Author: AIN Author

ಬೆಂಗಳೂರು: ಹಸುಗೂಸುಗಳ ಮಾರಾಟ ಜಾಲದ ಬಂಧನ ಕೇಸ್ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ..ಇದೀಗ ಮತ್ತಿಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಸದ್ಯ ಬಂಧಿತ 10 ಆರೋಪಿಗಳನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದು ಮಹತ್ವದ ಮಾಹಿತಿ ಹೊರುತ್ತವೆ. ಈ ಕುರಿತ ರಿಪೋರ್ಟ್ ಇಲ್ಲಿದೆ ಇದೆ ನೋಡಿ . ಎಳೆ ಮಕ್ಕಳ ಮಾರಾಟ ದಂಧೆ ಬೆಳಕಿಗೆ ಬಂದಿದೆ ತಡ ಎಲ್ಲೆಡೆ ಆತಂಕ ಶುರುವಾಗಿದೆ. ಬಂಧಿತರ ವಿಚಾರಣೆ ವೇಳೆ ದಿನೆ ದಿನೆ ಹೊಸ ವಿಚಾರಗಳು ಬೆಳಕಿಗೆ ಬರ್ತಿವೆ. ಹಲವು ವರ್ಷಗಳಿಂದ ಪುಟ್ಟ ಪುಟ್ಟ ಕಂದಮ್ಮಗಳನ್ನ ಕರ್ನಾಟಕ ಸೇರಿ ಬೇರೆ ಬೇರೆ ರಾಜ್ಯಗಳಲ್ಲಿ ಕಳ್ಳಸಾಕಣಿಕೆ ಮಾಡ್ತಿದ್ದ ಈ ಕಿರಾತಕರು ಕೋಟಿ ಕೋಟಿ ಬಾಚಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಆರೋಪಿಗಳನ್ನ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ವೇಳೆ 6 ವರ್ಷಗಳಲ್ಲಿ ಬರೋಬ್ಬರಿ 250ಕ್ಕೂ ಹೆಚ್ಚು ಮಕ್ಕಳ ಮಾರಾಟ ಮಾಡಿರೊದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಇನ್ನು ಕರ್ನಾಟಕದಲ್ಲಿ ಕೇವಲ 50-60 ಮಕ್ಕಳನ್ನು ಮಾರಾಟ ಮಾಡಿದ್ದು, ಉಳಿದ ಮಕ್ಕಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡಿದ್ದಾರಂತೆ. ಸದ್ಯ ಕರ್ನಾಟಕದಲ್ಲಿ…

