Author: AIN Author

ಗದಗ: ರಾಮನಗರಿ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆ ದೇಶದೆಲ್ಲೆಡೆ ಇರುವ ರಾಮನ ಕುರುಹುಗಳು ಕಾಣಸಿಗ್ತಾಯಿವೆ. ಅಂತೆಯೇ ಗದಗ ಜಿಲ್ಲೆ ಗದಗ ತಾಲೂಕಿನ ಬೆಳಧಡಿ ಗ್ರಾಮಕ್ಕೂ ಸೀತೆ ವನವಾಸದಲ್ಲಿದ್ದ ಸಂದರ್ಭದಲ್ಲಿ ರಾಮ ಲಕ್ಷ್ಮಣರಿಬ್ಬರೂ ಒಂದು ದಿನ ಇಲ್ಲಿ ತಂಗಿದ್ರು ಅನ್ನುವ ಐತಿಹ್ಯವಿದೆ. ಸೀತಾನ್ವೇಷಣೆ ಸಂದರ್ಭದಲ್ಲಿ ಒಂದು ದಿನ ಕಾಲ ನಮ್ಮೂರಲ್ಲಿ ಶ್ರೀರಾಮನಿದ್ದ ಅನ್ನೋ ಕಾರಣಕ್ಕೆ ಈ ಊರಲ್ಲಿ ಶ್ರೀರಾಮಚಂದ್ರನ ಭವ್ಯ ಮಂದಿರವನ್ನ ನಿರ್ಮಿಸಲಾಗಿದ್ದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ದಿವಸ ಇಲ್ಲಿಯೂ ಸಹ ವಿಶೇಷ ಕಾರ್ಯಕ್ರಮಗಳು ಜರುಗಲಿವೆ.

Read More

ಬೆಂಗಳೂರು: ಅಯೋಧ್ಯೆಯ ರಾಮ ಮಂದಿರದಲ್ಲಿ ಶ್ರೀ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ  ಹಿನ್ನೆಲೆಯಲ್ಲಿ ನಗರದ  ಪೊಲೀಸ್ ಸಿಬ್ಬಂದಿ ಕೈ ಯಿಂದ ಮೂಡಿದ ಶ್ರೀರಾಮ ಮಂದಿರ ಜನರ ಗಮನ ಸೆಳೆದಿದ್ದಾರೆ. ಈಗಾಗಲೆ ರಾಮಲ್ಲಾ (ಬಾಲ ರಾಮ)ನ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಜನವರಿ 22 ರಂದು ಪ್ರಾಣ ಪ್ರತಿಷ್ಠೆ ನೆರವೇರಲಿದೆ. ದೇಶದ ಅಸಂಖ್ಯ ಭಕ್ತರು ಕಲೆ, ಸಂಗೀತ, ಸಾಹಿತ್ಯ ಹೀಗೆ ವಿವಿಧ ರೀತಿಯಲ್ಲಿ ರಾಮನಿಗೆ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ. ಹೌದು ಗಿರಿನಗರ ಠಾಣೆಯ ಪೊಲೀಸ್ ಸಬ್​ಇನ್ಸ್ ಪೆಕ್ಟರ್ ಮಂಜುನಾಥ್ ಅವರಿಗೆ ಚಿತ್ರ ಬಿಡಿಸುವುದು ತುಂಬಾ ಇಷ್ಟ. ಇದನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ಇದೀಗ ಶ್ರೀರಾಮಮಂದಿರ ಚಿತ್ರ ಬಿಡಿಸುವ ಮೂಲಕ ಸಿಬ್ಬಂದಿ ಮತ್ತು ಜನರ ಗಮನ ಸೆಳೆದಿದ್ದಾರೆ. ಇವರು ಚಿತ್ರ ಬಿಡಿಸುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

