Author: AIN Author

ದಾವಣಗೆರೆ: ಜ.22 ರಂದು ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ದೇವರ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು ಅಂದು ದಾವಣಗೆರೆ ಜಿಲ್ಲಾದ್ಯಂತ ರಜೆ ಘೋಷಣೆ ಮಾಡಬೇಕೆಂದು ಮಾತೃ ದೇವೂ ಟ್ರಸ್ಟ್ ಮತ್ತು ಪ್ರೇರಣಾ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಕಳೆದ ಹಲವು ದಶಕಳಿಂದ ರಾಮ ಮಂದಿರ ನಿರ್ಮಾಣ ಆಗಬೇಕೆಂಬುದು ಕೋಟ್ಯಂತರ ಜನರ ಆಶಯವಾಗಿತ್ತು. ಆ ಕನಸು ನನಸಾಗುತ್ತಿದೆ, ಆಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಭಾಗಿಯಾಗಲಿದ್ದಾರೆ. ಈ ಅಪರೂಪದ ಕ್ಷಣಗಳಿಗೆ ನೇರವಾಗಿ ಸಾಕ್ಷಿಯಾಗಲು ಎಲ್ಲರಿಂದಲೂ ಸಾಧ್ಯವಿಲ್ಲ. ಹೀಗಾಗಿ ಅಂದಿನ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು, ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈ ಕಾರಣ ದಾವಣಗೆರೆ ಜಿಲ್ಲೆಯಾದ್ಯಂತ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಾಡದ ಆನಂದರಾಜ್. ಮಾಜಿ ಮಹಾಪೌರ ಎಸ್.ಟಿ.ವಿರೇಶ್,ಪೋತಲು ಶ್ರೀನಿವಾಸ್,ಶ್ರೀಮತಿ ಚೇತನಾ,ಶ್ರೀಮತಿ ಭಾಗ್ಯ ಪಿಸಾಳೆ,ಚಂದ್ರಕಲಾ ಎಂ,ನವೀನ್ ಗುಬ್ಬಿ,ಗಂಗಾಧರ ಜಿ.ವಿ, ಶಿವನಗೌಡ ಪಾಟೇಲ್,ಟಿಂಕರ್ ಮಂಜಣ್ಣ ಇನ್ನೂ ಮುಂತಾದ ಹಿಂದೂ ಪರ…

Read More

ಮಠ ಖ್ಯಾತಿಯ ಗುರು ಪ್ರಸಾದ್ ಮತ್ತು ನವರಸ ನಾಯಕ ಜಗ್ಗೇಶ್ (Jaggesh) ಕಾಂಬಿನೇಷನ್ ನ ರಂಗನಾಯಕ (Ranganayaka) ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಮಾರ್ಚ್ 8 ರಂದು ಶಿವರಾತ್ರಿಗೆ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. 15 ವರ್ಷಗಳ ನಂತರ ಗುರು ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ಚಿತ್ರವೊಂದು ಬಿಡುಗಡೆ ಆಗುತ್ತಿದೆ. ನಿರ್ದೇಶಕ ಮಠದ ಗುರುಪ್ರಸಾದ್ (Guruprasad) ಸಿನಿಮಾ ಕೈಗೆತ್ತಿಕೊಂಡರೇ ಅದು ಯಾವತ್ತು ಶುರುವಾಗತ್ತೋ, ಯಾವತ್ತು ಮುಗಿಯತ್ತೋ ಅವರಿಗೇ ಗೊತ್ತಿರುವುದಿಲ್ಲ. ಆದರೆ, ಈ ಬಾರಿ ಹಾಗಾಗಿಲ್ಲ. ‘ರಂಗನಾಯಕ’ ಚಿತ್ರವನ್ನು ಅತೀ ವೇಗದಲ್ಲಿ ಚಿತ್ರೀಕರಣ ಮುಗಿಸಿ ಅಚ್ಚರಿ ಮೂಡಿಸಿದ್ದಾರೆ. ಈಗಾಗಲೇ ಇವರ ನಿರ್ದೇಶನದಲ್ಲಿ ಮೂಡಿ ಬಂದ ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ಎರಡನೇ ಸಲ ಅವಧಿಗೂ ಮೀರಿ ತಯಾರಾಗಿದ್ದವು. ಇವುಗಳ ನಂತರ ಸೆಟ್ಟೇರಿದ ‘ಅದೇಮಾ’ ನಾಲ್ಕು ವರ್ಷಗಳಾದರೂ ಇನ್ನೂ ಮುಗಿದಿಲ್ಲ. ಈ ನಡುವೆ ಮುಹೂರ್ತ ಕಂಡ ‘ರಂಗನಾಯಕ’ ಚಿತ್ರ ಕೂಡ ಬೇಗ ಬರುವುದು ಅನುಮಾನ ಎನ್ನಲಾಗಿತ್ತು. ಆದರೆ, ಅನುಮಾನವನ್ನು…