Read More

ತುಮಕೂರು: ಗದ್ದುಗೆಯಲ್ಲಿ ಹುತ್ತ ಕಾಣಿಸಿಕೊಂಡಿದೆ. ಹೌದು ಯಡಿಯೂರು ಸಿದ್ದಲಿಂಗೇಶ್ವರರ 12 ವರ್ಷ ತಪಗೈದ ತಪೋ ಕ್ಷೇತ್ರ ಕಗ್ಗೆರೆಯಲ್ಲಿ 15 ಶತಮಾನದ  ಹುತ್ತ ಪುನಃ ಬೆಳೆಯಲು ಆರಂಭಿಸಿದ್ದು, ಸಾರ್ವಜನಿಕರು ಹಾಗೂ ಭಕ್ತರಲ್ಲಿ ಆಶ್ಚರ್ಯ ಮೂಡಿಸಿದೆ. ರಾಜ್ಯ ಸರ್ಕಾರದಿಂದ ಸುಮಾರು ನಾಲ್ಕು ಕೋಟಿ ಅಂದಾಜು ವೆಚ್ಚದಲ್ಲಿ ಕಗ್ಗೆರೆ ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ದೇವಾಲಯವನ್ನು ಪುನರ್ ನಿರ್ಮಾಣ ಮಾಡುವ ಉದ್ದೇಶದಿಂದ ಹಳೆಯ ದೇವಾಲ ತೆರುವುಗೊಳಿಸಿದ ವೇಳೆ ದೇವಾಲಯದ ಗದ್ದುಗೆಯನ್ನು ಕೂಡ ತೆರವುಗೊಳಿಸಲಾಯಿತು. ಆ ಗದ್ದುಗೆಯ ಸ್ಥಳದಲ್ಲಿ ಕೆಲವು ದಿನಗಳಿಂದ ಹುತ್ತದ ರೀತಿಯ ಕೊಳವೆ ಆಕಾರದ ಕೋವೆಗಳು ಇದೆ ಎಂಬುದನ್ನು ಹಲವಾರು ಭಕ್ತರು ಗುರುತಿಸಿ ಅಧಿಕಾರಿಗಳಿಗೆ ತೋರಿಸಿದ್ದಾರೆ. ದೀಪೋತ್ಸವ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಹೇರಳವಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಭಕ್ತರು ಆ ಬೆಳೆಯುವ ಹುತ್ತಗಳನ್ನು ಮುಟ್ಟುವ ಪ್ರಯತ್ನ ಮಾಡಿದ್ದರು. ಕೆಲವು ಭಕ್ತರ ಒತ್ತಾಯದ ಮೇರೆಗೆ ಸ್ಥಳೀಯ ಆಡಳಿತ ಮಂಡಳಿಯ ಅಧಿಕಾರಿಗಳು ಒಡೆದು ಹಾಕಲಾಗಿದ್ದ ಗದ್ದಿಗೆಯ ಸುತ್ತಲೂ ಬ್ಯಾರಿಕೆಟ್ ಹಾಕಿ ತಾತ್ಕಾಲಿಕ ರಕ್ಷಣೆ ಮಾಡಿದ್ದಾರೆ.

Read More

ತುಮಕೂರು: ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆಗೆ  ಶರಣಾಗಿರುವಂತಹ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರಿನಲ್ಲಿ ನಡೆದಿದೆ. 11 ತಿಂಗಳ ಮಗು, 4 ವರ್ಷದ ಪುತ್ರಿ ಜೊತೆ ವಿಜಯಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ವಿಜಯಲಕ್ಷ್ಮೀ ಪತಿ ಮೃತಪಟ್ಟಿದ್ದರು. ಮಕ್ಕಳ ಜೊತೆ ತಾಯಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಧಾರವಾಡ: ಧಾರವಾಡ ಜಿಲ್ಲಾಸ್ಪತ್ರೆಯಲ್ಲಿನ ಕೆಲ ಸಮಸ್ಯೆಗಳ ಕುರಿತು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಇಂದು ಜಿಲ್ಲಾ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆ ಆವರಣದಲ್ಲಿನ ಹದಗೆಟ್ಟ ರಸ್ತೆ, ಔಷಧಿ ವಿತರಣೆಯಲ್ಲಿ ಆಗುತ್ತಿರುವ ಅವ್ಯವಸ್ಥೆ, ಸಿಬ್ಬಂದಿ ಕೊರತೆ ಸೇರಿದಂತೆ ಇತ್ಯಾದಿ ಸಮಸ್ಯೆಗಳನ್ನು ಕಂಡು ಸ್ವತಃ ನ್ಯಾಯಮೂರ್ತಿಗಳೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆಸ್ಪತ್ರೆಯ ಔಷಧ ವಿಭಾಗಕ್ಕೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು, ಆ ವಿಭಾಗದಲ್ಲಿ ಯಾವ ಔಷಧಿ ಎಷ್ಟು ಹೋಯಿತು ಎಷ್ಟು ಬಂತು ಎಂಬ ಮಾಹಿತಿಯೇ ಇಲ್ಲದ್ದನ್ನು ಕಂಡು ಅಸಮಾಧಾನಗೊಂಡರು. ಇನ್ನು ಆಸ್ಪತ್ರೆಯ ಆವರಣದಲ್ಲಿ ಹದಗೆಟ್ಟ ರಸ್ತೆ ಕಂಡು ಕೂಡಲೇ ರಸ್ತೆ ಸರಿ ಮಾಡಿಸುವಂತೆ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರಿಗೆ ಖಡಕ್ ಸೂಚನೆ ನೀಡಿ, ಬಳಿಕ ನೇರವಾಗಿ ಚಿಕ್ಕ ಮಕ್ಕಳ ವಿಭಾಗ, ಐಸಿಯು ವಿಭಾಗ, ಓಪಿಡಿ, ಹೆರಿಗೆ ವಿಭಾಗ, ತುರ್ತು ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜಿಲ್ಲಾ ಆಸ್ಪತ್ರೆಯಲ್ಲಿಯೇ ಸಣ್ಣ…

