Author: AIN Author

ನವದೆಹಲಿ:- 22 ವರ್ಷದ ಬಿಟೆಕ್ ಯುವತಿ ತಾಪ್ಸಿ ಉಪಾಧ್ಯಾಯ ತಳ್ಳುಗಾಡಿಯಲ್ಲಿ ಪಾನಿಪೂರಿ ಬ್ಯೂಸಿನೆಸ್ ಆರಂಭಿಸಿ ಯಶಸ್ಸು ಕಂಡಿದ್ದಾಳೆ. ಸ್ಕೂಟಿಯಿಂದ ಆರಂಭಿಸಿದ ಈಕೆಯ ಉದ್ಯಮ ಇದೀಗ ಮಹೀಂದ್ರ ಥಾರ್ ವರೆಗೂ ಬಂದಿದೆ. ತನ್ನ ಪಾನಿಪೂರಿ ಗಾಡಿಯನ್ನು ಎಳೆದುಕೊಂಡು ಹೋಗಲು ತಾಪ್ಸಿ ಹೊಚ್ಚ ಹೊಸ ಮಹೀಂದ್ರ ಥಾರ್ ಖರೀದಿಸಿದ್ದಾಳೆ. ಯುವತಿಯ ಸಾಹಸ ಹಾಗೂ ಯಶಸ್ಸಿನ ಪಯಣಕ್ಕೆ ಮಹೀಂದ್ರ ಚೇರ್ಮೆನ್ ಆನಂದ್ ಮಹೀಂದ್ರ ಮನಸೋತಿದ್ದಾರೆ. ಒಬ್ಬರ ಯಶಸ್ಸಿನಲ್ಲಿ ಮಹೀಂದ್ರ ಥಾರ್ ಕೂಡ ಪಾಲುದಾರರಾಗಿದೆ ಅನ್ನೋದು ಮತ್ತಷ್ಟು ಖುಷಿ ನೀಡಿದೆ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ. https://twitter.com/anandmahindra/status/1749722821360791669?ref_src=twsrc%5Etfw%7Ctwcamp%5Etweetembed%7Ctwterm%5E1749722821360791669%7Ctwgr%5E74bf654f0e7010a41823222946e25e1e54735f49%7Ctwcon%5Es1_c10&ref_url=http%3A%2F%2Fapi-news.dailyhunt.in%2F ಯುವತಿಯ ವಿಡಿಯೋ ಹಂಚಿಕೊಂಡಿರುವ ಆನಂದ್ ಮಹೀಂದ್ರ, ಆಫ್ ರೋಡ್ ವಾಹನಗಳು ಏನು ಮಾಡಬೇಕು? ಇತರ ವಾಹನಗಳು ಹೋಗಲು ಸಾಧ್ಯವಾಗದ, ಹಿಂದೆಂದೂ ಹೋಗದ ಸ್ಥಳಗಳಿಗೆ ಪ್ರಯಾಣ ಮಾಡಲು ಸಹಾಯ ಮಾಡುತ್ತದೆ. ಅಂದರೆ ಅಸಾಧ್ಯವಾದದ್ದನ್ನು ಅನ್ವೇಷಣೆ ಮಾಡಲು, ಅಂಡ್ವೆಂಚರ್‌ಗೆ ಆಫ್ ರೋಡ್ ವಾಹನ ಸಹಾಯ ಮಾಡುತ್ತದೆ. ಇದರ ಜೊತೆಗೆ ನಮ್ಮ ವಾಹನ, ಕಾರುಗಳು ತಮ್ಮ ತಮ್ಮ ಬೆಳವಣಿಗೆಗೆ, ಕನಸುಗಳನ್ನು ಸಾಕಾರಗೊಳಿಸಲು ಸಹಾಯ…