Read More

ದೇಶದಲ್ಲಿ ಸಾರಿಗೆಗೆ ಸಂಬಂಧಿಸಿದಂತೆ ಸಾಕಷ್ಟು ಕೆಲಸ ಮಾಡಲಾಗುತ್ತಿದೆ. ರಾಜ್ಯಗಳ ನಡುವಿನ ಸಂಪರ್ಕವನ್ನು ಹೆಚ್ಚಿಸಲು, ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಕೇಂದ್ರ ಸರ್ಕಾರದಿಂದ ದೊಡ್ಡ ಪ್ರಮಾಣದಲ್ಲಿ ಕೆಲಸ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಟೋಲ್ ಪ್ಲಾಜಾಗಳನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸಲಾಗುತ್ತಿದೆ. ಟೋಲ್ ಪ್ಲಾಜಾಗಳಲ್ಲಿ ಜನಸಂದಣಿಯನ್ನು ತಪ್ಪಿಸಲು, ಸರ್ಕಾರವು ಫಾಸ್ಟ್ಯಾಗ್ ಅನ್ನು ಪ್ರಾರಂಭಿಸಿದೆ. ಫಾಸ್ಟ್ಯಾಗ್ ಟೋಲ್ ಕ್ಯೂಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡುವ ತಂತ್ರಜ್ಞಾನವಾಗಿದೆ. ಆದರೆ ಅನೇಕ ಬಾರಿ ಫಾಸ್ಟ್ಯಾಗ್‌ನಲ್ಲಿ ಬ್ಯಾಲೆನ್ಸ್ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ಟೋಲ್ ಪ್ಲಾಜಾದಲ್ಲಿ ಸರತಿ ಇದೆ. ಅಂತಹ ಪರಿಸ್ಥಿತಿಯಲ್ಲಿ, ಟೋಲ್ ದಾಟುವ ಮೊದಲು ಫಾಸ್ಟ್ಯಾಗ್‌ನ ಪರಿಶೀಲಿಸುವುದು ಮುಖ್ಯ. ಆರಂಭದಲ್ಲಿ ಫಾಸ್ಟ್ಯಾಗ್ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲವಿತ್ತು ಮತ್ತು ಅನೇಕ ಸಮಸ್ಯೆಗಳೂ ಇದ್ದವು. ಆದರೆ ನಂತರ, ಫಾಸ್ಟ್ಯಾಗ್ ಬಳಕೆಯನ್ನು ಹೆಚ್ಚು ಸುಲಭಗೊಳಿಸಲಾಯಿತು. ಈಗ ನೀವು ಮನೆಯಲ್ಲಿ ಕುಳಿತು ನಿಮ್ಮ ಫಾಸ್ಟ್ಯಾಗ್ ಬ್ಯಾಲೆನ್ಸ್ ಅನ್ನು 3 ರೀತಿಯಲ್ಲಿ ಪರಿಶೀಲಿಸಬಹುದು. ಇದು ಫಾಸ್ಟ್ಯಾಗ್ ಅಪ್ಲಿಕೇಶನ್, ಬ್ಯಾಂಕ್ ವೆಬ್‌ಸೈಟ್, SMS ಮತ್ತು ಟೋಲ್ ಫ್ರೀ ಸಂಖ್ಯೆಯನ್ನು ಒಳಗೊಂಡಿದೆ. ಆನ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್…

