ಪಾಟ್ನಾ: ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ ಆರ್‌ಜೆಡಿ-ಜೆಡಿಯು ನೇತೃತ್ವದ ಮೈತ್ರಿ ಸರ್ಕಾರ ಪತನವಾಗಿದೆ. ಭಾನುವಾರ ಬೆಳಗ್ಗೆ ರಾಜಭವನಕ್ಕೆ ತೆರಳಿದ್ದ ನಿತೀಶ್ ಕುಮಾರ್, ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಮೂಲಕ ರಾಷ್ಟ್ರೀಯ ಜನತಾ ದಳ (RJD) ಜೊತೆಗಿನ ಮೈತ್ರಿಯನ್ನು ಕೊನೆಗೊಳಿಸಿದ್ದಾರೆ. ಎಲ್ಲಾ ಪಕ್ಷಗಳು ನಿರ್ಣಾಯಕ ಸಭೆಯ ನಂತರ ನಿತೀಶ್, ರಾಜೀನಾಮೆ ಸಲ್ಲಿಸಿದ್ದಾರೆ. ಬಿಹಾರದಲ್ಲಿ ಬಿಜೆಪಿ ಜೊತೆ ನಿತೀಶ್ ಕುಮಾರ್ (Nitish Kumar) ಸರ್ಕಾರ ರಚನೆ ಬಹುತೇಕ ಫಿಕ್ಸ್ ಆಗಿದ್ದು, ಇಂದು ಸಂಜೆ ಅಥವಾ ಸೋಮವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. https://ainlivenews.com/loan-from-central-government-for-business-people-get-rs-10-lakh-easily/ ಇನ್ನೊಂದೆಡೆ ಬಿಹಾರದಲ್ಲಿ (Bihar) ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವೀಕ್ಷಕರನ್ನ ನೇಮಕ ಮಾಡಿದೆ. ಭೂಪೇಶ್ ಬಘೇಲ್ ಅವರನ್ನು ವೀಕ್ಷಕನನ್ನಾಗಿ ನೇಮಸಿದೆ. ಮಗದೊಂದು ಕಡೆ ಜೆಡಿಯುನ 10 ಶಾಸಕರನ್ನು ಸೆಳೆಯಲು ಲಾಲೂ ಪ್ರಸಾದ್ ಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Author: AIN Author
ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ನಟಿಸಿರುವ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಇಂದು ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಚಿತ್ರತಂಡ ಸುದ್ದಿ ಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡಿದೆ. ಫೆಬ್ರವರಿ 23ಕ್ಕೆ ಸಿನಿಮಾವನ್ನು ತೆರೆಗೆ ತರೋದಾಗಿ ಚಿತ್ರತಂಡ ತಿಳಿಸಿದೆ. ನಿರ್ದೇಶಕ ನವೀನ್ ದ್ವಾರಕನಾಥ್ ಮಾತನಾಡಿ, ನಮಗೆ ಇದೊಂದು ರೀತಿ ಚಾಲೆಂಜಿಂಗ್ ಟೈಮ್. ತಡವಾಗಿದೆ. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ನಾನೇ ಹೊಣೆ ತೆಗೆದುಕೊಳ್ಳುತ್ತೇನೆ. ತುಂಬಾ ಕಾರಣಗಳಿಂದ ಸಿನಿಮಾ ತಡವಾಯ್ತು. ಒಳ್ಳೆ ಔಟ್ ಪುಟ್ ಕೊಡಲು ಸಮಯ ಹಿಡಿಯಿತು. ಕ್ವಾಲಿಟಿ ಹಾಗೂ ಟೆಕ್ನಿಕಲ್ ದೃಷ್ಟಿಯಿಂದ ಟೈಮ್ ತೆಗೆದುಕೊಳ್ತು. ಮಿಲನಾ ಹಾಗೂ ಪೃಥ್ವಿ ಪಾತ್ರಕ್ಕೆ ತುಂಬಾ ಸಪೋರ್ಟ್ ಮಾಡಿದ್ದಾರೆ. ಕಂಪ್ಲೀಟ್ ಕಾಮಿಡಿ ಎಂಟರ್ ಟೈನರ್. ಪ್ಯಾಕೇಜ್ ಆಫ್ ಎಮೋಷನ್ ಹಾಗೂ ಡ್ರಾಮಾ ಚಿತ್ರದಲ್ಲಿದೆ. ಸೆನ್ಸಾರ್ ಆಗಿದ್ದು, ಫೆಬ್ರವರಿ 23ಕ್ಕೆ ಚಿತ್ರ ತೆರೆಗೆ ಬರ್ತಿದೆ ಎಂದು ತಿಳಿಸಿದರು. ನಟ ಪೃಥ್ವಿ ಅಂಬರ್ ಮಾತನಾಡಿ, ದಿಯಾಗೂ ಮೊದಲು ಸಹಿ ಮಾಡಿದ ಚಿತ್ರವಿದು. ನನ್ನ ತುಳು ಚಿತ್ರ ರಿಲೀಸ್…
ದೇಶದಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಆಗ್ರಾ, ಅಜ್ಮೀರ್ ಮತ್ತು ಅಹಮದಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಇಂಧನ ಬೆಲೆಗಳು ಏರಿಕೆಯಾಗಿದ್ದು, ಫರೂಕಾಬಾದ್ ಮತ್ತು ಫತೇಘರ್ ಸಾಹಿಬ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಗ್ಗವಾಗಿದೆ. ಇತರ ರಾಜ್ಯಗಳ ಪೈಕಿ ಆಂಧ್ರಪ್ರದೇಶ, ಬಿಹಾರ ಮತ್ತು ಛತ್ತೀಸ್‌ಗಢದಲ್ಲಿ ಬೆಲೆ ಕುಸಿದಿದ್ದರೆ, ಕರ್ನಾಟಕ, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಇಂಧನ ಬೆಲೆ ಇಳಿಕೆಯಾಗಿದೆ. ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ – ದೆಹಲಿಯಲ್ಲಿ ಪೆಟ್ರೋಲ್ 96.72 ರೂ. ಮತ್ತು ಡೀಸೆಲ್ ಲೀಟರ್‌ಗೆ 89.62 ರೂ. – ಮುಂಬೈನಲ್ಲಿ ಪೆಟ್ರೋಲ್ 106.31 ರೂ. ಮತ್ತು ಡೀಸೆಲ್ ಲೀಟರ್‌ಗೆ 94.27 ರೂ. – ಚೆನ್ನೈನಲ್ಲಿ ಪೆಟ್ರೋಲ್ 102.63 ರೂ. ಮತ್ತು ಡೀಸೆಲ್ 94.24 ರೂ. -ಬೆಂಗಳೂರು-ಪೆಟ್ರೋಲ್ 101.94 ರೂ. ಡೀಸೆಲ್ 87.89 ರೂ. ಇದೆ. ಪ್ರಮುಖ ನಗರಗಳಲ್ಲಿ ಬಿಡುಗಡೆಯಾದ ಹೊಸ ಬೆಲೆಗಳು – ನೋಯ್ಡಾದಲ್ಲಿ ಪೆಟ್ರೋಲ್ 96.94 ರೂ ಮತ್ತು ಡೀಸೆಲ್ ಲೀಟರ್‌ಗೆ 90.11 ರೂ. – ಗಾಜಿಯಾಬಾದ್‌ನಲ್ಲಿ ಪ್ರತಿ ಲೀಟರ್…
ಕ್ಯಾನ್ಬೆರಾ: ವಿಶ್ವ ಟೆನಿಸ್‌ನ ನಂ.1 ಡಬಲ್ಸ್ ಆಟಗಾರ, ಕನ್ನಡಿಗ ರೋಹನ್ ಬೋಪಣ್ಣ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್‌ನಲ್ಲಿ (Australian Open 2024) ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ರೋಹನ್ ಬೋಪಣ್ಣ (RohanBopanna) ಮತ್ತು ಮ್ಯಾಥ್ಯೂ ಎಬ್ಡೆನ್ (Matthew Ebden) ಜೋಡಿಯು ಶನಿವಾರ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಸ್ಸೋರಿ ಜೋಡಿಯನ್ನು ಮಣಿಸಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಚಾಂಪಿಯನ್ ಆಗಿದ್ದಾರೆ. ಆ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. https://ainlivenews.com/loan-from-central-government-for-business-people-get-rs-10-lakh-easily/ 1 ಗಂಟೆ 39 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಇಟಲಿ ಜೋಡಿಯು ವಿರುದ್ಧ ಭಾರತ ಮತ್ತು ಆಸ್ಟ್ರೇಲಿಯಾ ಜೋಡಿಯು 7-6 (0), 7-5 ಅಂತರದಲ್ಲಿ ಜಯ ಸಾಧಿಸಿತು. ಬೋಪಣ್ಣ ಪುರುಷರ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೈನಲ್ ತಲುಪಲು ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್ ಜೊತೆಗಾರ ಎಬ್ಡೆನ್, ಚೀನಾದ ಜಾಂಗ್ ಝಿಜೆನ್ ಮತ್ತು ಜೆಕ್ ಗಣರಾಜ್ಯದ ತೋಮಸ್ ಮಚಾಕ್ ಜೋಡಿಯನ್ನು ಕೇವಲ ಎರಡು ಗಂಟೆಗಳಲ್ಲಿ…
ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ಅಖಿಲ ಭಾರತ ಶೋಷಿತರ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಮಾದಾರ ಚೆನ್ನಯ್ಯ ಗುರುಪೀಠದ ಹಿಂದೆ ಸುಮಾರು 150 ಎಕರೆ ವಿಸ್ತಾರ ಜಾಗೆಯಲ್ಲಿ ಕಾರ್ಯಕ್ರಮ ವೇದಿಕೆ ನಿರ್ಮಾಣ ಮಾಡಲಾಗಿದೆ. ಸುಮಾರು 5 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ವೇದಿಕೆ ಮುಖಂಭಾಗ ಮೂರು ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸೇರಿದಂತೆ ಹೊರ ರಾಜ್ಯದ ಶೋಷಿತ ಸಮುದಾಯಗಳ ಮುಖಂಡರು ಭಾಗಿಯಾಗಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಿ. ಸುಧಾಕರ್, ಎಚ್.ಸಿ.ಮಹದೇವಪ್ಪ, ಶಿವರಾಜ್ ತಂಗಡಗಿ, ದಿನೇಶ್ ಗುಂಡೂರಾವ್, ರಹೀಂ ಖಾನ್, ಕೆ.ಎಚ್. ಮುನಿಯಪ್ಪ, ಕೆ.ಎನ್. ರಾಜಣ್ಣ ಸೇರಿದಂತೆ ಜಿಲ್ಲೆಯ ಶಾಸಕರು, https://ainlivenews.com/loan-from-central-government-for-business-people-get-rs-10-lakh-easily/ ಗಣ್ಯರು ಭಾಗಿಯಾಗಲಿದ್ದಾರೆ. ಇನ್ನು ಸಮಾವೇಶ ನಡೆಯುವ ಸ್ಥಳದಲ್ಲಿ ನಾಲ್ಕು ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಗಮ ಸಂಚಾರ ದೃಷ್ಟಿಯಿಂದ ಪ್ರಯಾಣಿಕರಿಗೆ ಬದಲಿ ಮಾರ್ಗಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಶೋಷಿತ ಸಮುದಾಯದ ಸದಸ್ಯರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಅಂತಾ ಕಾರ್ಯಕ್ರಮ ಸಂಘಟಕರು…
ಮಾಜಿ ನೀಲಿ ಸಿನಿಮಾಗಳ ತಾರೆ ಸನ್ನಿ ಲಿಯೋನ್ (Sunny Leone), ಈಗಾಗಲೇ ಅನೇಕ ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಪಾರ್ನ್ ಪ್ರಪಂಚದಿಂದ ದೂರವಾದ ನಂತರ ಅವರು ತಮ್ಮದೇ ಆದ ಸಾಕಷ್ಟು ಬ್ರ್ಯಾಂಡ್ ಗಳನ್ನು ಹೊಂದಿದ್ದಾರೆ. ಇದೀಗ ಮತ್ತೊಂದು ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದು, ಆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ರೆಸ್ಟೋರೆಂಟ್ (Restaurant) ಶುರು ಮಾಡಬೇಕು ಎನ್ನುವುದು ಸನ್ನಿ ಆಸೆಯಿತ್ತಂತೆ. ಅದನ್ನು ಈಗ ಈಡೇರಸಿಕೊಂಡಿದ್ದಾರೆ. ಪತಿಯ ಜೊತೆಗೂಡಿ ದೆಹಲಿಯ ನೋಯ್ಡಾದಲ್ಲಿ ರೆಸ್ಟೊರೆಂಟ್ ಶುರು ಮಾಡಿದ್ದು, ಅದಕ್ಕೆ ಚಿಕಲೋಕ ಎಂದು ಹೆಸರಿಟ್ಟಿದ್ದಾರೆ. ರೆಸ್ಟೋರೆಂಟ್ ವಿಡಿಯೋವನ್ನು ಸನ್ನಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಟಿವಿ ಕಲಾವಿದರು, ಸಿನಿಮಾ ಜಗತ್ತಿನಲ್ಲಿ ಇರೋರು, ಒಂದೇ ಕೆಲಸಕ್ಕೆ ಸೀಮಿತವಾಗಬೇಡಿ ಎಂದು ಸಲಹೆಯನ್ನೂ ನೀಡಿದ್ದಾರೆ. ನಮ್ಮನ್ನು ನಾವು ವಿಸ್ತರಿಸಿಕೊಳ್ಳುತ್ತಾ ಹೋಗಬೇಕು ಎಂದು ಸನ್ನಿ ಹೇಳಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ತನ್ನ ಕಾಮಿಡಿಯಿಂದಲೇ ಕಮಾಲ್ ಮಾಡಿದ ಹಾಸ್ಯ ನಟ ನಾಗಭೂಷಣ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹುಕಾಲದ ಗೆಳತಿ, ನಟಿ ಪೂಜಾ ಪ್ರಕಾಶ್ ಜೊತೆ ಇಂದು ಬೆಳಗಾವಿಯಲ್ಲಿ ಅವರು ಮದುವೆ ಆಗುತ್ತಿದ್ದಾರೆ. ಡಾಲಿ ಧನಂಜಯ್ ಸೇರಿದಂತೆ ಹಲವಾರು ಕಲಾವಿದರು ಈ ಮದುವೆಯಲ್ಲಿ ಭಾಗಿಯಾಗಲಿದ್ದಾರೆ. ಟಗರು ಪಲ್ಯ ಸೇರಿದಂತೆ ಅನೇಕ ಚಿತ್ರಗಳಿಗೆ ನಾಯಕನಾಗಿ ನಟಿಸಿರುವ ನಾಗಭೂಷಣ್, ನಾನಾ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಇವರ ಹೊಸ ಸಿನಿಮಾ ಘೋಷಣೆಯಾಗಿದೆ. ಈ ಸಿನಿಮಾವನ್ನು ಡಾಲಿ ಧನಂಜಯ್ ಅವರೇ ನಿರ್ಮಾಣ ಮಾಡುತ್ತಿರುವುದು ವಿಶೇಷ. ನಾಗಭೂಷಣ್ ಮದುವೆ ಆಗುತ್ತಿರುವ ಪೂಜಾ ಪ್ರಕಾಶ್ ಚಿತ್ರಕಲೆ ಮತ್ತು ಗ್ರಾಫಿಕ್ಸ್ ಡಿಸೈನ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಂದು ಬೆಳಗಾವಿಯಲ್ಲಿ ಇವರ ವಿವಾಹ ನಡೆಯಲಿದ್ದು, ಫೆಬ್ರವರಿ 2 ರಂದು ಮೈಸೂರಿನಲ್ಲಿ ಆರತಕ್ಷತೆ ನಡೆಯಲಿದೆ.
ಬೆಂಗಳೂರು:- ಕುಡಿದ ಮತ್ತಿನಲ್ಲಿ ಜನವರಿ 24ರಂದು ಬೆಳಗಿನ ಜಾವ 2.30ರ ಸುಮಾರಿಗೆ ದರ್ಶನ್ ಎಂಬಾತನನ್ನು ಆತನ ಸ್ನೇಹಿತರೇ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯಪುರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮನೆಯ ರೇಷನ್ ಸೇರಿ ಹಲವು ದಿನಬಳಕೆ ವಸ್ತುಗಳನ್ನು ಖರೀದಿಸು ಎಂದು ದರ್ಶನ್‌ಗೆ ಆತನ ದೊಡ್ಡಮ್ಮ 3 ಸಾವಿರ ರೂ. ಕೊಟ್ಟಿದ್ದರು. ಇದೇ ದುಡ್ಡಲ್ಲಿ ಗೆಳೆಯರ ಜತೆ ಪಾರ್ಟಿ ಮಾಡಲು ದರ್ಶನ್ ಹೋಗಿದ್ದ. ಬಾರ್‌ನಲ್ಲಿ ಗೆಳೆಯರ ಜತೆ ದರ್ಶನ್ ಪಾರ್ಟಿ ಮಾಡಿದ್ದ. ಇದಾದ ಕೆಲ ಹೊತ್ತಲ್ಲೇ ಮೊಬೈಲ್ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಮಧ್ಯೆಯೇ ಗಲಾಟೆ ನಡೆದಿದೆ. ಇವರ ಸಹವಾಸವೇ ಬೇಡ ಎಂದು ರಮೇಶ್ ಎಂಬಾತನ ಮನೆಯಲ್ಲಿ ದರ್ಶನ್, ನಿತಿನ್ ಹಾಗೂ ರಮೇಶ್ ಪಾರ್ಟಿ ಮಾಡುತ್ತಿದ್ದರು. ಬಾರ್‌ನಲ್ಲಿ ನಡೆದ ಗಲಾಟೆಯನ್ನು ಮರೆತು ಮನೆಗೆ ಹೋಗದ ಚಂದ್ರಶೇಖರ್, ಪ್ರೀತಂ, ಯಶವಂತ್, ಪ್ರಶಾಂತ್, ಲಂಕೇಶ್ ಹಾಗೂ ಮತ್ತೊಬ್ಬ ದರ್ಶನ್ ಎಂಬುವರು ರಮೇಶ್ ಮನೆಗೆ ಬಂದಿದ್ದಾರೆ. ಅಲ್ಲಿ ಪ್ರೀತಂ ಹಾಗೂ ನಿತಿನ್ ಮಧ್ಯೆ…
ವಾಷಿಂಗ್ಟನ್: ಮನೆಯ ಮಾಲೀಕನೊಬ್ಬ ಗಾಢವಾದ ನಿದ್ದೆಯಲ್ಲಿದ್ದಾಗ ಹಸಿದಿದ್ದ ಕರಡಿಯೊಂದು ಮನೆಗೆ ಒಳನುಗ್ಗಿ ಫ್ರಿಡ್ಜ್ ನಲ್ಲಿ ಇದ್ದ ಬ್ರೆಡ್, ಜಾಮೂನು ಹಾಗೂ ಇನ್ನಿತರ ಆಹಾರವನ್ನು ತಿಂದ ವಿಡಿಯೋವೊಂದು ವೈರಲ್ ಆಗಿದೆ. ಹೌದು, ಅಮೆರಿಕಾದ ಕೊಲೊರಾಡೋದಲ್ಲಿ ಮನೆಗೆ ಒಳನುಗ್ಗಿ ಆಹಾರವನ್ನು ಕರಡಿಯೊಂದು ಸೇವಿಸಿದೆ. ಮಾಲೀಕ ಮಹಡಿಯಲ್ಲಿ ಮಲಗಿದ್ದ ವೇಳೆ ಕರಡಿ ಮನೆಯೊಳಗೆ ನುಗ್ಗಿ ಅಡುಗೆ ಕೋಣೆಯಲ್ಲಿ ಸುಮಾರು 6 ಗಂಟೆಗಳಷ್ಟು ಕಾಲ ಇದ್ದು, ಫ್ರಿಡ್ಜ್ ಓಪನ್ ಮಾಡಿ ಆಹಾರವನ್ನು ಹುಡುಕಿದೆ. ಅಷ್ಟೇ ಅಲ್ಲದೇ ಮನೆಯಲ್ಲಿದ್ದ ಇತರೇ ಆಹಾರಗಳನ್ನು ತಿಂದಿದೆ. https://www.facebook.com/watch/?v=981573346261908 ಇದೇ ಕರಡಿ ಮನೆಯೊಂದಕ್ಕೆ ನುಗ್ಗಿ ಐಸ್ ಕ್ರೀಂ ಹಾಗೂ ಇನ್ನಿತರ ಪದಾರ್ಥಗಳನ್ನು ತಿಂದಿತ್ತು ಎಂದು ಅರಣ್ಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಕರಡಿ ಮನೆಯಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಂಗಳೂರಿನಲ್ಲಿ ಬೆಸ್ಕಾಂಮತ್ತು ಕೆಪಿಟಿಸಿಎಲ್‌ನ ಬೃಹತ್ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳಿಂದಾಗಿ ಇಂದು ಕೆಲವು ಕಡೆಗಳಲ್ಲಿ ವಿದ್ಯುತ್ ಕಡಿತಕ್ಕೆ ಮುಂದಾಗಿದೆ. ಕೆಂಪೇಗೌಡ ನಗರ, ಲಗ್ಗೆರೆ, ವೆಲ್‌ಕಾಸ್ಟ್, ಪೀಣ್ಯ 1ನೇ ಹಂತ, ಯಶವಂತಪುರ ಕೈಗಾರಿಕಾ ಪ್ರದೇಶ, ಇಸ್ರೋ, ಜಿಂದಾಲ್, ಓಬಳಾಪುರ, ದೊಡ್ಡಬೆಲೆ, ಕೆರೆಕತ್ತಿಗನೂರು, ಕಾಸರಘಟ್ಟ, ಮಹಿಮಾಪುರ, ಕೊಡಿಗೇಹಳ್ಳಿ, ಮನ್ನೆ ಪಂಚಾಯಿತಿ, ಗೆದ್ದಲಹಳ್ಳಿ, ಲಕ್ಕೇನಹಳ್ಳಿ, ಅರೆಬೊಮ್ಮನಹಳ್ಳಿ, ಅರೆಬೊಮ್ಮನಹಳ್ಳಿ, ಕೆ. ಹಳ್ಳಿ ಹಾಲ್ಕೂರು, ತಿಮ್ಮಸಂದ್ರ, ಲಕ್ಕಸಂದ್ರ, ಸುಲ್ಕುಂಟೆ. ಚಿಕ್ಕಪೇಟೆ, ಮಂಡಿಪೇಟೆ, ದಿಬ್ಬೂರು, ಪಿ ಆರ್ ನಗರ, ಜಿಸಿಆರ್ ಕಾಲೋನಿ, ವಿನಾಯಕನಗರ, ಬಿ ಜಿ ಪಾಳ್ಯ, ಹಾರೋನಹಳ್ಳಿ ಫೀಡರ್ ಏರಿಯಾ, ಶ್ರೀರಾಮ ನಗರ, ಹೊರಪೇಟೆ, ಅರಿಯೂರು ಪಂಚಾಯತ್ ಮಿತಿ, ಗಲಿಗೇನಳ್ಳಿ ಪಂಚಾಯತ್ ಮಿತಿ ಮತ್ತು ನಾಗವಳ್ಳಿ ಪಂಚಾಯತ್ ಮಿತಿ. ಅಂಕಸಂದ್ರ ಪಂಚಾಯಿತಿ ವ್ಯಾಪ್ತಿ, ಗಂಗಯ್ಯನಪಾಳ್ಯ, ತಾಳಿಕೊಪ್ಪ, ತೊಣಸನಹಳ್ಳಿ, ಎಣ್ಣೆಕಟ್ಟೆ, ಕುಂಟಾರಾಮನಹಳ್ಳಿ, ರಣಲಹಳ್ಳಿ, ಸರಮನಹಳ್ಳಿ, ಮಾದೇನಹಳ್ಳಿ, ಇಡಕನಹಳ್ಳಿ, ಸಿ ಹರಿವಸಂದ್ರ, ನಲ್ಲೂರು, ಇರ್ಕಸಂದ್ರ, ಜಲಗುಣಿ, ಹೆಚ್…