Author: AIN Author

ಬೆಂಗಳೂರು:- ಶೆಟ್ಟರ್ ನಂಬಿಕೆ ದ್ರೋಹ ಮಾಡುತ್ತಾರೆ ಎಂದು ಭಾವಿಸಿರಲಿಲ್ಲ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಅವರ ಆಡಿದ ಮಾತುಗಳು ನಂಬಿ ಮತ್ತು ಹಿರಿತನಕ್ಕೆ ಗೌರವ ನೀಡಿ, ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮೂಲ ಅಭ್ಯರ್ಥಿ ಸುಲಭವಾಗಿ ಗೆಲ್ಲುವ ಅವಕಾಶವಿದ್ದರೂ ಅದನ್ನು ಶೆಟ್ಟರ್ ಅವರಿಗೆ ಬಿಟ್ಟುಕೊಡಲಾಯಿತು. ಅದರೆ ಶೆಟ್ಟರ್ 35,000 ಮತಗಳ ಅಂತರದಿಂದ ಸೋತರು. ಆಗಲೂ ಕಾಂಗ್ರೆಸ್ ಅವರನ್ನು ಬಿಟ್ಟುಕೊಡದೆ, ಅವರ ವಯಸ್ಸಿಗೆ ಮನ್ನಣೆ ನೀಡಿ ವಿಧಾನ ಪರಿಷತ್ ಸದಸ್ಯನಾಗಿ ನೇಮಕ ಮಾಡಿತು ಎಂದು ಶಿವಕುಮಾರ್ ಹೇಳಿದರು. ಕಳೆದ 2-3 ತಿಂಗಳಿಂದ ಅವರು ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸುತ್ತಿದ್ದ ವಿಷಯ ತನ್ನ ಗಮನಕ್ಕೆ ಬಂದಿತ್ತು ಎಂದ ಅವರು, ನಿನ್ನೆ ಬೆಳಗ್ಗೆಯೂ ಅವರೊಂದಿಗೆ ಮಾತಾಡಿದ್ದೆ ಎಂದರು.

Read More

ರಾಜಧಾನಿ ಬೆಂಗಳೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಯಂಡ್‌ ನ್ಯೂರೋ ಸೈನ್ಸಸ್‌ ಅರ್ಜಿ ಆಹ್ವಾನಿಸಿದೆ. ನ್ಯೂರಾಲಜಿಸ್ಟ್, ಫಿಸಿಯೋಥೆರಪಿಸ್ಟ್, ಕ್ಲಿನಿಕಲ್ ಸೈಕಾಲಜಿಸ್ಟ್, ಡೇಟಾ ಎಂಟ್ರಿ ಆಪರೇಟರ್ ಮತ್ತು ಖಾತೆ ಸಹಾಯಕ ಸೇರಿ ಸುಮಾರು 162 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದ್ದು, ಆಸಕ್ತರು ಜನವರಿ 25ರಿಂದ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹುದ್ದೆ ವಿವರ ನರವಿಜ್ಞಾನಿ: ಎಂಬಿಬಿಎಸ್‌, ಡಿಎಂ, ಎಂಡಿ-33 ಹುದ್ದೆ ನ್ಯೂರೋ ನರ್ಸ್: ಎಂ.ಎಸ್‌ಸಿ-1 ಹುದ್ದೆ ನರ್ಸ್: ಬಿ.ಎಸ್ಸಿ-30 ಹುದ್ದೆ ಕ್ಲಿನಿಕಲ್ ಸೈಕಾಲಜಿಸ್ಟ್: ಎಂ.ಫಿಲ್‌, ಎಂಎ, ಎಂ.ಎಸ್‌ಸಿ-32 ಹುದ್ದೆ ವೈದ್ಯಕೀಯ ಸಮಾಜ ಸೇವಕ: ಸ್ನಾತಕೋತ್ತರ ಪದವಿ-1 ಹುದ್ದೆ ಡೇಟಾ ಎಂಟ್ರಿ ಆಪರೇಟರ್ ಮತ್ತು ಖಾತೆ ಸಹಾಯಕ: ಪದವಿ-1 ಹುದ್ದೆ ಫಿಸಿಯೋಥೆರಪಿಸ್ಟ್: ಪದವಿ-32 ಹುದ್ದೆ ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್ ಮತ್ತು ಆಡಿಯಾಲಜಿಸ್ಟ್/ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್: ಪದವಿ-32 ಹುದ್ದೆ ಸಂದರ್ಶನದ ದಿನಾಂಕ ನರವಿಜ್ಞಾನಿ: ಜನವರಿ 29 ನ್ಯೂರೋ ನರ್ಸ್: ಜನವರಿ…