Read More

ಬೆಂಗಳೂರು : ಚೀನಾದಲ್ಲಿ ಕೊರೊನಾ ನಂತರ ಇದೀಗ ಮೈಕೋಪ್ಲಾಸ್ಮಾ ನ್ಯುಮೋನಿಯಾ ಹಾಗೂ ಇನ್ನುಯೆಂಝಾ ವೈರಸ್ ತೀವ್ರವಾಗಿ ಹರಡಿದ್ದು, ಈ ಬೆನ್ನಲ್ಲೇ ಸಿಲಿಕಾನ್​ ಸಿಟಿಯಲ್ಲೂ ಆತಂಕ ಹೆಚ್ಚಾಗಿದ್ದು, ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ರಿಲೀಸ್​ ಮಾಡಿದೆ. ಹೆಚ್ಚಾಗಿ ಮಕ್ಕಳನ್ನ ಟಾರ್ಗೆಟ್​ ಮಾಡೋ ಈ ಮಹಾಮಾರಿ ವೈರಸ್​​ನಿಂದ ಇದೀಗ ರಾಜ್ಯದಲ್ಲೂ ಭೀತಿ ಹೆಚ್ಚಾಗಿದೆ. ಅದ್ರಲ್ಲೂ ಸಿಲಿಕಾನ್​ ಸಿಟಿಯಲ್ಲಿ ಇನ್‌ಫ್ಲೂಯೆಂಜಾ ಮಾದರಿ ಅನಾರೋಗ್ಯ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗ್ತಿವೆ. ಹೀಗಾಗಿ ಈ ಬಗ್ಗೆ ಸಭೆ ನಡೆಸಿ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ. ಮಾರ್ಗಸೂಚಿಯಲ್ಲೇನಿದೆ? ಕೆಮ್ಮುವಾಗ, ಸೀನುವಾಗ, ಬಾಯಿ, ಮೂಗು ಕರವಸ್ತ್ರದಿಂದ ಮುಚ್ಚಿ ಸಾಬೂನು & ನೀರಿನಿಂದ ಕೈಗಳನ್ನ ಆಗಾಗ ತೊಳೆದುಕೊಳ್ಳುವುದು ಕಣ್ಣು, ಮೂಗು, ಬಾಯಿಯನ್ನ ಅನಗತ್ಯವಾಗಿ ಸ್ಪರ್ಶಿಸುವುದು ಬೇಡ ಜನ ಸಂದಣಿ ಪ್ರದೇಶಗಳಿಗೆ ಭೇಟಿ ತಪ್ಪಿಸಿ, ಫೇಸ್ ಮಾಸ್ಕ್ ಬಳಸಿ ಫ್ಲೂ ಪೀಡಿತ ವ್ಯಕ್ತಿಗಳಿಂದ ಕನಿಷ್ಠ ಅಂತರ ಕಡ್ಡಾಯವಾಗಿ ಕಾಪಾಡಿ ಸಾಕಷ್ಟು ನೀರು ಕುಡಿಯುವುದು, ಪೌಷ್ಠಿಕ ಆಹಾರ ಸೇವಿಸುವುದು ಸಾರ್ವಜನಿಕವಾಗಿ ಎಲ್ಲೆಂದರಲ್ಲಿ ಉಗುಳುವುದು ಮಾಡಬಾರದು ರೋಗ…