Read More

ಇಡೀ ಜಗತ್ತನ್ನೇ ಎದುರಿಸಿದ್ದ ಹಿಟ್ಲರ್. ಈತನ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಹಿಟ್ಲರ್ ಒಬ್ಬ ಅಸಮಾನ್ಯ ವ್ಯಕ್ತಿ. ಆತನ ನಡವಳಿಕೆ ಮಾತ್ರವಲ್ಲ ವೇಷಭೂಷಣ ಕೂಡ ಭಿನ್ನವಾಗಿತ್ತು. ವಿಚಿತ್ರವಾದ ಆದರೆ ದಪ್ಪ ಮೀಸೆಯನ್ನು ಹೊಂದಿದ್ದ ಹಿಟ್ಲರ್ ಅದನ್ನು ಕ್ಷೌರ ಮಾಡ್ತಿರಲಿಲ್ಲ. ಬರ್ಲಿನ್‌ ನಲ್ಲಿ ಸೋವಿಯತ್ ಪಡೆಗಳ ದಾಳಿಯ ನಂತರ ಹಿಟ್ಲರ್ ತನ್ನ ತಲೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದ. ಆ ದಿನ ಕೂಡ ಹಿಟ್ಲರ್ ತನ್ನ ಮೀಸೆಯನ್ನು ಟ್ರಿಮ್ ಮಾಡಿದ್ದ. ಹಿಟ್ಲರ್ ನನ್ನು ನಿರ್ದಯಿ ವ್ಯಕ್ತಿ ಎಂದೇ ಕರೆಯಲಾಗುತ್ತದೆ. ಆತ 80 ವರ್ಷಗಳ ಹಿಂದೆ ಏಪ್ರಿಲ್ 30, 1945 ರಂದು ತನ್ನ ಭೂಗತ ಫ್ಯೂರರ್‌ಬಂಕರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಹಿಟ್ಲರ್ ಮೀಸೆಯ ಬಗ್ಗೆ ಕುತೂಹಲಕಾರಿ ಕೆಲ ಅಂಶಗಳಿವೆ. ಹಿಟ್ಲರ್ ಮೀಸೆ ಬಗ್ಗೆ ಈ ಪುಸ್ತಕದಲ್ಲಿದೆ ವಿವರ : ಹಿಟ್ಲರ್‌ನ ಕೊನೆಯ ದಿನ : ನಿಮಿಷದಿಂದ ನಿಮಿಷ ಎಂಬ ಪುಸ್ತಕದಲ್ಲಿ ಈ ಬಗ್ಗೆ ವಿವರವಿದೆ. ಹಿಟ್ಲರ್‌ನ ಮೀಸೆಯ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ಪುಸ್ತಕದಲ್ಲಿ ಬಹಿರಂಗಪಡಿಸಲಾಗಿದೆ. ಈ…

Read More

ಸಾಮಾನ್ಯವಾಗಿ ನಾಯಿ ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಹೀಗೆ ನಾಯಿ ಮೇಲೆ ಹೆಚ್ಚು ಪ್ರೀತಿ ಇಟ್ಟುಕೊಂಡಿದ್ದ ಮಹಿಳೆ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ನಾಯಿಯ ಮೇಲೆ ಅತಿಯಾದ ಪ್ರೀತಿಯನ್ನು ಹೊಂದಿದ್ದ ಈ ಮಹಿಳೆ ಪ್ರಾರಂಭದಲ್ಲಿ ಪ್ರತಿದಿನ ಬಿಡುವಿನ ಸಮಯದಲ್ಲಿ ತನ್ನ ನಾಯಿಯೊಂದಿಗೆ ವಾಕಿಂಗ್​ ಹೋಗುತ್ತಿದ್ದಳು. ಆದರೆ ಈ ಅಭ್ಯಾಸವನ್ನೇ ಈಗ ವೃತ್ತಿಯನ್ನಾಗಿಸಿದ್ದಾಳೆ. ಕಾಫಿ ಕೆಫೆಯಲ್ಲಿ ಕೆಲಸಮಾಡುತ್ತಿದ್ದ ನಾರ್ವಿಚ್ ನಿವಾಸಿ ಗ್ರೇಸ್ ಬೆಣ್ಣೆ ಬರಿಸ್ಟಾ(28) ತನ್ನ ಈ ಕೆಲಸವನ್ನು ತೊರೆದು ಶ್ವಾನ ಪ್ರೀತಿಯ ಹವ್ಯಾಸವನ್ನು ವೃತ್ತಿಯನ್ನಾಗಿಸಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾಳೆ. ಒಂದು ದಿನ ಅವಳ ಸ್ನೇಹಿತ ತಮಾಷೆಯಾಗಿ ನೀನು ನಿನ್ನ ನಾಯಿಯನ್ನು ವಾಕಿಂಗ್​​​ಗೆ ಕರೆದುಕೊಂಡು ಹೋಗುವಾಗ, ನನ್ನ ಮನೆಯ ನಾಯಿಯನ್ನು ಏಕೆ ಕರೆದುಕೊಂಡು ಹೋಗಬಾರದು ಎಂದು ಹೇಳಿದ್ದಾರೆ. ಇಲ್ಲಿಂದ ಪ್ರಾರಂಭವಾದ ಈಕೆಯ ವೃತ್ತಿ ಇದೀಗಾ ದಿನದಲ್ಲಿ ನೂರಾರು ನಾಯಿಗಳನ್ನು ವಾಕಿಂಗ್​​ಗೆ ಕರೆದುಕೊಂಡು ಹೋಗುವಷ್ಟರ ಮಟ್ಟಿಗೆ ಬಂದು ತಲುಪಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ. 2019 ರಲ್ಲಿ, ನಾಯಿಯನ್ನು ವಾಕಿಂಗ್​​​ ಕರೆದುಕೊಂಡು ಹೋಗುವ ವೃತ್ತಿಯನ್ನು ಪ್ರಾರಂಭಿಸಲು ಕಂಪನಿಯನ್ನು ತೆರೆದಳು.…

