Author: AIN Author

ಬೆಂಗಳೂರು: ಇನ್ಮುಂದೆ ಬೆಂಗಳೂರಿನ ಹೋಟೆಲ್ & ರೆಸ್ಟೋರೆಂಟ್‌‌ಗಳಲ್ಲಿಅನವಶ್ಯಕ ಕಾಲಹರಣ ಮಾಡುವ ಕೆಲ ಗ್ರಾಹಕರಿಂದ ಹೋಟೆಲ್‌ ಮಾಲೀಕರು ಕಿರಿಕಿರಿ ಅನುಭವಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಹೋಟೆಲ್‌ ಮಾಲೀಕರ ಸಂಘ ನಿರ್ಧರಿಸಿದೆ. ಕೋಟ್ಯಂತರ ಮಂದಿಗೆ ಜೀವನ ನೀಡಿರುವ ಬೆಂಗಳೂರಿನಲ್ಲಿ ಹೋಟೆಲ್‌‌ ಊಟವನ್ನು ನಂಬಿಕೊಂಡವರ ಸಂಖ್ಯೆಯೂ ಹೆಚ್ಚಾಗಿಯೇ ಇದೆ. ಅದೇ ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ಹೋಟೆಲ್‌ಗಳೂ ತಲೆ ಎತ್ತಿದ್ದು, ಕಾಫಿ, ತಿಂಡಿ, ಊಟ ಸೇರಿದಂತೆ ಹಲವು ರೀತಿಯ ಆಹಾರ ಪದಾರ್ಥಗಳನ್ನು ಪೂರೈಸುತ್ತಿವೆ. ಆದರೆ, ಕೆಲ ಗ್ರಾಹಕರು ಹೋಟೆಲ್‌‌ಗಳಲ್ಲಿ ಸುಖಾಸುಮ್ಮನೆ ಕಾಲಹರಣ ಮಾಡುತ್ತಿರುವುದು ಸಮಸ್ಯೆಯಾಗಿದೆ. ಇಂತಹ ಪ್ರಸಂಗಗಳಿಗೆ ಕಡಿವಾಣ ಹಾಕಲು ಹೋಟೆಲ್‌ ಮಾಲೀಕರ ನಿರ್ಧಾರ ಮಾಡಿದೆ. ಒಂದಷ್ಟು ಬೋರ್ಡ್‌ಗಳನ್ನು ಅಳವಡಿಕೆ ಮಾಡುವುದು, ಅನವಶ್ಯಕ ಮಾತುಕತೆಗಳು ಬೇಡ ಎಂದು ಅರಿವು ಮೂಡಿಸಲು ಸಂಘವು ಮುಂದಾಗಲಿದೆ. ಒಟ್ಟಾರೆ ಇದಕ್ಕೆ ಗ್ರಾಹಕರು ಯಾವ ರೀತಿ ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂಬುವುದನ್ನು ಕಾದುನೋಡಬೇಕಿದೆ.

Read More

ನೂರಾರು ಸಿನಿಮಾ ಮಾಡಿರೋ ಕಾಮಿಡಿ ಸ್ಟಾರ್ ಚಿಕ್ಕಣ್ಣ, ಉಪಾಧ್ಯಕ್ಷನಾಗಿ ಬಿಗ್​ಸ್ಕ್ರೀನ್​ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹೀರೋ ಆಗಿ ಬಂದ ಚಿಕ್ಕಣ್ಣನನ್ನ ಎಲ್ಲಾ ಹೀರೋಗಳ ಫ್ಯಾನ್ಸ್ ತಲೆಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಇಷ್ಟಕ್ಕೂ ಬಡ್ತಿ ಪಡೆದಿರೋ ಚಿಕ್ಕು ಹೊಸ ವರಸೆ ಹೇಗಿದೆ..? ಪ್ರೇಕ್ಷಕ ಪ್ರಭುಗಳು ಏನಂದ್ರು..? ಡಿಬಾಸ್​ರ ಗಜಪಡೆ ಹೇಳಿದ್ದೇನು..? ಎಂಬುವುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಗೆಜ್ಜೆಪುರದ ಶಿವ ರುದ್ರೇಗೌಡ ಹಾಗೂ ಚಿ.ತು. ಸಂಘದ ಉಪಾಧ್ಯಕ್ಷ ನಾರಾಯಣ ನಡುವೆ ನಡೆಯೋ ಜಿದ್ದಾಜಿದ್ದಿನ ಅಂಶಗಳೇ ಉಪಾಧ್ಯಕ್ಷ ಚಿತ್ರದ ಕಥಾಹಂದರ. ಇಡೀ ಊರನ್ನ ತನ್ನ ಅಧಿಕಾರ ಹಾಗೂ ಹಣದಿಂದ ಕಾಲಡಿ ಮಾಡಿಕೊಳ್ಳೋ ಗೌಡರ ವಿರುದ್ದ ಚಿಂತೆ ಇಲ್ಲದ ತುಂಡ್ ಹೈಕ್ಳ ಸಂಘದ ಉಪಾಧ್ಯಕ್ಷ ಹಾಗೂ ಸದಸ್ಯರು ಸಮರ ಸಾರುತ್ತಾರೆ. ಅಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಪರಸ್ಪರ ಕೆಸರೆರಚಾಟದಲ್ಲಿ ಕೊನೆಗೆ ಲಾಕ್ ಆಗೋದು ಮಾತ್ರ ಉಪಾಧ್ಯಕ್ಷ. ಹೌದು.. ತಂದೆ ಮಾಡಿದ ಸಾಲ ತೀರಿಸೋಕೆ ಅಂತ ಗೌಡರ ಮನೆಯಲ್ಲಿ ಆರು ತಿಂಗಳ ಕೆಲಸ ಬರೋ ಉಪಾಧ್ಯಕ್ಷ, ಗೌಡ್ರ ಮಗಳ ಪ್ರೀತಿಯ…