Read More

ಬೆಂಗಳೂರು: ಈಗ ಚುನಾವಣೆ ಮಾಡಿದ್ರೆ ಬಿಜೆಪಿಗೆ (BJP) 40 ಸೀಟು ಸಹ ಬರಲ್ಲ. ಏಕೆಂದರೆ ಬಿಜೆಪಿ ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆ. ವಿಜಯೇಂದ್ರ ಅಲ್ಲಾ ಯಾರೂ ಅಧ್ಯಕ್ಷರಾದ್ರೂ ಅಸರಿ ಮಾಡೋಕಾಲ್ಲ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ (Jagadish Shettar) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. https://ainlivenews.com/we-will-finance-purchase-of-additional-ambulances-cm-promises/ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2018ರ ಚುನಾವಣೆಯಲ್ಲೇ ಮೋದಿ (Modi) ಮತ್ತು ಯಡಿಯೂರಪ್ಪ (Yediyurappa) ನೇತೃತ್ವದಲ್ಲಿ ಬಿಜೆಪಿ ವಿಧಾನಸಭಾ ಚುನಾವಣಾ ಎದುರಿಸಿತ್ತಕ. ಅಷ್ಟೆಲ್ಲಾ ಗುದ್ದಾಡಿದ್ರೂ ಕೊನೆಗೆ ಬಂದು ನಿಂತಿದ್ದು 104ಕ್ಕೆ. ಇವತ್ತು ಬಿಜೆಪಿ ಹದಗೆಟ್ಟು ಹೋಗಿದೆ, ಈಗ ಚುನಾವಣಾ ನಡೆದ್ರೆ 66 ಅಲ್ಲಾ 40 ಸೀಟ್ ಸಹ ಬಿಜೆಗೆ ಬರಲ್ಲ. ಬಿಜೆಪಿ ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆ, ವಿಜಯೇಂದ್ರ ಅಲ್ಲಾ ಯಾರೂ ಅಧ್ಯಕ್ಷರಾದರೂ ಅದನ್ನು ಸರಿ ಮಾಡಲು ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.  ಪಂಚ ರಾಜ್ಯಗಳ ಚುನಾವಣೆಯಲ್ಲಿ (Five States Election) ಒಳ್ಳೆಯ ಫಲಿತಾಂಶ ಬರುತ್ತೆ‌. ಮಧ್ಯಪ್ರದೇಶ, ಛತ್ತೀಸ್ ಘಡ ಎರಡರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ.…

Read More

ಬೆಂಗಳೂರು: ಹೆಚ್ಚುವರಿ ಅಂಬುಲೆನ್ಸ್ ಖರೀದಿಗೆ ಹಣಕಾಸು ಒದಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ಘೋಷಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಧಾನಸೌಧದ (Vidhanasoudha) ಗ್ರ್ಯಾಂಡ್ ಸ್ಟೆಪ್ಸ್ ಬಳಿ ನೂತನ 262 ಅಂಬುಲೆನ್ಸ್‍ಗಳ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಯಾರೂ ಚಿಕಿತ್ಸೆ ಸಿಗದೇ ಸಾಯಬಾರದು. ಅಪಘಾತ ವೇಳೆ, ಹೆರಿಗೆ ವೇಳೆ ಚಿಕಿತ್ಸೆ, ಹೃದಯಾಘಾತ ಹೀಗೆ ಆದಾಗ ಚಿಕಿತ್ಸೆ ಸಿಗದೇ ಸಾಯಬಾರದು. ಅದಕ್ಕಾಗಿಯೇ 2008 ರಲ್ಲಿ ತುರ್ತು ಆರೋಗ್ಯಸೇವೆ ತರಲಾಯ್ತು. 236 ತಾಲೂಕುಗಳಿದ್ದು, ತಲಾ ನಾಲ್ಕರಂತೆ ಕನಿಷ್ಟ 840 ಅಂಬುಲೆನ್ಸ್ ಇರಬೇಕು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕಿದರೆ ಬಹಳ ಅನುಕೂಲ ಆಗುತ್ತೆ ಎಂದು ಹೇಳಿದರು. ಹೆಚ್ಚುವರಿ ಅಂಬುಲೆನ್ಸ್ (Ambulance) ಖರೀದಿಗೆ ಹಣಕಾಸು ಒದಗಿಸ್ತೇವೆ. ಎಲ್ಲ ಜಿಲ್ಲೆಗಳಲ್ಲಿ ಎಂಆರ್‍ಐ ಸ್ಕ್ಯಾನಿಂಗ್ ಸೌಲಭ್ಯ ಇರಬೇಕಿತ್ತು. ವಿವಿಧ ಸ್ಕ್ಯಾನ್‍ಗಳಿಗೆ ಬಡವರು ವೆಚ್ಚ ಭರಿಸಲು ಆಗಲ್ಲ. ಇಲ್ಲಿಯವರೆಗೆ 25 ಕೋಟಿ ಜನರಿಗೆ ಸಿಎಂ ನಿಧಿಯಡಿ ಪರಿಹಾರ ಕೊಡುವ ಕೆಲಸ ಆಗಿದೆ. ನಾನು ಸಿಎಂ ನಿಧಿಯಡಿ 1/4 ವೆಚ್ಚ ಭರಿಸ್ತೇನೆ.…

