ಹುಬ್ಬಳ್ಳಿ:- ಧಾರವಾಡ ಲೋಕಸಭೆ ಟಿಕೆಟ್ ವಿಚಾರದಲ್ಲಿ ಯಾವ ಉಹಾಪೋಹ ಇಲ್ಲ. ನಮ್ಮ ನಾಯಕರು ಜೋಶಿ ಅವರೇ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಜೋಶಿ ಅವರೇ ನಮ್ಮ ಲೋಕಸಭೆ ಅಭ್ಯರ್ಥಿ. ಟಿಕೆಟ್ ಅವರಿಗೆ ಸಿಗಲಿದೆ ದೊಡ್ಡ ಅಂತರದಿಂದ ಅವರು ಗೆಲ್ಲಲ್ಲಿದ್ದಾರೆ ಎಂದು ಜೋಶಿಪರ ಬ್ಯಾಟ್ ಮಾಡಿದರು. ಶೆಟ್ರ ನಿಮ್ಮ ನಾಯಕರ ಅಲ್ವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನ ಹಾಗೆ ಹೇಳಿಲ್ಲ. ಆದ್ರೆ ನಾನ ಹೇಳೋದ ಪ್ರಲ್ಹಾದ್ ಜೋಶಿ ಬಿಟ್ಟರೆ ಯಾರೂ ಇಲ್ಲ. ನನಗೆ ಶೆಟ್ಟರ್ ಸೇರ್ಪಡೆ ಅಸಮಾಧಾನ ಇಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದ. ಶೆಟ್ಟರ್ ಘರವಾಪ್ಸಿ ನಂತರ ಯಾವ ಬಣಗಳು ಆಗೋದಿಲ್ಲ. ಶೆಟ್ಟರ್ ವಾಪಸ್ ಬರೋ ಬಗ್ಗೆ ನಾವ ಯೋಚನೆ ಮಾಡಿರಲಿಲ್ಲ. ಬರ್ತೀದಾರೆ ಅಂತಾ ನಾಯಕರು ಹೇಳಿದ್ರು,ಸ್ವಾಗತ ಮಾಡಿದ್ದೇವೆ ಎಂದರು .
Author: AIN Author
ಚಾಮರಾಜನಗರ:- ಕನಕ ಜಯಂತಿ ಆಚರಣೆ ವೇಳೆ ಭಾರಿ ಹೈಡ್ರಾಮಾ ನಡೆದ ಘಟನೆ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಜರುಗಿದೆ. ಸಿಎಂ ಪುತ್ರ ಯತೀಂದ್ರ ವೇದಿಕೆ ಮೇಲೆ ಮಾತಾಡುವಾಗ ಯುವಕನೊಬ್ಬ ಬಾಯಿಗೆ ಬಂದಂತೆ ಬೈದು ಬೈಕ್‌ನಲ್ಲಿ ಎಸ್ಕೇಪಾಗಿದ್ದಾರೆ. ಕನಕ ಜಯಂತಿ ಆಚರಣೆ ವೇಳೆ ಯತೀಂದ್ರ ಸಿದ್ದರಾಮಯ್ಯ ರಾಮಮಂದಿರದ ಬಗ್ಗೆ ಮಾತನಾಡುತ್ತಿದ್ದರು. ಬಿಜೆಪಿಯವರು ರಾಮನನ್ನ ರಾಜಕೀಯಕ್ಕೆ ಬಳಸಿಕೊಳ್ತಿದ್ದಾರೆ ಅಂತಿದ್ದರು. ಈ ವೇಳೆ ಬುಲೆಟ್‌ಬೈಕ್‌ನಲ್ಲೇ ಸೀದಾ ಮೈದಾನದೊಳಕ್ಕೆ ಬಂದ ಯುವಕ ರಂಜಿತ್ ಎಂಬಾತ ಯತೀಂದ್ರರನ್ನ ಬಾಯಿಗೆ ಬಂದಂತೆ ಬೈದು ಬೈಕ್‌ನಲ್ಲಿ ಎಸ್ಕೇಪ್ ಆಗಿದ್ದ. ಆತ ಯಾರು ಅಂತ ಹುಡುಕೋಷ್ಟರಲ್ಲಿ ಮತ್ತೆ ಅದೇ ಯುವಕ ಬೈಕ್‌ನಲ್ಲಿ ಮೈದಾನಕ್ಕೆ ಬಂದಿದ್ದಾನೆ. ಕೂಡಲೇ ಅಲ್ಲಿದ್ದ ಪೊಲೀಸರು ಯುವಕನ್ನು ಹಿಡಿದುಕೊಂಡು ವಶಕ್ಕೆ ಪಡೆದಿದ್ದಾರೆ. ಯುವಕನ್ನ ವಶಕ್ಕೆ ಪಡೆದ ಪೊಲೀಸರು ದರದರನೇ ಎಳೆದೊಯ್ದಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ವಿರುದ್ದ ಅವಾಚ್ಯ ಶಬ್ದದಿಂದ ನಿಂದನೆ ಪ್ರಕರಣ ಸಂಬಂಧ ಸಚಿವ ಭೈರತಿ ಸುರೇಶ್, ನಿಂದನೆ ಮಾಡಿದ ವ್ಯಕ್ತಿಯನ್ನು ಬಂಧಿಸುವಂತೆ ಎಸ್ಪಿಗೆ ವೇದಿಕೆ ಮೇಲೆಯೇ ಸೂಚನೆ ನೀಡಿದ್ದಾರೆ. ಇದು ಪ್ರಜಾಪ್ರಭುತ್ವ ಅಶ್ಲೀಲ…
ಚಾಮರಾಜನಗರ:- ಶಿವಮೊಗ್ಗದಲ್ಲಿ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಪರ ಬ್ಯಾಟ್ ಬೀಸಿದ್ದ ಶ್ಯಾಮನೂರು ಶಿವಶಂಕರಪ್ಪ ಹೇಳಿಕೆಗೆ ಮಾಜಿ ಸಚಿವ ಹೆಚ್ ವಿಶ್ವನಾಥ್ ಕೆಂಡಾಮಂಡಲ ಆಗಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಶ್ಯಾಮನೂರು ಶಿವಶಂಕರಪ್ಪ ಯಾವ ಹಿರಿಯ ಮುತ್ಸದ್ದಿಯೂ ಅಲ್ಲ ಜಾತಿವಾದಿ ಮುತ್ಸದ್ದಿಗಳು. ಕಾಂಗ್ರೆಸ್ ಜೀವಂತವಾಗಿದ್ರೆ ಮೊದ್ಲು ಅವನನ್ನ ಪಾರ್ಟಿಯಿಂದ ಸಸ್ಪೆಂಡ್ ಮಾಡ್ಸಿ. ಶ್ಯಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಇಂದ ಟಿಕೆಟ್ ಪಡೆದು ಶಾಸಕರಾಗಿ ಮಗ ಮಂತ್ರಿಯಾಗಿ. ನೀನು ಕಾಂಗ್ರೆಸ್ ನಲ್ಲಿ ಇದ್ದುಕೊಂಡೆ ನೀನು ಕಾಂಗ್ರೆಸ್ ಅಧಿಕಾರ ಅನುಭವಿಸಿಕೊಂಡೆ ಬೇರೆ ಪಾರ್ಟಿಗೆ ಕ್ಯಾನ್ವಸ್ ಮಾಡ್ತಿಯಲ್ಲ ಏನ್ ಹೇಳ್ಬೇಕು ನಿನಗೆ. ನೀನು ದೇಶವಾದಿನೊ ಇಲ್ಲ ಜಾತಿ ವಾದಿನೊ..? ಎಂದು ಪ್ರಶ್ನಿಸಿದರು. ಇನ್ನೂ ನಿಗಮ ಮಂಡಳಿ ವಿಚಾರದಲ್ಲಿ ಶಾಸಕರ ಅಸಮಾಧಾನ ವಿಚಾರವಾಗಿ ಮಾತನಾಡಿ, ಎಂ.ಎಲ್.