ಬೆಂಗಳೂರು:- ಲೋಕಸಭೆ ಚುನಾವಣೆಗೆ ಕಾಂಗ್ರೆಸ್ನಿಂದ ಕಲೆಕ್ಷನ್ ಹೋಗುತ್ತಿದೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ತೆಲಂಗಾಣ ಚುನಾವಣೆಗೆ ರಾಜ್ಯದಲ್ಲಿ ಹಣ ಸಂಗ್ರಹ ಮಾಡಿದಂತೆ, ಲೋಕಸಭೆ ಚುನಾವಣೆಗೂ ವಸೂಲಿ ಶುರುವಾಗಿದೆ. ಇದು ಕಲೆಕ್ಷನ್ ಸರ್ಕಾರ ಎಂದು ಆರೋಪಿಸಿದ್ದಾರೆ. ಬೆಂಗಳೂರು ನಗದಾಭಿವೃದ್ಧಿ’ ಇಲಾಖೆಯು ನಗದು ಅಭಿವೃದ್ಧಿಗೆ ಸಿಕ್ಕಸಿಕ್ಕ ಕಡೆ ಸುಲಿಗೆಗೆ ಇಳಿದಿದೆ. ದಂಧೆಗೆ ಯಾವ ಹುಲ್ಲುಗಾವಲಾದರೇನು? ಹೈಕಮಾಂಡ್ ಗೆ ಕಪ್ಪ ಸಲ್ಲಿಸಬೇಕೆಂದು ಹಾದಿಬೀದಿಯಲ್ಲಿ ಹೇಳಿಕೊಂಡು ಸಿಕ್ಕಿದ ಕಡೆಯೆಲ್ಲಾ ವಸೂಲಿ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ. ಕೈಗಾರಿಕೆ, ಉದ್ಯಮ ಚಟುವಟಿಕೆಗೆ ಒಪ್ಪಿಗೆ ಕೊಡಲು KIADB ಇದೆ. ಏಕಗವಾಕ್ಷಿ ವ್ಯವಸ್ಥೆ ಅಡಿಯಲ್ಲಿ ಪ್ರಕ್ರಿಯೆ ನಿರಾತಂಕವಾಗಿ ನಡೆಯುತ್ತಿದೆ. ಅದಕ್ಕೂ ಮುನ್ನ ಉನ್ನತಮಟ್ಟದ ಹೂಡಿಕೆ ಅನುಮೋದನೆ ಸಮಿತಿ ಒಪ್ಪಿಗೆಯನ್ನೂ ಕೊಡುತ್ತದೆ. ಇಷ್ಟೆಲ್ಲ ಇದ್ದ ಮೇಲೆ ಇಲ್ಲಿ BDA ಕೆಲಸ ಏನು? ಯಾರ ಕಿಸೆ ಭರ್ತಿ ಮಾಡಲಿಕ್ಕೆ BDA ಇಂಥ ಅಡ್ಡದಾರಿ ತುಳಿದಿದೆ? ಎಂದು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವರ್ತನೆಯನ್ನು ಕಟುವಾಗಿ ಟೀಕಿಸಿದ್ದಾರೆ. ಬೆಂಗಳೂರು ವ್ಯಾಪ್ತಿಯಲ್ಲಿ ತನ್ನ ಅನುಮೋದನೆ…
Author: AIN Author
ಬೆಂಗಳೂರು:- ನಾವೇನು ಗುಲಾಮರಾ?” ಎಂದು ಹೇಳುತ್ತಾ ಸಚಿವ ರಾಜಣ್ಣರನ್ನು ಲೇವಡಿ ಮಾಡುತ್ತಾ DCM ಡಿಕೆಶಿ ತಿರುಗೇಟು ಕೊಟ್ಟಿದ್ದಾರೆ. ದಿಲ್ಲಿಯಲ್ಲಿ ಕುಳಿತು ಪಕ್ಷದ ನಾಯಕರು ಸಿದ್ಧಪಡಿಸಿದ ಪಟ್ಟಿಯನ್ನು ಒಪ್ಪಿಕೊಳ್ಳಲು ನಾವು ಗುಲಾಮರೇ ಎಂಬ ಸಚಿವ ಕೆಎನ್ ರಾಜಣ್ಣ ಅವರ ಹೇಳಿಕೆಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ರಾಜಣ್ಣ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು , ಸಿಎಂ ಈ ಬಗ್ಗೆ ಮಾತನಾಡಿದ್ದಾರೆ. ಅವರು