Read More

ಚಾಮರಾಜನಗರ: ಗಣರಾಜ್ಯೋತ್ಸವದಿನದಂದು ಆಕ್ಸಿಜನ್ ದುರಂತದಲ್ಲಿ ಮಡಿದ ಕುಟುಂಬಸ್ಥರಿಗೆ ಗುಡ್ ನ್ಯೂಸ್ ನೀಡಿದೆ. ಹೌದು ಕೋವಿಡ್ ಆಸ್ಪತ್ರೆಯಲ್ಲಿ 2021ರ ಮೇ 2ರಂದು ಆಮ್ಲಜನಕ ಸಕಾಲದಲ್ಲಿ ಪೂರೈಕೆಯಾಗದೆ ಮೃತಪಟ್ಟ 32 ಮಂದಿಯ ಕುಟುಂಬದ ಸದಸ್ಯರಿಗೆ ಫೆ.1ರಿಂದ ಸರ್ಕಾರಿ ಕೆಲಸ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಘೋಷಿಸಿದರು. ಗಣರಾಜ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಫೆ.1ರಿಂದ ಅವರು ಜಿಲ್ಲೆಯಲ್ಲಿ ಕೆಲಸ ಮಾಡಬಹುದು. ಸಂತ್ರಸ್ತರ ಕುಟುಂಬದವರು ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸಬೇಕು. ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚು ಅವಕಾಶ ನೀಡಲಾಗುವುದು’ ಎಂದರು. ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಈ ಕುರಿತು ಪ್ರಸ್ಥಾಪಿಸಿದ್ರು.ಸ್ವತಃ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ವೇಳೆ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಭರವಸೆ ನೀಡಿದ್ರು.ಇಂದು ಧ್ವಜಾರೋಹಣ ಬಳಿಕ ಭಾಷಣದಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತ ಪಟ್ಟ 32 ಕುಟುಂಬದ ಸದಸ್ಯರಿಗೆ ಕೆಲಸ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