Read More

ದೇವನಹಳ್ಳಿ:- ರೋಟರಿ ಸಂಸ್ಥೆಗೆ ಸೇರಿದ ಶಾಲಾ ಜಾಗದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಮುಂದಾದ ಸರ್ಕಾರದ ವಿರುದ್ಧ ಮಕ್ಕಳು ಹಾಗೂ ಪೋಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೌದು, ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿರುವ ರೋಟರಿ ಶಾಲೆಯ ಆವರಣ ಪುರಸಭೆಗೆ ಸೇರಿದ್ದು ಎಂದು ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕೈ ಹಾಕಿದೆ. 43 ವರ್ಷಗಳಿಂದ ರೋಟರಿ ಶಾಲೆ ನಡೆಯುತ್ತಿದ್ದು, 1983 ರಲ್ಲಿ ಶಾಲೆ ಮುಂದಿನ ಜಾಗವನ್ನ ಪುರಸಭೆ ಮಕ್ಕಳ ಮೈದಾನಕ್ಕೆ ರೇಸೋಲೆಷನ್ ಮಾಡಿತ್ತು, ಇದೀಗ ಅದೇ ಜಾಗವನ್ನ ಪುರಸಭೆ ಸರ್ಕಾರಕ್ಕೆ ಸೇರಬೇಕು ಅಂತಾ ಇಂದಿರಾ ಕ್ಯಾಂಟಿನ್ ನಿರ್ಮಾಣ ಸರ್ಕಾರ ಕ್ಕೆ ಕೈಹಾಕಿದೆ. ಜೆಸಿಬಿ, ಪುರಸಭೆ ವಾಹನಗಳ ನಿಲ್ಲಿಸಿ ಶಾಲೆಗೆ ಹೋಗದಂತೆ ತಡೆ ಹಿಡಿಯಲಾಗಿದೆ. ನೆನ್ನೆಯಿಂದ ಶಾಲಾ ಆವರಣವನ್ನ ತೆರವು ಮಾಡಲು ಪುರಸಭೆ ಮುಂದಾಗಿದೆ. ಹೀಗಾಗಿ ಪುರಸಭೆ ಕ್ರಮ ಖಂಡಿಸಿ ರೋಟರಿ ಶಾಲಾ ಮಕ್ಕಳು ರಾತ್ರಿಯಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇದೀಗ ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡಿದ್ರೆ ಶಾಲೆ ಹೋಗಲು ಹಾಗದ ಪರಿಸ್ಥಿತಿ ರೋಟಾರಿ ಶಾಲೆ…

