ಬೆಂಗಳೂರು: ರಾಮಮಂದಿರ ಉದ್ಘಾಟನಾ ದಿನದಂದು ರಜೆ ನೀಡಬೇಕು ಎಂದು ವಿರೋಧ ಪಕ್ಷದ ಒತ್ತಾಯ ವಿಚಾರ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ರಾಮಮಂದಿರ ಉದ್ಘಾಟನಾ ದಿನದಂದು ರಜೆ ನೀಡಬೇಕು ಎಂದು ಗೊತ್ತಿಲ್ಲ ನನಗೆ, ಆ ವಿಚಾರ ಗೊತ್ತಿಲ್ಲ ಆ ಪತ್ರ ನನಗೆ ಬಂದಿಲ್ಲ ನೋಡ್ತೀನಿ ಎಂದಷ್ಟೇ ಹೇಳಿದರು. https://ainlivenews.com/ta-sharavana-honored-for-his-achievements-in-the-field-of-commerce-in-bahrain/ ಸಿಎಂ,ಸಚಿವರು ಅಯೋಧ್ಯೆಗೆ ತೆರಳುವ ವಿಚಾರ ಬಗ್ಗೆಯೂ ಮಾತನಾಡಿ ನಾನು ಇನ್ನೊಂದು ದಿನ ಹೋಗ್ತೀನಿ ಅಂತ ಹೇಳಿದ್ದೇನೆ ತಾನೇ ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳ್ತೀರಾ ಎಂದ ಸಿಎಂ ಗರಂ ಆದರು. ರಾಜಕೀಯ ಮಾಡ್ತಿದ್ದಾರೆ ಅದಕ್ಕೆ ನಾನು ಹೋಗ್ತಿಲ್ಲ ಎಂದ ಸಿಎಂ ಸಿದ್ದರಾಮಯ್ಯ ನೇರವಾಗಿ ಹೇಳಿದರು.
Author: AIN Author
ಬೆಂಗಳೂರು: ಬಹ್ರೇನ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಯಲ್ಲಿ ಆಯೋಜಿಸಿದ ಸಂವಾದದಲ್ಲಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ಭಾಗಿಯಾಗಿದರು. ವಾಣಿಜ್ಯ ಕ್ಷೇತ್ರದಲ್ಲಿ ಟಿ.ಎ.ಶರವಣ ಅವರ ಸಾಧನೆಗಳನ್ನು ಗುರುತಿಸಿ, ಬಹ್ರೇನ್‌ನಲ್ಲಿ, ಬಹರೈನ್ ಇಂಡಿಯಾ ಇಂಟರ್‌ನ್ಯಾಶನಲ್ ಅವಾರ್ಡ್-2024 ನೀಡಿ ಗೌರವಿಸಿದರು ಇದೇ ಸಂದರ್ಭದಲ್ಲಿ ದ್ವೀಪ ಹಾಗೂ ಸೌದಿ ಅರೇಬಿಯದಲ್ಲಿ ಸಕ್ರಿಯವಾಗಿರುವ ಕರ್ನಾಟಕ ಮೂಲದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ನನ್ನನ್ನು ಇಲ್ಲಿಗೆ ಕರೆಸಿ ಗೌರವ ನೀಡಿದಕ್ಕೆ ತುಂಬು ಹೃದಯದಿಂದ ಧನ್ಯವಾದ ತಿಳಿಸುತ್ತೇನೆ ಕರ್ನಾಟಕದಿಂದ ಇಲ್ಲಿ ಬಂದಿದ್ದೆ ತುಂಬಾ ಸಂತೋಷವಾಗಿದೆ. ನಾವು ಇಲ್ಲಿ ಕೂಡ ಬ್ಯುಸಿನೆಸ್ ಮಾಡ್ತಿರೋದಕ್ಕೆ ಖುಷಿಯಾಗುತ್ತಿದೆ ಎಂದು ಟಿ.ಎ.ಶರವಣ ಅವರು ತಿಳಿಸಿದರು.