Read More

ವಿಜಯನಗರ:- ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಅಟಲ್‌ಬಿಹಾರಿ ವಾಜಪೇಯಿ ಜೂಲಾಜಿಕಲ್‌ ಪಾರ್ಕ್‌ಗೆ ಮತ್ತೊಂದು ಜಿರಾಫೆ ಆಗಮನವಾಗಿದೆ. ಕಳೆದ ವರ್ಷ ಹಂಪಿ ಉತ್ಸವದ ವೇಳೆಗೆ ಬಿಹಾರದ ಪಾಟ್ನಾದಿಂದ ಹೆಣ್ಣು ಜಿರಾಫೆ ತರಲಾಗಿತ್ತು. ಈಗ ಮೈಸೂರು ಮೃಗಾಲಯದಿಂದ ಗಂಡು ಜಿರಾಫೆ ಅತಿಥಿಯಾಗಿ ಬಂದಿದೆ. ಈ ಬಾರಿ ಹಂಪಿ ಉತ್ಸವ ಕಳೆಗಟ್ಟಿಸಲು ಜಿರಾಫೆ ಆಗಮನವಾಗಿದೆ. ಈ ಜೋಡಿ ಜಿರಾಫೆಗಳು ಈಗ ಮೃಗಾಲಯದಲ್ಲಿ ಆಕರ್ಷಣೆಯ ಕೇಂದ್ರವಾಗಿವೆ. ಶಂಕರ್ ಎಂಬ ಗಂಡು ಜಿರಾಫೆ ಮೂರು ವರ್ಷದ್ದಾಗಿದ್ದು, ಮೈಸೂರು ಮೃಗಾಲಯದಿಂದ ತರಲಾಗಿದೆ. ಪಾಟ್ನಾದಿಂದ ತಂದಿರುವ ಹೆಣ್ಣು ಜಿರಾಫೆ ನಾಲ್ಕು ವರ್ಷದ್ದಾಗಿದೆ. ಈಗ ಜಿರಾಫೆ ಜೋಡಿಗಳು ಕೇಂದ್ರ ಬಿಂದುವಾಗಿವೆ. ಈಗಾಗಲೇ ವಿವಿಧ ಪ್ರಾಣಿ, ಪಕ್ಷಿಗಳನ್ನು ಹೊಂದಿರುವ ಮೃಗಾಲಯ, ಪ್ರವಾಸಿಗರನ್ನು ಸೆಳೆಯುತ್ತಿದೆ.

Read More

ಬೆಂಗಳೂರು: ಅಯೋಧ್ಯೆ ರಾಮಪ್ರತಿಷ್ಠಾಪನೆಗೆ ಇನ್ನೆರಡು ದಿನ ಬಾಕಿ ಉಳಿದಿದ್ದು ಹಾಗೆ  ಅಯೋಧ್ಯೆಯಲ್ಲಿ ನಡೆಯಲಿರುವ ವಾದ್ಯ ಮೇಳಕ್ಕೆ ಕನ್ನಡತಿ ಶುಭಾ ಸಂತೋಷ  ಅವರು ಆಯ್ಕೆ ಆಗಿದ್ದಾರೆ. ಆಹ್ವಾನ ಸಿಕ್ಕ ವಿಷಯ ಕೇಳಿ ಸಂತಸಗೊಂಡ ಶುಭಾ ರಾಮ ಮಂದಿರ ಉದ್ಘಾಟನೆ ದಿನ ಸಮರ್ಪಣ ಮನೋಭಾವದಲ್ಲಿ ನಡೆಯುವ ಮೇಳ ಈ ಮೇಳದಲ್ಲಿ ವೀಣೆಯನ್ನು‌ ನುಡಿಸಲಿರುವ ಕನ್ನಡತಿ ಶುಭಾ 22 ರಾಜ್ಯಗಳ ಶಾಸ್ತ್ರೀಯಾ ಸಂಗೀತಾ ವಾದ್ಯಗಳು ಹಾಗೂ ಹಿಂದುಸ್ತಾನಿ ಸಂಗೀತ ವಾದ್ಯಗಳು ಶುಭಾ ಗುರುಗಳು ಶ್ರೀ ವಿದ್ಯೆಶ ತೀರ್ಥ ಶ್ರೀ ಪಾದರು ಈಗಾಗಲೇ  250ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ವೀಣೆ ನುಡಿಸಿರುವ ಶುಭಾ ಈಗ ರಾಮಂದಿರಲ್ಲಿ ನುಡಿಸಲು ಸದಾವಕಾಶ ಸಿಕ್ಕಿದು ಅದೃಷ್ಟ ಎಂದು ಹೇಳಿದ್ದಾರೆ. “ಜಯತು ಕೋಂದಡ ರಾಮ ಜಯತು ದಶರತ ರಾಮ” ಹಾಡು ಹಾಡಿರುವ ಶುಭಾ ಸಂತೋಷ್ ರಾಮನ ಮುಂದೆ ಹಾಡಲು 40 ವರ್ಷದ ತಂಜಾವೂರಿನ ವೀಣೆಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿರುವ ಶುಭ ಸಂತೋಷ್