ಎ ಗಳಿಗೆ ಬೋರ್ಡ್ಸ್ ಎಂಡ್ ಕಾರ್ಪೋರೇಷನ್ ಕೊಡ್ಬೇಡಿ ಅಂತ ವೀರೆಂದ್ರ ಪಾಟೀಲರ ಕಾಲದಲ್ಲೇ ಹೇಳಿದ್ದೆ ನಾನು ಎಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಮಾಜಿ ಸಚಿವ ಹೆಚ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಚಾಮರಾಜನಗರ:- ನಿಗಮ ಮಂಡಳಿ ಹಂಚಿಕೆ ವಿಚಾರದಲ್ಲಿ ಕೆಲ ಶಾಸಕರ ಅಸಮಾಧಾನ ವಿಚಾರವಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಪಾರ್ಟಿ ಸಮುದ್ರ. ದದ್ದಲ್ ಆಗ್ಲಿ ಯಾರೇ ಆಗ್ಲಿ ಸ್ನೇಹಿತರೆ ಕುಳಿತುಕೊಂಡು ಮಾತನಾಡುತ್ತೇವೆ ಎಂದರು. ಇನ್ನೂ ಬಿ.ವೈ ರಾಘವೇಂದ್ರ ಪರ ಶ್ಯಾಮನೂರು ಶಿವಶಂಕರಪ್ಪ ಬ್ಯಾಟ್ ಬೀಸಿದ ವಿಚಾರವಾಗಿ ಮಾತನಾಡಿ, ಇದನ್ನ ಯಾವ ಉದ್ದೇಶ ಇಟ್ಕೊಂಡು ಹೇಳಿದ್ದಾರೊ ಎಲ್ಲಿ ಹೇಳಿದ್ದಾರೊ ನನಿಗೆ ಗೊತ್ತಿಲ್ಲ ಅವರನ್ನೆ ಕೇಳ್ಬೇಕು ಎಂದರು. ಇನ್ನೂ ಲಕ್ಷ್ಮಣ ಸವದಿಗೆ ಬಿಜೆಪಿಯಿಂದ ಒತ್ತಡವಿರುವ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿಯವರು ಈ ರೀತಿ ಹೇಳುತ್ತಲೇ ಬರುತ್ತಿದ್ದಾರೆ. ಸರ್ಕಾರ ಒಂದು ತಿಂಗಳಲ್ಲಿ ಬೀಳುತ್ತೆ ನಾಲ್ಕುತಿಂಗಳಲ್ಲಿ ಬೀಳುತ್ತೆ ಅಂತ ಈಗ 9 ತಿಂಗಳಾಗಿದೆ ಸರ್ಕಾರಕ್ಕೆ ಏನಾದ್ರು ಆಯ್ತ..? ಏನು ಆಗಿಲ್ಲ ಜಗದೀಶ್ ಶೆಟ್ಟರ್ ರವರು ಎಂ ಎಲ್ ಸಿ ಆದ್ರೆ ಎಂಎಲ್ಎ ಹೋಗ್ಬೇಕಲ್ಲಾ ನಾವು ಸರ್ಕಾರ ರಚನೆ ಮಾಡಿರುವುದು ಎಂ ಎಲ್ ಎ…
ಬೆಳಗಾವಿ:- ಗ್ರಾ. ಪಂ. ಡಾಟಾ ಎಂಟ್ರಿ ಆಪರೇಟರ್ ನಿಂದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದಲ್ಲಿ ಜರುಗಿದೆ. ಡಾಟಾ ಎಂಟ್ರಿ ಆಪರೇಟರ್ ಸಂತೋಷ ಪಾಟೀಲ್ ಅವರು ಶೂ ಧರಿಸಿ ಧ್ವಜ ಕಟ್ಟೆ ಹತ್ತಿ ಧ್ವಜದ ಹಗ್ಗ ಕಟ್ಟಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಟಗುಂದಿ ಗ್ರಾ. ಪಂ ನಲ್ಲಿ ಘಟನೆ ಜರುಗಿದ್ದು, ಸಂತೋಷ ಪಾಟೀಲ್ ವಿರುಧ್ಧ ಸಾರ್ಜನಿಕ ವಲಯದಲ್ಲಿ ತೀವ್ರ ಅಕ್ರೋಶ ವ್ಯಕ್ತವಾಗಿದೆ. ಕೂಡಲೇ ಶಿಸ್ತು ಕ್ರಮ ಜರುಗಿಸಲು ಆಗ್ರಹಿಸಲಾಗಿದೆ. ವರದಿ:- ಬಾಳು ತೇರದಾಳ AIN NEWS ಬೆಳಗಾವಿ
ಬೆಂಗಳೂರು:- ಕಾಂಗ್ರೆಸ್ ಸರ್ಕಾರ ದಲಿತ ಮತ್ತು ಬಡವರ ವಿರೋಧಿ ಆಗಿದೆ ಎಂದು ಮಾಜಿ ಸಿಎಂ BS ಯಡಿಯೂರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಮಗೆ ಮೋದಿಯೇ ಗ್ಯಾರಂಟಿ. ಹತ್ತು ವರ್ಷದ ಅವಧಿಯಲ್ಲಿ ಕರ್ನಾಟಕಕ್ಕೆ ರೈಲ್ವೆ, ಹೆದ್ದಾರಿಗೆ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಲೋಕಸಭಾ ಸಮರವು ನಮ್ಮೆಲ್ಲರಿಗೆ ಬಹುದೊಡ್ಡ ತಿರುವಿನ ಸತ್ವ ಪರೀಕ್ಷೆಯಾಗಿದೆ. ಈ ಬಾರಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ನರೇಂದ್ರ ಮೋದಿಯವರಿಗೆ ನಮ್ಮದೇ ಆದ ಕೊಡುಗೆ ನೀಡಬೇಕಿದೆ ಎಂದು ಯಡಿಯೂರಪ್ಪ ಕರೆ ಕೊಟ್ಟರು.
ದೆಹಲಿ:- ರಾಜ್ಯಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಇಂದು ನಾವು ಮತ್ತೊಂದು ಬದಲಾವಣೆಗೆ ಸಾಕ್ಷಿಯಾಗಿದ್ದೇವೆ. ಈ ಹಿಂದೆ ಸದನದ ಯಾವುದೇ ಸದಸ್ಯರ ಮೇಲೆ ಭ್ರಷ್ಟಾಚಾರದ ಆರೋಪ ಬಂದರೆ ಎಲ್ಲರೂ ಅವರಿಂದ ದೂರವಾಗುತ್ತಿದ್ದರು. ಆದರೆ ಇಂದು ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ಭ್ರಷ್ಟರನ್ನೂ ಸಾರ್ವಜನಿಕವಾಗಿ ವೈಭವೀಕರಿಸುವುದನ್ನು ನೋಡುತ್ತೇವೆ. ಇದು ಕಾರ್ಯಾಂಗಕ್ಕೆ ಮಾಡಿದ ಅವಮಾನ, ನ್ಯಾಯಾಂಗಕ್ಕೆ ಮಾಡಿದ ಅವಮಾನ, ಭಾರತದ ಶ್ರೇಷ್ಠ ಸಂವಿಧಾನಕ್ಕೆ ಮಾಡಿದ ಅವಮಾನಚರ್ಚೆ ಮತ್ತು ದೃಢವಾದ ಸಲಹೆಗಳು ಈ ವಿಷಯದ ಕುರಿತು ಈ ಸಮ್ಮೇಳನದಲ್ಲಿ ಭವಿಷ್ಯದ ಹೊಸ ರಸ್ತೆಗೆ ದಾರಿ ಮಾಡಿಕೊಡಲಿದೆ ಎಂದು ಹೇಳಿದ್ದಾರೆ. ಆಲ್ ಇಂಡಿಯಾ ಪ್ರಿಸೈಡಿಂಗ್ ಆಫೀಸರ್ಸ್ ಸಮ್ಮೇಳನಕ್ಕೆ ನಿಮ್ಮೆಲ್ಲರಿಗೂ ಶುಭಾಶಯಗಳು. ಈ ಬಾರಿಯ ಈ ಸಮ್ಮೇಳನ ಇನ್ನಷ್ಟು ವಿಶೇಷವಾಗಿದ್ದು, ಭಾರತದ 75ನೇ ಗಣರಾಜ್ಯೋತ್ಸವದ ನಂತರ ಈ ಸಮ್ಮೇಳನ ನಡೆಯುತ್ತಿದೆ. ನಮ್ಮ ಸಂವಿಧಾನವು 75 ವರ್ಷಗಳ ಹಿಂದೆ ಜನವರಿ 26 ರಂದು ಜಾರಿಗೆ ಬಂದಿತು.…