Read More

ಬೆಂಗಳೂರು: ಅವರೆಲ್ಲಾ ಪ್ರತಿನಿತ್ಯ ನೂರಾರು ಮಂದಿಗೆ ಪ್ರಾಣ ಉಳಿಸುತ್ತಿದ್ದ ಸಿಬ್ಬಂದಿ. ಆದ್ರೆ ಇವರಿಗೆಲ್ಲಾ ಸರ್ಕಾರ ಕಳೆದ ಎರಡು ವರ್ಷಗಳಿಂದ ಅರ್ಧ ಸಂಬಳ ನೀಡ್ತಿದೆ.ಇದು ಕನಿಷ್ಠ ಜೀವನಕ್ಕೂ ಸಾಕಾಗ್ತಿಲ್ಲ. ತಮ್ಮ ಕಷ್ಟಕ್ಕೆ ಸ್ವಂದಿಸುವಂತೆ ಆರೋಗ್ಯ ಸಚಿವರನ್ನ ಭೇಟಿ ಮಾಡಿದ್ರೂ ಕೇರ್ ಮಾಡ್ತಿಲ್ಲ. ಹೀಗಾಗಿ ಸರ್ಕಾರದ ಧೋರಣೆ ವಿರುದ್ದ ಸಿಡಿದೆದ್ದಿರೋ ಸಿಬ್ಬಂದಿ ಇವತ್ತು ರಾಜ್ಯ ರಾಜ್ಯಧಾನಿ ಬೆಂಗಳೂರಿಗೆ ಲಗ್ಗೆ ಇಟ್ಟಿದ್ದಾರೆ. ಸಂಬಳ ನೀಡೋವರಿಗೂ ನಾವು ಫ್ರೀಡಂ ಪಾರ್ಕ್ ಬಿಟ್ಟು ತೆರಳಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಈ ದುಬಾರಿ ದುನಿಯಾದಲ್ಲಿ ಸಂಬಳ ಬಂದ್ರೂ ಜೀವನ ಮಾಡೋಕೆ ಕಷ್ಟ. ಇನ್ನೂ ದುಡಿಮೆ ಮಾಡಿದ್ರೂ ಸಂಬಳ ಬಂದಿಲ್ಲ ಅಂದ್ರೆ ಬದುಕುವದಕ್ಕೇ ಆಗಲ್ಲ ಬಿಡಿ. ಆದ್ರೆ ಸರ್ಕಾರ ಡಯಲಿಸಿಸ್ ಸಿಬ್ಬಂದಿ ಕಳೆದ ಎರಡು ವರ್ಷದಿಂದ ಅರ್ಧಷ್ಟು ಸಂಬಳ ನೀಡ್ತಿದೆ. ಜೊತೆಗೆ ಕಳೆದ ಎರಡೂವರೆ ತಿಂಗಳಿಂದ ಸಂಬಳನ್ನೂ ವಿತರಣೆ ಮಾಡಿಲ್ವಾಂತೆ ಇದ್ರರಿಂದ ಸರ್ಕಾರದ ವಿರುದ್ದ ಸಿಟ್ಟಾಗಿರೋ ನೂರಾರು ಡಯಾಲಿಸಿಸ್ ಸಿಬ್ಬಂದಿ ಮುಷ್ಕರದ ಅಸ್ತ್ರ ಪ್ರಯೋಗಿಸಿದ್ದಾರೆ.ಬೆಂಗಳೂರಿನ ಫ್ರೀಡಂ ಪಾರ್ಕ್ಗೆ ರಾಜ್ಯದ ವಿವಿಧ ಭಾಗಗಳಿಂದ…