ದೊಡ್ಡಬಳ್ಳಾಪುರ: ತಾಲೂಕು ಕಚೇರಿ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ ಶಿವಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ, ಕಡತಗಳ ಪರಿಶೀಲನೆ ಆರಂಭಿಸಲಾಗಿದೆ. ಯೋಜನೆಗಳ ಸವಲತ್ತು ವಿತರಣೆಗೆ ಅಧಿಕ ಹಣ ವಸೂಲಿ, ಗೋಮಾಳ ಜಮೀನು ಒತ್ತುವರಿಗೆ ಸಂಬಂಧಿಸಿ ಕೇಳಿಬಂದ ಆರೋಪಗಳ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ. ಲೋಕಾಯುಕ್ತ ಎಸ್ಪಿ ವಲೀ ಬಾಷ, ಡಿವೈಎಸ್ಪಿಗಳಾದ ಉಮಾಶಂಕರ್ , ರಾಮಕೃಷ್ಣ ,ಇನ್ಸ್ ಪೆಕ್ಟರ್ ಗಳಾದ ಸಲೀ ಅಹಮದ್ ,ಶಿವರುದ್ರಪ್ ಮೇಟಿ ಸೇರಿದಂತೆ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಬಳಿ ಅಹವಾಲು ಹೇಳಿಕೊಂಡರು.
ಅಯೋಧ್ಯೆ (ರಾಮಮಂದಿರ): ರಾಮಮಂದಿರದಲ್ಲಿ (Ram Mandir) ಪ್ರಾಣ ಪ್ರತಿಷ್ಠೆಗಾಗಿ ಅಯೋಧ್ಯೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ದೇಶ-ವಿದೇಶಗಳಿಂದ ಅಯೋಧ್ಯೆಗೆ ಉಡುಗೊರೆ, ಪ್ರಸಾದದ ಮಹಾಪೂರವೇ ಹರಿದುಬರುತ್ತಿದೆ. ಭಕ್ತರೊಬ್ಬರು ತಯಾರಿಸಿದ್ದ 1265 ಕೆಜಿ ತೂಕದ ಪ್ರಸಾದದ ಲಡ್ಡು (Laddoo Prasad) ಕೂಡ ಅಯೋಧ್ಯೆ (Ayodhya) ತಲುಪಿದೆ. ಈ ಬೃಹತ್ ಪ್ರಮಾಣದ ಲಡ್ಡನ್ನು ಹೊತ್ತು ಹೈದರಾಬಾದ್‌ನಿಂದ ಹೊರಟಿದ್ದ ವಾಹನವು ಅಯೋಧ್ಯೆಯ ಕರಸೇವಕಪುರ ತಲುಪಿದೆ. ಈ ಲಡ್ಡನ್ನು ತಯಾರಿಸಿದ್ದು ಶ್ರೀರಾಮ ಕ್ಯಾಟರಿಂಗ್ ಸರ್ವಿಸಸ್. ಶ್ರೀರಾಮ ಕ್ಯಾಟರಿಂಗ್ ಸರ್ವಿಸಸ್ ಮಾಲೀಕ ಎನ್.ನಾಗಭೂಷಣ ರೆಡ್ಡಿ ಮಾತನಾಡಿ, ದೇವರು ನನ್ನ ವ್ಯಾಪಾರ ಮತ್ತು ನನ್ನ ಕುಟುಂಬವನ್ನು ಆಶೀರ್ವದಿಸಿದ್ದಾನೆ. ನಾನು ಬದುಕಿರುವವರೆಗೆ ಪ್ರತಿದಿನ ರಾಮಮಂದಿರಕ್ಕಾಗಿ 1 ಕೆಜಿ ಲಡ್ಡು ತಯಾರಿಸುತ್ತೇನೆ ಎಂದು ವಾಗ್ದಾನ ಮಾಡಿದ್ದೇನೆ. ಅಯೋಧ್ಯೆಗೆ ಆಹಾರ ಪ್ರಮಾಣ ಪತ್ರವನ್ನೂ ತಂದಿದ್ದೇನೆ. ಈ ಲಡ್ಡುಗಳು ಒಂದು ತಿಂಗಳು ಬಾಳಿಕೆ ಬರುತ್ತವೆ. 25 ಮಂದಿ 3 ದಿನಗಳವರೆಗೆ ಲಡ್ಡುಗಳನ್ನು ತಯಾರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಬೀದರ್: ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸ್ಚಚ್ಛ ಮಂದಿರ ಅಭಿಯಾನದನ್ವಯ ಮಾಜಿ ಸಚಿವ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಕಮಲನಗರ ತಾಲ್ಲೂಕಿನ ಸಂಗಮ ಗ್ರಾಮದ ಸುಕ್ಷೇತ್ರ ಸಂಗಮೇಶ್ವರ ದೇವಸ್ಥಾನವನ್ನು ಸ್ವಚ್ಛಗೊಳಿಸಿದರು. ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯಕ್ಕೆ ಇಳಿದ ಶಾಸಕರು ನೀರಿನಿಂದ ಗರ್ಭಗುಡಿ ಸೇರಿದಂತೆ ದೇವಸ್ಥಾನದ ಆವರಣವೆಲ್ಲಾ ಸ್ವಚ್ಛಗೊಳಿಸಿದರು. ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಸಾಥ್ ನೀಡಿದರು. ದೇವಸ್ಥಾನದಲ್ಲಿ “ಜೈ ಶ್ರೀರಾಮ” ಎಂಬ ಜಯಘೋಷಗಳು ಕೇಳಿಸಿದವು. ಬಳಿಕ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬುದು 500 ವರ್ಷಗಳ ಬೇಡಿಕೆಯಾಗಿತ್ತು. ಇದಕ್ಕಾಗಿ ಅನೇಕ ಹೋರಾಟಗಳಾಗಿವೆ. ಇಷ್ಟು ದಿನ ಕೇವಲ ಭರವಸೆ ಮತ್ತು ಆಶ್ವಾಸನೆಗಳು ಮಾತ್ರ ಸಿಗುತ್ತಿದ್ದವು. ಮಂದಿರ ಮಾತ್ರ ನಿರ್ಮಾಣವಾಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಇಚ್ಛಾಶಕ್ತಿಯಿಂದಾಗಿ ಇದು ಸಾಕಾರಗೊಂಡಿದೆ. ಅಯೋಧ್ಯೆಯಲ್ಲಿ ಸುಂದರ ಮತ್ತು ಭವ್ಯವಾದ ಮಂದಿರ ನಿರ್ಮಾಣಗೊಂಡಿದೆ. ಜನವರಿ 22ರಂದು ಪ್ರಧಾನಿಯವರ ಅಮೃತ ಹಸ್ತದಿಂದ ಉದ್ಘಾಟನೆ ನೆರವೇರಲಿದೆ ಎಂದರು……
ದಿಸ್ಪುರ್: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅಸ್ಸಾಂನ (Assam) ತೇಜ್‍ಪುರ್‌ನ ಐತಿಹಾಸಿಕ ಮಹಾಭೈರಬ್ ದೇವಾಲಯಕ್ಕೆ (Mahabhairab Temple) ಭೇಟಿ ನೀಡಿ ಅವರಣದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಈಶಾನ್ಯ ರಾಜ್ಯಗಳಾದ ಮೇಘಾಲಯ ಮತ್ತು ಅಸ್ಸಾಂಗೆ ಮೂರು ದಿನಗಳ ಪ್ರವಾಸದಲ್ಲಿರುವ ಅಮಿತ್ ಶಾ ಅವರು ಶಿಲ್ಲಾಂಗ್‍ನಿಂದ ಸಂಜೆ ಇಲ್ಲಿಗೆ ಆಗಮಿಸಿದರು. ಈ ವೇಳೆ ಅವರಿಗೆ `ಗಯಾನ್ ಮತ್ತು ಬಯಾನ್’ (ಡೋಲು ಮತ್ತು ಸಿಂಬಲ್‍ಗಳೊಂದಿಗೆ ಧಾರ್ಮಿಕ ನೃತ್ಯ ಪ್ರದರ್ಶನ) ಸಾಂಪ್ರದಾಯಿಕ ಸ್ವಾಗತವನ್ನು ನೀಡಲಾಯಿತು. ಬಳಿಕ ಅವರು ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಂತರ ದೇವಾಲಯದ ಆವರಣದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಅಮಿತ್ ಶಾ ಅವರು ದೇವಾಲಯದ ಅಂಗಳದಲ್ಲಿ ಬಕೆಟ್‍ನಿಂದ ನೀರು ಸುರಿದು ಬಳಿಕ ಒರೆಸಿ ಸ್ವಚ್ಛಗೊಳಿಸಿದ್ದಾರೆ. ಅವರೊಂದಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸಹ ಭಾಗಿಯಾಗಿದ್ದರು. ಬಳಿಕ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ. ತೇಜ್‍ಪುರ ವಿಶ್ವವಿದ್ಯಾಲಯಕ್ಕೆ ದೇವಸ್ಥಾನದ ಆವರಣದಿಂದ ಹೊರಡುವ ಮೊದಲು ದೇವಾಲಯದ ಬಳಿ ಸೇರಿದ್ದ ಜನರಿಗೆ ಕೈ ಬೀಸಿ…