ಶಾಸಕರು ಮತ್ತು ಸಚಿವರಾಗಿರುವುದರಿಂದ ಎಐಸಿಸಿ ಗೌರವಯುತವಾಗಿ ಪರಿಶೀಲಿಸುತ್ತದೆ ಎಂದರು. ನಿಗಮ-ಮಂಡಳಿ ಮತ್ತು ನಿಗಮಗಳ ಮುಖ್ಯಸ್ಥರ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ನಾಯಕರ ಸಲಹೆ ಪಡೆಯದ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಗೃಹ ಸಚಿವ ಡಾ.ಜಿ.ಪರಮೇಶ್ವರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಪಕ್ಷದ ಕೇಂದ್ರ ನಾಯಕರ ವಿರುದ್ಧ ಧ್ವನಿ ಎತ್ತಿದ್ದರು. ಯಾರು ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಸಾಮರ್ಥ್ಯ ಏನು ಎಂದು ಪಕ್ಷದ ಹೈಕಮಾಂಡ್ ನಮ್ಮನ್ನು ಕೇಳಬೇಕು ಮತ್ತು ನಂತರ ನೇಮಕಾತಿಗಳನ್ನು ಮಾಡಬೇಕು. ದಿಲ್ಲಿಯಲ್ಲಿ…
ವಿಜಯಪುರ :- ಶೆಟ್ಟರ್ ಬಿಜೆಪಿಗೆ ಮರಳಿರುವುದು ಅವರ ಘನತೆಗೆ ಶೋಭೆ ತರಲ್ಲ ಎಂದು ಸಚಿವ Mb ಪಾಟೀಲ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶೆಟ್ಟರ್ ಅವರಿಗೆ ಅನ್ಯಾಯವಾಗಿದೆ ಅಂತ ಶಾಮನೂರು ಶಿವಶಂಕರಪ್ಪ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ರಂದೀಪ್ ಸುರ್ಜೆವಾಲ ಮತ್ತು ತಾನು ಸೇರಿ ಕಾಂಗ್ರೆಸ್ ಕರೆತಂದಿದ್ದೆವು, ಅದರೆ ತಮಗ್ಯಾರಿಗೂ ವಾಸನೆ ಕೂಡ ಹತ್ತದಂತೆ ಅವರು ಬಿಜೆಪಿಗೆ ಪಲಾಯನಗೈದಿದ್ದಾರೆ ಎಂದು ಪಾಟೀಲ್ ಹೇಳಿದರು. ಶೆಟ್ಟರ್ ಅವರಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಆಮಿಶವೊಡ್ಡಲಾಗಿದೆಯೋ ಒತ್ತಡ ಹೇರಲಾಗಿತ್ತೋ ಅಂತ ಅವರೇ ಹೇಳಬೇಕು ಎಂದ ಪಾಟೀಲ್, ಜಗತ್ತು ನಂಬಿಕೆ ವಿಶ್ವಾಸದ ಮೇಲೆ ನಡೆಯುತ್ತಾದರೂ ಇಂಥ ಪ್ರಸಂಗಗಳು ನಡೆಯುತ್ತಿರುತ್ತವೆ ಎಂದರು. ಲಕ್ಷ್ಮಣ ಸವದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ, ಅವರು ಹಿರಿಯ ನಾಯಕ ಮತ್ತು ಉಪ ಮುಖ್ಯಮಂತ್ರಿಯಾಗಿದ್ದವರು ಅವರ ಬಗ್ಗೆ ಲಘುವಾಗಿ ಮಾತಾಡುವುದು ತಪ್ಪಾಗುತ್ತದೆ, ಅವರು ಕಾಂಗ್ರೆಸ್ ಬಿಡೋದಿಲ್ಲ ಎಂದರು.
ದೊಡ್ಡಬಳ್ಳಾಪುರ: ನಗರದ ಪ್ರದೇಶಗಳಲ್ಲಿ ನಡೆಯುತ್ತಿದ್ದ ಜೂಜಾಟ ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಿಗೂ ಹಬ್ಬಿದೆ. ಜೂಜುಕೋರರ ಹಾವಳಿ ಮಿತಿ ಮೀರಿದ್ದು, ನಗರ ಕೇಂದ್ರಿತವಾಗಿದ್ದ ಜೂಜು ಅಡ್ಡೆಗಳು ಈಗ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಾಗಿವೆ. ತಾಲೂಕಿನ ಮೆಳೆಕೋಟೆ, ರಾಜಘಟ್ಟ, ರಾಮಯ್ಯನಪಾಳ್ಯ, ಮೇಡಿಹಳ್ಳಿ ಹಾಗೂ ಜಕ್ಕಲಮಡಗು ರಸ್ತೆಗಳ ತೋಟದ ಮನೆಗಳು, ನೀಲಗಿರಿ ತೋಪುಗಳು ಜೂಜುಕೋರರ ಉಪಟಳದಿಂದ ನಲುಗುತ್ತಿವೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿಬಂದಿವೆ. ಇಸ್ಪೀಟ್, ಮಟ್ಕಾ, ಬೆಟ್ಟಿಂಗ್ ದಂಧೆಗೆ ಗ್ರಾಮೀಣ ಭಾಗದ ಯುವಜನರೇ ಹೆಚ್ಚು ದಾಸರಾಗುತ್ತಿದ್ದು, ಜೂಜಾಟಕ್ಕೆ ಬಲಿಯಾದ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೂಲಿ ಕಾರ್ಮಿಕರು ದಿನವಿಡೀ ಬೆವರು ಹರಿಸಿ ದುಡಿದ ಹಣವನ್ನು ಕ್ಷಣಾರ್ಧದಲ್ಲಿ ಜೂಜಿಗೆ ಬಳಸಿ ಖಾಲಿ ಕೈಯಲ್ಲಿ ಮನೆಗೆ ತೆರಳುವಂತಾಗಿದೆ. ಚಟಕ್ಕೆ ಬಿದ್ದ ಬಹುತೇಕರು ತೋಟ, ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ತಲೆ ಎತ್ತಿರುವ ಜೂಜು ಅಡ್ಡೆಗಳಿಗೆ ಯಲಹಂಕ, ವಿಜಯಪುರ, ದೇವನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ತಾಲೂಕುಗಳಿಂದ ಜೂಜು ಕೋರರು ಬರುತ್ತಾರೆ. ತೋಟದ ಮನೆ, ನೀಲಗಿರಿ ತೋಪುಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ…
ಗದಗ:- ಭಯಾನಕ ಭವಿಷ್ಯವೊಂದನ್ನು ಕೋಡಿಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಅವರು ನುಡಿದಿದ್ದಾರೆ. ಜಗತ್ತಿಗೆ ಒಳ್ಳೆಯ ದಿನಗಳಿಲ್ಲ ಎಂದು ಹೇಳಿದ್ದಾರೆ. ಬಾಂಬ್ ಸಿಡಿಯುವ ಸಂಭವವಿದ್ದು, ಯುದ್ಧ ಭೀತಿ ಆವರಿಸಲಿದೆ. ಭೂಕಂಪ.. ಜಲ ಕಂಟಕವೂ ಇದೆ. ಜನರು ತಲ್ಲಣವಾಗುತ್ತಾರೆ ಎಂದು ಭವಿಷ್ಯ ತಿಳಿಸಿದ್ದಾರೆ. ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ, ಜಗತ್ತಿನಲ್ಲಿ ಒಂದೆರಡು ಪ್ರಧಾನಿಗಳಿಗೆ ಸಾವಾಗುವ ಲಕ್ಷಣ.. ಅಸ್ಥಿರತೆ, ಯುದ್ಧ ಭೀತಿ.. ಅಣು ಬಾಂಬ್ ಸ್ಫೋಟವಾಗುವ ಸಾಧ್ಯತೆಗಳಿವೆ. ಜಗತ್ತಿಗೆ ವಿನಾಶ ಕಾದಿದೆ.. ರೋಗ, ಸುನಾಮಿ ಸಂಭವಿಸಲಿದೆ. ಮತೀಯ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ. ದೈವ ನಂಬುವುದೊಂದೆ ಪರಿಹಾರ.. ದೈವ ಮೊರೆ ಹೋಗ್ಬೇಕು ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.