Read More

ಹನುಮಾನ್ (Hanuman) ಸಿನಿಮಾವನ್ನು ಮೆಚ್ಚಿಕೊಳ್ಳುತ್ತಿರುವ ಸೆಲೆಬ್ರಿಟಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ತೇಜ ಸಜ್ಜಾ ಅಭಿನಯದ ಹನುಮಾನ್ ಸಿನಿಮಾ ವೀಕ್ಷಿಸಿರುವ ನಟಿ ಸಮಂತಾ (Samantha), ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಅದ್ಭುತವಾದ ಸಿನಿಮಾವೊಂದನ್ನು ನೀಡಿದ್ದಕ್ಕಾಗಿ ಚಿತ್ರತಂಡಕ್ಕೆ ಅವರು ಅಭಿನಂದನೆಯನ್ನೂ ಸಲ್ಲಿಸಿದ್ದಾರೆ. ಮೊನ್ನೆಯಷ್ಟೇ ಸೆಲೆಬ್ರಿಟಿಗಳಿಗಾಗಿ ಬೆಂಗಳೂರಿನಲ್ಲೂ ಹನುಮಾನ್ ಚಿತ್ರದ ಶೋ ಆಯೋಜನೆ ಮಾಡಲಾಗಿತ್ತು. ಚಿತ್ರತಂಡದ ಬಹುತೇಕ ಸದಸ್ಯರು ಭಾಗಿಯಾಗಿದ್ದು, ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ (Tejasvi surya) ಅವರನ್ನು ಹನುಮಾನ್ ಚಿತ್ರ ಖ್ಯಾತಿಯ ತೇಜ ಸಜ್ಜಾ (Teja sajja) ಭೇಟಿಯಾಗಿದ್ದರು. ಇದೊಂದು ಆತ್ಮೀಯ ಭೇಟಿಯಾಗಿದ್ದು, ಹನುಮಾನ್ ಸಿನಿಮಾ ಶೀಘ್ರದಲ್ಲಿಯೇ ವೀಕ್ಷಿಸುವುದಾಗಿ ತೇಜಸ್ವಿ ಸೂರ್ಯ ಹೇಳಿದ್ದರು. ಸುಗ್ಗಿ ಸಂಭ್ರಮದ ವಿಶೇಷವಾಗಿ ಬಿಡುಗಡೆಯಾದ ಹನು-ಮಾನ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈಗಾಗಲೇ ನೂರು ಕೋಟಿ ಬಾಚಿಕೊಂಡಿರುವ ತೇಜ ಸಜ್ಜಾ ಚಿತ್ರ ಸ್ಟಾರ್ ಹೀರೋ ಚಿತ್ರಗಳಿಗೆ ಟಕ್ಕರ್ ಕೊಟ್ಟು  ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿಯಾಗಿ ಓಟ ಮುಂದುವರೆಸಿದೆ. ಸೂಪರ್ ಹೀರೋ ಕಾನ್ಸೆಪ್ಟ್‌ ಹೊಂದಿರುವ ಹನು-ಮಾನ್ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತೇಜ…

Read More

ಹಾವೇರಿ:- ಹಿಂದೂ ವ್ಯಕ್ತಿಯೊಬ್ಬನ ಜೊತೆ ಕಾಣಿಸಿಕೊಂಡಿದ್ದರು ಎಂಬ ಕಾರಣಕ್ಕೆ ಮುಸ್ಲಿಂ ಯುವತಿಯ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿದ ಘಟನೆ ಹಾವೇರಿಯ ಬ್ಯಾಡಗಿ ಪಟ್ಟಣದಲ್ಲಿ ಜರುಗಿದೆ. ಹಲ್ಲೆಗೊಳಗಾದ ಮುಸ್ಲಿಂ ಯುವತಿ ಬ್ಯಾಡಗಿ ತಾಲೂಕು ಅಗಸನಹಳ್ಳಿ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಹೊರಟಿದ್ದರು. ತಮ್ಮ ಜೊತೆ ಕೆಲಸ ಮಾಡ್ತಿದ್ದ ಜಗದೀಶ್ ಎಂಬ ವ್ಯಕ್ತಿ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಬ್ಯಾಡಗಿ ಪಟ್ಟಣದ ಪುರಸಭೆಯ ಬಳಿಯ ಶಿವನ ದೇವಸ್ಥಾನದ ಬಳಿ ಮುಸ್ಲಿಂ ಯುವಕರ ಗುಂಪು ಹಲ್ಲೆ ಮಾಡಿದೆ. ನೀನು ಯಾಕೆ ಇವನ ಜೊತೆ ಬೈಕ್ ನಲ್ಲಿ ಬಂದೆ? ಎಂದು ಪ್ರಶ್ನಿಸಿ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ‌. ಯುವತಿಯನ್ನ ಎಳೆದಾಡಿ ಕಪಾಳಕ್ಕೆ ಹೊಡೆದು ಸಾರ್ವಜನಿಕ ಸ್ಥಳದಲ್ಲಿ ಅವಮಾನ ಮಾಡಿದ್ದಾರೆ. ಜೀವ ಬೆದರಿಕೆಯನ್ನೂ ಹಾಕಿದ್ದಾರೆಂದು ಆಕೆ ಪ್ರಕರಣ ದಾಖಲಿಸಿದ್ದಾರೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ 9 ಮಂದಿ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ, 7 ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.…

