ಚಾಮರಾಜನಗರ: ಕೆಎಸ್ಆರ್ ಟಿಸಿ ಬಸ್ ಮತ್ತು ಟಾಟಾ ಏಸ್ ನಡುವೆ ಡಿಕ್ಕಿಯಾಗಿದ್ದು ಟಾಟಾ ಏಸ್ ಚಾಲಕ ಸಿದ್ದರಾಜು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಬಳಿ ನಡೆದಿದೆ. ಘಟನೆಯಲ್ಲಿ ಏಳು ಮಂದಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಂಗಳ ಗ್ರಾಮದಿಂದ ಚಿಕ್ಕಲ್ಲೂರು ಜಾತ್ರೆಗೆ ತೆರಳುತ್ತಿದ್ದ ಟಾಟಾ ಏಸ್. ಚಾಮರಾಜನಗರದಿಂದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್. ಮಹಿಳೆಯರು ಸೇರಿದಂತೆ ಏಳು ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ. ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
Author: AIN Author
ಬೆಂಗಳೂರು: ಕ್ರಿಕೆಟ್ ಆಡುತ್ತಿದ್ದ ವೇಳೆ ಯುವಕ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೃದಯಾಘಾತದಿಂದ ರಾಬಿನ್ ( 22 )ಮೃತ ಯುವಕನಾಗಿದ್ದು ನಿನ್ನೆ ಮಧ್ಯಾಹ್ನ 3:00 ಗಂಟೆಗೆ ನಡೆದ ಘಟನೆಯಾಗಿದೆ. ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಬಹುಮಾನ ಪಡೆಯೋ ವೇಳೆ ಕುಸಿದು ಬಿದ್ದ ರಾಬಿನ್ ಗಣರಾಜ್ಯೋತ್ಸವ ಹಿನ್ನೆಲೆ ಕ್ರಿಕೆಟ್ ಪಂದ್ಯಾವಳಿ ನಡೆಸಲಾಗಿತ್ತು ಎರಡು ಮೂರು ಮ್ಯಾಚ್ ಗಳಲ್ಲಿ ಆಡಿ ಪಂದ್ಯ ಗೆಲುವಿಗೆ ಕಾರಣಕರ್ತನಾಗಿದ್ದ ರಾಬಿನ್ ಟೂರ್ನಿ ಸಂಬಂಧ ಬಹುಮಾನ ಕಾರ್ಯಕ್ರಮ ವೇಳೆ ಹೃದಯಾಘಾತ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೀತಿತ್ತು ವೇದಿಕೆ ಮೇಲೆ ಬಹುಮಾನ ಪಡೆಯೋವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದ ರಾಬಿನ್ ಡಿ ಹೈಡ್ರೇಟ್ ಆಗಿ ಕುಸಿದು ಬಿದ್ದಿದ್ದ ರಾಬಿನ್ ಕೂಡಲೇ ರಾಬಿನ್ ನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವು ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ವೈದ್ಯರು ಮಾಹಿತಿ
ಬೆಂಗಳೂರು: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ನಿಂದ ಕಲೆಕ್ಷನ್ ಹೋಗುತ್ತಿದೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ತೆಲಂಗಾಣ ಚುನಾವಣೆಗೆ ರಾಜ್ಯದಲ್ಲಿ ಹಣ ಸಂಗ್ರಹ ಮಾಡಿದಂತೆ, ಲೋಕಸಭೆ ಚುನಾವಣೆಗೂ ವಸೂಲಿ ಶುರುವಾಗಿದೆ. ಇದು ಕಲೆಕ್ಷನ್ ಸರ್ಕಾರ ಎಂದು ಆರೋಪಿಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ’ ಇಲಾಖೆಯು ನಗದು ಅಭಿವೃದ್ಧಿಗೆ ಸಿಕ್ಕಸಿಕ್ಕ ಕಡೆ ಸುಲಿಗೆಗೆ ಇಳಿದಿದೆ. ದಂಧೆಗೆ ಯಾವ ಹುಲ್ಲುಗಾವಲಾದರೇನು? ಹೈಕಮಾಂಡ್ ಗೆ ಕಪ್ಪ ಸಲ್ಲಿಸಬೇಕೆಂದು ಹಾದಿಬೀದಿಯಲ್ಲಿ ಹೇಳಿಕೊಂಡು ಸಿಕ್ಕಿದ ಕಡೆಯೆಲ್ಲಾ ವಸೂಲಿ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ. ಕೈಗಾರಿಕೆ, ಉದ್ಯಮ ಚಟುವಟಿಕೆಗೆ ಒಪ್ಪಿಗೆ ಕೊಡಲು KIADB ಇದೆ. ಏಕಗವಾಕ್ಷಿ ವ್ಯವಸ್ಥೆ ಅಡಿಯಲ್ಲಿ ಪ್ರಕ್ರಿಯೆ ನಿರಾತಂಕವಾಗಿ ನಡೆಯುತ್ತಿದೆ. ಅದಕ್ಕೂ ಮುನ್ನ ಉನ್ನತಮಟ್ಟದ ಹೂಡಿಕೆ ಅನುಮೋದನೆ ಸಮಿತಿ ಒಪ್ಪಿಗೆಯನ್ನೂ ಕೊಡುತ್ತದೆ. ಇಷ್ಟೆಲ್ಲ ಇದ್ದ ಮೇಲೆ ಇಲ್ಲಿ BDA ಕೆಲಸ ಏನು? ಯಾರ ಕಿಸೆ ಭರ್ತಿ ಮಾಡಲಿಕ್ಕೆ BDA ಇಂಥ ಅಡ್ಡದಾರಿ ತುಳಿದಿದೆ? ಎಂದು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವರ್ತನೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಬೆಂಗಳೂರು: ನೇರಳೆ ಮಾರ್ಗದಲ್ಲಿ (Purple Line) ಕೆಲಕಾಲ ವ್ಯತ್ಯಯವಾಗಿದ್ದ ಮೆಟ್ರೋ ಸಂಚಾರ ಮತ್ತೆ ಪುನರ್ ಆರಂಭವಾಗಿದೆ. ಎಂಜಿ ರೋಡ್- ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ಕರೆಂಟ್ ಸಮಸ್ಯೆಯಿಂದ ಕೆಲ ಕಾಲ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಜೊತೆಗೆ ಶೀಘ್ರವೇ ಸಮಸ್ಯೆ ಪರಿಹರಿಸುವುದಾಗಿ ಬಿಎಂಆರ್‌ಸಿಎಲ್ ಪ್ರಕಟಣೆ ಹೊರಡಿಸಿತ್ತು. ಅಂತೆಯೇ ಸಮಸ್ಯೆ ಪರಿಹರಿಸಲಾಗಿದ್ದು, ಎಂಜಿ ರೋಡ್ ಮತ್ತು ಚಲ್ಲಘಟ್ಟ ನಡುವೆ ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಡುವೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬೆಳಿಗ್ಗೆ 11.00 ಗಂಟೆಯಿಂದ ರೈಲು ಸೇವೆಗಳು ಎಂದಿನಂತೆ ಪುನರ್ ಆರಂಭಿಸಲಾಗಿದೆ.
ಕಲಬುರಗಿ: ನಿತೀಶ್ ಕುಮಾರ್ ರಾಜ್ಯಪಾಲರ ಭೇಟಿ ಬಗ್ಗೆ ನನಗೆ ಮಾಹಿತಿ ಇಲ್ಲ ಊಹಾಪೋಹ ಬಗ್ಗೆ ನಾನು ಯಾವತ್ತೂ ಮಾತಾಡೋದೇ ಇಲ್ಲ ಅಂತ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಖರ್ಗೆ ನಮ್ಮ ಒಕ್ಕೂಟ ಮುರಿಬಾರ್ದು ಅಂತಾ ಎಲ್ಲ ನಾಯಕರಿಗೂ ಮಾತಾಡ್ತೇನೆ..ಒಂದು ಕಡೆ ಇದ್ರೆ ಮಾತ್ರ ಒಳ್ಳೆಯ ಫೈಟ್ ಕೊಟ್ಟು ಯಶಸ್ವಿ ಆಗಬಹುದು ಅಂತ ಹೇಳಿದ್ರು.ಒಟ್ಟಾರೆ ಪ್ರಜಾಪ್ರಭುತ್ವ ಉಳಿಸಬೇಕು ಅನ್ನೋರು ಯಾರೂ ಆತುರದ ನಿರ್ಧಾರ ಮಾಡಲ್ಲ ಅಂದ್ರು..