ಇಸ್ಲಾಮಾಬಾದ್: 2023ರ ಏಕದಿನ ಏಷ್ಯಾಕಪ್ (ODI WorldCup) ಹಾಗೂ 2023ರ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕವೂ ಪಾಕ್ ತಂಡದ ಕಳಪೆ ಪ್ರದರ್ಶನದಿಂದ ಬೇಸತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (PCB) ಅಧ್ಯಕ್ಷ ಝಾಕಾ ಅಶ್ರಫ್ (Zaka Ashraf) ರಾಜೀನಾಮೆ ನೀಡಿದ್ದಾರೆ. ಇದರಿಂದ ಪಾಕ್ ಕ್ರಿಕೆಟ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಲಾಹೋರ್‌ನಲ್ಲಿ (Lahore) ನಡೆದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಶ್ರಫ್, ಇದೇ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಅಧ್ಯಕ್ಷರಾಗಿ ನೇಮಕವಾದ ಝಾಕಾ ಅಶ್ರಫ್ ಸೇವೆ ಸ್ಮರಿಸಿ ಸಮಿತಿ ಸದಸ್ಯರು ಹಾಗೂ ಪೋಷಕ ಉಸ್ತುವಾರಿ ಪ್ರಧಾನ ಮಂತ್ರಿ ಅನ್ವರ್-ಉಲ್-ಹಕ್ ಕಾಕರ್ ಧನ್ಯವಾದ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜೀನಾಮೆಗೆ ಕಾರಣವನ್ನೂ ಬಹಿರಂಗಪಡಿಸಿದರು. ನಾನು ಕ್ರಿಕೆಟ್‌ನ ಸುಧಾರಣೆಗಾಗಿ ಕೆಲಸ ಮಾಡುತ್ತಿದ್ದೆ. ಆದ್ರೆ ಈ ರೀತಿ ಕೆಲಸ ಮಾಡಲು ನನಗೆ ಸಾಧ್ಯವಿಲ್ಲ. ಈಗ ಕ್ರಿಕೆಟ್ ಮಂಡಳಿ ಮುಖ್ಯಸ್ಥರನ್ನು ಆಯ್ಕೆ ಮಾಡುವ ವಿಚಾರ ಪ್ರಧಾನಿಗಳಿಗೆ ಬಿಟ್ಟದ್ದು, ಅವರು…
ಚೆನ್ನೈ: ತಮಿಳುನಾಡಿನ ಶ್ರೀರಂಗನಾಥ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದು ರಾಮನಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ. https://twitter.com/DDNewslive/status/1748595507365392801?t=hBaa1F7slRYGLjQ0i5Dnjg&s=19 ಶ್ರೀರಂಗನಾಥನ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ ತಿರುಚಿರಾಪಳ್ಳಿಯ ಶ್ರೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ರಾಮನಿಗೆ ಸಂಬಂಧಿಸಿದ ದೇವಸ್ಥಾನಗಳಿಗೆ ಭೇಟಿ ನೀಡ್ತಿರುವ ಮೋದಿ ದಕ್ಷಿಣ ಭಾರತದ ಪ್ರಮುಖ ಶ್ರೀರಾಮನ ದೇವಸ್ಥಾನಕ್ಕೆ ಮೋದಿ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ವಾಷಿಂಗ್ಟನ್: ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ರಾಮೋತ್ಸವ(Ayodhya