Read More

ಬೆಂಗಳೂರು:- ಪೌರಕಾರ್ಮಿಕರನ್ನ ಬೇರೆ ಕೆಲಸಗಳಿಗೆ ನಿಯೋಜಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಪೌರಕಾರ್ಮಿಕರನ್ನ ಬೇರೆ ಕೆಲಸಗಳಿಗೆ ನಿಯೋಜಿಸಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯ ಇಲಾಖೆ ಈ ಸೂಚನೆ ನೀಡಿದೆ. ಪೌರಕಾರ್ಮಿಕರನ್ನ ಬೇರೆ ಕೆಲಸಗಳಿಗೆ ನಿಯೋಜನೆಗೆ ಸೂಚಿಸಿದವರು ಮತ್ತು ಅವರಿಂದ ಸೇವೆ ಪಡೆದವರ ಮೇಲೂ ಶಿಸ್ತು ಕ್ರಮ ಕೈಗೊಳ್ಳಲಾವುವುದು ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ಎಲ್ಲಾ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಅಧಿಸೂಚಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿದ ಕರ್ತವ್ಯಗಳ ಬದಲಾಗಿ ಇತರೆ ಅನ್ಯ ಕೆಲಸ ಕಾರ್ಯಗಳಿಗೆ ನಿಯೋಜಿಸುತ್ತಿರುವ ಕುರಿತು ನಿರ್ದೇಶನಾಲಯಕ್ಕೆ ದೂರುಗಳು ಬಂದಿವೆ. ಪೌರಕಾರ್ಮಿಕರನ್ನು ಅವರಿಗೆ ನಿಗದಿಪಡಿಸಿದ ಕರ್ತವ್ಯಗಳನ್ನು ಹೊರತುಪಡಿಸಿ ಇತರೆ ಕೆಲಸಗಳಿಗೆ ನಿಯೋಜಿಸುವುದು ನಿಯಮಬಾಹಿರವಾಗಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹಾಗಾಗಿ ಇನ್ಮುಂದೆ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿದ ಕರ್ತವ್ಯಗಳನ್ನು ಹೊರತುಪಡಿಸಿ, ಇತರೆ ಯಾವುದೇ ಅನ್ಯ ಕೆಲಸಗಳಿಗೆ ನಿಯೋಜಿಸದಂತೆ ಇಲಾಖೆ ಕಟ್ಟುನಿಟ್ಟಾಗಿ ಸೂಚಿಸಿದೆ.

Read More

ನಾವಿಡುವ ಪ್ರತಿ ಹೆಜ್ಜೆಯೂ ನಮ್ಮನ್ನು ಆರೋಗ್ಯಕರ ದೇಹ ಮತ್ತು ಮನಸ್ಸಿನ ಕಡೆಗೆ ಚಲಿಸಲು ಸಹಾಯ ಮಾಡುತ್ತದೆ. ತಂತ್ರಜ್ಞಾನವು ನಮ್ಮ ಜಗತ್ತನ್ನು ಆಕ್ರಮಿಸಿಕೊಂಡಿರುವುದರಿಂದ ಮತ್ತು ಎಲ್ಲವೂ ಮನೆ ಬಾಗಿಲಲ್ಲಿ ಲಭ್ಯವಿರುವುದರಿಂದ ನಾವು ನಡೆಯುವುದೇ ಕಡಿಮೆಯಾಗಿದೆ. ಇದರಿಂದ ಹೃದಯರಕ್ತನಾಳದ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಕೀಲು ನೋವುಗಳಂತಹ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ನೀವು ದಿನವೂ ಎಷ್ಟು ಸಮಯ ವಾಕ್ ಮಾಡಬೇಕೆಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ದಿನವೂ ನಿಮ್ಮ ನಡಿಗೆಯ ಸಮಯವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸಿ. ಇದರಿಂದ ನಿಮ್ಮ ದೇಹ ವಾಕಿಂಗ್​ಗೆ ಹೊಂದಿಕೊಳ್ಳಲು ಸಹಾಯಕವಾಗುತ್ತದೆ. ನಿಮ್ಮ ದೈನಂದಿನ ದಿನಚರಿಯಲ್ಲಿ ಆಗಾಗ ಸ್ವಲ್ಪ ಸ್ವಲ್ಪ ನಡೆಯುವುದನ್ನು ರೂಢಿಸಿಕೊಳ್ಳಿ. ದೀರ್ಘ ಕಾಲದವರೆಗೆ ಕುಳಿತಿರುವುದರ ಬದಲು ಆಚೀಚೆ ಓಡಾಡುತ್ತಿರಿ. – ಪೆಡೋಮೀಟರ್ ಅಥವಾ ಫಿಟ್‌ನೆಸ್ ಟ್ರ್ಯಾಕರ್ ಮೂಲಕ ನೀವು ದಿನವೂ ಎಷ್ಟು ನಡೆದಿದ್ದೀರೆಂದು ಟ್ರ್ಯಾಕ್ ಮಾಡಿ. ಇದರಿಂದ ಮರುದಿನ ಹೆಚ್ಚು ನಡೆಯಲು ನಿಮಗೆ ಪ್ರೇರಣೆ ಸಿಗುತ್ತದೆ. – ಸಾಧ್ಯವಾದಾಗಲೆಲ್ಲಾ ಲಿಫ್ಟ್‌ಗಳ ಬದಲಿಗೆ ಮೆಟ್ಟಿಲುಗಳ ಮೂಲಕ ಹತ್ತಿ, ಇಳಿಯಲು ಅಭ್ಯಾಸ ಮಾಡಿ.…