Read More

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದಿದ್ದು, ಟೀಮ್ ಇಂಡಿಯಾ ಪಾರುಪತ್ಯ ಮೆರೆದಿದೆ. ಮೊದಲ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ತಂಡವನ್ನು 246 ರನ್​ಗಳಿಗೆ ಕಟ್ಟಿಹಾಕಿದ ಭಾರತ ತಂಡವು 436 ರನ್​ ಬಾರಿಸಿ 190 ರನ್​ಗಳ ಮುನ್ನಡೆ ಸಾಧಿಸಿತು. ಇದಾದ ಬಳಿಕ ಶುರುವಾದ ಇಂಗ್ಲೆಂಡ್ ತಂಡದ ದ್ವಿತೀಯ ಇನಿಂಗ್ಸ್​ನಲ್ಲೂ ಟೀಮ್ ಇಂಡಿಯಾ ಬೌಲರ್​ಗಳು ಪರಾಕ್ರಮ ಮೆರೆದರು. ಪರಿಣಾಮ 180 ರನ್​ಗಳಿಸುಷ್ಟರಲ್ಲಿ ಇಂಗ್ಲೆಂಡ್ ತಂಡವು ಅಗ್ರ ಕ್ರಮಾಂಕದ 5 ವಿಕೆಟ್​ಗಳನ್ನು ಕಳೆದುಕೊಂಡಿತು. ಇದರಲ್ಲಿ ನಾಯಕ ಬೆನ್ ಸ್ಟೋಕ್ಸ್​ ಕೂಡ ಸೇರಿದ್ದರು. ಮೊದಲ ಇನಿಂಗ್ಸ್​ನಲ್ಲಿ 70 ರನ್ ಬಾರಿಸಿ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿದ್ದ ಬೆನ್ ಸ್ಟೋಕ್ಸ್ (6) ಅವರನ್ನು ಈ ಬಾರಿ ಅಶ್ವಿನ್ ಕ್ಲೀನ್ ಬೌಲ್ಡ್ ಮಾಡಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಬೆನ್ ಸ್ಟೋಕ್ಸ್​ರನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ಹಿರಿಮೆ ರವಿಚಂದ್ರನ್ ಅಶ್ವಿನ್ ಪಾಲಾಯಿತು. ಅಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್​ನಲ್ಲಿ ಒಬ್ಬನೇ ಆಟಗಾರನನ್ನು ಅತ್ಯಧಿಕ ಬಾರಿ ಔಟ್…

Read More

ಕೊಪ್ಪಳ:- ಮೋದಿ ಪ್ರಧಾನಿಯಾಗಲು ಬಿಜೆಪಿ ಜೊತೆ ಹೊಂದಾಣಿಕೆಗೆ ಕೆಆರ್​ಪಿಪಿ ಸಿದ್ಧ ಎಂದು ಕೆಆರ್​ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮೋದಿ ಮತ್ತೆ ಪ್ರಧಾನಿಯಾಗಬೇಕು. ಮೋದಿ ಪ್ರಧಾನಿಯಾಗಲು ಹೊಂದಾಣಿಕೆಗೆ ಕೆಆರ್​ಪಿಪಿ ಸಿದ್ಧ. ನಮ್ಮ ಪಕ್ಷದಿಂದ ಗೆದ್ದ ಮೇಲೆ ಬಿಜೆಪಿಗೆ ಸಪೋರ್ಟ್ ಮಾಡುತ್ತೇನೆ. ಬಿಜೆಪಿ ನಾಯಕರು ನನ್ನ ಜೊತೆ ಚರ್ಚೆ ಮಾಡುತ್ತಿದ್ದಾರೆ. ಕೆಆರ್​ಪಿಪಿಯಿಂದ 4-5 ಕಡೆ ಅಭ್ಯರ್ಥಿ ಹಾಕಬೇಕು ಅಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಜಗದೀಶ್ ಶೆಟ್ಟರ್ ಬಿಜೆಪಿಗೆ ಮರು ಸೇರ್ಪಡೆಯಾದ ಬಳಿಕ ಈಗ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿ ಸಂಪರ್ಕ ಮಾಡುವ ಪ್ರಯತ್ನ ನಡೆದಿದೆ. ಕೊಪ್ಪಳದಿಂದ ರೆಡ್ಡಿ ಕಣಕ್ಕಿಳಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎನ್ನಲಾಗಿದೆ. ಆಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಲೋಕಸಭಾ ಚುನಾವಣಾ ದೃಷ್ಟಿ ಇಟ್ಟುಕೊಂಡು ಬಿಜೆಪಿ ಸೆಳೆಯುವ ಪ್ರಯತ್ನ ಮಾಡಿದೆ. ಕಲ್ಯಾಣ ಕರ್ನಾಟಕ ಭಾಗದ ಮೂರ್ನಾಲ್ಕು ಲೋಕಸಭಾ ಕ್ಷೇತ್ರಕ್ಕೆ ಲಾಭವಾಗುವ ಲೆಕ್ಕಾಚಾರವನ್ನು ಬಿಜೆಪಿ ಹಾಕಿದೆ. ಆದರೆ ಜನಾರ್ದನ ರೆಡ್ಡಿ ಬಿಜೆಪಿಯ ನೇರಾ ನೇರ…

