ಲಕ್ನೋ: ಅಲಹಾಬಾದ್ ಕೋರ್ಟ್ ನಿರ್ದೇಶನದ ಮೇರೆಗೆ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲೇ ಇರುವ ಜ್ಞಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಇಲಾಖೆಯಿಂದ ನಡೆಸಲಾಗಿದ್ದ ವೈಜ್ಞಾನಿಕ ಸಮೀಕ್ಷಾ ವರದಿ ಬಹಿರಂಗಗೊಂಡಿದೆ. ಜ್ಞಾನವಾಪಿ ಮಸೀದಿ ಜಾಗದಲ್ಲಿ ಮೊದಲು ಹಿಂದೂ ದೇವಾಲಯ (Hindu Temple) ಇತ್ತು ಅಂತಾ ಪುರಾತತ್ವ ಸರ್ವೇಕ್ಷಣಾ ವರದಿ ಹೇಳಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಕೋರ್ಟ್ ಆದೇಶದನ್ವಯ ವರದಿ ಪಡೆದಿರುವ ಅವರು ಸುದ್ದಿಗೋಷ್ಠಿ ನಡೆಸಿ ವರದಿಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮಸೀದಿಗಿಂತ ಮುಂಚೆ ದೊಡ್ಡ ಹಿಂದೂ ದೇವಾಲಯದ ರಚನೆಯನ್ನು ಸರ್ವೆ ವರದಿ ಎತ್ತಿ ತೋರಿಸಿದೆ ಎಂದು ಹೇಳಿದ್ದಾರೆ. ಜನಾರ್ದನ, ರುದ್ರ ಮತ್ತು ಉಮೇಶ್ವರ ಮುಂತಾದ ಮೂರು ದೇವತೆಗಳ ಹೆಸರುಗಳು ಮಸೀದಿಯಲ್ಲಿ ಲಭ್ಯವಾದ ಶಾಸನಗಳಲ್ಲಿ ಕಂಡುಬರುತ್ತವೆ. ಮಸೀದಿ ಪಶ್ಚಿಮ ಗೋಡೆ ಹಿಂದೆ ನಿರ್ಮಾಣ ಮಾಡಿದ್ದ ಹಿಂದೂ ದೇವಾಲಯದ್ದಾಗಿದೆ. 17ನೇ ಶತಮಾನದಲ್ಲಿ ಈ ಮಂದಿರವನ್ನು ನಾಶ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ವರದಿಯಲ್ಲಿ ಏನಿದೆ? ಜ್ಞಾನವಾಪಿ ಮಸೀದಿಗೂ…
Author: AIN Author
ಸಿಂಧನೂರು:- ಇಲ್ಲಿನ ಕೆ ಆರ್ ಎಸ್ ಪಕ್ಷದ ಕಚೇರಿಯಲ್ಲಿ 75 ನೇ ಗಣ ರಾಜ್ಯೋತ್ಸವದ ಆಚರಣೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿರುಪಾದಿ ಕೆ ಗೋಮರ್ಸಿ ಸಂವಿಧಾನವನ್ನು ಜಾರಿಗೆ ತಂದು 75 ವರ್ಷಗಳು ಕಳೆದರೂ ಅದರಲ್ಲಿನ ಅಂಶಗಳು, ಕಾಯ್ದೆ ಕಾನೂನುಗಳು,ವಿಚಾರಗಳು ದೇಶದಾದ್ಯಂತ ಸರಿ ಸಮಾನವಾಗಿ ಇದ್ದರೂ ಸಹ ದೇಶದ ಜನತೆ ಸಾಮಾಜಿಕವಾಗಿ,ಆರ್ಥಿಕವಾಗಿ,ಶೈಕ್ಷಣಿಕವಾಗಿ,ರಾಜಕೀಯವಾಗಿ ಹಿಂದುಳಿದುರುವುದು ವಿಪರ್ಯಾಸ ಎಂದು ತಿಳಿಸಿದರು. ಡಾ ಬಿಆರ್ ಅಂಬೇಡ್ಕರ್ ಅವರ ಆದರ್ಶದ ಭಾರತದ ಕಲ್ಪನೆ ಸಂವಿಧಾನದ ಗುರಿ ಉದ್ದೇಶಗಳನ್ನು ಪ್ರತಿಯೊಬ್ಬರೂ ಪಲಿಸಿ ಮತ್ತು ಸಂವಿಧಾನದ ಪುಸ್ತಕ ಓದುವ ಅಭ್ಯಾಸ ಮಾಡಬೇಕು ಅಂದಾಗ ಮಾತ್ರ ಎಲ್ಲರೂ ಪ್ರಗತಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಅವರು ಮಾತನಾಡಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸಂವಿಧಾನಕ್ಕೆ ಬದ್ದವಾಗಿ ಆಡಳಿತ ನಡೆಸಲು ಸಿದ್ಧವಿದ್ದು ಸಾರ್ವಜನಿಕರ ಜಾಗೃತಿಗಾಗಿ ಹಲವಾರು ಸಭೆ ಸಮಾರಂಭ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪಕ್ಷದ…