Read More

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಪತ್ನಿ ಹಾಗು ಪವಿತ್ರಾ ಗೌಡ ನಡುವೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್​ ಕಿತ್ತಾಟ ಶುರುವಾಗಿದ್ದು, ಪವಿತ್ರಾ ಗೌಡ ಗೆ  ದರ್ಶನ್​ ಪತ್ನಿ ವಿಜಯಲಕ್ಷ್ಮಿ ವಾರ್ನಿಂಗ್​ ನೀಡಿದ್ದಾರೆ. ಅದಕ್ಕೆ ಪ್ರತಿಯಾನಿ ಪವಿತ್ರಗೌಡ ನನ್ನ ಬಗ್ಗೆ ನಿಮಗೂ ಗೊತ್ತು ಆದ್ರೂ ಹೀಗೆ ಮಾತನಾಡೋದು ಸರಿ ಅಲ್ಲ ನನಗೂ ಗೊತ್ತು ಏನು ಮಾಡಬೇಕು ಎಂದು ವಾಪಸ್‌ ತಿರುಗೇಟು ಕೂಡ ನಡೆಸಿದ್ದಾರೆ. ಪವಿತ್ರ ಗೌಡ ಹಾಗು ನಟ ದರ್ಶನ್ ನಡುವಿನ ಸ್ನೇಹ ಹತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ ದರ್ಶನ್ ಜೊತೆಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಪವಿತ್ರ ಗೌಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ಮಳೆಬಿಲ್ಲು ಹಾಡೊಂದನ್ನು ಹಾಕಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪತ್ರಿಯಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿಜಿ ದರ್ಶನ್​ ಎಂಬ ಇನ್ಸ್ಟಾಗ್ರಾಂ ಖಾತೆಯ ಮೂಲಕ ಪವಿತ್ರ ಗೌಡ ಅವರಿಗೆ ಸಂಬಂಧಿಸಿದ ಫೋಟೋಗಳನ್ನು ದರ್ಶನ್​ ಪತ್ನಿ ಪೋಸ್ಟ್​ ಮಾಡುವ ಮೂಲಕ ಲೀಗಲ್​ ಆ್ಯಕ್ಷನ್​ ತೆಗೆಕೊಳ್ಳುವ ಎಚ್ಚರಿಕೆಯನ್ನು ಪವಿತ್ರಗೌಡಗೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಪರ್ಸನಲ್ ವಾರ್…