Read More

ಗದಗ: ಕಾಂಗ್ರೆಸ್ ಸಮುದ್ರ ಇದ್ದಂತೆ ಜಗದೀಶ್ ಶೆಟ್ಟರ್ ಬಂದ್ರು ಅಂತ ಉಕ್ಕಲಿಲ್ಲ ಅವರು ಹೋದರು ಅಂತ ಹೆಚ್ಚು ಕಡಿಮೆಯಾಗಿಲ್ಲ ಎಂದು ಗದಗದಲ್ಲಿ ಕಾನೂನು ಸಚಿವ ಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತತ್ವ, ಸಿದ್ಧಾಂತ, ಜನಪರ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ಸಂಘಟನೆಗೆ ಶಕ್ತಿ ನೀಡಿದೆ. ಕ್ರಾಂತಿಕಾರಕ ಬದಲಾವಣೆಯನ್ನು ರಾಜ್ಯದಲ್ಲಿ ಕಾಂಗ್ರೆಸ್ ತಂದಿದೆ. ನಮ್ಮನ್ನು ನೋಡಿ ಮೋದಿ ಅವರೂ ಗ್ಯಾರಂಟಿ ಅನ್ನೋದಕ್ಕೆ ಪ್ರಾರಂಭಿಸಿದ್ರು. ಯಾರೋ ಒಬ್ಬರು ಹೋದರು ಹಂತ ಕಾಂಗ್ರೆಸ್ ಮೇಲೆ ಪರಿಣಾಮ ಬೀರಲ್ಲ, ಶೆಟ್ಟರ್ ಅವರು ಜೆಂಟಲ್ ಮ್ಯಾನ್ ಅಂತ ತಿಳಿದುಕೊಂಡು ಸ್ವಾಗತಿಸಿದ್ವಿ, ಅವರು ಸಿಎಂ ಆದವರು ಅವರಿಗೆ ಎಂಎಲ್ಎ ಟಿಕೆಟ್ ಕೊಟ್ಟಿದ್ದೇವೆ. ಸೋಲಾದಾಗ ಗೌರವಕ್ಕೆ ಚ್ಯುತಿ ಬರಬಾರದು ಅಂತ ಎಂಎಲ್ಸಿ ಮಾಡಿದ್ವಿ. ಅವರ ಜೊತೆಗೆ ನಡೆದುಕೊಂಡ ರೀತಿ ಅವರು ಬಿಟ್ಟು ಹೋಗಿದ್ದಾರೆ. ಕಾಂಗ್ರೆಸ್ಗೆ ಚಿಂತೆ ಮಾಡುವ ವಿಷಯ ಏನಿಲ್ಲ ಎಂದು ಹೇಳಿದರು.‌  ಇನ್ನು ಶೆಟ್ಟರ್ ಶೆಟ್ಟರ್ ಘರ್ ವಾಪ್ಸಿಯಿಂದ  ಲಿಂಗಾಯತ ಮತಗಳು ಮತ್ತೆ ಬಿಜೆಪಿ ಕಡೆಗೆ…

Read More

ಮಧುಮೇಹಿಗಳು ದಾಳಿಂಬೆ ಹಣ್ಣು ಸೇವಿಸಬಹುದೇ? ಬೇಡವೇ? ಎಂಬ ಗೊಂದಲ ಹಲವರಲ್ಲಿದೆ. ಹಾಗಾಗಿ ಇದರ ಬಗ್ಗೆ ತಿಳಿಯೋಣ. ದಾಳಿಂಬೆಯಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತದೆ, ಕಬ್ಬಿಣ, ವಿಟಮಿನ್ ಸಿ, ಕೆ, ಫೈಬರ್, ಒಮೆಗಾ 6 ಕೊಬ್ಬಿನಾಮ್ಲ, ಪೊಟ್ಯಾಶಿಯಂ, ಸತು ಮುಂತಾದವು ಕಂಡುಬರುತ್ತದೆ. ಇದು ದೇಹದ ಬೆಳವಣಿಗೆಗೆ ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಇದನ್ನು ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಮಧುಮೇಹಿಗಳು ದಾಳಿಂಬೆ ಹಣ್ಣುಗಳನ್ನು ಸೇವಿಸಬಹುದು. ಇದರಲ್ಲಿರುವ ಫೈಬರ್ ಅಂಶ ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಆಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿರುವ ಕಾರಣ ಇದು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

