಭುತ ಉದಾಹರಣೆಗಳನ್ನ ಸೃಷ್ಟಿಸಿದ್ದಾರೆ. ಮಾತ್ರವಲ್ಲದೇ ತಮ್ಮ ಸೇವೆಯಿಂದ ರಾಷ್ಟ್ರದ ಘನತೆಯನ್ನ ಹೆಚ್ಚಿದ್ದಾರೆ. ವಿವಿಧ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಬದಲಾವಣೆ ತರುತ್ತಿರುವ ಸಾಧಕರಿಗೆ ನಾನು ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Read More

‘ಬಿಗ್ ಬಾಸ್ ಸೀಸನ್ 10′ (Bigg Boss Kannada 10) ರಿಯಾಲಿಟಿ ಶೋ ಮುಗಿಯಲು ದಿನಗಣನೆ ಶುರುವಾಗಿದೆ. ಸ್ಪರ್ಧಿಗಳೆಲ್ಲರೂ ಎಲಿಮಿನೇಟ್ ಆಗಿ ಈಗ 6 ಸ್ಪರ್ಧಿಗಳು ಫಿನಾಲೆ ವೇದಿಕೆಗೆ ತಲುಪಿದ್ದಾರೆ. ಇವರಲ್ಲಿ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ. ಫಿನಾಲೆ ದಿನ ಅಂತಿಮವಾಗಿ ಇಬ್ಬರು ಸ್ಪರ್ಧಿಗಳು ಸುದೀಪ್ ಜೊತೆ ಇರಲಿದ್ದಾರೆ. ಅವರಲ್ಲಿ ಒಬ್ಬರಿಗೆ ಮಾತ್ರ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ. ಇದೀಗ ಅಂತಿಮವಾಗಿ ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ (Drone Prathap), ವಿನಯ್, ಕಾರ್ತಿಕ್, ತುಕಾಲಿ ಸಂತೂ, ವರ್ತೂರು ಸಂತೋಷ್ (Varthur Santhosh) ಫಿನಾಲೆಗೆ ಎಂಟ್ರಿ ಪಡೆದಿದ್ದಾರೆ. ಇದರ ಮಧ್ಯೆ ಒಬ್ಬರ ಎಲಿಮಿನೇಷನ್ ಈ ವಾರದ ಮಧ್ಯೆ ನಡೆಯಲಿದೆ ಎಂದು ಹೇಳಲಾಗಿತ್ತು. ಅದು ಫಿನಾಲೆ ದಿನವೇ ತಿಳಿಯಲಿದೆ ಎನ್ನಲಾಗುತ್ತಿದೆ. ಸದ್ಯ ಉಳಿದುಕೊಂಡಿರುವ 6 ಜನ ಸ್ಪರ್ಧಿಗಳಲ್ಲಿ ಸಖತ್ ಪೈಪೋಟಿ ಇದೆ. ಈ ಹಿಂದಿನ ಸೀಸನ್‌ನಲ್ಲಿ ಹಿರಿಯ ನಟಿ ಶೃತಿ ವಿನ್ನರ್ ಆಗಿದ್ದರು. ಈ…

Read More