Read More

ಕಿರುತೆರೆ ಜನಪ್ರಿಯ ‘ಜೋಡಿಹಕ್ಕಿ’ (Jodihakki) ನಟಿ ಮಧುಶ್ರೀ ಅಯ್ಯರ್ (Madhushree Iyer) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಎರಡನೇ ಮಗುವಿನ (Second Baby) ನಿರೀಕ್ಷೆಯಲ್ಲಿದ್ದಾರೆ.  ಸದ್ಯ ಬೇಬಿ ಬಂಪ್ ಫೋಟೋ ನಟಿ ಶೇರ್ ಮಾಡಿದ್ದಾರೆ. ಮಧುಶ್ರೀ ಅಯ್ಯರ್ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ಈ ವಿಚಾರವನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಇತ್ತೀಚೆಗಷ್ಟೇ ಕುಟುಂಬದ ಜೊತೆಗೆ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿರುವ ಸಂದರ್ಭದಲ್ಲಿ ತೆಗೆದ ಫೋಟೋವೊಂದು ವೈರಲ್ ಆಗಿದೆ. ಈ ಫೋಟೋದಲ್ಲಿ ಮಧುಶ್ರೀ ಅಯ್ಯರ್ ಗರ್ಭಿಣಿಯಾಗಿದ್ದು, ಪತಿ ಯಶ್ ಹಾಗೂ ಮೊದಲ ಮಗು ಸ್ವರ ಜೊತೆಗೆ ಫೋಟೊ ತೆಗೆಸಿಕೊಂಡಿದ್ದಾರೆ. 2018ರಲ್ಲಿ ವಿವಾಹವಾದ ನಟಿ ಮಧು 2020ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದೆ ಮಧುಶ್ರೀ ಕುಟುಂಬ. ಜೋಡಿಹಕ್ಕಿ, ರಾಧಾ ರಮಣ, ಅವಳು ಸೀರಿಯಲ್‌ಗಳಲ್ಲಿ ಮಧುಶ್ರೀ ನಟಿಸಿದ್ದಾರೆ. ಪೋಷಕ ಪಾತ್ರಗಳ ಮೂಲಕ ನಟಿ ಗುರುತಿಸಿಕೊಂಡಿದ್ದಾರೆ. ಮದುವೆಯ ಬಳಿಕ ಬಣ್ಣದ ಲೋಕದಿಂದ ನಟಿ ಬ್ರೇಕ್ ಪಡೆದರು.

Read More

ಕಲಬುರಗಿ: ಕಾಂಗ್ರೆಸ್ ಪಕ್ಷ ಎಲ್ಲ ರೀತಿಯ ಗೌರವ ಕೊಟ್ರೂ ಜಗದೀಶ್ ಶೆಟ್ಟರ್ ದಿಢೀರ್ ಆಗಿ ಮತ್ತೆ ಬಿಜೆಪಿ ಹೋಗಿರೋದನ್ನ ನೋಡಿದ್ರೆ ಅವರು ಮಾನಸಿಕ ಸ್ತೀಮಿತ ಕಳ್ಕೊಂಡಿದ್ದಾರೆ ಅನ್ಸುತ್ತೆ ಅಂತ ಕಾಂಗ್ರೆಸ್ MLC ತಿಪ್ಪಣ್ಣಪ್ಪ ಕಮಕನೂರ್ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಕಮಕನೂರ್ ಬಿಜೆಪಿಯವರ ಹತ್ರ ಯಾರು ಇರೋದಿಲ್ವೋ ಅಂಥವರಿಗೆ ED ದಾಳಿ ಮಾಡೋ ಬೆದರಿಕೆ ಹಾಕ್ತಾರೆ.ಯಾಕಂದ್ರೆ ED ನೇ ಅವರ ಮನೆದೇವ್ರು ಅಂತ ಹೇಳಿದ್ರು..ಒಟ್ಟಾರೆ ಶೆಟ್ಟರ್ ಕಾಂಗ್ರೆಸ್ ಬಿಟ್ಟು ಹೋಗಿದ್ದನ್ನ ನಾನು ಖಂಡಿಸ್ತೇನೆ  ಎಂದು ಹೇಳಿದರು.