ಮರಿ ಟೈಗರ್ ವಿನೋದ್ ಪ್ರಭಾಕರ್ ನಟನೆಯ ಬಹುನಿರೀಕ್ಷಿತ ಸಿನಿಮಾ ಮಾದೇವ. ಪೋಸ್ಟರ್ ಗಳ ಮೂಲಕವೇ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಟೀಸರ್ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಾಯಕ ವಿನೋದ್ ಪ್ರಭಾಕರ್, ನಾಯಕಿ ಸೋನಲ್, ಹಿರಿಯ ನಟಿ ಶೃತಿ, ನಿರ್ದೇಶಕ ನವೀನ್ ರೆಡ್ಡಿ ಸೇರಿದಂತೆ ಇಡೀ ಚಿತ್ರತಂಡಕ್ಕೆ ನಿರ್ದೇಶಕ ತರುಣ್ ಸುಧೀರ್, ನಟರಾದ ಅಭಿಷೇಕ್ ಅಂಬರೀಶ್, ಧನ್ವೀರ್ ಗೌಡ, ಝೈದ್ ಖಾನ್ ಸಾಥ್ ಕೊಟ್ಟರು. ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ತರುಣ್ ಸುಧೀರ್, ವಿನೋದ್ ನನ್ನದು ಒಂದೊಳ್ಳೆ ಬಾಂಡಿಂಗ್ ಇದೆ. ರಿಯಲ್ ಲೈಫ್ ಫೈಟರ್ ವಿನೋದ್. ಮಾದೇವ ಪ್ರಸೆಂಟೇಷನ್,ಅವರ ಲುಕ್ ಬಹಳ ಚೆನ್ನಾಗಿದೆ. ಬಿಯರ್ಡ್ ಲುಕ್ ನಲ್ಲಿ ಅವರು ಚೆನ್ನಾಗಿ ಕಾಣಿಸುತ್ತಾರೆ. ಕೆಲಸದ ವಿಚಾರದಲ್ಲಿ ಪ್ರಾಮಾಣಿಕ, ಡಿಡಿಕೇಟೇಡ್, ಹಾರ್ಡ್ ವರ್ಕರ್. ಸಿನಿಮಾಗೆ ತುಂಬಾ ಎಫರ್ಟ್ ಹಾಕಿ ಕೆಲಸ ಮಾಡುತ್ತಾರೆ. ಈ ಜಾನರ್ ತುಂಬಾ ಕಷ್ಟ. ತುಂಬಾ ವರ್ಕ್, ರಿಸರ್ಚ್ ಇರುತ್ತದೆ. ಅದ್ಭುತವಾಗಿ ತೆರೆಮೇಲೆ…
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕುಳಗಿ ರಸ್ತೆಯ ಕಾಳಿ ನದಿಯಲ್ಲಿ ಸತ್ತಿದೆ ಎಂದು ಭಾವಿಸಿ ಜೀವಂತ ಮೊಸಳೆ ಹಿಡಿಯಲು ಹೋಗಿ ಅರಣ್ಯ ಸಿಬ್ಬಂದಿ ಪೇಚಿಗೆ ಸಿಲುಕಿದ ಘಟನೆ ಜರುಗಿದೆ. ಕಾಳಿ ನದಿಯಲ್ಲಿ ಮೊಸಳೆ ತೇಲುತ್ತಿರುವುದು ಕಂಡು ಸತ್ತುಹೋಗಿದೆ ಎಂದು ಯಾರೋ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ. ದೂರದಿಂದ ನೋಡಿದಾಗ ಸೇತುವೆಯಡಿ ನದಿಯಲ್ಲಿ ಸತ್ತಂತೆ ಬಿದ್ದಿದ್ದಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ. ಸತ್ತ ಮೊಸಳೆಯ ಮೃತದೇಹ ನದಿಯಿಂದ ಹೊರಗೆ ತರಲು ಮುಂದಾಗಿದ್ದಾರೆ. ಹಗ್ಗದೊಂದಿಗೆ ಮೂವರು ಸಿಬ್ಬಂದಿ ನದಿಗೆ ಇಳಿದಿದ್ದರು. ಸಿಬ್ಬಂದಿ ಹತ್ತಿರಬರುವವರೆಗೆ ಸತ್ತಂತೆ ತೇಲುತ್ತಿದ್ದ ಮೊಸಳೆ, ಸಿಬ್ಬಂದಿ ಬಾಲ ಹಿಡಿಯುತ್ತಿದ್ದಂತೆ ಒಮ್ಮೆಗೆ ಎಚ್ಚರಗೊಂಡ ಮೊಸಳೆ! ಮೊಸಳೆ ಬದುಕಿರುವುದು ತಿಳಿಯುತ್ತಿದ್ದಂತೆ ಬೆಚ್ಚಿಬಿದ್ದ ಸಿಬ್ಬಂದಿ. ಅದೃಷ್ಟವಶಾತ್ ದಾಳಿ ಮಾಡದೇ ಮುಂದಕ್ಕೆ ಸಾಗಿದೆ. ಘಟನೆಯಿಂದ ದಿಗಿಲುಗೊಂಡ ಸಿಬ್ಬಂದಿ. ಸುರಕ್ಷಿತವಾಗಿ ವಾಪಸ್ ಬಂದಿದ್ದಾರೆ. ಮೊಸಳೆಗಳು ಕೆಲವೊಮ್ಮೆ ನಿಶ್ಚಲವಾಗಿ ಮಲಗಿ ವಿರಮಿಸುವುದು ಸಾಮಾನ್ಯ. ಇನ್ನು ಕೆಲವು ವೇಳೆ ಬೇಟೆಯಾಡಲು ಅಲುಗಾಡದೇ ತೇಲುತ್ತಿರುವುದು ಹಲವು ವಿಡಿಯೋಗಳಲ್ಲಿ ಕಾಣಬಹುದಾಗಿದೆ.
