ಬಳ್ಳಾರಿ:- ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮದ ಬಳಿಯ ಸರ್ಕಾರಿ ಜಾಗದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆದಿದೆ. ಭಾನುವಾರ ಒಂದು ಜೆಸಿಬಿ ಯಂತ್ರದ ಸಹಾಯದಿಂದ ಮೂರು ಟ್ರ್ಯಾಕ್ಟರ್ ವಾಹನಗಳಲ್ಲಿ ಅಕ್ರಮವಾಗಿ ಮಣ್ಣು ಸಂಗ್ರಹ ಮಾಡಲಾಗುತ್ತಿತ್ತು.ಇದನ್ನು ಗಮನಿಸಿದ ಸಿರುಗುಪ್ಪ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಪೊಲೀಸರು ಗಸ್ತಿನಲ್ಲಿದ್ದಾಗ ಜೆಸಿಬಿ ವಾಹನ ಸಂಖ್ಯೆ ಕೆಎ-34, ಬಿ-0925, ಟ್ರ್ಯಾಕ್ಟರ್ ವಾಹನಗಳ ಸಂಖ್ಯೆ, ಸ್ವರಾಜ್ ಟ್ರ್ಯಾಕ್ಟರ್ ವಾಹನ ಸಂಖ್ಯೆ ಕೆಎ-34, ಟಿಎ-6322, ಇನ್ನೊಂದು ಸ್ವರಾಜ್ ಟ್ಯಾಕ್ಟರ್ ವಾಹನ ಕೆಎ-34, ಟಿಎ-7602 ಮತ್ತು ನಂಬರ್ ಪ್ಲೇಟ್ ಇಲ್ಲದ ಮಹೇಂದ್ರ ಟ್ರ್ಯಾಕ್ಟರ್ ಸಹ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಸಿರುಗುಪ್ಪ ಪೊಲೀಸರು, ಠಾಣಾ ಆವರಣದಲ್ಲಿ ವಾಹನ ನಿಲ್ಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Author: AIN Author
ಬೆಂಗಳೂರು:- ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರಧ್ವಜ ಹಾರಿಸಲಷ್ಟೇ ಅವಕಾಶ ಎಂದು ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ರಾಷ್ಟ್ರೀಯ ಧ್ವಜ ಹಾರಿಸಬಹುದು. ಅದನ್ನು ಹೊರತುಪಡಿಸಿ ಸರ್ಕಾರಿ ಜಾಗದಲ್ಲಿ ಬೇರೆ ಧ್ವಜವನ್ನು ಹಾರಿಸುವಂತಿಲ್ಲ. ತ್ರಿವರ್ಣ ಧ್ವಜಕ್ಕೆ ಅನುಮತಿ ಪಡೆದು ಬೇರೆ ಧ್ವಜ ಹಾರಿಸೋದು ತಪ್ಪು. ಸೋಮವಾರ ಬೆಳಗ್ಗೆ ಡಿಸಿ ಕಚೇರಿ ಮುಂದೆ ಹಾರಿಸುತ್ತೇನೆ ಎನ್ನುತ್ತಾರೆ. ಆಗ ಅವಕಾಶ ಕೊಡಲು ಆಗುತ್ತಾ? ಇದು ಒಂದು ಕಡೆ ಅವಕಾಶ ಕೊಟ್ಟರೆ ಎಲ್ಲಾ ಕಡೆ ಕೇಳುತ್ತಾರೆ. ಇದು ತಪ್ಪು ಎಂದರು ಸ್ಥಳೀಯ ಯುವಕರು ಒಳ್ಳೆಯವರೇ, ಅವರನ್ನ ದಾರಿ ತಪ್ಪಿಸುತ್ತಿದ್ದಾರೆ. ಎಲ್ಲಾ ಯುವಕರ ಜೊತೆ ಮಾತನಾಡುತ್ತೇನೆ. ಖಾಸಗಿ ಜಾಗದಲ್ಲಿ ಅಥವಾ ದೇವಾಲಯದ ಮುಂದೆ ಹನುಮಾನ್ ಧ್ವಜ ಹಾರಿಸಲು ಅವಕಾಶ ಕೊಡೋಣ. ಆದರೆ ಸರ್ಕಾರಿ ಕಚೇರಿ ಮುಂದೆ ಬೇಡ ಎಂದು ಹೇಳಿದರು.