Read More

ಯಾದಗಿರಿ:- ಅಯೋಧ್ಯೆಯ ಶ್ರೀರಾಮ ಮಂದಿರ ಬಗ್ಗೆ ಕಾಂಗ್ರೆಸ್ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಭಾರೀ ಚರ್ಚೆಗೆ ಹುಟ್ಟು ಹಾಕಿದೆ. Vo. ರಾಮ ಮಂದಿರದಿಂದ ನಮಗ್ಯಾರಿಗು, ಬಡವರಿಗು ಹೊಟ್ಟೆ ತುಂಬುವುದಿಲ್ಲ ರಾಮ ಮಂದಿರದಿಂದ ಯಾರಿಗೇನು ಆಗಲ್ಲ ಎಂಬ ಹೇಳಿಕೆ ನೀಡಿ ಉದ್ಧಟತನ ತೋರಿದ್ದಾರೆ. ಕಾಂಗ್ರೆಸ್ 75 ವರ್ಷದಿಂದ ಏನು ಮಾಡಿದೆ ಅಂತಾ ಕೇಳ್ತಾರೆ. ಕಾಂಗ್ರೆಸ್ ರಾಮ ಮಂದಿರ ಮಾಡಿಲ್ಲ. ಬಿಜೆಪಿ ರಾಮ ಮಂದಿರ ಮಾಡಿದ್ದಾರೆ ಅಂತಾರೆ. ನಾವು ಶಾಲೆ, ದವಾಖಾನೆ, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಇರಿಗೇಷನ್ ಮಾಡೀವಿ ಅಂತಾ ಹೇಳಿವಿ. ಜನರಿಗೆ ಏನು ಬೇಕು ಅದು ಮಾಡೀವಿ. ಆದ್ರೆ ನಾವು ರಾಮ ಮಂದಿರವನ್ನು ವಿರೋಧ ಮಾಡಲ್ಲ ಎಂದು ದರ್ಶನಾಪುರ ಸಮಜಾಯಿಸಿ ನೀಡಿದ್ದಾರೆ.

Read More

ಬಳ್ಳಾರಿ:- ಕಿಡಿಗೇಡಿಗಳಿಂದ ಭತ್ತದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದ ಹಿನ್ನೆಲೆ, ಬೃಹತ್ ಬಣವೆ‌‌ಗಳು ಸುಟ್ಟು ಕರಕಲಾದ ಘಟನೆ ಜರುಗಿದೆ ಬಳ್ಳಾರಿ ಜಿಲ್ಲೆ ಬಳ್ಳಾರಿ ತಾಲೂಕಿನ ಹರಗಿನಡೋಣಿ ಗ್ರಾಮದಲ್ಲಿ ಘಟನೆ ಜರುಗಿದೆ. ಜಂಬಯ್ಯ ಎಂಬುವ ರೈತನಿಗೆ ಸೇರಿದ ಭತ್ತದ ಹುಲ್ಲಿನ ಬಣವೆ ಇದಾಗಿದ್ದು, ಅಂದಾಜು 1.5 ಲಕ್ಷ ರೂ ಹಾನಿ ಬೆಲೆಬಾಳುವ ಮೇವು ಬೆಂಕಿಗೆ ಆಹುತಿ ಆಗಿದೆ. ಬೆಂಕಿ ಹತ್ತಿದ ಬಣವೆ ಸುತ್ತಲೂ ಇವೆ ಹತ್ತಾರು ಬಣವೆಗಳು ಇದ್ದು, ಗ್ರಾಮಸ್ಥರ ಸಮಯ ಪ್ರಗ್ನೆಯಿಂದ ಹತ್ತಾರು ಬಣವೆಗಳು ಉಳಿದಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿ ಆಗಿದ್ದಾರೆ. ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ದೇವನಹಳ್ಳಿ- ಒಂದೆಡೆ ಆಯೋದ್ಯೆಯಲ್ಲಿ ಪ್ರಭು ಶ್ರೀ ರಾಮನ ದಿವ್ಯ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಮತ್ತೊಂದೆಡೆ ಸೀತಾ ರಾಮನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರ ಒಂದು ಝಲಕ್ ಇಲ್ಲಿದೆ ನೋಡಿ. ಹೌದು, ಬೆಂಗಳೂರು ಕೆಂಪೇಗೌಡ ಏರ್ಪೋಟ್ ನಲ್ಲೂ ರಾಮನ ಮೂರ್ತಿಗಳ ಮಾರಾಟ ಬಲು ಜೋರಾಗಿಯೇ ನಡೆಯುತ್ತಿದೆ. ಏರ್ಪೋರ್ಟ್ ನ ಟರ್ಮಿನಲ್ ಒಳಭಾಗದ ಅಂಗಡಿಗಳಲ್ಲಿ ರಾಮನ ಮೂರ್ತಿಗಳಿಗೆ ಭಾರಿ ಬೇಡಿಕೆ ಇದ್ದು, ಪ್ರಯಾಣ ಮಾಡುವ ವೇಳೆ ಸೀತಾ ರಾಮ ಹಾಗೂ ಹನುಮನ ಮೂರ್ತಿಗಳನ್ನು ಪ್ರಯಾಣಿಕರು ಖರೀದಿ ಮಾಡ್ತಿದ್ದಾರೆ. ವಿವಿಧ ಬಗೆಯ ಮೂರ್ತಿಗಳು ಪ್ರಯಾಣಿಕರ ಕಣ್ಮನ ಸೆಳೆಯುತ್ತಿವೆ. ಟರ್ಮಿನಲ್ ಒಳ ಭಾಗದ ಅಂಗಡಿಗಳಲ್ಲಿ ಮೂರ್ತಿಗಳ ಮಾರಾಟ ಮಾಡಲಾಗುತ್ತಿದ್ದು, ಎಲ್ಲರ ಗಮನ ಶ್ರೀ ರಾಮನ ಮೇಲೆ ನೆಟ್ಟಿದೆ.