Read More

ಬೆಂಗಳೂರು: ಚಳಿಗಾಲಸದ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಸೊಕ್ಕು ಮುರಿಯುವ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. https://ainlivenews.com/good-news-for-grilahakshmi-dont-worry-if-you-dont-have-enough-money/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜ್ ವರದಿ ವಿಚಾರದಲ್ಲಿ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ ಎಂದು ಎಲ್ಲರಿಗೂ ಕಾಣುತ್ತಿದೆ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿ ಹಾಕುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಕಬ್ಬಿನ ಬೆಳೆಗಾರರ ಕೂಗಿಗೆ ಈ ಸರ್ಕಾರ ಕಿವಿ ಕೊಡ್ತಿಲ್ಲ, ಅದೇ ರೀತಿ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಮರೆತಿದೆ. ಶಾಸಕರಿಗೆ ಬಿಡುಗಡೆ ಆಗಬೇಕಾಗಿದ್ದ ಅನುದಾನ ಕೂಡ ಬಿಡುಗಡೆಯಾಗಿಲ್ಲ, ಇಲ್ಲಿಯತನಕ ಒಂದು ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಮೇಲ್ನೋಟಕ್ಕೆ ಇದು ರೈತ ವಿರೋಧಿ, ಬಡವರ ವಿರೋಧಿ ಸರ್ಕಾರ ಎಂದು ಗೊತ್ತಾಗುತ್ತಿದೆ ಎಂದರು.

Read More

ಯಾದಗಿರಿ: ಕರ್ನಾಟಕ ಜನದರ್ಶನ ವೇದಿಕೆಯ ದ್ವಿತೀಯ ವಿಭಾಗಿಯ ಅಧ್ಯಕ್ಷರಾಗಿದ್ದ ಬೈರಣ್ಣ ಡಿ ಅಂಬಿಗೇರ್ ಅವರನ್ನು ರಾಜ್ಯಾಧ್ಯಕ್ಷರಾದ ಶಿವಪ್ಪ ಅವರು ಉಚ್ಚಾಟನೆಗೊಳಿಸಿ ಆದೇಶಿಸಿದ್ದಾರೆ. ಯುಗಾದಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಬೈರಣ್ಣ ಅವರು, ಸಂಘಟನೆಯ ಉದ್ದೇಶಗಳಿಗೆ ವಿರುದ್ಧವಾಗಿ ಮತ್ತು ಸಂಘದ ಸದಸ್ಯರನ್ನು ಅಗೌರವದಿಂದ ನಡೆಸಿಕೊಳ್ಳುತ್ತಿರುವುದರಿಂದ ಮತ್ತು ಇವರ ನಡವಲ್ಲಿಕೆಗಳ ವಿರುದ್ಧ ಸಂಘಟನೆಯ ಪದಾಧಿಕಾರಿಗಳು ಅವರನ್ನು ಸಂಘಟನೆಯಿಂದ ಉಚ್ಚಾಟನೆಗೊಳಿಸಲಾಗಿದೆ ಎಂದು ರಾಜ್ಯಧ್ಯಕ್ಷರು ತಿಳಿಸಿದ್ದಾರೆ.

Read More