Read More

ಚಿತ್ರದುರ್ಗ: ಸವದಿ ನಮ್ಮ ಉತ್ತಮವಾದ ಗೆಳೆಯರು, ರಾತ್ರಿ ನಾನವರ ಜೊತೆ ದೀರ್ಘವಾಗಿ ಮಾತನಾಡಿದ್ದೇನೆ. ಅವ್ರು ಯಾವುದೇ ಕಾರಣಕ್ಕೂ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ ಎಂದು ಲಕ್ಷಣ ಸವದಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ ವಿಚಾರಕ್ಕೆ ಚಿತ್ರದುರ್ಗದಲ್ಲಿ ಸಚಿವ ಡಿ. ಸುಧಾಕರ್ ಪ್ರತಿಕ್ರಿಯೇ ನೀಡಿದ್ದಾರೆ. ಅವರು ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಇಲ್ಲೇ ಇರ್ತಾರೆ. ಕಾಂಗ್ರೆಸ್ ಪಕ್ಷ ಅವರನ್ನು ಗೌರವದಿಂದ ಕಂಡಿದೆ. ಇನ್ನೂ ಜಗದೀಶ್‌ ಶೆಟ್ಟರ್ ಬಿಜೆಪಿ ಅವರಿಗೆ ಟಿಕೆಟ್  ಕೊಡದಿದ್ದಾಗ ಅವ್ರನ್ನ ಗೌರವಿಸಿದ್ದೇವೆ. ಅವ್ರು ಸೋತ್ರೂ ಕೂಡ ಎಂಎಲ್ಸಿ ಮಾಡಿದ್ದಾರೆ. ಆದ್ರೂ ಯಾಕೆ ಹೋದ್ರು ಅಂತಾ ಅವರನ್ನೇ ಕೇಳಬೇಕು.‌ ಸವದಿ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ರು ಅನ್ನೋದು ಸತ್ಯಕ್ಕೆ ದೂರ ಎಂದು ಹೇಳಿದರು. ಇನ್ನೂ ಕಾಂಗ್ರೆಸ್ ನಲ್ಲಿ ಡಿಸಿಎಂ ಚರ್ಚೆ ನಡೆದಿರುವ ವಿಚಾರಕ್ಕೆ ಎಲ್ಲವೂ ಸತ್ಯಕ್ಕೆ ದೂರವಾಗಿದ್ದು, ಸಧ್ಯ ನಮ್ಮ ಮುಂದಿರೋದು ಲೋಕಸಭಾ ಚುನಾವಣೆ, ಅದಕ್ಕೆ ಗಮನ ಹರಿಸಿ ನಾವು ಯಶಸ್ವಿಯಾಗುತ್ತೇವೆ ಎಂದರು. ಶಾಸಕ ಟಿ. ರಘುಮೂರ್ತಿ ನಿಗಮ ಂಮಡಳಿಗೆ ಪರಿಗಣಿಸದಂತೆ ಪತ್ರ ಬರೆದ…