Read More

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanatara) ನಟನೆಯ ‘ಅನ್ನಪೂರ್ಣಿ’ (Annapoorni Film) ಇತ್ತೀಚೆಗೆ ಒಟಿಟಿಯಲ್ಲಿ ತೆರೆಕಂಡಿತ್ತು. ಬಳಿಕ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿತ್ತು. ಚಿತ್ರದಲ್ಲಿನ ರಾಮನೂ ಮಾಂಸಾಹಾರ ಸೇವನೆ ಮಾಡಿದ್ದ ಎಂಬ ಡೈಲಾಗ್ ಸೇರಿದಂತೆ ಹಲವು ದೃಶ್ಯಗಳು ವಿವಾದ ಸೃಷ್ಟಿ ಮಾಡಿತ್ತು. ಇದೀಗ ಈ ಕಾಂಟ್ರವರ್ಸಿ ಬಗ್ಗೆ ನಯನತಾರಾ ಮೌನ ಮುರಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಭಾರವಾದ ಹೃದಯದಿಂದ ಮತ್ತು ಸತ್ಯದ ಆಧಾರದ ಮೇಲೆ ಈ ಬರಹ ಬರೆಯುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ನಮ್ಮ ‘ಅನ್ನಪೂರ್ಣಿ’ ಚಿತ್ರ ಮಾಡಿದ ವಿವಾದಕ್ಕೆ ಸಂಬಂಧಿಸಿದಂತೆ ನನ್ನ ಅಭಿಪ್ರಾಯ ಹಂಚಿಕೊಳ್ಳಲು ಬಯಸುತ್ತೇನೆ ಎಂದು ನಟಿ ರಿಯಾಕ್ಟ್ ಮಾಡಿದ್ದಾರೆ. ಜೈ ಶ್ರೀರಾಮ್ (Jai Shreeram) ಎಂದು ಮೊದಲು ಬರೆದುಕೊಂಡಿದ್ದಾರೆ. ಸಿನಿಮಾ ಮಾಡುವುದು ಎಂದರೆ ಕೇವಲ ಆರ್ಥಿಕ ಲಾಭಕ್ಕೆ ಮಾತ್ರವಲ್ಲ ಸಮಾಜಕ್ಕೆ ಒಂದು ಸಂದೇಶ ತಿಳಿಸುವ ಉದ್ದೇಶವೂ ಇರುತ್ತದೆ. ‘ಅನ್ನಪೂರ್ಣಿ’ ಚಿತ್ರವನ್ನು ನಿಷ್ಕಲ್ಮಶ ಮನಸ್ಸಿನಿಂದ ಮಾಡಲಾಗಿದೆ. ನಮ್ಮ ನಿಜ ಜೀವನದಲ್ಲಿ ಏನು ನಡೆಯುತ್ತಿದೆಯೋ ಅದನ್ನೇ ತೋರಿಸುವುದೇ…