Read More

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಕನಸು 500ವರ್ಷಗಳ ನಂತರ ಮತ್ತೆ ಸಾಕಾರಗೊಂಡಿದೆ. ಮೊನ್ನೆಯಷ್ಟೇ ಬಾಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಕೂಡಾ ಮಾಡಲಾಗಿದ್ದು ಅದೆಷ್ಟೋ ನೈಜ ಹಿಂದೂಗಳ ಭವ್ಯ ಕನಸು ಕೊನೆಗೂ ನನಸಾದ ಈ ಪವಿತ್ರ ದಿನ ಇತಿಹಾಸದಲ್ಲೇ ಅಚ್ಚಳಿಯದೆ ಉಳಿಯುತ್ತದೆ. ರಾಮಲಲ್ಲಾ ಈಗ ತನ್ನ ದಿವ್ಯ ಮತ್ತು ಭವ್ಯ ರೂಪದಲ್ಲಿ ಎಲ್ಲರ ಮುಂದೆ ಕಾಣುತ್ತಿದ್ದು, ಸರ್ವರಿಗೂ ದರ್ಶನ ನೀಡುತ್ತಿದ್ದಾರೆ. ಪುರಾಣಗಳಲ್ಲಿ ವಿವರಿಸಲಾದ ಅವರ ನೋಟವನ್ನು ಆಧರಿಸಿ ಭಗವಾನ್ ರಾಮಲಲ್ಲಾ ಅವರ ಮಗುವಿನ ರೂಪವನ್ನು ಅನೇಕ ದೈವಿಕ ಆಭರಣಗಳು ಮತ್ತು ವಸ್ತಗಳಿಂದ ಅಲಂಕರಿಸಲಾಗಿದೆ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ  ಆದ ಮೇಲೆ ಬಾಲರಾಮನಿಗೆ ದಿನಕ್ಕೊಂದು ರೀತಿ ಹೂವಿನ ಅಲಂಕಾರ ಮಾಡಲಾಗುತ್ತಿದ್ದು ಗಣರಾಜ್ಯೋತ್ಸವ ದಿನದಂದು ಬಾಲರಾಮನಿಗೆ ತ್ರಿವರ್ಣ ಬಣ್ಣದ ಹೂವಿನ ಹಾರವನ್ನು ಹಾಕಲಾಗಿತ್ತು. ನೋಡುಗರ ಕಣ್ಣು ಸಾಲದಾಗಿದ್ದು ಎಲ್ಲರ ಮನ ಮುಟ್ಟುವಂತೆ ಬಾಲ ರಾಮ ಮಿಂಚುತ್ತಿದ್ದನು.

Read More

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ಶಾಸಕ ಜನಾರ್ದನ ರೆಡ್ಡಿಯವರು ಹಾಡಿ ಹೊಗಳಿದ್ದು, ಈ ಮೂಲಕ ಬಿಜೆಪಿಗೆ ಸೇರ್ಪಡೆ ಅಥವಾ ಬೆಂಬಲದ ಸುಳಿವು ನೀಡಿದ್ರಾ ಪ್ರಶ್ನೆ ಎದ್ದಿದೆ. ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ (Congress) ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಹಿರಂಗವಾಗಿಯೇ ರೆಡ್ಡಿ ಮೋದಿಯನ್ನು ಹೊಗಳಿದ್ದಾರೆ. ಶ್ರೀರಾಮಮಂದಿರ ನಿರ್ಮಾಣದಲ್ಲಿ ಮೋದಿಜೀಯವರನ್ನು ಅಭಿನಂದಿಸಬೇಕು. ಮೋದಿಯವರು ಇಡೀ ವಿಶ್ವವೇ ತಿರುಗಿ ನೋಡುವ ಕೆಲಸ ಮಾಡಿದ್ದಾರೆ. 500 ವರ್ಷದ ಹೋರಾಟಕ್ಕೆ ಫಲ ಇದೀಗ ಬಂದಿದೆ ಎಂದರು. ಗಂಗಾವತಿಯ ಅಭಿವೃದ್ಧಿಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ (Iqbal Ansari) ಅಡ್ಡಿ ಆಗುತ್ತಿದ್ದಾರೆ. ಸೋಲಿನ ಹತಾಶೆ ಇಕ್ಬಾಲ್ ಅನ್ಸಾರಿಯನ್ನು ಕಾಡುತ್ತಿದೆ. ಗಂಗಾವತಿ ಅಭಿವೃದ್ಧಿಗೆ ಸಹಕಾರ ಕೊಡುತ್ತಿಲ್ಲ. ಕ್ಲುಲ್ಲಕ ವಿಚಾರದಲ್ಲೂ ಅಭಿವೃದ್ಧಿಯಲ್ಲಿ ಅಡ್ಡಿ ಆಗುತ್ತಿದ್ದಾರೆ. ಎಂಪಿ ಚುನಾವಣೆ ಆದ ಮೇಲೆ ಕಾಂಗ್ರೆಸ್ ನವರು ಇಕ್ಬಾಲ್ ಅನ್ಸಾರಿಯನ್ನು ಡಸ್ಟ್ ಬಿನ್‍ಗೆ ಹಾಕುತ್ತಾರೆ ಎಂದು ಕಿಡಿಕಾರಿದ್ದಾರೆ