ಉತ್ತರ ಪ್ರದೇಶ:- ಜೋರಾಗಿ ಹೊಟ್ಟೆ ಹಸಿವಾದಾಗ ನಮಗೆಲ್ಲಾ ನೆನಪಾಗುವುದೇ ಎರಡು ನಿಮಿಷದಲ್ಲಿ ಸಿದ್ಧವಾಗುವ ಮ್ಯಾಗಿ ನೂಡಲ್ಸ್. ಇದರಿಂದ ನೂಡಲ್ಸ್ ಅನ್ನು ಇನ್ನಷ್ಟು ಆರೋಗ್ಯಕರವಾಗಿ ತಯಾರಿಸಬಹುದು ಹಾಗೂ ಅದರ ರುಚಿಯೂ ಇಮ್ಮಡಿಗೊಳ್ಳುತ್ತದೆ. ಬೀದಿ ಬದಿ ವ್ಯಾಪಾರಿಯೊಬ್ಬರು ನದಿಯಲ್ಲಿ ನೂಡಲ್ಸ್ ತೊಳೆಯುತ್ತಿರುವ ದೃಶ್ಯ ಇದು. ಬೀದಿ ಆಹಾರ ತಯಾರಿಕೆಯ ನೈರ್ಮಲ್ಯದ ಬಗ್ಗೆ ಅನುಮಾನ ಹುಟ್ಟು ಹಾಕುವಂತಿದೆ. ಈ ಘಟನೆ ಉತ್ತರ ಪ್ರದೇಶದ ಕುಕುರ್ಘಾಟಿ ಗ್ರಾಮದಲ್ಲಿನ ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ನೀರು ಅತ್ಯಂತ ಕಲುಷಿತವಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಸಾಮಾನ್ಯವಾಗಿ ನೂಡಲ್ಸ್ ತಯಾರಿಸಲು ಮೊದಲು ಅದನ್ನು ಕುದಿಸಿ ನಂತರ ತೊಳೆಯಲಾಗುತ್ತದೆ. ಹೀಗೆ ಕುದಿಸಿದ ನೂಡಲ್ಸ್ ಅನ್ನು ತೊಳೆಯುವುದು ಅವು ಪರಸ್ಪರ ಅಂಟಿಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ. ಆರೋಗ್ಯದ ದೃಷ್ಟಿಯಿಂದ ನೂಡಲ್ಸ್ ಅನ್ನು ಹುರಿಯುವ ಮೊದಲು ಶುದ್ಧ ತಣ್ಣೀರಿನಿಂದ ತೊಳೆಯಬೇಕು ಎಂದು ತಜ್ಞರು ಸೂಚಿಸುತ್ತಾರೆ. ಆದರೆ ಈ ವ್ಯಾಪಾರಿ ಬೇಯಿಸಿದ ನೂಡಲ್ಸ್ ಅನ್ನು ಟ್ರೇಯಲ್ಲಿ ತೆಗೆದುಕೊಂಡು ಹೋಗಿ ಕಲುಷಿತ…
ಗದಗ: ಕೋಡಿಹಳ್ಳಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ರಾಜ್ಯ ಮತ್ತು ದೇಶಗಳ ಬೆಳವಣಿಗೆಗಳ ಬಗ್ಗೆ ಭವಿಷ್ಯ ನುಡಿಯುತ್ತಿರುತ್ತಾರೆ ಅದೇ ರೀತಿ ಈಗಲೂ ಸಹ ಮತ್ತೊಂದು ಭವಿಷ್ಯ ನುಡಿದಿದ್ದಾರೆ. 2024 ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ. 2024 ರಲ್ಲಿ ಅಣು ಬಾಂಬ್ ಸ್ಪೋಟಗೊಳ್ಳುವ ಸಾಧ್ಯತೆ ಇದೆ. ಯುದ್ಧದ ಭೀತಿ ಇದೆ. ಜನರು ತಲ್ಲಣ ಆಗುವಂತಹದ್ದಿದೆ. ಜಲ ಕಂಠಗಳು ಹೆಚ್ಚಾಗುವ ಸಾಧ್ಯತೆ ಇದೆ ಅಂತ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡದಿದ್ದಾರೆ. ನಗರದ ಭಕ್ತರ ಮನೆಯೊಂದರಲ್ಲಿ ಮಾತನಾಡಿದ ಶ್ರೀಗಳು, ಜಗತ್ತಿನ ಅತೀ ದೊಡ್ಡ ಸಂತರೊಬ್ಬರು ಕೊಲೆಗೀಡಾಗುವ ಲಕ್ಷಣ ಇದೆ. ಒಂದೆರಡು ಪ್ರಧಾನಿಗಳ ಸಾವು ಆಗಲಿವೆ ಅಂತ ಅಘಾತಕಾರಿ ವಿಷಯ ತಿಳಿಸಿದ್ದಾರೆ. ಅಸ್ಥಿರತೆ ಇದೆ, ಯುದ್ಧದ ಭೀತಿ ಇದೆ. ಅಣು ಬಾಂಬ್ ಸ್ಪೋಟದಿಂದ ಜಗತ್ತಿಗೆ ಹಾನಿಯಾಗುವ ಸಾಧ್ಯತೆ ಇದೆ. ಇದರಿಂದ ರೋಗ ರುಜಿನಗಳು ಹೆಚ್ಚಾಗಲಿವೆ. ಒಟ್ಟಿನಲ್ಲಿ 2024 ಜಗತ್ತಿಗೆ ಅಪಾಯವಿದೆ. ಜಗತ್ತಿನಲ್ಲಿ ಭಾರತವೂ ಸೇರಿಕೊಳ್ಳುತ್ತೆ ಎಂದರು. https://ainlivenews.com/rs-3-lakh-loan-for-women-without-interest-how-to-apply-here-is-the-complete-details/ ಶ್ರೀರಾಮಂದಿರ ವಿಷಯದಲ್ಲಿ ಹಿಂದೂಗಳು ಒಂದಾಗಬೇಕು ಎಂಬ…
ಬೆಂಗಳೂರು:- ಯಾವುದೇ ಆಪರೇಷನ್ ಗುರಿ ಇಲ್ಲ, ಲೋಕಸಭಾ ಚುನಾವಣೆಯೇ ನಮ್ಮ ಗುರಿ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯಿಂದ ಯಾವುದೇ ಆಪರೇಷನ್ ಗುರಿ ಇಲ್ಲ. ಲೋಕಸಭೆ ಚುನಾವಣೆಯೊಂದೇ ನಮ್ಮ ಗುರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಎಂಎಲ್ಸಿ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ನಂತರ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಲಕ್ಷ್ಮಣ ಸವದಿಯೇ ಬಿಜೆಪಿಯ ಟಾರ್ಗೆಟ್ ಎನ್ನಲಾಗುತ್ತಿದೆ. ಅಲ್ಲದೆ, ಆಪರೇಷನ್ ಕಮಲ ಆರಂಭವಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಅವರಿಗೆ ಬೇರೆ ಕ್ಷೇತ್ರ ಕೊಟ್ಟಿ ಜೆಡಿಎಸ್ಗೆ ಮಂಡ್ಯ ಕ್ಷೇತ್ರವನ್ನು ನೀಡುವ ಪ್ಲಾನ್ ಮಾಡಲಾಗುತ್ತಿದೆ. ಆದರೆ, ಸುಮಲತಾ ಅವರು ಬಿಜೆಪಿಯಿಂದ ಮಂಡ್ಯದಲ್ಲಷ್ಟೇ ಸ್ಪರ್ಧಿಸುತ್ತೇನೆ ಎಂದು ಕಡ್ಡಿಮುರಿದ ಹಾಗೆ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಸುಮಲತಾ ಜೊತೆ ಫೋನ್ ಕರೆ ಮಾಡಿ ಮಾತನಾಡಿದ್ದೇನೆ. ಶೀಘ್ರದಲ್ಲೇ ಸಂಸದೆ ಸುಮಲತಾ ಭೇಟಿ ಮಾಡುತ್ತೇನೆ ಎಂದರು.