ಬೆಂಗಳೂರು:- ರಾಜ್ಯದಲ್ಲಿ ಕೆಲವು ದೂರು ದುಮ್ಮಾನಗಳಿಂದ ನಡೆಯುತ್ತಿದ್ದ ಡಯಾಲಿಸಿಸ್ ವ್ಯವಸ್ಥೆಯನ್ನ ಆರೋಗ್ಯಕರ ಹಂತಕ್ಕೆ ತರುವಲ್ಲಿ ಕಳೆದ 6 ತಿಂಗಳಿನಿಂದ ಸಾಕಷ್ಟು ಸವಾಲುಗಳನ್ನ ಎದುರಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೊನೆಗೂ ರಾಜ್ಯದ ಡಯಾಲಿಸಿಸ್ ವ್ಯವಸ್ಥೆಯನ್ನ ಸರಿ ದಾರಿಗೆ ತರುವತ್ತ ಮಹತ್ವದ ಪಾತ್ರ ವಹಿಸಿದ್ದಾರೆ. ಜನಸಾಮಾನ್ಯರಿಗೆ ಸೋಂಕು ರಹಿತ ಡಯಾಲಿಸಿಸ್ ಸೇವೆ ಕಲ್ಪಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದ್ಯತೆ ನೀಡಿದ್ದರು. ಡಯಾಲಿಸಿಸ್ ಕೇಂದ್ರಗಳಲ್ಲಿ ಅಲ್ಲಲ್ಲಿ ಅಸ್ವಸ್ಥಗೊಂಡಿದ್ದ ಬಹುಬಳಕೆಯ ಡಯಾಲೈಸರ್ ಯಂತ್ರಗಳಿಂದ ಡಯಾಲಿಸಿಸ್ ಪಡೆಯುತ್ತಿದ್ದವರಿಗೆ ಸೋಂಕು ತಗುಲುತ್ತಿರುವುದನ್ನ ಗಮನಿಸಿದ್ದ ಸಚಿವ ದಿನೇಶ್ ಗುಂಡೂರಾವ್, ರಾಜ್ಯದ ಇಡೀ ಡಯಾಲಿಸಿಸ್ ವ್ಯವಸ್ಥೆಯನ್ನ ಸದೃಢಗೊಳಿಸುವ ನಿಟ್ಟಿನಲ್ಲಿ ಏಕ ಬಳಕೆಯ ಡಯಾಲೈಸರ್ ಯಂತ್ರಗಳನ್ನ ಅಳವಡಿಸಲು ನಿರ್ಧರಿಸಿದರು. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ 800 ಹೊಸ ಏಕ ಬಳಕೆಯ ಡಯಾಲಿಸಿಸ್ ಯಂತ್ರಗಳನ್ನ ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದರು. ಇದೀಗ ಹೊಸ ಡಯಾಲೈಸರ್ ಗಳ ಅಳವಡಿಕೆ ಕಾರ್ಯ ಬಹುತೇಕ ಅಂತಿಮ ಘಟ್ಟಕ್ಕೆ ತಲುಪಿದ್ದು, ನಾಳೆಯಿಂದ ಏಕ ಬಳಕೆಯ ಡಯಾಲಿಸಿಸ್ ಆರೋಗ್ಯ ಸೇವೆ ಆರಂಭವಾಗಲಿದೆ.…
ತಮ್ಮ ಬಹುಕಾಲದ ಗೆಳೆಯ ಯಶವಂತ್ ರೆಡ್ಡಿ ಜೊತೆ ಶೋಭಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಯಶವಂತ್ ರೆಡ್ಡಿ ಜೊತೆ ಶೋಭಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಯಶವಂತ್ ರೆಡ್ಡಿ ಜೊತೆ ಶೋಭಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಯಶವಂತ್ ರೆಡ್ಡಿ ಜೊತೆ ಶೋಭಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಯಶವಂತ್ ರೆಡ್ಡಿ ಜೊತೆ ಶೋಭಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಯಶವಂತ್ ರೆಡ್ಡಿ ಜೊತೆ ಶೋಭಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಯಶವಂತ್ ರೆಡ್ಡಿ ಜೊತೆ ಶೋಭಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.