ಕಲಬುರಗಿ: ಪರಿಸರ ಕಾಯಿದೆ ಉಲ್ಲಂಘನೆ ಮಾಡಿದ ಯಾವ ಕಾರ್ಖಾನೆ ಇದ್ರೂ ಕ್ರಮ ತಪ್ಪಿದ್ದಲ್ಲ ಅದರಂತೆ ಶಾಸಕ ಯತ್ನಾಳ್ ಮಾಲೀಕತ್ವದ ಕಾರ್ಖಾನೆ ಸಹ ಸೇರಿದೆ ಅಂತ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಖಂಡ್ರೆ ಚಿಂಚೋಳಿಯ ಯತ್ನಾಳ್ ಸಕ್ಕರೆ ಕಾರ್ಖಾನೆ ನಿಯಮ ಉಲ್ಲಂಘಿಸಿ ಕಬ್ಬು ಅರೆದಿದೆ ಮಾತ್ರವಲ್ಲ ಇನ್ನೂ ಹಲವು ನಿಯಮಗಳನ್ನ ಗಾಳಿಗೆ ತೂರಿದೆ.ಈಗಾಗಲೇ ಕಳೆದ ವರ್ಷ ಕೇಂದ್ರ ಪರಿಸರ ಮಂಡಳಿ ಒಂದೂವರೆ ಕೋಟಿ ದಂಡ ವಸೂಲಿ ಮಾಡಿದೆ ಆದ್ರೂ ಮತ್ತೆ ನಿಯಮ ಉಲ್ಲಂಘನೆ ಆಗಿದೆ..ಹೀಗಾಗಿ ಇಲಾಖೆ ಕ್ರಮ ಕೈಗೊಂಡಿದೆ ಒಟ್ಟಾರೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಅಂತ ಹೇಳಿದ್ರು..
ಬೆಂಗಳೂರು: ನಿಗಮಮಂಡಳಿಯಲ್ಲಿ ನೇಮಕಗೊಂಡಿರೋ ಕೆಲ ಶಾಸಕರ ಅಸಮಾಧಾನ ವಿಚಾರ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆ ಬೆಳವಣಿಗೆ ಎಲ್ಲಾ ನನಗೆ ಗೊತ್ತಿಲ್ಲ ಹೈಕಮಾಂಡ್ ಅನುಮತಿ ತೆಗೆದುಕೊಂಡು,ಚರ್ಚೆ ಮಾಡಿ ಸಿಎಂ ಡಿಸಿಎಂ ಮಾಡಿದ್ದಾರೆ ಯಾರು ಒಪ್ಪುತ್ತಾರೋ ಒಪ್ಪೋದಿಲ್ಲವೋ ಗೊತ್ತಿಲ್ಲ ಅಧಿಕೃತವಾಗಿ ಈಗ ಪ್ರಕಟಣೆ ಮಾಡಿದ್ದಾರೆ ಎಂದು ಹೇಳಿದರು. https://ainlivenews.com/the-list-of-appointment-of-corporation-boards-has-been-released-by-the-congress-government-of-the-state/ ಬೆಳಗ್ಗೆ ಡಿಸಿಎಂ ಮೀಟ್ ಆದ ಬಗ್ಗೆನೂ ಪ್ರಸ್ತಾಪ ಮಾಡಿದಾಗ ತುಮಕೂರನಲ್ಲಿ 29 ಕ್ಕೆ ಸರ್ಕಾರಿ ಕಾರ್ಯಕ್ರಮ ಇದೆ ಡಿಸಿಎಂ ಬರಬೇಕು ಅಂತ ಹೇಳಿದ್ದೆನೆ ನಿಗಮಂಡಳಿ ಅಭಿಪ್ರಾಯ ವಿಚಾರ ಮೊದಲೇ ಹೇಳಿದ್ದೆನೆ ಈ ವಿಚಾರ ಇಂದು ಮಾತಾಡಿಲ್ಲ ಎಂದರು. ನಿಗಮ ಮಂಡಳಿ ವಿಚಾರವಾಗಿ ಪರಿಷತ್ ಸದಸ್ಯರ ಅಸಮಾಧಾನ ವಿಚಾರ ಬಗ್ಗೆಯೂ ಮಾತನಾಡಿ ಇದೆಲ್ಲವೂ ಸಿಎಂ ಅಂಗಳದಲ್ಲಿದೆ ಸಿಎಂ ತೀರ್ಮಾನ ಮಾಡುತ್ತಾರೆ ಎಂದರು. ಹೆಗಡೆಯವರು ಸರ್ಕಾರಕ್ಕೆ ವಾರದಲ್ಲಿ ಸಲ್ಲಿಸುತ್ತೆನೆ ಅಂದಿದ್ದಾರೆ ಅದನ್ನ ಸರ್ಕಾರ ಸ್ವೀಕರಿಸಿ, ಪಬ್ಲಿಕ್ ಡೊಮೈನ್ ಗೆ ತರಬೇಕು 160 ಕೋಟಿ ಖರ್ಚು…
ಬೆಂಗಳೂರು: ರಾಜ್ಯದಲ್ಲಿ 3,456 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, 52 ಮಂದಿಗೆ ಸೋಂಕು ದೃಢಪಟ್ಟಿದೆ. ಇಂದು ಯಾವುದೇ ಸಾವು ನೋವು ವರದಿಯಾಗಿಲ್ಲ. ಒಟ್ಟಾರೆಯಾಗಿ ರಾಜ್ಯದಲ್ಲಿ 341 ಸಕ್ರಿಯ ಪ್ರಕರಣಗಳಿವೆ. ಇನ್ನುಳಿದಂತೆ ಇಂದು ಕೋವಿಡ್‌ನಿಂದ ಗುಣಮುಖರಾಗಿ 60 ಜನರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಪಾಸಿಟಿವಿಟಿ ದರ ಶೇ. 1.50 ಇದೆ. ಬೆಂಗಳೂರಿನಲ್ಲಿ ಇಂದು 12 ಪಾಸಿಟಿವ್ ಕೇಸ್‌ಗಳು ವರದಿಯಾಗಿದೆ. ಮೈಸೂರಿನಲ್ಲಿ 5, ಮಂಡ್ಯದಲ್ಲಿ 7, ತುಮಕೂರಿನಲ್ಲಿ 3, ದಕ್ಷಿಣ ಕನ್ನಡದಲ್ಲಿ 1 ಪ್ರಕರಣಗಳು ದಾಖಲಾಗಿದೆ. ಅದೇ ರೀತಿ ದಾವಣಗೆರೆ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾವೇರಿ, ಉಡುಪಿ, ವಿಜಯಪುರ, ಯಾದಗಿರಿ, ರಾಮನಗರ, ಕೊಪ್ಪಳ, ಚಾಮರಾಜನಗರ, ಬೀದರ್, ಬಳ್ಳಾರಿಯಲ್ಲಿ ಇಂದು ಯಾವುದೇ ಕೊರೊನಾ ಪ್ರಕರಣ ದಾಖಲಾಗಿಲ್ಲ.