Read More

ಬೆಂಗಳೂರು:  ಅಫಘಾನಿಸ್ತಾನ ವಿರುದ್ಧ ನಡೆದ ಡಬ್ಬಲ್ ಸೂಪರ್ ಓವರ್ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಪಂದ್ಯ ಗೆಲ್ಲುವಲ್ಲಿ ಯುವ ಫಿನಿಷರ್ ರಿಂಕು ಸಿಂಗ್ ಮಹತ್ತರ ಪಾತ್ರ ವಹಿಸಿದ್ದರು. ತಮ್ಮ ಹಾಗೂ ನಾಯಕ ರೋಹಿತ್ ಶರ್ಮಾ ಜೊತೆಯಾಟದಲ್ಲಿ ಮೂಡಿಬಂದ ಅಜೇಯ190 ರನ್ ಗಳ ವಿಶ್ವದಾಖಲೆಯ ಬಗ್ಗೆ ಯುವ ಎಡಗೈ ಆಟಗಾರ ಸಂತಸ ವ್ಯಕ್ತಪಡಿಸಿದ್ದಾರೆ. ಜನವರಿ 17( ಬುಧವಾರ) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫಘಾನಿಸ್ತಾನ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ, 22 ರನ್ ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟದ ಸುಳಿಗೆ ಸಿಲುಕಿತ್ತು. ಆದರೆ 5ನೇ ವಿಕೆಟ್ ಗೆ ಜೊತೆಗೂಡಿದ ರೋಹಿತ್ ಶರ್ಮಾ ಹಾಗೂ ರಿಂಕು ಸಿಂಗ್ ಜೋಡಿ ಮುರಿಯದ 190 ರನ್ ಗಳ ಜೊತೆಯಾಟದಿಂದ ತಂಡದ ಮೊತ್ತವನ್ನು 212 ರ ಗಡಿ ಮುಟ್ಟಿಸಿದ್ದರು. ನಾಯಕನ ಜೊತೆಗಿನ ಮಾಸ್ಟರ್ ಕ್ಲಾಸ್ ಆಟದ ಬಗ್ಗೆ ಐಪಿಎಲ್ ತಾರೆ ಸಂತಸ ವ್ಯಕ್ತಪಡಿಸಿದ್ದಾರೆ. “ರೋಹಿತ್ ಭಯ್ಯ ಜೊತೆಗಿನ…