ಬೆಂಗಳೂರು:- ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕ ದೇಶಕ್ಕೆ ಅವಶ್ಯಕತೆ ಇದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ಪ್ರಾಣ ಪ್ರತಿಷ್ಠಾಪನೆಯಾಗಿದ್ದು ಒಂದು ಪ್ರೇರಣೆಯಾಯಿತು ಅನ್ನುವ ಅರ್ಥದಲ್ಲಿ ಅವರು ಮಾತಾಡುತ್ತಾರಾದರೂ, ಘರ್ ವಾಪ್ಸಿ ಪ್ರಕ್ರಿಯೆ ಕಳೆದ 5-6 ತಿಂಗಳಿಂದ ಜಾರಿಯಲ್ಲಿತ್ತು ಎನ್ನುತ್ತಾರೆ. 1992 ರಲ್ಲಿ ಎಲ್ ಕೆ ಅಡ್ವಾಣಿ ಅವರ ರಥಯಾತ್ರೆ ಹುಬ್ಬಳ್ಳಿಗೆ ಆಗಮಿಸಿದಾಗ ಒಂದು ದೊಡ್ಡ ಸಾರ್ವಜನಿಕ ಸಭೆಯನ್ನು ಆಯೋಜಿಸಿ ಅದಕ್ಕೆ ಎಲ್ಲ ಏರ್ಪಾಟುಗಳನ್ನು ಮಾಡಿದ್ದು ತಾನೇ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ, ಅಲ್ಲದೆ ರಾಮಮಂದಿರ ನಿರ್ಮಾಣಕ್ಕೆ ಹುಬ್ಬಳ್ಳಿಯಿಂದ 2 ಕೋಟಿ ರೂ. ಗಿಂತ ಹೆಚ್ಚು ಹಣ ಸಂಗ್ರಹಿಸಿ ಕೊಟ್ಟಿದ್ದನ್ನು ಶೆಟ್ಟರ್ ಹೇಳಿದರು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ರಾಮಮಂದಿರ ನಿರ್ಮಾಣಗೊಂಡಿದೆ, ದೇಶಕ್ಕೆ ಈಗ ಅವರಂಥ ನಾಯಕ ಅವಶ್ಯಕತೆಯಿದೆ ಎಂದು ಶೆಟ್ಟರ್ ಹೇಳಿದರು. ತಾನು ಬಿಜೆಪಿಗೆ ವಾಪಸ್ಸು ಬರಲು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಹತ್ವದ ಪಾತ್ರ ನಿರ್ವಹಿಸಿರುವರೆಂದು ಶೆಟ್ಟರ್…
ಧಾರವಾಡ: ಧಾರವಾಡದಲ್ಲಿ ಇಂದು ದೇಶದಾದ್ಯಂತ 75ನೇ ಗಣರಾಜ್ಯೋತ್ಸವ ದಿನವನ್ನು ಅದ್ದೂರಿಯಿಂದ ಆಚರಣೆ ಮಾಡಲಾಯಿತು. ನಗರದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ತಿರಂಗಾ ರಾರಾಜಿಸಿದೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಸಚಿವರು ಪೊಲೀಸರಿಂದ ತೆರೆದ ವಾಹನದ ಮೂಲಕ ಗೌರವ ವಂದನೆ ಸ್ವೀಕರಿಸಿದರು. ಸಚಿವರಿಗೆ ಪ್ರಭಾರ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಪೊಲೀಸ್ ಆಯುಕ್ತ ರೇಣುಕಾ ಸುಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಅವರು ಸಾಥ್ ನೀಡಿದರು. ಧ್ವಜಾರೋಹಣದ ನಂತರ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಧಾರವಾಡದ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಧಾರವಾಡ: ಧಾರವಾಡ ಬೂಸಪ್ಪ ಚೌಕ್ ಬಳಿಯಲ್ಲಿ ಕಳೆದ ಹಲವು ವರ್ಷಗಳಿಂದ ಶಿಥಿಲವಾಗಿ ಬಿದಿದ್ದ ಪೊಲೀಸ್ ಚೌಕೆ ನೂತನ ಕಟ್ಟಡಕ್ಕೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು. ಶಹರ ಪೊಲೀಸ ಠಾಣೆ ವ್ಯಾಪ್ತಿಯ ಬೂಸಪ್ಪ ವೃತದಲ್ಲಿ ನೂತನ ಪೊಲೀಸ್ ಚೌಕ್ ಕಟ್ಟಡ ಭೂಮಿ ಭೂಜೆ ಮಾಡಲಾಗಿದ್ದು, ಅವಳಿನಗರ ಪೊಲೀಸ ಆಯುಕ್ತರಾದ ರೇಣುಕಾರವರು ಕರಪೂರ ಬೆಳಗಿ ಭೂಮಿ ಪೂಜೆ ಮಾಡಿದರು. ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಾದ ಗೋಪಾಲ ಬ್ಯಾಕೋಡ ಮತ್ತು, Acp ಪ್ರಶಾಂತ್ ಸಿದ್ದನಗೌಡರು, ಶಹರ ಠಾಣೆಯ ಇನ್ಸ್ಪೆಕ್ಟರ್ n.c ಕಾಡುದೇವರಮಠ ಹಾಗೂ ಸಿಬ್ಬಂದಿ ಸೇರಿದಂತೆ ಸ್ಥಳೊಇಯರು ಉಪಸ್ಥಿತರಿದ್ದರು.
ಧಾರವಾಡ: ವಿದ್ಯುತ್ ಕಾಯ್ದೆ 2023 ನ್ನು ರದ್ದುಗೊಳಿಸಲು ಅಗ್ರಹಿಸಿ ಹಾಗೂ ರೈತರ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಒತ್ತಾಯಿಸಿ, ಧಾರವಾಡ ತಾಲೂಕಿನ ಮಾವಿನಕೊಪ್ಪ ಗ್ರಾಮಸ್ತರು ಗ್ರಾಮದಲ್ಲಿ ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಗ್ರಾಮದ ಮುಖ್ಯ ರಸ್ತೆಯಲ್ಲಿ ರೈತರು ಸೇರಿದಂತೆ ಮಹಿಳೆಯರು ಸಂಯುಕ್ತ ಹೋರಾಟ ಕರ್ನಾಟಕಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಬರಗಾಲದಿಂದಾಗಿ ರೈತ ಸಮುದಾಯ ಸಂಕಷ್ಟದಲ್ಲಿದೆ. ಸರ್ಕಾರಗಳು ರೈತರ ನೇರವಿಗೆ ಸಕಾಲಕ್ಕೆ ಬರುತ್ತಿಲ್ಲ. ಈ ಕಡೆ ಬೆಳೆಯು ಇಲ್ಲ, ಆ ಕಡೆ ಸರ್ಕಾರಗಳ ಸಹಕಾರವು ಇಲ್ಲ, ಇದರಿಂದಾಗಿ ರೈತ ಬೀದುಗೆ ಬರುತ್ತಿದ್ದಾರೆ. ಈಗ ವಿದ್ಯುತ್ ಅನ್ನು ಖಾಸಗೀಕರಣ ಮಾಡುವ ವಿದ್ಯುತ್ ಕಾಯ್ದೆ 2023ರನ್ನು ಜಾರಿಗೆ ತರುತ್ತಿದ್ದಾರೆ, ಇದೂ ಕೂಡಾ ಭವಿಷ್ಯದಲ್ಲಿ ರೈತರಿಗೆ ಸಾರ್ವಜನಿಕರಿಗೆ ಮಾರಕವಾಗಿಲಿದೆ. ಹಾಗಾಗಿ ಈ ಕೂಡಲೇ ಈ ಕಾಯ್ದೆ ಸೇರಿದಂತೆ ರೈತರ ಎಲ್ಲ ಬೆಳೆಗಳುಗೆ ಬೆಂಬಲ ಬೆಲೆ ನೀಡಬೇಕು ಎಂದು ಅಗ್ರಹಿಸಿದರು. ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಳ್ಳುವುದಾಗಿ…
