ಕಲಬುರ್ಗಿ:- ಲೋಕಸಮರ ಗೆಲ್ಲುವ ಪಣ ತೊಟ್ಟಂಥ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇಂದಿನಿಂದ ಎರಡು ದಿನಗಳ ಕಾಲ ಕಲ್ಯಾಣ ಕರ್ನಾಟಕದಲ್ಲಿ ಸವಾರಿ ಮಾಡಲಿದ್ದಾರೆ. ಇಂದು ರಾಯಚೂರು ಯಾದಗಿರಿ ನಾಳೆ ಬೀದರ್ ಕಲಬುರಗಿಯಲ್ಲಿ ಪ್ರವಾಸ ಮಾಡಲಿದ್ದಾರೆ..ಮೊದಲು ಮಂತ್ರಾಲಯದ ಗುರು ರಾಯರ ಸನ್ನಿಧಿಗೆ ಪೂಜೆ ಸಲ್ಲಿಸಿ ನಂತ್ರ ಚುನಾವಣಾ ರಣ ಕಹಳೆ ಮೊಳಗಿಸಲಿದ್ದು ನಾಳೆ ಸಂಜೆ ಕಲಬುರಗಿಯ NV ಮೈದಾನದಲ್ಲಿ ಭಾರಿ ಬಹಿರಂಗ ಸಭೆ ನಡೆಸಲಿದ್ದಾರೆ. ಒಟ್ಟಾರೆ AICC ಅಧ್ಯಕ್ಷರ ತವರೂರಿನತ್ತ ಬಿಜೆಪಿ ಚಿತ್ತ ಅನ್ನುವಂತಾಗಿದೆ..
Author: AIN Author
ಕಲಬುರ್ಗಿ:- ಪ್ರಧಾನಮಂತ್ರಿ ಆಗೋ ಅಭಿಲಾಷೆ ಬಗ್ಗೆ ಡೌಟ್ ಮಾಡ್ಕೊಂಡ್ರಾ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.. ಹೌದು ನಿನ್ನೆ ಕಲಬುರಗಿಯ HKE ಸೊಸೈಟಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಖರ್ಗೆಯವರು ಆಡಿದ ಮಾತು ಒಂತರ ಹಂಗೇ ಇತ್ತು.ಖರ್ಗೆ ವೇದಿಕೆಗೆ ಬರ್ತಿದ್ದಂತೆ ಎದುರಿಗಿದ್ದ ಕಾರ್ಯಕರ್ತನೊಬ್ಬ ನಿಮ್ಮನ್ನ PM ಮಾಡ್ತೀವಿ ಅಂದಾಗ ಥಟ್ ಅಂತ ಉತ್ತರ ನೀಡಿದ ಖರ್ಗೆ MP ನೇ ಮಾಡ್ಲಿಲ್ಲ ಇನ್ನೇನು PM ಮಾಡ್ತೀರಿ ಅಂತ ಕಳೆದ ಲೋಕಸಭಾ ಚುನಾವಣೆಯ ಸೋಲಿನ ಕಹಿಯ ಮೆಲಕು ಹಾಕಿದ್ರು. ಖರ್ಗೆ ಸಾಹೇಬ್ರ ಈ ಮಾತಿಗೆ ವೇದಿಕೆ ಮೇಲೆ ಇದ್ದವರೆಲ್ಲ ಫುಲ್ ಸೈಲೆಂಟ್ ಆದ್ರು..
ಗಂಗಾವತಿ :-ರೀಡ್ಸ್ ಸಂಸ್ಥೆಯ ಕಛೇರಿಯಲ್ಲಿ ಯುವತಿಯರಿಗೆ ಗ್ರಾಮೀಣ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯನ್ನು ರೀಡ್ಸ್ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕರಾದ ಸಿ .ತಿಪ್ಪೇಶಪ್ಪ ಸರ್ ರವರು ತರಬೇತಿ ನೀಡಿದರು. ತರಬೇತಿಯಲ್ಲಿ ವ್ಯಾಪಾರದ ಗುಣಲಕ್ಷಣಗಳ ಬಗ್ಗೆ ತಿಳಿಸಿದರು. 1) ಕಡಿಮೆ ಬಂಡವಾಳದಲ್ಲಿ ಹೆಚ್ಚು ಆದಾಯವನ್ನು ಮಾಡುವ ಬಗ್ಗೆ. 2) ವ್ಯಾಪಾರದಲ್ಲಿ ಹೊಸತನವನ್ನು ಬಳಸಿಕೊಂಡು ಆದಾಯವನ್ನು ಹೆಚ್ಚಿಸುವುದು. 3) ಅನ್ವೇಷಣೆ. 4) ವ್ಯಾಪಾರದಲ್ಲಿ ತಾಳ್ಮೆ ಮತ್ತು ಉತ್ತಮವಾದ ಮಾತನಾಡುವ ಕೌಶಲ್ಯ ಗಳನ್ನು ಹೊಂದಿದರೆ ಮಾತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದು ತರಬೇತಿ ನೀಡಿದರು. 5) ನಾವು ಮಾಡುವ ವೃತ್ತಿಯನ್ನು ಗೌರವಿಸಬೇಕು. 6) ಸ್ವಪ್ರೇರಣೆ ಇರಬೇಕು ಮತ್ತು ಸತತವಾಗಿ ಪ್ರಯತ್ನ ಪಟ್ಟರೆ ಯಶಸ್ಸು ಜೀವನದಲ್ಲಿ ಸಿಗುತ್ತದೆ ಎಂದು ತಿಳಿಸಿದರು. ಕೊಪ್ಪಳ ತಾಲ್ಲೂಕ ಮತ್ತು ಗಂಗಾವತಿ ತಾಲ್ಲೂಕು ಕಂಪ್ಲಿ ತಾಲೂಕು ಯುವತಿಯರಿಗೆ, ಅತಿಥಿ ಶಿಕ್ಷಕರು ಮತ್ತು ರೀಡ್ಸ್ ಸಿಬ್ಬಂದಿಗಳು ಸೇರಿ ಒಟ್ಟು 40 ಜನ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಚಳಿ ಕೊಂಚ ಕಡಿಮೆಯಾಗಿದೆ, ಅದೇ ಚಾಮರಾಜನಗರದಲ್ಲಿ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣಹವೆ ಮುಂದುವರೆಯಲಿದೆ. ಬಳ್ಳಾರಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲೂ ಒಣಹವೆ ಮುಂದುವರೆಯಲಿದೆ. ಉತ್ತರ ಒಳನಾಡಿನಲ್ಲಿ ಚಳಿ ಹೆಚ್ಚಿದೆ. ಚಾಮರಾಜನಗರದಲ್ಲಿ 14.1 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನ ಎಚ್ಎಎಲ್ನಲ್ಲಿ 28.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 14.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 29.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 29.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ,…
ಮುಂಬೈ: ಮಹಿಳೆ ಅಡುಗೆ ಬರಲ್ಲ ಎಂದು ಆಕೆಯ ಗಂಡ ಅಥವಾ ಸಂಬಂಧಿಕರು ಹೇಳುವುದನ್ನು ಕ್ರೌರ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಸಾಂಗ್ಲಿ ನಿವಾಸಿಯಾಗಿರುವ ಅರ್ಜಿದಾರರ ದೂರನ್ನು ಪರಿಶೀಲಿಸುವಾಗ ಮುಂಬೈ ಹೈಕೋರ್ಟ್ ಈ ರೀತಿ ತಿಳಿಸಿತು. ಮಹಿಳೆಯೊಬ್ಬರು, ಗಂಡನ ಸಂಬಂಧಿಕರು ಅಡುಗೆ ಕೆಲಸ ಬರುವುದಿಲ್ಲವೆಂದು ಹೀಯಾಳಿಸುತ್ತಾರೆಂದು ದೂರು ಸಲ್ಲಿಸಿದ್ದರು. ಆದ್ರೆ ಪೀಠವು ಈ ವಿಷಯವನ್ನು ಕ್ರೌರ್ಯವೆಂದು ಪರಿಗಣಿಸಲಾಗುವುದಿಲ್ಲವೆಂದು ಹೇಳಿ ಅರ್ಜಿಯನ್ನು ರದ್ದುಗೊಳಿಸಿತು. ತನ್ನ ಸೋದರ ಮಾವ ಸೇರಿದಂತೆ ಅತ್ತೆಯಂದಿರು ತನಗೆ ಅಡುಗೆ ಗೊತ್ತಿಲ್ಲ, ಪೋಷಕರು ತನಗೆ ಏನನ್ನೂ ಕಲಿಸಿಲ್ಲ ಎಂದು ಹೀಯಾಳಿಸಿ ಅವಮಾನಿಸುತ್ತಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಅಡಿಯಲ್ಲಿ ಘಟನೆಯನ್ನು ‘ಕ್ರೌರ್ಯ’ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಮತ್ತು ನ್ಯಾಯಮೂರ್ತಿ ನಿತಿನ್ ಆರ್ ಬೋರ್ಕರ್ ಅವರಿದ್ದ ವಿಭಾಗೀಯ ಪೀಠವು, ಸಾಂಗ್ಲಿ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಹಾಗೂ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇರುವ…
ಯಾದಗಿರಿ: ಇಲ್ಲಿನ ಶಹಾಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಅನ್ನಭಾಗ್ಯ ಯೋಜನೆಯಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸಹೋದರ ರಾಜು ರಾಠೋಡ್ ಅವರನ್ನು ಅರೆಸ್ಟ್ ಮಾಡಿದ್ದಾರೆ. ಶಹಾಪುರದಲ್ಲಿ ಇತ್ತೀಚೆಗೆ ಅನ್ನಭಾಗ್ಯ ಪಡಿತರ ಅಕ್ಕಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಮಣಿಕಂಠ ರಾಠೋಡ್ ಸಹೋದರ ರಾಜು ರಾಠೋಡ್ ಅವರಿಗೆ ಸೇರಿದ ಶ್ರೀ ಲಕ್ಷ್ಮೀ ತಿಮ್ಮಪ್ಪ ರೈಸ್ ಮಿಲ್ ಮೇಲೆ ಶನಿವಾರ ರಂದು ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಅನ್ನಭಾಗ್ಯದ 550 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಲಬುರ್ಗಿ:- ಕಲ್ಯಾಣ ಕರ್ನಾಟಕದ ಸಚಿವರು, ಶಾಸಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು ತಯಾರಿ ಶುರುವಾಗಿದೆ. ಈ ನಿಟ್ಟಿನಲ್ಲಿ ಸಚಿವರು, ಶಾಸಕರಿಗೆ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ಕೆಕೆಆರ್ಡಿ ಅನುದಾನದಲ್ಲಿ ಅಭಿವೃದ್ಧಿ ಮಾಡಬೇಕು. ನೀವು ಇದರ ಬಗ್ಗೆ ಗಮನ ಕೊಡಬೇಕು ಸೂಚಿಸಿದ್ದಾರೆ. ಕಲ್ಯಾಣ ಕರ್ನಾಟಕದ ಸಚಿವರು, ಶಾಸಕರಿಗೆ ವಾರ್ನ್ ಮಾಡಿದ್ದಾರೆ. ತಾಲೂಕಿಗೊಂದು ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಿ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ಗೆ ಖರ್ಗೆ ಪಾಠ ಮಾಡಿದರು. ಕೆಲಸ ಮಾಡಲಿಲ್ಲ ಅಂದ್ರೆ ಮನೆಗೆ ಕಳಿಸಲಾಗುತ್ತದೆ. ಮನೆಗೆ ಹೋಗಬೇಕಾಗುತ್ತೆ ನೋಡು ಎಂದು ಎಚ್ಚರಿಕೆ ನೀಡಿದರು. ಕೆಕೆಆರ್ಡಿ ಅನುದಾನದಲ್ಲಿ ಅಭಿವೃದ್ಧಿ ಮಾಡಬೇಕು. ನೀವು ಇದರ ಬಗ್ಗೆ ಗಮನ ಕೊಡಬೇಕು. ಕೆಲಸ ಮಾಡದಿದ್ರೆ ಸಚಿವಗಿರಿಗೆ ಕುತ್ತು ಎಂದು ಎಚ್ಚರಿಸಿದರು. ಕೆಕೆಆರ್ ಡಿ ಅನುದಾನದಲ್ಲಿ ಹಣ ಇರುತ್ತದೆ. ನೀವು ಇದರ ಬಗ್ಗೆ ಗಮನ ಕೊಡಬೇಕು. ಇಲ್ಲಾಂದ್ರೆ ನಾವು ಒತ್ತಾಯ ಮಾಡಬೇಕಾಗುತ್ತದೆ. ಹೇ ಮಾಡಪ್ಪ ನೀ ಮಾಡು ಅಂತ…
‘ತುಕಾಲಿ ಸಂತೋಷ್’ ಈ ಹೆಸರು ಕೇಳಿದರೆ ಸಾಕು ಒಮ್ಮೆ ಹುಬ್ಬು ಮೇಲೇರುತ್ತದೆ. ಮರುಗಳಿಗೆ ತುಟಿಗಳಲ್ಲಿ ನಗು ಮೂಡುತ್ತದೆ. ಹುಬ್ಬೇರಿಸುವ ಅಚ್ಚರಿ, ನಗುಮೂಡಿಸುವ ವೈಖರಿ ಇದು ತುಕಾಲಿ ಸಂತೋಷ್ ಬಿಗ್‌ಬಾಸ್ ಸೀಸನ್ 10ನಲ್ಲಿ ಮೂಡಿಸಿರುವ ಹೆಜ್ಜೆಗುರುತಿಗೆ ಪುರಾವೆ. ಅಂತಿಮ ಹಂತಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ ತುಕಾಲಿ ಸಂತೋಷ್ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಮನೆಯಲ್ಲಿ ಇದ್ದಷ್ಟೂ ದಿನ ಎಲ್ಲರನ್ನೂ ನಗಿಸುತ್ತಲೇ ಇದ್ದ ತುಕಾಲಿ, ನಗುನಗುತ್ತಲೇ ಹೊರಗೆ ಬಂದಿದ್ದಾರೆ. ತಮ್ಮ ಸಹಸ್ಪರ್ಧಿಗಳಿಗೆ ಶುಭಾಶಯ ಕೋರಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಮನೆಯಿಂದ ಹೊರಗೆ ಬಂದ ತುಕಾಲಿ ಸಂತೋಷ್ ಅವರ ಜರ್ನಿಯೂ ಅಷ್ಟೇ ಮನರಂಜನಾತ್ಮಕವಾಗಿತ್ತು. ಅದನ್ನು ಕಟ್ಟಿಕೊಡುವ ಪ್ರಯತ್ನವನ್ನು ಜಿಯೊಸಿನಿಮಾ ಮಾಡುತ್ತಿದೆ. ‘ಈ ಸಲ ಎಂಟರ್‍ಟೈನ್ಮೆಂಟ್ ಕಡಿಮೆ ಇದೆ’ ಎಂಬ ಕೆಲವರ ಗೊಣಗಾಟಕ್ಕೆ ಉತ್ತರವಾಗಿ ತುಕಾಲಿ ಸಂತೋಷ್ ಮನೆಯೊಳಗಿದ್ದರು. ಅಗ್ರೆಶನ್‌ನಲ್ಲಿ ಆಡಲಾಗದ, ಸ್ಪೋರ್ಟ್ಸ್ ಹಿನ್ನೆಲೆ ಇಲ್ಲದ ಅವರು ಮನೆಯೊಳಗೆ ವಾರದಿಂದ ವಾರಕ್ಕೆ ತಮ್ಮ ಜಾಗವನ್ನು ವಿಸ್ತರಿಸುತ್ತ ಬಂದಿದ್ದೊಂದು ಕುತೂಹಲಕಾರಿ ವಿದ್ಯಮಾನ. ಅದೂ ಮನೆಯೊಳಗೆ ಜನರು ಕಡಿಮೆಯಾಗುತ್ತ ಬಂದಷ್ಟೂ…
ಮೈಸೂರು: ನಾಪತ್ತೆಯಾಗಿದ್ದ ಮಹಿಳೆ ಶವವು 13 ತಿಂಗಳ ಬಳಿಕ ಪತ್ತೆಯಾಗಿದ್ದು, ಮಗಳೇ ತಾಯಿಯನ್ನು ಕೊಂದು ಸ್ಮಶಾನದಲ್ಲಿ ಹೂತು ಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಮಗಳು ಮತ್ತು ಅಳಿಯನನ್ನು ಮೈಸೂರು ತಾಲೂಕಿನ ವರುಣ ಠಾಣೆಯ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಂಡ್ಯ ಜಿಲ್ಲೆ ಮತ್ತು ತಾಲೂಕು ಹೆಬ್ಬಕವಾಡಿ ಗ್ರಾಮದ ಲೇಟ್ ದೇವರಾಜಾಚಾರಿ ಎಂಬವರ ಪತ್ನಿ ಶಾರದಮ್ಮ(45) ತನ್ನ ಮಗಳಿಂದ ಹತ್ಯೆಯಾದವರು. ಇವರನ್ನು ಪುತ್ರಿ ಅನುಷಾ ಮತ್ತು ಆಕೆಯ ಪತಿ ದೇವರಾಜು ಸೇರಿ ಕೊಲೆ ಮಾಡಿ, ಸ್ಮಶಾನದಲ್ಲಿ ಹೂತು ಹಾಕಿದ್ದು, ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಶಾರದಮ್ಮ ಪತಿ ನಿಧನದ ಬಳಿಕ ಹೆಬ್ಬಕವಾಡಿಯಲ್ಲಿ ಒಂಟಿಯಾಗಿ ವಾಸುತ್ತಿದ್ದು, ಇತ್ತೀಚೆಗೆ ಕಣ್ಣಿನ ತೊಂದರೆಯಿಂದ ನರಳುತ್ತಿದ್ದರು. ಈ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವಂತೆ ಪುತ್ರಿ ಅನುಷಾಗೆ ಹೇಳಿದ್ದಾರೆ. ಆದರೆ, ಹಣದ ತೊಂದರೆಯಿಂದ ಚಿಕಿತ್ಸೆ ಕೊಡಿಸಲು ಅನುಷಾ ವಿಳಂಬ ಮಾಡಿದ್ದಾರೆ. 2022ರ ನಂವಬರ್ ನಲ್ಲಿ ತಾಯಿಗೆ ಕಣ್ಣಿನ ಚಿಕಿತ್ಸೆ ಕೊಡಿಸಿ ಹೆಬ್ಬಕವಾಡಿಯಲ್ಲಿರುವ ಮನೆಗೆ ಕರೆದುಕೊಂಡು ಹೋಗಿ…
ಅಲೋವೆರಾವನ್ನು ಮಹಿಳೆಯರು ಹೆಚ್ಚಾಗಿ ತ್ವಚೆ ಹಾಗೂ ಕೂದಲಿನ ಸೌಂದರ್ಯ ಕಾಪಾಡಲು ಬಳಸುತ್ತಾರೆ. ಅನಾದಿ ಕಾಲದಿಂದಲೂ ಈ ಅಲೋವೆರಾವನ್ನು ಔಷಧಿಯಾಗಿ ಬಳಕೆ ಮಾಡಲಾಗುತ್ತಿದೆ. ಈ ಅಲೋವೆರಾದಲ್ಲಿ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಅಲೋವೆರಾದಲ್ಲಿ ವಿಟಮಿನ್ ಎ, ಸಿ, ಇ ಮತ್ತು ಬಿ ಕಾಂಪ್ಲೆಕ್ಸ್ ಮತ್ತು ಖನಿಜಗಳಾದ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು ಮತ್ತು ಅಮೈನೋ ಆಮ್ಲಗಳು ಹೇರಳವಾಗಿದ್ದು, ದೇಹ, ತ್ವಚೆ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅಲೋವೆರಾ ಜ್ಯೂಸ್ ಸೇವನೆ ಮಾಡುವುದರಿಂದ ಆರೋಗ್ಯ ಲಾಭಗಳು ಅಧಿಕವಾಗಿದೆ. ಅಲೋವೆರಾ ಜ್ಯೂಸ್ ಕುಡಿಯುವುದರಿಂದಾಗುವ ಪ್ರಯೋಜನಗಳು * ತೂಕ ನಷ್ಟಕ್ಕೆ ಸಹಕಾರಿ: ಅಲೋವೆರಾ ಆಹಾರವನ್ನು ಜೀರ್ಣವಾಗುವಂತೆ ಮಾಡಿ ಕೊಬ್ಬನ್ನು ಶೇಖರಿಸುವುದನ್ನು ತಪ್ಪಿಸುತ್ತದೆ. ಈ ಮೂಲಕ ತೂಕ ನಷ್ಟಕ್ಕೂ ಸಹಕಾರಿಯಾಗಿದೆ. * ಜೀರ್ಣ ಕ್ರಿಯೆಯ ಸುಧಾರಣೆಗೆ ಸಹಾಯಕ : ಈ ಅಲೋವೆರಾ ಅಥವಾ ಲೋಳೆಸರದಲ್ಲಿನ ಕಿಣ್ವಗಳು ಹಾಗೂ ನಾರುಗಳು ಜೀರ್ಣಕ್ರಿಯೆ ಪ್ರಕ್ರಿಯೆ ಸುಧಾರಿಸುತ್ತದೆ. ಹೊಟ್ಟೆಯನ್ನು ಹೊಟ್ಟೆಯನ್ನು ಸ್ವಚ್ಛಗೊಳಿಸಿ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಯನ್ನು ದೂರ ಮಾಡುತ್ತದೆ. *…