ಚಿಕ್ಕಬಳ್ಳಾಪುರ:- ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ನಂದಿಬೆಟ್ಟದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಒಂದೂವರೆ ತಿಂಗಳ ಬಳಿಕ ಶವ ಪತ್ತೆಯಾದ ಘಟನೆ ಜರುಗಿದೆ. ನಾರಾಯಣಸ್ವಾಮಿ (37) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ತಿಳಿದು ಬಂದಿದೆ. ನಂದಿ ಗಿರಿಧಾಮದ 38ನೇ ತಿರುವಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ವಿಷಯ ತಿಳಿದ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ವ್ಯಕ್ತಿಯ ಬ್ಯಾಗ್‍ನಲ್ಲಿ ಆಧಾರ್ ಕಾರ್ಡ್ ಲಭ್ಯವಾಗಿದ್ದರಿಂದ ಮೃತನ ಗುರುತು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟ್ರ್ಯಾಕ್ಟರ್ ಚಾಲಕನಾಗಿದ್ದ ನಾರಾಯಣಸ್ವಾಮಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಇನ್ನೂ ಸಾಯುವುದಕ್ಕೂ ಮುನ್ನ ತಿರುಪತಿಗೆ ತೆರಳಿ ದೇವರ ದರ್ಶನ ಪಡೆದು ಗ್ರಾಮಕ್ಕೆ ಬಂದಿದ್ದ ಎನ್ನಲಾಗಿದೆ. ಕಳೆದ ಡಿ.15ರ ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ತೊರೆದಿದ್ದ. ನಂತರ, ನಾನು ನಂದಿಬೆಟ್ಟದಲ್ಲಿದ್ದು ನನ್ನನ್ನ ಮರೆತುಬಿಡಿ, ನಾನು ವಿಷ ಸೇವಿಸಿ ಸಾಯುತ್ತಿದ್ದೇನೆ ಎಂದು ಮನೆಯವರಿಗೆ ವಾಯ್ಸ್ ಮೆಸೇಜ್ ಕಳಿಸಿದ್ದ ಎಂದು…
ಬೆಂಗಳೂರು:- ರಾಷ್ಟ್ರಪತಿಗೆ ಏಕವಚನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಿಎಂ ಹುದ್ದೆಯಿಂದ ಕೂಡಲೇ ವಜಾ ಮಾಡುವಂತೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಸಂಬಂಧ X ಮಾಡಿರುವ ಅವರು, ನಿನ್ನೆಯ ದಿನ ಚಾಮರಾಜನಗರದಲ್ಲಿ ಇದೇ ಸಿದ್ದರಾಮಯ್ಯನವರ ಸುಪುತ್ರ ಯತೀಂದ್ರ ಭಾಷಣ ಮಾಡುತ್ತಿದ್ದಾಗ ಯಾರೋ ಒಬ್ಬರು ಏಕವಚನದಲ್ಲಿ ಪ್ರಶ್ನಿಸಿದರೆಂಬ ಕಾರಣಕ್ಕೆ ಪೊಲೀಸರು ಆತನನ್ನು ಅಟ್ಟಾಡಿಸಿಕೊಂಡು ಹೋಗಿ ಬಂಧಿಸಿ ದರದರನೇ ಎಳೆದುಕೊಂಡು ಹೋದರು. ಹಾಗಿದ್ದರೆ, ರಾಷ್ಟ್ರಪತಿಗಳನ್ನೇ ಏಕವಚನದಲ್ಲಿ ಸಂಬೋಧಿಸಿದ ಈ ಮುಖ್ಯಮಂತ್ರಿಗೇನು ಶಿಕ್ಷೆ ಎಂದು ಪ್ರಶ್ನಿಸಿದ್ದಾರೆ. ಈ ಡೋಂಗೀ ಪ್ರಜಾಪ್ರಭುತ್ವವಾದಿಯ ಅಸಲಿ ಮುಖ ಕಳಚಿಬಿದ್ದಿದೆ. ಒಂದು ಕ್ಷಣವೂ ಮುಖ್ಯಮಂತ್ರಿ ಪದವಿಯಲ್ಲಿ ಇರಲು ಅವರು ಅರ್ಹರಲ್ಲ. ಕೂಡಲೇ ತಾವೆಸಗಿರುವ ಅಪಚಾರಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಅಥವಾ ಮಾನ್ಯ ರಾಜ್ಯಪಾಲರೇ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕಿತ್ತೆಸೆಯಬೇಕು. ಇದು ನನ್ನ ಆಗ್ರಹ. ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ಧಿಯ ಬಿಡು ನಾಲಿಗೆ ಎಂದು ದಾಸರು ಹೇಳಿದ್ದಾರೆ. ಸಿದ್ದರಾಮಯ್ಯಗೆ ಆಚಾರ ಹತ್ತಿರಕ್ಕೂ ಸುಳಿಯದ ವಿಚಾರ. ಶೋಷಿತ ಬುಡಕಟ್ಟು ಸಮುದಾಯದಿಂದ ಬಂದ ದೇಶದ ಮೊತ್ತ ಮೊದಲ…
ದಿಬ್ರುಗಢ್, ಜನವರಿ 28, 2024: ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಹಾಗೂ ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಅವರು, ಅಸ್ಸಾಂ ಮುಖ್ಯಮಂತ್ರಿ ಡಾ.ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಕೇಂದ್ರೀಯ ಸಂಶೋಧನಾ ಸಂಸ್ಥೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಾಗಿ ದಿಬ್ರುಗಢ್ನ ದಿಹಿಂಗ್ ಖಮ್ತಿಘಾಟ್‍ನಲ್ಲಿ 100 ಹಾಸಿಗೆಗಳ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸರ್ಬಾನಂದ ಸೋನೊವಾಲ್, ಪ್ರಧಾನಿ ನರೇಂದ್ರ ಮೋದಿಜಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಆಯುಷ್ ಆಂದೋಲನವು ಜಾಗತಿಕ ಸ್ವಾಸ್ಥ್ಯ ಆಂದೋಲನದ ಪ್ರವರ್ತಕ ಶಕ್ತಿಯಾಗಿ ಮಾರ್ಪಟ್ಟಿರುವ ಕಾರಣಕ್ಕೆ ಅಗಾಧವಾದ ಉತ್ತೇಜನವನ್ನು ಪಡೆದುಕೊಂಡಿದೆ ಎಂದರು. ನಾವು ದಿಬ್ರುಗಢದಲ್ಲಿ 100 ಹಾಸಿಗೆಗಳ ಆಸ್ಪತ್ರೆಯೊಂದಿಗೆ ಯೋಗ ಮತ್ತು ಪ್ರಕೃತಿಚಿಕಿತ್ಸೆಯ ಮೊದಲ ರೀತಿಯ ಕೇಂದ್ರೀಯ ಸಂಶೋಧನಾ ಸಂಸ್ಥೆಗೆ ಅಡಿಪಾಯ ಹಾಕಿದ್ದೇವೆ. ಪ್ರಕೃತಿ ತಾಯಿ ತನ್ನ ಅಗಾಧವಾದ ಸೌಂದರ್ಯದಿಂದ ನಮ್ಮನ್ನು ಆಶೀರ್ವದಿಸಿದ್ದಾಳೆ. ಇದು ಯೋಗ, ಪ್ರಕೃತಿ ಚಿಕಿತ್ಸೆ, ಆಯುರ್ವೇದದ ಮೂಲಕ ಪುನರುಜ್ಜೀವನಗೊಂಡ, ವೈಜ್ಞಾನಿಕವಾಗಿ ಮೌಲ್ಯೀಕರಿಸಿದ ಚಿಕಿತ್ಸಾ ಪದ್ಧತಿಯೊಂದಿಗೆ ದಕ್ಷಿಣ ಏμÁ್ಯದಲ್ಲೇ ರೋಗ…
ಮಂಡ್ಯ:- ಜಿಲ್ಲೆಯಲ್ಲಿ ಹನುಮ ಧ್ವಜ ಕೋಲಾಹಲ ಸೃಷ್ಟಿಸಿದೆ. ಸದ್ಯ ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ವಿಪಕ್ಷನಾಯಕ ಆರ್. ಅಶೋಕ್ ಕರೆ ನೀಡಿದ್ದಾರೆ. ನಾಳೆಯ ಪ್ರತಿಭಟನೆಯಲ್ಲಿ ಜೆಡಿಎಸ್ ಸಹ ಭಾಗಿಯಾಗುತ್ತೆ. ಸರ್ಕಾರದ ಹಿಂದೂ ವಿರೋಧಿ ನೀತಿ, ದುರಾಡಳಿತ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಆರ್. ಅಶೋಕ್ ಹೇಳಿದ್ದಾರೆ. ರಾಷ್ಟ್ರಧ್ವಜ ಇಳಿಸಿ ಹನುಮ ಧ್ವಜ ಹಾರಿಸಲು ತೆರಳುತ್ತಿದ್ದ ಬಿಜೆಪಿ ನಾಯಕರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಶೋಕ್, ಅಶ್ವತ್ಥ್ ನಾರಾಯಣ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ನಾಯಕರು, ಕಾರ್ಯಕರ್ತರನ್ನು ವಾಹನದಲ್ಲಿ ಪೊಲೀಸರು ಕರೆದೊಯ್ದಿದ್ದಾರೆ. ಹನುಮ ಧ್ವಜ ವಿವಾದ ಪ್ರಕರಣ ಹಿನ್ನೆಲೆ ಫೆಬ್ರವರಿ 9ರಂದು ಮಂಡ್ಯ ನಗರ ಬಂದ್‌ಗೆ ಬಜರಂಗದಳ ಕರೆ ನೀಡಿದೆ. ನಾಳೆ ಮಂಡ್ಯದಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಗುತ್ತಿದ್ದು, ಕೆರಗೋಡು ಗ್ರಾಮದಿಂದ ಡಿಸಿ ಕಚೇರಿವರೆಗೂ ಪಾದಯಾತ್ರೆ ನಡೆಸಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧಾರ ಮಾಡಲಾಗಿದೆ. ಸಿದ್ದರಾಮಯ್ಯ ರಾಮ, ಹನುಮ ವಿರೋಧಿ. ಈ ಹಿಂದೂಗಳ ವಿರೋಧಿ ಸರ್ಕಾರ ಉಳಿಯಬಾರದು.…
ಕೂದಲುರುವ ಸಮಸ್ಯೆಯನ್ನು ನಿವಾರಿಸಲು ಮನೆಯಲ್ಲಿಯೇ ಬೆಳ್ಳುಳ್ಳಿ ಶಾಂಪೂ ತಯಾರಿಸಿ ಬಳಸಿ. 15 ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಂಡು ನುಣ್ಣಗೆ ರುಬ್ಬಿ ಅದಕ್ಕೆ 1 ಚಮಚ ಆಲಿವ್ ಆಯಿಲ್, 4 ಹನಿ ಪುದೀನಾ ಆಯಿಲ್, 4 ಹನಿ ಟೀ ಟ್ರೀಆಯಿಲ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ಶಾಂಪೂವಿಗೆ ಬೆರೆಸಿ ಕೂದಲಿಗೆ ಹಚ್ಚಿ. ಇದನ್ನು ಕನಿಷ್ಟ 2 ಬಾರಿ ಬಳಸಿ. ಇದು ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಕೂದಲುರುವ ಸಮಸ್ಯೆಯನ್ನು ನಿವಾರಿಸುತ್ತದೆ. ತಲೆಯಲ್ಲಿ ಹೊಟ್ಟು, ಹೇನಿನ ಸಮಸ್ಯೆ ಕಾಡುವುದಿಲ್ಲ. ಇದು ಕೂದಲಿನ ಬುಡವನ್ನು ಗಟ್ಟಿಗೊಳಿಸುತ್ತದೆ. ಇದರಿಂದ ಕೂದಲು ದಪ್ಪವಾಗಿ ಬೆಳೆಯುತ್ತದೆ.
ಬಹುತೇಕ ಮನೆಗಳಲ್ಲಿ ಇಂಡಿಯನ್ ಟಾಯ್ಲೆಟ್ ಬದಲಿಗೆ ವೆಸ್ಟರ್ನ್ ಟಾಯ್ಲೆಟ್ ಬಳಕೆಯೇ ಹೆಚ್ಚಾಗಿದೆ. ಹಳೆಯ ಮನೆಗಳಲ್ಲಿ ಮಾತ್ರ ಈಗ ಇಂಡಿಯನ್ ಟಾಯ್ಲೆಟ್ ಬಳಸುವವರಿದ್ದಾರೆ. ಅವರಲ್ಲೂ ಅನೇಕರು ಕಾಲು ನೋವು, ಸೊಂಟ ನೋವೆಂದು ಕಮೋಡ್ಗೆ ತಮ್ಮ ಟಾಯ್ಲೆಟ್ ರೂಂನಲ್ಲಿ ಸ್ಥಾನ ನೀಡಿದ್ದಾರೆ. ಆದರೆ, ಈ ಕಮೋಡ್ಗಳನ್ನು ನೀವು ಹೇಗೆ ಬಳಸುತ್ತೀರಾ?ಎಂಬುದು ಕೂಡ ಮುಖ್ಯವಾಗುತ್ತದೆ. ಕಮೋಡ್ನಲ್ಲಿ ಫ್ಲಶ್ ಮಾಡುವಾಗ ಬಹುತೇಕ ಜನರು ಅದರ ಮುಚ್ಚಳವನ್ನು ತೆರೆದೇ ಇಡುತ್ತಾರೆ. ಆದರೆ, ಅಮೇರಿಕನ್ ಜರ್ನಲ್ ಆಫ್ ಇನ್ಫೆಕ್ಷನ್ ಕಂಟ್ರೋಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದಲ್ಲಿ ಅರಿಝೋನಾ ವಿಶ್ವವಿದ್ಯಾಲಯದ ಸಂಶೋಧಕರು ಟಾಯ್ಲೆಟ್ ಮುಚ್ಚಳವನ್ನು ತೆರೆದಿಡುವ ಮೂಲಕ ಫ್ಲಶ್ ಮಾಡುವುದರಿಂದ ನೀರು ಮತ್ತು ಗಾಳಿಯ ಮೂಲಕ ಸೂಕ್ಷ್ಮ ಜೀವಿಗಳು ಹರಡುತ್ತವೆ ಎಂದಿದ್ದಾರೆ. ನಾವು ಕಮೋಡ್ ಅನ್ನು ಫ್ಲಶ್ ಮಾಡಿದಾಗ ಮುಚ್ಚಳವು ಮುಚ್ಚಿದ್ದರೂ, ಮುಚ್ಚದೇ ಇದ್ದರೂ ಸೂಕ್ಷ್ಮ ವೈರಲ್ ಕಣಗಳು ನೆಲ ಮತ್ತು ಹತ್ತಿರದ ಮೇಲ್ಮೈಗಳಿಗೆ ಹರಡುತ್ತವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಕಮೋಡ್ನ ಮುಚ್ಚಳವನ್ನು ಮುಚ್ಚುವುದರಿಂದ ಬ್ಯಾಕ್ಟೀರಿಯಾಗಳು ಹರಡುವುದನ್ನು ಕಡಿಮೆ ಮಾಡಬಹುದು ಎಂದು…
ದೇಹವನ್ನು ಆರೋಗ್ಯಕರವಾಗಿಡಲು ಸೂಪರ್‌ಫುಡ್‌ಗಳನ್ನು ತೆಗೆದುಕೊಳ್ಳಬೇಕು. ಇವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅಲ್ಲದೆ ಈ ಸಮಯದಲ್ಲಿ ನಾರಿನಂಶ ಹೆಚ್ಚಿರುವ ಆಹಾರಗಳನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಭಾರತೀಯರು ಎಲ್ಲಾ ಅಡುಗೆಗಳಲ್ಲಿ ತುಪ್ಪವನ್ನು ಬಳಸುತ್ತಾರೆ. ಏಕೆಂದರೆ ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಅದಕ್ಕಾಗಿಯೇ ಅನೇಕರು ಇದನ್ನು ಸೂಪರ್ ಫುಡ್ ಎಂದು ಕರೆಯುತ್ತಾರೆ. ತುಪ್ಪದಲ್ಲಿ ವಿಟಮಿನ್ ಎ, ಇ ಮತ್ತು ಡಿ ಸಮೃದ್ಧವಾಗಿದೆ. ಆದ್ದರಿಂದ ಇದನ್ನು ಆಹಾರಗಳಲ್ಲಿ ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ತ್ವಚೆಯನ್ನು ಆರೋಗ್ಯವಾಗಿಡುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ಆಗಾಗ್ಗೆ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಬಿಸಿನೀರಿನೊಂದಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆಯುತ್ತಾರೆ. ಪ್ರತಿದಿನ ಬೆಚ್ಚಗಿನ ನೀರಿಗೆ ತುಪ್ಪ ಬೆರೆಸಿ ಕುಡಿಯಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಇದನ್ನು ಕುಡಿಯುವುದರಿಂದ ನೀವು ಬೇಗನೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಅನೇಕರು ಹಲವಾರು ರೀತಿಯ…
ಈರುಳ್ಳಿಯು ಹಲವು ಪೋಷಕಾಂಶಗಳ ಗಣಿಯಾಗಿದ್ದು, ಚರ್ಮ, ಕೂದಲು, ದೇಹದ ಆರೋಗ್ಯ (Skin, Hair, Body Heath) ಹೀಗೆ ಪ್ರತಿಯೊಂದರ ಆರೋಗ್ಯ ಕಾಪಾಡುವ ಈರುಳ್ಳಿಯಲ್ಲಿ ಅಲೈಲ್ ಪ್ರೊಪೈಲ್ ಡೈಸಲ್ಫೈಡ್ ಎಂಬ ಚಂಚಲ ತೈಲವಿದ್ದು ಈರುಳ್ಳಿ ಖಾರ ಖಾರ ಎನಿಸಲು ಇದೇ ಕಾರಣ. ಪ್ರತಿದಿನ ಹಸಿ ಈರುಳ್ಳಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಈರುಳ್ಳಿಯರುವ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶ ಅದರಲ್ಲೂ ವಿಶೇಷವಾಗಿ ಕ್ವೆರ್ಸೆಟಿನ್ ನಿಂದಾಗಿ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಕ್ವೆರ್ಸೆಟಿನ್ ಎಂಬ ಅಂಶವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಇನ್ನು ಇದರಲ್ಲಿರುವ ಅಲಿಸಿನ್ ವೈರಸ್ ಹಾಗೂ ಬ್ಯಾಕ್ಟಿರೀಯಾ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿದ್ದು, ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇನ್ನು ಹಸಿ ಈರುಳ್ಳಿಯಲ್ಲಿ ನಾರಿನಾಂಶ ಹೆಚ್ಚಾಗಿರುತ್ತದೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಒಳಗೊಂಡಿದೆ. ಇದರಿಂದ ಜೀರ್ಣಕ್ರಿಯೆಯನ್ನು ಸುಗಮವಾಗಿಸುವುದಲ್ಲದೇ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಈ ಎಲ್ಲಾ ಅನುಕೂಲಗಳ ಹೊರತಾಗಿಯೂ ಬೇರೆ ಬೇರೆ ಅನುಕೂಲಗಳು ಇವೆ.…