ಪಟ್ನಾ:- ನಿತೀಶ್ ಬಿಜೆಪಿ ಜೊತೆ ಹೋದರೆ ಡಿಸಿಎಂ ತೇಜಸ್ವಿ ಯಾದವ್ ಅವರ ಗತಿಯೇನು ಎಂಬ ಪ್ರಶ್ನೆ ಎದ್ದಿದೆ. ಜತೆಗೆ, ತೇಜಸ್ವಿ ಯಾದವ್ ಮುಂದೇನು ಮಾಡಬಹುದು? ಸಾಧ್ಯಾಸಾಧ್ಯತೆಗಳೇನು ಎಂಬ ವಿಚಾರವೂ ಚರ್ಚೆಯಲ್ಲಿದೆ. ಕಳೆದ ಕೆಲ ದಿನಗಳಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ನಡುವೆ ಎಲ್ಲವೂ ಸರಿಯಾಗಿ ಇದ್ದಂತಿಲ್ಲ. ಶುಕ್ರವಾರ ನಡೆದ ಗಣರಾಜ್ಯೋತ್ಸವದ ಸಮಾರಂಭದಲ್ಲಿಯೂ ಇದಕ್ಕೆ ಉದಾಹರಣೆ ಕಂಡುಬಂದಿತ್ತು. ಇಬ್ಬರ ನಡುವಿನ ಅಂತರ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಬ್ಬರ ನಡುವೆ ಒಂದು ಸೀಟು ಖಾಲಿ ಉಳಿದಿತ್ತು. ಈ ಕಾರ್ಯಕ್ರಮದಲ್ಲಿ ಇಬ್ಬರೂ ಏನೂ ಮಾತನಾಡಿರಲಿಲ್ಲ. ಸದ್ಯದ ಬಿಹಾರದ ಪರಿಸ್ಥಿತಿಯನ್ನು ನೋಡಿದರೆ, ಇಡೀ ರಾಜ್ಯದಲ್ಲಿ ನಿತೀಶ್‌ಗಿಂತ ತೇಜಸ್ವಿ ಅವರ ವರ್ಚಸ್ಸು ಉತ್ತಮವಾಗಿದೆ. 2020 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತೇಜಸ್ವಿ ಅವರು ಬೃಹತ್ ರ‍್ಯಾಲಿಗಳನ್ನು ನಡೆಸಿದ್ದರು. ಲಾಲು ಅನುಪಸ್ಥಿತಿಯಲ್ಲಿ ತೇಜಸ್ವಿ ಅವರ ಆರ್‌ಜೆಡಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಹಾರದ ಜನರ ಮನಸ್ಸಿನಲ್ಲಿ ಯಾರಿದ್ದಾರೆ ಎಂಬುದು ಇದರಿಂದ…
ಬೆಂಗಳೂರು:- ದೇಶದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ಖಚಿತ ಎಂದು ಭೂಪೇಂದ್ರ ಯಾದವ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸೀಟುಗಳು ಸಿಗೋದು ಖಚಿತ. ಮತ್ತೆ ಮೋದಿಯವರು ಪ್ರಧಾನಿ ಆಗುವುದು ಖಚಿತ ಎಂದರು. ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕೇಂದ್ರದಿಂದ ಅನೇಕ ಅನುದಾನಗಳು, ಜಿಎಸ್‍ಟಿ ಬಾಕಿ ಬಂದರೂ ಅಭಿವೃದ್ಧಿ ಶೂನ್ಯ. ಗ್ಯಾರಂಟಿ ಹೆಸರಿನಲ್ಲಿ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಜನರಿಗೆ ವಂಚಿಸುತ್ತಿದೆ ಎಂದು ಆರೋಪಿಸಿದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 28 ಕ್ಷೇತದಲ್ಲೂ ಜಯಿಸಲಿದೆ. ಬಳಿಕ ರಾಜ್ಯದಲ್ಲಿ ಕಮಲ ಅರಳುವುದು ಗ್ಯಾರಂಟಿ. ಪಶ್ಚಿಮ ಬಂಗಾಳ ಹಾಗೂ ಬಿಹಾರದ ಬೆಳವಣಿಗೆಯಿಂದ ಕಾಂಗ್ರೆಸ್ ಮತ್ತಷ್ಟು ಕುಗ್ಗಿದೆ ಎಂದು ಭೂಪೇಂದ್ರ ಯಾದವ್ ಹೇಳಿದರು.
ಬೆಂಗಳೂರು:- ರೌಡಿಶೀಟರ್ ಮಿಲ್ಟ್ರಿ ಸತೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ. ಪ್ರಶಾಂತ್, ದನುಷ್, ಕಾಮ್ಲೆಟ್ ಮತ್ತು ಸುನೀಲ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು 18 ರಿಂದ 20 ವರ್ಷ ವಯಸ್ಸಿನವರಾಗಿದ್ದು, ವೈಯಕ್ತಿಕ ದ್ವೇಷದಿಂದ ಸತೀಶ್‌ನನ್ನು ಕೊಲೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಸತೀಶ್ ಕೊಲೆಯಾಗುವ ಒಂದು ದಿನದ ಮೊದಲು ಬಾರ್ನಲ್ಲಿ ರೌಡಿಶೀಟರ್ ಆರೋಪಿಯನ್ನು ನಿಂದಿಸಿದ್ದನು. ಇದರಿಂದ ಕೋಪಗೊಂಡಿದ್ದ ಆರೋಪಿಗಳು ಸತೀಶ್ ಕೊಲೆ ಮಾಡಲು ಪ್ಲಾನ್ ಮಾಡಿದ್ದರು. ಅದರಂತೆ ಬೆಂಗಳೂರಿನ ವಿವೇಕನಗರದ ಮಾಯಾಬಜಾರ್ ಸ್ಲಂನಲ್ಲಿರುವ ತಮ್ಮ ಮನೆಯ ಹೊರಗೆ ಮಲಗಿದ್ದ ಸತೀಶ್‌ನನ್ನು ಬುಧವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು. ಬೆಂಗಳೂರು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಶೇಖರ್ ಹೆಚ್ ತೆಕ್ಕನವರ್ ಹೇಳುವ ಪ್ರಕಾರ, ಸತೀಶ್ ಒಬ್ಬ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಸತೀಶ್‌ನನ್ನು ಕೊಲೆ ಮಾಡಿದ ಆರೋಪಿಗಳು ಇತರ ಅಪರಾಧಗಳಲ್ಲಿ ಭಾಗಿಯಾಗಿದ್ದರು. ಸತೀಶ್ ತನ್ನ ಮನೆಯಲ್ಲಿ ಕೊಲೆಯಾದ ನಂತರ…