Ram Mandir) ಆಚರಣೆಗೆ ಸಿದ್ಧತೆಗಳು ನಡೆದಿವೆ. ಅಮೆರಿಕ ಒಂದರಲ್ಲೇ 20ಕ್ಕೂ ಹೆಚ್ಚು ಕಡೆ ರಾಮೋತ್ಸವ ನಡೆಯಲಿದೆ. ಈಗಾಗಲೇ ವಾಷಿಂಗ್ಟನ್ (Washington) ಡಿಸಿ ಸೇರಿ ವಿವಿಧೆಡೆ ಕಾರ್ ರ್‍ಯಾಲಿಗಳನ್ನು ನಿರ್ವಹಿಸಲಾಗಿದೆ. ಜನವರಿ 22ರಂದು ನ್ಯೂಯಾರ್ಕ್‍ನ ಟೈಮ್ಸ್ ಸ್ಕ್ವೇರ್ ನಲ್ಲಿ ರಾಮೋತ್ಸವ ವೈಭವ ಕಂಡುಬರಲಿದೆ. ಫ್ರಾನ್ಸ್ ರಾಜಧಾನಿ ಪ್ಯಾರೀಸ್‍ನಲ್ಲಿ ರಾಮರಥ ಯಾತ್ರೆ ನಿರ್ವಹಿಸಲಾಗುತ್ತದೆ. ಐಫೆಲ್ ಟವರ್ ಬಳಿ ಸಾಂಸ್ಕೃತಿಕ ಕಾರ್ಯಕ್ರಮ, ಭಕ್ತಿಗೀತೆಗಳ ಗಾಯ, ಪ್ರಸಾದ ವಿತರಣೆಗೆ ತಯಾರಿ ನಡೆದಿವೆ. ಆಸ್ಟ್ರೇಲಿಯಾದ ಮೆಲ್ಬೋರ್ನ್, ಸಿಡ್ನಿಯಲ್ಲಿಯೂ ದೊಡ್ಡಮಟ್ಟದಲ್ಲೇ ಕಾರ್ಯಕ್ರಮ ನಿರ್ವಹಿಸಲು ಹಿಂದೂ ಸಮುದಾಯ ಸಜ್ಜಾಗಿದೆ. ಆಫ್ರಿಕಾದ ಕೀನ್ಯಾ, ಉಗಾಂಡ, ಟಾಂಜೇನಿಯಾ, ಘಾನ, ನೈಜೀರಿಯಾ, ಮೊಜಾಂಬಿಕ್ ಮತ್ತಿತರ ದೇಶಗಳಲ್ಲಿಯೂ ರಾಮೋತ್ಸವ ನಡೆಯಲಿದೆ. ಆದರೆ ಪಾಕಿಸ್ತಾನದ ಸೋಷಿಯಲ್ ಮೀಡಿಯಾಗಳಲ್ಲಿ ಮಾತ್ರ ರಾಮಮಂದಿರ ವಿರೋಧಿ ಪೋಸ್ಟ್ ಗಳು ಕಂಡುಬರುತ್ತಿವೆ ಇದೇ ಹೊತ್ತಲ್ಲಿ ಪಾಕ್ ಮಾಜಿ ಕ್ರಿಕೆಟಿಗ, ಹಿಂದೂ ಧರ್ಮೀಯ ದಾನೇಶ್ ಕನ್ಹೇರಿಯಾ ರಾಮ ಮಂದಿರ ಬೆಂಬಲಿಸಿ ಸರಣಿ ಟ್ವೀಟ್ ಮಾಡುತ್ತಿದ್ದಾರೆ. ಜೈ ಶ್ರೀರಾಮ್ ಎಂದು ಎದೆ…
ಹಾಂಗ್ ಕಾಂಗ್: 11 ತಿಂಗಳ ಮಗುವಿಗೆ ತಾಯಿ ಹಾಲುಣಿಸುತ್ತಿದ್ದಾಗ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಚೀನಾದ ಹಾಂಗ್ ಕಾಂಗ್‌ನಲ್ಲಿ ನಡೆದಿದೆ. 25 ವರ್ಷದ ಮಹಿಳೆ ತನ್ನ 11 ತಿಂಗಳ ಮಗುವಿಗೆ ಮನೆಯಲ್ಲಿ ಹಾಲುಣಿಸುತ್ತಿದ್ದ ವೇಳೆ ಮಗು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದೆ. ಇದರ ಪರಿಣಾಮ ತಾಯಿ ಗಾಬರಿಗೊಂಡು ಮಗುವಿನ ಬೆನ್ನನ್ನು ತಟ್ಟಿದ್ದಾಳೆ. ಆದರೆ ಮಗು ಯಾವುದೇ ಪ್ರತಿಕ್ರಿಯೆ ನೀಡದ ಪರಿಣಾಮ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಮಗು ಕಳೆದ ಎರಡು ದಿನಗಳಿಂದ ಜ್ವರ ಮತ್ತು ಶೀತದಿಂದ ಅನಾರ‍್ಯೋಗ್ಯಕ್ಕೆ ತುತ್ತಾಗಿತ್ತು. ಪುಟ್ಟ ಮಗುವಿಗೆ ನುಂಗುವ ಅಭಿವೃದ್ಧಿವರ್ತನಗಳು ಸಂಪೂರ್ಣವಾಗಿ ಸಮನ್ವಯಗೊಂಡಿರಲಿಲ್ಲ. ಹಾಲು ಕುಡಿಯುವಾಗ ವೇಗವಾಗಿ ನುಂಗುವ ಸಾಮರ್ಥ್ಯ ಮಗುವಿಗೆ ಇರಲಿಲ್ಲ. ಇದರಿಂದ ಮಗು ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.