Read More

ತೆಂಗಿನ ಎಣ್ಣೆಯ ಆರೋಗ್ಯ ಪ್ರಯೋಜನಗಳು ಹಿಂದೆ ಯೋಚಿಸಿದಷ್ಟು ಉತ್ತಮವಾಗಿಲ್ಲ ಎಂದು ಕೆಲವರು ವಾದಿಸುತ್ತಾರೆ. ಇದಕ್ಕೆ ಕಾರಣಗಳೇನು ತಿಳಿಯೋಣ. ಹೆಚ್ಚಿನ ಕೊಬ್ಬು ತೆಂಗಿನ ಎಣ್ಣೆಯು ಹೆಚ್ಚಿನ ಮಟ್ಟದ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಇದು ದೇಹದಲ್ಲಿ LDL ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಕೊಬ್ಬಿನಾಮ್ಲಗಳ ಉತ್ತಮ ಮೂಲ ಒಮೆಗಾ -3 ಮತ್ತು ಒಮೆಗಾ -6 ನಂತಹ ಅಗತ್ಯ ಕೊಬ್ಬಿನಾಮ್ಲಗಳು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಅಗತ್ಯ. ಆದರೆ ಅವುಗಳು ಗಮನಾರ್ಹ ಪ್ರಮಾಣದಲ್ಲಿ ತೆಂಗಿನ ಎಣ್ಣೆಯಲ್ಲಿ ಕಂಡುಬರುವುದಿಲ್ಲ. ಆದ್ದರಿಂದ ಆರೋಗ್ಯಕರ ಕೊಬ್ಬಿನ ದೈನಂದಿನ ಸೇವನೆಗೆ ತೆಂಗಿನ ಎಣ್ಣೆಯನ್ನು ಮಾತ್ರ ಅವಲಂಬಿಸುವುದರಿಂದ ಕೊರತೆಯಾಗಬಹುದು. ಹೆಚ್ಚಿನ ಕ್ಯಾಲೋರಿ ತೆಂಗಿನ ಎಣ್ಣೆಯನ್ನು ಇತರ ಅಡುಗೆ ಎಣ್ಣೆಗಳಿಗೆ ‘ಆರೋಗ್ಯಕರ’ ಎಂದೇ ಹೇಳಲಾಗುತ್ತದೆ. ಆದರೆ ಇದರಲ್ಲಿ ಕೊಬ್ಬಿನಂಶ ಹೆಚ್ಚಾಗಿದೆ. ಇದು ಹೆಚ್ಚಿನ ಸಂಖ್ಯೆಯ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಅಗತ್ಯ ಪೋಷಕಾಂಶಗಳ ಕೊರತೆ ತೆಂಗಿನ ಎಣ್ಣೆಯು ವಿಟಮಿನ್‌ ಇ ಮತ್ತು ಲಾರಿಕ್ ಆಮ್ಲದಂತಹ ಕೆಲವು ಪ್ರಯೋಜನಕಾರಿ ಪೋಷಕಾಂಶಗಳನ್ನು ಹೊಂದಿದೆ. ಆದರೆ ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಅನೇಕ…

Read More

ಚಾಮರಾಜನಗರ: ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷ ಪಿ. ಮರಿಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ನಂತರ ಸಂವಿಧಾನದ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ನ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್ , ಆರ್.ಮಹದೇವ್ , ಕೆಪಿಸಿಸಿ ಸದಸ್ಯ ಸೈಯದ್ ರಫಿ, ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಮಹಮ್ಮದ್ ಅಜ್ಗರ್ , ಚೂಡಾ ಮಾಜಿ ಅಧ್ಯಕ್ಷ ಸುಹೇಲ್ ಆಲಿ ಖಾನ್, ಎಪಿಎಂಸಿ ಮಾಜಿ ಅಧ್ಯಕ್ಷ, ನಾಗೇಂದ್ರ , ಮುಖಂಡರಾದ ಡಿ.ಎನ್. ನಟರಾಜ್ , ಕಾಗಲವಾಡಿ ಚಂದ್ರು, ದೊಡ್ಡರಾಯಪೇಟೆ ಮೂರ್ತಿ ,ರವಿ ಗೌಡ, ಶಿವಮೂರ್ತಿ, ಮಸಗಾಪುರ ರಾಜು, ಯುವ ಕಾಂಗ್ರೆಸ್ ನ ಉಪಾಧ್ಯಕ್ಷ ನಾಗೇಂದ್ರ ನಾಯಕ, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಗೌಡಹಳ್ಳಿ ರಾಜೇಶ್, ವಿದ್ಯಾರ್ಥಿ ಕಾಂಗ್ರೆಸ್ ನ ಅಧ್ಯಕ್ಷ ಮೋಹನ್ ಕುಮಾರ್, ಕಾರ್ಮಿಕ ಘಟಕದ ಅಧ್ಯಕ್ಷ ಮಹೇಶ್ , ಶ್ರೀನಿವಾಸ್,ಅಕ್ಷಯ್ ಹಾಗೂ ಇತರರು ಉಪಸ್ಥಿತರಿದ್ದರು.