Read More

ಬೆಂಗಳೂರು:- 64ನೇ ಹುಟ್ಟು ಹಬ್ಬವನ್ನು ನಾಳೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆದರಿಸಿಕೊಳ್ಳುತ್ತಿದ್ದಾರೆ. ಹುಟ್ಟು ಹಬ್ಬದ ಅಂಗವಾಗಿ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಲಿದ್ದಾರೆ. ಜನ್ಮದಿನದ ಪ್ರಯುಕ್ತ ಶಿಗ್ಗಾವಿ ಹಾಗೂ ಸವಣೂರಿನಲ್ಲಿ ಈಗಾಗಲೇ ಐ ಕ್ಯಾಂಪ್, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಕಾರ್ಯಕ್ರಮ ನೆರವೇರಿಸಲಾಗಿದೆ. ಅಲ್ಲದೇ ತಮ್ಮ ಟ್ರಸ್ಟ್ ವತಿಯಿಂದ 250 ವಿದ್ಯಾರ್ಥಿಗಳಿಗೆ ತಲಾ 5000 ಶಿಷ್ಯವೇತನ ನೀಡಿದ್ದಾರೆ. ಬುದ್ದಿಮಾಂದ್ಯ ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳಲಿದ್ದು, ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ಸಂಜೆ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ನೀಡಲಾಗುತ್ತದೆ. ನಂತರ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ನಡೆಯುವ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Read More

ಫಿನಾಲೆಯ ಅಂತಿಮ ಹಂತದಲ್ಲಿ ದೊಡ್ಮನೆಯ ಆಟದಿಂದ ತುಕಾಲಿ ಸಂತು ಎಲಿಮಿನೇಟ್ ಆಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಹಾಸ್ಯ ನಟ ತುಕಾಲಿ ಸಂತು ದೊಡ್ಮನೆಗೆ ಕಾಲಿಟ್ಟ ದಿನದಿಂದ ಸ್ಪರ್ಧಿಗಳನ್ನು, ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು. ಸಂತು ಇದ್ದಾರೆ ಅಂದರೆ ಅಲ್ಲಿ ನಗುವಿಗೆ ಕೊರತೆ ಇಲ್ಲ ಎಂದರ್ಥ. ಅಷ್ಟರ ಮಟ್ಟಿಗೆ ತುಕಾಲಿ ಸಂತು ಮೋಡಿ ಮಾಡಿದ್ದಾರೆ. ಹೀಗಿರುವಾಗ ಫಿನಾಲೆಯ ದಿನ ತುಕಾಲಿ ಸಂತು ಬಿಗ್ ಬಾಸ್ ಆಟದಿಂದ ಔಟ್‌ ಆಗಿದ್ದಾರೆ ಎನ್ನಲಾಗುತ್ತಿದೆ. ಹಳೆಯ ಸೀಸನ್‌ಗಳ ರೆಕಾರ್ಡ್ ಬ್ರೇಕ್ ಮಾಡಿದ ಸೀಸನ್ ಅಂದರೆ ಅದು ‘ಬಿಗ್ ಬಾಸ್ ಸೀಸನ್ 10’ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಷನ್ ಮೂಡಿಸಿದ ಸೀಸನ್ ಎಂದರೆ ತಪ್ಪಾಗಲಾರದು. ಇನ್ನೂ ಕಳೆದ ವಾರ ನಮ್ರತಾ ಎಲಿಮಿನೇಷನ್ ನಡೆದ ನಂತರ ಇದೀಗ ತುಕಾಲಿ ಸಂತು ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