Read More

ಬೆಂಗಳೂರು:  ನೀನೆ ಬೇಕು..ನೀನೆ ಬೇಕು ಎಂದು ಮಹಿಳೆ ಹಿಂದೆ ಬಿದ್ದ ಆಸಾಮಿ ಮಹಿಳೆ ನೀ ಬೇಡ ಎಂದು ಬೇಡಿಕೊಂಡರು ಬಿಡದ ಯುವಕ ಕಾಟ ತಾಳಲಾರದೆ ಮಹಿಳೆ ಯುವಕನ ಮೇಲೆ ಎಫ್ಐಆರ್ ದಾಖಲಿಸಿಯೇ ಬಿಟ್ಟ ಮಹಿಳೆ ಹೌದು ಆಶ್ಚರ್ಯಕರವಾದ   ಈ ಘಟನೆ ನಡೆದಿದ್ದು ಬೆಂಗಳೂರಿನ ಆರ್‌ . ಟಿ ನಗರದಲ್ಲಿ . ಆಂಟಿ ಹಿಂಣದೆ ಬಿದ್ದ ಹುಡುಗನ ಕಥೆಯಾಗಿದ್ದು ಹಣಕ್ಕಾಗಿ ಪೀಡಿಸುತ್ತಿದ್ದನು. ಆ ನಂತರ  ಜೈಲಿನಿಂದ ಹೊರಬಂದಾತ ಮಹಿಳೆ ಮೇಲೆಯೇ ಪ್ರತಿ ದೂರು ನೀಡಿದ್ದ ಹಣಕ್ಕಾಗಿ ನನಗೆ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದುಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಶೆರ್ವಿನ್  ಸಿಂಧೂರಿ ( 34 ) ಮಹಿಳೆ ಮೇಲೆ ಎಫ್ಐಆರ್ ದಾಖಲು ಕೆಲ ದಿನಗಳ ಹಿಂದೆ ಶೆರ್ವಿನ್ ಮತ್ತು ಸಿಂದೂರಿ ಇಬ್ಬರು ಪರಿಚಯವಾಗಿದ್ರು ಒಟ್ಟಿಗೆ ಇಬ್ಬರು ಒಡಾಡಿಕೊಂಡಿದ್ರು ಇಬ್ಬರ ಮಧ್ಯೆ ಪ್ರೀತಿ,ಪ್ರೇಮ ಕೂಡ ಚಿಗುರೊಡೆದಿತ್ತು ಹೋಟೆಲ್,ರೂಂ ಅಂತೆಲ್ಲ ಸುತ್ತಾಡಿಕೊಂಡಿದ್ದ ಜೋಡಿ ಶೆರ್ವಿನ್ ಖರ್ಚಿಗೆ ಆಗಾಗ ಹಣ ನೀಡ್ತಿದ್ದಳಂತೆ ಸಿಂದೂರಿ ಬೆಂಗಳೂರಲ್ಲಿ…

Read More

ಅಟ್ಲಾಂಟ: ಹುಟ್ಟಿನಿಂದ ಬೇರ್ಪಟ್ಟು ಒಂದೇ ನಗರದಲ್ಲಿ ವಾಸವಿದ್ದ ಅವಳಿಗಳು (Twins) 19 ವರ್ಷದ ನಂತರ ಒಂದಾಗಿರುವ ಘಟನೆ ಪೂರ್ವ ಯುರೋಪಿಯನ್ ದೇಶ ಜಾರ್ಜಿಯಾದಲ್ಲಿ (Georgia) ನಡೆದಿದೆ. ಬೇರ್ಪಟ್ಟಿದ್ದು ಹೇಗೆ? ಆಮಿ ಖ್ವಿಟಿಯಾ ಮತ್ತು ಅನೋ ಸರ್ತಾನಿಯಾ ಬೇರ್ಪಟ್ಟಿದ್ದ ಅವಳಿ ಸಹೋದರಿಯರು. ಅವಳಿ ಮಕ್ಕಳ ತಾಯಿಯಾದ ಅಜಾ ಶೋನಿ ಅವರು 2002 ರಲ್ಲಿ ಆಮಿ ಮತ್ತು ಅನೋ ಎಂಬ ಅವಳಿ ಹೆಣ್ಣುಮಕ್ಕಳಿಗೆ ಜಾರ್ಜಿಯಾ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು. ಅದರೆ ಅವರು ಮಕ್ಕಳ ಜನ್ಮ ತೂಡಕುಗಳಿಂದ ಕೋಮಾಗೆ ಜಾರಿದ್ದಾರೆ. ಆಕೆಯ ಗಂಡನಾದ ಗೋಚಾ ಗಖಾರಿಯಾ ಅವಳಿ ಹೆಣ್ಣುಮಕ್ಕಳನ್ನು ಆ ಪ್ರತ್ಯೇಕ ಕುಟುಂಬಗಳಿಗೆ ಮಾರಾಟ ಮಾಡಿ ಬೇರ್ಪಡಿಸಿದ್ದ. ಆದರೆ ಅವರು ಒಂದೇ ನಗರದಲ್ಲಿ ಸುಮಾರು 19 ವರ್ಷಗಳ ಕಾಲ ವಾಸವಿದ್ದರು ಒಂದಾಗಿದ್ದು ಹೇಗೆ? ಅನೋಳನ್ನು ಟಿಬಿಲಿಸಿ ಎಂಬವರು ಪೋಷಣೆ ಮಾಡುತ್ತಿದ್ದರು. ಆದರೆ ಅನೋಳಿಗೆ ಅವಳಿ ಸಹೋದರಿ ಇದ್ದಾಳೆ ಎಂಬುದರ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಅಥವಾ ಸುಳಿವು ಇರಲಿಲ್ಲ. ಒಂದು ದಿನ ಆಮಿಯ ಅಚ್ಚುಮೆಚ್ಚಿನ ಟಿವಿ…

Read More

ವಾಷಿಂಗ್ಟನ್: ಅಮೆರಿಕದ (America) ಅಲಬಾಮಾ (Alabama) ರಾಜ್ಯವು ಗುರುವಾರ ನೈಟ್ರೋಜನ್ ಅನಿಲವನ್ನು (Nitrogen Gas) ಬಳಸಿ ಅಪರಾಧಿ ಕೊಲೆಗಾರನನ್ನು ಮರಣದಂಡನೆಗೆ (Execution) ಒಳಪಡಿಸಿದೆ. ಮಾರಣಾಂತಿಕ ಚುಚ್ಚುಮದ್ದಿನ ನಂತರ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಹೊಸ ಮರಣದಂಡನೆ ವಿಧಾನವನ್ನು ಬಳಸಲಾಗಿದೆ. ಕೆನ್ನೆತ್ ಯುಜೀನ್ ಸ್ಮಿತ್‌ನನ್ನು (Kenneth Eugene Smith) ಅಲಬಾಮಾದ ಹಾಲ್ಮನ್ ಜೈಲಿನಲ್ಲಿ ನೈಟ್ರೋಜನ್ ಹೈಪೋಕ್ಸಿಯಾದಿಂದ ಗಲ್ಲಿಗೇರಿಸಲಾಯಿತು. ನೈಟ್ರೋಜನ್ ಹೈಪೋಕ್ಸಿಯಾದಿಂದ ಕೆನ್ನೆತ್ ಯುಜೀನ್ ಸ್ಮಿತ್ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಒಕ್ಲಹೋಮ ಮತ್ತು ಮಿಸ್ಸಿಸ್ಸಿಪ್ಪಿ ಜೊತೆಗೆ ಸಾರಜನಕ ಹೈಪೋಕ್ಸಿಯಾವನ್ನು ಮರಣದಂಡನೆಯ ವಿಧಾನವಾಗಿ ಬಳಸಲು ಅನುಮೋದಿಸಿದ ಮೂರು ಯುಎಸ್ ರಾಜ್ಯಗಳಲ್ಲಿ ಅಲಬಾಮಾ ಒಂದಾಗಿದೆ. 1999ರಲ್ಲಿ ಕೊನೆಯದಾಗಿ ಹೈಡ್ರೋಜನ್ ಸೈನೈಡ್ ಅನಿಲವನ್ನು ಬಳಸಿಕೊಂಡು ಅಪರಾಧಿ ಕೊಲೆಗಾರನನ್ನು ಮರಣದಂಡನೆಗೆ ಒಳಪಡಿಸಲಾಗಿತ್ತು ನೈಟ್ರೋಜನ್ ಹೈಪೋಕ್ಸಿಯಾವು ವ್ಯಕ್ತಿಯನ್ನು ಸಾರಜನಕವನ್ನು ಮಾತ್ರ ಉಸಿರಾಡುವಂತೆ ಮಾಡುತ್ತದೆ. ಮಾನವ ದೇಹಕ್ಕೆ ದೈಹಿಕ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ಆಮ್ಲಜನಕವನ್ನು ವ್ಯಕ್ತಿಯಿಂದ ಕಸಿದುಕೊಳ್ಳುತ್ತದೆ.

Read More