Read More

ದುನಿಯಾ ವಿಜಯ್ ಅವರು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ತಂದೆ-ತಾಯಿ ಸಮಾಧಿ ಬಳಿ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ಅವರಿಗೆ ಸಾಥ್ ನೀಡಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ. ತಂದೆ-ತಾಯಿ ಸಮಾಧಿಗೆ ಹೂವಿನ ಅಲಂಕಾರ ಮಾಡಲಾಗಿದೆ. ಬೆಂಗಳೂರು ಸಮೀಪ ಇರುವ ಆನೇಕಲ್ ತಾಲೂಕಿನ ಕುಂಬಾರಹಳ್ಳಿಯಲ್ಲಿ ವಿಜಯ್ ತಂದೆ, ತಾಯಿ ಸಮಾಧಿ ಇದೆ. ಬರ್ತ್ಡೇ ಶುಭಾಶಯ ಕೋರಲು ಇಂದು ಅಭಿಮಾನಿಗಳು ತೆರಳಲಿದ್ದಾರೆ. ಹೀಗಾಗಿ, 5,000 ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕಳೆದ ಒಂದು ವಾರದಿಂದ ಅವರು ಊರಿನಲ್ಲೇ ಉಳಿದುಕೊಂಡಿದ್ದರು. ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳು ಬರುತ್ತಿವೆ. ದುನಿಯಾ ವಿಜಯ್ ಅವರು ಕಳೆದ ವರ್ಷವೂ ಬರ್ತಡೇನ ತಂದೆ, ತಾಯಿ ಸಮಾಧಿ ಬಳಿಯೇ ಮಾಡಿಕೊಂಡಿದ್ದರು. ಈ ಬಾರಿ ಸಮಾಧಿಯನ್ನು ದೇವಸ್ಥಾನದಂತೆ ನಿರ್ಮಿಸಿದ್ದಾರೆ. ಈ ಮೂಲಕ ತಂದೆ, ತಾಯಿ ಮೇಲಿರುವ ಪ್ರೀತಿಯನ್ನು ಅವರು ಹೊರ ಹಾಕಿದ್ದಾರೆ. ಇನ್ನೂ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ನಟಿಸಿ ನಿರ್ದೇಶಿಸುತ್ತಿರುವ ‘ಭೀಮ’ ಸಿನಿಮಾದ ಟೀಸರ್ ಆನಂದ್ ಆಡಿಯೋ ಮೂಲಕ ರಿಲೀಸ್ ಆಗಿದೆ

Read More

ಬೆಳಗಾವಿ : ಭೀಕರ ಬರಕ್ಕೆ ಅನ್ನದಾತರು ತತ್ತರಿಸಿ ಹೋಗಿದ್ದಾರೆ. ಅದ್ರಲ್ಲೂ ದ್ರಾಕ್ಷಿ ಬೆಳೆಗಾರರ ಗೊಳಂತೂ ಹೇಳತೀರದು. ಸಾಲ-ಸೂಲ ಮಾಡಿ ಲಕ್ಷ  ಗಟ್ಟಲೆ ಭೂಮಿಯಲ್ಲಿ ಹಣ ಖರ್ಚು ಮಾಡಿದ ರೈತರು ಇಂದು ಕಂಗಾಲಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲವು ಗ್ರಾಮಗಳಲ್ಲಿ ದ್ರಾಕ್ಷಿ ಬೆಳೆಗಾರರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಕಾಗವಾಡ ವ್ಯಾಪ್ತಿಯ ಸಂಬರಗಿ ಗ್ರಾಮದ ವಿಠ್ಠಲ್ ಭಾವು ಶಿಂಧೆ ಎಂಬ ರೈತ ಕಳೆದ ಎಂಟು ವರ್ಷಗಳಿಂದ ಲಕ್ಷಗಟ್ಟಲೆ ಖರ್ಚು ಮಾಡಿ ದ್ರಾಕ್ಷಿ ಬೆಳೆದರೂ ಎರಡು ಬಾರಿ ಮಾತ್ರ ಫಸಲು ಕೈಗೆಟಕಿದೆ. ಅದ್ರಲ್ಲೂ ಈ ಬಾರಿ ಬರಗಾಲದ ಛಾಯೆ ಆವರಿಸಿ ನೀರು ಇಲ್ಲದೆ ರೈತರು ಕಂಗಾಲಾಗಿದ್ದು, ದ್ರಾಕ್ಷಿ ಬೆಳೆದ ರೈತರು ಬೆಳೆ ನಾಷವಾದ ಪರಿಣಾಮ ನಷ್ಟದ ಕೊಂಡಿಗೆ ಸಿಲುಕಿ ಮತ್ತೆ ಬರ ಸಿಡಿಲು ಅಪ್ಪಳಂಸಿದಂತಾಗಿದೆ. ವಿಜಯಪುರ ಬಿಟ್ಟರೆ ರಾಜ್ಯದಲ್ಲಿ ಅತೀ ಹೆಚ್ಚು ದ್ರಾಕ್ಷಿ ಬೆಳೆಯುವ ನಾಡು ಎಂದರೆ ಅದು ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರ. ಆದರೆ. ಪ್ರಕೃತಿ ವಿಮೋಪದಿಂದ ರೋಗಭಾದೆಗೆ ತುತ್ತಾಗಿ ನೂರಾರು ಎಕರೆ…

Read More