Read More

ಮಂಡ್ಯ:- ವೈದ್ಯರ ಮನೆಯಲ್ಲಿ ಕಳ್ಳತನ ನಡೆದಿದ್ದು, ಅಪಾರ ಪ್ರಮಾಣದ ನಗದು-ಚಿನ್ನಾಭರಣ ಕಳವು ಆಗಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಕೆ.ಹೆಚ್.ನಗರದಲ್ಲಿ ಜರುಗಿದೆ. ಇನ್ನೂ ಕಳ್ಳತನ ಮಾಡಿದ ಪುಂಡರು ಬಳಿಕ ಸಿಸಿಟಿವಿ ಕ್ಯಾಮರಾದ ಪೋಟೋಜ್ ಜೊತೆ ಪರಾರಿಯಾಗಿದ್ದಾರೆ. ತೈಲೂರು ಗ್ರಾಮದ ಡಾ.ಟಿ.ಚಂದ್ರ ಅವರ ಮನೆಯಲ್ಲಿ ರಾತ್ರೋರಾತ್ರಿ ಕಳ್ಳರು ಕೈ ಚಳಕ ತೋರಿದ್ದು, ಅಲ್ಲದೇ ಚಿನ್ನಾಭರಣದ ಜೊತೆಗೆ ಎಂಟು ಲಕ್ಷ ನಗದು ದೋಚಿ ಪರಾರಿ ಆಗಿದ್ದಾರೆ. ಕದ್ದ ಮಾಲುಗಳ ಮೌಲ್ಯ ಸುಮಾರು 45 ಲಕ್ಷ ಇದ್ದು, ಮನೆಯಲ್ಲಿ ಯಾರು ಇಲ್ಲದಿದ್ದಾಗ ಹೊಂಚು ಹಾಕಿ ಕಳವು ಮಾಡಲಾಗಿದೆ. ಕಳ್ಳತನ ಮಾಡಿ ಜೊತೆಗೆ ಸಿಸಿಟಿವಿ ಕ್ಯಾಮರಾದ ಪೋಟೋಜ್ ಜೊತೆ ಖತರ್ನಾಕ್ ಗಳು ಎಸ್ಕೇಪ್ ಆಗಿದ್ದಾರೆ. ಮನೆಯಲ್ಲಿದ್ದ14 ಚಿನ್ನದ ಬಳೆ, 4 ಜೊತೆ ಡೈಮಂಡ್ ಓಲೆ, 02 ಕರಿಮಣಿ ಸರ , ಒಂದು ಚಿನ್ನದ ತುಳಸಿ ಹಾರ, 5 ಚಿನ್ನದ ಸರ ಮತ್ತು 3 ವೈಟ್ ಪೆಡೆಂಟ್ ,3 ಚಿನ್ನದ ಪೆಡೆಂಟ್, ಎರಡು ಎಳೆ ಚಿನ್ನದ ಸರ…

Read More

ಬೆಂಗಳೂರು:  ನಿರ್ಮಾಣ ಹಂತದ ಶಾಲಾ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ 6 ಜನ ಗಂಭೀರ ಗಾಯಗೊಂಡವರನ್ನ ಆಸ್ಪತ್ರೆಗೆ  ಶಿಫ್ಟ್‌ ಮಾಡಲಾಗಿದೆ. ಕುಸಿದ ಸ್ಥಳದಲ್ಲಿ ಇದ್ದ 16ಕ್ಕೂ ಹೆಚ್ಚು ಕಾರ್ಮಿಕರು ಇದ್ದು ಅದರಲ್ಲಿ 6 ಜನರ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಟ್ಟಡದ ಅವಶೇಷಗಳಡಿ ಇನ್ನೂ ಹಲವು ಕಾರ್ಮಿಕರು ಸಿಲುಕಿರುವ ಶಂಕೆ ಇದೆ. ಎರಡನೇ ಅಂತಸ್ತಿನ ನಿರ್ಮಾಣದ ವೇಳೆ ಕಟ್ಟಡ ಕುಸಿದಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.

Read More