Author: AIN Author

ಬೆಂಗಳೂರು: ಭಾರತೀಯ ಕ್ರಿಕೆಟ್‌ನ ಬ್ಯಾಟಿಂಗ್‌ ದಿಗ್ಗಜ ರಾಹುಲ್‌ ದ್ರಾವಿಡ್‌ ಅವರ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಅವಧಿಯನ್ನು ಮುಂದಿನ ಎರಡು ವರ್ಷಗಳಿಗೆ ವಿಸ್ತರಿಸಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ ಎಂದು ವರದಿಯಾಗಿದೆ. ದ್ರಾವಿಡ್‌ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಟೆಸ್ಟ್‌ ಚಾಂಪಿಯನ್‌ಷಿಪ್‌ ಮತ್ತು ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ರನ್ನರ್‌ ಅಪ್‌ ಆಗಿದೆ. 2021ರ ಟಿ20 ವಿಶ್ವಕಪ್ ಬಳಿಕ ಭಾರತ ತಂಡದ ಹೆಡ್‌ ಕೋಚ್‌ ಹುದ್ದೆಯನ್ನು ಅಲಂಕರಿಸಿದ್ದ ರಾಹುಲ್‌ ದ್ರಾವಿಡ್‌, ಇತ್ತೀಚೆಗೆ ಅಂತ್ಯವಾಗಿದ್ದ ಏಕದಿನ ವಿಶ್ವಕಪ್‌ ಟೂರ್ನಿಯ ಬಳಿಕ ಅವರ ಅವಧಿ ಮುಗಿದಿತ್ತು. ಈ ಹಿನ್ನೆಲೆಯಲ್ಲಿ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಹಲವು ಫ್ರಾಂಚೈಸಿಗಳು ದ್ರಾವಿಡ್‌ ಅವರನ್ನು ಸಂಪರ್ಕಿಸಿದ್ದವು ಎಂದು ವರದಿಯಾಗಿದೆ. ದ್ರಾವಿಡ್‌ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಅಲ್ಲದೆ ಹಲವು ಪ್ರತಿಭಾವಂತ ಆಟಗಾರರು ಬೆಳಕಿಗೆ ಬಂದಿದ್ದಾರೆ. 2023ರ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಹಾಗೂ 2023ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ…

Read More

ಬೆಂಗಳೂರು:- ಪ್ರತಿಷ್ಠಿತ ಬ್ರಾಂಡ್ ಹೆಸರನ್ನ ನಕಲಿಸಿ ಬಟ್ಟೆ ಮಾರುತ್ತಿದ್ದ ಗೋಡೌನ್ ಮೇಲೆ ಸಿಸಿಬಿ ದಾಳಿ ನಡೆಸಿದೆ. ರಾಜಧಾನಿ ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ ಬಟ್ಟೆಗಳನ್ನು ಸಿಸಿಬಿ ಜಪ್ತಿ ಮಾಡಿದೆ. ದಾಳಿ ವೇಳೆ ಬರೋಬ್ಬರಿ1.5ಕೋಟಿ ಮೌಲ್ಯದ ಬಟ್ಟೆಯನ್ನು ಸಿಸಿಬಿ ಸೀಜ್ ಮಾಡಿದೆ. ಅರ್ಮನಿ, ಬರ್ಬರಿ, ಗ್ಯಾಂಟ್ ಸೇರಿದಂತೆ ಪ್ರತಿಷ್ಠಿತ ಬ್ರಾಂಡ್ ಗಳ ಬಟ್ಟೆ ಎಂದು ಅಕ್ರಮ ಮಾರಾಟ ಮಾಡಲಾಗುತ್ತಿತು. ಪಟೆಲ್ ಎಕ್ಸ್ಪೋರ್ಟ್ ಹಾಗೂ ಆರ್ ಬಿ ಫ್ಯಾಷನ್ ಗೋಡೌನ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ವೇಳೆ ಬೇರೆ ಬೇರೆ ಕಡೆಯೂ ಇದೇ ರೀತಿ ಫೇಕ್ ಬ್ರಾಂಡ್ ಗೋಡೌನ್ ಹೊಂದಿರೋದು ಬೆಳಕಿಗೆ ಬಂದಿದೆ. ಎಸ್ ಆರ್ ನಗರ, ಮಾಗಡಿ ರೋಡ್, ಬೇಗೂರು ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ನಕಲಿ ಬ್ರಾಂಡ್ ಬಟ್ಟೆಯ ಗೋಡೌನ್ ಇರೋದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಸಿಸಿಬಿ…

Read More

ಐಸಿಸಿ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ನಾಯಕ ಮತ್ತು ಭಾರತೀಯ ಕ್ರಿಕೆಟ್ ಸೂಪರ್ಸ್ಟಾರ್ ಮಹೇಂದ್ರ ಸಿಂಗ್ ಧೋನಿ ಬೆಂಗಳೂರು ಮೂಲದ ಸ್ಟಾರ್ಟಪ್ ಒಂದರಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಬೆಂಗಳೂರಿನ ‘ತಗ್ಡಾ ರಹೋ’ ಹೆಸರಿನ ಫಿಟ್ನೆಸ್ ಸ್ಟಾರ್ಟ್ಅಪ್ನಲ್ಲಿ ಧೋನಿ ಹಣ ಹೂಡಿದ್ದಾರೆ. ಆದರೆ, ಸ್ಟಾರ್ಟಪ್ ಮಾಲೀಕರು ಧೋನಿ ಎಷ್ಟು ಪ್ರಮಾಣದ ಹೂಡಿಕೆ ಮಾಡಿದ್ದಾರೆ ಅಥವಾ ಎಷ್ಟು ಷೇರುಗಳನ್ನು ಖರೀದಿಸಿದ್ದಾರೆ ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ. ಕ್ರಿಕೆಟಿಗರ ಫಿಟ್ನೆಸ್ಗೆ ಬೇಕಾಗುವ ಭಾರತೀಯ ಭೌತಿಕ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ತಗ್ಡಾ ರಹೋ ಸಂಸ್ಥಾಪಕ ರಿಷಬ್ ಮಲ್ಹೋತ್ರಾ ಹೇಳಿದ್ದಾರೆ. ಇದಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ ಗರುಡ ಏರೋಸ್ಪೇಸ್, ಹೋಮ್ಲೇನ್, ರಿಗಿ ಸೇರಿದಂತೆ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದರು. ಇದೀಗ ಅವರು ಆಧುನಿಕ ತರಬೇತಿಗೆ ಬೇಕಾದ ಸಾಂಪ್ರದಾಯಿಕ ಭಾರತೀಯ ವ್ಯಾಯಾಮ ಸಾಧನಗಳನ್ನು ಒದಗಿಸುವ ಈ ಫಿಟ್ನೆಸ್ ಸ್ಟಾರ್ಟ್ಅಪ್ನಲ್ಲಿ ಹೂಡಿಕೆ ಮಾಡಿದ್ದಾರೆ. ಈ ಸ್ಟಾರ್ಟ್ಅಪ್ ತನ್ನ ವೆಬ್ಸೈಟ್ ಮೂಲಕವೂ ಫಿಟ್ನೆಸ್ಗೆ ಬೇಕಾದ ತರಬೇತಿ ಸಾಧನಗಳನ್ನು…

Read More

ಒಟಿಟಿ ಪ್ಲಾಟ್​ಫಾರ್ಮ್​ಗಳ ಬಗ್ಗೆ ನಟ ರಿಷಬ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಅವರು ಗೋವಾದಲ್ಲಿ ನಡೆದ 54ನೇ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗಿ ಆಗಿದ್ದ ಇವರಿಗೆ ಸ್ಪೆಷಲ್ ಜ್ಯೂರಿ ಅವಾರ್ಡ್ ಸಿಕ್ಕಿದೆ. ಈ ಕಾರ್ಯಕ್ರಮದಲ್ಲಿ ಅವರು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ. ಒಟಿಟಿ ಪ್ಲಾಟ್​ಫಾರ್ಮ್​ಗಳು ಕನ್ನಡ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೋರಿದ್ದಾರೆ. ‘ಒಟಿಟಿ ಪ್ಲಾಟ್​​ಫಾರ್ಮ್​ಗಳು ಕನ್ನಡ ಚಿತ್ರರಂಗಕ್ಕೆ ಹೆಚ್ಚು ತೆರೆದುಕೊಂಡಿಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇಲ್ಲಿ ಸಬ್​ಸ್ಕ್ರೈಬ್​ಗಳು ಸಿಗುವುದಿಲ್ಲ. ಅಂತಾರಾಷ್ಟ್ರೀಯ ಸಿನಿಮೋತ್ಸವದವದರ ಬಳಿ ಹಾಗೂ ಅದರ ಸ್ಪಾನ್ಸರ್​ಗಳ ಬಳಿ ನಮ್ಮ ಸಿನಿಮಾಗಳನ್ನು ಗುರುತಿಸುವಂತೆ ಕೋರುತ್ತೇನೆ. ಥಿಯೇಟರ್​ನಲ್ಲಿ ಹೆಚ್ಚು ಮಾನ್ಯತೆ ಸಿಗದೇ ಇರುವ ಸಿನಿಮಾಗಳನ್ನು ಒಟಿಟಿ ಪ್ಲಾಟ್​ಫಾರ್ಮ್​ಗಳು ತೆಗೆದುಕೊಳ್ಳಬೇಕು’ ಎಂದು ಅವರು ಬೇಡಿಕೆ ಇಟ್ಟಿದ್ದಾರೆ.

Read More

ಬೆಳಗಾವಿ : ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಳಗೆ ವಿಲೀನ ಮಾಡುವುದಕ್ಕೂ, ಗ್ಯಾರಂಟಿ ಯೋಜನೆಗೂ ಯಾವುದೇ ಸಂಬಂಧವಿಲ್ಲ. ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಳಗೆ ವಿಲೀನ ಮಾಡುವ ಪ್ರಕ್ರಿಯೆ 10 ವರ್ಷಗಳ ಹಿಂದಯೇ ನಡೆದಿದೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಅನುದಾನ ಕೊರತೆಯಾಗಿದ್ದಕ್ಕೆ ಕೃಷಿ ಇಲಾಖೆಯಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳನ್ನು ವಿಲೀನಗೊಳಿಸಲು ಸರ್ಕಾರ ಮುಂದಾಗಿದೆಯೇ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, https://ainlivenews.com/do-you-know-which-are-the-most-visited-websites-by-indians/ ಕೆಲವು ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಅವಶ್ಯಕತೆ ಇಲ್ಲ. ಹಾಗಾಗಿ ಈ ಇಲಾಖೆಗಳನ್ನು ವಿಲೀನಗೊಳಿಸುವ ಬಗ್ಗೆ 10 ವರ್ಷಗಳ ಹಿಂದೆಯೇ ವರದಿ ಕೊಟ್ಟಿದ್ದಾರೆ. ಈ ರೀತಿ ಹಿಂದಿನ ಸರ್ಕಾರಗಳಲ್ಲೂ ವಿಲೀನ ಪ್ರಕ್ರಿಯೆ ನಡೆದಿವೆ. ಗ್ಯಾರಂಟಿ ಯೋಜನೆಗಳಿಗೂ ಮತ್ತು ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು. ಕಾಂತರಾಜ್‌ ಆಯೋಗದ ವರದಿ ಜಾರಿಯಾದರೆ ಕಾಂಗ್ರೆಸ್ ಸರ್ಕಾರಕ್ಕೆ ತೊಂದರೆಯಾಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಯೋಗದವರು ನಮಗೆ ಇನ್ನೂ ವರದಿಯನ್ನೇ ಕೊಟ್ಟಿಲ್ಲ. ವರದಿ ನೀಡಿದ ನಂತರ, ಅದರ…

Read More

ದೇಶ ವಿದೇಶಗಳಲ್ಲಿ ಚಿನ್ನ & ಬೆಳ್ಳಿ ಇವೆರಡೂ ಲೋಹಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 58,100ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 63,380 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,920 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 58,100 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,800 ರೂಪಾಯಿಯಲ್ಲಿ ಇದೆ. ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)., ಬೆಂಗಳೂರು: 58,100 ರೂ., ಚೆನ್ನೈ: 58,700 ರೂ., ಮುಂಬೈ: 58,100 ರೂ., ದೆಹಲಿ: 58,250 ರೂ., ಕೋಲ್ಕತಾ: 58,100 ರೂ., ಕೇರಳ: 58,100 ರೂ., ಅಹ್ಮದಾಬಾದ್: 58,150 ರೂ., ಜೈಪುರ್: 58,250 ರೂ., ಲಕ್ನೋ: 58,250 ರೂ., ಭುವನೇಶ್ವರ್: 58,100 ರೂ.

Read More

ಬೆಂಗಳೂರು:- ಭ್ರೂಣ ಹತ್ಯೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಭ್ರೂಣ ಹತ್ಯೆ ಪ್ರಕರಣ ನಡೆದಿರುವುದು ಅಮಾನವೀಯ. ಈ ಪ್ರಕರಣದಿಂದಾಗಿ ಎಲ್ಲರೂ ತಲೆ ತಗ್ಗಿಸುವಂತಾಗಿದೆ. ಇಂತಹ ಅಮಾನವೀಯ ಕೆಲಸಗಳಿಗೆ ಬೆಂಬಲ ಕೊಡಬಾರದು. ಇದು ನಮ್ಮ ವೈವಸ್ಥೆಯ ವೈಫಲ್ಯ. ಮುಂದೆ ಈ ರೀತಿಯ ಪ್ರಕರಣ ಮರುಕಳಿಸದಂತೆ ಮನವಿ ಮಾಡುತ್ತೇನೆ ಎಂದರು. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. 21ನೇ ಶತಮಾನದಲ್ಲೂ ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಮನೋಭಾವ ಸರಿಯಲ್ಲ ಎಂದರು. ಇನ್ನೂ ರಾಜ್ಯ ಸರ್ಕಾರವು ಬರ ನಿರ್ವಹಣೆಯಲ್ಲಿ ವಿಫಲವಾಗಿದ್ದು, ಸಚಿವರುಗಳ ಮೇಲಿನ ಆರೋಪಗಳ ಕುರಿತು ಬೆಳಗಾವಿ ಅಧಿವೇಶನದ್ಲಲಿ ಬಿಜೆಪಿ ಜೊತೆಗೂಡಿ ಜಂಟಿ ಹೋರಾಟ ನಡೆಸುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಬರ ನಿರ್ವಹಣೆ ಮಾಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸುತ್ತಿದ್ದಾರೆ. ಈ ಬಗ್ಗೆ ನನಗೆ ತಿಳುವಳಿಕೆ ಇಲ್ಲ ಎಂದು ಅವರು ಹೇಳಿದ್ದಾರೆ. ಹಾಗಾದರೆ…

Read More

ಬಳ್ಳಾರಿ :- ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಳ್ಳಾರಿ ತಾಲೂಕಿನ ಹಲಕುಂದಿ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು, ಮಳೆ ಇಲ್ಲದೇ ಒಣಗಿರುವ ತೊಗರಿ,ಸೂರ್ಯಕಾಂತಿ ಜೋಳ ಬೆಳೆಹಾನಿ ಪರಿಶೀಲಿಸಿದರು. ಹಾಗೂ ಇದೇ ವೇಳೆ ಕೃಷಿ ಅಧಿಕಾರಿಗಳು ಹಾಗೂ ರೈತರಿಂದ ಸಚಿವರು ಮಾಹಿತಿ ಪಡೆದರು. ಪ್ರತಿ ರೈತರಿಗೆ ಪ್ರೂಟ್ಸ್ ತಂತ್ರಾಂಶ ಮೂಲಕ ಪರಿಹಾರ ನೀಡಲು ಅನುಕೂಲವಾಗುತ್ತದೆ, ಪ್ರತಿ ರೈತರು ಕೃಷಿ ಇಲಾಖೆಯ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರಿ. ಸರ್ಕಾರ ನೀಡುವ ಪರಿಹಾರ ಪಡೆಯಲು ಅನುಕೂಲವಾಗುತ್ತದೆ. ಯಾವೊಬ್ಬ ರೈತನನ್ನು ಕಡೆಗಣನೆ ಮಾಡಬಾರದು ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಇದೇ ವೇಳೆ ಕೃಷಿ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ ನಾಗೇಂದ್ರ ಸಾಥ್ ನೀಡಿದ್ದಾರೆ.