Read More

ಕೋಲಾರ : ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಜನರ ಕಣ್ಣಲ್ಲಿ ಹೊಳಪು ಕಾಣುತಿದ್ದೇವೆ ಎಂದು ಸಚಿವ ಬೈರತಿ ಸುರೇಶ್‌ ಹೇಳಿದ್ದಾರೆ. ಕೋಲಾರದಲ್ಲಿ ಮಾಡನಾಡಿದ ಅವರು, ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಜನರ ಕಣ್ಣಲ್ಲಿ ಹೊಳಪು ಕಾಣುತಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ 15-20 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನೂ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಪಕ್ಷವನ್ನು ತೊರೆದು ಬಿಜೆಪಿಗೆ ಮರಳಿದ್ದರಿಂದ ನಮಗೆ ಯಾವುದೇ ನಷ್ಟವಿಲ್ಲ ಎಂದು ಸಚಿವ ಬೈರತಿ ಸುರೇಶ್‌ ಹೇಳಿದ್ದಾರೆ.  ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳಿಗೆ ಯಾವ ಕೊರತೆಯೂ ಇಲ್ಲ ಎಂದಿದ್ದಾರೆ. ಈ ಬಾರಿ ಜನತಾದಳ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್‌ ಪಕ್ಷಕ್ಕೆ ನೇರವಾಗಿ ಲಾಭವಾಗಲಿದೆ ಎಂದು ನುಡಿದ ಬೈರತಿ ಸುರೇಶ್‌, ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದಲೂ ಬಿಜೆಪಿಯವರು ಇದು ಬಿದ್ದುಹೋಗುತ್ತದೆ ಎನ್ನುತ್ತಿದ್ದಾರೆ. ಬಿಜೆಪಿಯವರು ಹೇಳುವುದೆಲ್ಲ ಅಪ್ಪಟ ಸುಳ್ಳು ಎಂದರು.

Read More

ಕಲಬುರಗಿ: ಜಗದೀಶ್ ಶೆಟ್ಟರ್ ಕಾಂಗ್ರೆಸ್ ಬಿಟ್ಟು ಹೋಗಿದ್ದಕ್ಕೆ ನಮ್ಮ ಪಕ್ಷಕ್ಕೆ ಮೈನಸ್ ಆಗೋದು ಬಿಡಿ ಅವರಿದ್ದಾಗ ನಮಗೆ ಪ್ಲಸ್ ಏನಾಗಿತ್ತು ಹೇಳಿ ಅಂತ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.. ಕಲಬುರಗಿ ಯಲ್ಲಿಂದು ಮಾತನಾಡಿದ ಪ್ರಿಯಾಂಕ್ ಪ್ರಧಾನಿ ಮೋದಿ ಕೈ ಬಲಪಡಿಸಲು ಬಿಜೆಪಿ ಸೇರಿದ್ದೇನೆ ಅಂತಾರೆ ಹಂಗಾದ್ರೆ ರಾಜ್ಯ ಬಿಜೆಪಿಯಲ್ಲಿ ಯಾರಲ್ಲೂ ಬಲ ಇಲ್ಲಾಂತ ಆಯ್ತು.. IT ED CBI ಈ ಮೂರು ಬಿಜೆಪಿಗೆ ಸ್ಟಾರ್ ಕ್ಯಾಂಪೇನ್ ಗಳು.ಈ ಮೂರು ಸ್ಟಾರ್ ಬಿಟ್ಟು ನೋಡ್ರಿ 100% ಬಿಜೆಪಿಯವರು ಎಲ್ರೂ ಸೋಲ್ತಾರೆ ಅಂದ್ರು . ಇದೇವೇಳೆ ಸವದಿ ಜೊತೆ DCM ಡಿಕೆಶಿ ಚರ್ಚೆ ಮಾಡಿದ್ದು ಏನ್ ತಪ್ಪಿದೆ ನನಗೂ ಕರೆಸಿ ಮಾತಾಡಬಹುದು ನಾನು ಪಕ್ಷ ಬಿಡ್ತೀನಿ ಅಂತ ಅರ್ಥಾನಾ ಅಂತ ಅಂದ್ರು..

Read More