ಬೆಂಗಳೂರು:- ಕೋಮು ಸಾಮರಸ್ಯವನ್ನು ಕಾಪಾಡುವುದು ನಮ್ಮ ಬಲವಾದ ನಂಬಿಕೆ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾವು ಬರೀ ಮಾತುಗಾರರು ಅಲ್ಲ. ಕೆಲಸ ಮಾಡಿ ತೋರಿಸುವವರು. ಚುನಾವಣೆ ಮುನ್ನ ನೀಡಿದ ಭರವಸೆಯಂತೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಜನರ ಹಿತಕ್ಕಾಗಿ ನಮ್ಮ ಕೆಲಸ. ಕೋಮು ಸಾಮರಸ್ಯವನ್ನು ಕಾಪಾಡುವುದು ನಮ್ಮ ಬಲವಾದ ನಂಬಿಕೆ. ಅದನ್ನು ಎಂತಹ ಕಷ್ಟ ಬಂದರೂ ಮಾಡುತ್ತೇವೆ. ಜನ ವಿಶ್ವಾಸವನ್ನು ಕಳೆದುಕೊಳ್ಳದೇ ನಮ್ಮ ಜತೆಗೆ ಇರಬೇಕಷ್ಟೇ. ಇದು ಸಿಎಂ ಸಿದ್ದರಾಮಯ್ಯ ಅವರ ನುಡಿ ಎಂದರು. ವಚನ ಭಂಗಕ್ಕಿಂತ ದೊಡ್ಡ ದೇಶದ್ರೋಹ ಮತ್ತೊಂದಿಲ್ಲ ಎಂದು ನಾನು ಬಲವಾಗಿ ನಂಬಿದವನು. ಇದು ನಮ್ಮ ಪಕ್ಷದ ಬದ್ಧತೆ ಕೂಡಾ ಆಗಿದೆ. ಭರವಸೆಗಳನ್ನು ನೀಡಿ ಚುನಾವಣೆಯಲ್ಲಿ ಗೆದ್ದು ಬಂದಿರುವ ನಮಗೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ಇದೆ. ಇದನ್ನು ನಾವು ಮರೆತಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರಂಟಿ ಯೋಜನೆಗಳ ಭರವಸೆಯ ಈಡೇರಿಕೆಗೆ ಮೊದಲ ಸಚಿವ ಸಂಪುಟದಲ್ಲಿಯೇ ತಾತ್ವಿಕ ಅಂಗಿಕಾರ ಪಡೆದು ಜಾರಿ ಪ್ರಕ್ರಿಯೆಗೆ ಚಾಲನೆ…
ಚಾಮರಾಜನಗರ: ಜಗದೀಶ್ ಶೆಟ್ಟರ್ ಬಿಜೆಪಿಗೆ ಸೇರ್ಪಡೆ ಕುರಿತು ಸಚಿವ ಕೆ. ವೆಂಕಟೇಶ್ ಅವರು ಮಾತನಾಡಿ ದ್ದಾರೆ. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಾಗಿ ಕೆಲಸ ಮಾಡಿ ಸಾರ್ವಜನಿಕ ಜೀವನದಲ್ಲಿ ಅವರದೇ ಆದ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಒಂದಿನ ಈ ಪಾರ್ಟಿ ಒಂದಿನ ಆ ಪಾರ್ಟಿ ಎಂದರೆ ಏನು ಹೇಳಬೇಕು ಅವರಿಗೆ..?. ಅವರಿಗೆ ಗೌರವ ಕೊಡಲು ಎಂಎಲ್ಸಿಯನ್ನಾಗಿ ಪಕ್ಷ ಮಾಡಿತ್ತು. ಆಪರೇಷನ್ ಮಾಡುವವರು ಮಾಡುತ್ತಿರುತ್ತಾರೆ. ಆದರೆ ನಮ್ಮ ಪಕ್ಷದವರು ಯಾರೂ ಅಲ್ಲಿಗೆ ಹೋಗಲ್ಲ. 5 ವರ್ಷ ಸುಭದ್ರ ಸರ್ಕಾರ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳಾದ ನಾವು ಪ್ರತಿಯೊಂದು ಸಾವಿಗೂ ಹೋಗುತ್ತೇವೆ, ಮದುವೆಗೂ ಹೋಗುತ್ತೇವೆ, ನಾಮಕರಣಕ್ಕೂ ಹೋಗುತ್ತೇವೆ. ಇವೆಲ್ಲಾ ವರ್ಕೌಟ್ ಆಗಲ್ಲ. ಪಬ್ಲಿಕ್ ಮೆಮೊರಿ ವೆರಿ ಶಾರ್ಟ್. ಬೇಗ ಮರೆಯುತ್ತಾರೆ. ಶ್ರೀರಾಮ ಮಂದಿರ ಉದ್ಘಾಟನೆ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಚಿವರು ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು.