Author: AIN Author

ಚಿತ್ರದುರ್ಗ: ದಾಖಲೆ ಇಲ್ಲದೆ ಇನ್ನೋವಾ ಕಾರಿನಲ್ಲಿ  ಸಾಗಿಸುತ್ತಿದ್ದ ಸುಮಾರು ಎಂಟು ಕೋಟಿ ಹಣವನ್ನು ಹೊಳಲ್ಕೆರೆ ಪೊಲೀಸರು ಜಪ್ತಿ ಮಾಡಿದ್ದಾರೆ. ಹೊಳ್ಕೆರೆಯಿಂದ  ಶಿವಮೊಗ್ಗಾಕ್ಕೆ ಹೋಗುತ್ತಿದ್ದ ಇನ್ನೋವಾ ಕಾರನ್ನು ದುಮ್ಮಿ ಬಳಿ ತಡೆದು ಪರಿಶೀಲಿಸಿದಾಗ  ದಾಖಲೆ ಇಲ್ಲದೆ ಎಂಟು ಕೋಟಿ ರೂಪಾಯಿಗಳನ್ನು ಸಾಗಿಸಲಾಗುತ್ತಿತ್ತು. ಇಷ್ಟೊಂದು ಹಣವನ್ನು ಅಡಿಕೆ ವ್ಯಾಪಾರಿ  ಉದಯ್ ಶೆಟ್ಟಿ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಜಪ್ತಿ ಮಾಡಿದ ಹಣವ‌ನ್ನು ಪೊಲೀಸರು ತಂದು ಪರಿಶೀಲಿಸುತ್ತಿದ್ದು,  ಅದಕ್ಕೆ ದಾಖಲೆಯನ್ನು‌ ನೀಡುವಂತೆ  ಕೇಳಿದ್ದಾರೆ ಎನ್ನಲಾಗಿದೆ.

Read More

ವಿಜಯಪುರ: ಮಾಗಡಿ ಶಾಸಕನೇ ಬ್ರಿಟಿಷ ಇದ್ದಂಗೆ ಅದಾನ. ಆ ಶಾಸಕನ ಬಗ್ಗೆ ಹೆಚ್ಚು ಮಾತಾಡಿ ಪ್ರಯೋಜನ ಇಲ್ಲ ಎಂದು ಬಿಜೆಪಿಯವ್ರನ್ನು ಬ್ರಿಟಿಷರಿಗೆ ಹೋಲಿಸಿದ್ದ ಮಾಗಡಿ ಶಾಸಕ ಬಾಲಕೃಷ್ಣಗೆ ಸಂಸದ ರಮೇಶ ಜಿಗಜಿಣಗಿ ತಿರುಗೇಟು ನೀಡಿದರು. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಪುಲ್ವಾಮಾದಲ್ಲಿ ಸೈನಿಕರು ಸಾಯಲು ಮೋದಿ ಯಾಕೆ ಕಾರಣರಾಗುತ್ತಾರೆ? ನಮ್ಮ ಸೈನಿಕರಿಗೆ ಉಗ್ರರು ತೊಂದರೆ ಮಾಡಿದ್ದಕ್ಕೆ ಮೋದಿ ಅವರು ಸರ್ಜಿಕಲ್ ಸ್ಟ್ರೈಕ್ ಮಾಡಿ ಪಾಕಿಸ್ತಾನದೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದರು ಇದು ತಪ್ಪಾ? ಎಂದು ಪ್ರಶ್ನಿಸಿದರು. https://ainlivenews.com/residents-own-property-in-bangalore-heres-the-good-news/ ಇನ್ನು ಬಿಜೆಪಿಯವರು ಬ್ರಿಟಿಷರಿಗಿಂತ ಡೇಂಜರ್ ಇದ್ದಾರೆ ಎಂಬ ಮಾಗಡಿ ಶಾಸಕನ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ಆ ಶಾಸಕನ ಬಗ್ಗೆ ನಾನೇನು ಮಾತಾನಾಡುವದಿಲ್ಲ. ನೋಡೋದಕ್ಕೆ ಆ ಮಾಗಡಿ ಶಾಸಕನೇ ಬ್ರಿಟಿಷ ಇದ್ದಂಗೆ ಅದಾನ. ಬಿಜೆಪಿ ಜೆಡಿಎಸ್ ಸಮಿಶ್ರ ಸರ್ಕಾರವಾದ್ರೆ ಉತ್ತರ ಪ್ರದೇಶದಲ್ಲಿ ಬಿಎಸ್ ಪಿ ಗೆ ಆದ ಗತಿ ಜೆಡಿಎಸ್ ಗೆ ಆಗತ್ತೆ ಎಂಬ ಹೇಳಿಕೆ ನೀಡಿರುವ ಆ ಶಾಸಕನ ಬಾಯಿ ಇರೋದೇ ಹಾಗೆ…

Read More

ಬೆಂಗಳೂರು: ದಾಸ ಶ್ರೇಷ್ಠರಾದ ಸಂತ ಕನಕದಾಸರ ಜಯಂತಿ ಅಂಗವಾಗಿ ಇಂದು ಜಾತ್ಯತೀತ ಜನತಾದಳ ಪಕ್ಷದ ಕೇಂದ್ರ ಕಚೇರಿಯಾದ ಜೆಪಿ ಭವನದಲ್ಲಿ 536ನೇ ಕನಕದಾಸರ ಜಯಂತೊತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು! ಈ ಹಿನ್ನೆಲೆಯಲ್ಲಿ  ವಿಧಾನ ಪರಿಷತ್ ಶಾಸಕರಾದ  ಟಿ. ಎ. ಶರವಣ ಅವರು ಮುಖ್ಯ ಅಥಿತಿಯಾಗಿ ಭಾಗವಹಿಸಿ ಕನಕ ದಾಸರ ಜಯಂತಿಯನ್ನು ಆಚರಿಸಲಾಯಿತು ಹಾಗೆ ಮಾತನಾಡಿದ ಅವರು, ಸಮಸ್ತ ಜನತೆಗೆ ದಾಸ ಶ್ರೇಷ್ಠರಾದ, ಸಂತ ಕನಕದಾಸರ ಜಯಂತಿಯ ಶುಭಾಶಯಗಳು. ಸಮಾಜದ ಮೇಲು, ಕೀಳು, ಜಾತಿ, ಮತ ಸಿದ್ಧಾಂತದ ವಿರುದ್ಧ ಪ್ರತಿಭಟನಾ ನೆಲೆಗಟ್ಟಿನಲ್ಲಿ ದಾಸ ಸಾಹಿತ್ಯಕ್ಕೆ ವೈಚಾರಿಕ ಪ್ರಭೆ ತಂದರು. ಅವರು ಸಾರಿದ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಅವರ ನೀಡಿದ ಆದರ್ಶ ನಮಗೆಲ್ಲರಿಗೂ ದಾರಿದೀಪವಾಗಲಿ ಎಂದು ಆಶಿಸಿದರು. ಈ ಕಾರ್ಯಕ್ರಮದಲ್ಲಿ MLC ಶ್ರೀ ತಿಪ್ಪೇಸ್ವಾಮಿ, CM ನಾಗರಾಜ್ ಸೇರಿದಂತಹ ಹಲವಾರು ಜೆಡಿಎಸ್ ಪಕ್ಷದ ನಾಯಕರು ಉಪಸ್ಥಿತಿಯಲ್ಲಿದ್ದರು.

Read More

ಬೆಂಗಳೂರು: ನಾಳೆಯಿಂದ ಬೆಂಗಳೂರು ಹಬ್ಬ ಆಯೋಜನೆ ಹಿನ್ನೆಲೆ ಬೆಂಗಳೂರಿನ ಅಡಿಪಾಯದ ಜಾಗದಿಂದ ಇಂದು ಕಾರ್ಯಕ್ರಮ ಚಾಲನೆ ನೀಡಲಾಯಿತು. ಡಿಸಿಎಂ ಡಿಕೆಶಿವಕುಮಾರ್ ರಿಂದ ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡಿದ್ದು  ಅವೆನ್ಯೂ ರಸ್ತೆಯ ರಾಜಾ ಮಾರ್ಕೆಟ್ ಸರ್ಕಲ್ ನಲ್ಲಿ ಕಾರ್ಯಕ್ರಮ ಆರಂಭ ಅನ್ ಬಾಕ್ಸಿಂಗ್ ಬಿಎಲ್ ಆರ್ ನಿಂದ ಆಯೋಜನೆ ನಾಡ ಪ್ರಭು ಕೆಂಪೇಗೌಡ ನಾಡು ಕಟ್ಟಲು ಆರಂಭಿಸದ ಜಾಗದಿಂದ ಕಾರ್ಯಕ್ರಮ ಚಾಲನೆ ಡಿಸಿಎಂ ಡಿಕೆಶಿವಕುಮಾರ್ ರಿಂದ ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡಿದರು.

Read More

ಹುಬ್ಬಳ್ಳಿ; ಈ ಹಿಂದೆ 2018 ರಲ್ಲಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನ ಸಭೆ ಚುನಾವಣಾ ನಡೆತು ಆವಾಗ ಎಷ್ಟೇ ಗುದ್ದಾಡಿದರು ಕೊನೆಗೆ ಬಂದು ನಿಂತಿದ್ದು 104ಕ್ಕೆ ಇವತ್ತು ಬಿಜೆಪಿ ಹದಗೆಟ್ಟು ಹೋಗಿದೆ ಈಗ ಚುನಾವಣಾ ನಡೆದ್ರೆ 66 ಅಲ್ಲಾ 40 ಸೀಟ್ ಸಹ ಬಿಜೆಗೆ ಬರೋದಿಲ್ಲ ಬಿಜೆಪಿ ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆ ವಿಜಯೇಂದ್ರ ಅಲ್ಲಾ ಯಾರು ಅಧ್ಯಕ್ಷರು ಆದ್ರು ಅದನ್ನು ಸರಿ ಮಾಡಲು ಆಗುವುದಿಲ್ಲ ಎಂದರು. ಇನ್ನುಐದು ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಒಳ್ಳೆಯ ಫಲಿತಾಂಶ ಬರುತ್ತೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ಮಧ್ಯಪ್ರದೇಶ, ಛತ್ತೀಸ್ ಘಡ ಎರಡರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ತೆಲಂಗಾಣದ ಅಧಿಕಾರಕ್ಕೆ ಬರುವ ಎಲ್ಲಾ ಅವಕಾಶಗಳಿವೆ ರಾಜಸ್ಥಾನದಲ್ಲಿ ನೆಕ್ ಟು ನೆಕ್ ಫೈಟ್ ಇದೆ ಆದರೆ ಅತೀವ ವಿಜಯ ಕಾಂಗ್ರೆಸ್ ಬರುತ್ತದೆಜನರ ಭಾವನೆ ಯಾವರೀತಿ ಇದೆ ಎನ್ನುವುದನ್ನು ಈ ಚುನಾವಣಾ ಫಲಿತಾಂಶ…

Read More

ತುಮಕೂರು: ರಾಜ್ಯದಲ್ಲಿ ಹಾವು ಕಡಿತಕ್ಕೆ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪದವಿ ಪಡೆದ ವಿದ್ಯಾರ್ಥಿ ಹಾವು ಕಡಿದು ಸಾವನ್ನಪ್ಪಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ. ನಿನ್ನೇ ಸಾಹೇ ಘಟಿಕೋತ್ಸವದಲ್ಲಿ ಪದವಿ ಪಡೆದಿದ್ದ ಕೇರಳ ಮೂಲದ ಅದಿತ್ ಬಾಲಕೃಷ್ಣನ್ ವಿದ್ಯಾರ್ಥಿಯಾಗಿದ್ದು, ನಿನ್ನೇ ಪಾರ್ಕಿನಲ್ಲಿ ಹಾವು ಕಡಿದಿರುವ ಶಂಕೆಯಾಗಿದೆ. ಹಾವು ಕಡಿತ ಗಮನಿಸದೇ ಮನೆಗೆ ಬಂದಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮೃತನ ಶವ ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ರವಾನೆ ಮಾಡಲಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.  

Read More

ಹುಬ್ಬಳ್ಳಿ; ಈಗಿನ ಎಲ್ಲ ಬೆಳವಣಿಗೆ ನೋಡಿದರೆ ಕಾಂಗ್ರೆಸ್ ಪಾರ್ಟಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು ಇಷ್ಟು ದೊಡ್ಡ ಪ್ರಮಾಣದಲ್ಲಿ ಭಿನ್ನಮತ ಆರಂಭವಾಗಿದ್ದು ಆಳಂದ ಶಾಸಕ ಬಿಆರ್ ಪಾಟಿಲ್ , ಕೊಪ್ಪಳ ಜಿಲ್ಲೆಯ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಸತೀಶ್ ಗುಂಪುಗಾರಿಕೆ ಈ ಎಲ್ಲಾ ಸಂಗತಿಗಳ‌ ನೋಡಿದ್ರೆ ಎಷ್ಟು ಪ್ರಮಾಣದಲ್ಲಿ ಭಿನ್ನಾಭಿಪ್ರಾಯ ಇದೆ ಅಂತಾ ಗೊತ್ತಾಗುತ್ತದೆ ಎಂದ ಅವರು, ರಾಷ್ಟ್ರೀಯ ನಾಯಕತ್ವದ ಬೆದರಿಕೆ ಇಲ್ಲ ಸರಿಮಾಡುವ , ಸಂಬಾಳಿಸುವ ನೇತೃತ್ವ ಇಲ್ಲ ಎನ್ನುವುದು ತೋರಿಸುತ್ತದೆ ಈಗ ಜಗಳ ಅತೀರೆಕಕ್ಕೆ ಹೋಗಿದೆ ಇದು ಆಡಳಿತ ಮೇಲೆ ಪರಿಣಾಮ ತೀವ್ರವಾಗಿ ಬೀರಿದೆ ಎಂದ ಅವರು, ಮುಖ್ಯ ಮಂತ್ರಿ ಮತ್ತು ಉಪ ಮುಖ್ಯ ಮಂತ್ರಿ ಗುಂಪುಗಳ ಮಧ್ಯೆ ಹೊಂದಾಣಿಕೆ ಇಲ್ಲ ಆದ್ದರಿಂದ ಪರಿಸ್ಥಿತಿ ಅಯೋಮಯವಾಗಿದೆ ಜನ ಬರೀ ಇವರ ಜಗಳ ನೋಡುವುದೆ ಆಗಿದ ಯಾರ ಮತ್ತೆ ಮುಖ್ಯ ಮಂತ್ರಿ ಆಗಬೇಕು, ಸಿದ್ದರಾಮಯ್ಯವರನ್ನು ಯಾವ…

Read More

ಹುಬ್ಬಳ್ಳಿ; ಕಾಂಗ್ರೆಸ್ ಹಿರಿಯ ನಾಯಕಶಶಿ ತರೂರ ಸಭೆಯಲ್ಲಿ ನಡೆದ ಚರ್ಚೆ ಬಗ್ಗೆ ಕೇಂದ್ರ ಸಚಿವರಿಗೆ ಕನಸು ಬಿದ್ದಿತ್ತಾ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಂಶಯ ವ್ಯಕ್ತಪಡಿಸಿದರು. ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಶಶಿ ತರೂರ್ ಸಭೆಯಲ್ಲಿ ಸಿಎಂ ಬದಲಾವಣೆ ಕುರಿತು ಚರ್ಚೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಕ್ಕೆ ಶೆಟ್ಟರ್ ಟಾಂಗ್ ಕೊಟ್ಟ ಅವರು ಕೇಂದ್ರ ಸಚಿವರಿಗೆ ಅವರಿಗೆನು ಅಂತರಾತ್ಮ ಇದೆಯಾ? ದೃತರಾಷ್ಟ್ರನಿಗೆ ಸಂಜಯ ಹೇಳಿದಂತೆ ಜೋಶಿ ಅವರಿಗೆ ಹೇಳುವ ಯಾವುದಾದರೂ ಶಕ್ತಿಯಿದೆಯಾ? ಸುಮ್ಮನೆ ಆರೋಪ ಮಾಡೋದು, ಪ್ರಚಾರ ತೆಗೆದುಕೊಳ್ಳುವುದು ಬಿಟ್ಟ್ರೆ ಇದರ ಹಿಂದೆ ಏನು ಇಲ್ಲ, ಇದು 100% ಆಧಾರ ರಹಿತ ಆರೋಪ ಆಗಿದೆ ಜವಾಬ್ದಾರಿ ಸ್ಥಾನ ಇದ್ದವರು ಬೇಜವ್ದಾರಿ ಹೇಳಿಕೆ ನೀಡಬಾರದು. ಒಂದು ಸಾವಿರ ಕೋಟಿ ಕಲೆಕ್ಟ್ ಮಾಡಿ ತೆಲಂಗಾಣಕ್ಕೆ ರಾಜ್ಯ ಕಾಂಗ್ರೆಸ್ ನೀಡುತ್ತೆ ಅಂತ ಜೋಶಿ ಆರೋಪ ಮಾಡಿದ್ದರು ಈಗ ಅದಕ್ಕೆ ಅವರು ಏನು ಉತ್ತರ ನೀಡುತ್ತಾರೆ ಅವರು ಸುಮ್ಮನೆ ವೇಗವಾದ ಆರೋಪ…

Read More

ದಾವಣಗೆರೆ: ಸ್ವಯಂಕೃತ ಅಪರಾಧದಿಂದ ಸರ್ಕಾರ ಪತನವಾಗತ್ತೆ. ನಾವು ಯಾವುದೇ ಆಪರೇಷನ್ ಕಮಲ ಮಾಡಲ್ಲ. ಆಡಳಿತ ವೈಫಲ್ಯದಿಂದ ಕಾಂಗ್ರೆಸ್ ಶಾಸಕರೇ ರಾಜೀನಾಮೆ ನೀಡುತ್ತಾರೆ ಎಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ದಲ್ಲಿ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಚುನಾವಣೆ ಮುಂಚೆ ಘೋಷಣೆಗಳನ್ನ ಮಾಡಿದ್ದರು. ಆದ್ರೆ, ಯಾವುದು ಸರಿಯಾಗಿ ಜಾರಿ ಮಾಡಲಿಲ್ಲ ಇದರಿಂದ ಮಹಿಳೆಯರು ಸೇರಿ ಎಲ್ಲರು ಬೇಸತ್ತು ಹೋಗಿದ್ದಾರೆ. https://ainlivenews.com/residents-own-property-in-bangalore-heres-the-good-news/ ಇನ್ನೂ ಸಚಿವ ಜಮೀರ್ ಅಹ್ಮದ್ ವಿರುದ್ದ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಜಮೀರ್ ಅಹ್ಮದ್ ಒಬ್ಬ ಹುಚ್ಚ ಆತ ಹುಚ್ಚನಂತೆ ಮಾತನಾಡುತ್ತಾನೆ. ಪುಲ್ವಾಮ ಘಟನೆ ಮತ್ತು ನರೇಂದ್ರ ಮೋದಿ ಆಡಳಿತವನ್ನ ಬ್ರಿಟಿಷ್ ರಿಗೆ ಹೋಲಿಕೆ ಮಾಡುತ್ತಾರೆ. ಶಾಸಕ ಬಾಲಕೃಷ್ಣ ಗೆ ನಾಚಿಕೆ ಆಗಬೇಕು, ರಾಜ್ಯದ ಜನರ ಕ್ಷಮೆ ಕೇಳಬೇಕು. ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ ಅಂತಾರೆ, ಕೆಲ ಶಾಸಕರು ಇಂಥವರೇ ಸಿಎಂ ಆಗಬೇಕೆಂದು ಹೇಳುತ್ತಿದ್ದಾರೆ. ಶಕ್ತಿ ಯೋಜನೆಗೆ…

Read More

‘ಕಾಟೇರ’ ಬರ್ತಾ ಇದಾನೆ ಕಂಡ್ರೋ.. ಇನ್ನೇನು ಬೇಕು? Happy New Year ಗಿಫ್ಟ್ ಸಿಕ್ತಲ್ಲ. ಕಾಟೇರಮ್ಮನ ಮಗನಾಗಿ ದುಷ್ಟರ ಸಂಹಾರಕ್ಕಾಗಿ ‘ಕಾಟೇರ’ ಸಿದ್ಧವಾಗಿದ್ದಾನೆ. ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರು ನಟಿಸಿರುವ ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ‘ಕಾಟೇರ’ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಕಾಟೇರದಲ್ಲಿ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ಖಡಕ್​ ಲುಕ್​ನಲ್ಲಿ ಕಾಣಿಸಿಕೊಂಡಿರುವ ‘ಡಿ ಬಾಸ್’ ತಮ್ಮ ಅಭಿಮಾನಿಗಳಿಗೆ ಹಬ್ಬದೂಟ ಉಣಬಡಿಸಲು ಮುಂದಾಗಿದ್ದಾರೆ. ಈ ಸಿನಿಮಾ ಡಿಸೆಂಬರ್ 29ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಈ ಸಿನಿಮಾದಲ್ಲಿ ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಕಾಟೇರವನ್ನು ನಿರ್ದೇಶಿಸಿದ್ದಾರೆ. ಇನ್ನೂ ಧೀರ ರಾಕ್​ಲೈನ್ ವೆಂಕಟೇಶ್ ಅವರು ಕಾಟೇರಗೆ ಬಂಡವಾಳ ಹೂಡಿದ್ದಾರೆ. ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಆಗುತ್ತಾ ಕಾಟೇರ ಈ ವರ್ಷ ಸ್ಯಾಂಡಲ್ ವುಡ್​ಗೆ ಅಷ್ಟೇನು ಆಶಾದಾಯಕವಾಗಿರಲಿಲ್ಲ. ಯಾವ ಸಿನಿಮಾ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಅನಿಸ್ಕೊಂಡಿರಲ್ಲ. ವರ್ಷದ ಕೊನೆಯಲ್ಲಿ ಕಾಟೇರ ಮೂಲಕ…

Read More