Read More

ರಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಅನಿಮಲ್’ ಸಿನಿಮಾ ರಿಲೀಸ್ ಮುನ್ನವೇ ಅಭಿಮಾನಿಗಳಿಗೆ ಸಂದೀಪ್ ರೆಡ್ಡಿ ವಂಗಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತೆಲುಗಿನ ಸ್ಟಾರ್ ನಟ ಪ್ರಿನ್ಸ್ ಮಹೇಶ್ ಬಾಬುಗೆ ನಿರ್ದೇಶನ ಮಾಡಲಿದ್ದಾರೆ. ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಅರ್ಜುನ್ ರೆಡ್ಡಿ’ ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ‘ಅನಿಮಲ್’ (Animal) ಸಿನಿಮಾ ಮಾಡುವಾಗಲೇ ಪ್ರಭಾಸ್ ಜೊತೆ ‘ಸ್ಪಿರಿಟ್’ ಚಿತ್ರ ಮಾಡೋದಾಗಿ ಅನೌನ್ಸ್ ಆಗಿದೆ. ಈ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ ಕೂಡ ನೀಡಿದ್ದಾರೆ. ಮಹೇಶ್ ಬಾಬುಗೆ (Mahesh Babu) ಈಗಾಗಲೇ ಭೇಟಿಯಾಗಿ ಕಥೆ ಹೇಳಿದ್ದಾರೆ ಸಂದೀಪ್. ಚಿತ್ರಕಥೆ ಕೇಳಿಯೇ ಥ್ರಿಲ್ ಆಗಿ ಮಹೇಶ್ ಬಾಬು ಓಕೆ ಎಂದಿದ್ದಾರೆ. ಚಿತ್ರಕ್ಕೆ ಡೆವಿಲ್ ಎಂದು ಹೆಸರಿಟ್ಟಿದ್ದು, ಅನಿಮಲ್ ಸಿನಿಮಾದ ರೀತಿಯೇ ಇನ್ನೂ ಸಖತ್ ವೈಲೆಂಟ್ ಆಗಿ ಮೂಡಿ ಬರಲಿದೆಯಂತೆ. ಎಂದೂ ನೋಡಿರದ ಲುಕ್, ಪಾತ್ರದಲ್ಲಿ ಮಹೇಶ್ ಬಾಬು ಅವರನ್ನ ಈ ಚಿತ್ರದಲ್ಲಿ ಕಣ್ತುಂಬಿಕೊಳ್ಳಬಹುದು.‌ ಸಂದೀಪ್…

Read More

ವಿಜಯಪುರ: ಮಾಗಡಿ ಶಾಸಕನೇ ಬ್ರಿಟಿಷ ಇದ್ದಂಗೆ ಅದಾನ. ಆ ಶಾಸಕನ ಬಗ್ಗೆ ಹೆಚ್ಚು ಮಾತಾಡಿ ಪ್ರಯೋಜನ ಇಲ್ಲ ಎಂದು ಬಿಜೆಪಿಯವ್ರನ್ನು ಬ್ರಿಟಿಷರಿಗೆ ಹೋಲಿಸಿದ್ದ ಮಾಗಡಿ ಶಾಸಕ ಬಾಲಕೃಷ್ಣಗೆ ಸಂಸದ ರಮೇಶ ಜಿಗಜಿಣಗಿ ತಿರುಗೇಟು ನೀಡಿದರು. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಪುಲ್ವಾಮಾದಲ್ಲಿ ಸೈನಿಕರು ಸಾಯಲು ಮೋದಿ ಯಾಕೆ ಕಾರಣರಾಗುತ್ತಾರೆ? ನಮ್ಮ ಸೈನಿಕರಿಗೆ ಉಗ್ರರು ತೊಂದರೆ ಮಾಡಿದ್ದಕ್ಕೆ ಮೋದಿ ಅವರು ಸರ್ಜಿಕಲ್ ಸ್ಟ್ರೈಕ್ ಮಾಡಿ ಪಾಕಿಸ್ತಾನದೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದರು ಇದು ತಪ್ಪಾ? ಎಂದು ಪ್ರಶ್ನಿಸಿದರು. https://ainlivenews.com/do-you-know-which-are-the-most-visited-websites-by-indians/ ಇನ್ನು ಬಿಜೆಪಿಯವರು ಬ್ರಿಟಿಷರಿಗಿಂತ ಡೇಂಜರ್ ಇದ್ದಾರೆ ಎಂಬ ಮಾಗಡಿ ಶಾಸಕನ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ಆ ಶಾಸಕನ ಬಗ್ಗೆ ನಾನೇನು ಮಾತಾನಾಡುವದಿಲ್ಲ. ನೋಡೋದಕ್ಕೆ ಆ ಮಾಗಡಿ ಶಾಸಕನೇ ಬ್ರಿಟಿಷ ಇದ್ದಂಗೆ ಅದಾನ. ಬಿಜೆಪಿ ಜೆಡಿಎಸ್ ಸಮಿಶ್ರ ಸರ್ಕಾರವಾದ್ರೆ ಉತ್ತರ ಪ್ರದೇಶದಲ್ಲಿ ಬಿಎಸ್ ಪಿ ಗೆ ಆದ ಗತಿ ಜೆಡಿಎಸ್ ಗೆ ಆಗತ್ತೆ ಎಂಬ ಹೇಳಿಕೆ ನೀಡಿರುವ ಆ ಶಾಸಕನ ಬಾಯಿ ಇರೋದೇ ಹಾಗೆ…

Read More