Read More

ಬಿಗ್ ಬಾಸ್ ಸೀಸನ್ 10 ರ ಫಿನಾಲೆ ವೇದಿಕೆಯ ಮೇಲೆ ಸುದೀಪ್ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಹತ್ತು ಸೀಸನ್‌ನಲ್ಲಿ ಇಷ್ಟು ಸುದ್ದಿ ಮಾಡಿದ ಸೀಸನ್ ಬೇರೆ ಇಲ್ಲ ಎಂದು ಸ್ವತಃ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ವರ್ತೂರು ಸಂತೋಷ್ ಅವರು ಜೈಲಿಗೆ ಹೋಗಿದ್ದ ಸಂಗತಿಯನ್ನು ಸುದೀಪ್ ರಿವೀಲ್ ಮಾಡುತ್ತಿದ್ದ ಹಾಗೆಯೇ ಮನೆಯೊಳಗಿನ ಉಳಿದ ಸ್ಪರ್ಧಿಗಳ ಮುಖದಲ್ಲಿ ಅಚ್ಚರಿ ಮೂಡಿದರೆ, ವರ್ತೂರು ಸಂತೋಷ್ ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ಹೊರಗೆ ಕೂತಿದ್ದ ವರ್ತೂರು ಸಂತೋಷ್ ಅಮ್ಮನೂ ಸೆರಗಿನಲ್ಲಿ ಕಣ್ಣೀರು ಒರೆಸಿಕೊಂಡರು.‌ ಹುಲಿ ಉಗುರಿನ ಕೇಸ್‌ ಬಗ್ಗೆ ಮಾತನಾಡುತ್ತಿದ್ದಂತೆ ಸಂತೋಷ್‌ ತಾಯಿ ಭಾವುಕರಾದರು. ಡ್ರೋನ್ ಪ್ರತಾಪ್ ತಾಯಿ, ನಮ್ಮ ಮಗನನ್ನು ನಮಗೆ ಕೊಟ್ಟಿದ್ದೀರಾ. ಈ ವೇದಿಕೆಗೆ ಚಿರಋಣಿ ಎಂದು ಭಾವುಕರಾಗಿದ್ದಾರೆ. ಎಲ್ಲರ ಮುಖದಲ್ಲಿಯೂ ಬಿಗ್‌ ಬಾಸ್ ವೇದಿಕೆಯ ಕುರಿತು ಕೃತಜ್ಞತೆಯ ಭಾವ ತುಂಬಿದೆ. ಇನ್ನಷ್ಟು ಪರ್ಫಾರ್ಮೆನ್ಸ್, ಕಲರ್‌ಫುಲ್ ಡಾನ್ಸ್, ಕಚಗುಳಿಯ ಮಾತುಕತೆ ಎಲ್ಲವೂ ತುಂಬಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 10’…

Read More

ದಕ್ಷಿಣ ಕನ್ನಡ :- ಮಂಗಳೂರು ತಾಲೂಕಿನ ಹಳೆಯಂಗಡಿ ಸಮೀಪದಲ್ಲಿ ದೈವ ನರ್ತನ ಮುಗಿಸುತ್ತಿದ್ದಂತೆ ಖ್ಯಾತ ದೈವ ನರ್ತಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಜರುಗಿದೆ. ಅಶೋಕ್ ಬಂಗೇರ ಸಾವನ್ನಪ್ಪಿದ ದೈವ ನರ್ತಕ(47). ನಿನ್ನೆ ಹಳೆಯಂಗಡಿ ಸಮೀಪ ರಕ್ತೇಶ್ವರಿ ದೈವ ನೇಮ ಹಮ್ಮಿಕೊಳ್ಳಲಾಗಿತ್ತು. ದೈವ ನರ್ತನದ ವೇಳೆಯೇ ಎದೆನೋವು ಲಘುವಾಗಿ ಕಾಣಿಸಿಕೊಂಡಿದೆ. ಇನ್ನು ಎದೆನೋವು ತೀವ್ರವಾಗಿ ಕಾಣಿಸಿಕೊಂಡಿದ್ದರಿಂದ ದೈವ ನೇಮ ಅರ್ಧಕ್ಕೆ ನಿಲ್ಲಿಸಿದ ಅಶೋಕ ಬಂಗೇರಾ ಅವರು ದೈವ ವೇಷವನ್ನು ತೆಗೆದು ಆಸ್ಪತ್ರೆಗೆ ‌ತೆರಳಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ದೈವ ನರ್ತಕ ಕೊನೆಯುಸಿರೆಳೆದಿದ್ದಾರೆ.

Read More