ಬಾಗಲಕೋಟೆ: ಅಪ್ಪನ ಕೊಲೆ ಮಾಡಲು ಮಗನೇ ಮೂರು ಲಕ್ಷ ಸುಪಾರಿ ಕೊಟ್ಟ ಪ್ರಕರಣವೊಂದು ಬಾಗಲಕೋಟೆಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಚೆನ್ನಪ್ಪ (66) ಕೊಲೆಯಾದ ತಂದೆ. ವಿಕಲಚೇತನನಾಗಿರುವ ಮಗ ಚೆನ್ನಬಸಪ್ಪ ವಿಜಯಪುರ (Vijayapur) ಜಿಲ್ಲೆ ನಿಡಗುಂದಿ ಮೂಲದ ಮಾಂತೇಶ್‍ಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ. ಆಸ್ತಿಗಾಗಿ ಕೊಲೆ: 32 ಎಕರೆ ಆಸ್ತಿ ಅದರಲ್ಲಿ ವಿಭಾಗ ಮಾಡುವ ವಿಚಾರಕ್ಕೆ ಪದೇ ಪದೇ ಕಲಹ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಅಪ್ಪನನ್ನು ಕೊಲೆ ಮಾಡಲು ಮಗ ಪ್ಲಾನ್ ಮಾಡಿದ್ದಾನೆ. ಅಂತೆಯೇ ಚೆನ್ನಬಸಪ್ಪ, ಸೊಸೆ ಶಿವಬಸವ್ವ ಹಾಗೂ ಮಗನ ಆಪ್ತ ರಮೇಶ್ ಮನಗೂಳಿ ಸೇರಿ ಕೊಲೆಗೆ ಪ್ಲಾನ್ ಮಾಡಿದ್ದಾರೆ. ಬಳಿಕ ಮಾಂತೇಶ್ ಮರಡಿಮಠ ಎಂಬಾತನಿಗೆ 3 ಲಕ್ಷ ಹಣ ನೀಡಿದ್ದಾರೆ. ಅಂತೆಯೇ ಚೆನ್ನಪ್ಪನನ್ನು ರಾಂಪುರ ಗ್ರಾಮದ ಬಳಿ ಮಚ್ಚಿನಿಂದ ಕೊಚ್ಚಿ ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಲಾಗಿದೆ
ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನು ಸ್ವಾಗತಿಸಿದ ಮಾಜಿ ಸಿಎಂ ಯಡಿಯೂರಪ್ಪ ಶಾಮನೂರು ಅವರು ನಮ್ಮ ಸಮಾಜದ ಹಿರಿಯ ಮುಖಂಡರು ಅವರಂಥ ಹಿರಿಯರು ಆಶೀರ್ವಾದ ಮಾಡಿರೋದು ಸಂತೋಷ ಎಂದು ಹೇಳಿದರು. ಶಿವಮೊಗ್ಗದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಘವೇಂದ್ರರನ್ನು ಗೆಲ್ಲಿಸಲು ಶ್ಯಾಮನೂರು ಕರೆ ನೀಡಿದ್ದರು ಈ ಹಿನ್ನೆಲೆಯಲ್ಲಿ ಇಂದು ಮಾಜಿ ಸಿಎಂ ಯಡಿಯೂರಪ್ಪನವರು ಮಾತನಾಡಿ, ರಾಘವೇಂದ್ರ ಮಾಡಿರುವ ಕೆಲಸ ಮೆಚ್ಚಿ ಅವರನ್ನು ಪುನರಾಯ್ಕೆ ಮಾಡಬೇಕೆಂದು ಹೇಳಿರೋದು ನಮ್ಮ ಸಮಾಜದ ಬಂಧುಗಳಿಗೆ, ಕಾರ್ಯಕರ್ತರಿಗೆ ಸಂತೋಷ ತಂದಿದೆ ಶಾಮನೂರು ಅವರಂಥ ಹಿರಿಯರು ಆಶೀರ್ವಾದ ಮಾಡಿರೋದು ಸಂತೋಷ ಅದಕ್ಕಾಗಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು. 2024ರ ಈ ವರ್ಷದಲ್ಲಿ ಜವಾಬ್ದಾರಿ ವಹಿಸಿಕೊಂಡ ನಂತರ ನಡೆಯುತ್ತಿರೋ ಮೊದಲ ಕಾರ್ಯಕಾರಿಣಿ. ನಿಮ್ಮೆಲ್ಲರಿಗೂ ಸ್ವಾಗತ, ಅಭಿನಂದನೆ. ಭಾರತೀಯರ 500 ವರ್ಷಗಳ ಕನಸು ರಾಜಮಂದಿರ ನಿರ್ಮಾಣ ಆಗಿದೆ. ಕರ್ನಾಟಕಕ್ಕೂ, ಅಯೋಧ್ಯೆಗೂ ಅವಿನಾಭಾವ ಸಂಬಂಧ ಇದೆ. ಅಯೋದ್ಯೆಯಲ್ಲಿ ನಿರ್ಮಾಣ ಆದ ಬಾಲರಾಮ ಎಲ್ಲರಿಗೂ ಹೆಮ್ಮೆ. ಮೋದಿ ಅವರ ನೇತೃತ್ವದಲ್ಲಿ, ಭಾರತ ಹತ್ತು ವರ್ಷಗಳಲ್ಲಿ ಅನೇಕ ಅಭಿವೃದ್ಧಿ…